Tag: ರಷ್ಯಾ

  • ರಷ್ಯಾ ಸಶಸ್ತ್ರ ಪಡೆಗಳ ನಿಷ್ಕಲ್ಮಶ ಸೇವೆಗೆ ಪುಟಿನ್‌ ಧನ್ಯವಾದ

    ರಷ್ಯಾ ಸಶಸ್ತ್ರ ಪಡೆಗಳ ನಿಷ್ಕಲ್ಮಶ ಸೇವೆಗೆ ಪುಟಿನ್‌ ಧನ್ಯವಾದ

    ಮಾಸ್ಕೋ: ರಷ್ಯಾ ಒಕ್ಕೂಟದ ವಿಶೇಷ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಮತ್ತು ಅವರ ನಿಷ್ಕಲ್ಮಶ ಸೇವೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ಅರ್ಪಿಸಿದ್ದಾರೆ.

    ಮಾಸ್ಕೋ ಕ್ರೆಮ್ಲಿನ್‍ನಲ್ಲಿ ಮಾತನಾಡಿದ ಅವರು, ನಾನು ವಿಶೇಷ ಕಾರ್ಯಾಚರಣೆ ಪಡೆಗಳ ಕಮಾಂಡ್, ಸಿಬ್ಬಂದಿಗೆ, ರಷ್ಯಾದ ಜನತೆ ಮತ್ತು ನಮ್ಮ ಮಹಾನ್ ಮಾತೃಭೂಮಿಗೆ ಅವರು ಮಾಡಿದ ನಿಷ್ಕಲ್ಮಶ ಸೇವೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

    ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಅಂದಿನಿಂದ ರಷ್ಯಾದ ಪಡೆಗಳು ಉಕ್ರೇನ್‍ನಾದ್ಯಂತ ಮಿಲಿಟರಿ ನೆಲೆಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದೆ. ಇದೀಗ ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಒಳ ನುಗ್ಗಲು ದಾರಿ ಹುಡುಕುತ್ತಿದೆ. ಇದನ್ನೂ ಓದಿ: ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

    ಇದೀಗ ರಷ್ಯಾದ ಪಡೆ ಉಕ್ರೇನ್ ದೇಶದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಗೊಳಿಸಿದ್ದಾರೆ. ರಷ್ಯಾದ ಕ್ಷಿಪಣಿಗಳು ಕೈವ್‍ನ ನೈಋತ್ಯದ ಉಕ್ರೇನಿಯನ್ ಪಟ್ಟಣವಾದ ವಾಸಿಲ್ಕಿವ್‍ಗೆ ಅಪ್ಪಳಿಸಿ ತೈಲ ಟರ್ಮಿನಲ್ ಸುಟ್ಟು ಹಾಕಲಾಗಿದೆ.

    ಭಾನುವಾರ ರಷ್ಯಾ ಪಡೆಗಳು ದಕ್ಷಿಣ ಉಕ್ರೇನಿಯನ್ ನಗರಗಳಾದ ಖೆರ್ಸನ್ ಮತ್ತು ಬರ್ಡಿಯಾನ್ಕ್ಸ್‍ವನ್ನು ಸಂಪೂರ್ಣವಾಗಿ ನಿರ್ಬಂಧಿಸಿವೆ. ಹೆನಿಚೆಸ್ಕ್ ಪಟ್ಟಣ ಮತ್ತು ಖೆರ್ಸನ್ ಬಳಿಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

  • ಕನ್ನಡಿಗರ ರಕ್ಷಣೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸಲಿದೆ: ಬೊಮ್ಮಾಯಿ

    ಕನ್ನಡಿಗರ ರಕ್ಷಣೆಯ ಸಂಪೂರ್ಣ ವೆಚ್ಚ ಸರ್ಕಾರ ಭರಿಸಲಿದೆ: ಬೊಮ್ಮಾಯಿ

    ಬೆಂಗಳೂರು: ಉಕ್ರೇನ್‍ನಲ್ಲಿರೋ ಕನ್ನಡಿಗರು ವಾಪಸ್ ಕರೆ ತರುವ ಸಂಪೂರ್ಣ ವೆಚ್ಚ ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬೆಂಗಳೂರಿನಲ್ಲಿ ಕನ್ನಡಿಗರ ರಕ್ಷಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಉಕ್ರೇನ್‍ನಿಂದ ಮೊದಲ ತಂಡ ಭಾರತಕ್ಕೆ ಆಗಮಿಸಿದೆ. ವೆಸ್ಟರ್ನ್ ಭಾಗದಲ್ಲಿ ಇದ್ದ ವಿದ್ಯಾರ್ಥಿಗಳು ಈಗ ಆಗಮಿಸಿದ್ದಾರೆ. ದೆಹಲಿ ಹೈ ಕಮಿಷನರ್ ಗೆ ಸೂಚನೆ ಕೊಟ್ಟಿದ್ದೇನೆ. ಮುಂಬೈಯಿಂದಲೂ ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ

    ರಾಷ್ಟ್ರೀಯ ವಿಪತ್ತು ನಿರ್ವಹಣೆ ಅಧಿಕಾರಿಗಳು ದೆಹಲಿಯಲ್ಲಿ ಇದ್ದಾರೆ. ಅವರನ್ನು ಕರ್ನಾಟಕಕ್ಕೆ ತರುವ ಕೆಲಸ ಆಗುತ್ತದೆ. ಇದಕ್ಕೆ ತಗಲುವ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ಭರವಸೆ ಕೊಟ್ಟರು. ಕೇಂದ್ರದ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಎರಡು ಹೆಲ್ಪ್ ಲೈನ್ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ನಾನು ಮಾತಾಡಿದ್ದೇನೆ. ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದೇನೆ ಎಂದು ವಿವರಿಸಿದರು.

    ಕರಕೈ ಎನ್ನುವ ಪ್ರದೇಶದಲ್ಲಿ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅದು ನಾರ್ತ್ ಇಸ್ಟ್ ಪ್ರದೇಶದಲ್ಲಿ ಇದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಯುದ್ಧ ನಡೆಯುತ್ತಿದೆ. ಹೀಗಾಗಿ ಮೆಟ್ರೋ, ಬಂಕರ್ ಗಳಲ್ಲಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. ಸಣ್ಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಜನರು ಒಂದೇ ಕಡೆ ಸೇರಿಕೊಂಡಿದ್ದಾರೆ. ಇದು ಆತಂಕ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಗೆ ಡ್ರೆಸ್ ಕೋಡ್ ಕಡ್ಡಾಯ!

    ಮೊದಲು ಅವರಿಗೆ ಊಟ, ನೀರು ನೀಡಲು ವಿದೇಶಾಂಗ ಸಚಿವರ ಜೊತೆ ಮಾತಾಡಿದ್ದೇನೆ. ಯುದ್ಧದ ವಾತಾವರಣ ಕಡಿಮೆ ಆದ ಮೇಲೆ ಅವರನ್ನು ಕರೆಸುವ ಕೆಲಸ ಆಗುತ್ತದೆ ಎಂದು ಭರವಸೆ ಕೊಟ್ಟರು.

  • ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

    ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

    ಕೀವ್: ರಷ್ಯಾ ರಣೋತ್ಸಾಹ 4ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಪುಟ್ಟ ದೇಶವಾಗಿರುವ ಉಕ್ರೇನ್ ತತ್ತರಿಸಿದೆ. ಇದರ ಮಧ್ಯೆ ಉಕ್ರೇನ್ ಪ್ರಜೆಗಳು ರಾಷ್ಟ್ರಗೀತೆಯನ್ನು ಹಾಡಿ ತಮ್ಮ ರಾಷ್ಟ್ರಭಕ್ತಿಯನ್ನು ತೋರಿಸುತ್ತಿರವ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

    ರಷ್ಯಾ, ಉಕ್ರೇನ್‍ನ ಮೇಲೆ ಕ್ಷೀಪಣಿ ದಾಳಿ ನಡೆಸಿದ ಪರಿಣಾಮ ಉಕ್ರೇನಿನ ಕಟ್ಟಡಕ್ಕೆ ಹಾನಿಯಾಗಿತ್ತು. ಈ ವೇಳೆ ಮಹಿಳೆಯೊಬ್ಬಳು ಉಕ್ರೇನ್‍ನ ರಾಷ್ಟ್ರಗೀತೆ ಹಾಡುತ್ತಾ ಮನೆ ಸ್ವಚ್ಛಗೊಳಿಸುತ್ತಿರುವ ಮನಮಿಡಿಯುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಮಹಿಳೆಯು ಕಣ್ಣೀರಿಡುತ್ತಾ ಉಕ್ರೇನ್ ರಾಷ್ಟ್ರಗೀತೆ ಹಾಡುತ್ತಿದ್ದಾಳೆ. ನಂತರ ಕ್ಷಿಪಣಿಯಿಂದ ಹಾನಿಗೊಳಗಾದ ಕಿಟಕಿಯ ಗಾಜಿನ ಚೂರನ್ನು ತೆಗೆಯುತ್ತಿರುವುದನ್ನು ಕಾಣಬಹುದಾಗಿದೆ. ನಿನ್ನೆ ರಾಜಧಾನಿ ಕೈವ್‍ನ ಹೊರವಲಯದಲ್ಲಿ ಉಕ್ರೇನಿಯನ್ ರಾಷ್ಟ್ರಗೀತೆಯನ್ನು ಕಹಳೆಯಲ್ಲಿ ನುಡಿಸುತ್ತಿದ್ದರು. ನೆರೆಹೊರೆಯ ಜನರು ಉಕ್ರೇನ್‍ನ ವೈಭವ ಎಂದು ಕೂಗುವುದರ ವೀಡಿಯೋವೊಂದು ವೈರಲ್ ಆಗಿತ್ತು. ಇದನ್ನೂ ಓದಿ: ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

    ಉಕ್ರೇನ್‍ನ ರಸ್ತೆಗಳಲ್ಲಿ ಬಾಂಬ್ ದಾಳಿ, ಅಪಾರ್ಟ್‍ಮೆಂಟ್‍ಗಳ ಮೇಲೆ ರಷ್ಯಾ ಸೈನಿಕರು ಮಿಸೈಲ್ ದಾಳಿ ಮಾಡುತ್ತಿದ್ದಾರೆ. ಬಂಕರ್‌ಗಳ ಹೊರಗೆ ಬಾಂಬ್ ಸದ್ದು ಕೇಳಿಸುತ್ತಿದ್ದು, ಜನ ಜೀವ ಭಯದಲ್ಲಿದ್ದಾರೆ. ಉಕ್ರೇನ್‍ನ ಕಾರ್ಕೀವ್ ಹಾಗೂ ಕೀವ್‍ನಲ್ಲಿ ರಾತ್ರಿಯೂ ಗುಂಡಿನ ಮೊರೆತ ಕೇಳಿಸಿತ್ತು. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‍ನಿಂದ ಗ್ರೌಂಡ್ ರಿಪೋರ್ಟ್ ಮಾಡಿದ ವಿದ್ಯಾರ್ಥಿಗಳು

  • ಉಕ್ರೇನ್‍ನಲ್ಲಿ ಶಿಕ್ಷಣ ಚೆನ್ನಾಗಿದೆ, ವಾಪಸ್ ಹೋಗುತ್ತೇವೆ; ವಿದ್ಯಾರ್ಥಿನಿ

    ಉಕ್ರೇನ್‍ನಲ್ಲಿ ಶಿಕ್ಷಣ ಚೆನ್ನಾಗಿದೆ, ವಾಪಸ್ ಹೋಗುತ್ತೇವೆ; ವಿದ್ಯಾರ್ಥಿನಿ

    ಬೆಂಗಳೂರು: ರಷ್ಯಾ ಮಾಡಿದ ದಾಳಿಗೆ ಸಿಲುಕಿರುವ ಉಕ್ರೇನ್ ಜನರ ಪರಿಸ್ಥಿತಿ ದಿನದಿಂದದಿನಕ್ಕೆ ಹದಗೆಡುತ್ತಿದೆ. ಯುದ್ಧ ಪೀಡಿತ ಪ್ರದೇಶ ಉಕ್ರೇನ್‍ನಲ್ಲಿ ಸಿಲಿಕಿಕೊಂಡಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಈಗಾಗಲೇ ಮೂರು ಬ್ಯಾಚ್‍ನಲ್ಲಿ ಏರ್‌ಲಿಫ್ಟ್‌  ಮಾಡಲಾಗಿದೆ.

    ಏರ್‍ಲಿಫ್ಟ್ ನಿಂದ ಬೆಂಗಳುರಿಗೆ ಬಂದಿಳಿದ ವಿದ್ಯಾರ್ಥಿನಿ ಹಬೀಬಾ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಮೂಲತಃ ಚಿತ್ರದುರ್ಗದಳಾಗಿದ್ದೇನೆ. ನಾನು ಸೆಕೆಂಡಿಯರ್ ಓದುತ್ತಿದ್ದೇನೆ. ನಮಗೆ ಮೊನ್ನೆವರೆಗೂ ತರಗತಿ ನಡೆದಿದೆ. ನಮ್ಮ ಜೀವನದ ಪ್ರಶ್ನೆ ಇದಾಗಿದೆ, ನಾವು ಮತ್ತೇ ಹೋಗುತ್ತೇವೆ. ಉಕ್ರೇನ್ ಎಜುಕೇಶನ್ ಸಿಸ್ಟಮ್ ತುಂಬಾ ಚೆನ್ನಾಗಿದೆ. ನಾನು ತುಂಬಾ ಕಲಿತಿದ್ದೇನೆ ಎಂದಿದ್ದಾರೆ.

    ಅಪ್ಪ ಅಮ್ಮನ ಮೂಖ ನೋಡಲು ಕಾಯುತ್ತಿದ್ದೇನು. ನಾವು ಇರುವ ಸ್ಥಳಕ್ಕೆ ಹತ್ತಿರ ಇರುವ ಪ್ರದೇಶಗಳನ್ನು ರಷ್ಯಾ ಆಕ್ರಮಣ ಮಾಡಿಕೊಂಡಾಗ ನಾವು ಭಯಭೀತರಾಗಿದ್ದೇವು. ಭಾರತ, ಕರ್ನಾಟಕ ಸರ್ಕಾರ ನಮಗೆ ಸಹಾಯ ಮಾಡಿದ್ದಾರೆ. ಉಕ್ರೇನ್‍ನಲ್ಲಿ ಟೆಂಪ್ರೆಚರ್ ಕೂಡಾ ಕಡಿಮೆ ಇದೆ. ಊಟ, ನೀರು ಇಲ್ಲದೆ ಸಂಕಷ್ಟ ಪಡುಂತಾಗಿದೆ. ಇದನ್ನೂ ಓದಿ: ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!

    ಯುದ್ಧ ಆಗಿರುವ ದಿನವೇ ನಾವು ಆಹಾರವನ್ನು ತೆಗೆದುಕೊಂಡು ಇಟ್ಟಿದ್ದೇವು. ಉಕ್ರೇನ್ ಸಿಟಿಜನ್ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿರಿ, ಬಾರ್ಡ್ ಕಡೆ ಹೋಗಿ. ಆದರೆ ಪುರುಷರು ಬನ್ನಿ ಯುದ್ಧದಲ್ಲಿ ಕೈ ಜೋಡಿಸಿ ಎಂದು ಸೂಚನೆ ನೀಡಲಾಗಿದೆ. ಕೀವ್, ಖಾರ್ಕೀವ್‍ನಲ್ಲಿರುವ ಜನರು ತುಂಬಾ ಭಯಬೀತರಾಗಿದ್ದಾರೆ. ಅಲ್ಲಿರುವ ನಮ್ಮ ಸ್ನೇಹಿತರನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗಲಿಲ್ಲ. ಅಲ್ಲಿ ನೆಟ್‍ವರ್ಕ್‍ಗಳನ್ನು ಕಡಿತ ಮಾಡಲಾಗಿದೆ. ಅಲ್ಲಿ ಇನ್ನು ಹಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರು ಮರಳಿ ತವರಿಗೆ ಬರವಂತಾಗಲಿ ಎಂದಿದ್ದಾರೆ.

  • ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

    ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

    ಕೀವ್: ಉಕ್ರೇನ್‍ನ ಶಿಶುಪಾಲನಾ ಕೇಂದ್ರ ಸೇರಿದಂತೆ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ ನಡೆಸಿದ್ದು, 7 ವರ್ಷದ ಬಾಲಕಿ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.

    ಉಕ್ರೇನ್‍ನ ಈಶಾನ್ಯ ನಗರದ ಓಖ್ಟಿರ್ಕಾದಲ್ಲಿ ರಷ್ಯಾದ ದಾಳಿ ನಡೆಸಿದ ಪರಿಣಾಮವಾಗಿ ಏಳು ವರ್ಷದ ಬಾಲಕಿ ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ ಶಿಶುವಿಹಾರ ಶಾಲೆ ಮತ್ತು ಅನಾಥಾಶ್ರಮದಲ್ಲಿ ಘಟನೆ ನಡೆದಿದೆ ಎಂದು ಗವರ್ನರ್ ಡಿಮಿಟ್ರಿ ಝಿವಿಟ್ಸ್ಕಿ ತಿಳಿಸಿದರು.

    ಉಕ್ರೇನ್, ರಷ್ಯಾ ಯುದ್ಧ 4ನೇ ದಿನಕ್ಕೆ ಕಾಲಿಟ್ಟಿದ್ದು, ದಿನೇ ದಿನೇ ಉಗ್ರಸ್ವರೂಪ ಪಡೆದುಕೊಳ್ಳುತ್ತಿದೆ. ಉಕ್ರೇನ್‍ನಲ್ಲಿ ಅಪಾರ ಸಾವು, ನೋವುಗಳು ಆಗುತ್ತಿವೆ. ಈಗ ಶಿಶು ಪಾಲನಾಕೇಂದ್ರ, ಅನಾಥಾಶ್ರಮಗಳ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದ್ದಾರೆ. ಇದರಲ್ಲಿ ರಷ್ಯಾ ಬಾಂಬ್ ದಾಳಿಗೆ 7 ವರ್ಷದ ಬಾಲಕಿ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಅಂತಾರಾಷ್ಟ್ರೀಯ ತನಿಖೆಗೆ ಉಕ್ರೇನ್ ಒತ್ತಾಯಿಸುತ್ತಿದೆ. ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‍ನಿಂದ ಗ್ರೌಂಡ್ ರಿಪೋರ್ಟ್ ಮಾಡಿದ ವಿದ್ಯಾರ್ಥಿಗಳು

    ನಿನ್ನೆ ಬಂಕರ್‌ಗಳಲ್ಲಿ ರಷ್ಯಾ ಬಾಂಬ್ ದಾಳಿಯನ್ನು ನಡೆಸಿತ್ತು. ಇದೀಗ ಶಿಶುಪಾಲನಾ ಕೇಂದ್ರದಲ್ಲಿ ದಾಳಿ ನಡೆಸಿದೆ. ಈ ಮೊದಲು ಕೈವಾದ ಜೂಲಿಯಾನಿ ವಿಮಾನ ನಿಲ್ದಾಣದ ಪಕ್ಕ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಉಕ್ರೇನ್‍ನ ಹಲವು ಪ್ರದೇಶಗಳನ್ನು ರಷ್ಯಾ ಮಿಲಿಟರಿ ಪಡೆ ಸುತ್ತುವರಿದಿದ್ದು, ಅಲ್ಲಲ್ಲಿ ಬಾಂಬ್‍ಗಳ ದಾಳಿ ನಡೆಯುತ್ತಿದೆ. ಉಕ್ರೇನ್‍ನಲ್ಲಿ ಈವರೆಗೆ 300ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!

  • ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!

    ಕರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಿಸಿದ ರಷ್ಯಾ ಸೇನೆ..!

    ಕೀವ್: ಉಕ್ರೇನ್ ಮೇಲೆ ರಷ್ಯಾ ಸೈನಿಕರ ಆಕ್ರಮಣ ದಾಳಿ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಉಕ್ರೇನ್‍ನ ಎರಡನೇ ಅತಿ ದೊಡ್ಡ ನಗರ ಕರ್ಕಿವ್‍ನಲ್ಲಿರುವ ಗ್ಯಾಸ್ ಪೈಪ್‍ಲೈನ್ ಅನ್ನು ರಷ್ಯಾ ಸೇನೆ ಸ್ಫೋಟಿಸಿದೆ.

    ಈ ವಿಚಾರವನ್ನು ಉಕ್ರೇನ್ ಅಧ್ಯಕ್ಷರ ಕಚೇರಿ ಅಧಿಕೃತವಾಗಿ ತಿಳಿಸಿದೆ. ಸ್ಫೋಟದ ಪರಿಣಾಮ ಆಯಿಲ್ ಟ್ಯಾಂಕ್ ಸ್ಫೋಟಗೊಂಡು ಆಗಸದಲ್ಲಿ ದೊಡ್ಡ ಅಣಬೆಯಾಕಾರದ ಮೋಡ ಆವರಿಸಿಕೊಂಡಿದೆ. ಇದು ಪರಿಸರಕ್ಕೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಲಿದೆ ಎಂದು ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

    https://twitter.com/WW32022/status/1497721984339349512

    ನಗರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಮನೆ ಕಿಟಕಿಗಳನ್ನು ಬಟ್ಟೆಯಲ್ಲಿ ಮುಚ್ಚಬೇಕು. ಜೊತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸುವಂತೆ ಉಕ್ರೇನ್ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಅಪ್ಪ-ಅಮ್ಮ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ, ನನ್ನ ಬಗ್ಗೆ ಯೋಚಿಸ್ಬೇಡಿ- ಯೋಧನ ಭಾವುಕ ವೀಡಿಯೋ ವೈರಲ್

    https://twitter.com/WW32022/status/1497758655407665165

    ಕರ್ಕಿವ್ ನಗರದಲ್ಲಿ ಉಕ್ರೇನ್ ಹಾಗೂ ರಷ್ಯಾ ಸೇನೆಗಳ ನಡುವೆ ಭಾರೀ ಯುದ್ಧ ನಡೆಯುತ್ತಿದೆ ಎಂದು ತಿಳಿದುಬಂದಿದೆ. ರಷ್ಯಾ ಗಡಿಯಿಂದ ಈ ನಗರ 40 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿ ಸುಮಾರು 15 ಲಕ್ಷ ಜನರು ವಾಸಿಸುತ್ತಿದ್ದಾರೆ. ಇದನ್ನೂ ಓದಿ:‌ ಪ್ರಧಾನಿಗೆ ಕರೆ ಮಾಡಿ ರಾಜಕೀಯ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ

  • ಅಪ್ಪ-ಅಮ್ಮ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ, ನನ್ನ ಬಗ್ಗೆ ಯೋಚಿಸ್ಬೇಡಿ- ಯೋಧನ ಭಾವುಕ ವೀಡಿಯೋ ವೈರಲ್

    ಅಪ್ಪ-ಅಮ್ಮ ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ, ನನ್ನ ಬಗ್ಗೆ ಯೋಚಿಸ್ಬೇಡಿ- ಯೋಧನ ಭಾವುಕ ವೀಡಿಯೋ ವೈರಲ್

    ಕೀವ್: ರಷ್ಯಾ ರಣೋತ್ಸಾಹ 4ನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಪುಟ್ಟ ದೇಶವಾಗಿರುವ ಉಕ್ರೇನ್ ಪತರಗುಟ್ಟಿದೆ. ಇದರ ಮಧ್ಯೆ ಉಕ್ರೇನ್ ಸೈನಿಕರೊಬ್ಬರು ತಮ್ಮ ಪೋಷಕರನ್ನು ನೆನಪು ಮಾಡಿಕೊಂಡು ಭಾವುಕರಾದ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಈಗಾಗಲೇ ಉಭಯ ದೇಶಗಳ ಹಲವಾರು ಸೈನಿಕರು ಹತರಾಗಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‍ನ ಫೋಟೋಬ್ರಿಡ್ಜ್ ನಲ್ಲಿ ಏಕಾಂಗಿಯಾಗಿ ಗಡಿ ರಕ್ಷಣೆ ಮಾಡುತ್ತಿರುವ 21 ವರ್ಷದ ಸೆರ್ಗಿ ಪೆಟ್ರೋಶೆಂಕೊ ಯೋಧ ಇದೀಗ ತನ್ನ ಪೋಷಕರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:‌ ಪ್ರಧಾನಿಗೆ ಕರೆ ಮಾಡಿ ರಾಜಕೀಯ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ

    ಯೋಧನ ಪೋಷಕರು ವಾಸವಾಗಿರುವ ಸ್ಥಳದಲ್ಲಿ ರಷ್ಯಾ ಯೋಧರು ದಾಳಿ ನಡೆಸಿದ್ದಾರೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಯೋಧ ತಮ್ಮ ಹೆತ್ತವರನ್ನು ನೆನೆದು ಗದ್ಗದಿತರಾಗಿದ್ದಾರೆ. ನಾನು ಜೀವಂತವಾಗಿ ಉಳಿಯುತ್ತೇನೋ ಇಲ್ಲವೋ ಗೋತ್ತಿಲ್ಲ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ, ನನ್ನ ಬಗ್ಗೆ ಯಾವುದೇ ಕಾರಣಕ್ಕೂ ಯೋಚನೆ ಮಾಡಬೇಡಿ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:‌ ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

    https://twitter.com/Yashika1Keswani/status/1497555000314445828

    ಇತ್ತ ಉಕ್ರೇನ್‍ನ ರಸ್ತೆಗಳಲ್ಲಿ ಬಾಂಬ್ ದಾಳಿ, ಅಪಾರ್ಟ್‍ಮೆಂಟ್‍ಗಳ ಮೇಲೆ ರಷ್ಯಾ ಸೈನಿಕರು ಮಿಸೈಲ್ ದಾಳಿ ಮಾಡುತ್ತಿದ್ದಾರೆ. ಬಂಕರ್‍ಗಳ ಹೊರಗೆ ಬಾಂಬ್ ಸದ್ದು ಕೇಳಿಸುತ್ತಿದ್ದು, ಜನ ಜೀವ ಭಯದಲ್ಲಿದ್ದಾರೆ. ಉಕ್ರೇನ್‍ನ ಕಾರ್ಕೀವ್ ಹಾಗೂ ಕೀವ್‍ನಲ್ಲಿ ರಾತ್ರಿಯೂ ಗುಂಡಿನ ಮೊರೆತ ಕೇಳಿಸಿತ್ತು. ಕಗ್ಗತ್ತಲ ರಾತ್ರಿಯಲ್ಲಿ ಆಗಸದಲ್ಲಿ ಬಾಂಬ್, ಮಿಸೈಲ್‍ಗಳ ಆರ್ಭಟ ಇತ್ತು. ಉಕ್ರೇನ್ ರಕ್ಷಣೆ ಮಾಡಲು ಸಾವಿರಾರು ಯೋಧರು ರಷ್ಯಾ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಇದನ್ನೂ ಓದಿ:‌ ಅಪ್ಪ-ಅಮ್ಮ ಬಳಿ ಸುಳ್ಳು ಹೇಳಿದ್ದೆವು- ಉಕ್ರೇನ್ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ

  • ಪ್ರಧಾನಿಗೆ ಕರೆ ಮಾಡಿ ರಾಜಕೀಯ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ

    ಪ್ರಧಾನಿಗೆ ಕರೆ ಮಾಡಿ ರಾಜಕೀಯ ಬೆಂಬಲ ಕೋರಿದ ಉಕ್ರೇನ್ ಅಧ್ಯಕ್ಷ

    ನವದೆಹಲಿ: ಉಕ್ರೇನ್‍ನ ಮೇಲೆ ರಷ್ಯಾ ದಾಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸಹಾಯವನ್ನು ಕೋರಿದ್ದಾರೆ.

    ವಿಶ್ವಸಂಸ್ಥೆಯಲ್ಲಿ ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಖಂಡಿಸುವ ನಿರ್ಣಯದಿಂದ ದೂರವುಳಿದ ನಿರ್ಧಾರವನ್ನು ರಷ್ಯಾ ಶ್ಲಾಘಿಸಿತ್ತು. ಇದಾದ ಬಳಿಕ ಉಕ್ರೇನ್ ಅಧ್ಯಕ್ಷ ಅವರು ಪ್ರಧಾನಿ ಅವರೊಂದಿಗೆ ಮಾತನಾಡಿ ರಾಜಕೀಯ ಬೆಂಬಲ ಕೋರಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

    1 ಲಕ್ಷಕ್ಕೂ ಹೆಚ್ಚು ಸೈನಿಕರಿಂದ ರಷ್ಯಾ ದಾಳಿ ಮಾಡುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದ್ದೇನೆ. ಜೊತೆಗೆ ಶಾಂತಿಯುತ ಪ್ರಯತ್ನಗಳಿಗೆ ಭಾರತ ಸರ್ಕಾರ ಸಹಕರಿಸಲು ಸಿದ್ಧ ಎಂದು ತಿಳಿಸಿದೆ ಎಂದು ಉಕ್ರೇನ್ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.

    ಈ ಬಗ್ಗೆ ಪ್ರಧಾನಿ ಕಚೇರಿ ಪ್ರಕಟನೆ ಹೊರಡಿಸಿದ್ದು, ಉಕ್ರೇನ್ ರಷ್ಯಾ ನಡುವಿನ ಯುದ್ಧದಲ್ಲಿ ಉಂಟಾದ ಸಾವು, ನೋವು ಆಸ್ತಿ-ಪಾಸ್ತಿ ಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದರು. ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ಅವರನ್ನು ತವರಿಗೆ ಕರೆತರಲು ಉಕ್ರೇನ್ ಅಧಿಕಾರಿಗಳ ಸಹಾಯವನ್ನು ಕೋರಿದರು ಎಂದು ತಿಳಿಸಿದೆ.

    ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣವನ್ನು ಖಂಡಿಸುವ ಯುಎನ್‍ಎಸ್‍ಸಿ ನಿರ್ಣಯದಿಂದ ಭಾರತ ದೂರ ಉಳಿದಿದೆ. ರಷ್ಯಾ ವಿರುದ್ಧ 11 ರಾಷ್ಟ್ರಗಳು ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರೆ, ಭಾರತ ಸೇರಿ ಮೂರು ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದು ತಟಸ್ಥ ನೀತಿ ಅನುಸರಿಸಿವೆ. ಇದನ್ನೂ ಓದಿ: ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಭಾರತ, ಚೀನಾ, ಯುಎಇ ಈ ಮೂರು ರಾಷ್ಟ್ರಗಳು ಯುಎನ್‍ಎಸ್‍ಸಿ ನಿರ್ಣಯದಿಂದ ದೂರ ಉಳಿದಿವೆ. ಆದರೆ 11 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಈ ವೇಳೆ ರಷ್ಯಾ ತನ್ನ ವಿಟೋ ಅಧಿಕಾರವನ್ನು ಬಳಸಿದೆ. ಇದನ್ನೂ ಓದಿ: ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

    ಯುಎನ್‍ಎಸ್‍ಸಿ ನಿರ್ಣಯದಿಂದ ದೂರ ಉಳಿದ ಭಾರತ ಸೇರಿ ಮೂರು ರಾಷ್ಟ್ರಗಳಿಗೆ ರಷ್ಯಾ ಧನ್ಯವಾದ ತಿಳಿಸಿದೆ. ರಷ್ಯಾ ವಿರುದ್ಧದ ಮತದಾನದಿಂದ ಭಾರತ, ಚೀನಾ, ಯುಎಇ ದೂರ ಉಳಿದಿದ್ದು, ತಟಸ್ಥವಾಗಿವೆ. ಹೀಗಾಗಿ ರಷ್ಯಾ ಕೃತಜ್ಞತೆ ಸಲ್ಲಿಸಿದೆ.

  • ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

    ಶೀಘ್ರವೇ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿರುವ ಜರ್ಮನಿ

    ಕೀವ್: ರಷ್ಯಾ ವಿರುದ್ಧ ತನ್ನ ರಾಜಧಾನಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಉಕ್ರೇನ್‍ಗೆ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು ಇತರೆಗಳನ್ನು ಕಳುಹಿಸಲು ಮತ್ತು ರಷ್ಯಾಕ್ಕೆ ಸ್ವಿಫ್ಟ್ ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲು ಜರ್ಮನಿ ಸಿದ್ಧವಾಗಿದೆ ಎಂದು ಜರ್ಮನ್ ಸರ್ಕಾರ ತಿಳಿಸಿದೆ.

    ಶನಿವಾರ ಸಂಜೆ ಜರ್ಮನಿಯ ಆರ್ಥಿಕ ಮತ್ತು ಹವಾಮಾನ ಸಚಿವಾಲಯವು 1,000 ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳನ್ನು ಮತ್ತು 500 ಸ್ಟಿಂಗರ್‌ಗಳನ್ನು ಉಕ್ರೇನ್‍ಗೆ ಸಾಧ್ಯವಾದಷ್ಟು ಬೇಗ ರವಾನಿಸುವುದಾಗಿ ಘೋಷಿಸಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ಜರ್ಮನ್ ಓಲಾಫ್ ಸ್ಕೋಲ್ಜ್ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಒಂದು ಮಹತ್ವದ ತಿರುವನ್ನು ಸೂಚಿಸುತ್ತದೆ. ಇದು ನಮ್ಮ ಸಂಪೂರ್ಣ ಯುದ್ಧಾನಂತರದ ಆದೇಶಕ್ಕೆ ಧಕ್ಕೆ ತರುತ್ತದೆ. ಈ ಪರಿಸ್ಥಿತಿಯಲ್ಲಿ, ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣಕಾರಿ ಸೈನ್ಯದ ವಿರುದ್ಧ ಉಕ್ರೇನ್ ತನ್ನನ್ನು ರಕ್ಷಿಸಿಕೊಳ್ಳಲು ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

    ಉಕ್ರೇನ್ ಸೇರಿದಂತೆ ಸಂಘರ್ಷ ವಲಯಗಳಿಗೆ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡದಿರುವ ನೀತಿಗೆ ಜರ್ಮನಿ ದೀರ್ಘಕಾಲವಾಗಿ ಅಂಟಿಕೊಂಡಿದ್ದು, ಈ ನೀತಿಗೆ ಬದ್ಧರಾಗಿರುವುದಾಗಿ ಶುಕ್ರವಾರ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ

    Ukraine

    ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಉಕ್ರೇನ್‍ಗೆ ಸಹಾಯ ಮಾಡಲು ಸಾಕಷ್ಟು ಮಿತ್ರದೇಶಗಳು ಮುಂದೆ ಬಂದಿದ್ದು, ಈಗಾಗಲೇ ಜರ್ಮನಿ ಉಕ್ರೇನ್ ಸೈನಿಕರ ರಕ್ಷಣೆಗೆ 5,000 ಹೆಲ್ಮೆಟ್‍ಗಳನ್ನು ಕೊಡುಗೆಯಾಗಿ ನೀಡಿದೆ. ಇದಲ್ಲದೆ, ಜರ್ಮನಿ 14 ಶಸ್ತ್ರಸಜ್ಜಿತ ವಾಹನಗಳು ಮತ್ತು 10,000 ಟನ್‍ಗಳಷ್ಟು ಇಂಧನವನ್ನು ಉಕ್ರೇನ್‍ಗೆ ಕಳುಹಿಸುವುದಾಗಿ ಹೇಳಿದೆ.

    ರಷ್ಯಾದ ದಾಳಿಯಿಂದ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಕ್ತವಾಗಿರಬೇಕು. ಹಾಗಾಗಿ ತುರ್ತಾಗಿ ಅಗತ್ಯವಿರುವ ವಸ್ತುಗಳನ್ನು ಒದಗಿಸುವಲ್ಲಿ ಫೆಡರಲ್ ಸರ್ಕಾರ ಉಕ್ರೇನ್‍ಗೆ ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ಸಚಿವ ಅನ್ನಾಲೆನಾ ಬೇರ್ಬಾಕ್ ಮತ್ತು ಆರ್ಥಿಕ ಸಚಿವ ರಾಬರ್ಟ್ ಹ್ಯಾಬೆಕ್ ಹೇಳಿದ್ದಾರೆ.

  • ಅಪ್ಪ-ಅಮ್ಮ ಬಳಿ ಸುಳ್ಳು ಹೇಳಿದ್ದೆವು- ಉಕ್ರೇನ್ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ

    ಅಪ್ಪ-ಅಮ್ಮ ಬಳಿ ಸುಳ್ಳು ಹೇಳಿದ್ದೆವು- ಉಕ್ರೇನ್ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ

    ನವದೆಹಲಿ: ಉಕ್ರೇನ್ ನಲ್ಲಿ ರಷ್ಯಾ ಸೈನಿಕರ ಆಕ್ರಮಣ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಉಕ್ರೇನ್ ನಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲಾಗಿದೆ. ಹೀಗೆ ಬಂದಿರುವ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ತಾವು ಎದುರಿಸಿದ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

    ವಿದ್ಯಾರ್ಥಿನಿಯೊಬ್ಬಳು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಉಕ್ರೇನ್ ಕರಾಳತೆಯನ್ನು ಬಿಚ್ಚಿಟ್ಟಿದ್ದಾಳೆ. ಅಪ್ಪ-ಅಮ್ಮಂಗೆ ಸುಳ್ಳು ಹೇಳುತ್ತಿದ್ದೆವು. ಅಲ್ಲಿ ಇದ್ದ ಆಹಾರದಲ್ಲಿ ಅಲ್ಪ-ಸ್ವಲ್ಪ ತಿಂದು ಬದುಕುತ್ತಿದ್ದೆವು. ಪ್ರತಿ ಕ್ಷಣ ನಮ್ಮಲ್ಲಿ ಆತಂಕ ಇತ್ತು. ಯಾವಾಗ ಎಲ್ಲಿ ಬಾಂಬ್ ಬೀಳುತ್ತೋ ಅನ್ನೋ ಭೀತಿ ಇತ್ತು ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಉಕ್ರೇನ್‍ನಿಂದ 2ನೇ ವಿಮಾನದಲ್ಲಿ ದೆಹಲಿಗೆ ಬಂದ 250 ಭಾರತೀಯರು

    ಸದ್ಯ ಕರ್ನಾಟಕದ 13 ವಿದ್ಯಾರ್ಥಿಗಳು ಸೇರಿ ಒಟ್ಟು 250 ಮಂದಿ ರೊಮೇನಿಯಾದಿಂದ ದೆಹಲಿ ತಲುಪಿದ್ದಾರೆ. ರಾತ್ರಿ 3:30ಕ್ಕೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಜೋತಿರಾಧಿತ್ಯಸಿಂದ್ಯಾ ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು, ಎರಡನೇ ವಿಮಾನದಲ್ಲಿ 250 ವಿದ್ಯಾರ್ಥಿಗಳು ಬಂದಿದ್ದಾರೆ. ಇಂದು ಮತ್ತೆರಡು ವಿಮಾನಗಳ ಮೂಲಕ ಭಾರತೀಯರು ಬರಲಿದ್ದಾರೆ. ನಾಲ್ಕು ದೇಶಗಳ ಸಹಕಾರದಲ್ಲಿ ಕಾರ್ಯಚರಣೆ ಮಾಡುತ್ತಿದ್ದೇವೆ. ಪರಿಸ್ಥಿತಿ ಆಧರಿಸಿ ಮತ್ತಷ್ಟು ವೇಗವಾಗಿ ಭಾರತೀಯರನ್ನು ಕರೆ ತರಲಾಗುವುದು ಎಮದು ತಿಳಿಸಿದರು.