Tag: ರಷ್ಯಾ

  • ಉಕ್ರೇನ್ ವಿರುದ್ಧ ಯುದ್ಧ – ಚರ್ಚೆಯಾಗುತ್ತಿದೆ ಭಾರತದ ಐತಿಹಾಸಿಕ ಕೊಹಿನೂರು ವಜ್ರ

    ಉಕ್ರೇನ್ ವಿರುದ್ಧ ಯುದ್ಧ – ಚರ್ಚೆಯಾಗುತ್ತಿದೆ ಭಾರತದ ಐತಿಹಾಸಿಕ ಕೊಹಿನೂರು ವಜ್ರ

    ಬೆಂಗಳೂರು: ಉಕ್ರೇನ್ ವಿರುದ್ಧದ ರಷ್ಯಾ ಯುದ್ಧ ಸಂಬಂಧ ಭಾರೀ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬ್ರಿಟನ್ ಮೂಲದ ಸುದ್ದಿ ನಿರೂಪಕನೊಬ್ಬನ ಟ್ವೀಟ್‍ನಿಂದ ಭಾರತದ ಕೊಹಿನೂರು ವಜ್ರದ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.

    ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಬಗ್ಗೆ ಬುಧವಾರ ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನ ನಡೆದಿದೆ. ಈ ಅಧಿವೇಶನದಲ್ಲಿ ಭಾರತ ಉಕ್ರೇನ್ ಅಥವಾ ರಷ್ಯಾದ ಪರವಾಗಿ ಮತ ಚಲಾಯಿಸದೇ ದೂರ ಉಳಿದಿದ್ದು, ಇದಕ್ಕೆ ಬ್ರಿಟನ್ ಮೂಲದ ಸುದ್ದಿ ನಿರೂಪಕನೊಬ್ಬ ಭಾರತದ ವಿರುದ್ಧವಾಗಿ ಟ್ವೀಟ್ ಮಾಡಿದ್ದ.

    ಭಾರತ ಹಾಗೂ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ನಡೆದ ಅಧಿವೇಶನದಲ್ಲಿ ಯಾವ ದೇಶಕ್ಕೂ ಮತ ಹಾಕದೇ ಇರುವಾಗ ಜಿಬಿ ನ್ಯೂಸ್‍ನ ನಿರೂಪಕ ಯಾವುದೇ ದೇಶಕ್ಕೆ ಮತ ಹಾಕದೇ ಇರುವ ಭಾರತ ಹಾಗೂ ಪಾಕಿಸ್ತಾನ ನಾಚಿಕೆಯಿಂದ ನೇಣು ಹಾಕಿಕೊಳ್ಳಬೇಕು. ಈ ಎರಡೂ ದೇಶಗಳು ಬ್ರಿಟನ್‍ನಿಂದ ಸ್ವಲ್ಪವೂ ಸಹಾಯ ಕೇಳಲು ಅರ್ಹವಲ್ಲ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ – ದಕ್ಷಿಣ ಏಷ್ಯಾ ರಾಷ್ಟ್ರಗಳು ಯಾರ ಪರ?

    ಈ ಹೇಳಿಕೆಗೆ ಭಾರತೀಯ ಟ್ವಿಟ್ಟರ್ ಬಳಕೆದಾರರು ಕೊಹಿನೂರು ವಿಚಾರವನ್ನು ಎಳೆದು ಹಾಕಿದ್ದಾರೆ. ಈ ಮೂಲಕ ಬ್ರಿಟನ್ ಸುದ್ದಿ ನಿರೂಪಕನೊಂದಿಗೆ ಟ್ಟಿಟ್ಟರ್‌ನಲ್ಲಿ ಯುದ್ಧ ಪ್ರಾರಂಭಿಸಿದ್ದಾರೆ. ಬ್ರಿಟನ್ ಸುದ್ದಿ ಸಂಸ್ಥೆಯ ನಿರೂಪಕನ ಟ್ವೀಟ್‍ಗೆ ಕಿಡಿಯಾದ ಭಾರತೀಯರು ಕಾಲ್ಕಿತ್ತು ಕೊಹಿನೂರು ವಿಚಾರವಾಗಿ ವಾಗ್ದಾಳಿ ಪ್ರಾರಂಭಿಸಿದ್ದಾರೆ.

    ಭಾರತದ ಆರ್ಥಿಕತೆ ನಿಮಗಿಂತಲೂ ದೊಡ್ಡದಾಗಿದೆ. ಇದೀಗ ನೀವು ಕದ್ದುಕೊಂಡು ಹೋಗಿರುವ ಕೊಹಿನೂರು ವಜ್ರವನ್ನು ಹಿಂದಿರುಗಿಸಬೇಕಾಗಿರುವುದಷ್ಟೇ ಬಾಕಿ ಎಂದು ಕೆಲವರು ಟ್ವಿಟ್ಟರ್‌ನಲ್ಲಿ ಕಾಲೆಳೆದಿದ್ದಾರೆ.

    ನಾವು ಸಹಾಯ ಕೇಳುವುದಕ್ಕೂ ಮೊದಲು ಭಾರತವನ್ನು ಲೂಟಿ ಮಾಡಿರುವ ನಮ್ಮ 45 ಟ್ರಿಲಿಯನ್ ಡಾಲರ್‍ಅನ್ನು ಹಿಂದಿರುಗಿಸಿ. ನಮ್ಮ ಎಲ್ಲಾ ಅಮೂಲ್ಯ ಸಂಪತ್ತು, ಐತಿಹಾಸಿಕ ಕಲಾಕೃತಿಗಳು ಹಾಗೂ ಕೊಹಿನೂರು ವಜ್ರವನ್ನು ಹಿಂದಿರುಗಿಸಿ ಎಂದು ಇನ್ನೊಬ್ಬರು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಬ್ರಿಟಿಷರು ಕೇವಲ ಕೊಹಿನೂರನ್ನಷ್ಟೇ ಕದ್ದುಕೊಂಡು ಹೋಗಿಲ್ಲ. ಕೊಡಗಿನ ರಾಜಕುಮಾರಿ ಗೌರಮ್ಮನನ್ನು ಕೂಡಾ ಹೊತ್ತೊಯ್ದಿದ್ದಾರೆ. ಆಕೆಯ ಮತಾಂತರ ಮಾಡಿ ಕರೆದುಕೊಂಡು ಹೋಗಲಾಗಿತ್ತು ಎಂದಿದ್ದಾರೆ.

    ನಿಮ್ಮ ವಸ್ತು ಸಂಗ್ರಹಾಲಯಗಳಲ್ಲಿ ವಿದೇಶದಿಂದ ಕದ್ದಿರುವ ವಸ್ತುಗಳೇ ತುಂಬಿ ತುಳುಕುತ್ತಿವೆ. ಕೊಹಿನೂರು ಕೂಡಾ ಅವುಗಳಲ್ಲೊಂದು ಎಂದು ವ್ಯಂಗ್ಯ ಮಾಡಿದ್ದಾರೆ. ನಾವು ನೇಣು ಹಾಕಿಕೊಳ್ಳುವುದಕ್ಕೂ ಮೊದಲು ನೀವು ನಮ್ಮ ಕೊಹಿನೂರು ಹಾಗೂ ಲೂಟಿ ಮಾಡಿರುವ ಎಲ್ಲಾ ಹಣವನ್ನು ಹಿಂದಿರುಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹೆಣ ಬಿದ್ದ ಜಾಗದಲ್ಲಿ ಮತ್ತೊಬ್ಬ ಹೋಗಿ ಹೆಣ ಆಗಲು ಯಾರೂ ತಯಾರಿಲ್ಲ: ಶಿವರಾಮ್ ಹೆಬ್ಬಾರ್

    ಹೆಣ ಬಿದ್ದ ಜಾಗದಲ್ಲಿ ಮತ್ತೊಬ್ಬ ಹೋಗಿ ಹೆಣ ಆಗಲು ಯಾರೂ ತಯಾರಿಲ್ಲ: ಶಿವರಾಮ್ ಹೆಬ್ಬಾರ್

    ಧಾರವಾಡ: ಉಕ್ರೇನ್ ದೇಶದಲ್ಲಿ ರಷ್ಯಾ ನಡೆಸಿದ ದಾಳಿಯಿಂದಾಗಿ ಮೃತಪಟ್ಟಿರುವ ಹಾವೇರಿ ಜಿಲ್ಲೆಯ ನವೀನ್ ಶೇಖರಪ್ಪನ  ಶವವನ್ನು ತರಲು ಸರ್ಕಾರ ಎಲ್ಲ ರೀತಿಯಿಂದಲೂ ಪ್ರಯತ್ನ ಮಾಡುತ್ತಿದೆ. ಆದರೆ, ಹೆಣ ಬಿದ್ದ ಜಾಗಕ್ಕೆ ಹೋಗಿ ಮತ್ತೊಬ್ಬ ಹೆಣವಾಗಲು ಯಾರೂ ಸಿದ್ಧರಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಹೆಸರಿನಡಿ 42 ವಿಮಾನಗಳನ್ನು ಉಕ್ರೇನ್ ಪಕ್ಕದ ದೇಶಗಳಿಗೆ ಕಳುಹಿಸಿ, ಆ ಮೂಲಕ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದೆ. ಹೀಗಾಗಿ ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಪಕ್ಕದ ದೇಶಗಳಿಗೆ ಬಂದು ಮುಟ್ಟಬೇಕಿದೆ. ಯುದ್ಧದ ತೀವ್ರತೆ ಉಕ್ರೇನ್‍ನಲ್ಲಿ ಹೆಚ್ಚಾಗಿರುವುದರಿಂದ ಅಲ್ಲಿ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಿಲ್ಲ. ಆದರೂ ಭಾರತ ಸರ್ಕಾರದ ನಾಲ್ಕು ಜನ ಮಂತ್ರಿಗಳು ನಾಲ್ಕು ದಿಕ್ಕಿನಲ್ಲಿ ನಿಂತು ರಕ್ಷಣಾ ಕಾರ್ಯ ಪರಿಶೀಲಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ದುರದೃಷ್ಟವಶಾತ್ ನಮ್ಮ ನಾಡಿನ ನವೀನ್ ಈ ಯುದ್ಧದಲ್ಲಿ ಅಸುನೀಗಿದ್ದಾನೆ. ನಾನು ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನು ಹೊಂದಿದ್ದೇನೆ. ನವೀನ್ ಮನೆಗೆ ಭೇಟಿ ನೀಡಿ ಬಂದಿದ್ದೇನೆ. ಆತನ ಶವ ತರಲು ಸರ್ವ ಪ್ರಯತ್ನ ನಡೆದಿದೆ. ನವೀನ್‍ನ್ನು ಜೀವಂತವಾಗಿ ಮನೆಗೆ ಕರೆ ತರಲು ಆಗಲಿಲ್ಲ. ಕಡೆ ಪಕ್ಷ ಆತನ ಪೋಷಕರಿಗೆ ಕೊನೆಯ ಬಾರಿಗೆ ನವೀನ್‍ನ ಮುಖವನ್ನಾದರೂ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯುದ್ಧ ಮನುಕುಲದ ಶತ್ರು, ಸದ್ಯ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ: ಬಸವಾನಂದ ಶ್ರೀ

  • ಉಕ್ರೇನ್ ವಿರುದ್ಧ ರಷ್ಯಾ ಯುದ್ಧ – ದಕ್ಷಿಣ ಏಷ್ಯಾ ರಾಷ್ಟ್ರಗಳು ಯಾರ ಪರ?

    ಉಕ್ರೇನ್ ವಿರುದ್ಧ ರಷ್ಯಾ ಯುದ್ಧ – ದಕ್ಷಿಣ ಏಷ್ಯಾ ರಾಷ್ಟ್ರಗಳು ಯಾರ ಪರ?

    ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ(ಯುಎನ್‌ಜಿಎ)ದಲ್ಲಿ ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಖಂಡಿಸುವ ನಿರ್ಣಯದಿಂದ ಮತ್ತೆ ಭಾರತ ದೂರ ಉಳಿದಿದ್ದರೆ ಅಫ್ಘಾನಿಸ್ತಾನ, ನೇಪಾಳ ನಿರ್ಣಯದ ಪರವಾಗಿ ಮತವನ್ನು ಚಲಾಯಿಸಿವೆ.

    ರಷ್ಯಾ ವಿರುದ್ಧದ ನಿರ್ಣಯಕ್ಕೆ ಸಂಬಂಧಿಸಿದಂತೆ ಭಾರತ ಸೇರಿದಂತೆ 35 ರಾಷ್ಟ್ರಗಳು ತಟಸ್ಥ ಧೋರಣೆಯನ್ನು ಅನುಸರಿಸಿವೆ. ನಿರ್ಣಯದ ಪರವಾಗಿ 141 ದೇಶಗಳು ಇದ್ದರೆ, ವಿರುದ್ಧವಾಗಿ 5 ರಾಷ್ಟ್ರಗಳು ಮತ ಚಲಾಯಿಸಿವೆ. ನಿರ್ಣಯ ಮಂಡನೆಯಲ್ಲಿ 193 ಸದಸ್ಯ ರಾಷ್ಟ್ರಗಳು ಪಾಲ್ಗೊಂಡಿದ್ದವು. ತನ್ನ ಪರಮಾಣು ಪಡೆಗಳ ಸನ್ನದ್ಧತೆಯನ್ನು ಹೆಚ್ಚಿಸುವ ರಷ್ಯಾದ ನಿರ್ಧಾರವನ್ನು ಸಭೆಯಲ್ಲಿ ಖಂಡಿಸಲಾಯಿತು. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ರಾಜಕೀಯ ಮಾತುಕತೆ, ಮಧ್ಯಸ್ಥಿಕೆ ಮತ್ತು ಇತರ ಶಾಂತಿಯುತ ವಿಧಾನಗಳ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ತಕ್ಷಣದ ಶಾಂತಿಯುತ ಅಗತ್ಯ ಎಂದು ನಿರ್ಣಯದ ಪರವಾಗಿದ್ದ ರಾಷ್ಟ್ರಗಳು ಒತ್ತಿ ಹೇಳಿವೆ.

    ಕೆನಡಾ, ಫ್ರಾನ್ಸ್, ಜರ್ಮನಿ, ಜರ್ಮನಿ, ಐರ್ಲ್ಯಾಂಡ್, ಕುವೈತ್, ಸಿಂಗಾಪೂರ್, ಟರ್ಕಿ, ಉಕ್ರೇನ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 141 ದೇಶಗಳು ರಷ್ಯಾ ವಿರುದ್ಧದ ಖಂಡನ ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ಈ ರಾಷ್ಟ್ರಗಳ ಜೊತೆ ಭೂತನ್, ಅಫ್ಘಾನಿಸ್ತಾನ, ನೇಪಾಳ ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಚೀನಾ ಸೇರಿದಂತೆ 35 ರಾಷ್ಟ್ರಗಳು ಮತವನ್ನು ಚಲಾಯಿಸದೇ ನಿರ್ಣಯದಿಂದ ದೂರ ಉಳಿದಿವೆ. ಇದನ್ನೂ ಓದಿ: ಯುದ್ಧ ವಿರೋಧಿ ರಷ್ಯನ್ನರ ಬಂಧನ- ಪುಟಿನ್‌ ರಷ್ಯಾದವನಲ್ಲ ಎಂದ ನಾವೆಲ್ನಿ

    ಕಳೆದ ಶುಕ್ರವಾರ ಇದೇ ರೀತಿ ನಿರ್ಣಯ ಮಂಡಿಸ ಭಾರತ ತಟಸ್ಥ ಧೋರಣೆ ಅನುಸರಿಸಿತ್ತು. ಈ ವೇಳೆ ನಿರ್ಣಯದ ಪರವಾಗಿ 11 ರಾಷ್ಟ್ರಗಳು ಮತ ಚಲಾಯಿಸಿದ್ದವು. ಆದರೆ ಭಾರತ, ಚೀನಾ ಸೇರಿದಂತೆ 3 ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದಿದ್ದವು.

  • ಕೊಡಗಿನ ವಿದ್ಯಾರ್ಥಿ ಶಾರುಖ್ ಸುರಕ್ಷಿತವಾಗಿ ಇದ್ದಾನೆ: ಅಧಿಕಾರಿ

    ಕೊಡಗಿನ ವಿದ್ಯಾರ್ಥಿ ಶಾರುಖ್ ಸುರಕ್ಷಿತವಾಗಿ ಇದ್ದಾನೆ: ಅಧಿಕಾರಿ

    ಮಡಿಕೇರಿ: ಕೊಡಗಿನ ವಿದ್ಯಾರ್ಥಿ ಶಾರುಖ್ ಸುರಕ್ಷಿತವಾಗಿ ಇದ್ದಾನೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ.

    ಓರ್ವ ವಿದ್ಯಾರ್ಥಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದವರು ಕಂಗಾಲಾಗಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಕೊಡಗು ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಹೈ  ಅಲರ್ಟ್‌ ಆಗಿದ್ದರು. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

    ಮೂರು ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಗದೆ ಇರುವ ವಿದ್ಯಾರ್ಥಿ ಶಾರುಖ್ ಅವರನ್ನು ಸಂಪರ್ಕ ಮಾಡಿ ತೊಂದರೆಯಲ್ಲಿ ಸಿಲುಕಿದ್ದೀರಾ ಎಂದು ಕೇಳಿದ್ದಾರೆ. ಬಳಿಕ ಶಾರುಖ್ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ನಾವು ಉಕ್ರೇನ್ ಗಡಿಭಾಗವನ್ನು ದಾಟಿ ಬರುತ್ತಿದ್ದೇವೆ. ಯಾರು ಅತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗೆ ಶಾರುಖ್ ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ

    ಮಗ ಸಂಪರ್ಕಕ್ಕೆ ಸಿಕ್ಕಿ ಮಾತಾನಾಡಿರುವುದರಿಂದ ಸ್ಪಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಅಗಿದೆ ಎಂದು ಪೋಷಕರು ತಿಳಿಸಿದ್ದಾರೆ.

  • ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಮಾಸ್ಕೋ: ಉಕ್ರೇನ್ ಮೇಲಿನ ದಾಳಿಯನ್ನು ವಿಶ್ವದ ಇತರ ದೇಶಗಳು ಮಾತ್ರವಲ್ಲದೇ ರಷ್ಯಾ ಕೂಡಾ ವಿರೋಧಿಸುತ್ತಿದೆ. ಯುದ್ಧ ಘೋಷಿಸಿದ ದೇಶದ ಒಳಗಿನವರೇ ಅಧ್ಯಕ್ಷನ ವಿರುದ್ಧ ಟೀಕೆ ಮಾಡಿದ್ದಾರೆ. ರಷ್ಯಾದ ಸಾಮಾನ್ಯ ಜನರು, ಕ್ರೀಡಾ ಪಟುಗಳು ಸೆಲೆಬ್ರಿಟಿಗಳು ಎನ್ನದೇ ಬಹುತೇಕ ಜನರು ಯುದ್ಧ ಬೇಡ ಎಂದೇ ಹೇಳಿದ್ದಾರೆ.

    ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯಾರ ಮಾತನ್ನೂ ಕೇಳದೇ ಯುದ್ಧವನ್ನು ಮುಂದುವರಿಸುತ್ತಿರುವಾಗ ರಷ್ಯಾದ ಉದ್ಯಮಿಯೊಬ್ಬರು ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಯುದ್ಧ ವಿರೋಧಿ ರಷ್ಯನ್ನರ ಬಂಧನ- ಪುಟಿನ್‌ ರಷ್ಯಾದವನಲ್ಲ ಎಂದ ನಾವೆಲ್ನಿ

    ರಷ್ಯಾದ ಮಾಸ್ಕೋ ಮೂಲದ ಉದ್ಯಮಿ ಅಲೆಕ್ಸ್ ಕೋನನಿಖಿನ್ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಪುಟಿನ್ ಅವರನ್ನು ರಷ್ಯಾದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿ ಎಂದು ಬಂಧಿಸಿದ ಅಧಿಕಾರಿಗೆ ನಾನು 10 ಲಕ್ಷ ಡಾಲರ್(7.5 ಕೋಟಿ ರೂ.) ನೀಡುವುದಾಗಿ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 7000 ರಷ್ಯಾ ಯೋಧರ ಸಾವು: ಉಕ್ರೇನ್ ಅಧ್ಯಕ್ಷ

    ಪುಟಿನ್ ರಷ್ಯಾದ ಅಧ್ಯಕ್ಷನಲ್ಲ. ಅವರು ವಿಶೇಷ ಕಾರ್ಯಾಚರಣೆಯ ಭಾಗವಾಗಿ ರಷ್ಯಾದಲ್ಲಿ ಅನೇಕ ಅಪಾರ್ಟ್‍ಮೆಂಟ್ ಹಾಗೂ ಕಟ್ಟಡಗಳನ್ನು ಧ್ವಂಸ ಮಾಡಿದ್ದಾರೆ. ಇದಾದ ಬಳಿಕ ಚುನಾವಣೆಗಳನ್ನೂ ನಡೆಸಿಲ್ಲ. ಸಂವಿಧಾನವನ್ನು ಹಾಳುಮಾಡಿದ್ದಾರೆ. ತಮ್ಮ ವಿರೋಧಿಗಳನ್ನೂ ಕೊಂದಿದ್ದಾರೆ ಎಂದು ಬರೆದಿದ್ದಾರೆ.

  • ಯುದ್ಧ ಮನುಕುಲದ ಶತ್ರು, ಸದ್ಯ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ: ಬಸವಾನಂದ ಶ್ರೀ

    ಯುದ್ಧ ಮನುಕುಲದ ಶತ್ರು, ಸದ್ಯ ನಡೆಯುತ್ತಿರುವುದು ದುರದೃಷ್ಟಕರ ಸಂಗತಿ: ಬಸವಾನಂದ ಶ್ರೀ

    ಧಾರವಾಡ: ಯುದ್ಧ ಮನುಕುಲದ ಶತ್ರು, ಸದ್ಯ ಯುದ್ಧ ನಡೆಯುತ್ತಿರುವದು ದುರದೃಷ್ಟಕರ ಸಂಗತಿ ಎಂದು ಧಾರವಾಡದ ಮಹಾಮನೆ ಮಠದ ಬಸವಾನಂದ ಶ್ರೀ ಅಭಿಪ್ರಾಯಪಟ್ಟಿದ್ದಾರೆ.

    ರಷ್ಯಾ, ಉಕ್ರೇನ್ ಯುದ್ಧ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನುಷ್ಯನಲ್ಲಿ ಹಣ, ಶಸಾಸ್ತ್ರ ಜಾಸ್ತಿ ಆದಾಗ ಯುದ್ಧ ಆಗಿಯೇ ಆಗುತ್ತವೆ, ಯುದ್ಧಗಳು ನಡೆಯಬಾರದು ಎನ್ನುವುದು ಎಲ್ಲರ ಅಪೇಕ್ಷೆ. ಯಾವ ಯಾವುದೋ ನೆಪದಲ್ಲಿ ಯುದ್ಧಗಳು ನಡೆಯುತ್ತಲೇ ಇರುತ್ತವೆ, ಇದೀಗ ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಆದಷ್ಟು ಬೇಗ ನಿಲ್ಲಲಿ. ವಿಶ್ವ ಸಂಸ್ಥೆ ಯುದ್ಧದ ವಿಚಾರವಾಗಿ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದರು. ಇದನ್ನೂ ಓದಿ: ನಮ್ಮ ಮಕ್ಕಳು ಎಲ್ಲಿದ್ದಾರೆಂಬ ಮಾಹಿತಿಯಾದರೂ ಕೊಡಿ: ಐಡಾ ಮೆಲ್ವಿನ್ ಕಣ್ಣೀರು

    ಉಕ್ರೇನ್‍ನಲ್ಲಿ ಅನೇಕ ವಿದ್ಯಾರ್ಥಿಗಳು ಸಿಳುಕಿಕೊಂಡಿದ್ದಾರೆ, ಅವರನ್ನು ಮತ್ತೆ ತಾಯ್ನಾಡಿಗೆ ಮತ್ತೆ ಕರೆ ತರಲು ಭಾರತ ಸರ್ಕಾರ ಒಳ್ಳೆ ವ್ಯವಸ್ಥೆ ಮಾಡಿದೆ. ಕೆಲದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಸರ್ಕಾರ ಸಿದ್ಧವಿತ್ತು, ಆದರೆ ಯುದ್ಧ ಆಗುತ್ತೋ, ಇಲ್ಲವೋ ಅನ್ನೋ ಗೊಂದಲವಿತ್ತು. ಹಾಗಾಗಿ ಸ್ವಲ್ಪ ಹಿಂಜರಿದು ಬಿಟ್ಟರು. ಅಲ್ಲಿ ಓದಲು ಹೋದ ಕರ್ನಾಟಕದ ಹುಡುಗ ಜೀವ ಕಳೆದುಕೊಂಡಿದ್ದಾನೆ ಇದು ನೋವಿನ ಸಂಗತಿ. ಇದೀಗ ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆ ತರಲಿ. ಈ ನಷ್ಟ, ಜೀವ ಹಾನಿ ಬೇಗ ನಿಲ್ಲುವಂತಾಗಲಿ ಎಂದು ನುಡಿದರು. ಇದನ್ನೂ ಓದಿ: ಹೂ ತಗೊಂಡು ನಾವೇನು ಮಾಡ್ಬೇಕು- ಕೇಂದ್ರದ ವಿರುದ್ಧ ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳು ಗರಂ

  • ಜೀವ ಭಯದಲ್ಲಿ 40ಕಿ.ಮೀ ಯುದ್ಧಭೂಮಿಯಲ್ಲೇ ನಡೆದುಕೊಂಡು ಹೋದ ವಿದ್ಯಾರ್ಥಿಗಳು

    ಜೀವ ಭಯದಲ್ಲಿ 40ಕಿ.ಮೀ ಯುದ್ಧಭೂಮಿಯಲ್ಲೇ ನಡೆದುಕೊಂಡು ಹೋದ ವಿದ್ಯಾರ್ಥಿಗಳು

    ಬೀದರ್ : ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ನವೀನ್ ಸಾವಿನ ಬೆನ್ನಲ್ಲೇ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದ್ದು ಬೀದರ್ ಮೂಲದ ಶಶಾಂಕ್ ಹಾಗೂ ವಿವೇಕ್ ಇನ್ನೂ ಖಾರ್ಕಿವ್‍ನಲ್ಲೇ ಸಿಲುಕಿರುವುದು ಆತಂಕಕ್ಕೆ ಕಾರಣವಾಗಿದೆ.

    ಆತಂಕದಲ್ಲಿ ನಿನ್ನೆ ಖಾರ್ಕಿವ್‍ನಿಂದ ರೈಲ್ವೆ ಸ್ಟೇಷನ್‍ಗೆ ಹೋಗಿ ರೈಲು ಸಿಗದ ಕಾರಣ ಅಲ್ಲಿಂದ ಖಾರ್ಕಿವ್‍ನ ಪಿಶೋಚಿನ್‍ಗೆ ನಡೆದುಕೊಂಡು ಹೋಗಿ ತಂಗಿದ್ದಾರೆ. ಕ್ಷಿಪಣಿ, ಮಿಸೈಲ್ ಗಳ ಸ್ಫೋಟ, ಟ್ಯಾಂಕರ್ ಸದ್ದಿನ ನಡುವೆ ಜೀವ ಭಯದಲ್ಲಿಯೇ 40 ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಾ ವಿದ್ಯಾರ್ಥಿಗಳು ಪಿಶೋಚಿನ್ ನಗರ ತಲುಪಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ

    ಯುದ್ಧದ ನಡುವೆ ನಡೆಯುತ್ತಾ ಸಾಗಿದ ರೋಚಕದ ಬಗ್ಗೆ ವೀಡಿಯೋ ಕಾಲ್‍ನಲ್ಲಿ ತಾಯಿ ಜೊತೆ ಶಶಾಂಕ್ ಹಂಚಿಕೊಂಡಿದ್ದಾರೆ. ಇನ್ನೂ ಉಳಿದ ಅಮಿತ್  ಬಹುತೇಕ ಸೇಫಾಗಿದ್ದು ಖಾರ್ಕಿವ್‍ನಿಂದ ರೈಲು ಮೂಲಕ ಲ್ವಿವ್, ಲ್ವಿವ್ ಟೂ ಪೋಲ್ಯಾಂಡ್ ಕಡೆಯಿಂದ ಬರುತ್ತಿದ್ದಾರೆ. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

    ಬಸವಕಲ್ಯಾಣದ ವೈಷ್ಣವಿ ಕೂಡಾ ಖಾರ್ಕಿವ್ ನಿಂದ ರೈಲು ಮೂಲಕ ಹಂಗೇರಿಗೆ ಬಂದು ಸೇಫಾಗಿದ್ದು ಖಾರ್ಕಿವ್‍ನಲ್ಲಿಯೇ ಉಳಿದಿದ್ದಾರೆ. ಇದರಿಂದ ಇಬ್ಬರು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

  • 7000 ರಷ್ಯಾ ಯೋಧರ ಸಾವು: ಉಕ್ರೇನ್ ಅಧ್ಯಕ್ಷ

    7000 ರಷ್ಯಾ ಯೋಧರ ಸಾವು: ಉಕ್ರೇನ್ ಅಧ್ಯಕ್ಷ

    ಕೀವ್: ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಸಾರಿ ವಾರವೇ ಕಳೆದಿದೆ. ಯುದ್ಧ ಸಾರಿದ ದೇಶವೇ 7,000 ಯೋಧರನ್ನು ಕಳೆದುಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.

    ರಷ್ಯಾ ಪಡೆ ಉಕ್ರೇನ್ ಪ್ರಮುಖ ನಗರಗಳನ್ನು ವಷಕ್ಕೆ ಪಡೆದುಕೊಂಡಿದ್ದರೂ ಅವರು ದಿಕ್ಕು ದೆಸೆ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಇದೀಗ ನಾವು ಅವರಿಗೆ ತಿರುಗೇಟು ನೀಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!

    ನಾವು ಕೇವಲ 1 ವಾರದಲ್ಲಿ ಶತ್ರುಗಳ ಯೋಜನೆಯನ್ನು ಬುಡಮೇಲು ಮಾಡಿದ್ದೇವೆ. ನಮ್ಮದೇ ಜನರ ಮೇಲೆ ವಿಷ ಬೀಜ ಬಿತ್ತಿ ದೇಶದ ವಿರುದ್ಧ ನಿಲ್ಲುವಂತೆ ರಷ್ಯಾ ಮಾಡಿತ್ತು. ನಮ್ಮ ಜನರಲ್ಲಿ ಸಹೃದಯತೆ ಹಾಗೂ ಸ್ವತಂತ್ರತೆಗಳೆಂಬ ಎರಡು ವಿಚಾರಗಳಿವೆ ಎಂದು ತಿಳಿಸಿದರು. ಇದನ್ನೂ ಓದಿ: ಮೇಕ್ ಇನ್ ಇಂಡಿಯಾದಲ್ಲಿ ಇನ್ನೂ ದೊಡ್ಡದಾಗಿ ಯೋಚಿಸಬೇಕಿದೆ: ಮೋದಿ

    ನಾವೀಗ ರಷ್ಯಾದ ಸೈನಿಕರನ್ನು ನಿಯಂತ್ರಿಸುತ್ತಿದ್ದೇವೆ. ಭದ್ರತಾ ಪಡೆ, ಸಿಬ್ಬಂದಿ, ಸ್ಥಳೀಯರು ಎಲ್ಲರೂ ಸೇರಿ ಅವರನ್ನು ಸೆರೆ ಹಿಡಿದು ಅವರಿಗೆ ನಾವು ತಿರುಗೇಟು ನೀಡುತ್ತಿದ್ದೇವೆ. ಅವರು ಏಕೆ ಇಲ್ಲಿದ್ದಾರೆ ಎಂಬ ಬಗ್ಗೆ ಗೊಂದಲ ಹೊಂದಿದ್ದಾರೆ. ಅವರು ಸಂಖ್ಯೆಯಲ್ಲಿ ನಮಗಿಂತ 10 ಪಟ್ಟು ಹೆಚ್ಚಿದ್ದರೂ ಅವರಲ್ಲಿ ಶಕ್ತಿಯಿಲ್ಲ ಎಂದು ಝೆಲೆನ್ಸ್ಕಿ ರಷ್ಯಾದ ಯೋಧರನ್ನು ವ್ಯಂಗ್ಯ ಮಾಡಿದ್ದಾರೆ.

  • ಉಕ್ರೇನ್‍ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆಗೆ ನಿಂತ ಸೋನು ಸೂದ್

    ಉಕ್ರೇನ್‍ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆಗೆ ನಿಂತ ಸೋನು ಸೂದ್

    ಮುಂಬೈ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಬಾಲಿವುಡ್ ನಟ ಸೋನು ಸೂದ್ ಮುಂದಾಗಿದ್ದಾರೆ.

    ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ಮುಂದುವರಿಸಿದೆ. ರಷ್ಯಾ ಹಾಗೂ ಉಕ್ರೇನ್ ಸಂಘರ್ಷದ ನಡುವೆ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ನಟ ಸೋನು ಸೂದ್ ಆಪತ್ಭಂದವನಂತೆ ಅನೇಕ ವಿದ್ಯಾರ್ಥಿಗಳನ್ನು ರಕ್ಷಿಸಲು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್ನೂ ಹಲವಾರು ವಿದ್ಯಾರ್ಥಿಗಳು ಸೋನು ಸೂದ್ ಚಾರಿಟಿ ಸಂಸ್ಥೆಯಿಂದ ಸಹಾಯ ಪಡೆದಿರುವ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸುರಕ್ಷಿತವಾಗಿ ಮನೆಗೆ ತೆರಳಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ

    ಈ ಮುನ್ನ ಕೋವಿಡ್-19 ಲಾಕ್‍ಡೌನ್ ವೇಳೆ ವಲಸಿಗರಿಗೆ ತಮ್ಮ ಮನೆಗಳಿಗೆ ತೆರಳಲು ಸಹಾಯ ಮಾಡುವ ಮೂಲಕ ಸೋನುಸೂದ್ ಪ್ರಶಂಸೆ ಪಡೆದಿದ್ದರು. ಇದೀಗ ಯುದ್ಧ ಪೀಡಿತ ಉಕ್ರೇನ್‍ನ ಖಾರ್ಕಿವ್ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ವಿದ್ಯಾರ್ಥಿಗಳು ತಮ್ಮ ತಾಯ್ನಾಡಿಗೆ ಸುರಕ್ಷಿತವಾಗಿ ತಲುಪಲು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿರುವ ಸೋನು ಸೂದ್ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇದೇ ವಿಚಾರವಾಗಿ ಈ ಮುನ್ನ ಸೋನು ಸೂದ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಸ್ಥಳೀಯ ಟ್ಯಾಕ್ಸಿಗಳನ್ನು ವಿದ್ಯಾರ್ಥಿಗಳಿರುವ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಅವರನ್ನು ಖಾರ್ಕಿವ್‍ನ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಅವರನ್ನು ರೈಲಿನಲ್ಲಿ ಎಲ್ವಿವ್ ನಗರದ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗುತ್ತದೆ. ಅವರನ್ನು ಪೋಲಿಷ್ ಗಡಿಗೆ ಸಾಗಿಸಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಯುದ್ಧದ ನಡುವೆ ಬಾಂಬ್ ಶೆಲ್ಟರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

    ಉಕ್ರೇನ್‍ನಲ್ಲಿರುವ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದು, ಈ ಕಠಿಣ ಸಮಯದಲ್ಲಿ ಅದೃಷ್ಟವಶಾತ್ ನಾವು ಅನೇಕ ವಿದ್ಯಾರ್ಥಿಗಳನ್ನು ಗಡಿ ದಾಟಿ ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದೇವೆ. ಹೀಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರೋಣ, ಅವರಿಗೆ ನಮ್ಮ ಅವಶ್ಯಕತೆ ಇದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

    ವಿದ್ಯಾರ್ಥಿಯೊಬ್ಬರು ಸೋನು ಸೂದ್ ಸಹಾಯ ಕುರಿತಂತೆ ವೀಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸೋನು ಸುದ್ ಅವರು, ಅದು ನನ್ನ ಕೆಲಸ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಇದರಿಂದ ನನಗೆ ಸಂತಸವಾಗಿದೆ. ನಿಮ್ಮೆಲ್ಲರ ಬೆಂಬಲಕ್ಕೆ, ಭಾರತ ಸರ್ಕಾರದಕ್ಕೆ ದೊಡ್ಡ ಧನ್ಯವಾದ ಎಂದು ಪ್ರತಿಕ್ರಿಯಿಸಿದ್ದಾರೆ.

  • ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ: ಪ್ರತಾಪ್ ಸಿಂಹ

    ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ: ಪ್ರತಾಪ್ ಸಿಂಹ

    ಮೈಸೂರು: ತನ್ನ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ಹೀಗಾಗಿ ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

    ಸುದ್ದಿಗಾರರೊಂದಿಎಗ ಮಾತನಾಡಿದ ಅವರು, ನೆಹರು ಕಾಂಗ್ರೆಸ್ ನವರು ನಮಗೆ ವಿದೇಶಾಂಗ ನೀತಿ ಬಗ್ಗೆ ಪಾಠ ಹೇಳುತ್ತಿದ್ದಾರೆ. ಅವರ ಆಡಳಿತದ ವಿದೇಶಾಂಗ ನೀತಿ ಹೇಗೆ ಇತ್ತು. ಅದರಿಂದ ದೇಶಕ್ಕೆ ಆದ ನಷ್ಟ ಎಷ್ಟು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಕಾಂಗ್ರೆಸ್ ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ. ಚೀನಾ ಟಿಬೆಟ್ ಕಬಳಿಸಿದ್ದಾಗ ಸುಮ್ಮನೆ ಇದ್ದ ಕಾಂಗ್ರೆಸ್ ಈಗ ವಿದೇಶಾಂಗ ನೀತಿಯ ಪಾಠ ನಮಗೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೀವಂತ ಇದ್ದವ್ರನ್ನೇ ತರೋದು ಕಷ್ಟವಿದ್ದು, ನವೀನ್ ಶವ ತರುವುದು ಇನ್ನೂ ಡಿಫಿಕಲ್ಟ್: ಬೆಲ್ಲದ್

    ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ. ತನ್ನ ಭದ್ರತೆ, ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ರಷ್ಯಾದ ಮೇಲೆ ಭಾರತ ಅತಿ ಹೆಚ್ಚು ಅವಲಂಬಿತವಾಗಿದೆ. ಈ ಅವಲಂಬನೆಗೆ ಸೃಷ್ಟಿಸಿದ್ದು ಕಾಂಗ್ರೆಸ್. ರಷ್ಯಾವನ್ನು ಎದುರು ಹಾಕಿಕೊಂಡರೆ ಮುಂದೆ ನಮಗೆ ಯುದ್ಧದಂತಹ ಸಂದರ್ಭ ಸೃಷ್ಟಿಯಾದರೆ ರಷ್ಯಾ ನಮ್ಮ ನೆರವಿಗೆ ಬರುತ್ತಾ?. ಹೀಗಾಗಿ ಪ್ರಧಾನಿಗಳು ಈಗ ತಟಸ್ಥ ನಿಲುವಿಗೆ ಬಂದಿದ್ದಾರೆ.ಅಲ್ಲಿನ ಎಲ್ಲಾ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ವ್ಯವಸ್ಥಿತವಾಗಿ ಸಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

    ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ನೀಟ್ ಬ್ಯಾನ್ ಕ್ಯಾಂಪೈನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ನೀಟ್ ತರಲಾಗಿದೆ. 138 ಕೋಟಿ ಜನಸಂಖ್ಯೆ ದೇಶಕ್ಕೆ, ಒಂದೂವರೆ ಲಕ್ಷ ಮೆಡಿಕಲ್ ಸೀಟ್ ಇದೆ. ಇದರಿಂದ ಪೈಪೋಟಿ ಹೆಚ್ಚಾಗಿದೆ. ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜ್ ಬರಬೇಕು. ಆಗ ಸೀಟ್ ಹೆಚ್ಚಾಗುತ್ತೆ. ಎಲ್ಲರಿಗೂ ಅವಕಾಶ ಸಿಗುತ್ತೆ. ಉಕ್ರೇನ್‍ನಲ್ಲಿ ಓದುವುದಕ್ಕೆ ಹೋಗಿರುವವರು ಕೂಡ ಬುದ್ಧಿವಂತರು ಎಂದರು. ಇದನ್ನೂ ಓದಿ: ಯುದ್ಧ ನಿಲ್ಲಿಸಿ ಅಂತ ಪುಟಿನ್‌ಗೆ ನಾವು ಹೇಳಬಹುದೇ: ಸಿಜೆಐ ಪ್ರಶ್ನೆ

    ನವೀನ್ ಸಾವಿನ ಹಿನ್ನೆಲೆಯಲ್ಲಿ ಕೆಲವರು ಮೀಸಲಾತಿ ವಿರುದ್ಧ ಕೆಲವರು ಮಾತಾಡುತ್ತಿದ್ದಾರೆ. ಪ.ಜಾತಿ, ಪ. ಪಂಗಡ ಎಷ್ಟೋ ವರ್ಷ ಶೋಷಣೆಗೆ ಒಳಗಾಗಿದೆ. ಅವರಿಗೆ ಮೀಸಲಾತಿ ಕೊಟ್ಟಿರುವುದರಲ್ಲಿ ಯಾವ ತಪ್ಪು ಇಲ್ಲ. ಜಾತಿ ತಾರತಮ್ಯ ನಿವಾರಣೆಯಾಗಿ ಸಮಾಜ ಜಾತಿ ಬಂಧನದಿಂದ ಹೊರ ಬರುವವರೆಗೂ ಮೀಸಲಾತಿ ಇರುತ್ತೆ. ಮೀಸಲಾತಿ ಇವತ್ತು ಇರುತ್ತೆ ಮುಂದೆಯೂ ಇರುತ್ತೆ. ಯಾರದ್ದೋ ಮನೆಯ ಗಂಟು ತಂದು ಅವರಿಗೆ ಕೊಡುತ್ತಿದ್ದೇವೆ ಎನ್ನುವ ರೀತಿ ಮಾತಾಡಬೇಡಿ. ಶೋಷಣೆ ಒಳಗಾದ ಸಹೋದರರಿಗೆ ಮೀಸಲಾತಿ ಕೊಡುತ್ತಿದ್ದೇವೆ. ಇದರಲ್ಲಿ ತಪ್ಪು ಏನಿದೆ ಎಂದು ಸಂಸದರು ಪ್ರಶ್ನಿಸಿದರು.