Tag: ರಸ್ತೆ ಗುಂಡಿ

  • ಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಸಿದ ಪಾಲಿಕೆ – BBMP ಕಳಪೆ ಕಾಮಗಾರಿಗೆ ಜನರ ಛೀಮಾರಿ

    ಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಸಿದ ಪಾಲಿಕೆ – BBMP ಕಳಪೆ ಕಾಮಗಾರಿಗೆ ಜನರ ಛೀಮಾರಿ

    ಬೆಂಗಳೂರು: ಮಳೆಯಿಂದ ಹಾನಿಯಾದ ಬೆಂಗಳೂರು ರಸ್ತೆಗುಂಡಿ (Pothole) ಯನ್ನ ಮುಚ್ರಪ್ಪ ಅಂದ್ರೇ ಕಟ್ಟಡದ ಅವಶೇಷದ ಡೆಬ್ರಿಸ್ ಹಾಕಿ ಪ್ಯಾಚ್ ವರ್ಕ್ ಮಾಡ್ತಿದ್ದಾರೆ. ನಕಲಿ ಬಿಲ್ಲಿಗೆ ಬಿಬಿಎಂಪಿ (BBMP) ಹೈಡ್ರಾಮಾ ಮಾಡಿದ ಪ್ರಸಂಗವೊಂದು ಬಯಲಾಗಿದೆ.

    ಜನರ ಈ ಆಕ್ರೋಶ, ಅಸಮಾಧಾನವನ್ನ ಕೇಳಿಸಿಕೊಳ್ಳಲು ಸರ್ಕಾರಕ್ಕೆ ಕಿವಿಯಿಲ್ಲ. ಜನರ ಬಗ್ಗೆ ಕಾಳಜಿಯೂ ತೋರಿಸ್ತಿಲ್ಲ. ಯೆಸ್ ಬೆಂಗಳೂರು (Bengaluru) ಇದೀಗ ಗುಂಡಿಗಳ ಊರಾಗ್ತಿದೆ. ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳ ನರಕ ದರ್ಶನವಾಗ್ತಿದ್ದು, ಪಾಲಿಕೆ ಮಾತ್ರ ಗುಂಡಿಗಳನ್ನ ಮುಚ್ಚದೇ ಅಮಾಯಕ ಜನರ ಜೀವವನ್ನ ಕೊಲ್ಲುತ್ತಿದೆ. ಮೊನ್ನೆ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು, ಅದನ್ನ ಮುಚ್ಚಲು ಡೆಬ್ರಿಸ್ ತಂದು ಸುರಿಯುತ್ತಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ನಗರದಲ್ಲಿ ಸುರಿದ ಭಾರೀ ಮಳೆ (Rain) ಗೆ ರಸ್ತೆ ಗುಂಡಿಗಳು ಬಲಿಗಾಗಿ ಮತ್ತೆ ಬಾಯ್ತೆರೆದಿವೆ. ಗುಂಡಿ ಮುಚ್ಚಿ ಜೀವಗಳನ್ನ ಉಳಿಸಬೇಕಾದ ಪಾಲಿಕೆ, ಮತ್ತೆ ಅದೇ ಬೇಜವಾಬ್ದಾರಿತನ ತೋರಿಸ್ತಿದೆ. ಸಿಟಿ ಮಾರ್ಕೆಟ್, ಸಿರ್ಸಿ ಸರ್ಕಲ್, ಮೈಸೂರ್ ರೋಡ್‍ನಲ್ಲಿ ಕಟ್ಟಡದ ತ್ಯಾಜ್ಯವನ್ನ ಸುರಿದು ಪ್ಯಾಚ್ ವರ್ಕ್ ಮಾಡ್ತಿದ್ದಾರೆ. ಟ್ರ್ಯಾಕ್ಟರ್ (Tractor) ಮೂಲಕ ತ್ಯಾಜ್ಯವನ್ನ ತಂದು ಅವೈಜ್ಞಾನಿಕವಾಗಿ ಗುಂಡಿ ಮುಚ್ಚುತ್ತಿದ್ದಾರೆ. ಪಾಲಿಕೆಯ ಬುದ್ಧಿವಂತ ಅಧಿಕಾರಿಗಳು, ಗುಂಡಿಗಳಿಗೆ ಆಳೆತ್ತರ ಅವಶೇಷ ಸುರಿದು ಟ್ರಾಫಿಕ್ ಜಾಮ್ (Traffic Jam) ಮಾಡ್ತಿದ್ದಲ್ಲದೆ, ಕಳ್ಳ ಕೆಲಸ ಮಾಡಿ, ನಕಲಿ ಬಿಲ್ ಸೃಷ್ಟಿಸಿ ಸಖತ್ ಡ್ರಾಮಾ ನಡೆಸ್ತಿದ್ದಾರೆ.

    ಕೆಡವಿದ ಕಟ್ಟಡದ ಅವಶೇಷಗಳನ್ನ ತಂದು, ನಯಾ ಪೈಸೆ ಖರ್ಚಿಲ್ಲದೇ ಗುಂಡಿಗಳನ್ನ ಮುಚ್ಚಿದ್ದಾರೆ. 1 ಕಿಲೋ ಮೀಟರ್ ವ್ಯಾಪ್ತಿಯಲ್ಲೇ 7 ಕಡೆ ಕಟ್ಟಡ ಅವಶೇಷಗಳನ್ನ ಬಿಬಿಎಂಪಿ ಅಧಿಕಾರಿಗಳು ಸುರಿದಿದ್ದಾರೆ. ಮಳೆ ಬಂದ್ರೆ ಮತ್ತೆ ಕಿತ್ತು ಬರುವ ಕಟ್ಟಡದ ಅವಶೇಷಗಳ ಸುರಿದಿರುವ ಬಿಬಿಎಂಪಿ ಬುದ್ಧಿವಂತಿಕೆಗೆ ಸ್ಥಳೀಯರು ಕಿಡಿ ಕಾರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

    ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಡಾಂಬರು ರಸ್ತೆಯಲ್ಲಿ ಹೊಂಡ- ಗುಂಡಿಗಳಿಂದ ತುಂಬಿ ಹೋಗಿದೆ. ರಸ್ತೆಗಳ ದುರವಸ್ಥೆ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಹೀಗಾಗಿ ಸ್ಮಾರ್ಟ್ ಸಿಟಿಯ ಮಾದರಿ ರಸ್ತೆಗಳಲ್ಲಿ ಗುಂಡಿಗಳನ್ನು ಗುರುತಿಸುವ ವಿಶಿಷ್ಟ ಸ್ಪರ್ಧೆ ಏರ್ಪಡಿಸಲಾಗಿದೆ.

    ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹೆಚ್ಚಿನ ರಸ್ತೆಗಳಲ್ಲಿ ಎಲ್ಲಿ ನೋಡಿದ್ರೂ ಗುಂಡಿಗಳದ್ದೇ ಕಾರುಬಾರು. ಕಾಂಕ್ರೀಟ್ ರಸ್ತೆಗಳನ್ನು ಹೊರತುಪಡಿಸಿ ಒಳ ರಸ್ತೆಗಳಲ್ಲೂ ಗುಂಡಿಗಳದ್ದೇ ಮೇಲುಗೈ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹಲವಾರು ರಸ್ತೆಗಳು ಹೊಂಡಮಯವಾಗಿದೆ. ಇದೇ ಹೊಂಡಗಳಿಂದಾಗಿ ಈವರೆಗೆ ಮೂವರು ಉಸಿರು ಬಿಟ್ಟಿದ್ದಾರೆ. ಇನ್ನೂ ಕೆಲವರು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗುತ್ತಾ- ಜಮೀರ್‌ಗೆ ಆರ್.ಅಶೋಕ್ ಟಾಂಗ್

    ಇದರಿಂದ ಪಾರಾಗಲು ಪಾಲಿಕೆ ಒಂದು ಉಪಾಯ ಕಂಡುಕೊಂಡಿದೆ. ಅದೇನೆಂದರೆ ದೊಡ್ಡ ಮತ್ತು ಅಪಾಯಕಾರಿ ರಸ್ತೆ ಗುಂಡಿಗಳನ್ನು ಗುರುತಿಸಿದವರಿಗೆ ಬಹುಮಾನ ನೀಡುವ ಮೂಲಕ ಜನಜಾಗೃತಿ ಮೂಡಿಸಲು ಸ್ಪರ್ಧೆ ಹಮ್ಮಿಕೊಂಡಿದೆ. ಬೃಹತ್ ಹೊಂಡಗಳ ಫೋಟೋ ಅಥವಾ ವೀಡಿಯೋ ತೆಗೆದು ಅದರ ಲೊಕೇಷನ್‍ನೊಂದಿಗೆ 9731485875 ನಂಬರ್ ಗೆ ವಾಟ್ಸಪ್ ಮಾಡಲು ಸೂಚಿಸಲಾಗಿದೆ. ಆಗಸ್ಟ್ 23ರಂದು ಈ ಸ್ಪರ್ದೆಗೆ ಚಾಲನೆ ನೀಡಲಾಗಿದ್ದು ಈವರೆಗೆ 800 ಫೋಟೋ ವಿಡಿಯೋಗಳನ್ನು ಜನರು ಕಳುಹಿಸಿ ಕೊಟ್ಟಿದ್ದಾರೆ. ಮೂರು ಧರ್ಮದ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ.

    ಪ್ರಥಮ ಬಹುಮಾನ 5,000 ರೂಪಾಯಿ, ದ್ವಿತೀಯ 3,000, ಹಾಗೂ ತೃತೀಯ 2,000 ರೂಪಾಯಿ ನಿಗದಿ ಮಾಡಲಾಗಿದೆ. ವಿಜೇತರಿಗೆ ಸೆಪ್ಟೆಂಬರ್ 30ರಂದು ಪಾಲಿಕೆಯ ಸ್ಮಾರ್ಟ್ ಸಿಟಿ ಯೋಜನೆ ಕಚೇರಿಯ ಮುಂದೆ ಬಹುಮಾನ ವಿತರಿಸಲು ತೀರ್ಮಾನಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್‍ನಿಂದ ಬಿದ್ದು ನರಳಾಡಿದ ಯುವತಿ!

    ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್‍ನಿಂದ ಬಿದ್ದು ನರಳಾಡಿದ ಯುವತಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿ ಪ್ರಾಬ್ಲಂ ಒಂದು ಬಗೆಹರಿಯದ ಸಮಸ್ಯೆಯಾಗಿದೆ. ರಸ್ತೆಗುಂಡಿಗಳು ನಿರಂತರವಾಗಿ ಸವಾರರ ಜೀವ ಹಿಂಡುತ್ತಿದ್ದು, ಮುಖ್ಯ ರಸ್ತೆಯಲ್ಲೇ ರಸ್ತೆಗುಂಡಿಗಳಿಂದ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಇದೀಗ ಗುಂಡಿ ತಪ್ಪಿಸಲು ಹೋಗಿ ಮಹಿಳೆಯೊಬ್ಬಳು ಸ್ಕಿಡ್ ಆಗಿ ಬಿದ್ದ ಪ್ರಸಂಗ ನಡೆದಿದೆ.

    ಕಸ್ತೂರಿ ನಗರದ ಫ್ಲೈಓವರ್ ಮೇಲೆ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸ್ವಲ್ಪ ಯಾಮಾರಿದ್ರೂ ಹಿಂದಿನ ಗಾಡಿಯಿಂದ ಅಪಘಾತವಾಗುತ್ತಿತ್ತು. ಬೈಕ್ ಹಿಂದೆ ಬರುತ್ತಿದ್ದ ಕಾರು ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಬಚಾವಾಗಿದ್ದಾರೆ. ಮಹಿಳೆ ಸ್ಕಿಡ್ ಆಗಿ ಬೀಳ್ತಿರೋದನ್ನ ಕಾರು ಚಾಲಕ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ಅಭಿನಯದ ‘ಮಾಫಿಯಾ’ ಚಿತ್ರಕ್ಕೆ ಹೈದರಾಬಾದ್ ನಲ್ಲಿ ನಡೀತು ಭರ್ಜರಿ ಫೈಟ್

    ಬೆಂಗಳೂರಿನಲ್ಲಿ ಗುಂಡಿ ಲೆಕ್ಕಾಚಾರ: 4 ತಿಂಗಳಲ್ಲಿ ಗುಂಡಿ ಮುಚ್ಚಲು 8 ಕೋಟಿ ವೆಚ್ಚವಾಗಿದ್ದು, 2.5 ಅಡಿ ವಿಸ್ತೀರ್ಣದ ಗುಂಡಿಗೆ 800 ರೂ. ಖರ್ಚು ಮಾಡಲಾಗಿದೆ. ಇದುವರೆಗೆ 16,000 ಗುಂಡಿ ಮುಚ್ಚಲಾಗಿದೆ. 1,000 ಗುಂಡಿ ಇನ್ನೂ ಮುಚ್ಚಲು ಬಾಕಿ ಇದೆ. ಈ ವರ್ಷ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೀಡಾಗಿ 656 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳಪೆ ರಸ್ತೆ, ಗುಂಡಿಗೆ ಶೇ.17ರಷ್ಟು ಮಂದಿ ಮೃತಪಟ್ಟಿದ್ದಾರೆ. ವರ್ಷಕ್ಕೆ ಗುಂಡಿಯಿಂದಲೇ 30 ಮಂದಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಿರಂತರವಾಗಿ ಮಳೆಯಿಂದಾಗಿ ಗುಂಡಿಮುಚ್ಚೋಕೆ ಹಿನ್ನಡೆಯಾಗ್ತಿದೆ. ಮೇ ತಿಂಗಳಿನಿಂದ ಈವರೆಗೆ 20 ಸಾವಿರ ಗುಂಡಿಯನ್ನ ಮುಚ್ಚಲಾಗಿದೆ. ಈಗಲೂ ಪ್ರತಿನಿತ್ಯ ಗುಂಡಿ ಗುರುತಿಸಿ ಮುಚ್ಚೋ ಕೆಲಸ ಮಾಡಲಾಗುತ್ತಿದೆ. ಬ್ಯಾಚ್ ಮಿಕ್ಸ್ ಪ್ಲಾಂಟ್‍ನಲ್ಲಿ ಮಳೆಯಿಂದಾಗಿ ತೊಂದರೆ ಆಗುತ್ತಿದೆ. ಬದಲಾಗಿ ಕೋಲ್ಡ್ ಮಿಕ್ಸ್ ಅಳವಡಿಕೆಗೆ ಮುಂದಾಗುತ್ತಿದ್ದೀವಿ. ಇಂದು ನಾಳೆ 40 ಲೋಡ್ ಡಾಂಬರ್ ಮಿಕ್ಸ್ ವ್ಯವಸ್ಥೆ ಆಗುತ್ತಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಇನ್ನೆರಡು ವರ್ಷಗಳಲ್ಲಿ ಮುಂಬೈ ರಸ್ತೆಗಳು ಗುಂಡಿ ಮುಕ್ತವಾಗಲಿದೆ: ಏಕನಾಥ ಶಿಂಧೆ

    ಇನ್ನೆರಡು ವರ್ಷಗಳಲ್ಲಿ ಮುಂಬೈ ರಸ್ತೆಗಳು ಗುಂಡಿ ಮುಕ್ತವಾಗಲಿದೆ: ಏಕನಾಥ ಶಿಂಧೆ

    ಮುಂಬೈ: ಇನ್ನೆರಡು ವರ್ಷಗಳಲ್ಲಿ ಮುಂಬೈನ ರಸ್ತೆಗಳು ಗುಂಡಿ ಮುಕ್ತವಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ನಾನು ಮುಂಬೈ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಶಾಸಕರ ಜೊತೆ ಸಭೆ ನಡೆಸಿದ್ದೇನೆ. ಜಿಯೋಪಾಲಿಮರ್ ತಂತ್ರವನ್ನು ಬಳಸಿ ಗುಂಡಿಗಳನ್ನು ಮುಚ್ಚುವ ಬಗ್ಗೆ ಚರ್ಚಿಸಿದ್ದು, ತಕ್ಷಣವೇ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: World Athletics Championship 2022 – ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ

    ಸದ್ಯ 236 ಕಿ.ಮೀ ರಸ್ತೆಗಳಿಗೆ ಸಿಮೆಂಟ್ ಕಾಂಕ್ರೀಟ್ ಹಾಕುವ ಕಾಮಗಾರಿ ನಡೆಯುತ್ತಿದ್ದು, 400 ಕಿ.ಮೀ ರಸ್ತೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2023-2024ರಲ್ಲಿ ಇನ್ನೂ 423 ಕಿ.ಮೀ ರಸ್ತೆಯಲ್ಲಿ ಸಿಮೆಂಟ್ ಕಾಂಕ್ರಿಟೀಕರಣ ಕಾಮಗಾರಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಮುಂಬೈನಲ್ಲಿ ಹೊಸ ಸಿಮೆಂಟ್ ರಸ್ತೆಗಳು ನೀರಿನ ಒಳಚರಂಡಿಗಾಗಿ ನಿಯಮಿತ ಮಧ್ಯಂತರಗಳಲ್ಲಿ ಸೆಸ್ಪಿಟ್‍ಗಳನ್ನು ಹಾಕಲಾಗಿರುತ್ತದೆ ಎಂದರು.

    ಮಳೆಗಾಲದಲ್ಲಿ ಪ್ರವಾಹವನ್ನು ತಪ್ಪಿಸಲು ರಸ್ತೆಗಳ ಸಿಮೆಂಟ್ ಕಾಂಕ್ರೀಟಿಕರಣದ ಸಮಯದಲ್ಲಿ ನಿಯಮಿತ ಮಧ್ಯಂತರದಲ್ಲಿ ಒಳಚರಂಡಿ ಕೊಳವೆಗಳನ್ನು ಸಹ ರಚಿಸಲಾಗುತ್ತದೆ.  ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್

    Live Tv
    [brid partner=56869869 player=32851 video=960834 autoplay=true]

  • ಸ್ವಂತ ಖರ್ಚಿನಲ್ಲಿಯೇ ಗುಂಡಿ ಮುಚ್ಚೋ ಕಾರ್ಯ- ಬೈಕ್ ಸವಾರರ ಜೀವ ಉಳಿಸ್ತಿರುವ ಮಲ್ನಾಡ್ ಯುವಕ

    ಸ್ವಂತ ಖರ್ಚಿನಲ್ಲಿಯೇ ಗುಂಡಿ ಮುಚ್ಚೋ ಕಾರ್ಯ- ಬೈಕ್ ಸವಾರರ ಜೀವ ಉಳಿಸ್ತಿರುವ ಮಲ್ನಾಡ್ ಯುವಕ

    ಬೆಂಗಳೂರು: ಗುಂಡಿಗಳ ಊರು ಬೆಂಗಳೂರು. ಇಲ್ಲಿ ಅದೆಷ್ಟು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡು, ಜೀವ ಬಿಟ್ರೂ ಬಿಬಿಎಂಪಿ ಮಾತ್ರ ಬುದ್ದಿ ಕಲಿಯುತ್ತಿಲ್ಲ. ಇದರಿಂದ ರೋಸಿಹೋದ ಯುವಕನೊಬ್ಬ ತನ್ನ ಸ್ವಂತ ದುಡ್ಡಿನಿಂದಲೇ ಗುಂಡಿಗಳನ್ನ ಮುಚ್ಚುತ್ತಿದ್ದಾರೆ.

    ಹೌದು. ಅನೀಲ್ ಎಂಬ ಯುವಕ ತನ್ನ ಸ್ವಂತ ಖರ್ಚಿನಲ್ಲಿಯೇ ಬೆಂಗಳೂರಿನಲ್ಲಿ ಗುಂಡಿಗಳನ್ನ ಮುಚ್ಚುವ ಕಾರ್ಯಮಾಡ್ತಿದ್ದಾರೆ. ಜೆಪಿ ನಗರದ ಸುತ್ತಮುತ್ತಲಿನ ಗುಂಡಿಗಳಿಗೆ ಜಲ್ಲಿ, ಸೆಮೆಂಟ್ ಹಾಗೂ ಡಸ್ಟ್ ಪೌಡರ್ ನ್ನು ಹಾಕಿ, ತನ್ನ ಸ್ನೇಹಿತರ ಜೊತೆ ಹೋಗಿ ಗುಂಡಿಗಳನ್ನ ಮುಚ್ಚುತ್ತಿದ್ದಾರೆ. ಮಲೆನಾಡು ಭಾಗದ ಅನೀಲ್, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ನಿತ್ಯ 20-30 ಗುಂಡಿಗಳನ್ನ ಮುಚ್ಚು ವಾಹನ ಸವಾರರಿಗೆ ನಿಧಾನವಾಗಿ ಚಲಾಯಿಸುವಂತೆ ಜಾಗೃತಿ ಮೂಡಿಸ್ತಿದ್ದಾರೆ.

    ಮೊದ ಮೊದಲು ಸಣ್ಣಪುಟ್ಟ ಏರಿಯಾಗಳಲ್ಲಿ ಗುಂಡಿ ಮುಚ್ಚಲು ಆರಂಭಿಸಿದ್ದ ಅನೀಲ್, ಇದೀಗ ಜೆಪಿ ನಗರ ತುಂಬೆಲ್ಲಾ ಬೈಕ್ ನಲ್ಲಿ ಓಡಾಡಿ, ಎಲ್ಲಿ ಗುಂಡಿಗಳು ಕಾಣುತ್ತೋ, ಅಲ್ಲಿ ಮುಚ್ಚುವ ಕೆಲಸ ಮಾಡ್ತಿದ್ದಾರೆ. ಅನೀಲ್ ಗೆ ಸ್ನೇಹಿತರು ಕೂಡ ಸಾಥ್ ಕೊಡ್ತಿದ್ದು, ಜೆಪಿ ನಗರ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ನಗರದಲ್ಲಿರೋ ಎಲ್ಲಾ ಗುಂಡಿಗಳನ್ನೂ ಮುಚ್ಚುತ್ತೇವೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರು 2ನೇ ಮದುವೆಯಾಗಲು ಬೇಕು ಇಲಾಖೆ ಅನುಮತಿ – ಇಲ್ಲವಾದ್ರೆ ಸರ್ಕಾರಿ ಸೌಲಭ್ಯವಿಲ್ಲ

    ಆಫೀಸ್, ಮನೆ ಕೆಲಸ. ಅದು, ಇದು ಅಂತ ಬ್ಯುಸಿ ಲೈಫ್ ನಲ್ಲಿರುವ ಜನರ ಮಧ್ಯೆ, ಗುಂಡಿ ಮುಚ್ಚೋಕೆ ಅಂತನೇ ಟೈಮ್ ಬಿಡುವು ಮಾಡಿಕೊಂಡ ಅನೀಲ್ ಆಂಡ್ ಟೀಂ ಕೆಲಸಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • ಮೆಟ್ರೋ  ಪಿಲ್ಲರ್‌ಗೆ ಬಸ್ ಡಿಕ್ಕಿ ಪ್ರಕರಣ- ಗುಂಡಿ ಅನಾಹುತ ಅಲ್ಲವೆಂದ ಬಿಬಿಎಂಪಿ

    ಮೆಟ್ರೋ ಪಿಲ್ಲರ್‌ಗೆ ಬಸ್ ಡಿಕ್ಕಿ ಪ್ರಕರಣ- ಗುಂಡಿ ಅನಾಹುತ ಅಲ್ಲವೆಂದ ಬಿಬಿಎಂಪಿ

    ಬೆಂಗಳೂರು: ಮೆಟ್ರೋ ಪಿಲ್ಲರ್ ಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಪ್ರಕರಣಕ್ಕೆ ರಸ್ತೆ ಗುಂಡಿ ಕಾರಣವಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವರದಿ ಪ್ರಕಾರ ಅದು ಹಂಪ್ ಬಳಿ ನಿಲ್ಲಿಸುವಾಗ ಗುಂಡಿ ಇಲ್ಲ ಅಂತ ಗೊತ್ತಾಗಿದೆ. ಬಸ್ ಡಿಕ್ಕಿ ಹೊಡೆದಿದೆ ಎಂಬ ಕಾರಣ ನೋಡಬೇಕಿದೆ. ಚಾಲಕರ ಬಳಿ ಪೂರ್ಣ ಮಾಹಿತಿ ಪಡೆದು ತನಿಖೆ ಆಗಬೇಕಾಗಿದೆ. ಪಾಲಿಕೆ ಕಾರಣ ಎಂದು ಹೇಳಲು ಆಗಲ್ಲ. ಗುತ್ತಿಗೆದಾರರೇ ಅದನ್ನ ಮಾಡಬೇಕಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್‌ಗೆ KSRTC ಬಸ್ ಡಿಕ್ಕಿ- ನಾಲ್ವರು ಗಂಭೀರ

    ಇದೇ ವೇಳೆ ಹೊಸ ಕಮೀಷನರ್ ಹೊಸ ರೂಲ್ಸ್ ಜಾರಿಗೆ ತಂದರು. ಬಿಬಿಎಂಪಿ ಅಧಿಕಾರ ವಿಕೇಂದ್ರಿಕರಣ ಮಾಡಿ ಎಲ್ಲ ವಲಯ ವಿಶೇಷ ಆಯುಕ್ತರಿಗೆ ವಿಶೇಷ ಅಧಿಕಾರ ನೀಡಿದರು. ತಮ್ಮ ನೇಮಕಾತಿ ಆಗಿರುವ ವಲಯಗಳ ಆಗು ಹೋಗು- ಕುಂದು ಕೊರತೆ ನಿತ್ಯ ವಿಸಿಟ್ ಮಾಡಬೇಕು. ಬೆಳಗ್ಗೆ 8 ರಿಂದಲೇ ರೌಂಡ್ಸ್ ಮಾಡಬೇಕು. 10 ಗಂಟೆಯಿಂದ 5 ಗಂಟೆವರೆಗೂ ವಲಯ ಕಚೇರಿ ಹಾಗೂ ಕೇಂದ್ರ ಕಚೇರಿಗಳಲ್ಲಿ ಲಭ್ಯ ಇರಬೇಕು ಎಂದರು. ಇದನ್ನೂ ಓದಿ: ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಬಿಬಿಎಂಪಿ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರೊಂದಿಗೆ ಚರ್ಚೆ ನಡೆಸಿ ವಿಶೇಷ ಆಯುಕ್ತರು ನೀಡಿದ್ದ ಆದೇಶ ಸೂಚನೆ, ಜಂಟಿ ಆಯುಕ್ತರು ಮುಖ್ಯ ಅಭಿಯಂತರರಿಗೆ ಮಾಹಿತಿ ಕೊಡಬೇಕು. ಕಮೀಷನರ್ ಆಡಳಿತ ನಿರ್ಧಾರಕ್ಕೆ ಮಾತ್ರ ಸೀಮಿತ. ಎಲ್ಲ ಕಮೀಷನರ್ ವಾರದ ಪ್ರತಿ ದಿನ ಒಬ್ಬೊರಂತೆ ಮಾಧ್ಯಮದ ಜತೆ ಮಾತನಾಡಬೇಕು. ಕಮೀಷನರ್ ಬುಧವಾರ 11 ಗಂಟೆಗೆ ಮಾತ್ರ ಮಾತನಾಡ್ತಾರೆ. ಕೆಲಸ ಜಾಸ್ತಿ, ಮಾತು ಕಡಿಮೆ. 10 ಗಂಟೆಗೆ ಎಲ್ಲರೂ ಟೇಬಲ್ ಮೇಲೆ ಇರಬೇಕು ಎಂದು ತುಷಾರ್ ಗಿರಿನಾಥ್ ಹೊಸ ರೂಲ್ಸ್ ಹೊರಡಿಸಿದರು.

  • 15 ದಿನಗಳಲ್ಲಿ ಬೆಂಗಳೂರಿನ ಸಿಬಿಡಿ ಏರಿಯಾದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಿ: ಹೈಕೋರ್ಟ್ ಡೆಡ್‍ಲೈನ್

    15 ದಿನಗಳಲ್ಲಿ ಬೆಂಗಳೂರಿನ ಸಿಬಿಡಿ ಏರಿಯಾದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಿ: ಹೈಕೋರ್ಟ್ ಡೆಡ್‍ಲೈನ್

    ಬೆಂಗಳೂರು: ರಸ್ತೆ ಗುಂಡಿ ವಿಚಾರದಲ್ಲಿ ಬಿಬಿಎಂಪಿಯನ್ನು ಹೈಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ. ಮುಂದಿನ 15 ದಿನಗಳಲ್ಲಿ ಬೆಂಗಳೂರಿನ ಸಿಬಿಡಿ ಏರಿಯಾದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವಂತೆ ಬಿಬಿಎಂಪಿಗೆ ಡೆಡ್‍ಲೈನ್ ನೀಡಿದೆ.

    ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸಿಜೆ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ, ಎಂಎಸ್ ಪಾಳ್ಯದಲ್ಲಿ ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಪ್ರಕರಣವನ್ನು ಪ್ರಸ್ತಾಪಿಸಿತು. ರಸ್ತೆಗುಂಡಿಯಿಂದ ಆಗುವ ಪ್ರತಿಯೊಂದು ಸಾವು ನಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡಿಸುತ್ತಿದೆ ಎಂದು ಬೇಸರ ಹೊರಹಾಕಿತು. ಇದನ್ನೂ ಓದಿ: ಹಿಜಬ್‌ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ: ಹೈಕೋರ್ಟ್‌ ಶಂಕೆ

    ಬಿಬಿಎಂಪಿಯ ಗುಂಡಿ ಮುಚ್ಚುವ ನಿಮ್ಮ ಕಾರ್ಯ ಯೋಜನೆ ಸಮಾಧಾನ ತಂದಿಲ್ಲ. ಮೂರು ದಿನಗಳಲ್ಲಿ ಗುಂಡಿಗಳ ಸರ್ವೇ ಮುಗಿಸಿ, 15 ದಿನಗಳಲ್ಲಿ ಗುಂಡಿ ಮುಚ್ಚುವ ಕೆಲಸ ಯುದ್ಧೋಪಾದಿಯಲ್ಲಿ ನಡೆಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು, ಮುಖ್ಯ ಎಂಜಿನಿಯರ್‌ಗೆ ಸೂಚಿಸಿತು. ಇದನ್ನೂ ಓದಿ: ಹಿಜಬ್‌- ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ

  • ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್: ಎಸ್.ಆರ್ ವಿಶ್ವನಾಥ್

    ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್: ಎಸ್.ಆರ್ ವಿಶ್ವನಾಥ್

    ಬೆಂಗಳೂರು: ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್ ನೀಡುವುದಾಗಿ ಯಲಹಂಕ ಕ್ಷೇತ್ರದ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ತಿಳಿಸಿದ್ದಾರೆ.

    ರಸ್ತೆ ಗುಂಡಿಯಿಂದ ಅಶ್ವಿನ್ ಮೃತಪಟ್ಟಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ವಡೇರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 20*30 ಅಡಿ ಅಳತೆಯ ಉಚಿತ ನಿವೇಶನ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಸರ್ಕಾರದಿಂದಲೂ ಸೂಕ್ತ ಪರಿಹಾರ ಕೊಡಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಅವರು ಹೇಳಿದರು.

    ನಡೆದಿದ್ದೇನು..?
    ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಕಡೆ ಹೋಗುವ ರಸ್ತೆಯಲ್ಲಿ ಜಲಮಂಡಳಿಯಿಂದ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಅಶ್ವಿನ್ ಮೃತಪಟ್ಟಿದ್ದರು. ಅಶ್ವಿನ್ ತಾಯಿಗೆ ಊಟ ತರಲು ಹೊರಗಡೆ ಹೋಗಿದ್ದರು. ಎಂಎಸ್ ಪಾಳ್ಯದ ಹೋಟೆಲ್ ಒಂದರಲ್ಲಿ ಆಹಾರ ಕಟ್ಟಿಸಿಕೊಂಡು ವಾಪಸ್ ಬರುವಾಗ ಈ ಅಪಘಾತ ನಡೆದಿತ್ತು. ಇದನ್ನೂ ಓದಿ: LPG ಸಿಲಿಂಡರ್ ಸ್ಫೋಟ: ನಾಲ್ವರು ಸಾವು, 15 ಜನರಿಗೆ ಗಂಭೀರ ಗಾಯ

    ಬೀದಿದೀಪ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಗುಂಡಿ ಇರುವುದು ಕಂಡಿರಲಿಲ್ಲ. ಇದರಿಂದಾಗಿ ಜಲಮಂಡಳಿಯವರು ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅಶ್ವಿನ್‍ಗೆ ತೀವ್ರ ಗಾಯಗೊಂಡಿದ್ದ. ಇದನ್ನು ನೋಡಿದ ಸ್ಥಳೀಯರು ಅಂಬುಲೆನ್ಸ್ ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ ಸ್ಥಳೀಯರೇ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾರೆ.

    ಇತ್ತ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟ ಜಾಗದಲ್ಲಿ ಮೃತ ಅಶ್ವಿನ್ ಸ್ನೇಹಿತರು ಜಮಾಯಿಸಿ ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ಮೃತ ಅಶ್ವಿನ್ ಪೋಷಕರು ಯಲಹಂಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಬಿಬಿಎಂಪಿ, ಬಿಡ್ಲೂಎಸ್ಸ್ಬಿ ಮೇಲೆ ದೂರು ದಾಖಲಾಗಿದೆ.

  • ಜಲಮಂಡಳಿಯಿಂದ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು

    ಜಲಮಂಡಳಿಯಿಂದ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು

    ಬೆಂಗಳೂರು: ಜಲಮಂಡಳಿಯಿಂದ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

    ಅಶ್ವಿನ್ (27) ಮೃತ ದುರ್ದೈವಿ. ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಕಡೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಶ್ವಿನ್ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಹಾವೇರಿ ಜಿಲ್ಲೆಯವರಾಗಿದ್ದಾರೆ.

    ಅಶ್ವಿನ್ ತಾಯಿಗೆ ಊಟ ತರಲು ಹೊರಗಡೆ ಹೋಗಿದ್ದರು. ಎಂಎಸ್ ಪಾಳ್ಯದ ಹೋಟೆಲ್ ಒಂದರಲ್ಲಿ ಆಹಾರ ಕಟ್ಟಿಸಿಕೊಂಡು ವಾಪಸ್ ಬರುವಾಗ ಈ ಅಪಘಾತ ನಡೆದಿದೆ. ಬೀದಿದೀಪ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಗುಂಡಿ ಇರುವುದು ಕಂಡಿರಲಿಲ್ಲ. ಇದರಿಂದಾಗಿ ಜಲಮಂಡಳಿಯವರು ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಮಲ್ಪೆ ಬಂದರಿನಲ್ಲಿ ಬಲೆಗೆ ಬಿತ್ತು 250 ಕೆ.ಜಿಯ ಗರಗಸ ಮೀನು..!

    ಈ ಹಿನ್ನೆಲೆಯಲ್ಲಿ ಅಶ್ವಿನ್‍ಗೆ ತೀವ್ರ ಗಾಯಗೊಂಡಿದ್ದರು. ಇದನ್ನು ನೋಡಿದ ಸ್ಥಳೀಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಒಂದು ಗಂಟೆಯಿಂದ ಆಂಬ್ಯುಲೆನ್ಸ್‌ಗೆ ಕಾಲ್ ಮಾಡಿದರೂ ಸ್ಥಳಕ್ಕೆ ಬಾರಲಿಲ್ಲ. ನಂತರ ಸ್ಥಳೀಯರೇ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಗುಂಡಿಗೆ ಬಿದ್ದು ಮೃತಪಟ್ಟ ಜಾಗದಲ್ಲಿ ಮೃತ ಅಶ್ವಿನ್ ಸ್ನೇಹಿತರು ಜಮಾಯಿಸಿ ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆಗೆ ಸಂಬಂಧಿಸಿ ಮೃತ ಅಶ್ವಿನ್ ಪೋಷಕರು ಯಲಹಂಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಬಿಬಿಎಂಪಿ, ಬಿಡ್ಲೂಎಸ್ಸ್ಬಿ ಮೇಲೆ ದೂರು ದಾಖಲಾಗಿದೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ – ಆರೋಪಿಗಳ ಬಂಧನ

    ಘಟನೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಈ ವಿಷಯದ ಬಗ್ಗೆ ಆರಂಭಿಕ ವರದಿ ಬಂದಿದೆ. ನಮ್ಮ ಅಧಿಕಾರಿಗಳ ಸ್ಥಳದಲ್ಲಿ ಮಾಹಿತಿ ಪಡೆಯುತ್ತಾ ಇದ್ದಾರೆ. ಯಾರದು ತಪ್ಪು ಆಗಿದೆಯೋ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ರೀತಿ ಘಟನೆ ನಡೆಯಬಾರದು ಇದಕ್ಕೆ ಯಾರು ಕಾರಣ ಎಂದು ಪತ್ತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿಗೆ ತರಾಟೆ – ಬೆಸ್ಕಾಂ, ಜಲ ಮಂಡಳಿಗೂ ಹೈಕೋರ್ಟ್ ಚಾರ್ಜ್

    ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿಗೆ ತರಾಟೆ – ಬೆಸ್ಕಾಂ, ಜಲ ಮಂಡಳಿಗೂ ಹೈಕೋರ್ಟ್ ಚಾರ್ಜ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗುಂಡಿ ಮುಚ್ಚದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಬಿಬಿಎಂಪಿಯ ಕೆಲಸದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

    ಪ್ರತಿಬಾರಿ ಮಳೆ ಬಂದಾಗಲೂ ರಸ್ತೆಗಳಲ್ಲಿ ಗುಂಡಿಗಳು ಪ್ರತ್ಯಕ್ಷವಾಗುತ್ತವೆ. ಆದರೆ ನೀವು ಮುಚ್ಚುವ ರಸ್ತೆಗುಂಡಿಗಳು, ದುರಸ್ತಿಪಡಿಸಿದ ರಸ್ತೆಗಳು ದೀರ್ಘಾವಧಿ ಬಾಳಿಕೆ ಏಕೆ ಬರುವುದಿಲ್ಲ ಪ್ರಶ್ನಿಸಿದೆ. ಗುಂಡಿಗಳನ್ನು ಮುಚ್ಚಲು ಯಾವ ತಂತ್ರಜ್ಞಾನ, ಯಾವ ಕಾರ್ಯವಿಧಾನ ಅನುಸರಿಸಲಾಗುತ್ತದೆ..?. ಇದಕ್ಕೆಲ್ಲ ಪಾಲಿಕೆ ಮುಖ್ಯ ಇಂಜಿನಿಯರ್ ಹೊಣೆಯಾಗುತ್ತಾರೆ. ಅವರನ್ನು ಕಂಬಿ ಹಿಂದೆ ಕಳುಹಿಸಿದರೆ ಸರಿ ಹೋಗುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಆರ್. ಅವಸ್ಥಿ ಚಾಟಿ ಬೀಸಿದ್ದಾರೆ.

    ಇತ್ತ ಬೆಸ್ಕಾಂ, ಜಲಮಂಡಳಿ ಸೇರಿ ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಮುಗಿಸದ ಪ್ರಾಧಿಕಾರಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಮುಂದಿನ ವಿಚಾರಣೆಗೆ ಪಾಲಿಕೆಯ ಮುಖ್ಯ ಇಂಜಿನಿಯರ್ ಖುದ್ದು ಹಾಜರಾಗಬೇಕು ಎಂದು ಸೂಚಿಸಿ, ಫೆಬ್ರವರಿ 7ಕ್ಕೆ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಪ್ರತಾಪ್ ಸಿಂಹ, ರಾಮದಾಸ್ ಕಿತ್ತಾಟ- ಕಣ್ಣೀರಾಕಿದ ಮೇಯರ್