ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಕಾಮೋಡ ದಟ್ಟವಾಗುತ್ತಿದ್ದು, ಉಕ್ರೇನ್‍ನಲ್ಲಿರುವ ಭಾರತೀಯರು ದೇಶಕ್ಕೆ ಮರಳುವಂತೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ. ಉಕ್ರೇನ್ ರಾಜಧಾನಿ ಕೀವ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಈ ಮಾಹಿತಿ ರವಾನಿಸಿದ್ದು ವಿದ್ಯಾರ್ಥಿಗಳು ಆದ್ಯತೆಯಲ್ಲಿ ದೇಶ ತೊರೆಯುವಂತೆ ಹೇಳಿದೆ.
ಉಕ್ರೇನ್‍ನಲ್ಲಿ ಅನಿಶ್ಚಿತೆ ಹೆಚ್ಚುತ್ತಿದೆ, ರಷ್ಯಾ ಯಾವುದೇ ಸಂದರ್ಭದಲ್ಲೂ ದಾಳಿ ಮಾಡುವ ಸಾಧ್ಯತೆಗಳಿದ್ದು ಯುದ್ಧದ ವಾತಾವರಣ ಹೆಚ್ಚಾಗಿದೆ. ಹೀಗಾಗಿ ಅಲ್ಲಿ ಅನಿವಾರ್ಯವಲ್ಲದೇ ಭಾರತೀಯರು, ವಿಶೇಷವಾಗಿ ವಿದ್ಯಾರ್ಥಿಗಳು ದೇಶಕ್ಕೆ ಮರಳಿ ಎಂದು ತಿಳಿಸಲಾಗಿದೆ. ಅಲ್ಲದೇ ಉಕ್ರೇನ್‍ಗೆ ಅನಿವಾರ್ಯವಲ್ಲದ ಪ್ರಯಾಣ ಮಾಡದಂತೆ ಭಾರತೀಯರಿಗೆ ಮನವಿ ಮಾಡಿದೆ. ಇದನ್ನೂ ಓದಿ:ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಅವಘಡ – ವಿದ್ಯುತ್ ಉತ್ಪಾದನೆ ಸ್ಥಗಿತ
ಕೀವ್‍ನಲ್ಲಿರುವ ರಾಯಭಾರ ಕಚೇರಿಯು ಉಕ್ರೇನ್‍ನಲ್ಲಿರುವ ಭಾರತೀಯರನ್ನು ತನ್ನ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮನವಿ ಮಾಡಿದೆ, ಅಗತ್ಯವಿದ್ದಾಗ ಸಂಪರ್ಕಿಸುವುದಾಗಿ ಅದು ತಿಳಿಸಿದೆ. ಉಕ್ರೇನ್‍ನಲ್ಲಿ ವಾಸಿಸುವ ಭಾರತೀಯರಿಗೆ ಎಲ್ಲಾ ಸೇವೆಗಳನ್ನು ಒದಗಿಸುತ್ತದೆ ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ. ಇದಕ್ಕೂ ಮೊದಲು ಜನವರಿ 26 ರಂದು, ಭಾರತೀಯ ರಾಯಭಾರ ಕಚೇರಿಯು ಉಕ್ರೇನ್‍ನಲ್ಲಿ ವಾಸಿಸುವ ಎಲ್ಲಾ ಭಾರತೀಯರನ್ನು ನೋಂದಾಯಿಸಲು ಕೇಳಿಕೊಂಡಿದ್ದು, ಯಾವುದೇ ಮಾಹಿತಿಯನ್ನು ತ್ವರಿತವಾಗಿ ರವಾನಿಸುವ ಸಾಧ್ಯತೆಗಳಿದೆ. ಇದನ್ನೂ ಓದಿ:ಹೋಟೆಲ್‍ನಲ್ಲಿ ಊಟ, ತಿಂಡಿ ಸಪ್ಲೈಗೆ ಬಂತು ರೋಬೋ – ಮೈಸೂರಿನ ಜನತೆಯ ಮನಗೆದ್ದ ಸಪ್ಲೇಯರ್ ಲೇಡಿ
ರಷ್ಯಾ ಉಕ್ರೇನ್ ಗಡಿ ವಿವಾದ ತಾರಕಕ್ಕೇರಿದ್ದು ಎರಡು ಕಡೆಯ ಸೇನೆಗಳು ಜಮಾವಣೆಗೊಂಡಿವೆ. ರಷ್ಯಾ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದ್ದು ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ಉಕ್ರೇನ್ ಆರೋಪಿಸಿದೆ. ಆದರೆ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ. ಈ ನಡುವೆ ರಷ್ಯಾ-ಉಕ್ರೇನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವೂ ಸೇರಿದಂತೆ ಯಾವುದೇ ರಾಷ್ಟ್ರದ ಪಾತ್ರವನ್ನು ಅಮೆರಿಕ ಸ್ವಾಗತಿಸುತ್ತದೆ ಎಂದು ಅಮೆರಿಕ ಈ ಹಿಂದೆ ಶ್ವೇತಭವನದ ವಕ್ತಾರರು ಹೇಳಿದ್ದರು.
ಲಂಡನ್/ಕಿವ್: ರಷ್ಯಾ-ಉಕ್ರೇನ್ ಬಿಕ್ಕಟ್ಟು (Russia Ukraine Crisis) ತೀವ್ರಗೊಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಏರಿಕೆ ಕಂಡಿದೆ.
ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 94.84( 7,165ರೂ.) ಡಾಲರ್‌ಗೆ ಏರಿಕೆಯಾಗಿದ್ದು, ಶೀಘ್ರವೇ 100 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ ಭಾರತದಲ್ಲಿ ಲೀಟರ್‌ಗೆ 100 ರೂ. ಅಸುಪಾಸಿನಲ್ಲಿರುವ ಪೆಟ್ರೋಲ್ ದರ ತೈಲ ಬೆಲೆ 100 ಡಾಲರ್‌ಗೆ ಏರಿಕೆಯಾದರೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.
2021ರ ನವೆಂಬರ್ ಬಳಿಕ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪಂಚ ರಾಜ್ಯ ಚುನಾವಣೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಬೆಲೆ ಏರಿಕೆಯಾಗುವುದು ಅನುಮಾನ. ಚುನಾವಣೆ ಬಳಿಕವೂ ತೈಲ ದರ ಏರಿಕೆಯಾದರೆ ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಲಿದೆ. ಇದನ್ನೂ ಓದಿ: ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಅರೆ ವೈದ್ಯಕೀಯ ವಿದ್ಯಾರ್ಥಿ
ಸೇನಾ ಜಮಾವಣೆ: ಯುದ್ಧದ ಉತ್ಸಾಹದಲ್ಲಿರುವ ರಷ್ಯಾ ಗಡಿಯಲ್ಲಿ ತನ್ನ ಸೇನಾ ಜಮಾವಣೆಯನ್ನು 1.30 ಲಕ್ಷಕ್ಕೆ ಏರಿಸಿದೆ. ಉಕ್ರೆನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಜೊತೆ 1 ಗಂಟೆ ಪ್ರಸ್ತತ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.
ತನ್ನ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿದನ್ನು ಉಕ್ರೇನ್ ಪ್ರಶ್ನಿಸಿದೆ. ಮುಂದಿನ 48 ಗಂಟೆಯ ಒಳಗಡೆ ರಷ್ಯಾಈ ಬಗ್ಗೆ ಕಾರಣ ನೀಡಬೇಕು ಎಂದು ಹೇಳಿದೆ.
ಮಾಸ್ಕೋ: ರಷ್ಯಾದಲ್ಲಿ 7.47 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದ್ದ ಪೇಂಟಿಂಗ್‍ನನ್ನು ಸೆಕ್ಯೂರಿಟಿ ಗಾರ್ಡ್ ನಾಶ ಮಾಡಿರುವ ಘಟನೆ ಮಾಸ್ಕೋದಲ್ಲಿ ನಡೆದಿದೆ.
ಒಬ್ಲಾಸ್ಟ್ ಪ್ರದೇಶದ ಯೆಲ್ಟ್ಸಿನ್ ಕೇಂದ್ರದಲ್ಲಿ ಅನ್ನಾ ಲೆಪೋರ್ಸ್ಕಯಾ ಪೇಂಟಿಂಗ್ ಪ್ರದರ್ಶನದಲ್ಲಿ ಸೆಕ್ಯುರಿಟಿ ಗಾರ್ಡ್ ತನ್ನ ಮೊದಲ ದಿನದ ಕೆಲಸಕ್ಕೆ ಬಂದಿದ್ದನು. ಈ ವೇಳೆ ಮುಖಗಳಿಲ್ಲದ ‘ಮೂವರು ಮನುಷ್ಯರ’ ಪೇಂಟಿಂಗ್ ನೋಡಿದ್ದಾನೆ. ಅದನ್ನು ನೋಡಿ ಬೇಸರಗೊಂಡಿದ್ದು, ಬಾಲ್ ಪಾಯಿಂಟ್ ಪೆನ್‍ನಿಂದ ಕಣ್ಣುಗಳನ್ನು ಬಿಡಿಸಿ ಪೇಂಟಿಂಗ್ ಹಾಳುಮಾಡಿದ್ದಾನೆ. ಈ ಪೇಂಟಿಂಗ್‍ಗೆ 1 ಮಿಲಿಯನ್(ರೂ. 7.47 ಕೋಟಿ) ವಿಮೆ ಮಾಡಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯ ನಾಯಕರ ಮಧ್ಯೆ ರಮೇಶ್ ಜಾರಕಿಹೊಳಿ ಗುರುತಿಸಿದ ಅಮಿತ್ ಶಾ!
ಸಿಬ್ಬಂದಿ ಹೆಸರನ್ನು ಹೇಳಲಿಚ್ಛಿಸದ ಖಾಸಗಿ ಕಂಪನಿಯು, ಈ ಕೃತ್ಯ ಮಾಡಿದವನಿಗೆ 60 ವರ್ಷ ವಯಸ್ಸಾಗಿದೆ. ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದೆ.
ಈ ಪೇಂಟಿಂಗ್ ಡಿ 7 2021 ರಂದು ‘ದಿ ವರ್ಲ್ಡ್ ಆಸ್ ನಾನ್-ಆಬ್ಜೆಕ್ಟಿವಿಟಿ, ದಿ ಬರ್ತ್ ಆಫ್ ಎ ನ್ಯೂ ಆರ್ಟ್’ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಪೇಂಟಿಂಗ್ ಬೆಲೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಲ್ಫಾ ವಿಮಾ ಕಂಪನಿಯಲ್ಲಿ ಈ ಪೇಂಟಿಂಗ್‍ಗೆ 7.47 ಕೋಟಿ ರೂ. ವಿಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಲಾವಿದರು, ಪೇಂಟಿಂಗ್ ತನ್ನ ಹಿಂದಿನ ವೈಭವಕ್ಕೆ ಮರುಸ್ಥಾಪಿಸುವ ಪ್ರಯತ್ನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ಪೇಂಟಿಂಗ್ ಮಾಸ್ಕೋಗೆ ಕಳುಹಿಸಲಾಗಿದೆ. ಪೇಂಟಿಂಗ್‍ನಲ್ಲಿ ಯಾವುದೇ ರೀತಿ ಕಲೆ ಕಾಣಿಸದಂತೆ ಮಾಡಬಹುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.
ನವದೆಹಲಿ: ಅಫ್ಘಾನಿಸ್ತಾನದ ಪರಿಸ್ಥಿತಿಯಲ್ಲಿ ರಷ್ಯಾ ಹಾಗೂ ಭಾರತ ಒಂದೇ ರೀತಿಯಾಗಿ ಕೆಲಸ ಮಾಡುತ್ತಿದೆ ಎಂದು ರಷ್ಯಾದ ವಿಶ್ವಸಂಸ್ಥೆಯ ರಾಯಭಾರಿ ಸೆರ್ಗೆಯ್ ವಾಸಿಲಿವಿಚ್ ವರ್ಶಿನಿನ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಭಯ ದೇಶಗಳ ನಡುವಿನ ಸಹಕಾರದ ಕುರಿತು ನಡೆದ ಸಭೆಯಲ್ಲಿ ವರ್ಶಿನಿನ್ ಭಾಗವಹಿಸಿದ್ದರು.
ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ರಷ್ಯಾ ಹಾಗೂ ಭಾರತ ಒಂದೇ ನಿಲುವನ್ನು ಹೊಂದಿದೆ. ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಕಳುಹಿಸಬೇಕು. ಅದನ್ನು ನವದೆಹಲಿ ಹಾಗೂ ಮಾಸ್ಕೋ ಎರಡೂ ಒದಗಿಸುತ್ತಿವೆ. ಸದ್ಯ ಅಫ್ಘಾನಿಸ್ತಾನದಲ್ಲಿರುವ ಆಡಳಿತ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲಿ ಎಂದು ನಾವು ಆಶಿಸುತ್ತೇವೆ ಎಂದರು. ಇದನ್ನೂ ಓದಿ: ಒಮಿಕ್ರಾನ್ ಉಪ ರೂಪಾಂತರಿ ಬಿಎ.2 – 57 ದೇಶಗಳಲ್ಲಿ ಪತ್ತೆ: WHO
ಅಫ್ಘಾನಿಸ್ತಾನದ ಇಂದಿನ ಸ್ಥಿತಿಗೆ ಕಳೆದ 20 ವರ್ಷಗಳಿಂದ ಇದ್ದ ಅಮೆರಿಕಾ ಪಡೆ ಹಾಗೂ ಅವರ ಮಿತ್ರರಾಷ್ಟ್ರಗಳ ಉಪಸ್ಥಿತಿಯೇ ಕಾರಣ. ಕಳೆದ ವರ್ಷ ಅಗಸ್ಟ್‌ನಲ್ಲಿ ಅಮೆರಿಕಾ ತಮ್ಮ ಪಡೆಗಳನ್ನು ಹಿಂತೆಗೆದುಕೊಂಡ ಬಳಿಕ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳು ಸಾಧ್ಯವಾಯಿತು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ
ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ಒದಗಿಸಬೇಕು ಎಂಬುದು ಸ್ಪಷ್ಟವಾಗಿದೆ. ಈ ಕೆಲಸವನ್ನು ನಾವು ಮತ್ತು ಭಾರತ ಎರಡೂ ಮಾಡುತ್ತಿದ್ದೇವೆ. ಈ ಕಾರ್ಯ ಹೀಗೆಯೇ ಮುಂದುವರಿಯಬೇಕು ಎಂದು ವರ್ಶಿನಿನ್ ಹೇಳಿದರು.
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಏರಿಕೆ ಕಂಡಿದೆ. 7 ವರ್ಷಗಳ ಬಳಿಕ 1 ಬ್ಯಾರೆಲ್‍ಗೆ ತೈಲದ ದರ 90 ಡಾಲರ್ (6,765 ರೂ.) ತಲುಪಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಕಳೆದ ಒಂದು ವಾರಗಳ ಹಿಂದೆ ಬ್ಯಾರಲ್‍ಗೆ 80 ಡಾಲರ್ (6,013 ರೂ.) ಇದ್ದ ಬೆಲೆ ಇದೀಗ 90 ಡಾಲರ್‌ಗೆ ಬಂದು ತಲುಪಿದೆ. ಇದಲ್ಲದೆ 2014ರ ಬಳಿಕ ಇದೀಗ ಮತ್ತೆ ರಷ್ಯಾದಲ್ಲಿ ಯುದ್ಧದ ಸನ್ನಿವೇಶ ಆರಂಭಗೊಂಡಿದೆ ಹಾಗಾಗಿ ತೈಲ ಹೊರೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.ಇದನ್ನೂ ಓದಿ:ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ
ನವೆಂಬರ್ 4 ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆದ ಪರಿಣಾಮ ಭಾರತದಲ್ಲಿ ತೈಲ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಜಾಗತೀಕ ಮಟ್ಟದಲ್ಲಿ ತೈಲ ದರ ಏರಿಕೆ ಆದರೆ ಭಾರತದಲ್ಲಿ ತೈಲ ದರ ಏರಿಕೆ ಅನಿವಾರ್ಯವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಸರಿದೂಗಿಸಲು ಭಾರತ ಗ್ರಾಹಕರ ಮೇಲೆ ಮತ್ತೆ ತೈಲ ದರ ಹೊರೆಯಾಗಿಸುವುದು ಅನಿವಾರ್ಯದಂತಿದೆ.
ಸದ್ಯಕ್ಕಿಲ್ಲ ದರ ಏರಿಕೆ:
ಮೂಲಗಳ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆ ಕಂಡರೂ ಕೂಡ ದೇಶದಲ್ಲಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಇರುವುದರಿಂದಾಗಿ ಸದ್ಯಕ್ಕೆ ಬೆಲೆ ಏರಿಕೆ ಮಾಡುವ ಸಾಹಸಕ್ಕೆ ಸರ್ಕಾರ ಕೈ ಹಾಕದಿರಲು ಮುಂದಾಗಿದೆ. ಪಂಚರಾಜ್ಯಗಳ ಚುನಾವಣೆ ಬಳಿಕ ತೈಲ ದರ ಏರಿಕೆ ಸಾಧ್ಯತೆ ಹೆಚ್ಚಿದೆ.
ವಾಷಿಂಗ್ಟನ್: ಅಮೇರಿಕಾ ಹಾಗೂ ರಷ್ಯಾದ ಒಳ ಜಗಳ ನಿನ್ನೆ ಮೊನ್ನೆಯದಲ್ಲ. ಇತಿಹಾಸದ ಪುಟದಲ್ಲೂ ಬಲಿಷ್ಟ ರಾಷ್ಟ್ರಗಳ ಶೀತಲ ಸಮರದಬಗ್ಗೆ ಕೇಳುತ್ತಲೇ ಬಂದಿದ್ದೇವೆ. ಇದೀಗ ಅಮೇರಿಕಾದ ಸ್ಪೇಸ್ ಎಕ್ಸ್ ಕಂಪನಿ ರಷ್ಯಾದ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆ ಮಾಡಿ ಆಶ್ಚರ್ಯ ಮೂಡಿಸಿದೆ
ನಾಸಾ ಹಾಗೂ ರಷ್ಯಾದ ಸ್ಪೇಸ್ ಏಜೆನ್ಸಿ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದವನ್ನು ಮಾಡಿಕೊಂಡಿದ್ದು, ಇದರಲ್ಲಿ ಗಗನಯಾತ್ರಿಯನ್ನು ಉಡಾಯಿಸುವ ಯೋಜನೆ ನಡೆದಿದೆ. ಒಪ್ಪಂದದ ಪ್ರಕಾರ ಬಾಹ್ಯಾಕಾಶ ನೌಕೆಯಲ್ಲಿ ರಷ್ಯಾದ ಮೊದಲ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಪ್ರಯಾಣಿಸಲಿದ್ದಾರೆ.
2022ರಲ್ಲಿ ಸ್ಪೇಸ್ ಎಕ್ಸ್ ಕ್ರ್ಯೂ-5 ಮಿಷನ್‌ನಲ್ಲಿ ಗಗನಯಾತ್ರಿಯನ್ನು ಉಡಾವಣೆ ಮಾಡುವ ವಿಷಯವನ್ನು ಸ್ಪೇಸ್ ಸ್ಟೇಶನ್ ಪ್ರೋಗ್ರಾಮ್ ಮ್ಯಾನೇಜರ್ ಜೋಯಲ್ ಮೊಂಟಲ್ಬಾನೋ ತಿಳಿಸಿದರು. 2025ರ ಹೊತ್ತಿಗೆ ಬಾಹ್ಯಾಕಾಶ ನಿರ್ವಹಣೆಯಲ್ಲಿ ರಷ್ಯಾ ಹಾಗೂ ಅಮೆರಿಕ ಜಂಟಿಯಾಗಿ ಕಾರ್ಯ ನಿರ್ವಹಿಸುವುದರ ಬಗ್ಗೆ ಸುಳಿವನ್ನೂ ನೀಡಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್ ಉಪಗ್ರಹಗಳು? ದರ ಎಷ್ಟು? ನೆಟ್ ಹೇಗೆ ಸಿಗುತ್ತೆ?
ವಾಷಿಂಗ್ಟನ್ ಹಾಗೂ ಮಾಸ್ಕೋ ನಡುವಿನ ಒತ್ತಡದ ಸಂಬಂಧ ಬಾಹ್ಯಾಕಾಶಕ್ಕೆ ವಿಸ್ತರಿಸಿದ್ದರೂ, ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಮಾಸ್ಕೋಗೆ ಭೇಟಿ ನೀಡಿದಾಗ 2022ರ ಕ್ರ್ಯೂ ಡ್ರ್ಯಾಗನ್ ಒಪ್ಪಂದದ ಬಗ್ಗೆ ಯೋಜನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್‌ನಲ್ಲಿರುವ ಏಕೈಕ ಮಹಿಳಾ ಗಗನಯಾತ್ರಿ ಅನ್ನಾ ಕಿಕಿನಾ ಅವರನ್ನು ಈ ಯೋಜನೆಗೆ ಆಯ್ಕೆ ಮಾಡಿದೆ. ಅವರು ಈಗಾಗಲೇ ಈ ಯೋಜನೆಗಾಗಿ ಸ್ಪೇಸ್ ಎಕ್ಸ್‌ನಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಹಾಗೂ ಕ್ರ್ಯೂ-5 ಮಿಷನ್‌ನಲ್ಲಿ ಗಗನಯಾತ್ರಿಗಳಾದ ನಿಕೋಲ್ ನಮ್ ಹಾಗೂ ಜೋಶ್ ಕಸಾಡಾ ಅವರೊಂದಿಗೆ ಬಾಹ್ಯಾಕಾಶ ಪ್ರಯಾಣ ಬೆಳೆಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: 12 ದಿನಗಳ ಬಾಹ್ಯಾಕಾಶ ಪ್ರಯಾಣದಿಂದ ಮರಳಿದ ಜಪಾನ್ ವ್ಯಕ್ತಿ!
ದಶಕಗಳ ಹಿಂದೆ ಅಮೆರಿಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾವನ್ನು ಅವಲಂಬಿಸಿತ್ತು. ಇತ್ತೀಚೆಗೆ ಅಮೇರಿಕಾ ಸ್ಪೇಸ್ ಎಕ್ಸ್ ಕಂಪನಿಯ ಮೂಲಕ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ.
ಮಾಸ್ಕೋ: ಸ್ಪುಟ್ನಿಕ್-ವಿ ಲಸಿಕೆ ಕೋವಿಡ್-19 ರೂಪಾಂತರ ಓಮಿಕ್ರಾನ್ ಸೋಂಕಿನ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ ಎಂದು ರಷ್ಯಾ ತಿಳಿಸಿದೆ.
ಪ್ರಪಂಚದಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಅದರ ಬಗೆಗಿನ ಭೀತಿಯೂ ತಾರಕಕ್ಕೇರುತ್ತಿದೆ. ಆದರೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಈ ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದೆ ಎಂದು ವರದಿ ನೀಡಿದೆ.
ರಷ್ಯಾದ ಆರೋಗ್ಯ ಸಚಿವಾಲಯದ ಭಾಗವಾಗಿರುವ ಗಮಲೇಂಯ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ಸ್ಪುಟ್ನಿಕ್-ವಿ ಓಮಿಕ್ರಾನ್ ವಿರುದ್ಧ ಹೋರಾಡುವಲ್ಲಿ ಹೆಚ್ಚಿನ ಪರಿಣಾಮ ತೋರುತ್ತಿರುವುದು ಕಂಡು ಬಂದಿದೆ. ಇದನ್ನೂ ಓದಿ: ಭಾರತದಲ್ಲಿ ಓಮಿಕ್ರಾನ್ ಸೆಂಚುರಿ – 101 ಮಂದಿಗೆ ಸೋಂಕು
ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಸ್ಪುಟ್ನಿಕ್-ವಿ ಲಸಿಕೆ ಇತರ ಲಸಿಕೆಗಳಿಗಿಂತಲೂ ರೋಗಿಗಳಲ್ಲಿ ಮೂರರಿಂದ ಏಳು ಪಟ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಹಾಗೆಯೇ ಶೇ.80 ರಷ್ಟು ಪರಿಣಾಮಕಾರಿ ಫಲಿತಾಂಶವನ್ನು ತೋರಿದೆ ಎಂದು ತಿಳಿದು ಬರುತ್ತದೆ.
ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬೂಸ್ಟರ್ ಆಗಿ ಪಡೆಯುವುದು ಕೂಡಾ ಹೆಚ್ಚು ಪರಿಣಾಮಕಾರಿ ಎಂಬ ಇನ್ನೊಂದು ಮಾಹಿತಿ ನೀಡಿದೆ. ಈ ಲಸಿಕೆಯನ್ನು ಪಡೆದುಕೊಂಡ 2-3 ತಿಂಗಳ ಬಳಿಕ ಓಮಿಕ್ರಾನ್ ವೈರಸ್ ವಿರುದ್ಧ ಅತೀ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಘಾನಾದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು – ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ
ಈ ಹಿಂದಿನ ವರದಿಗಳ ಪ್ರಕಾರ ಸ್ಪುಟ್ನಿಕ್-ವಿಯ ಎರಡು ಡೋಸ್‌ಗಳನ್ನು 21 ದಿನಗಳ ಅಂತರದಲ್ಲಿ ಪಡೆದುಕೊಳ್ಳಬೇಕು. ಸ್ಪುಟ್ನಿಕ್-ವಿಯ ಎರಡು ಡೋಸರ್‌ಗಳು ಕೊರೊನಾ ಸೋಂಕಿನ ವಿರುದ್ಧ ಶೇ.91 ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಹಾಗೂ ಒಂದು ಡೋಸ್ ಶೇ.79.4% ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಗಮಲೇಂಯ ತಿಳಿಸಿತ್ತು. ಇದನ್ನೂ ಓದಿ: ಬೀದಿನಾಯಿಗಳಿಗೆ ಆಹಾರ ನೀಡಿದ್ದಕ್ಕೆ 8 ಲಕ್ಷ ದಂಡ
ರಷ್ಯಾ ರಕ್ಷಣಾ ಸಚಿವಾಲಯ ಮತ್ತು ಮಾಸ್ಕೋದ ಗಮಲೇಂಯ ಸಂಶೋಧನಾ ಸಂಸ್ಥೆ ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಈ ಲಸಿಕೆಯನ್ನು ಕಳೆದ ವರ್ಷ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುತ್ರಿಗೆ ನೀಡಲಾಗಿತ್ತು.
ಮಾಸ್ಕೋ: ರಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ಮಾಸ್ಕೋ ವ್ಲಾದಿಮಿರ್ ಪೊಟಾನಿನ್ ತಮ್ಮ ವಿಚ್ಛೇದಿತ ಪತ್ನಿಗೆ ಬರೋಬ್ಬರಿ 52 ಸಾವಿರ ಕೋಟಿ ರೂ. ಜೀವನಾಂಶ ನೀಡಬೇಕಾಗಿರುವ ಸವಾಲು ಎದುರಿಸುತ್ತಿದ್ದಾರೆ.
ಲಂಡನ್ ನ್ಯಾಯಾಲಯದಲ್ಲಿ ವಿಚ್ಛೆದನ ಕುರಿತು ಅರ್ಜಿ ವಿಚಾರಣೆ ವೇಳೆ ಪೊಟಾನಿನ್ ಮಾಜಿ ಪತ್ನಿ ನತಾಲಿಯಾ ಪೊಟಾನಿನಾ ಅವರು ಎಂಎಂಸಿ ನಾರಿಲಸ್ಕ್ ನಿಕೆಲ್ ಪಿಜೆಎಸ್ ಕಂಪನಿಯ ಶೇ.50ರಷ್ಟು ಷೇರನ್ನು ಪರಿಹಾರವಾಗಿ ನೀಡಲು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಟಾನಿನ್ ತನ್ನ ಆಸ್ತಿ ಗಳಿಕೆಯ ಅರ್ಧದಷ್ಟು ಜೀವನಾಂಶವನ್ನು ನೀಡಲು ಸಿದ್ಧರಿದ್ದಾರೆ.
ಪೊಟಾನಿನ್ ಲಂಡನ್ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದಾರೆ. ಈ ಮೂಲಕ ಬೆಜೋಸ್ ಮತ್ತು ಬಿಲ್‌ಗೇಟ್ಸ್ ನಂತರ ಇಷ್ಟು ದೊಡ್ಡ ಮೊತ್ತದ ಜೀವನಾಂಶ ನೀಡುವ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎನಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಪೊಟಾನಿನಾ ಪರ ವಕೀಲರಾದ ಫ್ರಾನ್ಸಿಸ್ ಹ್ಯೂಸ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ- ಪ್ರಾಣ ಕಳೆದುಕೊಂಡ ವಿವೇಕ್ ಕುಮಾರ್‌ಗಿದೆ 2 ತಿಂಗಳ ಪುಟ್ಟ ಕಂದಮ್ಮ
ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಭಾರತಕ್ಕೆ ಆಗಮಿಸಿದ್ದಾರೆ. 21ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಲಿದ್ದಾರೆ. ದೆಹಲಿಯ ಹೈದರಾಬಾದ್ ಹೌಸ್‍ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ದ್ವಿಪಕ್ಷೀಯ ಬಾಂಧವ್ಯ ಕುರಿತು ಚರ್ಚೆ ನಡೆಸಿದ್ದಾರೆ.
ಶೃಂಗಸಭೆ ಬಳಿಕ ಶಸ್ತ್ರಾಸ್ತ್ರ, ವಾಣಿಜ್ಯ, ವಿದೇಶಾಂಗ ವ್ಯವಹಾರ ಸೇರಿದಂತೆ 10ಕ್ಕೂ ಹೆಚ್ಚು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ತಿಂಗಳಿನಿಂದಲೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಸರಬರಾಜು ಪೂರೈಕೆ ಪ್ರಾರಂಭವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಉ.ಪ್ರ. ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮತಾಂತರ
ಈ ನಡುವೆ ಕೋವಿಡ್-19 ಸವಾಲುಗಳ ನಡುವೆ ಭಾರತ ಹಾಗೂ ರಷ್ಯಾ ದೇಶಗಳ ಸಂಬಂಧ ಮುಂದುವರಿಕೆ ಬಗ್ಗೆ ಚರ್ಚೆ ನಡೆಸಿದ್ದು, ಎರಡು ದೇಶಗಳು ಕೂಡ ಭಯೋತ್ಪಾದನೆಯ ವಿರುದ್ಧ ಪ್ರಬಲವಾಗಿ ಹೋರಾಡುವ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ. ಈಗಿರುವ ಹೂಡಿಕೆಯೊಂದಿಗೆ ಭಾರತದಲ್ಲಿ ಇನ್ನಷ್ಟು ಹೂಡಿಕೆ ಮಾಡಲು ರಷ್ಯಾ ಮುಂದಾಗಿದ್ದು, ಹೊಸ ತಂತ್ರಜ್ಞಾನಗಳೊಂದಿಗೆ ಉಭಯ ರಾಷ್ಟ್ರಗಳು ಒಂದಾಗಿ ಉನ್ನತ ತಂತ್ರಜ್ಞಾನಗಳ ಅಭಿವೃದ್ದಿಗೆ ಶ್ರಮಿಸೋಣ ಎಂದು ಪುಟಿನ್ ತಿಳಿಸಿದ್ದು, ಈ ಬಾಂಧವ್ಯ ಮುಂದೆಯು ಇದೇ ರೀತಿ ಮುಂದುವರಿಯಲಿ ಎಂದು ಮೋದಿ ಜೊತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಇನ್ನು ಮುಂದೆ ಕಣ್ಣೀರು ಹಾಕಲ್ಲ: ಎಚ್‍ಡಿಕೆ
#WATCH | New Delhi: PM Narendra Modi sees off Russian President Vladimir Putin after holding talks with him
ಏನಿದು ಎಸ್-400 ಏರ್ ಟ್ರಯಂಫ್?
ಸುಲಭವಾಗಿ ಒಂದು ವಾಕ್ಯದಲ್ಲೇ ಹೇಳುವುದಾದರೆ ಆಕಾಶದಲ್ಲೇ ಶತ್ರುಗಳನ್ನು ನಿರ್ನಾಮ ಮಾಡುವ ಸಾಮಥ್ರ್ಯ ಇರುವ ವಿಶೇಷ ವಾಯು ರಕ್ಷಣಾ ವ್ಯವಸ್ಥೆ. ಶತ್ರು ರಾಷ್ಟ್ರಗಳು ಕ್ಷಿಪಣಿಗಳು ಉಡಾಯಿಸಿದರೆ ಅದನ್ನು ಹೊಡೆದು ಉರುಳಿಸುವುದು ಸುಲಭದ ಮಾತಲ್ಲ. ಆದರೆ ವೇಗವಾಗಿ ಬರುವ ಕ್ಷಿಪಣಿಯನ್ನು ಆಕಾಶದಲ್ಲಿ ಹೊಡೆದು ಉರುಳಿಸುವ ಸಾಮಥ್ರ್ಯ ಈ ಎಸ್-400 ಟ್ರಯಂಫ್‍ಗೆ ಇದೆ. ರಷ್ಯಾ 2007ರಲ್ಲಿ ಮೊದಲ ಬಾರಿಗೆ ಈ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು.
ಹೇಗೆ ಕೆಲಸ ಮಾಡುತ್ತೆ?
ನೆಲದಲ್ಲೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಶತ್ರು ಪಡೆಗಳ ಯುದ್ಧ ವಿಮಾನ ಹಾಗೂ ಕ್ಷಿಪಣಿ ದಾಳಿಯನ್ನು ದಿಟ್ಟವಾಗಿ ಎದುರಿಸುವ ಹೊಂದಿದೆ. ದೀರ್ಘ ದೂರ ಕ್ರಮಿಸಬಲ್ಲ ನೆಲದಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಇದ್ದು, 2007 ರಲ್ಲಿ ನಿರ್ಮಾಣಗೊಂಡಿದ್ದ ಎಸ್-300 ಶ್ರೇಣಿಯ ಹೊಸ ಆವೃತ್ತಿ ಇದಾಗಿದ್ದು, ಇದೀಗ ಸುಸಜ್ಜಿತವಾಗಿ ರೂಪುಗೊಂಡಿದೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
380 ಕಿ.ಮೀ ವ್ಯಾಪ್ತಿ ಒಳಗಡೆ ಬರುವ ಹಲವು ಕ್ಷಿಪಣಿ ಹಾಗೂ ವಿಮಾನಗಳನ್ನು ಏಕಕಾಲಕ್ಕೆ ಗುರುತಿಸಿ ಹೊಡೆದುರುಳಿಸುವ ಸೆಲ್ಫ್ ಸಿಸ್ಟಂ ವ್ಯವಸ್ಥೆ, ಬಹುಬಳಕೆಯ ರೇಡಾರ್ ಮತ್ತು ಗುರಿ ನಿಗದಿ ಉಡಾವಣೆ ವ್ಯವಸ್ಥೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಇದು ಒಳಗೊಂಡಿದೆ. ಲಾರಿಯ ಹಿಂಭಾಗದಲ್ಲಿ ವಾಯು ರಕ್ಷಣಾ ವ್ಯವಸ್ಥೆ ಇರುವ ಕಾರಣ ಯಾವ ಪ್ರದೇಶಕ್ಕೂ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಅಷ್ಟೇ ಅಲ್ಲದೇ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ. ಶತ್ರುಗಳ ದಾಳಿಯ ದಿಕ್ಕು ತಪ್ಪಿಸಲು ಏಕಕಾಲದಲ್ಲಿ 4 ಭಾಗಗಳಲ್ಲಿ ಕ್ಷಿಪಣಿಗಳನ್ನು ಗಗನಕ್ಕೆ ಚಿಮ್ಮಿಸಿ ರಕ್ಷಣಾ ಕವಚ ನಿರ್ಮಿಸಬಹುದಾಗಿದೆ. ಅಲ್ಲದೇ ಶತ್ರುನೆಲೆಯಿಂದ ತೂರಿ ಬರುವ ಮಾನವ ರಹಿತ ವಿಮಾನ, ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತಕ್ಕೆ ಅಗತ್ಯ ಏಕೆ?
ಪಾಕ್ ಬಳಿ ಇರುವ ಫೈಟರ್ ಜೆಟ್, ಚೀನಾ ಬಳಿ ಇರುವ ಎಫ್-16, ಜೆ-17 ಆವೃತ್ತಿಯ ಫೈಟರ್ ವಿಮಾನಗಳಿಗೆ ಎಸ್-400 ವಾಯು ರಕ್ಷಣಾ ವ್ಯವಸ್ಥೆ ದಿಟ್ಟ ಉತ್ತರ ನೀಡಲಿದೆ. ಭಾರತ ಈ ವ್ಯವಸ್ಥೆಯನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ಸಿದ್ಧತೆ ನಡೆಸಿದೆ. ಭಾರತಕ್ಕೆ ಈ ವ್ಯವಸ್ಥೆ ಬಂದರೆ ವಾಯು ಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ.
ಯಾವೆಲ್ಲ ದೇಶಗಳಲ್ಲಿ ಈ ವ್ಯವಸ್ಥೆ ಇದೆ?
ರಷ್ಯಾದಿಂದ ಈ ವ್ಯವಸ್ಥೆಯನ್ನು ಮೊದಲು ಚೀನಾ ಖರೀದಿ ಮಾಡಿದೆ. 2014ರಲ್ಲಿ ಚೀನಾ ಒಪ್ಪಂದ ಮಾಡಿಕೊಂಡಿದ್ದು ಈಗಾಗಲೇ ಎಸ್-400 ಕ್ಷಿಪಣಿ ವ್ಯವಸ್ಥೆ ಚೀನಾಗೆ ತಲುಪಿದೆ. ಎಷ್ಟು ಪ್ರಮಾಣದಲ್ಲಿ ರಷ್ಯಾ ವಿತರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ. 2017ರಲ್ಲಿ ಟರ್ಕಿ ಜೊತೆ ಒಪ್ಪಂದ ನಡೆದಿದೆ. ಭಾರತ ಅಷ್ಟೇ ಅಲ್ಲದೇ ಕತಾರ್ ಎಸ್-400 ಖರೀದಿಸಲು ಆಸಕ್ತಿ ತೋರಿಸಿತ್ತು.
ಒಪ್ಪಂದದ ಉದ್ದೇಶ ಏನು?
ರಷ್ಯಾದೊಂದಿಗೆ ಚೀನಾ ಉತ್ತಮ ಬಾಂಧವ್ಯ ಹೊಂದಿದರೆ ಭವಿಷ್ಯದಲ್ಲಿ ಭಾರತಕ್ಕೆ ಸಮಸ್ಯೆ ಉಂಟಾಗಬಹುದು ಎನ್ನುವ ಕಾರಣ ಮೋದಿ ವ್ಲಾದಿಮಿರ್ ಪುಟಿನ್ ಜೊತೆ ಉತ್ತಮ ಸಂಪರ್ಕ ಬೆಳೆಸಿದ್ದರು. ಇದಕ್ಕಾಗಿ 2018ರಲ್ಲಿ ರಷ್ಯಾಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದರು. ಈ ವೇಳೆಯೇ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಖರೀದಿಸುವ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಡಿಸೆಂಬರ್ ಅಂತ್ಯಕ್ಕೆ ಅಥವಾ ಜನವರಿಯಲ್ಲಿ ಭಾರತಕ್ಕೆ ಎಸ್-400 ಕ್ಷಿಪಣಿ ತಲುಪುವ ನಿರೀಕ್ಷೆ ಇದೆ. ಈ ಮೂಲಕ ವಿಶ್ವದ ಮಿಲಿಟರಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲು ಭಾರತಕ್ಕೆ ಎಸ್-400 ಸಹಕಾರಿಯಾಗಲಿದೆ. ಇದನ್ನೂ ಓದಿ: ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಕ್ಕೆ ಆತ್ಮ ರಕ್ಷಣೆಗೆ ಗುಂಡಿನ ದಾಳಿ
ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?
ರಷ್ಯಾದೊಂದಿಗಿನ ಭಾರತದ ಉತ್ತಮ ಸಂಬಂಧ ಹೊಂದಿರುವುದು ಚೀನಾ ಮತ್ತು ಪಾಕಿಸ್ತಾನದ ನಿದ್ದೆಗೆಡಿಸಿದೆ. ಈಗಾಗಲೇ ಅಮೆರಿಕವೂ ರಷ್ಯಾ ಯುದ್ಧ ಸಾಮಾಗ್ರಿ ಖರೀದಿ ಮೇಲೆ ನಿರ್ಬಂಧ ವಿಧಿಸಿದೆ. ಇದರ ನಡುವೆಯೂ ಭಾರತ ದಿಟ್ಟ ನಿರ್ಧಾರ ಮಾಡಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಭಾರತದ ನೆರೆ ದೇಶಗಳ ಪೈಕಿ ಚೀನಾ ಮತ್ತು ಪಾಕಿಸ್ತಾನದಿಂದಲೇ ಕಿರಿಕ್ ಜಾಸ್ತಿ. ಆಗಾಗ ಖಂಡಾಂತರ ಕ್ಷಿಪಣಿಗಳನ್ನು ಚೀನಾ, ಪಾಕಿಸ್ತಾನ ಪರೀಕ್ಷೆ ಮಾಡುತ್ತಲೇ ಇರುತ್ತದೆ. ಹೀಗಾಗಿ ಯಾವುದೇ ಸಮಯದಲ್ಲಿ ಆಗಬಹುದಾದ ದಾಳಿಯನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯ ಭಾರತಕ್ಕೆ ಸಿಗಲಿದೆ.
ಮಾಸ್ಕೋ: ರಷ್ಯಾದಲ್ಲಿ ಕೊರೋನಾ ಹಾವಳಿ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ದೇಶದಲ್ಲಿ ದಿನೇ ದಿನೆ ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ನಂತರವೂ ಸಾಂಕ್ರಾಮಿಕ ಹೆಚ್ಚು ಹರಡಿದ್ದಲ್ಲಿ ಲಾಕ್‍ಡೌನ್ ಮಾಡಲು ಸರ್ಕಾರ ಚಿಂತಿಸಿದೆ.
ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 37,390 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಅಲ್ಲದೇ ಕೋವಿಡ್‍ನಿಂದ ಒಂದೇ ದಿನ 1069 ಮಂದಿ ಮೃತಪಟ್ಟಿದ್ದು, ಇದು ಈವರೆಗಿನ ದಾಖಲೆಯಾಗಿದೆ. ಇದನ್ನೂ ಓದಿ: ಕೋವಿಡ್‍ನಿಂದ ಭಾರತೀಯರ ಆಯಸ್ಸು 2 ವರ್ಷ ಇಳಿಕೆ
ಕೊರೊನಾ ಹಾವಳಿ ತಡೆಗಟ್ಟಲು ರಷ್ಯಾ ಸರ್ಕಾರ ಮುಂದಾಗಿದ್ದು, ವಾಣಿಜ್ಯ-ವಹಿವಾಟು ಸ್ಥಗಿತಗೊಳಿಸಿದೆ. ಪ್ರಕರಣಗಳು ಹೆಚ್ಚಿರುವ ನಗರವಾದ ಸಂತ ಪೀಟರ್ಸ್‍ಬರ್ಗ್ ನಗರದಲ್ಲಿ ರೆಸ್ಟೋರೆಂಟ್, ಕೆಫೆಗಳು, ವಾಣಿಜ್ಯೇತರ ಮಳಿಗೆಗಳನ್ನು ಅ.30ರಿಂದ ನ.7ರವರೆಗೆ ಬಂದ್ ಮಾಡಿ ಆದೇಶ ಹೊರಡಿಸಿದೆ. ಈ ಅವಧಿಯಲ್ಲಿ ಯಾರೂ ಕೆಲಸಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ.
ಬ್ಯೂಟಿ ಸಲೂನ್, ಸ್ಪೋರ್ಟ್ ಸೆಂಟರ್, ಜಿಮ್ ಮತ್ತು ಸಮೂಹ ಸಾರಿಗೆ ಹಾಗೂ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ಔಷಧ ಮಳಿಗೆಗಳು, ಗ್ಯಾಸ್ ಸ್ಟೇಷನ್, ದಿನಸಿ ಅಂಗಡಿಗಳನ್ನು ಮುಚ್ಚುವಂತೆ ತಿಳಿಸಲಾಗಿದೆ. ಪಶುವೈದ್ಯಕೀಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ 290 ಪಾಸಿಟಿವ್, 10 ಸಾವು
ವಾರಾಂತ್ಯ ರಜೆ ದಿನಗಳಲ್ಲಿ ಸ್ವಿಮ್ಮಿಂಗ್ ಪೂಲ್, ಉದ್ಯಾನಗಳು, ಮನರಂಜನಾ ಕಾರ್ಯಕ್ರಮಗಳಿಗಳಿಗೂ ನಿರ್ಬಂಧ ವಿಧಿಸಲಾಗಿದೆ. ನಾಗರಿಕ ಸೇವಾ ಕೇಂದ್ರಗಳೂ ತಮ್ಮ ಕಾರ್ಯಗಳನ್ನು ಸ್ಥಗಿತಗೊಳಿಸಿವೆ.