ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭಿಸಿದೆ. ಸೈಂಟ್ ಆಂಡ್ರೂ ಪ್ರಶಸ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿಳಿಸಿದ್ದಾರೆ.
ಭಾರತ ಮತ್ತು ರಷ್ಯಾದ ಸಂಬಂಧ ಸುಧಾರಣೆಗೆ ಶ್ರಮಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ ಎಂದು ರಷ್ಯಾ ತಿಳಿಸಿದೆ.
ಈ ಗೌರವ ಪಡೆದ ಮೊದಲ ಭಾರತದ ಪ್ರಧಾನಿ ಮೋದಿ ಆಗಿದ್ದಾರೆ. ಈ ಹಿಂದೆ ಈ ಪ್ರಶಸ್ತಿಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ಅಜರ್ ಬೈಜಾನ್ ಪ್ರಧಾನಿ ಹೈದರ್ ಅಲಿಯಾವ್, ಕಜಕಿಸ್ತಾನದ ಅಧ್ಯಕ್ಷ ನುರ್ಸುಲ್ಟಾನ್ ನಜರ್ಬಯೆವ್ ಅವರಿಗೆ ಸಿಕ್ಕಿತ್ತು.
ಏಪ್ರಿಲ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ನೀಡುವ ಅತ್ಯುನ್ನತ ನಾಗರಿಕ ಪುರಸ್ಕಾರ `ಝಾಯೆದ್ ಮೆಡಲ್’ ಪುರುಸ್ಕಾರಕ್ಕೆ ಭಾಜನರಾಗಿದ್ದಾರೆ. ಉಭಯ ದೇಶಗಳ ನಡುವೆ ಉತ್ತಮ ಸಂಬಂಧ ಕಲ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ನರೇಂದ್ರ ಮೋದಿ ಅವರಿಗೆ ಝಾಯೆದ್ ಮೆಡಲ್ ನೀಡಿ ಗೌರವ ಸಲ್ಲಿಸಲಾಗುತ್ತಿದೆ ಎಂದು ಯುಎಇ ಸರ್ಕಾರ ತಿಳಿಸಿತ್ತು.
ಝಾಯೆದ್ ಮೆಡಲ್ ಪುರಸ್ಕಾರ ಕುರಿತು ಟ್ವೀಟ್ ಮಾಡಿರುವ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು, ಭಾರತದೊಂದಿಗೆ ಐತಿಹಾಸಿಕ ಹಾಗೂ ಸಮಗ್ರವಾದ ಕಾರ್ಯತಂತ್ರದ ಬಾಂಧವ್ಯ ಹೊಂದಿದ್ದೇವೆ. ಉಭಯ ದೇಶಗಳ ಸಂಬಂಧ ವೃದ್ಧಿಗೆ ನಮ್ಮ ಆತ್ಮೀಯ ಗೆಳೆಯರಾದ ಪ್ರಧಾನಿ ನರೇಂದ್ರ ಮೋದಿ ಉತ್ತೇಜನ ನೀಡಿದರು. ಅವರ ಈ ಪ್ರಯತ್ನಕ್ಕಾಗಿ ಝಾಯೆದ್ ಮೆಡಲ್ ನೀಡಿ ಗೌರವಿಸುತ್ತಿದೆ ಎಂದು ಹೇಳಿದ್ದರು.
2018ರಲ್ಲಿ ವಿಶ್ವಸಂಸ್ಥೆಯ ಅತಿದೊಡ್ಡ ಪ್ರಶಸ್ತಿ ಎನಿಸಿಕೊಂಡಿರುವ ಚಾಂಪಿಯನ್ಸ್ ಆಫ್ ಅರ್ಥ್ ಪ್ರಶಸ್ತಿಯ ಗೌರವಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದರು. ಈ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಅವರ ಜೊತೆ ಹಂಚಿಕೊಂಡಿದ್ದರು. ಪಾಲಿಸಿ ಆಫ್ ಲೀಡರ್ ಶಿಪ್ ವಿಭಾಗದಲ್ಲಿ ಮೋದಿ ಅವರಿಗೆ ಈ ಗೌರವ ಸಿಕ್ಕಿತ್ತು. ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ ಮೋದಿಗೆ ಈ ಗೌರವ ನೀಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿಯಲ್ಲಿ ಎಕೆ 203 ರೈಫಲ್ ಉತ್ಪಾದನೆ ಮಾಡುವ ಫ್ಯಾಕ್ಟರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಭಾರತೀಯ ಸೇನೆಗೆ ಈ ಅತ್ಯಾಧುನಿಕ ರೈಫಲ್ ಅಗತ್ಯವಾಗಿದ್ದು, ಈ ರೈಫಲ್ ವಿಶೇಷತೆ ಏನು? ಭಾರತೀಯ ಸೇನೆ ಯಾವೆಲ್ಲ ರೈಫಲ್ ಗಳನ್ನು ಬಳಕೆ ಮಾಡುತ್ತಿದೆ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಯಾಕೆ ಎಕೆ – 203 ಬೇಕು?
ಭಾರತೀಯ ಸೇನೆ ವಿಶ್ವದಲ್ಲೇ 5ನೇ ಸ್ಥಾನವನ್ನು ಹೊಂದಿದ್ದು, ಪ್ರಸ್ತುತ ನಮ್ಮ ಸೈನಿಕರು ಇಂಡಿಯಾ ಸ್ಮಾಲ್ ಆರ್ಮ್ಸ್ ಸಿಸ್ಟಂ(ಐಎನ್‍ಎಎಸ್- ಇನ್ಸಾಸ್) ರೈಫಲ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಕೆಲ ವರ್ಷಗಳಿಂದ ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ಸೈನಿಕರು ಇನ್ಸಾಸ್ ಬಳಕೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಜಾಮ್ ಆಗುವುದು, ಮೂರು ಸುತ್ತಿನ ಗುಂಡು ಆದ ಕೂಡಲೇ ಆಟೋಮ್ಯಾಟಿಕ್ ಮೋಡ್ ಗೆ ಹೋಗುವುದು, ದೀರ್ಘ ಕಾರ್ಯಾಚರಣೆಯ ವೇಳೆ ಇನ್ಸಾನ್ ನಲ್ಲಿ ಆಯಿಲ್ ಸೋರಿಕೆ ಆಗುತ್ತಿರುತ್ತದೆ. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕನಿಷ್ಠ ಉಷ್ಣಾಂಶದ ವೇಳೆ ವೈರಿ ಜೊತೆ ಕಾದಾಡುತ್ತಿದ್ದಾಗ ಈ ರೈಫಲ್ ಗಳ ಮ್ಯಾಗಜಿನ್ ಗಳು ಆಗಾಗ ಜ್ಯಾಮ್ ಆಗುತಿತ್ತು. ಪದೇ ಪದೇ ಕೈಕೊಟ್ಟು ಸೈನಿಕರ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದ ಕಾರಣ ಸರ್ಕಾರ ಈಗ ಸ್ವದೇಶಿ ನಿರ್ಮಿತ ಇನ್ಸಾಸ್ ರೈಫಲ್ ಗಳಿಗೆ ತಿಲಾಂಜಲಿ ನೀಡಿ ಎಕೆ – 203 ರೈಫಲ್ ನೀಡಲು ಮುಂದಾಗಿದೆ. ಈ ಕಾರಣದ ಜೊತೆಗೆ ಉಗ್ರರು ಮತ್ತು ನಕ್ಸಲರು ಎಕೆ 47 ಗನ್ ಗಳನ್ನು ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ರಷ್ಯಾ ಕಂಪನಿಯ ಜೊತೆಗೂಡಿ ದೇಶದಲ್ಲೇ ಎಕೆ ರೈಫಲ್ ಗಳನ್ನು ಉತ್ಪಾದಿಸಲು ಮುಂದಾಗಿದೆ.
ಇನ್ಸಾಸ್ ವರ್ಸಸ್ ಎಕೆ 203:
ಇನ್ಸಾಸ್ 400 ಮೀಟರ್ ವ್ಯಾಪ್ತಿಯ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ಮ್ಯಾಗಜಿನ್ ನಲ್ಲಿ 20 ಗುಂಡುಗಳನ್ನು ಹಾಕಬಹುದಾಗಿದೆ. ಇನ್ಸಾಸ್ ಉದ್ದವಾಗಿದ್ದು 4.15 ಕೆಜಿ ತೂಕವಿದ್ದು ಸುಲಭವಾಗಿ ಎತ್ತಿಕೊಂಡು ಹೋಗಲು ಸಾಧ್ಯವಿಲ್ಲ. ಎಕೆ – 203 ಎಕೆ -47 ಉನ್ನತೀಕರಿಸಿದ ಆವೃತ್ತಿಯಾಗಿದ್ದು, ಮ್ಯಾಗಜಿನ್ ನಲ್ಲಿ 30 ಗುಂಡುಗಳನ್ನು ಹಾಕಬಹುದಾಗಿದೆ. 800 ಮೀಟರ್ ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ. ಇದರ ಮ್ಯಾಗಜಿನ್ ನಲ್ಲಿ 30 ಬುಲೆಟ್ ಗಳನ್ನು ಹಾಕಬಹುದು. ಒಂದು ನಿಮಿಷಕ್ಕೆ 600 ಬುಲೆಟ್ ಗಳನ್ನು ಫೈರ್ ಮಾಡುವ ಸಾಮರ್ಥ್ಯ ಹೊಂದಿರುವುದು ಇದರ ವಿಶೇಷ. ಅಂದರೆ ಒಂದು ಸೆಕೆಂಡಿಗೆ 10 ಬುಲೆಟ್ ಫೈರ್ ಮಾಡಬಹುದು. ಅಟೋಮ್ಯಾಟಿಕ್ ಮೋಡ್ ಮತ್ತು ಸೆಮಿ ಅಟೋಮ್ಯಾಟಿಕ್ ಮೋಡ್ ಗೆ ಹಾಕಿ ಬುಲೆಟ್ ಫೈರ್ ಮಾಡಬಹುದು. ಅಷ್ಟೇ ಅಲ್ಲದೇ ಈ ಗನ್ ಜಾಮ್ ಆಗುವುದಿಲ್ಲ. ಎಕೆ ನಿರ್ಮಿತ ಗನ್ ಗಳು ಎಲ್ಲ ರೀತಿಯ ಹವಾಮಾನದಲ್ಲೂ ಕೆಲಸ ಮಾಡುತ್ತದೆ. ಮಣ್ಣು, ಮರುಭೂಮಿ, ನೀರಿನಲ್ಲೂ ಕೆಲಸ ಮಾಡುತ್ತದೆ.
ಯಾವೆಲ್ಲ ದೇಶಗಳು ಎಕೆ 47 ಬಳಸುತ್ತಿವೆ?
50ಕ್ಕೂ ಹೆಚ್ಚು ದೇಶಗಳು ಎಕೆ 47 ಗನ್ ಗಳನ್ನು ಬಳಕೆ ಮಾಡುತ್ತಿವೆ. 30ಕ್ಕೂ ಹೆಚ್ಚು ದೇಶಗಳು ರಷ್ಯಾದ ಈ ಕಲಾಶ್ನಿಕೋವ್ ರೈಫಲ್ ಉತ್ಪಾದನೆ ಮಾಡಲು ಲೈಸನ್ಸ್ ಪಡೆದುಕೊಂಡಿದೆ. ರಷ್ಯಾದ ವಿಶೇಷ ಮಿಲಿಟರಿ ಪಡೆಗಳು ಈಗ ಎಕೆ 203 ರೈಫಲ್ ಬಳಸುತ್ತಿವೆ.
ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ನಿರ್ಮಾಣ:
ಕಳೆದ 10 ವರ್ಷಗಳಿಂದ ಸರ್ಕಾರ ಸೈನಿಕರಿಗೆ ಹೊಸ ರೈಫಲ್ ನೀಡಲು ಸಿದ್ಧತೆ ನಡೆಸಿತ್ತು. ಆದರೆ ಟೆಂಡರ್ ಸೇರಿದಂತೆ ಕೆಲ ಸಮಸ್ಯೆಗಳಿಂದಾಗಿ ರೈಫಲ್ ಖರೀದಿ ಪ್ರಕ್ರಿಯೆ ಅಂತಿಮವಾಗಿರಲಿಲ್ಲ. ಭಾರತ ರಷ್ಯಾದ ಜೊತೆಗೆ 5.43 ಶತಕೋಟಿ ಡಾಲರ್ ವೆಚ್ಚದ ಟ್ರಯಂಫ್ ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿಸಲು ನಡೆಸಿದ ಒಪ್ಪಂದದ ನಂತರ ಭಾರತ ರಷ್ಯಾ ಜೊತೆಗೂಡಿ ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಎಕೆ-203 ರೈಫಲ್ ಉತ್ಪಾದನೆ ಸಂಬಂಧ ಜಂಟಿ ಉದ್ಯಮ ಸ್ಥಾಪನೆಯಾಯಿತು. ಒಟ್ಟು ಶೇ.50.5 ಶೇರನ್ನು ಭಾರತದ ಜೆವಿ ಕಂಪನಿ ಹೊಂದಿದ್ದರೆ ಶೇ.49.5 ಪಾಲನ್ನು ಕಲಾಶ್ನಿಕೋವ್ ಕನ್ಸರ್ನ್ ಹೊಂದಿದೆ. ಕಳೆದ ಅಕ್ಟೋಬರ್ ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ ಭಾರತದಲ್ಲಿ ಎಕೆ ರೈಫಲ್ಸ್ ಉತ್ಪಾದನೆ ಸಂಬಂಧ ಒಪ್ಪಂದಕ್ಕೆ ಜಂಟಿಯಾಗಿ ಸಹಿ ಹಾಕಿದ್ದರು. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
ಭಾರತದಲ್ಲಿ ಯಾವೆಲ್ಲ ರೈಫಲ್ ಬಳಕೆಯಾಗುತ್ತಿದೆ?
ಸೈನಿಕರು ಇನ್ಸಾಸ್ ಗನ್ ಗಳನ್ನು ಬಳಕೆ ಮಾಡುತ್ತಿದ್ದರೆ, ಉಗ್ರರ ದಾಳಿ ಹೆಚ್ಚಿರುವ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧರು ಆಮದಾಗಿರುವ ಎಕೆ 47 ಗನ್ ಬಳಕೆ ಮಾಡುತ್ತಿದ್ದಾರೆ. ಪ್ಯಾರಾ ಕಮಾಂಡೋಗಳು, ಗರುಡಾ ಕಮಾಂಡೋ ಫೋರ್ಸ್(ಐಎಎಫ್), ಮರೀನ್ ಕಮಾಂಡೋಗಳು, ರಾಷ್ಟ್ರೀಯ ಭದ್ರತಾ ದಳ(ಎನ್‍ಎಸ್‍ಜಿ) ಜರ್ಮನ್ ಮತ್ತು ಇಸ್ರೇಲ್ ನಿರ್ಮಿತ ಅಟೋಮ್ಯಾಟಿಕ್ ರೈಫಲ್ ಹೆಕ್ಲರ್ ಕೋಚ್, ಎಂಪಿ5 ಸಬ್ ಮಶೀನ್ ಗನ್, ತಾವೂರ್ ರೈಫಲ್ ಗಳನ್ನು ಬಳಕೆ ಮಾಡುತ್ತಿದೆ. ವಿಐಪಿ, ವಿವಿಐಪಿಗಳಿಗೆ ನೀಡುವ ಎಸ್‍ಪಿಜಿ ಬೆಲ್ಜಿಯಂ ನಿರ್ಮಿತ ಎಫ್‍ಎನ್ 2000 ಬುಲ್‍ಪಪ್ ಅಸಾಲ್ಟ್ ರೈಫಲ್ ಬಳಕೆ ಮಾಡುತ್ತಿವೆ.
ಎಷ್ಟು ರೈಫಲ್ ಉತ್ಪಾದನೆಯಾಗಲಿದೆ?
ಸ್ವದೇಶಿ ಇನ್ಸಾಸ್ ರೈಫಲ್ ತಮಿಳುನಾಡಿನ ತಿರುಚನಾಪಳ್ಳಿ, ಉತ್ತರಪ್ರದೇಶದ ಕಾನ್ಪುರ, ಪಶ್ಚಿಮ ಬಂಗಾಳದ ಇಚಾಪುರ್‍ನಲ್ಲಿ ತಯಾರಾಗುತಿತ್ತು. ಅಮೇಠಿಯಲ್ಲಿ ಒಟ್ಟು 7.50 ಲಕ್ಷ ಎಕೆ-203 ಗನ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆರಂಭದಲ್ಲಿ ಎಲ್ಲ ಸೈನಿಕರಿಗೆ ಈ ರೈಫಲ್ ನೀಡಿದರೆ ನಂತರ ಪ್ಯಾರಾಮಿಲಿಟರಿ ಮತ್ತು ಪೊಲೀಸರಿಗೆ ಈ ರೈಫಲ್ ನೀಡಲು ಸರ್ಕಾರ ಮುಂದಾಗಿದೆ.
ಅಮೆರಿಕದ ಜೊತೆ ಸಹಿ:
ಕಳೆದ ವಾರ ರಕ್ಷಣಾ ಸಚಿವಾಲಯ ಅಮೆರಿಕದ ಸಿಗ್ ಸಾಯರ್ ಜೊತೆ 73 ಸಾವಿರ ಅಸಾಲ್ಟ್ ರೈಫಲ್ ಖರೀದಿ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಭಾರತ ಚೀನಾ ನಡುವಿನ 3,600 ಕಿ.ಮೀ ಗಡಿಯನ್ನು ಕಾಯುವ ಯೋಧರು ಈ ರೈಫಲ್ ಹಿಡಿದು ದೇಶವನ್ನು ಕಾಯಲಿದ್ದಾರೆ.
ಅಮೇಥಿ: ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಘರ್ಜಿಸಿದ್ದು, ಇನ್ನು ಮುಂದೇ ಅಮೇಥಿ ಒಂದು ಕುಟುಂಬ ಬದಲು ‘ಮೇಡ್ ಇನ್ ಅಮೇಥಿ ಎಕೆ-203’ ಹೆಸರನಿಂದ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಮೇಥಿಯ ಸಮಾವೇಶದಲ್ಲಿ ಮಾತನಾಡಿದ ಅವರು, ರಷ್ಯಾದ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಕಲಾಶ್ನಿಕೋವ್ ರೈಫಲ್ಸ್ ಘಟಕದಲ್ಲಿ ಅತ್ಯಾಧುನಿಕ ಎಕೆ-203 ರೈಫಲ್‍ಗಳನ್ನು ಉತ್ಪಾದಿಸಲಾಗುತ್ತಿದೆ. ಈ ಘಟಕ ಭಯೋತ್ಪಾದಕರು ಮತ್ತು ಮಾವೋವಾದಿಗಳ ವಿರುದ್ಧ ಹೋರಾಡಲು ನಮ್ಮ ಯೋಧರಿಗೆ ಹೊಸ ಶಕ್ತಿ ನೀಡುತ್ತದೆ ಎಂದು ಹೇಳಿದರು.
AK–203 is latest derivative of legendary AK-47 rifle. India has signed deal with Russian firm to manufacture 750,000 of these assault rifles which would be given to Army's infantry troops
ಇತ್ತ ಇಂದು ಕೂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ನಡುವಿನ ರಫೇಲ್ ವಾರ್ ಮುಂದುವರಿಯಿತು. ಉತ್ತರ ಪ್ರದೇಶದ ರಾಹುಲ್ ಸ್ವಕ್ಷೇತ್ರ ಅಮೇಥಿಯ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ ನಡೆಸಿದರು. ಅಲ್ಲದೇ ಉಗ್ರರ ಧಮನಕ್ಕೆ ಮೇಡ್ ಇನ್ ಅಮೇಥಿ ನಮ್ಮ ಯೋಧರಿಗೆ ಬಲ ನೀಡಲಿದೆ ಎಂದು ಟಾಂಗ್ ಕೊಟ್ಟರು.
ಅಮೇಥಿಯಲ್ಲಿ ಕಾರ್ಖಾನೆ ಸ್ಥಾಪನೆ ಮಾಡಲು 2007ರಲ್ಲೆ ಶಂಕು ಸ್ಥಾಪನೆ ಮಾಡಿ 2010 ರಲ್ಲಿ ಕಾರ್ಯಾಣೆಯ ಕಾಮಗಾರಿ ಆರಂಭವಾಗಲಿದೆ ಎಂದಿದ್ದರು. ಆದರೆ ಅಂದು ಇಲ್ಲಿ ಯಾವ ಶಸ್ತ್ರಸ್ತ್ರಗಳನ್ನು ಉತ್ಪಾದನೆ ಮಾಡಬೇಕೆಂದು ಅಂದಿನ ಸರ್ಕಾರ ನಿರ್ಧಾರ ಮಾಡಿಯೇ ಇರಲಿಲ್ಲ ಎಂದು ಮೋದಿ ಆರೋಪಿಸಿದರು. ಇದೇ ವೇಳೆ ಕಾರ್ಖಾನೆ ಸ್ಥಾಪನೆ ಮಾಡಲು ಸಹಕಾರ ನೀಡಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಅವರ ಕಾರ್ಯವನ್ನು ಮೆಚ್ಚಿ ಕೃತಜ್ಞನೆ ಸಲ್ಲಿಸಿದರು.
A boost to ‘Make in India’ and India-Russia friendship.
The AK-203, that will be manufactured in Amethi will strengthen our armed forces and help them fight terrorists. pic.twitter.com/l08lQZ4DJz
7.62-39 ಎಂಎಂ ಕ್ಯಾಲಿಬರ್ ಎಕೆ-204 ಗನ್ ಗಳು ಎಕೆ-47 ಸರಣಿಯ ಅತ್ಯಾಧುನಿಕ ತಲೆಮಾರಿನ ಅಸ್ತ್ರಗಳಾಗಿವೆ. 7.50 ಲಕ್ಷ ಎಕೆ-203 ರೈಫಲ್ ಗಳ ಉತ್ಪಾದನೆಗೆ ರಷ್ಯಾ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಬಂದೂಕುಗಳನ್ನು ಭೂ ಸೇನೆ ಯೋಧರಿಗೆ ನೀಡಲಾಗುತ್ತದೆ.
The work done by the NDA Government for Amethi should have been done years ago.
ಬೀಜಿಂಗ್: ಪಾಕಿಸ್ತಾನ ಯಾವತ್ತೂ ಭಯೋತ್ಪಾದನ ವಿರೋಧಿ ದೇಶವಾಗಿದೆ ಎನ್ನುವ ನಂಬಿಕೆ ನಮ್ಮಲ್ಲಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಚೀನಾದ ವೂಹನ್‍ನಲ್ಲಿ ನಡೆದ 16ನೇ ರಷ್ಯಾ-ಭಾರತ-ಚೀನಾ (ಆರ್‍ಐಸಿ) ಸಭೆ ಬಳಿಕ ಮಾತನಾಡಿ ಅವರು, ಪಾಕಿಸ್ತಾನ ಹಾಗೂ ಭಾರತ ನಮಗೆ ಆತ್ಮೀಯ ದೇಶಗಳು. ಪರಸ್ಪರ ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಜೊತೆಗೆ ಪುಲ್ವಾಮಾ ದಾಳಿಯ ತನಿಖೆಗೆ ಉಭಯ ದೇಶಗಳು ಸಹಕಾರ ನೀಡುವ ಮೂಲಕ ಶಾಂತಿ ಹಾಗೂ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ವಾಂಗ್ ಯಿ ತಿಳಿಸಿದ್ದಾರೆ.
China's Foreign Min: Russia, China&India reaffirmed strong opposition to terrorism. At same time we (China) believe Pakistan has always been opposed to terrorism. China appreciates statements from Indian&Pak friends saying they'll exercise restraint&avoid escalation of situation. pic.twitter.com/5eTQHU16L0
ಪಾಕಿಸ್ತಾನ ಹಾಗೂ ಭಾರತದ ನಡುವಿನ ದಾಳಿ, ಪ್ರತಿ ದಾಳಿಯಲ್ಲಿ ಚೀನಾ ಸ್ಥಿರತೆ ಕಾಯ್ದುಕೊಂಡಿದೆ. ಉಭಯ ದೇಶಗಳಲ್ಲಿ ಯಾರ ವಿರುದ್ಧವು ನಾವು ಧ್ವನಿ ಎತ್ತಿಲ್ಲ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟನೆ ನೀಡಿದರು.
ರಷ್ಯಾ-ಚೀನಾ-ಭಾರತ ಭಯೋತ್ಪಾದನೆ ವಿರುದ್ಧ ನಿಂತಿವೆ ಎನ್ನುವುದನ್ನು ಪುನಃ ದೃಢೀಕರಿಸಲಾಗಿದೆ. ಸಂಯಮ ಕಾಯ್ದುಕೊಳ್ಳುತ್ತೇವೆ ಹಾಗೂ ಪರಿಸ್ಥಿತಿಯನ್ನು ಉಲ್ಬಣಗೊಳ್ಳಲು ಬಿಡುವುದಿಲ್ಲವೆಂದು ಭಾರತ-ಪಾಕಿಸ್ತಾನ ಹೇಳಿಕೆ ನೀಡಿರುವುದನ್ನು ಚೀನಾ ಮೆಚ್ಚಿಕೊಳ್ಳುತ್ತದೆ ಎಂದು ತಿಳಿಸಿದರು.
China's Foreign Min: As a mutual friend to both India&Pak we hope that they can conduct dialogue to establish facts through investigation to keep things under control&maintain peace and stability in the region. In this process China is playing a constructive role not the opposite https://t.co/pgydrzLXCH
ಇದಕ್ಕೂ ಮುನ್ನ ಮಾತನಾಡಿದ್ದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಮಂಗಳವಾರ ನಡೆದ ಏರ್ ಸ್ಟ್ರೈಕ್ ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲ. ಭಾರತದ ಮೇಲೆ ಜೈಶ್ ಉಗ್ರ ಸಂಘಟನೆ ಮತ್ತೊಂದು ದಾಳಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಬೇಕು ಎಂದು ನಾವು ಬಯಸುವುದಿಲ್ಲ. ಜವಾಬ್ದಾರಿಯುತವಾಗಿ ಉಗ್ರರನ್ನು ಮಟ್ಟ ಹಾಕಲಾಗುತ್ತದೆ. ಉಗ್ರರ ವಿರುದ್ಧ ಹೋರಾಡಲು ನಮ್ಮ ಜೊತೆ ಅನೇಕ ರಾಷ್ಟ್ರಗಳು ನಿಂತಿವೆ. ಇದು ನನಗೆ ತುಂಬಾ ಖುಷಿ ತಂದುಕೊಟ್ಟಿದೆ ಎಂದು ತಿಳಿಸಿದ್ದರು.
China: EAM Sushma Swaraj, Chinese Foreign Minister Wang Yi and Russian Foreign Minister Sergey Lavrov at the 16th Foreign Ministers meeting of Russia-India-China (RIC) in Wuzhen. pic.twitter.com/o12IEvg5Oe
ಬೀಜಿಂಗ್: ಭಯೋತ್ಪಾದಕರಿಂದ ನಾವು ಎಂದಿಗೂ ಮಾನವೀಯತೆಯನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಉಗ್ರರನ್ನು ಸೆದೆ ಬಡಿಯಲು ವಿಶ್ವದ ರಾಷ್ಟ್ರಗಳು ಒಂದಾಗಿ ಹೋರಾಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಚೀನಾದ ವೂಹನ್‍ನಲ್ಲಿ ನಡೆದ 16ನೇ ರಷ್ಯಾ-ಭಾರತ-ಚೀನಾ (ಆರ್‌ಐಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಸುಷ್ಮಾ ಸ್ವರಾಜ್ ಭಾಗವಹಿಸಿದ್ದರು. ಈ ವೇಳೆ ಮಂಗಳವಾರ ನಡೆದ ಏರ್ ಸ್ಟ್ರೈಕ್ ವಿಚಾರವಾಗಿ ಚೀನಾ ಹಾಗೂ ರಷ್ಯಾ ವಿದೇಶಾಂಗ ಸಚಿವರಿಗೆ ಮಾಹಿತಿ ನೀಡಿದ ಅವರು, ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶ ನೀಡುತ್ತಿದ್ದು, ಭಾರತದ ಮೇಲೆ ದಾಳಿ ಮಾಡಲು ಉಗ್ರರು ಪ್ಲಾನ್ ರೂಪಿಸಿದ್ದರು. ಹೀಗಾಗಿ ಸ್ವಯಂ ರಕ್ಷಣೆಗಾಗಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂರು ಕ್ಯಾಂಪ್‍ಗಳ ಮೇಲೆ ದಾಳಿ ಮಾಡಿದ್ದೇವೆ. ನಾಗರಿಕರ ಸಾವು ನೋವು ತಪ್ಪಿಸಲು ದಾಳಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
EAM: In the light of continuing refusal of Pak to acknowledge&act against terror groups on its territory&based on credible info that JeM was planning other attacks in parts of India, GoI decided to take preemptive action&target was selected in order to avoid civilian casualties. pic.twitter.com/9g08wQOkZ9
ಇದು ಯಾವುದೇ ಮಿಲಿಟರಿ ಕಾರ್ಯಾಚರಣೆಯಲ್ಲ. ಭಾರತದ ಮೇಲೆ ಜೈಶ್ ಉಗ್ರ ಸಂಘಟನೆ ಮತ್ತೊಂದು ದಾಳಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಬೇಕು ಎಂದು ನಾವು ಬಯಸುವುದಿಲ್ಲ. ಜವಾಬ್ದಾರಿಯುತವಾಗಿ ಉಗ್ರರನ್ನು ಮಟ್ಟ ಹಾಕಲಾಗುತ್ತದೆ ಎಂದು ಸುಷ್ಮಾ ಸ್ವರಾಜ್ ತಿಳಿದರು.
ಉಗ್ರರ ವಿರುದ್ಧ ಹೋರಾಡಲು ನಮ್ಮ ಜೊತೆ ಅನೇಕ ರಾಷ್ಟ್ರಗಳು ನಿಂತಿವೆ. ಇದು ನನಗೆ ತುಂಬಾ ಖುಷಿ ತಂದುಕೊಟ್ಟಿದೆ. ಭಾರತ ಉಗ್ರರ ವಿರುದ್ಧ ಕ್ರಮಕೈಗೊಂಡಿದೆ. ನಮ್ಮ ಗುರಿ ಭಯೋತ್ಪಾದನೆಯನ್ನ ನಿಲ್ಲಿಸುವುದು. ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ಬಿಡಬೇಕು. ಭಾರತೀಯ ವಾಯು ಪಡೆ ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ಮಾಡಿದೆ. ಅಲ್ಲಿನ ನಿವಾಸಿಗಳ ವಿರುದ್ಧ ಯುದ್ಧ ಸಾರಿಲ್ಲ ಎಂದು ಹೇಳಿದರು.
EAM: It wasn't a military op, no military installation targeted. Objective was to act against terrorist infrastructure of JeM to preempt another terror attack in India. India doesn't wish to see further escalation of situation. It'll continue to act with responsibility&restraint. pic.twitter.com/oEJWksZlsa
ಭಾರತ-ಚೀನಾ ಸಂಬಂಧ ಉಭಯ ರಾಷ್ಟ್ರಗಳಿಗೆ ಮುಖ್ಯವಾಗಿದೆ. ವೂಹನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ರಾಷ್ಟ್ರಪತಿ ಕ್ಸಿ ಜಿನ್‍ಪಿಂಗ್ ಅವರ ನಡುವೆ 2018 ಏಪ್ರಿಲ್‍ನಲ್ಲಿ ನಡೆದ ಸಭೆಯಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ ಎಂದು ಚೀನಾಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಭಯೋತ್ಪಾದನೆಯನ್ನು ಹತ್ತಿಕ್ಕಲು ನಮಗೆ ಜಗತ್ತಿನ ಸಹಾಯ ಬೇಕಿದೆ. ಪುಲ್ವಾಮಾ ದಾಳಿಯಲ್ಲಿ 40 ವೀರ ಯೋಧರು ಹುತಾತ್ಮರಾಗಿದ್ದಾರೆ. ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನದ ಕುಮ್ಮಕ್ಕಿನಿಂದ ದಾಳಿ ಮಾಡಿಸಿದೆ ಎಂದು ಕಿಡಿಕಾರಿದರು.
EAM Sushma Swaraj in Wuzhen, China: As far as Pulwama is concerned, I had raised this issue in the bilateral meeting with Mr Wang Yi and also at RIC (Russia-India-China) forum. pic.twitter.com/2bs8UZ1OTe
ಮಾಸ್ಕೋ: ಟರ್ಕಿಷ್, ಲಿಬಿಯನ್ ಹಾಗೂ ಭಾರತೀಯ ನಾವಿಕರು ಕಾರ್ಯ ನಿರ್ವಹಿಸುತ್ತಿದ್ದ 2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಷ್ಯಾದ ಕೆರ್ಚ್ ಜಲಸಂಧಿ ಬಳಿ ಸೋಮವಾರದಂದು ನಡೆದಿದೆ.
ಸೋಮವಾರದಂದು ರಷ್ಯಾದ ಪ್ರಾದೇಶಿಕ ಜಲಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ದುರಂತಕ್ಕೆ ಒಳಗಾದ 2 ಹಡಗುಗಳ ಮೇಲೆ ಕೂಡ ತಾಂಜಾನಿಯನ್ ಭಾವುಟವನ್ನು ಅಳವಡಿಸಲಾಗಿತ್ತು. 2 ಹಡಗುಗಳ ಪೈಕಿ ಒಂದು ಲಿಕ್ವಿಫಾಯ್ದ್ ನ್ಯಾಚುರಲ್ ಗಾಸ್(ಎಲ್‍ಎನ್‍ಜಿ) ಸಾಗಿಸುತ್ತಿದ್ದರೆ, ಇನ್ನೊಂದು ಹಡಗು ಟ್ಯಾಂಕರ್ ಗಳನ್ನು ಸಾಗಿಸುತ್ತಿತ್ತು. ಒಂದು ಎಲ್‍ಎನ್‍ಜಿ ತುಂಬಿದ್ದ ಹಡಗಿನಿಂದ ಟ್ಯಾಕರ್ ಹಡಗಿಗೆ ಇಂಧನವನ್ನು ವರ್ಗಾವಣೆ ಮಾಡುತ್ತಿದ್ದಾಗ ಈ ಅಗ್ನಿ ಅವಘಡ ಸಂಭವಿಸಿದೆ. ಇದನ್ನೂ ಓದಿ:ಕೂರ್ಮಗಡ ಬೋಟ್ ದುರಂತ- ಸಾವಿನ ಸಂಖ್ಯೆ 13ಕ್ಕೆ ಏರಿಕೆ
ಒಂದು ಹಡಗಿನಲ್ಲಿ 8 ಮಂದಿ ಭಾರತೀಯರು ಹಾಗೂ 9 ಮಂದಿ ಟರ್ಕಿ ನಾವಿಕರು ಸೇರಿ ಒಟ್ಟು 17 ಮಂದಿ ಇದ್ದರು. ಇನ್ನೊಂದರಲ್ಲಿ 7 ಮಂದಿ ಭಾರತೀಯರು, 7 ಮಂದಿ ಟರ್ಕಿ ನಾವಿಕರು ಹಾಗೂ ಓರ್ವ ಲಿಬಿಯಾದ ನಾವಿಕ ಸೇರಿ ಒಟ್ಟು 15 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ದುರ್ಘಟನೆಯಿಂದ ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟಿದ್ದು, 9 ಮಂದಿ ಕಾಣೆಯಾಗಿದ್ದಾರೆ. ಅಲ್ಲದೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಲವು ನಾವಿಕರು ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು ಇವರೆಗೆ 12 ಮಂದಿಯನ್ನು ರಕ್ಷಣಾ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಹಾಗೆಯೇ ಕಾಣೆಯಾದವರನ್ನು ಹುಡುಕುವ ಕೆಲಸವನ್ನು ರಕ್ಷಣಾ ಪಡೆ ಮುಂದುವರಿಸಿದೆ ಎಂದು ವರದಿಯಾಗಿದೆ.
ಮಾಸ್ಕೋ: ಅಕ್ರಮವಾಗಿ ನಡೆಯುತ್ತಿದ್ದ ಸೆಕ್ಸ್ ಕ್ಲಬ್ ಮೇಲೆ ರಷ್ಯಾ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಆರೋಪಿಗಳು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಅನುಸರಿಸಿದ ತಂತ್ರ ಸಖತ್ ವೈರಲ್ ಆಗಿದೆ.
ರಷ್ಯಾದ ರೊಸ್ತೊವ್-ಆನ್-ಡಾನ್ ನಗರದ ಬಿಡಿಎಸ್‍ಎಂ ಕ್ಲಬ್‍ನಲ್ಲಿ ಅಕ್ರಮವಾಗಿ ಸೆಕ್ಸ್ ಚಟುವಟಿಗಳು ನಡೆಯುತ್ತಿತ್ತು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಕ್ಲಬ್ ಮೇಲೆ ದಾಳಿ ಮಾಡಿದ್ದರು. ಆರೋಪಿಗಳು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡ ರೀತಿ, ನಗೆ ತರುವಂತಿದೆ.
ಆರೋಪಿಗಳು ಮಾಡಿದ್ದೇನು?:
ಪೊಲೀಸ್ ದಾಳಿಯನ್ನು ಅರಿತ ಸೆಕ್ಸ್ ನಿರತ ಮಹಿಳೆಯರು ಹಾಗೂ ಪುರುಷರು ಬೆನ್ನು ಮೇಲೆ ಮಾಡಿ, ದೀಢ್ ನಮಸ್ಕಾರ ಹಾಕುವ ರೀತಿ ಮಲಗಿದ್ದಾರೆ. ಉಳಿದಂತೆ ಕೆಲವರು ಮಂಡಿ ಊರಿ, ಕೆಲಕ್ಕೆ ಕತ್ತು ತಾಗಿಸಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ರೀತಿಯಲ್ಲಿಯೂ ಮುಖ ಕಾಣಬಾರದು ಅಂತಾ ಕೈಗಳಿಂದ ಮುಚ್ಚಿಕೊಂಡಿದ್ದಾರೆ. ಅವರು ಬಳಸಿದ ತಂತ್ರ ನೋಡಿ ಪೊಲೀಸರು ತಬ್ಬಿಬ್ಬಾಗಿದ್ದಾರೆ. ಆದರೆ ಈ ಕುರಿತು ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ದಾಳಿಯ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಬಿಡಿಎಸ್‍ಎಂ ಕ್ಲಬ್‍ನಲ್ಲಿ ನಡೆದ ಈ ದಾಳಿಯ ಕುರಿತು ನವೆಂಬರ್ 4ರಂದು ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಪೊಲೀಸರು ದಾಳಿ ಮಾಡಿರುವ ಕುರಿತು ಮಾಹಿತಿ ನೀಡುತ್ತಾರೆ. ಆದರೆ ಈ ಬಾರಿ ಯಾವುದೇ ಮಾಹಿತಿ ನೀಡದೇ ಚರ್ಚೆಗೆ ಕಾರಣವಾಗಿದೆ.
ಬಿಡಿಎಸ್‍ಎಂ ಕ್ಲಬ್ ಮೇಲಿನ ದಾಳಿ ವಿಚಾರವನ್ನು ಪೊಲೀಸ್ ಇಲಾಖೆ ಏಕೆ ಬಚ್ಚಿಟ್ಟಿತ್ತು? ಪ್ರಕರಣವನ್ನು ಕೈಬಿಡುವಂತೆ ಲಂಚ ನೀಡಲಾಗಿತ್ತೇ? ಯಾವ ಕಾರಣಕ್ಕೆ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ ಎಂದು ವರದಿಯಾಗಿದೆ.
ರೋಮ್: ವೇಗವಾಗಿ ಚಲಿಸುತ್ತಿದ್ದ ಎಸ್ಕಲೇಟರ್ ಮುರಿದು 20 ಮಂದಿ ಗಾಯಗೊಂಡ ಘಟನೆ ಇಟಲಿಯ ರೋಮ್‍ನಲ್ಲಿ ನಡೆದಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ರೋಮ್ ನಗರದ ರಿಪಬ್ಲಿಕ್ ಮೆಟ್ರೋ ಸ್ಟೇಷನ್‍ನಲ್ಲಿ ಈ ಅವಘಡ ಸಂಭವಿಸಿದ್ದು, ಪ್ರಯಾಣಿಕರು ಸೇರಿದಂತೆ ರಷ್ಯಾ ಫುಟ್‍ಬಾಲ್ ತಂಡ ಅಭಿಮಾನಿಗಳು ಗಾಯಗೊಂಡಿದ್ದಾರೆ. ರೋಮಾ ಹಾಗೂ ಸಿಎಸ್‍ಕೆಎ ಮಾಸ್ಕೋ ಫುಟ್‍ಬಾಲ್ ತಂಡಗಳ ನಡುವೆ ಇಂದು ಚಾಂಪಿಯನ್ಸ್ ಲೀಗ್ ಪಂದ್ಯವು ರೋಮ್‍ನಲ್ಲಿ ನಡೆಯುತ್ತಿತ್ತು. ಹೀಗಾಗಿ ಪಂದ್ಯ ವಿಕ್ಷಣೆಗಾಗಿ ರಷ್ಯಾದ ಅನೇಕ ಫುಟ್‍ಬಾಲ್ ಅಭಿಮಾನಿಗಳು ನಗರಕ್ಕೆ ಆಗಮಿಸಿದ್ದರು.
ಮೆಟ್ರೋ ಸ್ಟೇಷನ್‍ನ ಎಸ್ಕಲೇಟರ್ ಮೇಲೆ ಹೆಚ್ಚು ಜನರು ಹತ್ತಿದ್ದಾರೆ. ಪರಿಣಾಮ ಅತಿಯಾದ ಭಾರ ತಾಳಲಾರದೇ ಎಸ್ಕಲೇಟರ್‍ನ ಒಂದು ಭಾಗ ಮುರಿದಿದೆ. ಎಸ್ಕಲೇಟರ್ ವೇಗವಾಗಿ ಚಲಿಸುತ್ತಿದ್ದರಿಂದ ಪ್ರಯಾಣಿಕರು ಕೆಳಗೆ ಕುಸಿದು, ಒಬ್ಬರ ಮೇಲೋಬ್ಬರು ಬಿದ್ದು ಗಾಯಗೊಂಡಿದ್ದಾರೆ. ಇದೇ ವೇಳೆ ಯುವಕನೊಬ್ಬ ಅನಾಹುತದಿಂದ ಪಾರಾಗಲು, ಎಸ್ಕೇಲೇಟರ್ ಪಕ್ಕದ ಕಟ್ಟಿಯ ಮೇಲೆ ಜೀಗಿದು ಅನಾಹುತದಿಂದ ತಪ್ಪಿಸಿಕೊಂಡಿದ್ದಾನೆ. ಎಸ್ಕಲೇಟರ್ ನಿಲ್ಲುತ್ತಿದ್ದಂತೆ ಸ್ಥಳದಲ್ಲಿದ್ದ ಅನೇಕರು ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಇತ್ತ ಜನರ ಕೆಳಗೆ ಸಿಕ್ಕು, ಗಂಭೀರವಾಗಿ ಗಾಯಗೊಂಡಿದ್ದ 20 ಜನರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕುರಿತು ರೋಮ್ ಮೇಯರ್ ವರ್ಜಿನಿಯಾ ರಾಗ್ಗಿ ಅವರು ಪ್ರತಿಕ್ರಿಯೆ ನೀಡಿ, ರಷ್ಯಾ ಫುಟ್‍ಬಾಲ್ ಅಭಿಮಾನಿಗಳು 1,500 ಜನರು ನಗರಕ್ಕೆ ಆಗಮಿಸಿದ್ದು, ಅವರು ಎಸ್ಕಲೇಟರ್ ಮೇಲೆ ಡಾನ್ಸ್ ಮಾಡಿದ್ದಾರೆ. ಪಂದ್ಯ ವೀಕ್ಷಣೆಗೆ ತಾ ಮುಂದು, ನಾ ಮುಂದು ಅಂತಾ ಹೋಗಲು, ರೌಡಿಗಳಂತೆ ವರ್ತಿಸಿದ್ದಾರೆ, ಹೀಗಾಗಿ ಅನಾಹುತ ಸಂಭವಿಸಿದೆ ಎಂದು ದೂರಿದ್ದಾರೆ.
ಎಸ್ಕಲೇಟರ್ ಅಸಮರ್ಪಕ ಕಾರ್ಯನಿರ್ವಹಿಸದ ಪರಿಣಾಮ ಭಾರೀ ಅನಾಹುತ ಸಂಭವಿಸಿದೆ ಅಂತಾ ಕೆಲವರು ದೂರಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೇವಲ 20 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ನವದೆಹಲಿ: ಇಂಟರ್ ನ್ಯಾಷನಲ್ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಶನ್ (ಐಬಿಎಸ್) ಅಂಡರ್ 16 ಸ್ನೂಕರ್ ಚಾಂಪಿಯನ್‍ಶಿಪ್‍ನಲ್ಲಿ ರಾಜ್ಯದ ಕೀರ್ತನಾ ಪಾಂಡಿಯನ್ ಪ್ರಶಸ್ತಿ ಗಿಟ್ಟಿಸಿಕೊಂಡು, ಹೊಸ ದಾಖಲೆ ಬರೆದಿದ್ದಾರೆ.
ರಷ್ಯಾದಲ್ಲಿ ನಡೆದ ವಿಶ್ವ ಅಂಡರ್ 16 ಸ್ನೂಕರ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕೀರ್ತನಾ ಅವರು, ಫೈನಲ್‍ನಲ್ಲಿ ಬೆಲೂರಸ್‍ನ ಅಲ್ಬಿನಾ ಲೆಸ್ಚಕ್ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದರು.
ಕೋಲಾರ ಮೂಲದ ಕೀರ್ತನಾ ಅವರು ಇದೇ ಮೊದಲ ಬಾರಿಗೆ ಬಾಲಕಿಯರ ವಿಭಾಗದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿಕ್ಕದಿಂದಲೂ ಸ್ನೂಕರ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಕೀರ್ತನಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
Keerthana Pandian makes India proud as she wins GOLD after defeating Albina Leschuk 3-1 in the Final at U16 women's IBSF #Snooker Championships , Saint Petersburg / Russia 2018 pic.twitter.com/QEMh0yj6cD
World Champion alert! Keerthana Pandian wins the IBSF U-16 World Snooker Championship in Russia. A glorious moment for India, Keerthana and her family, the cue sports fraternity, her snooker coach C Ravi and yours truly – her mind coach. Time to celebrate! 🏆🥇👏👊🏻 pic.twitter.com/9SPqP2SePg
ನವದೆಹಲಿ: ರಷ್ಯಾ ಜೊತೆಗಿನ ಮಾತುಕತೆಯ ವೇಳೆ ಭಾರತ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿ ಸೇರಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ.
ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಸಭೆ ನಡೆಸಿದರು. ಮಾತುಕತೆಯ ವೇಳೆ ಎಸ್ – 400 ವಾಯು ರಕ್ಷಣಾ ವ್ಯವಸ್ಥೆ, ಬಾಹ್ಯಾಕಾಶ ಸಹಕಾರ ಸೇರಿದಂತೆ ಒಟ್ಟು 8 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಭಾರತ 5.43 ಶತಕೋಟಿ ಡಾಲರ್(ಅಂದಾಜು 40 ಸಾವಿರ ಕೋಟಿ ರೂ.) ವೆಚ್ಚದಲ್ಲಿ 5 ಎಸ್-400 ಟ್ರಯಂಫ್ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಏನಿದು ವಿಶೇಷ ವಾಯು ರಕ್ಷಣಾ ವ್ಯವಸ್ಥೆ? ಹೇಗೆ ಕೆಲಸ ಮಾಡುತ್ತದೆ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಏನಿದು ಎಸ್-400 ಏರ್ ಟ್ರಯಂಫ್?
ಸುಲಭವಾಗಿ ಒಂದು ವಾಕ್ಯದಲ್ಲೇ ಹೇಳುವುದಾದರೆ ಆಕಾಶದಲ್ಲೇ ಶತ್ರುಗಳನ್ನು ನಿರ್ನಾಮ ಮಾಡುವ ಸಾಮರ್ಥ್ಯ ಇರುವ ವಿಶೇಷ ವಾಯು ರಕ್ಷಣಾ ವ್ಯವಸ್ಥೆ. ಶತ್ರು ರಾಷ್ಟ್ರಗಳು ಕ್ಷಿಪಣಿಗಳು ಉಡಾಯಿಸಿದರೆ ಅದನ್ನು ಹೊಡೆದು ಉರುಳಿಸುವುದು ಸುಲಭದ ಮಾತಲ್ಲ. ಆದರೆ ವೇಗವಾಗಿ ಬರುವ ಕ್ಷಿಪಣಿಯನ್ನು ಆಕಾಶದಲ್ಲಿ ಹೊಡೆದು ಉರುಳಿಸುವ ಸಾಮರ್ಥ್ಯ ಈ ಎಸ್-400 ಟ್ರಯಂಫ್ ಗೆ ಇದೆ. ರಷ್ಯಾ 2007ರಲ್ಲಿ ಮೊದಲ ಬಾರಿಗೆ ಈ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು.
ಹೇಗೆ ಕೆಲಸ ಮಾಡುತ್ತೆ?
ನೆಲದಲ್ಲೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಶತ್ರು ಪಡೆಗಳ ಯುದ್ಧ ವಿಮಾನ ಹಾಗೂ ಕ್ಷಿಪಣಿ ದಾಳಿಯನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ದೀರ್ಘ ದೂರ ಕ್ರಮಿಸಬಲ್ಲ ನೆಲದಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದ್ದು, 2007 ರಲ್ಲಿ ನಿರ್ಮಾಣಗೊಂಡಿದ್ದ ಎಸ್-300 ಶ್ರೇಣಿಯ ಹೊಸ ಆವೃತ್ತಿ ಇದಾಗಿದೆ.
380 ಕಿ.ಮೀ ವ್ಯಾಪ್ತಿ ಒಳಗಡೆ ಬರುವ ಹಲವು ಕ್ಷಿಪಣಿ ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಗುರುತಿಸಿ ಹೊಡೆದುರುಳಿಸುವ ಸೆಲ್ಫ್ ಸಿಸ್ಟಂ ವ್ಯವಸ್ಥೆ, ಬಹುಬಳಕೆಯ ರೇಡಾರ್ ಮತ್ತು ಗುರಿ ನಿಗದಿ ಉಡಾವಣೆ ವ್ಯವಸ್ಥೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಇದು ಒಳಗೊಂಡಿದೆ. ಲಾರಿಯ ಹಿಂಭಾಗದಲ್ಲಿ ವಾಯು ರಕ್ಷಣಾ ವ್ಯವಸ್ಥೆ ಇರುವ ಕಾರಣ ಯಾವ ಪ್ರದೇಶಕ್ಕೂ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಅಷ್ಟೇ ಅಲ್ಲದೇ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ. ಶತ್ರುಗಳ ದಾಳಿಯ ದಿಕ್ಕು ತಪ್ಪಿಸಲು ಏಕಕಾಲದಲ್ಲಿ 4 ಭಾಗಗಳಲ್ಲಿ ಕ್ಷಿಪಣಿಗಳನ್ನು ಗಗನಕ್ಕೆ ಚಿಮ್ಮಿಸಿ ರಕ್ಷಣಾ ಕವಚ ನಿರ್ಮಿಸಬಹುದಾಗಿದೆ. ಅಲ್ಲದೇ ಶತ್ರುನೆಲೆಯಿಂದ ತೂರಿ ಬರುವ ಮಾನವ ರಹಿತ ವಿಮಾನ, ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತಕ್ಕೆ ಅಗತ್ಯ ಏಕೆ?
ಪಾಕ್ ಬಳಿ ಇರುವ 20 ಫೈಟರ್ ಸ್ಕ್ವಾಡ್ ಡ್ರೋನ್ಸ್ ಹಾಗೂ ಚೀನಾ ಬಳಿ ಇರುವ ಎಫ್-16, ಜೆ-17 ಆವೃತ್ತಿಯ ಫೈಟರ್ ಡ್ರೋನ್ ಹಾಗೂ 800 4-ಜೆನ್ ಫೈಟರ್ ವಿಮಾನಗಳಿಗೆ ಎಸ್-400 ವಾಯು ರಕ್ಷಣಾ ವ್ಯವಸ್ಥೆ ದಿಟ್ಟ ಉತ್ತರ ನೀಡಲಿದೆ. ಭಾರತ ಈ ವ್ಯವಸ್ಥೆಯನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ಸಿದ್ಧತೆ ನಡೆಸಿದೆ. ಭಾರತಕ್ಕೆ ಈ ವ್ಯವಸ್ಥೆ ಬಂದರೆ ವಾಯು ಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ.
ಯಾವೆಲ್ಲ ದೇಶಗಳಲ್ಲಿ ಈ ವ್ಯವಸ್ಥೆ ಇದೆ?
ರಷ್ಯಾದಿಂದ ಈ ವ್ಯವಸ್ಥೆಯನ್ನು ಮೊದಲು ಚೀನಾ ಖರೀದಿ ಮಾಡಿದೆ. 2014ರಲ್ಲಿ ಚೀನಾ ಒಪ್ಪಂದ ಮಾಡಿಕೊಂಡಿದ್ದು ಈಗಾಗಲೇ ಎಸ್-400 ಕ್ಷಿಪಣಿ ವ್ಯವಸ್ಥೆ ಚೀನಾಗೆ ತಲುಪಿದೆ. ಎಷ್ಟು ಪ್ರಮಾಣದಲ್ಲಿ ರಷ್ಯಾ ವಿತರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ. ಕಳೆದ ವರ್ಷ ಟರ್ಕಿ ಜೊತೆ ಒಪ್ಪಂದ ನಡೆದಿದೆ. ಭಾರತ ಅಷ್ಟೇ ಅಲ್ಲದೇ ಕತಾರ್ ಎಸ್-400 ಖರೀದಿಸಲು ಆಸಕ್ತಿ ತೋರಿಸಿದೆ.
ಒಪ್ಪಂದದ ಉದ್ದೇಶ ಏನು?
ರಷ್ಯಾದೊಂದಿಗೆ ಚೀನಾ ಉತ್ತಮ ಬಾಂಧವ್ಯ ಹೊಂದಿದರೆ ಭವಿಷ್ಯದಲ್ಲಿ ಭಾರತಕ್ಕೆ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣ ಮೋದಿ ವ್ಲಾದಿಮಿರ್ ಪುಟಿನ್ ಜೊತೆ ಉತ್ತಮ ಸಂಪರ್ಕ ಬೆಳೆಸಿದ್ದರು. ಇದಕ್ಕಾಗಿ ಕಳೆದ ಮೇನಲ್ಲಿ ರಷ್ಯಾಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದರು. ಈ ವೇಳೆಯೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಖರೀದಿಸುವ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ವಿಶ್ವದ ಮಿಲಿಟರಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಭಾರತಕ್ಕೆ ಎಸ್-400 ಸಹಕಾರಿಯಾಗಲಿದೆ.
ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
ರಷ್ಯಾದೊಂದಿಗಿನ ಭಾರತದ ಉತ್ತಮ ಸಂಬಂಧ ಹೊಂದಿರುವುದು ಅಮೆರಿಕ ಹಾಗೂ ಚೀನಾ, ಪಾಕಿಸ್ತಾನದ ನಿದ್ದೆಗೆಡಿಸಿದೆ. ಈಗಾಗಲೇ ಅಮೆರಿಕವೂ ರಷ್ಯಾ ಯುದ್ಧ ಸಾಮಾಗ್ರಿ ಖರೀದಿ ಮೇಲೆ ನಿರ್ಬಂಧ ವಿಧಿಸಿದೆ. ಇದರ ನಡುವೆಯೂ ಭಾರತ ದಿಟ್ಟ ನಿರ್ಧಾರ ಮಾಡಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಭಾರತದ ನೆರೆ ದೇಶಗಳ ಪೈಕಿ ಚೀನಾ ಮತ್ತು ಪಾಕಿಸ್ತಾನದಿಂದಲೇ ಕಿರಿಕ್ ಜಾಸ್ತಿ. ಆಗಾಗ ಖಂಡಾಂತರ ಕ್ಷಿಪಣಿಗಳನ್ನು ಚೀನಾ, ಪಾಕಿಸ್ತಾನ ಪರೀಕ್ಷೆ ಮಾಡುತ್ತಲೇ ಇರುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಿ ಆಗಬಹುದಾದ ದಾಳಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಭಾರತಕ್ಕೆ ಸಿಗಲಿದೆ.
ಅಮೆರಿಕ ಎಚ್ಚರಿಕೆ:
ಅಮೆರಿಕ ಯಾವಾಗಲೂ ತನ್ನ ಆರ್ಥಿಕ ಪ್ರಭಾವ ಬಳಸಿ ಇತರ ರಾಷ್ಟ್ರಗಳ ಆಂತರಿಕ ವಿಚಾರಕ್ಕೆ ತಲೆ ಹಾಕುತ್ತಿರುತ್ತದೆ. ರಷ್ಯಾ, ಇರಾನ್, ದಕ್ಷಿಣ ಕೊರಿಯಾ ದೇಶಗಳಿಗೆ ಆರ್ಥಿಕ ವ್ಯವಹಾರ ನಡೆಸುವ ಕುರಿತು ದಿಗ್ಬಂಧನ ವಿಧಿಸಿರುವ ಅಮೆರಿಕ ವಿಶ್ವದ ಇತರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಇದನ್ನು ಮೀರಿ ಇತರ ದೇಶಗಳು ಈ ರಾಷ್ಟ್ರಗಳೊಂದಿಗೆ ಹೆಚ್ಚಿನ ಆರ್ಥಿಕ ಒಪ್ಪಂದ ಮಾಡಿಕೊಂಡರೆ ಆ ದೇಶಗಳ ಮೇಲೂ ದಿಗ್ಬಂಧನ ವಿಧಿಸುವ ಅವಕಾಶವನ್ನು `ಕಾಟ್ಸಾ’ ಒಪ್ಪಂದ ಮೂಲಕ ಅಮೆರಿಕ ಹೊಂದಿದೆ. ಭಾರತ ಅಮೆರಿಕದಿಂದ ಸಾಕಷ್ಟು ಪ್ರಮಣದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ನಿರ್ಬಂಧ ಹೇರಲಿಕ್ಕಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಏನಿದು ಕಾಟ್ಸಾ?
ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.
ವಿಶ್ವಸಂಸ್ಥೆಯ ಕಾಯ್ದೆಯಲ್ಲ:
ರಷ್ಯಾದಿಂದ ಟ್ರಯಂಫ್ ಖರೀದಿಗೆ ಅಮೆರಿಕದಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಟ್ಸಾ ಕಾಯ್ದೆ ಅಮೆರಿಕದ್ದು ಹೊರತು ವಿಶ್ವಸಂಸ್ಥೆಯದ್ದಲ್ಲ. ಇದು ಭಾರತ ಮತ್ತು ರಷ್ಯಾದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದರು.