ಖ್ಯಾತ ಕ್ರಿಕೆಟಿಗ, ಕೆಕೆಆರ್ ಟೀಮ್ ನಿಂದ ಪ್ರಮುಖ ಆಟಗಾರ ರೆಸಲ್ (Russell) ಬಾಲಿವುಡ್ ಹಾಡಿಗೆ ಸಖತ್ ಸ್ಟಪ್ ಹಾಕಿದ್ದಾರೆ. ಲಡ್ಕಿ ಕಮಾಲ್ ಕಿ ಹಾಡಿಗೆ ಮೈಚಳಿ ಬಿಟ್ಟು ಕುಣಿದಿರುವ ರೆಸಲ್.. ಡಾನ್ಸ್ ಮಾಡುವುದರ ಜೊತೆಗೆ ಹಾಡು ಕೂಡ ಹೇಳಿದ್ದಾರೆ. ಹಾಗಾಗಿ ಈ ಹಾಡು ಎಲ್ಲರಿಗೂ ಇಷ್ಟವಾಗಿದೆ.
ಕಲರ್ ಫುಲ್ ಕಾಸ್ಟ್ಯೂಮ್, ವಿಶಿಷ್ಟ ಹೇರ್ ಸ್ಟೈಲ್.. ವಿಚಿತ್ರ ಮ್ಯಾನರಿಸಂ ಹೊಂದಿರುವ ರಸೆಲ್, ತಾವು ಅದ್ಭುತ ಕ್ರಿಕೆಟಿಗ ಮಾತ್ರವಲ್ಲ, ಒಬ್ಬ ಒಳ್ಳೆಯ ಡಾನ್ಸರ್ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. ಬಾಲಿವುಡ್ ನಟಿ ಅವಿಕಾ ಗೋರ್ (Avika Gore) ಜೊತೆ ಸೊಂಟ ಬಳಕಿಸಿದ್ದಾರೆ.
ಪಲಾಸ್ ಮುಚ್ಚಲ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಪಾಲಕ್ ಮುಚ್ಚಲ್ ಹಾಡಿದ್ದಾರೆ. ರಸೆಲ್ ಅಂತ ಪಂಚೆ ತೊಟ್ಟುಕೊಂಡು, ಕೂಲಿಂಗ್ ಗ್ಲಾಸ್ ಹಾಕಿ.. ತುಂಬಾ ಚೆನ್ನಾಗಿಯೇ ಹೆಜ್ಜೆ ಹಾಕಿದ್ದಾರೆ.
ದುಬೈ: ಐಪಿಎಲ್‍ನ 31ನೇ ಪಂದ್ಯದಲ್ಲಿ ಇಂದು ಬಲಿಷ್ಟ ತಂಡಗಳಾದ ಆರ್ಸಿಬಿ ಹಾಗೂ ಕೆಕೆಆರ್ ಮುಖಾಮುಖಿಯಾಗಲಿದೆ. ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬೆಂಗಳೂರು ತಂಡ ದ್ವಿತೀಯಾರ್ಧದಲ್ಲೂ ಗೆಲುವಿನ ಓಟ ಮುಂದುವರಿಸಲು ಕಾತರದಿಂದ ಕಾಯುತ್ತಿದೆ. ಮೊದಲಾರ್ಧದಲ್ಲಿ ಸೋತು ಸೊರಗಿರುವ ಕೆಕೆಆರ್ ತಂಡ ಗೆಲುವಿನ ಲಯಕ್ಕೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ.
ಈವರೆಗೂ ನಡೆದಿರುವ ಎಲ್ಲಾ ಪಂದ್ಯಗಳನ್ನು ಗಮನಿಸಿದರೆ ಕೆಕೆಆರ್ ಅಂಕಿ ಅಂಶಗಳಲ್ಲಿ ಆರ್ಸಿಬಿ ತಂಡಕ್ಕಿಂತ ಮುಂದಿದೆ. ಉಭಯ ತಂಡಗಳು ಒಟ್ಟು 27 ಬಾರಿ ಐಪಿಎಲ್‍ನಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಸಿಬಿ 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಕೆಕೆಆರ್ 14 ಬಾರಿ ಜಯ ದಾಖಲಿಸಿದೆ. ಇದನ್ನೂ ಓದಿ: ಗಾಯಕ್ವಾಡ್ ಘರ್ಜನೆ – ಚೆನ್ನೈ ಸೂಪರ್ ಕಿಂಗ್ಸ್‌ಗೆ 20 ರನ್‍ಗಳ ಜಯ
ಐಪಿಎಲ್ ಮೊದಲಾರ್ಧದಲ್ಲಿ ಕೆಕೆಆರ್ ಮತ್ತು ಆರ್ಸಿಬಿ ಒಂದು ಪಂದ್ಯದಲ್ಲಿ ಸೆಣೆಸಿವೆ. ಬೆಂಗಳೂರು ರಾಯಲ್ ಚಾಲೆಂರ್ಜರ್ಸ್ ತಂಡದ ಆಟಗಾರ ಗ್ಲೆನ್ ಮಾಕ್ಸ್‍ವೆಲ್ (78) ಹಾಗೂ ಎಬಿ ಡಿವಿಲಿಯರ್ಸ್ ಬಿರುಸಿನ (76) ರನ್‍ಗಳೊಂದಿಗೆ 204 ರನ್‍ಗಳ ಬಹೃತ್ ಟಾರ್ಗೆಟ್ ಅನ್ನು ಆರ್ಸಿಬಿ, ಕೆಕೆಆರ್ ತಂಡಕ್ಕೆ ನೀಡಿತ್ತು. ಈ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ಕೇವಲ 166 ರನ್‍ಗಳಿಸಿ ಆರ್ಸಿಬಿ ಎದುರು ಮಂಡಿಯೂರಿತ್ತು. ಇದನ್ನೂ ಓದಿ: ಆರ್ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ!
ಉಭಯ ತಂಡಗಳ ಬಲಾಬಲವನ್ನು ನೋಡುವುದಾದರೆ, ಮೆಲ್ನೋಟಕ್ಕೆ ಆರ್ಸಿಬಿ ಕೆಕೆಆರ್ ವಿರುದ್ಧ ಕಳೆದ ಸೀಸನ್‍ನಿಂದ ಕೊಂಚ ಮೇಲುಗೈ ಸಾಧಿಸುತ್ತಾ ಬಂದಿದೆ. ಆರ್ಸಿಬಿ ಪರ ನಾಯಕ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಗ್ಲೆನ್ ಮಾಕ್ಸ್‍ವೆಲ್, ಎಬಿ ಡಿವಿಲಿಯರ್ಸ್, ಬ್ಯಾಟಿಂಗ್‍ನಲ್ಲಿ ಅಬ್ಬರಿಸಬಲ್ಲರು. ಬೌಲಿಂಗ್ ವಿಭಾಗವನ್ನು ನೋಡುವುದಾದರೆ ಹರ್ಷಲ್ ಪಟೇಲ್, ಮಹಮದ್ ಸಿರಾಜ್, ಚಾಹಲ್, ಜೇಮೀಸನ್ ಎದುರಾಳಿ ತಂಡದ ಆಟಗಾರರನ್ನು ಕಟ್ಟಿಹಾಕುವ ಸಾಮಥ್ರ್ಯ ಹೊಂದಿದ್ದಾರೆ.
ಕೆಕೆಆರ್ ಕೂಡ ಆರ್ಸಿಬಿಯಷ್ಟೇ ಬಲಿಷ್ಟವಾಗಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಶುಭಮನ್ ಗಿಲ್, ನೀತೀಶ್ ರಾಣ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್ ರನ್‍ಗಳ ಹೊಳೆಯನ್ನೆ ಹರಿಸಬಲ್ಲರು. ವೆಸ್ಟ್ ಇಂಡೀಸ್ ಆಲ್‍ರೌಂಡರ್ ಆಂಡ್ರೆ ರಸೆಲ್ ತಂಡದಲ್ಲಿರುವುದು ಬ್ಯಾಟಿಂಗ್ ವಿಭಾಗ ಮತ್ತಷ್ಟು ಶಕ್ತಿಶಾಲಿಯಾಗಿದೆ. ಇನ್ನು ಬೌಲಿಂಗ್ ವಿಭಾಗವನ್ನು ನೋಡುವುದಾದರೆ ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಸುನಿಲ್ ನರೈನ್ ಎದುರಾಳಿ ತಂಡವನ್ನು ಕಟ್ಟಿಹಾಕಬಲ್ಲರು.
ಉಭಯ ತಂಡಗದಲ್ಲೂ ಸ್ಟಾರ್ ಆಟಗಾರರಿದ್ದು, ಎಬಿ ಡಿವಿಲಿಯರ್ಸ್ ಆರ್ಸಿಬಿಯ ಟ್ರಾಂಪ್ ಕಾರ್ಡ್ ಪ್ಲೇಯರ್ ಎನಿಸಿಕೊಂಡಿದ್ದಾರೆ. ಕೆಕೆಆರ್ ಪರ ಆಂಡ್ರೆ ರಸೆಲ್ ಟ್ರಾಂಪ್ ಕಾರ್ಡ್ ಪ್ಲೇಯರ್ ಎನ್ನಬಹುದು. ಇಂದು ರಾತ್ರಿ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು ಎರಡು ತಂಡಗಳ ಅಭಿಮಾನಿಗಳು ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ.