Tag: ರಷ್ಯಾ

  • ರಷ್ಯಾ ಯುದ್ಧ: 2 ಸಾವಿರ ಉಕ್ರೇನ್‌ ನಾಗರಿಕರು ಸಾವು

    ರಷ್ಯಾ ಯುದ್ಧ: 2 ಸಾವಿರ ಉಕ್ರೇನ್‌ ನಾಗರಿಕರು ಸಾವು

    ಕೀವ್: ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ಮುಂದುವರಿದಿದ್ದು, ದಾಳಿಗೆ ಉಕ್ರೇನ್‌ನಲ್ಲಿ ಇದುವರೆಗೆ 2 ಸಾವಿರ ನಾಗರಿಕರು ಬಲಿಯಾಗಿದ್ದಾರೆ.

    ರಷ್ಯಾ ಯುದ್ಧದಿಂದಾಗಿ ಉಕ್ರೇನ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆ, ಆಸ್ಪತ್ರೆಗಳು, ಮನೆಗಳು, ಕಿಂಡರ್‌ಗಾರ್ಡನ್ಸ್‌ ನಾಶವಾಗಿವೆ ಎಂದು ಉಕ್ರೇನ್‌ನ ತುರ್ತು ಸೇವಾ ವಿಭಾಗ ತಿಳಿಸಿದೆ. ಇದನ್ನೂ ಓದಿ: ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ

    ಪ್ರತಿ ಗಂಟೆಗೆ ಮಕ್ಕಳು, ಮಹಿಳೆಯರು, ರಕ್ಷಣಾ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರಷ್ಯಾ ದಾಳಿಗೆ ಪ್ರತಿ ದಾಳಿ ನಡೆಸುತ್ತಿದ್ದು, ಇದುವರೆಗೆ ರಷ್ಯಾದ 6 ಸಾವಿರ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ.

    ರಷ್ಯಾದ ನಿರಂತರ ಶೆಲ್‌, ಕ್ಷಿಪಣಿ ದಾಳಿಗಳಿಂದಾಗಿ ಉಕ್ರೇನ್‌ನ ಬೃಹತ್‌ ಕಟ್ಟಡಗಳು ಧರೆಗುರುಳಿವೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ. ಯುದ್ಧಪೀಡತ ಪ್ರದೇಶಗಳಲ್ಲಿ ಅಭದ್ರತೆ ಭೀತಿ ಹೆಚ್ಚಾಗಿದ್ದು, ಉಕ್ರೇನಿಯನ್‌ ಜನತೆಗೆ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ರಷ್ಯಾ ಸೇನಾ ಪಡೆ ಹಂತ ಹಂತವಾಗಿ ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ಆಕ್ರಮಿಸುತ್ತಿದ್ದು, ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳಲು ದಾಳಿಗಳನ್ನು ತೀವ್ರಗೊಳಿಸಿದೆ. ಇದನ್ನರಿತ ಭಾರತದ ರಾಯಭಾರಿ ಕಚೇರಿಯು ಕೀವ್‌ನಲ್ಲಿರುವ ಭಾರತೀಯ ಪ್ರಜೆಗಳು ಕೂಡಲೇ ಗಡಿ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿತ್ತು. ಅಲ್ಲದೇ ಖಾರ್ಕಿವ್‌ ನಗರದಲ್ಲಿ ಭಾರೀ ಪ್ರಮಾಣದಲ್ಲಿ ರಷ್ಯಾ ಸೇನಾ ಪಡೆ ದಾಳಿ ನಡೆಸುತ್ತಿದ್ದು, ಇಲ್ಲಿ ಸಿಲುಕಿರುವವರೂ ಸುರಕ್ಷಿತ ಸ್ಥಳಗಳಿಗೆ ಬರುವಂತೆ ಸೂಚಿಸಲಾಗಿದೆ.

  • ಭಾರತೀಯರನ್ನು ಒದೆಯುತ್ತಿದ್ದಾರೆ – ದುಃಸ್ವಪ್ನವಾಯ್ತು ಉಕ್ರೇನ್‍ನಿಂದ ಸ್ಥಳಾಂತರಿಸುವ ಆದೇಶ

    ಭಾರತೀಯರನ್ನು ಒದೆಯುತ್ತಿದ್ದಾರೆ – ದುಃಸ್ವಪ್ನವಾಯ್ತು ಉಕ್ರೇನ್‍ನಿಂದ ಸ್ಥಳಾಂತರಿಸುವ ಆದೇಶ

    ಕೀವ್: ಭಾರತ ಸರ್ಕಾರ ಭಾರತೀಯರನ್ನು ಉಕ್ರೇನ್ ನಿಂದ ಬೇರೆಕಡೆ ಸ್ಥಳಾಂತರಿಸಲು ಆದೇಶವನ್ನು ಹೊರಡಿಸಿದೆ. ಈ ಪರಿಣಾಮ ಭಾರತೀಯರು ರೈಲ್ವೆ ನಿಲ್ದಾಣಕ್ಕೆ ಬಂದ್ದಿದರು ಏನು ಪ್ರಯೋಜನವಾಗಿಲ್ಲ.

    ಉಕ್ರೇನ್‍ನ ಅತಿದೊಡ್ಡ ಕೀವ್ ನಗರವನ್ನು ತಕ್ಷಣವೇ ತೊರೆಯುವಂತೆ ಭಾರತ ಸರ್ಕಾರವು ತನ್ನ ನಾಗರಿಕರಿಗೆ ತುರ್ತು ಆಲ್-ಕ್ಯಾಪ್ಸ್ ಮನವಿಯನ್ನು ಹೊರಡಿಸಿದೆ. ಈ ಹಿನ್ನೆಲೆ ರೈಲು ನಿಲ್ದಾಣಕ್ಕೆ ಭಾರತೀಯ ವಿದ್ಯಾರ್ಥಿಗಳು ಬಂದಿದ್ದಾರೆ. ಆದರೆ ಭಾರೀ ಶೆಲ್ ದಾಳಿಯ ಕಾರಣ ರೈಲುಗಳಲ್ಲಿ ಹೊರಡಲು ಅನುಮತಿಸಲಾಗಿಲ್ಲ. ಇದರಿಂದ ಹತಾಶರಾದ ವಿದ್ಯಾರ್ಥಿಗಳು ವೀಡಿಯೋವೊಂದನ್ನು ಮಾಡಿ ತಮ್ಮ ದುಃಖವನ್ನು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ

    Students: Latest News, Photos, Videos on Students - NDTV.COM

    ಕೀವ್ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ಭಾರತೀಯರು ರೈಲಿಗಾಗಿ ಕಾಯುತ್ತಿದ್ದರೂ, ಭಾರೀ ಶೆಲ್ ದಾಳಿಯ ಕಾರಣ ರೈಲುಗಳಲ್ಲಿ ಹೊರಡಲು ಅನುಮತಿಸಲಾಗಿಲ್ಲ. ಈ ಹಿನ್ನೆಲೆ ಭಾರತೀಯ ವಿದ್ಯಾರ್ಥಿ ಪ್ರಗುನ್, ಇದೀಗ ನಾವು ಇರುವ ಕಡೆ ಶೆಲ್ ಹೊಡೆಯಲಾಗುತ್ತಿದೆ. ಕೆಲವೊಂದು ಶೆಲ್ ನಮ್ಮ ತಲೆ ಮೇಲೆ ಹೋಗುತ್ತಿದೆ. ಇದು ತುಂಬಾ ಕೆಟ್ಟ ಪರಿಸ್ಥಿತಿ. ನಮ್ಮ ಹತ್ತಿರದಲ್ಲಿ ಯಾವುದೇ ಬಂಕರ್ ಇಲ್ಲ. ನಮ್ಮ ಮುಂದೆ ರೈಲು ಇದ್ದರೂ ಅದನ್ನು ಹತ್ತುವ ಅವಕಾಶವನ್ನು ಇಲ್ಲಿನ ಜನರು ನೀಡುತ್ತಿಲ್ಲ. ಉಕ್ರೇನಿಯನ್ ಜನರಿಗೆ ಮಾತ್ರ ಒಂದು ಮತ್ತು ಎರಡನೇ ಗೇಟ್‍ಗಳನ್ನು ತೆರೆಯಲಾಗಿದೆ. ನಮಗೆ ಬಂದೂಕು, ಬುಲೆಟ್‍ಗಳಿವೆ, ಆದರೆ ರೈಲುಗಳಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಸಾಕಷ್ಟು ಅಪಾಯಗಳನ್ನು ಎದುರಿಸಿ ಇಲ್ಲಿಗೆ ನಾವು ತಲುಪಿದ್ದೇವೆ. 1,000 ಕ್ಕೂ ಹೆಚ್ಚು ಭಾರತೀಯರು ರೈಲು ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ನಾವು ರೈಲುಗಳಿಗಾಗಿ ಕಾಯುತ್ತಿದ್ದೇವೆ. ಉಕ್ರೇನಿಯನ್ ಗಾರ್ಡ್‍ಗಳು ಗುಂಡು ಹಾರಿಸುತ್ತಿದ್ದಾರೆ. ಅವರು ನಮ್ಮನ್ನು ಒದೆಯುತ್ತಿದ್ದಾರೆ. ಅವರು ನಮ್ಮನ್ನು ಒಳಗೆ ಪ್ರವೇಶಿಸಲು ಬಿಡುತ್ತಿಲ್ಲ. ನಾನು ಭಾರತ ಸರ್ಕಾರಕ್ಕೆ ಒಂದು ವಿಷಯ ಹೇಳಲು ಬಯಸುತ್ತೇನೆ. ಇಲ್ಲಿ ನಮಗೆ ಏನಾದರೂ ತೊಂದರೆಯಾದರೆ ದಯವಿಟ್ಟು ನಮ್ಮ ಕುಟುಂಬವನ್ನು ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಸುರಕ್ಷಿತವಾಗಿ ಬಂದ ಕೊಡಗಿನ ಮೊದಲ ವಿದ್ಯಾರ್ಥಿನಿ – ನಿಟ್ಟುಸಿರು ಬಿಟ್ಟ ಪೋಷಕರು

    ಇನ್ನೋರ್ವ ವಿದ್ಯಾರ್ಥಿ, ಮೂರು ಗಂಟೆಗಳ ಕಾಲ ನಿಲ್ದಾಣದಲ್ಲಿ ಕಾಯುತ್ತಿದ್ದರೂ, ರೈಲುಗಳನ್ನು ಪ್ರವೇಶಿಸಲು ನಮಗೆ ಅನುಮತಿಸಲಾಗುತ್ತಿಲ್ಲ ಎಂದು ದುಃಖವನ್ನು ತೋಡಿಕೊಂಡಿದ್ದಾರೆ.

  • ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ

    ಕೀವ್: ಉಕ್ರೇನ್‍ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ತಕ್ಷಣವೇ ಖಾರ್ಕಿವ್ ತೊರೆಯುವಂತೆ ತುರ್ತು ಸಲಹೆ ನೀಡಿದೆ. ಇಂದು ಸಂಜೆ 6 ಗಂಟೆ(ಭಾರತೀಯ ಕಾಲಮಾನ ರಾತ್ರಿ 9:30) ಒಳಗಾಗಿ ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾ ವಸಾಹತುಗಳನ್ನು ತಲುಪುವಂತೆ ರಾಯಭಾರ ಕಚೇರಿ ತಿಳಿಸಿದೆ.

    ಖಾರ್ಕಿವ್‍ನಲ್ಲಿರುವ ಭಾರತೀಯರು ತಮ್ಮ ಸುರಕ್ಷತೆ ಹಾಗೂ ಭದ್ರತೆಗೆ ಈ ಕೂಡಲೇ ಖಾರ್ಕಿವ್ ಅನ್ನು ತೊರೆಯಬೇಕು. ಆದಷ್ಟು ಬೇಗ ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾಗೆ ತಲುಪಿ ಎಂದು ಭಾರತೀಯ ರಾಯಭಾರಿ ಕಚೇರಿ ಟ್ವಿಟ್ಟರ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು

    ಈ ಹಿಂದೆ ಪೋಲೆಂಡ್‍ನಲ್ಲಿರುವ ರಾಯಭಾರಿ ಕಚೇರಿ ಉಕ್ರೇನ್‍ನಲ್ಲಿರುವ ಭಾರತೀಯರಿಗೆ ತುರ್ತು ಸಲಹೆ ನೀಡಿತ್ತು. ಪೋಲೆಂಡ್‍ಗೆ ತ್ವರಿತವಾಗಿ ಪ್ರವೇಶಿಸಲು ಬುಡೋಮಿಯಾರ್ಜ್ ಗಡಿಗೆ ತಕ್ಷಣ ಬರುವಂತೆ ಸಲಹೆ ನೀಡಿತ್ತು. ಇದನ್ನೂ ಓದಿ: ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ಈಗಾಗಲೇ ರಷ್ಯಾ ಉಕ್ರೇನ್‍ನ ಮುಖ್ಯ ನಗರಗಳಾದ ಕೀವ್ ಹಾಗೂ ಖಾರ್ಕಿವ್ ನಗರಗಳನ್ನು ಮುತ್ತಿಗೆ ಹಾಕಿ ನಿರಂತರ ದಾಳಿ ನಡೆಸುತ್ತಿದೆ. ರಷ್ಯಾದ ಅಟ್ಟಹಾಸಕ್ಕೆ ಉಕ್ರೇನ್‍ನ 6 ಸಾವಿರ ಸೈನಿಕರು ಹಾಗೂ ಸ್ಥಳೀಯರು ಪ್ರಾಣ ಬಿಟ್ಟಿದ್ದು, ಅದರಲ್ಲಿ ಒಬ್ಬ ಕರ್ನಾಟಕದ ವಿದ್ಯಾರ್ಥಿಯೂ ಕೊನೆಯುಸಿರೆಳೆದಿದ್ದಾರೆ.

  • ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ರಷ್ಯಾ- ಉಕ್ರೇನ್‌ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ

    ಲಂಡನ್: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಶುರುವಾದ ದಿನದಿಂದ ಬ್ರೆಂಟ್‌ ಕಚ್ಚಾ ತೈಲ ಬೆಲೆ ಏರುಮುಖವಾಗಿ ಸಾಗುತ್ತಿದೆ. ಬುಧವಾರ 1 ಬ್ಯಾರಲ್‌ಗೆ 113 ಡಾಲರ್‌ಗೆ (8,565 ರೂಪಾಯಿ) ಏರಿಕೆಯಾಗಿದೆ.

    2014ರ ಬಳಿಕ ಇದೇ ಮೊದಲ ಬಾರಿಗೆ ಬ್ರೆಂಟ್‌ ಕಚ್ಚಾ ತೈಲ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧದಿಂದಾಗಿ ವಿಶ್ವಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಇದನ್ನೂ ಓದಿ: ರಷ್ಯನ್ನರ ವಿರುದ್ಧ ಹೋರಾಡಲು ಸ್ಥಳೀಯರಿಂದ ಪೆಟ್ರೋಲ್ ಬಾಂಬ್ ದಾಳಿ

    ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವ ಯತ್ನದಲ್ಲಿ ಮಿತ್ರರಾಷ್ಟ್ರಗಳೊಂದಿಗೆ ತನ್ನ ಆಯಾಕಟ್ಟಿನ ಮೀಸಲುಗಳಿಂದ ಅಮೆರಿಕ ಸುಮಾರು 60 ಮಿಲಿಯನ್‌ ಬ್ಯಾರಲ್‌ ಬಿಡುಗಡೆ ಮಾಡಿದೆ. ಆದರೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.

    ತೈಲದ ಜಾಗತಿಕ ಬೆಲೆ ಏರಿಕೆಯು ಭಾರತದ ಮೇಲೆ ಪರಿಣಾಮ ಬೀರಲಿದೆ. ಭಾರತ ತನ್ನ ಅಗತ್ಯಗಳಲ್ಲಿ ಶೇ.85 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದು ಭಾರತದ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಬಹುದು. ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಏರಿಕೆಯಾಗಬಹುದು. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    ರಷ್ಯಾ ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಉತ್ಪಾದಕ ದೇಶವಾಗಿದೆ. ರಷ್ಯಾ ಮೇಲೆ ವಿಧಿಸಿರುವ ರಫ್ತು ನಿರ್ಬಂಧಗಳು ಆ ದೇಶದಿಂದ ತೈಲ ಪೂರೈಕೆಗೆ ಅಡಚಣೆ ಉಂಟುಮಾಡಿದೆ.

  • ರಷ್ಯನ್ನರ ವಿರುದ್ಧ ಹೋರಾಡಲು ಸ್ಥಳೀಯರಿಂದ ಪೆಟ್ರೋಲ್ ಬಾಂಬ್ ದಾಳಿ

    ರಷ್ಯನ್ನರ ವಿರುದ್ಧ ಹೋರಾಡಲು ಸ್ಥಳೀಯರಿಂದ ಪೆಟ್ರೋಲ್ ಬಾಂಬ್ ದಾಳಿ

    ಕೀವ್: ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ ಪ್ರಜೆಗಳು ಪೆಟ್ರೋಲ್ ಬಾಂಬ್‍ಗಳ ದಾಳಿ ನಡೆಸುತ್ತಿದ್ದಾರೆ.

    ಕೀವ್‍ನ ಚೆಕ್‍ಪಾಯಿಂಟ್‍ನಲ್ಲಿ ಉಕ್ರೇನ್‍ನ ಸ್ಥಳೀಯರು ಪೆಟ್ರೋಲ್ ಬಾಂಬ್‍ಗಳನ್ನು ತಾವೇ ತಯಾರಿಸಿ ರಷ್ಯನ್ನರ ವಿರುದ್ಧ ಹೋರಾಡಲು ಸಿದ್ಧ ಎನ್ನುತ್ತ ತಮ್ಮ ರೋಷವನ್ನು ತೋಸಿಕೊಳ್ಳುತ್ತಿದ್ದಾರೆ.

    ಈಗಾಗಲೇ ಉಕ್ರೇನ್‍ನ 6 ಸಾವಿರ ಸೈನಿಕರನ್ನು ಬಲಿ ತೆಗೆದುಕೊಂಡಿರುವ ರಷ್ಯಾ ವಿರುದ್ಧ ಹೋರಾಡಲು ಸ್ಥಳೀಯರೂ ಎದೆಗುಂದದೆ ನಿಂತಿದ್ದಾರೆ. ಪೆಟ್ರೋಲ್ ಬಾಂಬುಗಳನ್ನು ತಯಾರಿಸಿ ರಷ್ಯಾದ ಸೈನ್ಯವನ್ನು ಎದುರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು

    ನಾವು ನಮ್ಮ ಮಾತೃಭೂಮಿಗಾಗಿ ಹೋರಾಡುತ್ತಿದ್ದೇವೆ. ನಾವು ರಷ್ಯನ್ನರಿಗೆ ಹೆದರುವುದಿಲ್ಲ. ನಮ್ಮಲ್ಲೂ ಉತ್ತಮ ಹೋರಾಟಗಾರರು ಇದ್ದಾರೆ. ಶಸ್ತ್ರಾಸ್ತ್ರ ಅಥವಾ ಪೆಟ್ರೋಲ್ ಬಾಂಬ್‍ಗಳಿಲ್ಲದಿದ್ದರೂ ಅವರೊಂದಿಗೆ ನಾವು ಹೋರಾಡಲು ಸಿದ್ಧರಾಗಿದ್ದೇವೆ ಎಂದು ಉಕ್ರೇನ್ ಪ್ರಜೆಗಳು ಆವೇಶ ಭರಿತ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    ಉಕ್ರೇನ್‍ನಲ್ಲಿ ಸೈನಿಕರು, ನಾಗರಿಕರು, ಹಿರಿಯರು, ಮಹಿಳೆಯರು ಎನ್ನದೇ ಎಲ್ಲರೂ ಒಗ್ಗೂಡಿ ರಷ್ಯಾದ ವಿರುದ್ಧ ಹೋರಾಡುತ್ತಿದ್ದಾರೆ. ಶಸ್ತ್ರಾಸ್ತ್ರಗಳ ಕೊರತೆಯಿದ್ದರೂ ಒಂದೆರಡು ದಿನಗಳಲ್ಲಿ ಉಕ್ರೇನ್ ಸರ್ಕಾರ ಶಸ್ತ್ರಾಸ್ತ್ರ ಒದಗಿಸಲಿದೆ ಎಂಬ ಭರವಸೆಯಲ್ಲಿ ಕಾಯುತ್ತಿದ್ದಾರೆ. ತಮ್ಮ ತೋಳುಗಳಲ್ಲಿ ಹಳದಿ ಬಣ್ಣದ ಬ್ಯಾಂಡ್‍ಗಳನ್ನು ಧರಿಸಿ ತಮ್ಮನ್ನು ತಾವು ಕೀವ್‍ನ ರಕ್ಷಕರು ಎಂದು ಕರೆಯುತ್ತಿದ್ದಾರೆ.

  • ಉಕ್ರೇನ್‌ ಯುದ್ಧ – ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು

    ಉಕ್ರೇನ್‌ ಯುದ್ಧ – ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು

    ಕೀವ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿ ಪಂಜಾಬ್‌ ಮೂಲದವನು ಎಂದು ಗುರುತಿಸಲಾಗಿದೆ.

    ಪಂಜಾಬ್‌ನ ಬರ್ನಾಲಾ ಮೂಲದ ಚಂದನ್‌ ಜಿಂದಾಲ್‌ (22), ಉಕ್ರೇನ್‌ನಲ್ಲಿ ಮಿದುಳು ಪಾರ್ಶ್ವವಾಯುವಿನಿಂದ (ಬ್ರೈನ್‌ ಸ್ಟ್ರೋಕ್‌) ಮೃತಪಟ್ಟಿದ್ದಾನೆ. ಇದನ್ನೂ ಓದಿ: ಉಕ್ರೇನ್‍ನಿಂದ ಸುರಕ್ಷಿತವಾಗಿ ಬಂದ ಮೊದಲ ವಿದ್ಯಾರ್ಥಿನಿ – ನಿಟ್ಟುಸಿರು ಬಿಟ್ಟ ಪೋಷಕರು

    ಚಂದನ್‌ ಜಿಂದಲ್‌, ವಿನ್ನಿಟ್ಸಿಯಾ ಉಕ್ರೇನ್‌ನಲ್ಲಿರುವ ಮೆಮೊರಿಯಲ್‌ ಮೆಡಿಕಲ್‌ ಯೂನಿವರ್ಸಿಟಿಯ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

    ಫೆಬ್ರವರಿ 2 ರಂದು ಈತ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮಿದುಳು ಪಾರ್ಶ್ವವಾಯುವಿಗೆ ಒಳಗಾದ ನಂತರ ಜಿಂದಾಲ್ ಅವರನ್ನು ವಿನ್ನಿಟ್ಸಿಯಾ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಹಿಂದಿನ ದಿನ ಅವರು ಕೊನೆಯುಸಿರೆಳೆದಿದ್ದಾರೆ. ಪುತ್ರನ ಪಾರ್ಥಿವ ಶರೀರವನ್ನು ವಾಪಸ್‌ ತರಲು ಕ್ರಮವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮೃತನ ತಂದೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನವೀನ್ ವ್ಯಕ್ತಿತ್ವ ಪ್ರಶಂಸಿಸಿದ ಚಂದನವನದ ಮೋಹಕತಾರೆ

    ಈಚೆಗಷ್ಟೇ ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಶೆಲ್‌ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾನೆ. ಆತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬೆಳಗಾವಿ 19 ವಿದ್ಯಾರ್ಥಿಗಳು ಸಿಲುಕಿದ್ದು, ಇಬ್ಬರು ವಾಪಸ್ ಆಗಿದ್ದಾರೆ: ಜಿಲ್ಲಾಧಿಕಾರಿ

  • ಉಕ್ರೇನ್‍ನಲ್ಲಿ ಸಂಪರ್ಕಕ್ಕೆ ಸಿಗದ ಮುಂಡಗೋಡದ ವಿದ್ಯಾರ್ಥಿನಿ

    ಉಕ್ರೇನ್‍ನಲ್ಲಿ ಸಂಪರ್ಕಕ್ಕೆ ಸಿಗದ ಮುಂಡಗೋಡದ ವಿದ್ಯಾರ್ಥಿನಿ

    ಕಾರವಾರ: ರಷ್ಯಾ-ಉಕ್ರೇನ್ ಯುದ್ದ ಪ್ರಾರಂಭವಾಗಿ ಇಂದಿಗೆ ಏಳು ದಿನಗಳಾಗಿದ್ದು, ಇದೀಗ ಹಾವೇರಿಯ ನವೀನ್ ಸಾವಿನ ನಂತರ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರ ಜೀವಕ್ಕೆ ಕಂಟಕ ತಂದಿದೆ. ಓರ್ವ ವಿದ್ಯಾರ್ಥಿನಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದಲ್ಲಿ ಆತಂಕ ಸೃಷ್ಟಿಯಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ನಾಲ್ಕುಜನ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿದ್ದು ಓರ್ವ ವಿದ್ಯಾರ್ಥಿ ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ಬನವಾಸಿಯ ಇಮ್ರಾನ್, ಸ್ನೇಹಾ, ರೊಮೇನಿಯಾ ಗಡಿಯಲ್ಲಿ ಆರಾಮವಾಗಿದ್ದಾರೆ. ಆದರೇ ಖಾರ್ಕಿವ್ ನಲ್ಲಿ ಸಿಲುಕಿರುವ ಮುಂಡಗೋಡ ಮೂಲದ ನಾಝಿಯಾರಿಗೆ ಓನ್ ರಿಸ್ಕ್‍ನಲ್ಲಿ ರೊಮೇನಿಯಾಕ್ಕೆ ಬರುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿತ್ತು. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ಸೂಚನೆಯ ಹಿನ್ನೆಯಲ್ಲಿ ಅನಿವಾರ್ಯವಾಗಿ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನನ್ನು ತೊರೆದಿದ್ದಾರೆ. ಆದರೇ ಇದೀಗ ಇವರ ಸಂಪರ್ಕ ಕಡಿತವಾಗಿದ್ದು ಇವರ ಬಗ್ಗೆ ಕೇಂದ್ರ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ದೊರೆಯುತಿಲ್ಲ. ಸದ್ಯ ಅವರ ಕುಟುಂಬದ ಸಂಪರ್ಕದಲ್ಲಿ ಜಿಲ್ಲಾಡಳಿತ ಅಧಿಕಾರಿಗಳಿದ್ದು ಯಾವುದೇ ತೊಂದರೆಗಳಾಗದೇ ರೊಮೇನಿಯಾ ಗಡಿ ತಲುಪುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

    ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಆದರೇ ಖಾರ್ಕಿವ್‍ನಿಂದ ಹೊರಟ ನಾಝಿಯಾ ಈವರೆಗೂ ಸಂಪರ್ಕಕ್ಕೆ ಸಿಗದಿರುವುದು ಕುಟುಂಬ ವರ್ಗಕ್ಕೆ ಆತಂಕ ಎದುರಾಗುವಂತೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಮ್ಮ ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಕುಟುಂಬವು ಮನವಿ ಮಾಡಿಕೊಂಡಿದೆ. ಕಾರವಾರದಲ್ಲಿ ಸಹ ಜನಶಕ್ತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ತಮ್ಮ ಜಿಲ್ಲೆಯವರನ್ನು ಸುರಕ್ಷಿತವಾಗಿ ಕರೆತರುವಂತೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ.

  • ಉಕ್ರೇನ್‍ನಿಂದ ಸುರಕ್ಷಿತವಾಗಿ ಬಂದ ಕೊಡಗಿನ ಮೊದಲ ವಿದ್ಯಾರ್ಥಿನಿ – ನಿಟ್ಟುಸಿರು ಬಿಟ್ಟ ಪೋಷಕರು

    ಉಕ್ರೇನ್‍ನಿಂದ ಸುರಕ್ಷಿತವಾಗಿ ಬಂದ ಕೊಡಗಿನ ಮೊದಲ ವಿದ್ಯಾರ್ಥಿನಿ – ನಿಟ್ಟುಸಿರು ಬಿಟ್ಟ ಪೋಷಕರು

    ಮಡಿಕೇರಿ: ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಪೋಷಕರು ನಮ್ಮ ಮಕ್ಕಳು ಸುರಕ್ಷಿತವಾಗಿ ಬಂದ್ರೆ ಸಾಕು ಎಂದು ಕೇಲಿಕೊಳ್ಳುತ್ತಿದ್ದಾರೆ. ಈ ನಡುವೆ ಕೊಡಗಿನ ವಿದ್ಯಾರ್ಥಿನಿ ಸುರಕ್ಷಿತವಾಗಿ ಬಂದಿದ್ದು, ಆಕೆಯ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ.

    ಯುದ್ಧದಿಂದ ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಮೃತಪಟ್ಟ ಹಿನ್ನೆಲೆ ಪೋಷಕರ ಆತಂಕ ಇನ್ನೂ ಹೆಚ್ಚಾಗುತ್ತಿದೆ. ಹೀಗಾಗಿ ತಮ್ಮ ಮಕ್ಕಳು ಸುರಕ್ಷಿತವಾಗಿ ತಾಯ್ನಾಡಿಗೆ ಬರಬೇಕು ಎಂದು ಪೋಷಕರ ಪ್ರಾರ್ಥನೆ ಮಾಡುತ್ತಿದ್ರೆ. ಇತ್ತ ಕೊಡಗು ಜಿಲ್ಲೆಯ 16 ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿನಿಯೊಬ್ಬಳು ಕೊಡಗು ಜಿಲ್ಲೆಗೆ ಅಗಮಿಸಿದ್ದಾರೆ. ಇದರಿಂದ ಅತಂಕದಲ್ಲಿ ಇದ್ದ ಪೋಷಕರು ನಿಟ್ಟುಸಿರು ಬಿಡುವಂತೆ ಅಗಿದೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನ ಮದೀಹ(21) ಇಂದು ಬೆಳಗಿನ ಜಾವ ಗೋಣಿಕೊಪ್ಪಲುವಿಗೆ ಆಗಮಿಸಿದ್ದಾರೆ. ಉಕ್ರೇನ್‍ನಲ್ಲಿ ನಡೆಯುತ್ತಿದ್ದ ಘಟನೆ ಅಷ್ಟಾಗಿ ತಮ್ಮ ಗಮನಕ್ಕೆ ಬಾರದೆ ಇದ್ರು ಪೋಷಕರು ತುಂಬಾ ಅತಂಕಕ್ಕೆ ಒಳಗಾಗಿದ್ರು. ಉಕ್ರೇನ್‍ನಲ್ಲಿ ಮೆಡಿಕಲ್ ವಿದ್ಯಾಭ್ಯಾಸಕ್ಕೆ ಎರಡು ತಿಂಗಳ ಹಿಂದೆ ಹೋಗಿದೆ. ಆದರೆ ಈ ರೀತಿಯ ಘಟನೆಗಳು ಅಗುತ್ತದೆ ಎಂದು ನಮ್ಮಗೆ ಗೊತ್ತಿರಲಿಲ್ಲ. ಅದ್ರೂ ರಕ್ಷಣೆಯ ಬಳಿಕ ನನಗೆ ಮರು ಜನ್ಮ ಸಿಕ್ಕಂತಾಗಿದೆ. ಭಾರತೀಯ ರಾಯಭಾರ ಕಚೇರಿಗೆ ಈ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

    ಈ ವೇಳೆ ಮದೀಹ ಉಕ್ರೇನ್‍ನಲ್ಲಿ ರಷ್ಯಾ ಸೈನಿಕರ ದಾಳಿಗೆ ಕರ್ನಾಟಕ ಮೂಲದ ನವೀನ್ ಮೃತ ಪಟ್ಟಿರುವುದು ತುಂಬಾ ಬೇಸರ ತಂದಿದೆ. ಅದಷ್ಟು ಬೇಗಾ ಕೇಂದ್ರ ಸರ್ಕಾರ ಉಳಿದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.  ಇದನ್ನೂ ಓದಿ: ನವೀನ್ ವ್ಯಕ್ತಿತ್ವ ಪ್ರಶಂಸಿದ ಚಂದನವನದ ಮೋಹಕತಾರೆ

  • 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    ಮಾಸ್ಕೋ: ಮೂರನೇ ಮಹಾಯುದ್ಧ ನಡೆದರೆ ಅದು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುತ್ತದೆ. ಜೊತೆಗೆ ವಿನಾಶಕಾರಿಯಾಗಿರುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.

    ಕೀವ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಂಡರೆ ನಿಜವಾದ ಅಪಾಯ ಎದುರಿಸಬೇಕಾಗುತ್ತದೆ ಎಂದು ಉಕ್ರೇನ್‌ಗೆ ಲಾವ್ರೊವ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಉಕ್ರೇನ್‌ ಗಡಿ ದಾಟಿದ ಪಾಕಿಸ್ತಾನ ವಿದ್ಯಾರ್ಥಿಗಳು!

    ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ನಗರ ಖಾರ್ಕಿವ್‌ನ ಮಧ್ಯಭಾಗದಲ್ಲಿರುವ ಸ್ಥಳೀಯ ಸರ್ಕಾರದ ಪ್ರಧಾನ ಕಛೇರಿಯ ಮೇಲೆ ಭೀಕರ ದಾಳಿ ನಡೆಸಿತು. ಇದರಿಂದ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಉಕ್ರೇನ್‌ ರಾಜಧಾನಿ ಕೀವ್‌ನ ಟೆಲಿವಿಷನ್‌ ಟವರ್‌ ಮೇಲೂ ರಷ್ಯಾ ದಾಳಿ ನಡೆಸಿದ್ದು, ಐವರು ಬಲಿಯಾಗಿದ್ದಾರೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ದೂರವಾಣಿ ಕರೆಯಲ್ಲಿ ಮಾತನಾಡಿ, ಆಕ್ರಮಣಕಾರಿ ರಷ್ಯಾವನ್ನು ತಡೆಯಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 6 ದಿನದಲ್ಲಿ 6 ಸಾವಿರ ರಷ್ಯಾ ಯೋಧರ ಹತ್ಯೆ: ಉಕ್ರೇನ್ ಅಧ್ಯಕ್ಷ

    ನಿನ್ನೆ ಕೂಡ ಯೂರೋಪಿಯನ್‌ ನಾಯಕರೊಂದಿಗೆ ವೀಡಿಯೋ ಕರೆಯಲ್ಲಿ ಮಾತನಾಡಿದ್ದ ಝೆಲೆನ್‌ಸ್ಕಿ, ನಾವು ನಿಮ್ಮೊಂದಿಗಿದ್ದೇವೆ ಎಂಬುದನ್ನು ಸಾಬೀತುಪಡಿಸಿ ಎಂದು ಯೂರೋಪಿಯನ್‌ ನಾಯಕರಿಗೆ ತಾಕೀತು ಮಾಡಿದ್ದರು. ನೀವಿಲ್ಲದೇ ಉಕ್ರೇನ್‌ ಏಕಾಂಗಿಯಾಗಲಿದೆ ಎಂದು ಹೇಳಿದ್ದರು.

    ರಷ್ಯಾದ ಆಕ್ರಮಣದ ನಂತರ 6,77,000 ಕ್ಕೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಪಲಾಯನ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಯುಎನ್‌ನ ನಿರಾಶ್ರಿತರ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

  • ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಉಕ್ರೇನ್‌ ಗಡಿ ದಾಟಿದ ಪಾಕಿಸ್ತಾನ ವಿದ್ಯಾರ್ಥಿಗಳು!

    ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಉಕ್ರೇನ್‌ ಗಡಿ ದಾಟಿದ ಪಾಕಿಸ್ತಾನ ವಿದ್ಯಾರ್ಥಿಗಳು!

    ಬುಕಾರೆಸ್ಟ್‌: ಯುದ್ಧಪೀಡಿತ ಉಕ್ರೇನ್‌ನಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು, ಪ್ರಜೆಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ದೇಶಗಳಿಗೆ ವಾಪಸ್‌ ಆಗಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಧ್ವಜ, ಪಾಕಿಸ್ತಾನ ಮತ್ತು ಟರ್ಕಿಶ್‌ ವಿದ್ಯಾರ್ಥಿಗಳು ಯುದ್ಧಪೀಡಿತ ಪ್ರದೇಶದಿಂದ ಪಾರಾಗಲು ನೆರವಾಗಿದೆ.

    ಭಾರತದ ಧ್ವಜ ಕೇವಲ ಭಾರತೀಯರಿಗಷ್ಟೇ ಅಲ್ಲ, ನೆರೆಯ ರಾಷ್ಟ್ರಗಳ ಪ್ರಜೆಗಳಿಗೂ ಉಕ್ರೇನ್‌ ಗಡಿ ಭಾಗಗಳನ್ನು ಸುರಕ್ಷಿತವಾಗಿ ದಾಟಲು ಸಹಕಾರಿಯಾಗಿದೆ. ಇದನ್ನೂ ಓದಿ: 6 ದಿನದಲ್ಲಿ 6 ಸಾವಿರ ರಷ್ಯಾ ಯೋಧರ ಹತ್ಯೆ: ಉಕ್ರೇನ್ ಅಧ್ಯಕ್ಷ

    ಉಕ್ರೇನ್‌ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು, ರಾಷ್ಟ್ರೀಯ ತ್ರಿವರ್ಣ ಧ್ವಜವು ತಮಗೆ ಮತ್ತು ಕೆಲವು ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.

    ಭಾರತೀಯ ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಕಲರ್‌ ಸ್ಪ್ರೈ ಮತ್ತು ಕರ್ಟೈನ್‌ ಖರೀದಿಸಿ ಸ್ವತಃ ತಾವೇ ಧ್ವಜದ ಚಿತ್ರವನ್ನು ಬಿಡಿಸಿದ್ದಾರೆ. ವಿದ್ಯಾರ್ಥಿಗಳೇ ರೂಪಿಸಿದ ತ್ರಿವರ್ಣ ಧ್ವಜ ಮಾದರಿ, ಅವರು ಗಡಿ ದಾಟಲು ಸಹಾಯವಾಗಿದೆ. ಈ ಕುರಿತು ಅನುಭವವನ್ನೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ತ್ರಿವರ್ಣ ಧ್ವಜ ಹಿಡಿದುಕೊಂಡು ಪಾಕಿಸ್ತಾನ ಮತ್ತು ಟರ್ಕಿಶ್‌ ವಿದ್ಯಾರ್ಥಿಗಳು ಸಹ ಚೆಕ್‌ಪೋಸ್ಟ್‌ಗಳನ್ನು ದಾಟಿದ್ದಾರೆ ಎಂದು ಭಾರತದ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ.

    ಮೊಲ್ಡೊವಾದಲ್ಲಿ ನಮಗೆ ಯಾವುದೇ ತೊಂದರೆ ಆಗಲಿಲ್ಲ. ಭಾರತೀಯ ರಾಯಭಾರಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು. ವಿಶೇಷ ವಿಮಾನ ಬರುವವರೆಗೂ ಸೂಕ್ತ ವಸತಿ ವ್ಯವಸ್ಥೆ ಮತ್ತು ಆಹಾರ ಸೌಲಭ್ಯ ಕಲ್ಪಿಸಿದ್ದ ರಾಯಭಾರಿ ಕಚೇರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು