Tag: ರಸಗೊಬ್ಬರ

  • ಕೇಂದ್ರದಿಂದ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ: ಚಲುವರಾಯಸ್ವಾಮಿ

    ಕೇಂದ್ರದಿಂದ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ: ಚಲುವರಾಯಸ್ವಾಮಿ

    ಬೆಂಗಳೂರು: ಕೇಂದ್ರ ಸರ್ಕಾರದಿಂದ (Central Government) ಯೂರಿಯಾ ಪೂರೈಕೆಯಲ್ಲಿ ಕೊರತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿತರಣೆಯಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿಭಾಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗೊಂದಲಗಳು ಬಗೆಹರಿಯಲಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N Chaluvarayaswamy) ಸ್ಪಷ್ಟಪಡಿಸಿದ್ದಾರೆ.

    ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ 3 ಮುಂಗಾರು ಹಂಗಾಮಿನಲ್ಲಿ ಇದೇ ಸರ್ಕಾರ ಅಧಿಕಾರದಲ್ಲಿದೆ. ನಾನೇ ಕೃಷಿ ಸಚಿವನಾಗಿ ಇದ್ದೇನೆ. ಈವರೆಗೆ ಉಂಟಾಗದ ಸಮಸ್ಯೆ ಈಗೇಕೆ ಎಂಬುದನ್ನು ವಿಶ್ಲೇಷಿಸಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಗೆ 10 ಹೊಸ ಮೆಮು ರೈಲು ಸಂಚಾರ ಆರಂಭಿಸಿ: ಜೋಶಿ ಮನವಿ

    ರಾಜ್ಯಕ್ಕೆ ಪೂರೈಕೆಯಾಗಬೇಕಾಗಿದ್ದ ಯೂರಿಯಾ ರಸಗೊಬ್ಬರದಲ್ಲಿ ಈ ಬಾರಿ 1.36 ಲಕ್ಷ ಮೆಟ್ರಿಕ್ ಟನ್ ಕೊರತೆಯಾಗಿದೆ. ಇದೇ ಈ ಎಲ್ಲಾ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನ್ಯಾ. ವರ್ಮಾ ನಡೆ ವಿಶ್ವಾಸ ಮೂಡಿಸುವುದಿಲ್ಲ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

    ಈ ಬಾರಿ ಮುಂಗಾರು ಬೇಗ ಪ್ರಾರಂಭವಾಗಿ ಉತ್ತಮ ಮಳೆಯಾಗಿದ್ದು, 2 ಲಕ್ಷ ಹೆಕ್ಟೇರ್ ಹೆಚ್ಚುವರಿ ಮುಸುಕಿನ ಜೋಳ ಬಿತ್ತನೆ ಕೂಡ ಯೂರಿಯಾ ಬೇಡಿಕೆಯ ಹಠಾತ್ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.

    ರಾಜ್ಯದಲ್ಲಿ ಅಕ್ರಮ ಸಾಗಾಟ, ಯೂರಿಯಾ (Urea) ದುರ್ಬಳಕೆ ಬಗ್ಗೆ ವಿಲಕ್ಷಣ ದಳ ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಿದೆ. ವಿರೋಧ ಪಕ್ಷದ ಮುಖಂಡರು ಮಾಧ್ಯಮಕ್ಕೆ ತಿಳಿಸಿರುವಂತೆ ಕರ್ನಾಟಕ ರಾಜ್ಯವು ನೆರೆ ದೇಶಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶದೊಂದಿಗೆ ಯಾವುದೇ ಗಡಿಯನ್ನು ಹಂಚಿಕೊಂಡಿರುವುದಿಲ್ಲ. ಈ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ವಿರೋಧ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ ಟ್ರಂಪ್‌ ತೆರಿಗೆ ಸಮರ : ಆ.1 ರಿಂದಲೇ 25% ಸುಂಕ

    ರಸಗೊಬ್ಬರಗಳ ಪೂರೈಕೆ ಕಾಪು ದಾಸ್ತಾನಿಗೆ ಇರಿಸಲಾಗಿದ್ದ ಗ್ಯಾರಂಟಿ ಹಣ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಹಿಂದೆ ಇದ್ದದ್ದು ಬಿಜೆಪಿ ಸರ್ಕಾರ, ಅವರೇ ನಿಗದಿಪಡಿಸಿದ್ದ 400 ಕೋಟಿ ರೂ. ಹಣವನ್ನು ನಾವು ಯಥಾಸ್ಥಿತಿಯಲ್ಲಿ ಮುಂದುವರೆಸಿದ್ದೇವೆ. ಇನ್ನೂ 600 ಕೋಟಿ ರೂ. ಹೆಚ್ಚುವರಿ ಹಣ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಪ್ರತಿಯಾಗಿ ಬಿಜೆಪಿ ನಾಯಕರು ಗೊಬ್ಬರ ಒದಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

    ರಾಜ್ಯದಲ್ಲಿ ದಾವಣಗೆರೆ, ಗದಗ, ಕೊಪ್ಪಳ, ಧಾರವಾಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಸ್ವಲ್ಪ ಕಂಡುಬಂದಿರುವುದು ನಿಜ. ಆದರೆ ಅದನ್ನು ನಿಭಾಯಿಸಲಾಗುತ್ತಿದೆ. ಹೆಚ್ಚುವರಿ ದಾಸ್ತಾನು ಬೇರೆ ಜಿಲ್ಲೆಗಳಿಂದ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ದೀಪಾವಳಿ ಧಮಾಕ, ಕಾಂಗ್ರೆಸ್‌ನಲ್ಲಿ ಕ್ರಾಂತಿ : ವಿಜಯೇಂದ್ರ

    ರಸಗೊಬ್ಬರ ಅದರಲ್ಲೂ ಮುಖ್ಯವಾಗಿ ಯೂರಿಯಾ ಮತ್ತು ಡಿಎಪಿ ಪೂರೈಕೆ ಕೋರಿ ಜುಲೈ 7ರಂದು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆ ನಂತರ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದಿದ್ದಾರೆ.

    ಕೇಂದ್ರ ರಸಗೊಬ್ಬರ ಖಾತೆ ಸಚಿವರ ಭೇಟಿಗಾಗಿ ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದೆ. ಅವಕಾಶ ಸಿಕ್ಕರೆ ಭೇಟಿ ಮಾಡಿ, ರಾಜ್ಯದ ಪರಿಸ್ಥಿತಿ ವಿವರಿಸಿ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.

  • ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ: ಪ್ರಹ್ಲಾದ್‌ ಜೋಶಿ

    ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ: ಪ್ರಹ್ಲಾದ್‌ ಜೋಶಿ

    ನವದೆಹಲಿ: ಕೇಂದ್ರ ಸರ್ಕಾರ ರಸಗೊಬ್ಬರ ಕಳುಹಿಸಿಲ್ಲ ಎಂಬ ರಾಜ್ಯ ಸರ್ಕಾರದ ಟೀಕೆಯ ಬೆನ್ನಲ್ಲೇ ಕರ್ನಾಟಕದಲ್ಲಿ (Karnataka) ರಸಗೊಬ್ಬರದ ಅಭಾವವಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದ್ದಾರೆ.

    ಕೇಂದ್ರ ಸರ್ಕಾರದಿಂದ ಸರಬರಾಜು ಆಗಿರುವ ರಸಗೊಬ್ಬರಗಳಲ್ಲಿ 1.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಸಂಗ್ರಹಣೆ ಮಾಡಲಾಗಿದೆ. ರೈತರಿಗೆ (Farmers) ಬೇಕಾದ ರಸಗೊಬ್ಬರಗಳನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ನೀಡಲಾಗಿದ್ದು, ಸರಿಯಾದ ಕ್ರಮದಲ್ಲಿ ಬಳಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಧಮ್ಮು-ತಾಕತಿದ್ರೆ ಕೇಂದ್ರದಿಂದ ಯೂರಿಯಾ ಕೊಡಿಸಲಿ – ಚಲುವರಾಯಸ್ವಾಮಿ

    ರಸಗೊಬ್ಬರದ ಬೇಡಿಕೆ ಹೆಚ್ಚಿದ್ದು, ಅಗತ್ಯ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಕೋರಿ ಇಂದು ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.  ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು

    ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರೈತರ ಬೆನ್ನೆಲುಬಾಗಿ ನಿಂತಿದ್ದು, ಎಂತಹದ್ದೇ ಸಮಯದಲ್ಲೂ ರೈತರ ಹಿತ ಕಾಪಾಡುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ ಜೆಪಿ ನಡ್ಡಾ ಅವರಿಗೆ ಅನಂತ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಜೋಶಿ ಬರೆದಿದ್ದಾರೆ.

  • ರಾಜ್ಯದಲ್ಲಿ ರಸಗೊಬ್ಬರ ಕೊರತೆಗೆ ಕಳ್ಳದಂಧೆ ಕಾರಣ – ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

    ರಾಜ್ಯದಲ್ಲಿ ರಸಗೊಬ್ಬರ ಕೊರತೆಗೆ ಕಳ್ಳದಂಧೆ ಕಾರಣ – ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ

    ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ರಸಗೊಬ್ಬರ (Fertilizer) ಅಭಾವ ವಿರುದ್ಧ ಸೋಮವಾರ (ಜು.28) ರಾಜ್ಯಾದ್ಯಂತ ಬಿಜೆಪಿ ಹೋರಾಟ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸರ್ಕಾರದ ವಿರುದ್ಧ ಹೋರಾಟ ಮಾಡೋದಾಗಿ ಘೋಷಿಸಿದರು.

    ಬೆಂಗಳೂರು (Bengaluru) ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತ ಮೋರ್ಚಾ ವತಿಯಿಂದ ಬಿಜೆಪಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ದಾಸ್ತಾನು ಇಡ್ತಿದ್ರು, ಅದಕ್ಕೆ ಅನುದಾನವೂ ಇಡ್ತಿದ್ರು. ಈ ಸರ್ಕಾರ ಕಾಪು ದಾಸ್ತಾನು ಅನುದಾನಕ್ಕೂ ಕಡಿತ ಮಾಡಿದೆ. ಸಾವಿರ ಕೋಟಿ ದಾಸ್ತಾನು ಅನುದಾನ 400 ಕೋಟಿಗೆ ಇಳಿಸಿದೆ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ಕೇಂದ್ರದಿಂದ 1.50 ಲಕ್ಷ ಟನ್‌ ರಸಗೊಬ್ಬರ ಕೊರತೆಯಾಗಿದೆ – ಸಚಿವ ಚಲುವರಾಯಸ್ವಾಮಿ

    ಮುಂಗಾರು ಶೀಘ್ರ ಆರಂಭವಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಮುಂಚೆಯೇ ಸಿದ್ಧತೆ ಮಾಡಿಕೊಂಡಿಲ್ಲ, ಮುಂಚೆಯೇ ಕೇಂದ್ರಕ್ಕೆ ಪತ್ರ ಬರೆಯಬೇಕಿತ್ತು. ಈಗ ಪತ್ರ ಬರೆಯೋದಲ್ಲ. ರೈತರನ್ನು (Farmers) ಈ ಸರ್ಕಾರ ಬೀದಿಗೆ ತಂದಿದೆ ಎಂದು ವಿಜಯೇಂದ್ರ ಕಿಡಿ ಕಾರಿದರು.  ಇದನ್ನೂ ಓದಿ: ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಕೇಂದ್ರದಿಂದ 8 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಂದಿದೆ, ಏನಾಯ್ತು? ರಾಜ್ಯದಲ್ಲಿ ರಸಗೊಬ್ಬರ ಕಳ್ಳ ದಂಧೆ ನಡೆಯುತ್ತಿದೆ. ರಸಗೊಬ್ಬರ ಅಭಾವ, ನಕಲಿ ಕೃಷಿ ಬೀಜಗಳಿಗೆ ಸರ್ಕಾರವೇ ಹೊಣೆ. ನಕಲಿ ಬಿತ್ತನೆ ಬೀಜ, ರಸಗೊಬ್ಬರ ಅಭಾವ, ಯಾರು ಕಳ್ಳಸಾಗಣೆ ಮಾಡ್ತಿದ್ದಾರೆ? ಇದನ್ನು ಪತ್ತೆ ಹಚ್ಚಿ ಸರ್ಕಾರ ಕ್ರಮ ತಗೋಬೇಕು. ರಸಗೊಬ್ಬರ ಕಳ್ಳದಂಧೆಗೆ ಬ್ರೋಕರ್‌ಗಳು ಕಾರಣ. ಬ್ರೋಕರ್‌ಗಳಿಗೆ ಸಹಕಾರ ಕೊಡುವ ಕೆಲಸ ಸರ್ಕಾರದಲ್ಲಿ ಆಗ್ತಿದೆ ಎಂದು ಇದೇ ವೇಳೆ ವಿಜಯೇಂದ್ರ ಆರೋಪಿಸಿದರು.  ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮ್ಯೂಸಿಕಲ್ ಚೇರ್ ಆಸೆಗೆ ರಾಜ್ಯದ ಜನ ಬಲಿಯಾಗುತ್ತಿದ್ದಾರೆ: ನಿಖಿಲ್

  • ಕೇಂದ್ರದಿಂದ 1.50 ಲಕ್ಷ ಟನ್‌ ರಸಗೊಬ್ಬರ ಕೊರತೆಯಾಗಿದೆ – ಸಚಿವ ಚಲುವರಾಯಸ್ವಾಮಿ

    ಕೇಂದ್ರದಿಂದ 1.50 ಲಕ್ಷ ಟನ್‌ ರಸಗೊಬ್ಬರ ಕೊರತೆಯಾಗಿದೆ – ಸಚಿವ ಚಲುವರಾಯಸ್ವಾಮಿ

    ಬೆಂಗಳೂರು: ನಮಗೆ ಒಟ್ಟು 6 ಲಕ್ಷದ 88 ಸಾವಿರ ಟನ್ ರಸಗೊಬ್ಬರ (Fertiliser) ಸಪ್ಲೈ ಆಗಬೇಕಿತ್ತು. ಅದರಲ್ಲಿ 5 ಪಕ್ಷದ 27 ಸಾವಿರ ಟನ್ ಸಪ್ಲೈ ಆಗಿದೆ. ಉಳಿದ 1 ಲಕ್ಷದ 50 ಸಾವಿರ ಟನ್ ಬರಬೇಕಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ (Chaluvaraya Swamy) ಹೇಳಿದರು.

    ಕಳೆದ ಒಂದೂವರೆ ತಿಂಗಳಿಂದ ಮಳೆ ಚೆನ್ನಾಗಿ ಆಗ್ತಿದೆ ಮುಂಗಾರು ಬೇಗ ಆರಂಭವಾಗಿದೆ ಡ್ಯಾಮ್‌ಗಳು ಬೇಗ ತುಂಬಿದ್ದರಿಂದ ಸ್ವಲ್ಪ ಸಮಸ್ಯೆ ಆಗಿದೆ. ಜೊತೆಗೆ 2 ಲಕ್ಷ ಹೆಕ್ಟೇರ್ ಜಾಸ್ತಿ ಬೇಸಾಯದ ಏರಿಯಾ ಜಾಸ್ತಿ ಆಗಿದೆ. ಈ ಕಾರಣಗಳಿಂದ ರಸಗೊಬ್ಬರಕ್ಕೆ (Fertiliser) ಬೇಡಿಕೆ ಹೆಚ್ಚಾಗಿದೆ. ಟೀಕೆ ಟಿಪ್ಪಣಿಗಿಂತ ಹೆಚ್ಚಾಗಿ ರೈತರ ಸಮಸ್ಯೆ ಬಗೆಹರಿಸಬೇಕು ಅಂತ ಮುಖ್ಯಮಂತ್ರಿಗಳಿಗೆ ನಾನೇ ಮನವಿ ಮಾಡಿದೆ ಪತ್ರ ಬರೆಯಿರಿ ಅಂತ ಹೇಳಿದೆ. ಆದರೆ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಜೋಶಿಯವರು ಮಾತನಾಡುತ್ತಿದ್ದಾರೆ ಅಂತ ಅಸಮಾಧಾನ ಹೊರಹಾಕಿದ್ರು.

    ಇರಾನ್‌ನ ಯುದ್ಧದ ಕಾರಣಕ್ಕೆ ಯೂರಿಯಾ ಸಪ್ಲೈ ಬರ್ತಿಲ್ಲ
    ನಾನೇ ಜೋಶಿಯವರಿಗೆ (Pralhad Joshi) ಪತ್ರ ಬರೆದಿದ್ದೇನೆ. ರಾಜ್ಯದ ಎಲ್ಲಾ ಸಂಸದರಿಗೂ ಹಾಗೂ ರಾಜ್ಯ ಪ್ರತಿನಿಧಿಸುವ ಸಚಿವರಿಗೆ ಪತ್ರ ಬರೆದಿದ್ದೇನೆ. ಆದ್ರೆ ಅದರ ಕಡೆ ಗಮನ ಹರಿಸದೇ ಸಿದ್ದರಾಮಯ್ಯರ ಬಗ್ಗೆ ಟೀಕೆ ಮಾಡಿದ್ದಾರೆ. ಜೋಶಿಯವರು ಕೃಷಿ ವಿಚಾರದಲ್ಲಿ ಹೀಗೆಲ್ಲಾ ರಾಜಕಾರಣ ಮಾಡ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ರಸಗೊಬ್ಬರವನ್ನ ಟೈಮ್ ಟು ಟೈಮ್ ಕೊಡ್ತಾರೆ. ನಾವು ಕಳೆದ ಬಾರಿ ಹೆಚ್ಚು ದಾಸ್ತಾನು ಮಡಿಕೊಳ್ಳುತ್ತಿದ್ದೆವು. ಆದರೆ ಕೇಂದ್ರ ಸರ್ಕಾರದಲ್ಲಿ 2-3 ಪ್ರಾಬ್ಲಂ ಇದೆ. ಇರಾನ್‌ನ ಯುದ್ಧದ ಕಾರಣಕ್ಕೆ ಯೂರಿಯಾ ಸಪ್ಲೈ ಬರ್ತಿಲ್ಲ, ಚೀನಾದಿಂದ ಸಂಪೂರ್ಣ ಸ್ಥಗಿತವಾಗಿದೆ. ರಾಷ್ಟ ಮಟ್ಟದಲ್ಲಿ ಉತ್ಪಾದನೆ ಕಡಿಮೆ ಆಗಿದೆ. ಇದೆಲ್ಲ ಕೇಂದ್ರ ಸರ್ಕಾರದವರೆ ಕೊಡಬೇಕು ಅಂತ ಹೇಳಿದರು. ಇದನ್ನೂ ಓದಿ: ಬೆಂಗಳೂರಿನ ಧನುಷ್ ಬಾಬುಗೆ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ

    ನಾವು ಟೀಕೆ ಟಿಪ್ಪಣಿಗೆ ಹೋಗಲಿಲ್ಲ. ಹಳೇ ಬ್ಯಾಲೆನ್ಸ್ ಸೇರಿ ತಗೆದುಕೊಂಡು ರೈತರಿಗೆ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ರೈತರಿಗೆ ನ್ಯಾನೋ ಯೂರಿಯಾ ಬಳಸಲು ಸಹಾ ಹೇಳಿದ್ದೇವೆ. ಅವರು ಸಹ ಹೋಗಿ ನಡ್ಡಾ ಅವರ ಜೊತೆ ಕುಳಿತು ಎಷ್ಟು ಸಾಧ್ಯವೋ ಅಷ್ಟು ಬೇಗ ಸಪ್ಲೈ ಕೊಡಿ ಅಂತ ಹೇಳೋದು ಬಿಟ್ಟು ಟೀಕೆ ಟಿಪ್ಪಣಿ ಮಾಡಿದರೆ ಹೇಗೆ? ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಶಿವಲಿಂಗೇಗೌಡ್ರು ನಮ್ಮನೆಗೆ, ಸಿಎಂ ಮನೆಗೆ ತಿರುಗಿ 4 ಜೊತೆ ಚಪ್ಪಲಿ ಸವೆಸಿದ್ದಾರೆ: ಡಿ.ಕೆ ಶಿವಕುಮಾರ್

    ನನಗೂ ರಾಜಕೀಯವಾಗಿ 35 ವರ್ಷ ಆಗಿದೆ. ನಾನು ಟೀಕೆ ಮಾಡಬಹುದು, ಆದ್ರೆ ನನ್ನದು ರೈತರ ಇಲಾಖೆ ಟೀಕೆ ಮುಖ್ಯ ಅಲ್ಲ ರೈತರ ಸಮಸ್ಯೆ ಬಗೆಹರಿಸಬೇಕು. ರೈತರು ಆತಂಕ ಪಡಬೇಕಿಲ್ಲ. ಯಾವ್ಯಾವಾಗ ಏನು ಬೇಕೋ ಅದನ್ನ ತಲುಪಿಸುತ್ತೇವೆ. ಎಲ್ಲರೂ ಸಮಾಧಾನದಿಂದ ಇರಿ, 2 ದಿನ ಬರುವುದು ತಡವಾದ್ರೆ 3ನೇ ದಿನ 4ನೇ ದಿನ ತರಿಸಿಕೊಡ್ತೇವೆ. ಜೊತೆಗೆ ನ್ಯಾನೋ ಯೂರಿಯಾ ಸಹ ಇಳುವರಿಗೆ ಒಳ್ಳೆಯದು ರೈತರು ಯಾವುದೆ ಘರ್ಷಣೆ ಮಾಡಿಕೊಳ್ಳುವುದು ಬೇಡ ಅಂತ ಸಲಹೆ ನೀಡಿದರು. ಇದನ್ನೂ ಓದಿ: ನಾವು ಬಿಜೆಪಿಯವರಿಗಿಂತ ಜಾಸ್ತಿ ಕೆಲಸ ಮಾಡಿದ್ದೇವೆ – ಪುತ್ರನ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

  • ಮೊದಲ ಕ್ಯಾಬಿನೆಟ್‌ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ

    ಮೊದಲ ಕ್ಯಾಬಿನೆಟ್‌ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ

    – ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ಬಜೆಟ್ 69,515 ಕೋಟಿ ರೂ.ಗೆ ಹೆಚ್ಚಳ
    – ಕೇವಲ ರೈತರಿಗೆ ಸಂಬಂಧಿಸಿದ ನಿರ್ಧಾರಗಳಿಗೆ ಕ್ಯಾಬಿನೆಟ್‌ ಅನುಮೋದನೆ

    ನವದೆಹಲಿ: ಹೊಸ ವರ್ಷದಂದು (New Year) ಕೇಂದ್ರ ಸರ್ಕಾರ ರೈತರಿಗೆ ಶುಭ ಸುದ್ದಿ ನೀಡಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಡಿ-ಅಮೋನಿಯಂ ಫಾಸ್ಫೇಟ್ (DAP) ಮೇಲಿನ ವಿಶೇಷ ಸಬ್ಸಿಡಿ ಸೌಲಭ್ಯವನ್ನು ವಿಸ್ತರಿಸಲು ಒಪ್ಪಿಗೆ ನೀಡಿದೆ.

    ವರ್ಷದ ಮೊದಲ ಸಚಿವ ಸಂಪುಟ ಸಭೆಯನ್ನು (Cabinet) ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಸಮರ್ಪಿಸಿ ಕೇವಲ ರೈತರಿಗೆ ಸಂಬಂಧಿಸಿದ ನಿರ್ಧಾರಗಳಿಗೆ ಕ್ಯಾಬಿನೆಟ್‌ ಅನುಮೋದನೆ ನಿಡಿದೆ.

    ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ಬಜೆಟ್ 69,515 ಕೋಟಿ ರೂ.ಗೆ ಹೆಚ್ಚಳ ಮಾಡಿದೆ. ಇದರ ಜೊತೆ ಡಿಎಪಿ ರಸಗೊಬ್ಬರಕ್ಕೆ 3,850 ಕೋಟಿ ರೂ. ವಿಶೇಷ ಪ್ಯಾಕೇಜ್ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ.

    ಈ ನಿರ್ಧಾರದಿಂದ ರೈತರು 50 ಕೆಜಿ ತೂಕದ ಡಿಎಪಿ ರಸಗೊಬ್ಬರವನ್ನು 1,350 ರೂ. ಚಿಲ್ಲರೆ ದರದಲ್ಲಿ ಖರೀದಿಸಬಹುದು. ಈ ಸಬ್ಸಿಡಿ ಜನವರಿ 1ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಸಿಹಿಸುದ್ದಿ; ವೈಜಾಗ್ ಸ್ಟೀಲ್ ಕಾರ್ಖಾನೆಗೆ ಮರುಜೀವ

    ಕಳೆದ ವರ್ಷ ಸರ್ಕಾರವು ಏಪ್ರಿಲ್‌ 1 ರಿಂದ ಡಿಸೆಂಬರ್‌ 31ಕ್ಕೆ ಅನ್ವಯವಾಗುವಂತೆ ಒಂದು ಟನ್‌ಗೆ 3,500 ರೂ. ವಿಶೇಷ ಸಬ್ಸಿಡಿಗೆ ಅನುಮತಿ ನೀಡಿತ್ತು. ಈ ಅವಧಿಯಲ್ಲಿ ಏರುತ್ತಿರುವ ವೆಚ್ಚ ಸರಿದೂಗಿಸಲು 2,625 ಕೋಟಿ ರೂ. ಪ್ಯಾಕೇಜ್‌ ಘೋಷಿಸಿತ್ತು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ರೈತರು 1,350 ರೂ.ಗೆ 50 ಕೆಜಿ ಡಿಎಪಿ ರಸಗೊಬ್ಬರ ಖರೀದಿ ಮಾಡುವುದನ್ನು ಮುಂದುವರಿಸಬಹುದು. ಬೇರೆ ದೇಶಗಳಲ್ಲಿ 50 ಕೆಜಿ ರಸಗೊಬ್ಬರಕ್ಕೆ 3 ಸಾವಿರ ರೂ.ಗೂ ಅಧಿಕ ವೆಚ್ಚವಾಗುತ್ತದೆ. 2014-24 ಅವಧಿಯಲ್ಲಿ ರೈತರಿಗಾಗಿ 11.9 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. 2004-14ರ ಅವಧಿಗೆ ಹೋಲಿಸಿದರೆ ಸಬ್ಸಿಡಿ ಪ್ರಮಾಣ ದುಪ್ಪಟ್ಟಾಗಿದೆ ಎಂದು ತಿಳಿಸಿದರು.

    2024 ರಿಂದ ಕೋವಿಡ್ ಮತ್ತು ಯುದ್ಧ ಸಂಬಂಧಿತ ಅಡೆತಡೆಗಳಿಂದ ಉಂಟಾದ ಮಾರುಕಟ್ಟೆ ಏರಿಳಿತಗಳ ಭಾರವನ್ನು ರೈತರು ಭರಿಸಬೇಕಾಗಿಲ್ಲ. ಜಾಗತಿಕ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರ ಬೆಲೆ ಏಕಾಏಕಿ ಬದಲಾವಣೆಯಾಗುತ್ತಿದೆ. ಈ ಕಾರಣಕ್ಕೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಯಾವ ಅವಧಿಯಲ್ಲಿ ರಸಗೊಬ್ಬರಕ್ಕೆ ಎಷ್ಟು ಕೋಟಿ ಸಬ್ಸಿಡಿ?
    2004 ರಿಂದ 2014 – 5.5 ಲಕ್ಷ ಕೋಟಿ ರೂ.
    2014 ರಿಂದ 2024 – 11.9 ಲಕ್ಷ ಕೋಟಿ ರೂ.

     

  • ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜವನ್ನ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ರೆ ಪರವಾನಗಿ ರದ್ದು: ಡಿಸಿ ಗುರುದತ್ತ ಹೆಗೆಡೆ

    ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜವನ್ನ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ರೆ ಪರವಾನಗಿ ರದ್ದು: ಡಿಸಿ ಗುರುದತ್ತ ಹೆಗೆಡೆ

    ಶಿವಮೊಗ್ಗ: ರಸಗೊಬ್ಬರ ಮತ್ತು ಬಿತ್ತನೆ ಬೀಜವನ್ನ ರೈತರಿಗೆ (Farmers) ಮಾರಾಟಗಾರರು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಪರವಾನಗಿ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಆದೇಶಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮುಂಗಾರು (Mansoon) ಹಂಗಾಮು ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಉಪ ಕೃಷಿ ನಿರ್ದೇಶಕರು ಮತ್ತು ಸಹಾಯಕ ಕೃಷಿ ನಿರ್ದೇಶಕರಗಳು ಹಾಗೂ ಕೃಷಿ ಅಧಿಕಾರಿಗಳು (Agriculture) ಎಲ್ಲೆಲ್ಲಿ ಬಿತ್ತನೆ ಬೀಜಗಳು ಲಭ್ಯವಿರುತ್ತವೆಯೋ ಅಲ್ಲಿಂದ ಕೊರತೆ ಇರುವ ಕಡೆ ಪೂರೈಸಲು ಕ್ರಮವಹಿಸಬೇಕು. ಜೊತೆಗೆ ಎಲ್ಲಾ ಪರಿಕರಗಳನ್ನು ಗರಿಷ್ಟ ಮಾರಾಟ ದರದೊಳಗೆ ಮಾರಾಟ ಮಾಡುತ್ತಿರುವಂತೆ ನೋಡಿಕೊಳ್ಳಬೇಕು. ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತಹವರ ಪರವಾನಗಿಯನ್ನು ರದ್ದು ಪಡಿಸುವ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

    ಜಂಟಿ ಕೃಷಿ ನಿರ್ದೇಶಕಿ ಜಿ.ಸಿ ಪೂರ್ಣಿಮ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಇಲ್ಲಿಯವರೆಗೆ 199 ಮಿ.ಮೀ ವಾಡಿಕೆ ಮಳೆಯಾಗಿದ್ದು, ಶೇ. 61ರಷ್ಟು ಹೆಚ್ಚವರಿ ಮಳೆ ಅಗಿರುತ್ತದೆ. ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಕಡಿಮೆಯಾದ ಪ್ರಯುಕ್ತ 2024-25ರ ಮುಂಗಾರು ಹಂಗಾಮಿನ ವಾಡಿಕೆ ವಿಸ್ತೀರ್ಣ 1,23,580 ಹೆಕ್ಟೇರ್‌ಗೆ ಕೇವಲ 400 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ ಎಂದಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ- ನಾಗೇಂದ್ರ ರಾಜೀನಾಮೆಗೆ ಸಿಎಂ ಸೂಚನೆ?

    2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,23,580 ಹೆಕ್ಟೇರ್‌ ಬಿತ್ತನೆ ಪ್ರದೇಶಕ್ಕೆ 35,625 ಕ್ವಿಂಟಲ್ ಗಳಷ್ಟು ಬಿತ್ತನೆ ಬೀಜಗಳ ಅವಶ್ಯಕತೆ ಇದ್ದು ಮೇ 30ರ ವರೆಗೆ ವಿವಿಧ ಸಂಸ್ಥೆಗಳಲ್ಲಿ 24,744 ಕ್ವಿಂಟಲ್‌ ಬಿತ್ತನೆ ಬೀಜಗಳು ಲಭ್ಯವಿರುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದ ಅಡಿ ವಿತರಿಸಲು 9,265 ಕಿಂಟಲ್‌ಗಳಿಗೆ ಅವಕಾಶವಿದ್ದು ಈಗಾಗಲೇ 11,820 ಕಿಂಟಲ್ ಗೆ ವಿವಿಧ ಸಂಸ್ಥೆಗಳಿಗೆ ಬೇಡಿಕೆಯನ್ನು ಸಲ್ಲಿಸಲಾಗಿದೆ. 1960 ಕ್ವಿಂಟಾಲ್ ಪೂರೈಕೆಯಾಗಿ 560 ಕ್ವಿಂಟಾಲ್ ವಿತರಣೆ ಆಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    ಜಿಲ್ಲೆಗೆ 2024-25ರ ಸಾಲಿನ ಮುಂಗಾರು ಹಂಗಾಮಿಗೆ 91,416 ಮೆಟ್ರಿಕ್‌ ಟನ್ ಪ್ರಮಾಣದ ವಿವಿಧ ಗ್ರೇಡ್‍ಗಳ ರಸಗೊಬ್ಬರಗಳ ಬೇಡಿಕೆಯಿತ್ತು. ಮೇ 31ರ ಅಂತ್ಯಕ್ಕೆ ಆರಂಭ ಶಿಲ್ಕು ಸೇರಿ ಸುಮಾರು 70,326 ಮೆ. ಟನ್ ಪ್ರಮಾಣದ ರಸಗೊಬ್ಬರಗಳು ಲಭ್ಯವಿದ್ದು ಅದರಲ್ಲಿ ಸುಮಾರು 18,135 ಟನ್ ಗಳಷ್ಟು ವಿತರಣೆಯಾಗಿದೆ. ಹಾಲಿ 52,191 ಮೆ. ಟನ್ ಪ್ರಮಾಣದ ರಸಗೊಬ್ಬರ ದಾಸ್ತಾನು ಇರುತ್ತದೆ. ಸದ್ಯಕ್ಕೆ ಯಾವುದೇ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

  • ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತ್‌ನ ಕಲೋಲ್‌ನಲ್ಲಿ ಇಫ್ಕೋ ನಿರ್ಮಿಸಿದ ವಿಶ್ವದ ಮೊದಲ ನ್ಯಾನೋ ಯೂರಿಯಾ ದ್ರವ ರಸಗೊಬ್ಬರ ಘಟಕವನ್ನು ಉದ್ಘಾಟಿಸಿದ್ದಾರೆ.

    ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಅಲ್ಟ್ರಾಮೋಡರ್ನ್ ನ್ಯಾನೋ ಯೂರಿಯಾ ದ್ರವ ರಸಗೊಬ್ಬರ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಗ್ರಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ವಿದೇಶದಿಂದ 50 ಕೆಜಿ ಯೂರಿಯಾ ಚೀಲವನ್ನು 3,500 ರೂ.ಗೆ ಆಮದು ಮಾಡಿ ಅದೇ ಚೀಲವನ್ನು ರೈತರಿಗೆ 300 ರೂ.ಗೆ ವಿತರಿಸುತ್ತಿದ್ದೇವೆ. ನಮಗೆ ಇದರಿಂದ ಕಷ್ಟವಾದರೂ ನಾವು ರೈತರಿಗೆ ತೊಂದರೆ ನೀಡಲು ಬಯಸುವುದಿಲ್ಲ ಎಂದು ಹೇಳಿದರು.

    ಇಂದು ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಇದರಲ್ಲಿ ಗುಜರಾತ್ ಪ್ರಮುಖ ಪಾಲನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಡೈರಿ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಡೈರಿ ಕ್ಷೇತ್ರದ ಸಹಕಾರಿ ಮಾದರಿಯ ಉದಾಹರಣೆ ನಮ್ಮ ಮುಂದಿದೆ ಎಂದರು.

    ಇಫ್ಕೋ ನ್ಯಾನೋ ರಸಗೊಬ್ಬರಗಳ ಉತ್ಪಾದನೆಗೆ ಹೆಚ್ಚುವರಿ ಉತ್ಪಾದನಾ ಘಟಕಗಳನ್ನು  ಅಯೋನ್ಲಾ, ಫುಲ್ಪುರ್, ಬೆಂಗಳೂರು ಮತ್ತು ಪರದೀಪ್, ಕಾಂಡ್ಲಾ, ದಿಯೋಘರ್ ಮತ್ತು ಗುವಾಹಟಿಯಲ್ಲಿ ಸ್ಥಾಪಿಸಿದೆ. ಈ ಎಲ್ಲಾ ಘಟಕಗಳು ದಿನಕ್ಕೆ 2 ಲಕ್ಷ ಬಾಟಲಿಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು ಒಟ್ಟು 3,000 ಕೋಟಿ ರೂ.ಗಳ ಹೂಡಿಕೆಯ ಪೈಕಿ 720 ಕೋಟಿ ರೂ.ಗಳನ್ನು ಈಗಾಗಲೇ ಹೂಡಿಕೆ ಮಾಡಲಾಗಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನು ಸೃಷ್ಟಿಸಲಾಗಿದೆ .

  • ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ, ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ: ಬಿ.ಸಿ.ಪಾಟೀಲ್

    ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ, ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ: ಬಿ.ಸಿ.ಪಾಟೀಲ್

    ಬೆಂಗಳೂರು: ರಾಜ್ಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

    ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸದ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ. ಅದರೆ ಕೃತಕ ಅಭಾವ ಸೃಷ್ಟಿ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹೊಸ ಮನೆ ಖರೀದಿಸಿದ ನಟಿ ವೈಷ್ಣವಿ ಗೌಡ – ಅಗ್ನಿಸಾಕ್ಷಿ ಚೆಲುವೆಯ ಗೃಹ ಪ್ರವೇಶಕ್ಕೆ ದೊಡ್ಮನೆ ಮಂದಿ ಸಾಕ್ಷಿ

    ರಾಜ್ಯದಲ್ಲಿ 2022-23ರಲ್ಲಿ 82.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದುವರೆಗೂ ಸುಮಾರು 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಪೂರ್ವ ಮುಂಗಾರು ಬಿತ್ತನೆ ಆಗಿದೆ. ರಾಜ್ಯದಲ್ಲಿ 5.30 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ಬೇಡಿಕೆಗೆ 8.65 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ. ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಮೇ 9ರವರೆಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ 3505.8 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. 2185.8 ಕ್ವಿಂಟಾಲ್‍ಗಳಷ್ಟು ಬಿತ್ತನೆ ಬೀಜ ಇನ್ನು ದಾಸ್ತಾನು ಇದೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ರಸಗೊಬ್ಬರದ ಕೊರತೆಯೂ ಇಲ್ಲ. ಈವರೆಗೂ 2.7 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ. ಉಳಿದಂತೆ 7.15 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ನಮ್ಮ ಬಳಿ ಇದೆ ಅಂತ ಮಾಹಿತಿ ನೀಡಿದ್ದಾರೆ. ಡಿಎಪಿ 1.02 ಲಕ್ಷ ಮೆಟ್ರಿಕ್ ಟನ್, ಎಂ.ಇ.ಪಿ 0.20 ಲಕ್ಷ ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 2.48ಲಕ್ಷ ಮೆಟ್ರಿಕ್ ಟನ್ ಹಾಗೂ ಯೂರಿಯಾ 3.45 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ಇದನ್ನು ಮೀರಿ ಯಾರಾದರೂ ಕೃತಕ ಅಭಾವ ಸೃಷ್ಟಿಸಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: 10 ಲಕ್ಷ ನಿರಾಶ್ರಿತರು ಟರ್ಕಿಯಿಂದ ಸಿರಿಯಾಕ್ಕೆ ವಾಪಸ್ – ಎಡೋರ್ಗನ್

  • ರಸಗೊಬ್ಬರ ತಯಾರಿಕೆ ಹೆಸರಲ್ಲಿ ಸಲ್ಫ್ಯೂರಿಕ್ ಆ್ಯಸಿಡ್ ಉತ್ಪಾದನೆ – ಲಕ್ಷಾಂತರ ರೂ. ಬೆಳೆ ಹಾನಿ

    ರಸಗೊಬ್ಬರ ತಯಾರಿಕೆ ಹೆಸರಲ್ಲಿ ಸಲ್ಫ್ಯೂರಿಕ್ ಆ್ಯಸಿಡ್ ಉತ್ಪಾದನೆ – ಲಕ್ಷಾಂತರ ರೂ. ಬೆಳೆ ಹಾನಿ

    ಮಂಡ್ಯ: ರಸಗೊಬ್ಬರ ತಯಾರಿಕೆಯ ಹೆಸರಿನಲ್ಲಿ ಸಲ್ಫ್ಯೂರಿಕ್ ಆಸಿಡ್ ಉತ್ಪಾದಿಸಿ, ವಿಷಾನಿಲ ಸೋರಿಕೆಯಾಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿರುವ ಘಟನೆ ಮಂಡ್ಯದ ಕಾರೇಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಕೀರ್ತಿ ಕೆಮಿಕಲ್ ಫ್ಯಾಕ್ಟರಿ ಹೆಸರಿನ ರಸಗೊಬ್ಬರ ತಯಾರಿಕಾ ಘಟಕ ಗ್ರಾಮದ ಹೊರವಲಯದಲ್ಲಿ ಕೆಲ ದಿನಗಳಿಂದ ಅನುಮತಿ ಪಡೆಯದೇ ಸಲ್ಫ್ಯೂರಿಕ್ ಆ್ಯಸಿಡ್ ತಯಾರಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಗೆಯೇ ಸ್ಥಳೀಯ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿಸಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ಕೇಸ್‍ಗೆ ಕೌಂಟರ್ ಕೊಡಲು ಕೈ ಪಾಳಯ ಸಿದ್ಧ

    ಕಾರ್ಖಾನೆಯ ವಿಷಾನಿಲ ಸೋರಿಕೆಯಿಂದಾಗಿ 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ತೆಂಗು, ರಾಗಿ, ಹುರುಳಿ ಬೆಳೆಗಳು ನಾಶವಾಗಿದೆ. ಸುತ್ತಮುತ್ತಲ ಗ್ರಾಮದ ಕೆಲವರಿಗೆ ಉಸಿರಾಟದ ಸಮಸ್ಯೆಯೂ ಕಂಡುಬಂದಿದೆ ಎಂದು ನಷ್ಟಕ್ಕೊಳಗಾದ ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಮದ್ಯಪಾನಕ್ಕೆ ಕರೆದೊಯ್ದು ಸ್ನೇಹಿತರಿಂದಲೇ ಯುವಕನ ಕತ್ತು ಕೊಯ್ದು ಕೊಲೆ

    ಕಾರ್ಖಾನೆಯನ್ನು ಅನುಮತಿ ಪಡೆದೇ ಆರಂಭಿಸಿದ್ದೇವೆ ಎಂದು ಕೀರ್ತಿ ಕಾರ್ಖಾನೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿದೆ. ಆದರೂ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ಸ್ಥಳೀಯ ರೈತರು ಆಗ್ರಹಿಸುತ್ತಿದ್ದಾರೆ.

  • ರೈತರಿಗೆ ಸಿಹಿಸುದ್ದಿ – ರಸಗೊಬ್ಬರ ಸಬ್ಸಿಡಿ ಭಾರೀ ಏರಿಕೆ

    ರೈತರಿಗೆ ಸಿಹಿಸುದ್ದಿ – ರಸಗೊಬ್ಬರ ಸಬ್ಸಿಡಿ ಭಾರೀ ಏರಿಕೆ

    ನವದೆಹಲಿ: ರಸಗೊಬ್ಬರಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ದೊಡ್ಡಮಟ್ಟದಲ್ಲಿ ಹೆಚ್ಚಿಸಿದೆ.

    ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಮಾನ್ಸುಖ್ ಮಾಂಡವೀಯ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆ ಹೆಚ್ಚಾಗಿದ್ದರೂ ಹಳೆಯ ದರಕ್ಕೆ ರೈತರಿಗೆ ಸಿಗುವಂತೆ ಮಾಡಲು ಕೇಂದ್ರ ಸಬ್ಸಿಡಿ ಪ್ರಮಾಣವನ್ನು ಹೆಚ್ಚಳ ಮಾಡಿದೆ. ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರ್ಕಾರ 28 ಸಾವಿರ ಕೋಟಿ  ರೂ.ಮೀಸಲಿರಿಸಿದೆ ಎಂದು ತಿಳಿಸಿದರು.

    ಒಂದು ಚೀಲ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಇದುವರೆಗೂ ಇದ್ದ 1,200 ರೂ. ಸಬ್ಸಿಡಿಯನ್ನು 1,650 ರೂಪಾಯಿಗೆ ಹೆಚ್ಚಿಸಿದೆ. ಯೂರಿಯಾ ಸಬ್ಸಿಡಿಯನ್ನು 1,500 ರೂ. ನಿಂದ 2,000 ರೂ. ಗೆ ಹೆಚ್ಚಿಸಿದೆ.  ಇದನ್ನೂ ಓದಿ: ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ

    ನೈಟ್ರೋಜನ್‌ ಪಾಸ್ಪರಸ್‌ ಪೊಟ್ಯಾಶಿಯಂ(ಎನ್‍ಪಿಕೆ) ಮೇಲಿನ ಸಬ್ಸಿಡಿಯನ್ನು 900 ರೂ. ನಿಂದ 1,015 ರೂ.ಗೆ ಏರಿಕೆ ಮಾಡಿದೆ. ಸಿಂಗಲ್‌ ಸೂಪರ್ ಫಾಸ್ಫೇಟ್(ಎಸ್‌ಎಸ್‌ಪಿ) ಮೇಲಿನ 315 ರೂ.ಗಳ ಸಬ್ಸಿಡಿಯನ್ನು 375 ರೂ.ಗೆ ಹೆಚ್ಚಳ ಮಾಡಿದೆ.

    ಕಳೆದ ವರ್ಷ ಒಂದು ಚೀಲ ಡಿಎಪಿ ಗೊಬ್ಬರಕ್ಕೆ ಕಂಪನಿಗಳು 1,700 ರೂ. ದರವನ್ನು ನಿಗದಿಪಡಿಸಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 500 ರೂ. ಸಬ್ಸಿಡಿ ನೀಡಿತ್ತು. ಹೀಗಾಗಿ ಒಂದು ಚೀಲ ಗೊಬ್ಬರವನ್ನು ರೈತರು 1,200 ರೂ. ದರದಲ್ಲಿ ಖರೀದಿಸುತ್ತಿದ್ದರು.

    ಡಿಎಪಿಗೆ ಬಳಸಲಾಗುವ ಫಾಸ್ಪರಿಕ್ ಆಸಿಡ್, ಅಮೋನಿಯಾ ಇತ್ಯಾದಿಗಳ ಅಂತರರಾಷ್ಟ್ರೀಯ ಬೆಲೆಗಳು ಇತ್ತೀಚಿಗೆ ಶೇ.60 ರಿಂದ ಶೇ.70 ರಷ್ಟು ಏರಿಕೆ ಕಂಡಿದೆ.  ಈ ಕಾರಣಕ್ಕೆ ಭಾರತದಲ್ಲೂ ಗೊಬ್ಬರಗಳ ಬೆಲೆ ಭಾರೀ ಏರಿಕೆ ಆಗುತ್ತಿವೆ.