Tag: ರಷ್ಯಾ

  • ನವೀನ್ ವ್ಯಕ್ತಿತ್ವ ಪ್ರಶಂಸಿಸಿದ ಚಂದನವನದ ಮೋಹಕತಾರೆ

    ನವೀನ್ ವ್ಯಕ್ತಿತ್ವ ಪ್ರಶಂಸಿಸಿದ ಚಂದನವನದ ಮೋಹಕತಾರೆ

    ಮೋಹಕತಾರೆ ರಮ್ಯಾ ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಶೇಖರಪ್ಪ ವ್ಯಕ್ತಿತ್ವದ ಬಗ್ಗೆ ಪ್ರಶಂಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

    ನಿನ್ನೆ ನವೀನ್ ಶೇಖರಪ್ಪ ಉಕ್ರೇನ್-ರಷ್ಯಾ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಚಂದನವನ ಸೇರಿದಂತೆ ಅನೇಕ ಗಣ್ಯರು ನವೀನ್ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇನ್‍ಸ್ಟಾಗ್ರಾಮ್ ನಲ್ಲಿ ರಮ್ಯಾ ಅವರು ನವೀನ್ ತನ್ನ ಸ್ನೇಹಿತನ ಜೊತೆ ಚಾಟ್ ಮಾಡಿದ್ದ ಫೋಟೋ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಗೆ, ಕರ್ನಾಟಕದ ಹಾವೇರಿಯ 21 ವರ್ಷ ವಯಸ್ಸಿನ ನವೀನ್ ಶೇಖರಪ್ಪ 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ. ನಿನ್ನೆ ಉಕ್ರೇನ್‍ನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಅವನು ಮತ್ತು ಅವನ ಸ್ನೇಹಿತರು ದಿನಗಟ್ಟಲೆ ಊಟ ಮತ್ತು ನೀರಿಲ್ಲದೆ ಬಂಕರ್‌ಗಳಲ್ಲಿ ಇದ್ದರು. ನವೀನ್ ಮತ್ತು ಆತನ ಸ್ನೇಹಿತ(ಚಾಟ್‍ನಲ್ಲಿ) ಎಲ್ಲರಿಗೂ ಆಹಾರವನ್ನು ತರಲು ಸ್ವಯಂಪ್ರೇರಿತರಾಗಿ ಹೊರ ಹೋಗಲು ನಿರ್ಧರಿಸಿದ್ದಾರೆ. ಆಹಾರವನ್ನು ತರಬೇಕು ಎಂದು ಹೊರಟಾಗ ನವೀನ್ ಸ್ನೇಹಿತ ಜಾಕೆಟ್ ಧರಿಸಿರಲಿಲ್ಲ. ಉಕ್ರೇನ್ ನಲ್ಲಿ ಹೆಚ್ಚು ಚಳಿಯಾಗಿದ್ದರಿಂದ ನವೀನ್ ತನ್ನ ಸ್ನೇಹಿತನನ್ನು ಬಂಕರ್‍ಗೆ ಹಿಂತಿರುಗಲು ಹೇಳಿದರು. ಅವರು ತನ್ನ ಸ್ನೇಹಿತರಿಗೆ ಆಹಾರವನ್ನು ತರಲು ಕಿರಾಣಿ ಅಂಗಡಿಗೆ ಒಬ್ಬನೇ ಹೋದನು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ

     

    View this post on Instagram

     

    A post shared by Ramya/Divya Spandana (@divyaspandana)

    ನಮ್ಮೆಲ್ಲರಿಗಿಂತ ಹೆಚ್ಚು ಮಾನವೀಯತೆ ನವೀನ್ ಅವರಲ್ಲಿ ಇತ್ತು. ಅವರು ಬೇರೆಯವರ ಬಗ್ಗೆ ಕಾಳಜಿ ವಹಿಸಿದ್ದರಿಂದ ಅವರೊಬ್ಬರೇ ಹೊರಬಂದರು. ಅವರಿಗೆ ಸಹಾನುಭೂತಿ ಇತ್ತು. ಅವರು ಧೈರ್ಯಶಾಲಿಯಾಗಿದ್ದರು. ಯುದ್ಧದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಆಡಳಿತವು ವೇಗವಾಗಿ ಪ್ರತಿಕ್ರಿಯಿಸದ ಕಾರಣ ಈ ಸಾವು ಸಂಭವಿಸಿದೆ. ಪ್ರಜ್ಞೆಯಿಲ್ಲದ ಯುದ್ಧದಿಂದ ಉಂಟಾದ ಸಾವಿಗೆ ಟ್ರೋಲ್‍ಗಳು ಈ ಹುಡುಗನನ್ನು ದೂಷಿಸುತ್ತಿದೆ. ಅನೇಕ ಜನರ ಜೀವಗಳನ್ನು ಉಳಿಸಿದ ಹುಡುಗನ ಬಗ್ಗೆ ಅವರು ತುಂಬಾ ದ್ವೇಷವನ್ನು ಹೊಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    RAMYA

    ಹುಡುಗ ಮೃತಪಟ್ಟ ಕಾರಣ ನಾನು ಈ ಪೋಸ್ಟ್ ಮಾಡುತ್ತಿದ್ದೇನೆ. ಇದರಿಂದ ಅವನ ಸ್ನೇಹಿತರು ಮತ್ತು ಕುಟುಂಬಕ್ಕೆ ಹೆಚ್ಚು ಕಷ್ಟಕೊಡಬೇಡಿ. ಅವರನ್ನು ಶಾಂತಿಯಿಂದ ಇರಲು ಬಿಡಿ. ನವೀನ್ ಸ್ನೇಹಿತರು ಮತ್ತು ಕುಟುಂಬದವರು ನಿಮ್ಮ ಸಹಾನುಭೂತಿ ಮತ್ತು ಪ್ರೀತಿಗೆ ಅರ್ಹರು ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬೆಳಗಾವಿ 19 ವಿದ್ಯಾರ್ಥಿಗಳು ಸಿಲುಕಿದ್ದು, ಇಬ್ಬರು ವಾಪಸ್ ಆಗಿದ್ದಾರೆ: ಜಿಲ್ಲಾಧಿಕಾರಿ

    ನವೀನ್ ನಮ್ಮನ್ನು ಕ್ಷಮಿಸಿ. ನಾವು ನಿಮ್ಮನ್ನು ಉಳಿಸಿಕೊಳ್ಳಲು ವಿಫಲಗೊಂಡಿದ್ದೇವೆ. ನಿಮ್ಮಿಂದ ನಾವು ತುಂಬಾ ಕಲಿಯ ಬೇಕು. ಜಗತ್ತಿಗೆ ನಿಮ್ಮಂತಹ ವ್ಯಕ್ತಿಗಳು ಹೆಚ್ಚು ಅಗತ್ಯವಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿಕೊಂಡಿದ್ದಾರೆ. ನವೀನ್ ಮತ್ತು ಅವರ ಒಳ್ಳೆಯತನವನ್ನು ಹೇಗೆ ಪ್ರಶಂಸಿಸಬೇಕೆಂದು ನಿಮಗೆ ಸಾಧ್ಯವಾಗದಿದ್ದರೆ ಮತ್ತು ತಿಳಿದಿಲ್ಲದಿದ್ದರೆ ದಯವಿಟ್ಟು ಕಾಮೆಂಟ್ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

  • ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ಅಸಹಾಯಕ ಸ್ಥಿತಿಗೆ ಕೇಂದ್ರವೇ ಕಾರಣ: ಸಿದ್ದರಾಮಯ್ಯ

    ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ಅಸಹಾಯಕ ಸ್ಥಿತಿಗೆ ಕೇಂದ್ರವೇ ಕಾರಣ: ಸಿದ್ದರಾಮಯ್ಯ

    ಬೆಂಗಳೂರು: ಉಕ್ರೇನ್‍ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರು ಮುಖ್ಯವಾಗಿ ವಿದ್ಯಾರ್ಥಿಗಳು ಸಾವು-ಬದುಕಿನ ಹೋರಾಟ ನಡೆಸುತ್ತಿರುವಂತಹ ಅಸಹಾಯಕ ಸ್ಥಿತಿಗೆ ತಲುಪಲು ಕೇಂದ್ರ ಸರ್ಕಾರದ ಅನಿಶ್ಚಿತತೆ ಮತ್ತು ಬೇಜವಾಬ್ದಾರಿ ನೀತಿ-ನಿಲುವುಗಳೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

    ಕಳೆದ ಕೆಲವು ತಿಂಗಳುಗಳಿಂದ ಉಕ್ರೇನ್ ಮತ್ತು ರಷ್ಯಾಗಳ ನಡುವೆ ಯಾವುದೇ ಕ್ಷಣದಲ್ಲಿ ಆದರೂ ಯುದ್ಧ ನಡೆಯಬಹುದು ಎಂಬ ವರದಿಗಳಿತ್ತು. ಈ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ದೇಶಗಳು ಅಲ್ಲಿರುವ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಿದ್ದರು. ಆದರೆ ಭಾರತ ಮಾತ್ರ ಯುದ್ಧ ಪ್ರಾರಂಭವಾಗುವವರೆಗೆ ಭಾರತೀಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ತನ್ನನ್ನು ವಿಶ್ವಗುರು ಎಂದು ಕೊಂಡಾಡುತ್ತಾ ಭಕ್ತರು ನಡೆಸುತ್ತಿರುವ ಬೋಪರಾಕ್ ಭಜನೆಗೆ ಪ್ರಧಾನಿಯವರು ತಲೆ ತೂಗುತ್ತಾ ಕಾಲಹರಣ ಮಾಡಿದರೇ ವಿನಃ ಉಕ್ರೇನ್‍ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರ ಸುರಕ್ಷತೆ ಬಗ್ಗೆ ಗಮನ ನೀಡಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಕೇಂದ್ರದ ನಿರ್ಲಕ್ಷ್ಯದಿಂದ ನವೀನ್ ಸಾವು: ಕೇಂದ್ರ ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿಯೇ ಕರ್ನಾಟಕದ ವಿದ್ಯಾರ್ಥಿ ನವೀನ್ ಪ್ರಾಣ ಕಳೆದುಕೊಂಡಿದ್ದು, ಆತನ ಹೆತ್ತವರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಆ ವಿದ್ಯಾರ್ಥಿಯ ಸಹಪಾಠಿಗಳು ಮತ್ತು ಹೆತ್ತವರ ಹೇಳಿಕೆಗಳು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವರು ಸಕಾಲದಲ್ಲಿ ಈ ವಿದ್ಯಾರ್ಥಿಗಳ ನೆರವಿಗೆ ಧಾವಿಸಿ ಅವರನ್ನು ಭಾರತಕ್ಕೆ ಕರೆತಂದಿದ್ದರೆ ಅಮೂಲ್ಯವಾದ ಜೀವವೊಂದು ಉಳಿಯುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಕೇಂದ್ರವನ್ನು ಬೆಂಬಲಿಸುವೆ: ನಮ್ಮೊಳಗಿನ ರಾಜಕೀಯ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ವ್ಯತ್ಯಾಸಗಳು ಏನೇ ಇದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಈ ಕರ್ತವ್ಯ ಪ್ರಜ್ಞೆಯಿಂದಾಗಿ ಕೇಂದ್ರ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ಪೂರ್ಣವಾಗಿ ನೀಡಲು ನಾನು ಬಯಸುವುದಿಲ್ಲ. ಉಕ್ರೇನ್ ಮತ್ತು ರಷ್ಯಾ ನಡುವಿನ ಈಗಿನ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಲೇಬೇಕಾಗುತ್ತದೆ ಎಂದರು. ಇದನ್ನೂ ಓದಿ: ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು

    ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾಥಿಗಳ ಮೇಲೆ ಹಲ್ಲೆ: ಉಕ್ರೇನ್‍ನ ಬಹಳಷ್ಟು ಪ್ರದೇಶಗಳಲ್ಲಿ ಆ ದೇಶದ ಜನ ಮತ್ತು ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ-ದೌರ್ಜನ್ಯಗಳನ್ನು ನಡೆಸುತ್ತಿರುವುದು ಮಾತ್ರವಲ್ಲ, ಅಪಹರಿಸಿಕೊಂಡು ಹೋಗಿರುವ ಘಟನೆಗಳು ಕೂಡಾ ವರದಿಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ

    ನರೇಂದ್ರ ಮೋದಿ ಸರ್ಕಾರ ಯುಕ್ರೇನ್‍ನಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೂ ಗಂಗಾ ನದಿಯ ಹೆಸರು ಕೊಟ್ಟು ಅದನ್ನು ಉತ್ತರ ಪ್ರದೇಶದ ಚುನಾವಣೆಯ ಪ್ರಚಾರದಲ್ಲಿ ಬಳಸಲು ಹೊರಟಿದೆ ಎಂದ ಅವರು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಯುಕ್ರೇನ್‍ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ವಾಪಸ್ಸು ಕರೆತರುವ ಪ್ರಯತ್ನವನ್ನು ಮಾಡಬೇಕು. ಇದೇ ವೇಳೆ ಕೇಂದ್ರ ಸರ್ಕಾರ ಯುಕ್ರೇನ್ ಮತ್ತು ರಷ್ಯಾ ದೇಶಗಳ ಜೊತೆ ಮಾತುಕತೆ ನಡೆಸಿ ಭಾರತೀಯರ ಸುರಕ್ಷತೆಯನ್ನು ಖಾತರಿ ಪಡಿಸಬೇಕು ಎಂದು ಒತ್ತಾಯಿಸಿದರು.

  • ಉಕ್ರೇನ್‍ನಲ್ಲಿ ಬೆಳಗಾವಿ 19 ವಿದ್ಯಾರ್ಥಿಗಳು ಸಿಲುಕಿದ್ದು, ಇಬ್ಬರು ವಾಪಸ್ ಆಗಿದ್ದಾರೆ: ಜಿಲ್ಲಾಧಿಕಾರಿ

    ಉಕ್ರೇನ್‍ನಲ್ಲಿ ಬೆಳಗಾವಿ 19 ವಿದ್ಯಾರ್ಥಿಗಳು ಸಿಲುಕಿದ್ದು, ಇಬ್ಬರು ವಾಪಸ್ ಆಗಿದ್ದಾರೆ: ಜಿಲ್ಲಾಧಿಕಾರಿ

    ಬೆಳಗಾವಿ: ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಬೆಳಗಾವಿ ಜಿಲ್ಲೆಯ 19 ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿದ್ದು, ಅದರಲ್ಲಿ ಇಬ್ಬರು ವಾಪಸ್ ಆಗಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ್ ಹೇಳಿದರು.

    ಉಕ್ರೇನ್‍ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಜಿ.ಹಿರೇಮಠ್ ಅವರು, ರಾಜ್ಯ ನೋಡಲ್ ಅಧಿಕಾರಿ ಡಾ.ಮನೋಜ್ ರಾಜನ್ ನಮಗೆ ಪಟ್ಟಿ ನೀಡಿದ್ದಾರೆ. ಆ ಪ್ರಕಾರ ಉಕ್ರೇನ್‍ನಲ್ಲಿ ಬೆಳಗಾವಿಯ 19 ವಿದ್ಯಾರ್ಥಿಗಳು ಇದ್ದರು. ಅದರಲ್ಲಿ ಈಗಾಗಲೇ ಇಬ್ಬರು ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ. 17 ಜನರ ಪಟ್ಟಿಯನ್ನು ಆಯಾ ತಾಲೂಕಿನ ತಹಶೀಲ್ದಾರ್ ಗಳಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ನವೀನ್ ಕುಟುಂಬಕ್ಕೆ ಪರಿಹಾರ ಕೊಡ್ತೀವಿ: ಬೊಮ್ಮಾಯಿ

    ವಿದ್ಯಾರ್ಥಿಗಳ ಪಾಲಕರ ಮನೆಗೆ ಹೋಗಿ ಧೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ನೀಡಿದ್ದೇವೆ. ನಾನೂ ಸಹ ಇಂದು ಕೆಲವು ವಿದ್ಯಾರ್ಥಿಗಳ ಪಾಲಕರನ್ನು ಭೇಟಿಯಾಗುವೆ. ರಾಯಭಾಗ ಮೂಲದ ವಿದ್ಯಾರ್ಥಿ ಪಾಲಕರ ಜೊತೆ ನಾನು ಮಾತನಾಡಿದ್ದೇನೆ. ಉಕ್ರೇನ್‍ನ ಪೂರ್ವ ಭಾಗದಲ್ಲೇ ಹೆಚ್ಚಿನ ಜನ ಇದ್ದಾರೆ. ಅಲ್ಲದೆ ಕೇಂದ್ರ ಸಚಿವರ ತಂಡ ಸಹ ಉಕ್ರೇನ್‍ಗೆ ಹೋಗಿದೆ ಎಂದು ವಿವರಿಸಿದರು.

    ನಾವೆಲ್ಲರೂ ಸೇರಿ ಪೋಷಕರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ಪಾಲಕರು ನೀಡಿದ ಮಾಹಿತಿ ರಾಜ್ಯ ನೋಡಲ್ ಅಧಿಕಾರಿಗಳಿಗೆ ನೀಡಿದ್ದೇವೆ. ಸ್ಮಾರ್ಟ ಸಿಟಿ ಎಂ.ಡಿ.ಪ್ರವೀಣ್ ಬಾಗೇವಾಡಿ, ಎ.ಸಿ.ರವಿ ಕರಲಿಂಗಣ್ಣವರ ಮುಂಬೈ ಏರ್ ಏರ್ ಪೋರ್ಟ್ ನಲ್ಲಿದ್ದಾರೆ. ರಾಜ್ಯದ ವಿದ್ಯಾರ್ಥಿಗಳ ಮಾಹಿತಿ ಪಡೆದು ಟಿಕೆಟ್ ಬುಕ್ ಮಾಡಿ ಸ್ವಂತ ಊರಿಗೆ ಕಳಿಸುವ ವ್ಯವಸ್ಥೆ ಮಾಡ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ

  • ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ

    ನವದೆಹಲಿ: ಉಕ್ರೇನ್‌ನಲ್ಲಿ ಭಾರತೀಯ ಪ್ರಜೆಗಳು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರುವ ಪ್ರಯತ್ನಗಳನ್ನು ನಿಲ್ಲಿಸುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

    ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಅಭಿಯಾನವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಉದಯೋನ್ಮುಖ ಶಕ್ತಿಯಾಗಿ ಬೆಳೆದಿದೆ. ಉಕ್ರೇನ್‌ನಿಂದ ಭಾರತೀಯರನ್ನು ವಾಪಸ್‌ ಕರೆತರುವ ಸಾಮರ್ಥ್ಯವೂ ನಮ್ಮ ಸರ್ಕಾರಕ್ಕಿದೆ. ಈ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    ಸಶಸ್ತ್ರ ಪಡೆಗಳ ಶೌರ್ಯ ಮತ್ತು ಮೇಕ್ ಇನ್ ಇಂಡಿಯಾವನ್ನು ಪ್ರಶ್ನಿಸುವವರು ದೇಶವನ್ನು ಬಲಿಷ್ಠಗೊಳಿಸಲಾರರು ಎಂದು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ಚುನಾವಣೆಗಳ ಆಕ್ರಮಣಕಾರಿ ಪ್ರಚಾರದ ನಡುವೆ, ಉಕ್ರೇನ್ ಬಿಕ್ಕಟ್ಟು ಮತ್ತು ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಅವಸ್ಥೆಯು ಸರ್ಕಾರದ ಮೇಲೆ ವಿರೋಧದ ಅಲೆಯನ್ನು ಹುಟ್ಟುಹಾಕಿದೆ. ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ಪ್ರಧಾನಿ ಮೋದಿ ನೇತೃತ್ವದಲ್ಲಿ ಈವರೆಗೂ ನಾಲ್ಕು ಸಭೆಗಳು ನಡೆದಿವೆ. ಇದನ್ನೂ ಓದಿ: ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್

    ಉಕ್ರೇನ್‌ನಲ್ಲಿ ಮಂಗಳವಾರ ರಷ್ಯಾ ಸೇನಾ ಪಡೆ ನಡೆಸಿದ ಶೆಲ್‌ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಬಲಿಯಾಗಿದ್ದಾರೆ. ಈ ಘಟನೆಯಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ಒತ್ತಡ ಹೆಚ್ಚಾಗಿದೆ.

  • ಕಾಂಗ್ರೆಸ್ ಸೂಕ್ಷ್ಮತೆ ಕಳೆದುಕೊಂಡ ಪಕ್ಷ: ಅಶ್ವಥ್ ನಾರಾಯಣ

    ಕಾಂಗ್ರೆಸ್ ಸೂಕ್ಷ್ಮತೆ ಕಳೆದುಕೊಂಡ ಪಕ್ಷ: ಅಶ್ವಥ್ ನಾರಾಯಣ

    ಬೆಂಗಳೂರು: ಯಾವ ಸಮಯದಲ್ಲಿ ಏನು ಮಾತಾಡಬೇಕು ಅನ್ನೋ ಸೂಕ್ಷ್ಮತೆಯನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಉಕ್ರೇನ್‍ನಲ್ಲಿರುವ ಕನ್ನಡಿಗರ ರಕ್ಷಣೆ ಮಾಡುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ ಕಾಂಗ್ರೆಸ್ ಯಾವಾಗಲೂ ರಾಜಕೀಯ ಪ್ರೇರಿತ ಹೇಳಿಕೆ ಕೊಡುವುದು ಅವರ ಕೆಲಸ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಪಕ್ಷ ಯಾವಾಗಲೂ ಜವಾಬ್ದಾರಿಯ ಹೇಳಿಕೆ ಕೊಡುವುದಿಲ್ಲ. ಯಾವಾಗ ಏನು ಹೇಳಿಕೆ ಕೊಡಬೇಕು ಅನ್ನೋ ಸೂಕ್ಷ್ಮತೆ ಕೂಡಾ ಕಾಂಗ್ರೆಸ್ ಕಳೆದುಕೊಂಡಿದೆ. ಭಾರತ ಸರ್ಕಾರ ಉತ್ತಮವಾಗಿ ಕಾರ್ಯಾಚರಣೆ ಮಾಡುತ್ತಿದೆ. ಭಾರತ ಸರ್ಕಾರ ಸುತ್ತಮುತ್ತಲ ದೇಶಗಳ ಜೊತೆ ಮಾತುಕತೆ ನಡೆಸುತ್ತಿದೆ. 2 ಸಾವಿರ ಭಾರತೀಯರನ್ನು ಈಗಾಗಲೇ ವಾಪಸ್ ಕರೆ ತಂದಿದೆ ಎಂದು ಕಾಂಗ್ರೆಸ್‍ಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ

    ರಷ್ಯಾ-ಉಕ್ರೇನ್ ಪ್ರಧಾನಿಗಳ ಜೊತೆಯೂ ನಮ್ಮ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಭಾರತೀಯರ ರಕ್ಷಣೆಗೆ ಎಲ್ಲಾ ಕ್ರಮವಹಿಸುತ್ತಿದ್ದಾರೆ. ಭಾರತೀಯರ ರಕ್ಷಣೆಗೆ 4 ಕೇಂದ್ರ ಮಂತ್ರಿಗಳು ಹೋಗಿದ್ದಾರೆ. ಪ್ರಧಾನಿಗಳು ಖುದ್ದು ಮೇಲ್ ಉಸ್ತುವಾರಿ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು

    ಸದ್ಯ ಉಕ್ರೇನ್‍ನಲ್ಲಿ ಯುದ್ಧ ನಡೆಯುತ್ತಿದೆ. ಹೀಗಾಗಿ ರಕ್ಷಣೆಗೆ ಸಮಸ್ಯೆಯಾಗುತ್ತಿದೆ. ಎಲ್ಲರ ಜೀವ ಉಳಿಸಲು ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ತಿಳಿಸಿದರು.

    ನಮ್ಮ ರಾಜ್ಯದಲ್ಲೂ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಸಿಎಂ ಕೂಡಾ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಕರೆದುಕೊಂಡು ಬರುವ ಕೆಲಸ ನಮ್ಮ ಸರ್ಕಾರ ಮಾಡಲಿದ್ದು, ಕಾಂಗ್ರೆಸ್ ರಾಜಕೀಯ ಮಾಡುವುದು ಬಿಡಲಿ ಎಂದು ವಾಗ್ದಾಳಿ ನಡೆಸಿದರು.

  • ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು

    ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು

    ಹಾವೇರಿ: ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ ಎಂದು ನವೀನ್ ಗ್ಯಾನಗೌಡರ್ ಅತ್ತಿಗೆ ಗೀತಾ ಕಣ್ಣೀರು ಹಾಕಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ. ನಮ್ಮ ಕುಟುಂಬಸ್ಥರಲ್ಲಿ ಅವನೊಬ್ಬನೇ ಓದಿರುವ ಯುವಕ. ಆತನ ಮೇಲೆ ತುಂಬಾ ಕನಸು ಕಂಡಿದ್ದೆವು. ಎಲ್ಲಾ ನುಚ್ಚುನೂರಾಯ್ತು. ಜೀವಂತವಾಗಿ ಆತನನ್ನು ಕೊನೆಗೂ ನೋಡಲಾಗಲಿಲ್ಲ. ಕನಿಷ್ಟ ಪಕ್ಷ ನನ್ನ ಮೈದುನನ ಮೃತದೇಹವನ್ನಾದರೂ ನೀಡಿ ಎಮದು ಅವರು ಅಂಗಲಾಚಿದರು. ಇದನ್ನೂ ಓದಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ

    ಇತ್ತ ನವೀನ್ ಸಹೋದರ ಮಾತನಾಡಿ, ನನ್ನ ತಮ್ಮನಿಗೆ ಬಹಳಷ್ಟು ಕನಸು ಇದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸು ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ. ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೇ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ತಮ್ಮನ್ನು ಕಳೆದುಕೊಂಡು ಅಣ್ಣ ಹರ್ಷ ಬೇಸರ ವ್ಯಕ್ತಡಪಡಿಸಿದರು.

  • ಉಕ್ರೇನ್ ನಿಂದ ಪಲಾಯನ ಮಾಡಿದ ಹಾಲಿವುಡ್ ಸ್ಟಾರ್

    ಉಕ್ರೇನ್ ನಿಂದ ಪಲಾಯನ ಮಾಡಿದ ಹಾಲಿವುಡ್ ಸ್ಟಾರ್

    ಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೋಟ್ಯಾಂತರ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯುದ್ಧಕ್ಕೆ ಬಡವನೂ ಒಂದೇ, ಶ್ರೀಮಂತೂ ಒಂದೇ ಎನ್ನುವಂತೆ ಸಾವಿನ ದವಡೆಯಿಂದ ಪಾರಾಗಲು ಗಣ್ಯರು, ನಟರು, ಸಾಮಾನ್ಯರು ಎನ್ನದೇ  ಉಕ್ರೇನ್ ಪ್ರಜೆಗಳು ಮತ್ತು ಅಲ್ಲಿ ವಾಸವಿರುವ ಇತರ ದೇಶಗಳ ಪ್ರಜೆಗಳು ರಾತ್ರೋರಾತ್ರಿ ಉಕ್ರೇನ್ ತೊರೆಯುತ್ತಿದ್ದಾರೆ. ಅಲ್ಲಿ ವಾಸವಿದ್ದ ಹಾಲಿವುಡ್ ನ ಸ್ಟಾರ್, ತಾವೂ ಆ ದೇಶ ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ : ಪಟ್ಟಭದ್ರ ಹಿತಾಸಕ್ತಿಯಿಂದ ಪೆದ್ರೊ ವಂಚಿತ : ಚಿತ್ರೋತ್ಸವದ ಬಗ್ಗೆ ರಿಷಭ್ ಶೆಟ್ಟಿ ಅಸಮಾಧಾನ

    ಅಮೆರಿಕದ ನಟ ಸೀನ್ ಜಸ್ಟಿನ್ ಪೆನ್ ಕಾಲ್ನಡಿಗೆಯಲ್ಲಿ ಉಕ್ರೇನ್ ನಿಂದ ಪೋಲ್ಯಾಂಡ್ ಗಡಿಗೆ ಸಾಗಿದ್ದಾರೆ. ಆ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು “ಮೈಲ್ಸ್ ಟು ಪೊಲೀಸ್ ಬಾರ್ಡರ್” ಎಂದು ಬರೆದು ಟ್ವಿಟ್ ಮಾಡಿದ್ದಾರೆ. “ನನ್ನ ಕಾರನ್ನು ರಸ್ತೆ ಬದಿಯಲ್ಲೇ ನಾನು ಬಿಟ್ಟು ಬಂದೆ. ನಂತರ ನಾನು ನನ್ನ ಸಹೋದ್ಯೋಗಿಗಳು ಹಲವು ಮೈಲುಗಳನ್ನು ನಡೆದುಕೊಂಡೇ ಸಾಗಿದೆವು. ಈಗ ನಾವು ನಮ್ಮ ಗಡಿಗೆ ಬಂದು ತಲುಪಿದ್ದೇವೆ” ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

    https://twitter.com/SeanPenn/status/1498390093375016965?cxt=HHwWisCoqbz2rMspAAAA

    ಅಮೆರಿಕಾದ ಖ್ಯಾತ ನಟ ಮತ್ತು ಚಲನಚಿತ್ರ ನಿರ್ಮಾಪಕರೂ ಆಗಿರುವ ಸೀನ್ ಜಸ್ಟಿನ್ ಪೆನ್, ಮಿಸ್ಟಿಕ್ ರಿವರ್ ಮತ್ತು ಬಯೋಪಿಕ್ ಮೀಲ್ಕ್ ಸಿನಿಮಾದ ನಟನೆಗಾಗಿ ಅವರು ಎರಡು ಬಾರಿ ಆಸ್ಕರ್ ಪ್ರಶಸ್ತಿಪಡೆದಿದ್ದಾರೆ. ಅಪರಾಧ ನಾಟಕಗಳ ಮೂಲಕ ರಂಗಭೂಮಿಯಲ್ಲೂ ಫೇಮಸ್ ಆದ ನಟ ಇವರು.

  • ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು

    ಕೀವ್: ಉಕ್ರೇನ್‌ ನಗರವನ್ನು ಕೈವಶ ಮಾಡಲೇಬೇಕೆಂದು ಹಠಕ್ಕೆ ಬಿದ್ದಿರುವ ರಷ್ಯಾ ಈಗ ಖರ್ಸನ್‌ ನಗರವನ್ನು ವಶಕ್ಕೆ ಪಡೆದಿದೆ. ನಗರವನ್ನು ವಶ ಪಡಿಸಿಕೊಳ್ಳಲು ಈಗ ಸರ್ಕಾರಿ ಕಟ್ಟಡದ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಹೆರಿಗೆ ಆಸ್ಪತ್ರೆ, ಕೀವ್ ಸೇನಾ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್ ಸೇರಿ ಉಕ್ರೇನ್‍ನ ಮೇಲೆ ರಷ್ಯಾ ಏಕಕಾಲದಲ್ಲಿ ಮೂರು ಕಡೆ ದಾಳಿ ಮಾಡಿದೆ. ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

    ಉಕ್ರೇನ್‍ನ ಮೇಲೆ ರಷ್ಯಾದ ಆಕ್ರಮಣ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಗೆ ಉಕ್ರೇನ್‍ನ ಪ್ರಮುಖ ರಾಜ್ಯಗಳಾದ ಕೀವ್ ಮತ್ತು ಖಾರ್ಕಿವ್ ನಲುಗಿ ಹೋಗಿವೆ. ಇಂದು ರಷ್ಯಾ ಏಕಕಾಲದಲ್ಲಿ 3 ಕಡೆ ವೈಮಾನಿಕ ದಾಳಿ ನಡೆಸಿದೆ. ಕೀವ್, ಖಾರ್ಕಿವ್, ಖೇರ್ಸನ್‍ನಲ್ಲಿ ರಾಕೆಟ್, ಕ್ಷಿಪಣಿಗಳ ದಾಳಿ ನಡೆಸಿದೆ. ಏರ್‌ಪೋರ್ಟ್, ಝಿಟೋಮಿರ್ ಹೆರಿಗೆ ಆಸ್ಪತ್ರೆ, ಮಿಲಿಟರಿ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್‍ಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ 21ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 112 ಜನರು ಗಾಯಗೊಂಡಿದ್ದಾರೆ. ಝಿಟೋಮಿರ್ ಹೆರಿಗೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 21 ಜನರಿಗೆ ಗಂಭೀರ ಗಾಯಗಳಾಗಿವೆ.

    ಖೇರ್ಸನ್ ಏರ್‌ಪೋರ್ಟ್‍ನಲ್ಲಿ ಕ್ಷಿಪಣಿ ದಾಳಿ ಹಾಗೂ ಕೀವ್ ಸೆಂಟ್ರಲ್ ರೇಲ್ವೆ ಸ್ಟೇಶನ್‍ನಲ್ಲಿ ಗುಂಡಿನ ದಾಳಿ ನಡೆದಿದೆ. ಅಷ್ಟೇ ಅಲ್ಲದೇ ಜಲ ಮಾರ್ಗದಲ್ಲೂ ದಾಳಿ ತೀವ್ರಗೊಳಿಸಿದ್ದು, ಕಪ್ಪು ಸಮುದ್ರದಲ್ಲಿ ಸೇನೆಯನ್ನು ಹೆಚ್ಚಳ ಮಾಡಿದೆ. ಇದನ್ನೂ ಓದಿ: ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್

    ಈಗಾಗಲೇ ರಷ್ಯಾ ಪಡೆಗಳು ಉಕ್ರೇನ್‍ನ ಖೆರ್ಸನ್ ನಗರ ವಶಪಡಿಸಿಕೊಂಡಿದೆ. ನಗರದ ರೈಲ್ವೆ ನಿಲ್ದಾಣ ಮತ್ತು ಬಂದರು ವಶಕ್ಕೆ ಪಡೆದಿದೆ. ಇಡೀ ನಗರದ ಮೇಲೆ ಅಸ್ತಿತ್ವ ಸಾಧಿಸುತ್ತಿದ್ದಾರೆ. ಕೀವ್, ಚೆರ್ನಿಹಿವ್, ಒಬ್ಲಾಸ್ಟ್‍ನ ಪೈರಿಯಾಟಿನ್ ಮತ್ತು ಮೈರೋರೋಡ್ ನಗರಗಳಿಗೆ ರಷ್ಯಾ ಪಡೆಗಳು ಬಂಕರ್‌ಗೆ ತೆರಳುವಂತೆ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

  • ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್

    ಕೀವ್: ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ಪ್ರಾರಂಭಿಸಿ ವಾರವೇ ಕಳೆದಿದೆ. ಸಾವಿರಾರು ಸೈನಿಕರು ಹಾಗೂ ನಿವಾಸಿಗಳ ಮಾರಣ ಹೋಮದ ಬಳಿಕವೂ ರಷ್ಯಾದ ರುದ್ರತಾಂಡವ ಇನ್ನೂ ನಿಂತಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಜನರು ಊಟ ವಸತಿಯಿಲ್ಲದೇ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.

    ರಷ್ಯಾದಿಂದ ಮಾರಣಾಂತಿ ಶೆಲ್ ದಾಳಿಯ ನಡುವೆಯೂ ಕೀವ್‍ನಲ್ಲಿ ಭಾರತೀಯ ವ್ಯಕ್ತಿಯೊಬ್ಬ ತನ್ನ ರೆಸ್ಟೋರೆಂಟ್‍ನಲ್ಲಿ ನೂರಾರು ಜನರಿಗೆ ಊಟ ವಸತಿ ನೀಡಿ ಆಶ್ರಯದಾತನಾಗಿದ್ದಾನೆ.

    ಉಕ್ರೇನ್ ರಾಜಧಾನಿ ಕೀವ್‍ನಲ್ಲಿರುವ ಸಾಥಿಯಾ ರೆಸ್ಟೋರೆಂಟ್‍ನ ಮಾಲೀಕ ಮನೀಶ್ ಡೇವ್ ಯುದ್ಧ ಪ್ರಾರಂಭವಾದಾಗಿನಿಂದ ಅನೇಕರಿಗೆ ಆಹಾರ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾನೆ. ನನ್ನಿಂದ ಸಾಧ್ಯವಾದಷ್ಟು ದಿನ ಇಲ್ಲಿ ಕಷ್ಟದಲಿರುವ ಜನರಿಗೆ ಆಹಾರ ಹಾಗೂ ಆಶ್ರಯ ನೀಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳುತ್ತಾರೆ ಮನೀಶ್. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ಗುಜರಾತ್‍ನ ವಡೋದರಾ ಮೂಲದ ಮನೀಶ್ 2021ರಲ್ಲಿ ಕೀವ್‍ಗೆ ಬಂದಿದ್ದರು. ಕೀವ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗಾಗಿ ಮನೀಶ್ ರೆಸ್ಟೋರೆಂಟ್ ತೆರೆದಿದ್ದರು. ಇದೀಗ ಇವರ ರೆಸ್ಟೋರೆಂಟ್ ಯುದ್ಧದ ಪರಿಸ್ಥಿತಿಯಲ್ಲಿ ಜನರಿಗೆ ಆಶ್ರಯತಾಣವಾಗಿದೆ.

    ಮನೀಶ್ ಅವರ ರೆಸ್ಟೋರೆಂಟ್‍ನಲ್ಲಿ ಇದೀಗ ಮಕ್ಕಳು, ಗರ್ಭಿಣಿಯರು, ವಿದ್ಯಾರ್ಥಿಗಳು, ಮನೆ ಕಳೆದುಕೊಂಡಿರುವವರು ಹಾಗೂ ಹಿರಿಯ ನಾಗರಿಕರು ಸೇರಿದಂತೆ 130ಕ್ಕೂ ಹೆಚ್ಚು ಜನರು ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು: ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ ಬೆನ್ನಲ್ಲೇ ಮೋದಿಯಿಂದ 4ನೇ ಬಾರಿಗೆ ಉನ್ನತ ಸಭೆ

    ಕೀವ್‍ನ ಬೊಗೊಮೆಲೆಟ್ಸ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಹಾಸ್ಟೆಲ್ ಬಳಿ ಇರುವ ಸಾಥಿಯಾ ರೆಸ್ಟೋರೆಂಟ್‍ನಲ್ಲಿ ಯಾವುದೇ ದೇಶದ ಜನರು ಬಂದು ಆಶ್ರಯ ಪಡೆಯಬಹುದು ಎಂದು ಮನೀಶ್ ತಿಳಿಸಿದ್ದಾರೆ.

  • ಉಕ್ರೇನ್‌ನಿಂದ ಆಗಮಿಸುವ ಭಾರತೀಯರು ಮನೆಗೆ ತಲುಪಲು ಸಕಲ ಸಿದ್ಧತೆ: ಜೀತೆಂದ್ರ ಸಿಂಗ್

    ಉಕ್ರೇನ್‌ನಿಂದ ಆಗಮಿಸುವ ಭಾರತೀಯರು ಮನೆಗೆ ತಲುಪಲು ಸಕಲ ಸಿದ್ಧತೆ: ಜೀತೆಂದ್ರ ಸಿಂಗ್

    ನವದೆಹಲಿ: ಉಕ್ರೇನ್‍ನಿಂದ ಬಂದ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತಲುಪಲು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಜ್ಯವಾರು ಕೇಂದ್ರಗಳನ್ನು ರಚಿಸಲಾಗಿದೆ ಎಂದು ಕೇಂದ್ರ ಸಚಿವ ಜೀತೆಂದ್ರ ಸಿಂಗ್ ತಿಳಿಸಿದರು.

    ಇಂದು ಉಕ್ರೇನ್‍ನಿಂದ ಬಂದ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಪ್ರತಿ ರಾಜ್ಯಕ್ಕೂ ಸಹಾಯ ಕೇಂದ್ರಗಳನ್ನು ರಚಿಸಿದ್ದೇವೆ. ವಿದ್ಯಾರ್ಥಿಗಳು ಆಯಾ ಸಹಾಯ ಕೇಂದ್ರಗಳನ್ನು ಸಂಪರ್ಕಿಸುತ್ತಿದ್ದಾರೆ. ಅವರಿಗೆ ಉಪಾಹಾರವನ್ನು ನೀಡಲಾಗುತ್ತಿದೆ. ಜೊತೆಗೆ ವೋಲ್ವೋ ಬಸ್‍ಗಳ ವ್ಯವಸ್ಥೆಯನ್ನು ಮಾಡಿದ್ದೇವೆ. ಇದರಿಂದ ಇತರ ರಾಜ್ಯಗಳಿಗೆ ತೆರಳುವ ವಿದ್ಯಾರ್ಥಿಗಳು ರಸ್ತೆಯ ಮೂಲಕ ಆಯಾ ಸ್ಥಳಗಳಿಗೆ ಪ್ರಯಾಣಿಸಬಹುದು. ರೈಲಿನಲ್ಲಿ ಹೋಗುವ ವಿದ್ಯಾರ್ಥಿಗಳಿಗೆ ಅತಿಥಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಕೆಲವು ವಿದ್ಯಾರ್ಥಿಗಳು ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಅವರಲ್ಲಿ ಮೂವರು ಶ್ರೀನಗರಕ್ಕೆ ತೆರಳುತ್ತಿದ್ದಾರೆ. ಎಲ್ಲಾ ಸಚಿವರು ಸ್ಥಳಾಂತರಿಸಿದ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಉಕ್ರೇನ್‍ನಲ್ಲಿ ಇನ್ನೂ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ನಾವು ವ್ಯವಸ್ಥೆ ಮಾಡುತ್ತಿದ್ದೇವೆ ಎಂದ ಅವರು ಇಸ್ತಾನ್‍ಬುಲ್‍ನಿಂದ ಸುಮಾರು 220 ವಿದ್ಯಾರ್ಥಿಗಳು ಆಗಮಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ

    ಈಗಾಗಲೇ ಉಕ್ರೇನ್ ನೆರೆಯ ನಾಲ್ಕು ದೇಶಗಳಿಂದ ಮೂರು ದಿನಗಳಲ್ಲಿ ಸುಮಾರು 5000 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ಪ್ಲ್ಯಾನ್ ಮಾಡಲಾಗುತ್ತಿದೆ. ಆಪರೇಷನ್ ಗಂಗಾ ಮಿಷನ್‍ಗೆ ಸಿ 17 ವಿಮಾನ ಬಳಕೆ ಮಾಡಲಾಗುತ್ತಿದೆ. ಮುಂದಿನ 3-4 ದಿನಗಳಲ್ಲಿ ಬೃಹತ್ ಕಾರ್ಯಚರಣೆ ನಡೆಯಲಿದೆ. ಕಳೆದ ಆರು ದಿನಗಳಲ್ಲಿ ಕೇವಲ ಎರಡು ಸಾವಿರ ವಿದ್ಯಾರ್ಥಿಗಳ ಸ್ಥಳಾಂತರ ಮಾಡಲಾಗಿದ್ದು, ನವೀನ್ ಸಾವಿನ ಬೆನ್ನಲೆ ತುರ್ತು ಕಾರ್ಯಚರಣೆಗೆ ವಿದೇಶಾಂಗ ಇಲಾಖೆ ಇಳಿದಿದೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್