Tag: ರಸ್ತೆ ದುರಸ್ತಿ

  • ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

    ಕಾಂಗ್ರೆಸ್ ಶಾಸಕರ ಬ್ಯಾನರ್ ಪ್ರೇಮ – ಪಂಚಾಯತ್‌ನಿಂದ ರಸ್ತೆ ದುರಸ್ತಿ, ಬ್ಯಾನರ್ ಶಾಸಕರದ್ದು

    ಚಿಕ್ಕಮಗಳೂರು: ರಸ್ತೆ ದುರಸ್ತಿ (Road Repair) ಮಾಡಿಸಿದ್ದು ಪಟ್ಟಣ ಪಂಚಾಯತ್‌ನ (Panchayat) ಹಣದಲ್ಲಿ. ಆದರೆ, ಬ್ಯಾನರ್ ಹಾಕಿಸಿಕೊಂಡಿದ್ದು ಶಾಸಕರು. ಇಂತಹದ್ದೊಂದು ನಗೆಪಾಟಲಿನ ಘಟನೆಗೆ ಜಿಲ್ಲೆಯ ಕೊಪ್ಪ (Koppa) ಪಟ್ಟಣ ಸಾಕ್ಷಿಯಾಗಿದೆ.

    ಕೊಪ್ಪ ಪಟ್ಟಣದಲ್ಲಿ ರಸ್ತೆ ಸಾಕಷ್ಟು ಹಾಳಾಗಿತ್ತು. ಆದರೆ, ಶಾಸಕರು ರಸ್ತೆ ದುರಸ್ತಿಯನ್ನು ಮಾಡಿಸಿರಲಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣ ಪಂಚಾಯತ್ ರಸ್ತೆಗೆ ಪ್ಯಾಚ್ ಹಾಕಿಸಿ ದುರಸ್ತಿ ಮಾಡಿಸಿತ್ತು. ಆದರೆ, ರಸ್ತೆಗೆ ಪ್ಯಾಚ್ ಹಾಕಿಸಿ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಟ್ಟರೆಂದು ಬ್ಯಾನರ್ ಹಾಕಿಸಿಕೊಂಡಿದ್ದು ಮಾತ್ರ ಶಾಸಕ ಟಿ.ಡಿ.ರಾಜೇಗೌಡ. ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ಕೊಪ್ಪ ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣ ಅಯೋಮಯವಾಗಿತ್ತು. ಟಿ.ಡಿ.ರಾಜೇಗೌಡ (TD Rajegowda) 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಶಾಸಕರು ರಸ್ತೆ ದುರಸ್ತಿ ಮಾಡಿಸಿದ್ದರು. ಆದರೆ, ದುರಸ್ತಿ ಮಾಡಿದ ಗುತ್ತಿಗೆದಾರನಿಗೆ ಯಾವುದೇ ಬಿಲ್ ಪಾವತಿ ಮಾಡಿರುವುದಿಲ್ಲ. 2023ರಲ್ಲಿ ಪಟ್ಟಣ ಪಂಚಾಯತ್ ಜನರ ತೆರಿಗೆ ಹಣದಲ್ಲಿ ಬಿಲ್ ಪಾವತಿ ಮಾಡಲಾಗಿದೆ. ಅದಾದ ನಂತರವೂ 2-3 ಬಾರಿ ರಸ್ತೆಗೆ ಪ್ಯಾಚ್ ಕೆಲಸ ಮಾಡಲಾಗಿದೆ. ಆದರೆ, ಶಾಸಕರ ನಿಧಿಯಿಂದ ಈವರೆಗೂ ಯಾವುದೇ ಅನುದಾನ ನೀಡಿಲ್ಲ ಎಂದು ಪಟ್ಟಣ ಪಂಚಾಯತ್ ಸದಸ್ಯರು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: 2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

    ಪಟ್ಟಣ ಪಂಚಾಯತ್ ರಸ್ತೆ ದುರಸ್ತಿ ಮಾಡಿಸಿದ ಕೆಲಸಕ್ಕೆ ಶಾಸಕರು ಬ್ಯಾನರ್ ಹಾಕಿಸಿಕೊಳ್ಳುವುದು ಎಷ್ಟು ಸರಿ ಎಂದು ಕೊಪ್ಪ ಪಟ್ಟಣ ಪಂಚಾಯತ್ ಸದಸ್ಯರು ಶಾಸಕರನ್ನು ಪ್ರಶ್ನಿಸಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಶಾಸಕರು ಬ್ಯಾನರ್ ಹಾಕಿಸಿಕೊಂಡಿರುವುದನ್ನು ಕಂಡ ಕೊಪ್ಪ ನಿವಾಸಿಗಳು ಶಾಸಕರನ್ನು ಕಂಡು ನಗುತ್ತಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ದಲಿತಾಸ್ತ್ರ ಹೂಡಲು ಮುಂದಾಯ್ತಾ I.N.D.I.A- ಖರ್ಗೆ ಪ್ರಧಾನಿ ಅಭ್ಯರ್ಥಿ?

  • ಅಕಾಲಿಕ ಮಳೆ – ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ಕರೆದ ಸಿಎಂ

    ಬೆಂಗಳೂರು: ಅಕಾಲಿಕ ಮಳೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳು ಅಷ್ಟಿಷ್ಟಲ್ಲ. ಈ ಮಳೆಯಿಂದ ರಾಜ್ಯದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಈ ಕುರಿತು ಚರ್ಚೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆಯನ್ನು ಕರೆದಿದ್ದಾರೆ.

    ಈ ಅಕಾಲಿಕ ಮಳೆಯಿಂದ ರಾಜಕಾಲುವೆ ಒತ್ತುವರಿ ಹೊಡೆತಕ್ಕೆ ಅಪಾರ್ಟ್‍ಮೆಂಟ್‍ಗಳು, ಮನೆ, ರಸ್ತೆಗಳಿಗೆ ನೀರು ನುಗ್ಗಿತ್ತು. ರಾಜಧಾನಿಯಲ್ಲಿ ಆಗಿರುವ ಮಳೆ ಅವಾಂತರ ಸಂಬಂಧ ಇವತ್ತು ಮಧ್ಯಾಹ್ನ 12 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ.

    ಮಂಗಳವಾರ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್‍ಗೆ ಬೊಮ್ಮಾಯಿ ಅವರು ಭೇಟಿ ನೀಡಿದ್ದರು. ಈ ವೇಳೆ ರಾಜಕಾಲುವೆ ಒತ್ತುವರಿ ಮಾಡ್ಕೊಂಡು ಅಪಾರ್ಟ್‍ಮೆಂಟ್ ಕಟ್ಟಿರುವ ಬಗ್ಗೆ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಲಾಯಿತು. ಇದನ್ನೂ ಓದಿ: ಆರ್ ಆ್ಯಂಡ್ ಡಿ ಕಾರ್ಯಪಡೆಗೆ ಅಶೋಕ್ ಶೆಟ್ಟರ್ ನೇಮಕ

    ಅದು ಅಲ್ಲದೇ ಇಂದು ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಮಳೆಯಿಂದ ರಾಜಧಾನಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಬಗ್ಗೆಯೂ ಅವರು ಚರ್ಚೆ ನಡೆಸಲಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್, ಉಸ್ತುವಾರಿ ಸಚಿವ ಗೋಪಾಲಯ್ಯ ಇಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

  • ರಸ್ತೆ ದುರಸ್ತಿ ಹೆಸ್ರಲ್ಲಿ ಬೀದಿಯಲ್ಲೇ ಹೊಡೆದಾಡಿಕೊಂಡ ಕೌನ್ಸಿಲರ್‌ಗಳು

    ರಸ್ತೆ ದುರಸ್ತಿ ಹೆಸ್ರಲ್ಲಿ ಬೀದಿಯಲ್ಲೇ ಹೊಡೆದಾಡಿಕೊಂಡ ಕೌನ್ಸಿಲರ್‌ಗಳು

    ಮಂಗಳೂರು: ಹೊಂಡ ಬಿದ್ದ ರಸ್ತೆ ದುರಸ್ತಿಪಡಿಸಲು ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರೆ, ಮಾಜಿ ಸಚಿವ ಯು.ಟಿ ಖಾದರ್ ಆಪ್ತನೊಬ್ಬ ಸ್ಥಳೀಯ ನಗರಸಭಾ ಸದಸ್ಯನ ಜೊತೆ ಹೊಡೆದಾಡಿ ಬೀದಿ ರಂಪ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಸ್ಥಳೀಯ ಶಾಸಕ ಯುಟಿ ಖಾದರ್ ಆಪ್ತ, ಉಳ್ಳಾಲ ನಗರಸಭೆಯ ಮಾಜಿ ಸದಸ್ಯನೂ ಆಗಿರುವ ಉಸ್ಮಾನ್ ಕಲ್ಲಾಪು ಬೆಂಬಲಿಗರು, ಹಾಲಿ ಕೌನ್ಸಿಲರ್ ಮುಶ್ತಾಕ್ ಪಟ್ಲ ಮತ್ತು ಅಸ್ಗರ್ ಕಲ್ಲಾಪು ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ.

    ಆಗಿದ್ದೇನು..?
    ಮಂಗಳೂರಿನ ಉಳ್ಳಾಲದ ಕಲ್ಲಾಪು ಎಂಬಲ್ಲಿ ಪಟ್ಲಕ್ಕೆ ಹೋಗುವ ರಸ್ತೆ ಮರಳು ಲಾರಿಗಳ ಸಾಗಾಟದಿಂದಾಗಿ ಹೊಂಡ ಬಿದ್ದು ಕೆಸರುಮಯ ಆಗಿತ್ತು. ಇದನ್ನು ಸರಿಪಡಿಸಲು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ನಗರಸಭಾ ಅಧಿಕಾರಿಗಳು ಮತ್ತು ಸದಸ್ಯರು ಆಗಮಿಸಿದ್ದು ಸಾರ್ವಜನಿಕರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೊನೆಗೆ ದುರಸ್ತಿ ಕಾರ್ಯ ಆರಂಭಗೊಳ್ಳುವಷ್ಟರಲ್ಲಿ ಮಾತಿಗೆ ಮಾತು ಬೆಳೆದು ಎರಡು ಗುಂಪು ಹೊಡೆದಾಡಿಕೊಂಡಿದೆ. ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮತ್ತು ಹಾಲಿ ಸದಸ್ಯ ಮುಶ್ತಾಕ್ ಕೈ ಮಿಲಾಯಿಸಿಕೊಂಡು ಹೊಡೆದಾಡಿದ್ದು ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.

    ಒಟ್ಟಿನಲ್ಲಿ ರಸ್ತೆ ದುರಸ್ತಿ ಹೆಸರಲ್ಲಿ ಕೌನ್ಸಿಲರ್ ಗಳೇ ಬೀದಿಯಲ್ಲಿ ಹೊಡೆದಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ಬಿಎಸ್‍ವೈ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ: ಟೆಂಪಲ್ ರನ್ ಸಮರ್ಥಿಸಿಕೊಂಡ ರೇವಣ್ಣ

    ಬಿಎಸ್‍ವೈ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ: ಟೆಂಪಲ್ ರನ್ ಸಮರ್ಥಿಸಿಕೊಂಡ ರೇವಣ್ಣ

    ಬೆಂಗಳೂರು: ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತಿರುಗಾಡಿದಷ್ಟು ನಾವು ದೇವಸ್ಥಾನಕ್ಕೆ ಹೋಗಿಲ್ಲ. ಕುಲದೇವರಿಗೆ ಹೋಗಿ ಪೂಜೆ ಮಾಡಬಾರದೇ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಪ್ರಶ್ನಿಸಿ ಬಿಎಸ್‍ವೈಗೆ ಟಾಂಗ್ ಕೊಟ್ಟಿದ್ದಾರೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಟೆಂಪಲ್ ರನ್ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಮ್ಮ ಮನೆ ದೇವರಿಗೆ ಪೂಜೆ ಮಾಡುವುದು ತಪ್ಪಾ? ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಮ್ಮು-ಕಾಶ್ಮೀರದ ವೈಷ್ಣವಿ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ನಾವು ಇನ್ನು ಅಲ್ಲಿಯವರೆಗೆ ಹೋಗಿಲ್ಲ, ಇಲ್ಲಿಯ ದೇವರನ್ನು ಅಷ್ಟೇ ನೋಡುತ್ತಿದ್ದೇವೆ. ಅವರಂತೆ ದೇಶದ ಹಾಗೂ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಹೋಗಿಲ್ಲ ಎಂದು ಕಾಲೆಳೆದರು.

    ಕುಮಾರಸ್ವಾಮಿ 42 ದೇವಸ್ಥಾನಕ್ಕೆ ಹೋಗಿದ್ದರಿಂದಲೇ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ರೈತರ ಸಾಲ ಮನ್ನಾ ಆಗುತ್ತಿದೆ ಎಂದು ತಮ್ಮ ಟೆಂಪಲ್ ರನ್ ಸಮರ್ಥಿಸಿಕೊಂಡರು.

    ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಪ್ರಧಾನಿ ನರೇಂದ್ರ ಮೋದಿಗೆ ಮಧ್ಯಪ್ರವೇಶಿಸಿ ಮಹದಾಯಿ ಸಮಸ್ಯೆಯನ್ನು ಇತ್ಯರ್ಥ ಮಾಡುಬೇಕೆಂದು ರಾಜ್ಯದ 17 ಜನ ಬಿಜೆಪಿ ಸಂಸದರು ಹಾಗೂ ಬಿಎಸ್ ಯಡಿಯೂರಪ್ಪ ಕೇಳಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡ ಸಚಿವರು, ನಾವು 36.5 ಟಿಎಂಸಿ ನೀರು ಕೇಳಿದ್ದೇವು. ಆದರೆ ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದರು.

    ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಶೀಘ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಣಕ್ಕೆ ಯಾವುದೇ ಚಿಂತೆಬೇಡವೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ರಸ್ತೆಯ ಮೇಲೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು. ಶೀಘ್ರವೇ ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv