Tag: ರಸಂ

  • ಆರೋಗ್ಯಕರ ದೊಡ್ಡಪತ್ರೆ ಸೊಪ್ಪಿನ ರಸಂ ಮಾಡಿ

    ಆರೋಗ್ಯಕರ ದೊಡ್ಡಪತ್ರೆ ಸೊಪ್ಪಿನ ರಸಂ ಮಾಡಿ

    ನೀವು ಆರೋಗ್ಯಕರ ಹೊಸ ರುಚಿಯನ್ನು ರಸಂನಲ್ಲಿ ಆಸ್ವಾದಿಸಲು ಬಯಸಿದರೆ ಒಮ್ಮೆ ನೀವು ದೊಡ್ಡಪತ್ರೆ ಸೊಪ್ಪಿನ ರಸಂ (Doddapatre Rasam) ಮಾಡಿ ನೋಡಲೇಬೇಕು. ವಿಭಿನ್ನ ಸುವಾಸನೆ ನೀಡುವ ಈ ಸೊಪ್ಪಿನ ಅಡುಗೆ ನಿಮ್ಮ ದೇಹಕ್ಕೂ ಉಲ್ಲಾಸ ನೀಡುತ್ತದೆ. ಅಜೀರ್ಣ, ಶೀತಕ್ಕೂ ಮನೆಮದ್ದಾಗಿರುವ ದೊಡ್ಡಪತ್ರೆ ಸೊಪ್ಪಿನ ಸಿಂಪಲ್ ರಸಂ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ದೊಡ್ಡ ಪತ್ರೆ ಎಲೆಗಳು – 10-15
    ಟೊಮೆಟೊ – 1
    ಸೀಳಿದ ಹಸಿರು ಮೆಣಸಿನಕಾಯಿ – 2
    ನೆನೆಸಿದ ಹುಣಸೆಹಣ್ಣು – ಗೋಳಿ ಗಾತ್ರದಷ್ಟು
    ಬೆಲ್ಲ – 1 ಟೀಸ್ಪೂನ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಉಪ್ಪು – ರುಚಿಗೆ ತಕ್ಕಷ್ಟು
    ಮಸಾಲೆ ತಯಾರಿಸಲು:
    ತೊಗರಿ ಬೇಳೆ – ಒಂದೂವರೆ ಟೀಸ್ಪೂನ್
    ಕೊತ್ತಂಬರಿ – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಕರಿಮೆಣಸು – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನಕಾಯಿ – 2
    ಒಗ್ಗರಣೆ ತಯಾರಿಸಲು:
    ಎಣ್ಣೆ – 2 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಹಿಂಗ್ – ಚಿಟಿಕೆ
    ಕರಿಬೇವಿನ ಎಲೆ – ಕೆಲವು ಇದನ್ನೂ ಓದಿ: ರುಚಿಕರ, ಆರೋಗ್ಯಕರ ಊಟಕ್ಕಾಗಿ ಮಾಡಿ ಪಾಲಕ್ ದಾಲ್

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡಪತ್ರೆ ಎಲೆಗಳನ್ನು ತೊಳೆದು, ಕತ್ತರಿಸಿಡಿ.
    * ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರು ತೆಗೆದುಕೊಂಡು, ಅದರಲ್ಲಿ ಕೆಲವು ನಿಮಿಷಗಳ ಕಾಲ ಟೊಮೆಟೊವನ್ನು ನೆನೆಸಿಡಿ. ಬಳಿಕ ತಣ್ಣಗಾಗಲು ಪಕ್ಕಕ್ಕಿಡಿ. ನೀವು ಬೇಕೆಂದರೆ ಟೊಮೆಟೊ ಸಿಪ್ಪೆಯನ್ನು ತೆಗೆಯಬಹುದು.
    * ಈಗ ಒಂದು ಪಾತ್ರೆಯಲ್ಲಿ ನೀರು ಹಾಕಿ, ಹುಣಸೆ ಹಣ್ಣಿನ ರಸ ಹಾಗೂ ಸೀಳಿದ ಹಸಿರು ಮೆಣಸಿನ ಕಾಯಿ ಹಾಕಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ.
    * ಈ ನಡುವೆ ಒಂದು ಕಡಾಯಿಗೆ ಸ್ವಲ್ಪ ಎಣ್ಣೆ ಹಾಕಿ, ತೊಗರಿ ಬೇಳೆ, ಕೊತ್ತಂಬರಿ, ಜೀರಿಗೆ, ಕರಿಮೆಣಸು, ಹಾಗೂ ಕೆಂಪು ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.
    * ಬೇಳೆ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಕತ್ತರಿಸಿಟ್ಟಿದ್ದ ದೊಡ್ಡಪತ್ರೆ ಎಲೆಯನ್ನು ಹಾಕಿ ಸ್ವಲ್ಪ ಒಣಗುವವರೆಗೆ 2-3 ನಿಮಿಷ ಹುರಿಯಿರಿ.
    * ಹುರಿದ ಮಸಾಲೆಯನ್ನು ಈಗ ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ಟೊಮೆಟೊವನ್ನು ಕತ್ತರಿಸಿ ಹಾಕಿ ಹಾಗೂ ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ರುಬ್ಬಿದ ಮಸಾಲೆಯನ್ನು ಕುದಿಯುತ್ತಿರುವ ಹುಣಸೆಹಣ್ಣಿನ ರಸಕ್ಕೆ ಹಾಕಿ.
    * ಉಪ್ಪು, ಬೆಲ್ಲ, ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ, ಮಧ್ಯಮ ಉರಿಯಲ್ಲಿ ಕುದಿಯಲು ಬಿಡಿ.
    * ರಸಂ ಚೆನ್ನಾಗಿ ಕುದಿದ ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಿ ಉರಿಯನ್ನು ಆಫ್ ಮಾಡಿ.
    * ಈಗ ಒಗ್ಗರಣೆ ತಯಾರಿಸಲು ಒಂದು ಸಣ್ಣ ಕಡಾಯಿ ತೆಗೆದುಕೊಂಡು ಅದಕ್ಕೆ ಎಣ್ಣೆ, ಸಾಸಿವೆ, ಹಿಂಗ್ ಕರಿಬೇವಿನ ಎಲೆ ಹಾಕಿ ಸಿಡಿಸಿ. ಬಳಿಕ ಇದನ್ನು ರಸಂಗೆ ಹಾಕಿ.
    ಇದೀಗ ದೊಡ್ಡಪತ್ರೆ ಸೊಪ್ಪಿನ ರಸಂ ತಯಾರಾಗಿದ್ದು, ಬಿಸಿ ಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ನೀವಿದನ್ನು ಸೂಪ್‌ನಂತೆಯೂ ಸೇವಿಸಬಹುದು. ಇದನ್ನೂ ಓದಿ: ಸುಲಭದ ಪಾಲಕ್ ಸೂಪ್ ಮಾಡಿ ರುಚಿ ನೋಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನ್ನಕ್ಕೆ ಸಖತ್ ಟೇಸ್ಟ್ ನೀಡುತ್ತೆ ನಿಂಬೆಹಣ್ಣಿನ ರಸಂ

    ಅನ್ನಕ್ಕೆ ಸಖತ್ ಟೇಸ್ಟ್ ನೀಡುತ್ತೆ ನಿಂಬೆಹಣ್ಣಿನ ರಸಂ

    ನಾವಿಂದು ನಿಮಗೆ ತುಂಬ ಸುಲಭವಾಗಿ ನಿಂಬೆಹಣ್ಣಿನ ರಸಂ (Lemon Rasam) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಹೆಚ್ಚಿನ ತರಕಾರಿ ಇಲ್ಲದಿರುವಾಗ ಇದನ್ನು ನೀವು ಖಂಡಿತವಾಗಿಯೂ ಟ್ರೈ ಮಾಡಿ. ಅನಾರೋಗ್ಯ ಎನಿಸಿದ ಸಂದರ್ಭ, ನಾಲಿಗೆಗೆ ರುಚಿ ಹತ್ತುತ್ತಿಲ್ಲ ಎನಿಸಿದಾಗ ಇದರ ರುಚಿ ಒಮ್ಮೆ ನೀವು ನೋಡಲೇಬೇಕು. ಇದನ್ನು ಸೇವಿಸಿದ ಬಳಿಕ ಒಂದು ರೀತಿಯ ಉಲ್ಲಾಸದಾಯಕ ಅನುಭವವನ್ನು ನೀವು ಖಡಿತಾ ಪಡೆಯುತ್ತೀರಿ.

    ಬೇಕಾಗುವ ಪದಾರ್ಥಗಳು:
    ಹೆಸರು ಬೇಳೆ – 1 ಕಪ್
    ಹೆಚ್ಚಿದ ಟೊಮೆಟೊ – 1
    ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
    ಸೀಳಿದ ಹಸಿರು ಮೆಣಸಿನಕಾಯಿ – 3-4
    ಕರಿಬೇವಿನ ಎಲೆ – ಕೆಲವು
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಅರಿಶಿನ – ಅರ್ಧ ಟೀಸ್ಪೂನ್
    ನಿಂಬೆಹಣ್ಣು – 1
    ಒಗ್ಗರಣೆಗೆ:
    ತುಪ್ಪ – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಮುರಿದ ಒಣ ಕೆಂಪು ಮೆಣಸಿನಕಾಯಿ – 1
    ಹಿಂಗ್ – ಚಿಟಿಕೆ ಇದನ್ನೂ ಓದಿ: ಸೂಪರ್ ಟೇಸ್ಟಿ ಮೇಥಿ ಮಟರ್ ಮಲೈ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್‌ಗೆ ಹೆಸರು ಬೇಳೆಯನ್ನು ಹಾಕಿ, ಚಿಟಿಕೆ ಅರಿಶಿನ ಸೇರಿಸಿ, 2 ಕಪ್ ನೀರಿನೊಂದಿಗೆ 3-4 ಸೀಟಿಗಳಿಗೆ ಚೆನ್ನಾಗಿ ಬೇಯಿಸಿಕೊಳ್ಳಿ.
    * ಒಂದು ಬಾಣಲೆಯನ್ನು ಬಿಸಿ ಮಾಡಿ, ಅದರಲ್ಲಿ ಟೊಮೆಟೊ, ಶುಂಠಿ, ಮೆಣಸಿನಕಾಯಿ ಹಾಗೂ ಅರಿಶಿನ ಹಾಕಿ ಫ್ರೈ ಮಾಡಿಕೊಳ್ಳಿ.
    * ಈಗ 3 ಕಪ್ ನೀರು ಸೇರಿಸಿ, 10 ನಿಮಿಷ ಚೆನ್ನಾಗಿ ಕುದಿಸಿ.
    * ಬಳಿಕ ಬೇಯಿಸಿಟ್ಟುಕೊಂಡಿದ್ದ ಹೆಸರು ಬೇಳೆಯನ್ನು ಕುದಿಯುತ್ತಿರುವ ರಸಂಗೆ ಹಾಕಿ.
    * ಉಪ್ಪು, ಕರಿಬೇವಿನ ಸೊಪ್ಪು ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
    * ಅಗತ್ಯವಿದ್ದರೆ ಇನ್ನಷ್ಟು ನೀರನ್ನು ಸೇರಿಸಿ ಸ್ಥಿರತೆಯನ್ನು ಹೊಂದಿಸಿ.

    * 3-4 ನಿಮಿಷಗಳ ವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ, ಬಳಿಕ ಉರಿಯನ್ನು ಆಫ್ ಮಾಡಿ.
    * ಉರಿಯನ್ನು ಆಫ್ ಮಾಡಿದ ಬಳಿಕ ರಸಂಗೆ ನಿಂಬೆ ರಸವನ್ನು ಹಿಂಡಿ. (ಉರಿ ಆಫ್ ಮಾಡದೇ ನಿಂಬೆ ರಸ ಸೇರಿಸಿದರೆ ಕಹಿಯಾಗುವ ಸಾಧ್ಯತೆಯಿರುತ್ತದೆ.)
    * ಈ ನಡುವೆ ಒಗ್ಗರಣೆಯನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಚಿಕ್ಕ ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ.
    * ಸಾಸಿವೆ ಸಿಡಿದ ಬಳಿಕ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಹಿಂಗ್ ಸೇರಿಸಿ.
    * ತಕ್ಷಣ ಒಗ್ಗರಣೆಯನ್ನು ರಸಂಗೆ ಹಾಕಿ ಮಿಶ್ರಣ ಮಾಡಿ.
    * ಇದೀಗ ನಿಂಬೆಹಣ್ಣಿನ ರಸಂ ತಯಾರಾಗಿದ್ದು, ಬಿಸಿಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ಸ್ವಲ್ಪ ತುಪ್ಪ ಹಾಗೂ ಹಪ್ಪಳ ಜೊತೆಯಲ್ಲಿದ್ದರೆ ಸಿಂಪಲ್ ಆದರೂ ಸಖತ್ ಟೇಸ್ಟ್ ಎನಿಸುತ್ತದೆ. ಇದನ್ನೂ ಓದಿ: ಒಮ್ಮೆ ಮಾಡಿ ನೋಡಲೇಬೇಕು ಬೆಂಡೆಕಾಯಿ ಸಾಸಿವೆ

    Live Tv
    [brid partner=56869869 player=32851 video=960834 autoplay=true]

  • ಬೇಳೆ ಬಳಸದೇ ಮಾಡಿ ರುಚಿಕರವಾದ ರಸಂ

    ಬೇಳೆ ಬಳಸದೇ ಮಾಡಿ ರುಚಿಕರವಾದ ರಸಂ

    ಕ್ಷಿಣ ಭಾರತದಲ್ಲಿ (South Indian) ಅನ್ನ ಹಾಗೂ ರಸಂನ (Rasam) ಸಂಯೋಜನೆ ಇಲ್ಲದೇ ಹೋದರೆ ಊಟ ಅಪೂರ್ಣವಾದಂತೆ. ದಕ್ಷಿಣ ಭಾರತವಾದರೂ ವಿವಿಧ ರಾಜ್ಯಗಳಲ್ಲಿ ಬೇರೇ ಬೇರೆ ರೀತಿಯಲ್ಲಿಯೇ ರಸಂ ತಯಾರಿಸಲಾಗುತ್ತದೆ. ನಾವಿಂದು ಪ್ರೆಶರ್ ಕುಕ್ಕರ್ ಹಾಗೂ ಬೇಳೆಯನ್ನು ಬಳಸದೇ ರಸಂ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ. ನೀವೂ ಕೂಡಾ ಇದನ್ನು ಮನೆಯಲ್ಲಿ ಮಾಡಿ ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಪೇಸ್ಟ್ ತಯಾರಿಸಲು:
    ಜೀರಿಗೆ – 1 ಟೀಸ್ಪೂನ್
    ಕರಿಮೆಣಸು – 1 ಟೀಸ್ಪೂನ್
    ಬೆಳ್ಳುಳ್ಳಿ – 3 ಎಸಳು
    ಕೊತ್ತಂಬರಿ ಬೀಜ – 2 ಟೀಸ್ಪೂನ್

    ರಸಂ ತಯಾರಿಸಲು:
    ಎಣ್ಣೆ – 2 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಒಣ ಕೆಂಪು ಮೆಣಸಿನಕಾಯಿ – 2
    ಕರಿಬೇವಿನ ಎಲೆ – ಸ್ವಲ್ಪ
    ಇಂಗ್ – ಚಿಟಿಕೆ
    ಹೆಚ್ಚಿದ ಟೊಮೆಟೊ – 1
    ಅರಿಶಿನ – ಕಾಲು ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಸೀಳಿದ ಮೆಣಸಿನಕಾಯಿ – 1
    ಹುಣಸೆಹಣ್ಣಿನ ಸಾರ – 1 ಕಪ್
    ನೀರು – 3 ಕಪ್
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮನೆಯಲ್ಲಿಯೇ ಮಾಡಿ ಗರಿಗರಿಯಾದ ನೆಲಗಡಲೆ ಮಸಾಲಾ

    ಮಾಡುವ ವಿಧಾನ:
    * ಮೊದಲಿಗೆ ಬ್ಲೆಂಡರ್‌ಗೆ ಜೀರಿಗೆ, ಕರಿಮೆಣಸು, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಬೀಜ ಹಾಕಿ, ನೀರನ್ನು ಸೇರಿಸದೇ ಒರಟಾಗಿ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
    * ದೊಡ್ಡ ಕಡಾಯಿಯಲ್ಲಿ ಎಣ್ಣೆ, ಸಾಸಿವೆ, ಒಣ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಚಿಟಿಕೆ ಇಂಗ್ ಹಾಕಿ ಹುರಿಯಿರಿ.
    * ಮೊದಲೇ ತಯಾರಿಸಿಟ್ಟ ಪೇಸ್ಟ್ ಅನ್ನು ಸೇರಿಸಿ, ಒಂದು ನಿಮಿಷ ಬೇಯಿಸಿ.
    * ಈಗ ಟೊಮೆಟೊ, ಅರಿಶಿನ, ಉಪ್ಪು ಮೆಣಸಿನಕಾಯಿ ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಸಾಟ್ ಮಾಡಿ.
    * ಬಳಿಕ ಹುಣಸೆಹಣ್ಣಿನ ಸಾರ ಮತ್ತು 3 ಕಪ್ ನೀರು ಸೇರಿಸಿ, ಚೆನ್ನಾಗಿ ಬೆರೆಸಿ.
    * ಈಗ ಕಡಾಯಿಯನ್ನು ಮುಚ್ಚಿ, ಹಸಿ ಪರಿಮಳ ಹೋಗುವವರೆಗೆ ಸುಮಾರು 8 ನಿಮಿಷ ಕುದಿಸಿ.
    * ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ.
    * ಈಗ ರುಚಿಕರವಾದ ರಸಂ ತಯಾರಾಗಿದ್ದು, ಬಿಸಿಯಾದ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ಆರೋಗ್ಯಕರ ಮೆಂತ್ಯ ಸೊಪ್ಪಿನ ಬಾಜಿ ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]

  • ಆರೋಗ್ಯಕರವಾದ ಜೀರಿಗೆ ರಸಂ ಸುಲಭ ವಿಧಾನದಲ್ಲಿ ಮಾಡಿ ಸವಿಯಿರಿ

    ಆರೋಗ್ಯಕರವಾದ ಜೀರಿಗೆ ರಸಂ ಸುಲಭ ವಿಧಾನದಲ್ಲಿ ಮಾಡಿ ಸವಿಯಿರಿ

    ಕ್ಷಿಣ ಭಾರತದ ಕಡೆ ಅದರಲ್ಲೂ ಕರ್ನಾಟಕದಲ್ಲಿ ರಸಂ ಅಥವಾ ಸಾರು ಇಲ್ಲದಿದ್ದರೆ ಊಟ ಪೂರ್ತಿಯಾಗುವುದಿಲ್ಲ. ಅದರಲ್ಲಿಯೂ ಜೀರಿಗೆ ಸಾರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ಬಹಳ ಇಷ್ಟ. ನೀವೂ ಕೂಡ ಒಮ್ಮೆ ಮಾಡಿ ರುಚಿ ನೋಡಿದರೆ ಮತ್ತೆ ಮತ್ತೆ ಈ ರೆಸಿಪಿನ ಮಾಡುತ್ತೀರಿ. ಇದನ್ನು ಮಾಡುವುದು ತುಂಬಾನೇ ಸುಲಭ. ಬಿಸಿ ಬಿಸಿ ಅನ್ನದ ಜೊತೆ ಬಡಿಸಿ ತಿನ್ನಲು ಜೀರಿಗೆ ರಸಂ ತುಂಬಾ ರುಚಿ. ಅಷ್ಟೇ ಅಲ್ಲ ಇದನ್ನು ಸೂಪ್ ತರಹ ಕುಡಿಯಲೂ ಬಹುದು. ಒಮ್ಮೆ ಮಾಡಿ ನೋಡಿ.

    ಬೇಕಾಗಿರುವ ಪದಾರ್ಥಗಳು:
    * ಒಣ ಮೆಣಸಿನಕಾಯಿ – 4 ರಿಂದ 5
    * ಎಣ್ಣೆ – 2 ದೊಡ್ಡ ಚಮಚ
    * ಜೀರಿಗೆ – 2 ಚಮಚ
    * ಬೇಯಿಸಿದ ತೊಗರಿ ಬೇಳೆ – 2 ಕಪ್
    * ಟೊಮೆಟೊ – 1 ಕಪ್
    * ಅರಶಿನ ಪುಡಿ – ಅರ್ಧ ಚಮಚ
    * ಉಪ್ಪು – ಅರ್ಧ ಚಮಚ
    * ನೀರು – ಬೇಕಾದಷ್ಟು(4 ರಿಂದ 5 ಕಪ್)

    * ತುಪ್ಪ – 1 ಚಮಚ
    * ಸಾಸಿವೆ – 1 ಚಮಚ
    * ಕರಿಬೇವು – 1 ದಂಟು
    * ಇಂಗು – ಒಂದು ಚಿಟಿಕೆ
    * ಕೊತ್ತಂಬರಿ ಸೊಪ್ಪು – 1 ಕಪ್

    ಮಾಡುವ ವಿಧಾನ:
    * ಹುರಿದ ಒಣ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಒಂದು ಪಾತ್ರೆಯಲ್ಲಿ ಗರಿ-ಗರಿಯಾಗುವವರೆಗೆ ಹುರಿಯಿರಿ.
    * ಹುರಿದ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಬೇಯಿಸಿದ ತೊಗರಿ ಬೇಳೆಯ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.
    * ಎಣ್ಣೆಯನ್ನು ಬಿಸಿ ಮಾಡಿ ಟೊಮೆಟೊ ಹಾಕಿ ಸಣ್ಣ ಉರಿಯಲ್ಲಿ ಅರಶಿನ ಪುಡಿ ಹಾಗೂ ಉಪ್ಪನ್ನು ಹಾಕಿ ಬೇಯಿಸಿ.
    * ಅದಕ್ಕೆ ತಯಾರಿಸಿದ ಮೆಣಸಿನಕಾಯಿ-ಜೀರಿಗೆ-ಬೇಳೆ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ.


    * ನೀರನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಕಿ. ಈ ಸಾರನ್ನು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲದವರೆಗೆ ಕುದಿಸಿ.
    * ಒಗ್ಗರಣೆಗೆ ಸ್ವಲ್ಪ ತುಪ್ಪದಲ್ಲಿ ಸಾಸಿವೆ ಹಾಕಿ ಕರಿಬೇವಿನ ಎಲೆ ಮತ್ತು ಇಂಗು ಹಾಕಿ ಹುರಿಯಿರಿ. ಹುರಿದದ್ದನ್ನು ಸಾರಿಗೆ ಹಾಕಿ ಚೆನ್ನಾಗಿ ಕಲಕಿ. ನಂತರ ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಕಿ.

    – ಈ ಸಾರನ್ನು ಬಿಸಿ-ಬಿಸಿ ಅನ್ನದ ಮತ್ತು ಹಪ್ಪಳದ ಜೊತೆ ಬಡಿಸಿ.

  • ನಿಂಬೆ ಹಣ್ಣಿನಿಂದ ಮಾಡಿ ರುಚಿಯಾದ  ರಸಂ

    ನಿಂಬೆ ಹಣ್ಣಿನಿಂದ ಮಾಡಿ ರುಚಿಯಾದ ರಸಂ

    ನಿಮ್ಮ ದೇಹದಲ್ಲಿ ರೋಗನಿರೋಧ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳೊಂದಿಗೆ ತಯಾರಿಸಿದ ರಸಂ ಬಹಳ ಸಹಕಾರಿ. ರೋಗನಿರೋಧಕ ಶಕ್ತಿಯನ್ನು ನೀವು ಹೆಚ್ಚಿಸಿಕೊಳ್ಳಬೇಕಾ? ಹಾಗಿದ್ದರೆ ಈ ರಸಂ ಮಾಡಿ ಸವಿಯ ಬಹುದಾಗಿದೆ. ಬೇಯಿಸಿದ ಅನ್ನದೊಂದಿಗೆ ನಿಂಬೆಹಣ್ಣಿನ ರಸಂ ಸವಿಯಲ್ ಸಖತ್ ಟೇಸ್ಟ್ ಆಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಟೊಮೆಟೋ-1
    * ಶುಂಠಿ- ಸ್ವಲ್ಪ
    * ಕರಿಬೇವಿನ ಎಲೆ
    * ಹಸಿ ಮೆಣಸಿನಕಾಯಿ- 3
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅರಿಶಿಣ- 1 ಚಮಚ
    * ತೊಗರಿ ಬೇಳೆ-  ಅರ್ಧ ಕಪ್‌
    * ರುಚಿಗೆ ತಕ್ಕಷ್ಟು ಉಪ್ಪು
    * ನಿಂಬೆ- 1
    * ತುಪ್ಪ- 2 ಚಮಚ
    * ಸಾಸಿವೆ- 1 ಚಮಚ
    * ಜೀರಿಗೆ- 1 ಚಮಚ
    * ಒಣ ಮೆಣಸಿನಕಾಯಿ- 1
    * ಕಾಳು ಮೆಣಸಿನ ಪುಡಿ- ಅರ್ಧ ಚಮಚ

    ಮಾಡುವ ವಿಧಾನ:
    * ಪಾತ್ರೆಯಲ್ಲಿ ಟೊಮೆಟೋ, ಶುಂಠಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆ, ಅರಿಶಿಣ 10 ನಿಮಿಷ ಕುದಿಸಬೇಕು.
    * ಪ್ರೆಶರ್ ಕುಕ್ಕರ್ನಲ್ಲಿ ತೊಗರಿ ಬೇಳೆಯನ್ನು ಬೇಯಿಸಿಕೊಳ್ಳಬೇಕು.

    * ಬೇಯಿಸಿದ ತೊಗರಿ ಬೇಳೆ ಹಾಗೂ ಟೊಮೆಟೋವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಸೇರಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
    * ಈಗ ರಸಂನ್ನು ಕುದಿಯುಲು ಬಿಡಬೇಕು
    * ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, ಕರಿಬೇವು, ಕಾಳು ಮೆಣಸು ಸೇರಿಸಿ ರಸಂಗೆ ಒಗ್ಗರಣೆ ಹಾಕಿ. ಇದನ್ನೂ ಓದಿ:  ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ

    * ನಂತರ ಕೊನೆಯಲ್ಲಿ ರಸಂಗೆ ನಿಂಬೆ ರಸವನ್ನು ಹಿಂಡಿದರೆ ರುಚಿಯಾದ ರಸಂ ಸವಿಯಲು ಸಿದ್ಧವಾಗುತ್ತದೆ.

  • ಫಟಾ ಫಟ್ ಅಂತ ಮಾಡಿ ಘಮ್ ಎನ್ನುವ ಜೀರಿಗೆ ರಸಂ

    ಫಟಾ ಫಟ್ ಅಂತ ಮಾಡಿ ಘಮ್ ಎನ್ನುವ ಜೀರಿಗೆ ರಸಂ

    ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ?  ನೀವು ಆಫೀಸ್‍ಗೆ ಹೋಗುತ್ತಿದ್ದರೆ ಬೆಳಗ್ಗೆ ಅಡುಗೆ ಮಾಡುವುದರ ಜೊತೆಗೆ ಮಧ್ಯಾಹ್ನದ ಊಟವನ್ನು ಸಿದ್ಧ ಮಾಡಿಕೊಂಡು ಹೋಗಲು ಸಮಯ ಇರುವುದಿಲ್ಲ. ಹೀಗಾಗಿ ನೀವು 10 ನಿಮಿಷದಲ್ಲಿ ಮಾಡಬಹುದಾದ ರುಚಿಯಾದ ಜೀರಿಗೆ ರಸಂ  ರೆಸಿಪಿ ಇಲ್ಲಿದೆ. ನಾಲಿಗೆಗೆ ರುಚಿ ನೀಡುವುದರ ಜೊತೆಗೆ ನಿಮ್ಮ ಸಮಯವನ್ನು ಉಳಿಸುವ ರೆಸಿಪಿ ಇದಾಗಿದೆ.

    ಬೇಕಾಗುವ ಪದಾರ್ಥಗಳು:
    * ಹುಣಸೆ ಹಣ್ಣು- ಸ್ವಲ್ಪ
    * ಬೆಳ್ಳುಳ್ಳಿ -1
    * ಟೊಮ್ಯಾಟೊ -1
    * ಅರಿಶಿಣ ಪುಡಿ- ಸ್ವಲ್ಪ
    * ಜೀರಿಗೆ- 2 ಚಮಚ
    * ಸಾಸಿವೆ – ಸ್ವಲ್ಪ
    * ಇಂಗು – ಸ್ವಲ್ಪ
    * ಅಡುಗೆ ಎಣ್ಣೆ – ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಕಾಳು ಮೆಣಸು- ಸ್ವಲ್ಪ
    * ಕರಿಬೇವು- ಸ್ವಲ್ಪ
    * ಒಣ ಮೆಣಸಿನಕಾಯಿ- 2
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಒಣ ಮೆಣಸಿನಕಾಯಿ, ಕರಿಮೆಣಸು, ಕಾಳು ಮೆಣಸಿನ ಪುಡಿ, ಸ್ವಲ್ಪ ಜಾಸ್ತಿ ಜೀರಿಗೆ, ಬೆಳ್ಳುಳ್ಳಿ ಕರಿಬೇವಿನ ಎಲೆಗಳನ್ನು ಬಾಣಲೆಯಲ್ಲಿ ಹುರಿದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ.  ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
    * ನಂತರ ಒಂದು ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ, ಟೊಮ್ಯಾಟೊ, ಕರಿಬೇವು, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿ.

    * ರುಬ್ಬಿದ ಮಸಾಲಾ, ಹುಣಸೆ ಹಣ್ಣಿನ ತಿರುಳು, ನೀರು ಸೇರಿಸಿ ಕುದಿಯಲು ಬಿಡಬೇಕು.
    * ಇನ್ನೊಂದು ಬಾಣಲೆಯಲ್ಲಿ ಅಡುಗೆ ಎಣ್ಣೆ, ಸಾಸಿವೆ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗನ್ನು ರಸಂಗೆ ಒಗ್ಗರಣೆ ಕೊಟ್ಟರೆ ರುಚಿಯಾದ ರಸಂ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • ಕೆಲವೇ ತರಕಾರಿ ಬಳಸಿ, ಎರಡೇ ನಿಮಿಷದಲ್ಲಿ ತಯಾರಿಸಿ ರಸಂ

    ಕೆಲವೇ ತರಕಾರಿ ಬಳಸಿ, ಎರಡೇ ನಿಮಿಷದಲ್ಲಿ ತಯಾರಿಸಿ ರಸಂ

    ಲಾಕ್‍ಡೌನ್ ಆಗಿದ್ದರಿಂದ ಊರಿಗೆ ತೆರಳದೇ ರೂಮಿನಲ್ಲಿ ಉಳಿದುಕೊಂಡಿರುವ ಬಹುತೇಕ ಯುವಕರಿಗೆ ಊಟದ್ದೇ ದೊಡ್ಡ ಚಿಂತೆ. ಇನ್ನು ಹೋಟೆಲ್ ಗಳ ಮೇಲೆ ಅವಲಂಬಿತರಾದವರು ಪ್ರತಿದಿನ ಏನು ಮಾಡಿಕೊಳ್ಳೋದು ಅನ್ನೋ ಚಿಂತೆಯಲ್ಲಿಯೇ ಅರ್ಧ ದಿನ ಕಳೆದು ಬಿಡ್ತಾರೆ. ಕೆಲವೇ ತರಕಾರಿ ಬಳಸಿ, ಕಡಿಮೆ ಸಮಯದಲ್ಲಿ ರಸಂ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    ಟೊಮೆಟೋ- 2
    ಹುಣಸೆ ಹಣ್ಣು- ಸ್ವಲ್ಪ
    ಹಸಿ ಮೆಣಸಿನಕಾಯಿ- 5 ರಿಂದ 6
    ಬೆಳ್ಳುಳ್ಳಿ- 5 ರಿಂದ 6 ಎಸಳು
    ಕೋತಂಬರಿ ಸೊಪ್ಪು
    ಉಪ್ಪು ರುಚಿಗೆ ತಕ್ಕಷ್ಟು
    ಎಣ್ಣೆ-ಒಗ್ಗರಣೆಗೆ

    ಮಾಡುವ ವಿಧಾನ
    * ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನಷ್ಟು ನೀರು ಹಾಕಿಕೊಂಡು ಅದರಲ್ಲಿ ಹುಣಸೆ ಹಣ್ಣನ್ನು ನೆನಸಿಟ್ಟುಕೊಳ್ಳಿ.
    * ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಸೇರಿಸಿ ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.
    * ಈಗ ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಮೇಲೆ ಮಿಕ್ಸಿ ಹಾಕಿಕೊಂಡಿದ್ದ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ಈಗ ಹುಣಸೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
    * ರುಚಿಗೆ ತಕ್ಕಷ್ಟು ಮತ್ತು ಕತ್ತರಿಸಿದ ಟೊಮೆಟೋ ಪೀಸ್ ಗಳನ್ನು ಮಿಕ್ಸ್ ಮಾಡಿ 5 ರಿಂದ 6 ನಿಮಿಷ ಕುದಿಸಿಕೊಳ್ಳಿ. ಕೊನೆಗೆ ಸಣ್ಣದಾಗಿ ಕೋತಂಬರಿ ಸೇರಿಸಿದ್ರೆ ರಸಂ ಸವಿಯಲು ಸಿದ್ಧ.

  • 10 ನಿಮಿಷದಲ್ಲಿ ಮಾಡಿ ಸವಿಯಿರಿ ಮೈಸೂರು ಸಿಂಪಲ್ ರಸಂ!

    10 ನಿಮಿಷದಲ್ಲಿ ಮಾಡಿ ಸವಿಯಿರಿ ಮೈಸೂರು ಸಿಂಪಲ್ ರಸಂ!

    ನಾಡಿನಾದ್ಯಂತ ಕಾತರದಿಂದ ಕಾಯುತ್ತಿರುವ ಮೈಸೂರು ಜಂಬು ಸವಾರಿ ಶುಕ್ರವಾರ ನಡೆಯಲಿದೆ. ಇಲ್ಲಿಯವರೆಗೂ ನವದುರ್ಗೆಯನ್ನು ಪೂಜೆ ಮಾಡಿ ಸಿಹಿ ಮಾಡಿ ಸಂಭ್ರಮಿಸಿದ್ದೀರಾ. ಈಗ ಹಬ್ಬಕ್ಕಾಗಿ ಆರೋಗ್ಯಕ್ಕೂ ಉತ್ತಮವಾದ ಮೈಸೂರು ಬಿಸಿಬಿಸಿ ರಸಂ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    ಪುಡಿ ಮಾಡಲು
    1. ದನಿಯಾ – 2 ಚಮಚ
    2. ಜೀರಿಗೆ – 1 ಚಮಚ
    3. ಕಡಲೆ ಬೇಳೆ – 1 ಚಮಚ
    4. ಮೆಣಸು – 1 ಚಮಚ
    5. ಕೆಂಪು ಒಳ ಮೆಣಸಿನ ಕಾಯಿ – 3 ರಿಂದ 4
    6. ಕೊಬ್ಬರಿ ತುರಿ – ಅರ್ಧ ಬಟ್ಟಲು

    ಪೌಡರ್ ಮಾಡುವ ವಿಧಾನ:
    * ಒಂದು ಫ್ರೈಯಿಂಗ್ ಪ್ಯಾನ್‍ಗೆ ದನಿಯಾ, ಜೀರಿಗೆ, ಕಡಲೆಬೇಳೆ, ಮೆಣಸು, ಕೆಂಪು ಒಣ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
    * ಅದಕ್ಕೆ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಮಿಕ್ಸರ್ ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.

    ರಸಕ್ಕೆ
    1. ಟೊಮೋಟೋ – 2 ರಿಂದ 3
    2. ಹುಣಸೆಹಣ್ಣು – ನಿಂಬೆ ಗಾತ್ರ
    3. ಅರಿಶಿನ ಪುಡಿ – ಅರ್ಧ ಚಮಚ
    4. ಉಪ್ಪು – ರುಚಿಗೆ ತಕ್ಕಷ್ಟು
    5. ಬೆಲ್ಲ – 1 ಚಮಚ
    6. ತೊಗರಿ ಬೇಳೆ – 1 ಬಟ್ಟಲು

    ಒಗ್ಗರಣೆಗೆ
    1. ಎಣ್ಣೆ – 3 ಚಮಚ
    2. ಸಾಸಿವೆ – ಅರ್ಧ ಚಮಚ
    3. ಕರಿಬೇವು – ಸ್ವಲ್ಪ
    4. ಇಂಗು – ಚಿಟಿಕೆ
    5. ಕೆಂಪು ಮೆಣಸಿನ ಕಾಯಿ -3 ರಿಂದ 4
    6. ಕೊತ್ತಂಬರಿ ಸೊಪ್ಪು


    ರಸಂ ಮಾಡುವ ವಿಧಾನ:
    * ಮೊದಲಿಗೆ ತೊಗರಿಬೇಳೆಯನ್ನು ಕುಕ್ಕರ್ ಗೆ  ಹಾಕಿ 2-3 ಕೂಗು ಕೂಗಿಸಿಟ್ಟುಕೊಳ್ಳಿ.
    * ಫ್ರೈಯಿಂಗ್ ಪ್ಯಾನಿಗೆ ಹೆಚ್ಚಿದ ಟೊಮೋಟೋ, ಹುಣಸೆ ರಸ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಲಿಡ್ ಮುಚ್ಚಿ 5 ರಿಂದ 10 ನಿಮಿಷ ಚೆನ್ನಾಗಿ ಕುದಿಸಿ.
    * ಬಳಿಕ ಅದಕ್ಕೆ ಈ ಮೊದಲೇ ಬೇಯಿಸಿಟ್ಟುಕೊಂಡ ತೊಗರಿ ಬೇಳೆಯನ್ನು ಸೇರಿಸಿ ಲಿಡ್ ಮುಚ್ಚಿ ಬೇಯಿಸಿ. ಚೆನ್ನಾಗಿ ಕುದಿಸಿ.
    * ಈಗ ರಸಂಗೆ ಬೇಕಾದಷ್ಟು ನೀರು ಸೇರಿಸಿ, ಹುರಿದು ಪುಡಿ ಮಾಡಿದ ಪೌಡರ್ ಅನ್ನು 2 ರಿಂದ 3 ಚಮಚ ಸೇರಿಸಿ ಕುದಿಸಿ.
    * ರಸ ಚೆನ್ನಾಗಿ ಕುದಿ ಬಂದು ಸುವಾಸನೆ ಬರುತ್ತದೆ.
    * ಅದಕ್ಕೀಗ ಒಗ್ಗರಣೆ ಸೇರಿಸಿ. ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಸ್ಟೌವ್ ಆರಿಸಿದರೆ 10 ನಿಮಿಷದಲ್ಲಿ ರಸಂ ರೆಡಿ.
    * ಬಿಸಿ ಅನ್ನದೊಂದಿಗೆ ರಸಂ ಜೊತೆ ತುಪ್ಪ ಸೇರಿಸಿ ಊಟ ಮಾಡಿದರೆ ಅದರ ಮಜಾವೇ ಬೇರೆ.

    ಒಗ್ಗರಣೆ:
    * ಒಂದು ಒಗ್ಗರಣೆ ಬೌಲಿಗೆ ಎಣ್ಣೆ ಹಾಕಿ.
    * ಕಾದ ಮೇಲೆ ಸಾಸಿವೆ, ಕರಿಬೇವು, ಇಂಗು, ಕೆಂಪು ಮೆಣಸಿನ ಕಾಯಿ ಹಾಕಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv