ಧಾರವಾಡ: ಜೀವಂತವಾಗಿರುವವರನ್ನೇ ಭಾರತಕ್ಕೆ ವಾಪಸ್ ಕರೆತರುವುದು ಕಷ್ಟವಿದೆ. ಹೀಗಿರುವಾಗ ನವೀನ್ ಮೃತದೇಹ ತರುವುದು ಇನ್ನೂ ಕಷ್ಟವಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನದಲ್ಲಿ ಶವ ತರಲು ಹೆಚ್ಚು ಜಾಗಬೇಕು. ಶವ ಇರುವ ಜಾಗದಲ್ಲೇ 8 ಜನ ತರಬಹುದು. ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಎಂಬಿಬಿಎಸ್ ವಿದ್ಯಾರ್ಥಿ ಶವ ತರಲು ಪ್ರಯತ್ನ ಮಾಡುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಮುತುವರ್ಜಿ ವಹಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನ ನಡೆದಿದೆ. ಅಲ್ಲಿ ಯುದ್ದ ಭೂಮಿ ಇದೆ. ಮಾಧ್ಯಮದವರೇ ಅದನ್ನ ತೊರಿಸುತ್ತಿದ್ದಾರೆ. ಸಾಧ್ಯವಾದರೆ ಮೃತದೇಹ ತರುವ ಕೆಲಸ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧ ನಿಲ್ಲಿಸಿ ಅಂತ ಪುಟಿನ್‌ಗೆ ನಾವು ಹೇಳಬಹುದೇ: ಸಿಜೆಐ ಪ್ರಶ್ನೆ
ಅಲ್ಲಿ ಇದ್ದವರು ಒತ್ತಡದಲ್ಲಿ ಇದ್ದಾರೆ. ರೊಮೇನಿಯಾಗೆ ಬಂದಿದ್ದಾರೆ ಅಂದರೆ ಸೇಫ್ ಆಗಿದ್ದಾರೆ ಎಂದರ್ಥ. ಅಲ್ಲಿ ನಮ್ಮ ವಿದೇಶಾಂಗ ಇಲಾಖೆ ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿದೆ. ಅವರನ್ನು ತರುವ ಕೆಲಸ ಬೇಗ ಆಗಲಿದೆ. ನಮ್ಮ ವಿದ್ಯಾರ್ಥಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ಯಾಕೆ ಎಂಬಿಬಿಎಸ್ ಗೆ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿ ವೈದ್ಯಕೀಯ ಕಲಿಯುವುದು ದೊಡ್ಡ ಖರ್ಚು ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ
ನಮ್ಮಲ್ಲ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇದೆ. ಇದೊಂದು ಖಾಸಗಿ ಸಂಸ್ಥೆ. ಇವರು ಎಂಬಿಬಿಎಸ್ ಸಿಟ್ ಅಭಾವ ಸೃಷ್ಟಿ ಮಾಡಿದ್ದಾರೆ. ಹೆಚ್ಚು ಮೆಡಿಕಲ್ ಸಿಟ್ ಕೊಡುವಂತೆ ಇಲ್ಲ. ಅದರಲ್ಲೂ ಭ್ರಷ್ಟಾಚಾರ ಇರುತ್ತೆ. ಈ ಎಂಸಿಐ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ. ಇದನ್ನ ಬೈಪಾಸ್ ಮಾಡಬೇಕು. ಅದಕ್ಕೆ ಇರುವ ಅಧಿಕಾರ ಕಟ್ ಮಾಡಬೇಕು. ಬೇರೆ ರಾಷ್ಟ್ರ ದಂತೆಯೇ ನಮ್ಮಲ್ಲಿ ಕಡಿಮೆ ಖರ್ಚಿನಲ್ಲಿ ಮೆಡಿಕಲ್ ಯಾಕೆ ಮಾಡಬಾರದು ಎಂದು ಶಾಸಕರು ಪ್ರಶ್ನಿಸಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!
ಕೀವ್: ಉಕ್ರೇನ್‍ನ ಒಡೆಸಾ ನಗರದ ಬಾಂಬ್ ಶೆಲ್ಟರ್‌ನಲ್ಲಿ ಜೋಡಿಯೊಂದು ವಿವಾಹವಾಗಿದ್ದು, ಮದುವೆಯ ವೇಳೆ ಘಂಟೆ ಬದಲಿಗೆ ವೈಮಾನಿಕ ದಾಳಿಯ ಸೈರನ್ ರಿಂಗಣಿಸಲಾಯಿತು.
ಉಕ್ರೇನ್‍ನ ಕೆಲವು ಭಾಗಗಳಲ್ಲಿ ರಷ್ಯಾ ಪಡೆ ಕ್ಷಿಪಣಿ ದಾಳಿ ಮತ್ತು ಶೆಲ್ ದಾಳಿಯನ್ನು ನಡೆಸುತ್ತಿರುವ ನಡುವೆಯೂ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫೋಟೋದಲ್ಲಿ ವಧು ನಗುತ್ತಾ ಕೈಯಲ್ಲಿ ಹೂವು ಹಿಡಿದುಕೊಂಡಿದ್ದರೆ, ವರ ಡಾಕ್ಯುಮೆಂಟ್‍ಗೆ ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ.
ಬುಧವಾರ ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ಸೈನಿಕರು 8ನೇ ದಿನದಂದು ದಕ್ಷಿಣ ನಗರವಾದ ಖೆರ್ಸನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಖೆರ್ಸನ್ ನಗರ ಇದೀಗ ರಷ್ಯಾದ ನಿಯಂತ್ರಣಕ್ಕೆ ಒಳಗಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ
ಮಡಿಕೇರಿ: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಇಂದಿಗೆ ಎಂಟು ದಿನಗಳಾಗಿದ್ದು, ಹಾವೇರಿಯ ನವೀನ್ ಸಾವಿನಪ್ಪಿದ ನಂತರ ಇದೀಗ ಪೋಷಕರಲ್ಲಿ ಅತಂಕ ಮನೆ ಮಾಡಿದೆ. ಅದರಲ್ಲೂ ಕೊಡಗಿನ ಓರ್ವ ವಿದ್ಯಾರ್ಥಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದಲ್ಲಿ ಆತಂಕ ಸೃಷ್ಟಿಯಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಮೊಹಮ್ಮದ್ ಯೂಸುಫ್ ಅವರ ಪುತ್ರ ಶಾರುಖ್ ಅವರು, ಕಳೆದ ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಗದೇ ಇರುವುದರಿಂದ ಮನೆಯಲ್ಲಿ ಇರುವ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ
ನಮ್ಮ ಮಗ ನಾಲ್ಕು ದಿನಗಳ ಕಾಲ ಬಂಕರ್‌ನಲ್ಲಿ ಆಸರೆ ಪಡೆದಿದ್ದ ಶಾರುಖ್ ಸೇರಿ 20 ಯುವಕರು ಬಂಕರ್‌ನಲ್ಲಿ ಆಶ್ರಯ ಪಡೆದಿದ್ದರು. ಬಂಕರ್‌ನಲ್ಲಿ ಉಸಿರಾಟಕ್ಕೆ ತೊಂದರೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಯುವಕರು ಬಂಕರ್‌ನಿಂದ ಹೊರಬಂದು ರೈಲ್ವೇ ನಿಲ್ದಾಣದ ಕಡೆಗೆ ನಡೆದು ಹೊರಟಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ
ಸೋಮವಾರ ಸಂಜೆಯಿಂದ ಇದುವರೆಗೆ ಸಂಪರ್ಕಕ್ಕೆ ತಮ್ಮ ಮಗ ಬಂದಿಲ್ಲ. ಏನಾದರೂ ಮಾಡಿ ಪ್ರಾಣ ಉಳಿಸಿಕೊಂಡು ಬಂದರೆ ಸಾಕು ಎಂದು ಬೇಡುತ್ತಿರುವ ವಿದ್ಯಾರ್ಥಿಯ ತಂದೆ, ತಾಯಿ ದೇವರ ಮೇಲೆ ಭಾರ ಹಾಕಿ ಕಾಯುತ್ತಿದ್ದಾರೆ.
ನವದೆಹಲಿ: ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂಬ ರಷ್ಯಾದ ಗಂಭೀರ ಆರೋಪವನ್ನು ಭಾರತ ನಿರಾಕರಿಸಿದೆ.
ರಷ್ಯಾ ಆರೋಪ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ಒತ್ತೆಯಾಳಾಗಿರುವ ಕುರಿತು ಇದುವರೆಗೆ ಯಾವುದೇ ವರದಿಗಳೂ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಖಾರ್ಕೀವ್‍ನಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ದೇಶದ ಪಶ್ಚಿಮ ಭಾಗದ ಕಡೆಯಿಂದ ವಿದ್ಯಾರ್ಥಿಗಳನ್ನು ಹೊರಗೆ ಸಾಗಿಸಲು ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸುವಂತೆ ನಾವು ಉಕ್ರೇನ್ ಅಧಿಕಾರಿಗಳ ನೆರವು ಕೋರಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ
ಉಕ್ರೇನ್‍ನಲ್ಲಿನ ನಮ್ಮ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯ ಪ್ರಜೆಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಉಕ್ರೇನ್ ಅಧಿಕಾರಿಗಳ ಸಹಕಾರದೊಂದಿಗೆ ಅನೇಕ ವಿದ್ಯಾರ್ಥಿಗಳು ನಿನ್ನೆ ಖಾರ್ಕೀವ್ ತೊರೆದಿದ್ದಾರೆ. ರಷ್ಯಾ, ರೊಮೇನಿಯಾ, ಪೋಲ್ಯಾಂಡ್, ಹಂಗೆರಿ, ಸ್ಲೊವೇಕಿಯಾ ಮತ್ತು ಮಾಲ್ಡೋವಾ ಸೇರಿದಂತೆ ಈ ಪ್ರದೇಶದ ದೇಶಗಳ ಜೊತೆಗೆ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸುತ್ತಿದ್ದೇವೆ. ಇದನ್ನೂ ಓದಿ: ನಾನು ಮತ್ತೆ ಅಧ್ಯಕ್ಷನಾಗಿದ್ದರೆ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಟ್ರಂಪ್
ಈ ಹಿಂದೆ ರಷ್ಯಾ ರಕ್ಷಣಾ ಸಚಿವಾಲಯವು ಉಕ್ರೇನ್ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಖಾರ್ಕೀವ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಡಲಾಗಿದೆ. ಖಾರ್ಕಿವ್ ನಲ್ಲಿ ದಾಳಿಯಾಗುತ್ತಿದ್ದ ಸಂದರ್ಭದಲ್ಲಿ ಭಾರತೀಯರನ್ನು ಅಲ್ಲಿಂದ ಸ್ಥಳಾಂತರ ಮಾಡಲು ಮುಂದಾದ ರಷ್ಯಾವನ್ನು ಉಕ್ರೇನ್ ತಡೆಹಿಡಿದಿತ್ತು. ಅಲ್ಲದೆ ಭಾರತೀಯರನ್ನು ವಾಪಸ್ ಕರೆದುಕೊಂಡು ಹೋಗಿ ಒತ್ತೆಯಾಳಾಗಿರಿಸಿಕೊಂಡಿತು ಎಂದು ಆರೋಪಿಸಿತ್ತು. ಈ ಆರೋಪಕ್ಕೆ ಉಕ್ರೇನ್ ಪ್ರತ್ಯಾರೋಪ ಮಾಡಿದ್ದು, ರಷ್ಯಾ ಸೇನೆ ಭಾರತ, ಪಾಕಿಸ್ತಾನ, ಚೀನಾ ಮತ್ತು ಇನ್ನಿತರ ದೇಶಗಳ ವಿದ್ಯಾರ್ಥಿಗಳನ್ನು ಸೆರೆಯಾಳುಗಳನ್ನಾಗಿ ಇಟ್ಟುಕೊಂಡಿದೆ ಎಂದಿತ್ತು.
ವಾಷಿಂಗ್ಟನ್: ರಷ್ಯಾದ ಹಲವಾರು ಯುದ್ಧನೌಕೆಗಳು ಕ್ರೈಮಿಯಾವನ್ನು ತೊರೆದು ಒಡೆಸ್ಸಾಗೆ ಹೋಗುತ್ತಿವೆ. ಅಲ್ಲದೇ ಉಕ್ರೇನ್‍ನ ಮೂರನೇ ಅತಿದೊಡ್ಡ ನಗರದ ಮೇಲೆ ಯುದ್ಧ ನೌಕೆಯಿಂದಲೂ ದಾಳಿ ನಡೆಸಬಹುದು ಎಂದು ಅಮೇರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಮುಂಜಾನೆ ರಷ್ಯಾದ ಪಡೆಗಳು ಬಂದರು ನಗರವಾದ ಖರ್ಸನ್ ಅನ್ನು ವಶಪಡಿಸಿಕೊಂಡಿದೆ. ಆದರೆ ಇದನನು ಉಕ್ರೇನ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದಾದ ಬಳಿಕ ಇದೀಗ ರಷ್ಯಾದ ಪಡೆಗಳು ಕಪ್ಪು ಸಮುದ್ರದ ಬಳಿ ಒಡೆಸ್ಸಾ ಬಂದರು ನಗರವನ್ನು ಆಕ್ರಮಿಸಲು ಯೋಜಿಸುತ್ತಿವೆ ಎಂದು ತಿಳಿಸಿದ್ದಾರೆ.
ಜಿನೆವಾ: ರಷ್ಯಾದ ಆಕ್ರಮಣದಿಂದ ತತ್ತರಿಸಿ ಹೋಗಿರುವ ಉಕ್ರೇನ್‍ನಿಂದ ಕೇವಲ ಒಂದು ವಾರದಲ್ಲಿ 1 ಮಿಲಿಯನ್ ಜನರು ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇದು ಈ ಶತಮಾನದ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟಾಗಿ ಪರಿಣಮಿಸುವ ಪರಿಸ್ಥಿತಿಯನ್ನು ತೋರಿಸುತ್ತದೆ.
ವಿಶ್ವ ಬ್ಯಾಂಕ್ 2020ರ ಅಂತ್ಯದಲ್ಲಿ ನಡೆಸಿದ ಎಣಿಕೆಯಲ್ಲಿ ಉಕ್ರೇನ್ ಸುಮಾರು 44 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿಸಿತ್ತು. ಆದರೆ ಒಂದು ವಾರದೊಳಗೆ ಉಕ್ರೇನ್‍ನಿಂದ ಶೇಕಡ 2ಕ್ಕಿಂತ ಹೆಚ್ಚು ಮಂದಿ ಪಲಾಯಾನ ಮಾಡುತ್ತಿದ್ದಾರೆ. ಅಲ್ಲದೇ ಮುಂದೆ 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಎಂದು ವಿಶ್ವಸಂಸ್ಥೆ ಭವಿಷ್ಯ ನುಡಿದಿದೆ. ಇದನ್ನು ಓದಿ: ಪುಟಿನ್ ಜೊತೆ 2ನೇ ಬಾರಿ ಮೋದಿ ಮಾತುಕತೆ
ಇಮೇಲ್ ಮೂಲಕ ವಿಶ್ವಸಂಸ್ಥೆ ವಕ್ತಾರ ಜೌಂಗ್-ಆಹ್ ಘೆಡಿನಿ-ವಿಲಿಯಮ್ಸ್ ಅವರು, ರಾಷ್ಟ್ರೀಯ ಅಧಿಕಾರಿಗಳು ಸಂಗ್ರಹಿಸಿದ ಎಣಿಕೆಗಳ ಆಧಾರದ ಮೇಲೆ ಮಧ್ಯ ಯೂರೋಪ್‍ನಲ್ಲಿ ಸುಮಾರು 1ಮಿಲಿಯನ್ ಮಂದಿ ದೇಶ ತೊರೆದಿದ್ದಾರೆ ಎಂದು ನಮ್ಮ ಡೇಟಾವು ಸೂಚಿಸುತ್ತಿದೆ.
ಕೀವ್: ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯಾ ಆರೋಪಿಸಿದೆ.
ಈ ಕುರಿತಂತೆ ಮಾತನಾಡಿದ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್, ನಮ್ಮ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಖಾರ್ಕಿವ್‍ನಲ್ಲಿ, ಉಕ್ರೇನಿಯನ್ ಅಧಿಕಾರಿಗಳು ಉಕ್ರೇನಿಯನ್ ಪ್ರದೇಶವನ್ನು ತೊರೆದು ಬೇರೆಡೆಗೆ ಹೋಗಲು ಪ್ರಯತ್ನಿಸಿದ ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪನ್ನು ಬಲವಂತವಾಗಿ ಬಂಧಿಸುತ್ತಿದ್ದಾರೆ.
The MFA of Ukraine calls on the RF to immediately cease its hostilities in Kharkiv and Sumy so that we can arrange the evacuation of the civilian population, including foreign students, to safer Ukrainian cities. https://t.co/sm15hSLdGFpic.twitter.com/gRTywxjZLs
— MFA of Ukraine ???????? (@MFA_Ukraine) March 2, 2022
ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಮತ್ತು ಭಾರತದ ಕಡೆಯವರು ಪ್ರಸ್ತಾಪಿಸಿದಂತೆ ಅವರನ್ನು ತಮ್ಮ ಮಿಲಿಟರಿ ಸಾರಿಗೆ ವಿಮಾನಗಳು ಅಥವಾ ಭಾರತೀಯ ವಿಮಾನಗಳೊಂದಿಗೆ ರಷ್ಯಾದ ಪ್ರದೇಶದಿಂದ ಮನೆಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.
ಮತ್ತೊಂದೆಡೆ ಉಕ್ರೇನ್ ಎಂಎಫ್‍ಎ ಕೂಡ ಭಾರತ, ಪಾಕಿಸ್ತಾನ, ಚೀನಾ ಮತ್ತು ಇತರ ದೇಶಗಳ ವಿದ್ಯಾರ್ಥಿಗಳನ್ನು ರಷ್ಯಾ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ. ಇದನ್ನು ಓದಿ: ಪುಟಿನ್ ಜೊತೆ 2ನೇ ಬಾರಿ ಮೋದಿ ಮಾತುಕತೆ
ನವದೆಹಲಿ: ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 2ನೇ ಬಾರಿ ದೂರವಾಣಿ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ.
ಉಭಯ ದೇಶಗಳ ನಾಯಕರು ಉಕ್ರೇನ್‌ನಲ್ಲಿನ ಸಧ್ಯದ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ರಷ್ಯಾ ಭೀಕರ ದಾಳಿಗೆ ತುತ್ತಾಗಿರುವ ಉಕ್ರೇನ್‌ನ ಪ್ರಮುಖ ನಗರವೂ ಆದ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರ ಸುರಕ್ಷಿತ ಸ್ಥಳಾಂತರ ಕುರಿತು ಪುಟಿನ್ ಅವರೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಪುಟಿನ್ ತಪ್ಪು ಹೆಜ್ಜೆಗಳು – ರಷ್ಯಾ ಹಿನ್ನಡೆಗೆ ಕಾರಣ ಏನು?
ಉಕ್ರೇನ್‌ನ ಯುದ್ಧಪೀಡಿತ ಪ್ರದೇಶಗಳಿಂದ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತು ಪುಟಿನ್ ಅವರಿಗೆ ಮೋದಿ ಮನವರಿಕೆ ಮಾಡಿದ್ದಾರೆ. ಯಾವುದೇ ತೊಂದರೆ ಇಲ್ಲದೇ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ವಿಚಾರವಾಗಿ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಬಳಿಕ ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸುವ ನಿರ್ಣಯದಿಂದ ಭಾರತ ತಟಸ್ಥವಾಗಿ ಉಳಿದಿದೆ. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ
ಭಾರತದ ನಿಲುವಿನಿಂದಾಗಿ ಉಕ್ರೇನ್ ಮತ್ತು ರಷ್ಯಾದ ಸೈನಿಕರು, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಉಕ್ರೇನ್‌ನಲ್ಲಿ ಸಿಲುಕಿದ್ದವರಲ್ಲಿ ಭಾರತದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಉಳಿದವರ ಸುರಕ್ಷಿತ ಸ್ಥಳಾಂತರ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ.
ಕೀವ್: ಉಕ್ರೇನ್-ರಷ್ಯಾ ಯುದ್ಧ 8ನೇ ದಿನ ಪೂರೈಸಿದೆ. ಆದರೆ ಈವರೆಗೂ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ಅಧಿಪತ್ಯ ಸ್ಥಾಪಿಸಿಲ್ಲ. ರಷ್ಯಾ ತನ್ನ ಆಧುನಿಕ ಯುದ್ಧ ವಿಮಾನಗಳನ್ನು ಸಂಪೂರ್ಣವಾಗಿ ಯುದ್ಧರಂಗಕ್ಕೆ ಇಳಿಸಿಲ್ಲ. ಇದರ ಬದಲಿಗೆ ಸೈಬಿರಿಯಾದಲ್ಲಿ ಸೈನಿಕ ಡ್ರಿಲ್ಸ್‌ಗೆ ಪುಟಿನ್ ಆದೇಶ ನೀಡಿದ್ದಾರೆ.
ಬಾರೆಂಟ್ಸ್ ಸಮುದ್ರದಲ್ಲಿ ಅಣು ಸಬ್ ಮೆರಿನ್ ಕ್ಷಿಪಣಿ ಲಾಂಚರ್‌ಗಳು ಕಾಣಿಸಿಕೊಂಡಿವೆ. ಈ ಮಧ್ಯೆ ರಷ್ಯಾ ಅಂದ್ರೆ ಪುಟಿನ್ ಮಾತ್ರವಲ್ಲ ಎಂದು ಜೈಲಿನಿಂದಲೇ ವಿಪಕ್ಷ ನಾಯಕ ಅಲೆಕ್ಸಿ ನಾವೆಲ್ನಿ ಗುಡುಗಿದ್ದಾರೆ. ರಷ್ಯಾದ ಹೊರಗೆ, ಒಳಗೆ ಪ್ರತಿಘಟನೆ ನಡೆಸಲು ಕರೆ ನೀಡಿದ್ದಾರೆ. ರಷ್ಯಾ ವಿಜ್ಞಾನಿಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿವೆ.
ಹಿನ್ನಡೆಗೆ ಕಾರಣ ಏನು?
ಒಂದು ದೇಶದ ಮೇಲೆ ದಂಡೆತ್ತಿ ಹೋಗುವ ಸೈನ್ಯ ಮೊದಲು ಅಲ್ಲಿನ ವೈಮಾನಿಕ, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಗಮನದಲ್ಲಿ ಇರಿಸಿಕೊಂಡು ದಾಳಿ ನಡೆಸುತ್ತದೆ. ಈ ಮೂಲಕ ಆ ದೇಶದ ವಾಯುಪ್ರದೇಶದ ಮೇಲೆ ಹಿಡಿತ ಸಾಧಿಸುತ್ತದೆ. ಈ ಮೂಲಕ ಭೂಸೇನೆ ಸಮರ್ಥವಾಗಿ ಹೋರಾಟ ಸಾಗಿಸಲು ಅನುಕೂಲ ಕಲ್ಪಿಸುತ್ತದೆ. ಆದರೆ ಇದು ರಷ್ಯಾ ಕಡೆಯಿಂದ ಆಗಿಲ್ಲ. ಪರಿಣಾಮ, ಉಕ್ರೇನ್ ಯುದ್ಧ ವಿಮಾನಗಳು ಆರ್ಭಟಿಸುತ್ತಿವೆ. ಕಡಿಮೆ ಎತ್ತರದಲ್ಲಿ ಹಾರುತ್ತಾ ರಷ್ಯಾದ ಹೆಲಿಕಾಪ್ಟರ್‌ಗಳನ್ನು ಟಾರ್ಗೆಟ್ ಮಾಡುತ್ತಿವೆ. ಸ್ಟಿಂಗರ್ ಕ್ಷಿಪಣಿ ಮೂಲಕವೂ ರಷ್ಯಾದ ಹೆಲಿಕಾಪ್ಟರ್ ನಾಶ ಮಾಡಲಾಗುತ್ತಿದೆ. ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ
ಯುದ್ಧಕ್ಕೆ ರಷ್ಯಾ ಸೈನಿಕರ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ರಷ್ಯಾದ ಯುವ ಸೈನಿಕರಿಗೆ ಸರಿಯಾದ ಶಿಕ್ಷಣ ಸಿಕ್ಕಿಲ್ಲ. ಆತ್ಮಸ್ಥೈರ್ಯ ಕಡಿಮೆ. ಆಹಾರ, ಇಂಧನ ಕೊರತೆ ಕಾಡುತ್ತಿದೆ. ತಮ್ಮ ವಾಹನಗಳನ್ನು ತಾವೇ ಉದ್ದೇಶಪೂರ್ವಕವಾಗಿ ಪಂಕ್ಚರ್ ಮಾಡುತ್ತಿದ್ದಾರೆ. ಉಕ್ರೇನ್ ನಗರಗಳ ಮೇಲೆ ದಾಳಿಗೆ ರಷ್ಯನ್ ಸೈನಿಕರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ ಎಂದು ಅಮೆರಿಕದ ಪೆಂಟಗಾನ್ ವರದಿ ಮಾಡಿದೆ.
ಉಕ್ರೇನ್ ಸೇನೆ ಬೇಗ ಶರಣಾಗಿ ಕೀವ್ ತಮ್ಮ ವಶವಾಗುತ್ತದೆ. ಅದೇ ಉತ್ಸಾಹದಲ್ಲಿ ದಕ್ಷಿಣ ಪ್ರಾಂತ್ಯ ವಶಕ್ಕೆ ತೆಗೆದುಕೊಳ್ಳಬಹುದು. ಇದಕ್ಕೆ ಉಕ್ರೇನ್‍ನ ವಾಯು ಪ್ರದೇಶದ ಮೇಲೆ ಅಧಿಪತ್ಯ ಸಾಧಿಸುವ ಅಗತ್ಯವಿಲ್ಲ ಎಂದು ಪುಟಿನ್ ಅಂದಾಜಿಸಿದ್ದರು. ಇದೇ ಲೆಕ್ಕದಲ್ಲಿ ರಷ್ಯಾ ಸೈನಿಕ ಕಾರ್ಯಾಚರರಣೆ ಕೈಗೊಂಡಿರಬಹುದು. ಆದ್ರೇ ಈವರೆಗೂ ರಷ್ಯಾದ ಈ ಯುದ್ಧ ತಂತ್ರ ಫಲ ಕೊಟ್ಟಿಲ್ಲ. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ
ವಾಯುಪ್ರದೇಶದ ರಕ್ಷಣೆ ನೀಡದೇ ರಷ್ಯಾ ಯುದ್ಧ ಟ್ಯಾಂಕ್ ಕಣಕ್ಕಿಳಿಸಿದೆ. ಉಕ್ರೇನ್‍ಗೆ ಸೇರಿದ ಬೆರಕ್ತಿಯಾರ್ ಟಿಬಿ-62ಯಂತಂಹ ಶಸ್ತ್ರಾಸ್ತ್ರ ಡ್ರೋನ್‍ಗಳು ರಷ್ಯಾದ ಯುದ್ಧ ಟ್ಯಾಂಕ್‍ಗಳಿಗೆ ಅಪಾರ ಹಾನಿ ಉಂಟು ಮಾಡುತ್ತಿವೆ.
ಶಸ್ತ್ರಾಸ್ತ್ರ ಕಾಪಾಡಿಕೊಳ್ಳುವಲ್ಲಿ ಉಕ್ರೇನ್ ಜಾಣ ನಡೆ ಅನುಸರಿಸುತ್ತಿದೆ. ರಷ್ಯಾ ಎಷ್ಟೇ ದಾಳಿ ಮಾಡಿದರೂ ತಮ್ಮ ಯುದ್ಧ ವಿಮಾನ, ಹೆಲಿಕಾಪ್ಟರ್ ಸೇರಿ ಹಲವು ಈಗಲೂ ವಿನಿಯೋಗಿಸುವ ಸ್ಥಿತಿಯಲ್ಲೇ ಇವೆ.
ರಷ್ಯಾದ 300 ಅತ್ಯಾಧುನಿಕ ಯುದ್ಧ ವಿಮಾನ ಇನ್ನೂ ಗಡಿಯಲ್ಲೇ ನಿಂತಿದೆ. ಯುದ್ಧ ವಿಮಾನಗಳಿಂದ ಕೆಳಗೆ ಹಾಕುವ ಪಿಜಿಎಂ ಬಾಂಬ್‍ಗಳ ಕೊರತೆ ಎದುರಿಸುತ್ತಿದೆ. ವಿಮಾನ ವಿಧ್ವಂಸದ ಕ್ಷಿಪಣಿ ದಾಳಿಗೆ ರಷ್ಯಾ ಹಿಂದೇಟು ಹಾಕುತ್ತಿದೆ. ಒಂದು ವೇಳೆ ಈ ರೀತಿಯ ದಾಳಿ ನಡೆಸಿದರೆ ನಮ್ಮ ವಿಮಾನಗಳಿಗೆ ಕಂಟಕವಾಗುವ ಭೀತಿ ಎದುರಿಸುತ್ತಿದೆ. ಎರಡು ವಿಭಾಗಗಳಲ್ಲಿ ಗರಿಷ್ಠ ಸಮನ್ವಯ ಅಗತ್ಯ. ಆದರೆ ಇದು ರಷ್ಯಾ ಬಳಿ ಇರುವುದು ಅಷ್ಟಕ್ಕಷ್ಟೇ.
ಪಶ್ಚಿಮ ದೇಶಗಳಿಗೆ ಹೋಲಿಸಿದರೆ ರಷ್ಯಾ ಪೈಲಟ್‍ಗಳ ಶಿಕ್ಷಣ ಗುಣಮಟ್ಟ ಕಡಿಮೆ. ವಾರ್ಷಿಕ ಸರಾಸರಿ 100 ಗಂಟೆ ಹಾರಾಟದ ಅನುಭವ ಇದ್ದರೆ ಅಮೆರಿಕದಲ್ಲಿ 180 ಗಂಟೆ ಹಾರಾಟದ ಅನುಭವ ಹೊಂದಿದ್ದರು. ಯುದ್ಧ ವಿಮಾನದಲ್ಲಿನ ತಂತ್ರಜ್ಞಾನ, ಏವಿಯಾನಿಕ್ಸ್ ಎಷ್ಟು ಮುಖ್ಯವೋ ಅಷ್ಟೇ ಪೈಲಟ್‌ನ ಸಾಮರ್ಥ್ಯ ಮುಖ್ಯವಾಗುತ್ತದೆ. ಉದಾಹರಣೆ ವಿಂಗ್ ಕಮಾಂಡರ್ ಅಭಿನಂದವ್ ವರ್ಧಮಾನ್ ಮಿಗ್ 21 ಬೈಸನ್ ವಿಮಾನದ ಮೂಲಕ ಡಾಗ್ ಫೈಟ್( ಶತ್ರು ರಾಷ್ಟ್ರಗಳ ಯುದ್ಧ ವಿಮಾನಗಳ ಕಾದಾಟ) ನಡೆಸಿ ತನ್ನ ಕ್ಷಿಪಣಿ ಮೂಲಕ ಪಾಕಿಸ್ತಾನದ ಎಫ್ 16 ವಿಮಾನವನ್ನು ಬೀಳಿಸಿದ್ದರು. ಎಫ್ 16 ವಿಮಾನದ ಸಾಮರ್ಥ್ಯದ ಮುಂದೆ ಮಿಗ್ ವಿಮಾನ ಸಾಮರ್ಥ್ಯ ಏನೂ ಇಲ್ಲ. ಹೀಗಿದ್ದರೂ ಅಭಿನಂದನ್ ತನ್ನ ಕೌಶಲದಿಂದ ಎಫ್ 16 ವಿಮಾನವನ್ನು ಬೀಳಿಸಿದ್ದ ವಿಚಾರ ಕೇಳಿ ಇಡೀ ವಿಶ್ವವೇ ಬೆರಗಾಗಿತ್ತು.
ಶಿವಮೊಗ್ಗ: ಭಾರತದಲ್ಲಿಯೇ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆಶಯ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕೆ ಉಕ್ರೇನ್‌ಗೆ ತೆರಳಿದ್ದ ರಾಜ್ಯದ ನೂರಾರು ವಿದ್ಯಾರ್ಥಿಗಳು, ಉಕ್ರೇನ್ ಯುದ್ದ ಭೂಮಿಯಲ್ಲಿ ಸಿಲುಕಿದ್ದಾರೆ. ಭಾರತದಲ್ಲಿಯೇ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ದೊರೆತಿದ್ದರೆ, ಅಲ್ಲಿಗೆ ಯಾರು ಹೋಗುತ್ತಾರೆ? ಭಾರತದಲ್ಲಿಯೇ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ದೊರೆಯುವಂತೆ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಷ್ಯಾ ಯುದ್ಧ: 2 ಸಾವಿರ ಉಕ್ರೇನ್ ನಾಗರಿಕರು ಸಾವು
ಶಿಕ್ಷಣ ವ್ಯವಸ್ಥೆಯಲ್ಲಿ ಈಗ ಇರುವ ಕಾನೂನು ಬದಲಾವಣೆ ಮಾಡಬೇಕು. ಶಿಕ್ಷಣದ ಫೀಜ್ ಕಡಿಮೆ ಮಾಡಬೇಕು. ಈ ಬಗ್ಗೆ ಒಂದು ಅಭಿಯಾನವೇ ಆರಂಭಿಸಬೇಕಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ನೂರಾರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಇವರಲ್ಲಿ ಈಗಾಗಲೇ ಹಲವರು ವಾಪಸ್ಸಾಗಿದ್ದಾರೆ. ಇನ್ನೂ ಕೆಲವರು ಅಲ್ಲಿಯೇ ಇದ್ದಾರೆ. ಈಗಾಗಲೇ ಓರ್ವ ವಿದ್ಯಾರ್ಥಿ ಸಹ ಮೃತಪಟ್ಟಿದ್ದಾನೆ. ಹೀಗಾಗಿ ಸಹಜವಾಗಿ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಕೇಂದ್ರ ಸರ್ಕಾರ ವಿಳಂಬ ಮಾಡದೇ ರಾಜ್ಯ ಹಾಗೂ ದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ