Tag: ರಷ್ಯಾ

  • ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

    ಉಕ್ರೇನ್‍ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

    ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ 9ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ರಷ್ಯಾ ಸೈನಿಕರು ಉಕ್ರೇನ್ ನಲ್ಲಿರುವ ಅತೀ ದೊಡ್ಡ ಅಣುಸ್ಥಾವರದ ಮೇಲೆ ದಾಳಿ ಮಾಡಿದ್ದಾರೆ.

    ಇಂದು ಮುಂಜಾನೆ 3 ಗಂಟೆ ಸುಮಾರಿಗೆ ರಷ್ಯಾ ಸೇನೆಯಿಂದ ಜಪೋರಿಝಿಯಾ ಅಣುಸ್ಥಾವರ ಮೇಲೆ ದಾಳಿ ನಡೆದಿದೆ. ಯುರೋಪಿನಲ್ಲಿಯೇ ಅತೀ ದೊಡ್ಡದಾದ ಅಣುಸ್ಥಾವರ ಇದಾಗಿದೆ. ಇದೀಗ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಣುಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಎನರ್‍ಗೋಡರ್‍ನ ಮೇಯರ್ ಹೇಳಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಕಟ್ಟಡ ಹಾಗೂ ಘಟಕಗಳ ಶತ್ರುಗಳ ನಿರಂತರ ಶೆಲ್ ದಾಳಿಗೊಳಗಾಗಿದ್ದು, ಪರಿಣಾಮವಾಗಿ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಧಗಧಗಿಸುತ್ತಿದೆ. ಒಂದು ವೇಳೆ ಈ ಅಣುಸ್ಥಾವರ ಸ್ಫೊಟಗೊಂಡರೆ 1986ರ ಚರ್ನೋಬೆಲ್ ದುರಂತಕ್ಕಿಂತ 10 ಪಟ್ಟು ಭೀಕರವಾಗಲಿದೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

    ಸ್ಥಳೀಯ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಹೋರಾಟ ನಡೆದಿದೆ. ಈ ದಾಳಿಯಲ್ಲಿ ಅಪಾರ ಸಾವು ನೋವುಗಳಾಗಿವೆ. ಇದಕ್ಕೂ ಮೊದಲು ರಷ್ಯಾ ಸೇನೆಯು, ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದು ವರದಿಯಾಗಿತ್ತು. ಇದಕ್ಕಾಗಿ ರಷ್ಯಾ ಪಡೆಗಳು ಟ್ಯಾಂಕ್‍ಳೊಂದಿಗೆ ಜಪೋರಿಝಿಯಾ ಪ್ರವೇಶಿಸಿವೆ ಎಂದು ಹೇಳಲಾಗಿತ್ತು.

  • ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟಿನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಕೀವ್: ರಷ್ಯಾ, ಉಕ್ರೇನ್ ಮೇಲೆ ದಾಳಿಯನ್ನು ಮುಂದುವರಿಸಿದೆ. ಸಂಧಾನದ ಮಾತುಕತೆಯ ನಿರೀಕ್ಷೆಗಳು ಸಫಲವಾಗುವಂತೆ ತೋರುತ್ತಿಲ್ಲ.  ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್ ಜೊತೆಗಿನ ಸಂಧಾನದ ಮಾತುಕತೆ ಕುರಿತಾಗಿ ವ್ಯಂಗ್ಯವಾಡಿದ್ದಾರೆ.

    ವಿದೇಶಿ ನಾಯಕರು ಮತ್ತು ರಷ್ಯಾದ ಅಧಿಕಾರಿಗಳೊಂದಿಗಿನ ಇತ್ತೀಚಿನ ಸಭೆಗಳಿಗೆ ಪುಟಿನ್ ಬಳಸಿದ ಉದ್ದನೆಯ ಮೇಜಿನ ಬಗ್ಗೆ ಉಕ್ರೇನ್ ಅಧ್ಯಕ್ಷರು ವ್ಯಂಗ್ಯ ಮಾಡಿದ್ದಾರೆ. ಪುಟಿನ್ ನಿಮಗೆ ನಾಯಕರೊಂದಿಗೆ ಹತ್ತಿರ ಕುಳಿತು ಮಾತನಾಡಲು ಭಯವೇ..? ಸಂಧಾನ ಮಾಡಲು ನನ್ನೊಂದಿಗೆ ಕುಳಿತುಕೊಳ್ಳಿ, ಆದರೆ 30 ಮೀಟರ್ ಅಂತರದಲ್ಲಿ ಅಲ್ಲ.. ನಾನೇನು ಕಚ್ಚುವುದಿಲ್ಲ. ಮತ್ತೇಕೆ ನಿಮಗೆ ಭಯ? ಬುಲೆಟ್ ಗಿಂತ ಮಾತು ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!

    ಉಕ್ರೇನ್‍ಗೆ ಯುದ್ಧವಿಮಾನಗಳನ್ನು ಒದಗಿಸಬೇಕು. ರಷ್ಯಾ ವಿರುದ್ಧ ಹೋರಾಡಲು ನಮಗೆ ಸಾಕಷ್ಟು ಮಿಲಿಟರಿ ನೆರವು ಬೇಕು ಎಂದು ಪಾಶ್ಚಿಮಾತ್ಯ ದೇಶಗಳಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಇದನ್ನೂ ಓದಿ: ಮೇಕ್ ಇನ್ ಇಂಡಿಯಾದಲ್ಲಿ ಇನ್ನೂ ದೊಡ್ಡದಾಗಿ ಯೋಚಿಸಬೇಕಿದೆ: ಮೋದಿ

    ರಷ್ಯಾ ಮತ್ತು ಉಕ್ರೇನಿಯನ್ ಮಾತುಕತೆಗಳ ನಡುವಿನ ಮತ್ತೊಂದು ಸುತ್ತಿನ ಸಂಧಾನ ಮಾತುಕತೆಯ ನಿರೀಕ್ಷೆಗಳು ಭರವಸೆಯಂತೆ ತೋರುತ್ತಿಲ್ಲ. ಯಾವುದೇ ಪದಗಳು ಗುಂಡುಗಳಿಗಿಂತ ಹೆಚ್ಚು ಮುಖ್ಯ. ಉಕ್ರೇನ್‍ಗೆ ಬೆಂಬಲ ನೀಡಲು ಜಗತ್ತು ತುಂಬಾ ನಿಧಾನವಾಗಿದೆ ಎಂದು ಅವರು ಹೇಳಿದರು.

  • ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

    ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

    ಬೆಂಗಳೂರು: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿದೆ. ಗಡಿಗಳಲ್ಲಿ ಸೈನಿಕರೇ ನಮ್ಮ ಮೇಲೆ ದಾಳಿ ಮಾಡಿದ್ರು. ನಮ್ಮ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ್ರು. ನಮ್ಮನ್ನು ಗಡಿ ದಾಟದಂತೆ ತಡೆದ್ರು ಎಂದು ಉಕ್ರೇನ್‍ನಿಂದ ವಾಪಸ್ಸಾದ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ವಿದ್ಯಾರ್ಥಿನಿಯರಾದ ಶ್ರೇಯಾ ಹಾಗೂ ಸಿಂಧು ಉಕ್ರೇನ್ ಗಡಿಯಲ್ಲಿನ ಭೀಕರತೆ ಬಿಚ್ಚಿಟ್ಟರು. ಭಾರೀ ಸಂಕಷ್ಟದ ಪರಿಸ್ಥಿತಿಯಲ್ಲಿ ಉಕ್ರೇನ್ ಗಡಿ ದಾಟಿ ಬಂದಿದ್ದೇವೆ. ಭಾರತೀಯ ಎಂಬೆಸಿ, ಅಧಿಕಾರಿಗಳು, ನಮ್ಮ ಸೀನಿಯರ್ಸ್ ಸಹಾಯದಿಂದ ನಾವು ಸೇಫಾಗಿ ಬಂದಿದ್ದೇವೆ ಎಂದರು. ಇದನ್ನೂ ಓದಿ: ಮೆಟ್ರೋ ನಿಲ್ದಾಣವೇ ಟಾರ್ಗೆಟ್‌ – ಇಲ್ಲಿಯವರೆಗೆ ರಷ್ಯಾ, ಉಕ್ರೇನ್‌ಗೆ ಆದ ನಷ್ಟ ಎಷ್ಟು?

    ಖಾರ್ಕೀವ್, ಕೀವ್‍ನಲ್ಲಿರುವ ಭಾರತೀಯರು ಸೇಫಾಗಿ ಬರಲಿ. ಪೋಲೆಂಡ್, ಹಂಗೇರಿ, ರೊಮೇನಿಯಾದಲ್ಲಿ ಹೆಚ್ಚು ದಾಳಿ ಆಗ್ತಿದೆ. ದಯವಿಟ್ಟು ಎಂಬೆಸಿ ಆದಷ್ಟು ಬೇಗ ಅಲ್ಲಿರುವ ಜ್ಯೂನಿಯರ್ಸ್ ಅನ್ನು ಕರೆಸಿಕೊಳ್ಳಿ. ಅವರಿಗೆ ಇನ್ನು ಏನೂ ಗೊತ್ತಿಲ್ಲ. ಟ್ರಾನ್ಸ್‍ಪೋರ್ಟ್‍ಗೆ ಅಂತಿರುವ ಏರ್‍ಪೋರ್ಟ್, ಮೆಟ್ರೋ ಸ್ಟೇಷನ್ ಮೇಲೆ ರಷ್ಯಾ ದಾಳಿ ಮಾಡಿದೆ. ಹಂಗೇರಿ, ರೊಮೇನಿಯಾ ಗಡಿಯಲ್ಲಿ ಹೆಣ್ಮಕ್ಕಳ ಮೇಲೆ ಹಲ್ಲೆ ನಡೆದಿದೆ. ಅವರು ಪೆಪ್ಪರ್ ಸ್ಪ್ರೇ ಮಾಡಿದ್ರು. ನಾವು ಸ್ಲೋವೆಕಿಯಾದಿಂದ ಬಂದ್ವಿ. ಅಲ್ಲಿರುವವರನ್ನು ದಯವಿಟ್ಟು ಬೇಗ ಸುರಕ್ಷಿತವಾಗಿ ಕರೆ ತನ್ನಿ ಎಂದು ಮನವಿ ಮಾಡಿಕೊಂಡರು.

  • ಮೆಟ್ರೋ ನಿಲ್ದಾಣವೇ ಟಾರ್ಗೆಟ್‌ – ಇಲ್ಲಿಯವರೆಗೆ ರಷ್ಯಾ, ಉಕ್ರೇನ್‌ಗೆ ಆದ ನಷ್ಟ ಎಷ್ಟು?

    ಮೆಟ್ರೋ ನಿಲ್ದಾಣವೇ ಟಾರ್ಗೆಟ್‌ – ಇಲ್ಲಿಯವರೆಗೆ ರಷ್ಯಾ, ಉಕ್ರೇನ್‌ಗೆ ಆದ ನಷ್ಟ ಎಷ್ಟು?

    ಕೀವ್‌: ಉಕ್ರೇನ್ ಮೇಲೆ ರಷ್ಯಾ ಪಡೆಗಳು ರಣಹದ್ದುಗಳಂತೆ ಮುಗಿಬಿದ್ದು ಭಾರೀ ವಿಧ್ವಂಸ ಸೃಷ್ಟಿಸುತ್ತಿವೆ. ಎರಡು ದಿನಗಳಿಂದ ಭಾರೀ ದಾಳಿ ನಡೆಯುತ್ತಿದ್ದು, ರಷ್ಯಾ-ಉಕ್ರೇನ್ ಸೈನಿಕರ ಜೊತೆಗೆ ನಾಗರೀಕರ ಅಪಾರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.

    ಪ್ರಧಾನ ನಗರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ದಾಳಿ ಮುಂದುವರೆಸಿವೆ. ಸರ್ಕಾರಿ ಆಸ್ತಿಗಳು, ಕಚೇರಿಗಳ ಜೊತೆ ಜೊತೆಗೆ ಈಗ ಪೌರರನ್ನು ಗುರಿಯಾಗಿಸಿಕೊಂಡು ವಿಧ್ವಂಸಕಾಂಡ ಸೃಷ್ಟಿಸ್ತಿದೆ. ಆಸ್ಪತ್ರೆಗಳು, ಶಾಲೆಗಳನ್ನು ಉಡೀಸ್ ಮಾಡುತ್ತಿದೆ.

    ಅಷ್ಟೇ ಅಲ್ಲದೇ 8ನೇ ದಿನವಾದ ಇಂದು ಮೆಟ್ರೋ ಸುರಂಗ ಮಾರ್ಗಗಳಲ್ಲಿ ಆಶ್ರಯ ಪಡೆದಿರುವವರನ್ನು ಟಾರ್ಗೆಟ್ ಮಾಡಿದೆ. ಕೀವ್ ಮೆಟ್ರೋ ಸ್ಟೇಷನ್ ಸಮೀಪ ಸೇರಿ ನಗರದ ಹಲವೆಡೆ ಭಾರೀ ಸ್ಫೋಟ ಸಂಭವಿಸಿವೆ. ಇದನ್ನೂ ಓದಿ: ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!

    ಡ್ರುಬಿ ನರೋದಿವ್ ಮೆಟ್ರೋ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆದು, ಅಪಾರ ಹಾನಿ ಸಂಭವಿಸಿದೆ. ಚೆರ್ನಿಹೀವ್‍ನಲ್ಲಿ ತೈಲಗಾರಗಳನ್ನು ಸ್ಫೋಟಿಸಲಾಗಿದೆ. ಖಾರ್ಕೀವ್ ನಗರದ ಮೇಲೆ ಈಗಲೂ ದಾಳಿ ಮುಂದುವರೆದಿದ್ದು, ಇಡೀ ನಗರ ಸ್ಮಶಾನ ಸದೃಶವಾಗಿದೆ.

    ಕೆಲವೆಡೆ ರಷ್ಯಾ ಪಡೆಗಳು, ನಾಗರಿಕರನ್ನು ನೇರವಾಗಿ ಗುಂಡಿಟ್ಟು ಕೊಲ್ಲುತ್ತಿವೆ. ಜನಭಯಭೀತರಾಗಿದ್ದಾರೆ. ಒಬ್ಲಾಸ್ಟ್, ಬಲಾಕ್ಲಿಯಾ, ಲವಿವ್, ಮೈಕೋಲಿವ್ ನಗರಗಳ ಮೇಲೆಯೂ ದಾಳಿಗಳು ಆರಂಭವಾಗಿವೆ. ಕೀವ್ ತೊರೆಯುತ್ತಿರುವ ಪೌರರಿಗೆ ರಷ್ಯಾ ಸೇನೆ ಅಡ್ಡಿಪಡಿಸುತ್ತಿಲ್ಲ ಎನ್ನಲಾಗಿದೆ. ಈವರೆಗೂ 10ಲಕ್ಷಕ್ಕೂ ಹೆಚ್ಚು ಮಂದಿ ಉಟ್ಟಬಟ್ಟೆಯಲ್ಲಿ ಉಕ್ರೇನ್ ತೊರೆದಿದ್ದಾರೆ ಎಂದು ವರದಿಯಾಗಿದೆ.

    ಉಕ್ರೇನ್‌ ತಿರುಗೇಟು:
    ರಷ್ಯಾ ಸೇನೆಗೆ ಪ್ರತಿಯಾಗಿ ಉಕ್ರೇನ್ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ರಷ್ಯಾದ ಸುಖೋಯ್ ಎಸ್-30 ಯುದ್ಧ ವಿಮಾನವನ್ನು ಉಕ್ರೇನ್ ಹೊಡೆದುರುಳಿಸಿದೆ. ಜಪೋರಿಷಿಯಾ ಅಣು ಸ್ಥಾವರಕ್ಕೆ ನುಗ್ಗದಂತೆ ರಷ್ಯಾ ಸೇನೆಯನ್ನು ಜನರೇ ತಡೆದಿದ್ದಾರೆ. ಟೈರ್‌, ಲಾರಿ ಅಡ್ಡ ನಿಲ್ಲಿಸಿ ಹೋರಾಟ ಮಾಡ್ತಿದ್ದಾರೆ.

    ಎರಡೂ ಕಡೆಯೂ ಅಪಾರ ನಷ್ಟ ಸಂಭವಿಸಿದೆ. ಉಕ್ರೇನ್‍ಗೆ ಆದ ನಷ್ಟವನ್ನೇ ಮುಂದಿನ ದಿನಗಳಲ್ಲಿ ರಷ್ಯಾ ದೇಶವೇ ತುಂಬಿಕೊಡಬೇಕು ಹಾಗೇ ಮಾಡುತ್ತೇವೆ ಎಂದು ಅಧ್ಯಕ್ಷ ಝೆಲೆನ್‍ಸ್ಕಿ ಗುಡುಗಿದ್ದಾರೆ. ಯುದ್ಧದ ನಂತರ ಉಕ್ರೇನ್ ದೇಶವನ್ನು ಪುನರ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಉಕ್ರೇನ್‍ಗೆ ಆದ ನಷ್ಟ ಎಷ್ಟು?
    2870 ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿದ್ದರೆ 2 ಸಾವಿರಕ್ಕೂ ಹೆಚ್ಚು ಪೌರರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಹೇಳಿದೆ.

    ರಷ್ಯಾಗೆ ಆದ ನಷ್ಟ ಎಷ್ಟು?
    ಉಕ್ರೇನ್ ಪ್ರಕಾರ 9000 ಯೋಧರು ಸಾವನ್ನಪ್ಪಿದ್ದರೆ. 30 ಯುದ್ಧ ವಿಮಾನ, 42 ಎಂಎಲ್‍ಆರ್‌ಎಸ್ ಕ್ಷಿಪಣಿ, 31 ಹೆಲಿಕಾಪ್ಟರ್, 217 ಯುದ್ಧ ಟ್ಯಾಂಕ್ ಧ್ವಂಸವಾಗಿದೆ. ರಷ್ಯಾ ತನ್ನ ಕಡೆ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

  • ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ ಧೈರ್ಯ ತುಂಬಿದ ಬೊಮ್ಮಾಯಿ

    ಉಕ್ರೇನ್‍ನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ ಧೈರ್ಯ ತುಂಬಿದ ಬೊಮ್ಮಾಯಿ

    ಬೆಂಗಳೂರು: ಉಕ್ರೇನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೂರವಾಣಿ ಮೂಲಕ ಮಾತನಾಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.

    ಬೆಂಗಳೂರು ಮೂಲದ ವಿದ್ಯಾರ್ಥಿ ಗಗನ್ ಗೌಡ ಸೇರಿದಂತೆ ಇತರೆ ವಿದ್ಯಾರ್ಥಿಗಳ ಜೊತೆ ಸಿಎಂ ಮಾತನಾಡಿದರು. ಉಕ್ರೇನ್‍ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿದ ವಿದ್ಯಾರ್ಥಿಗಳು, ಖಾರ್ಕಿವ್‍ನಿಂದ 30ಕಿಮೀ ದೂರದ ಪ್ರದೇಶಕ್ಕೆ ನಾವು ನಡೆದುಕೊಂಡು ಬಂದಿದ್ದೇವೆ ಸದ್ಯಕ್ಕೆ ನಾವು ಸುರಕ್ಷಿತವಾಗಿ ಇದ್ದೇವೆ ಎಂದು ಮುಖ್ಯ ಮಂತ್ರಿಗಳಿಗೆ ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿನ ವಿದ್ಯಾರ್ಥಿಗಳ ರಕ್ಷಣೆಗಾಗಿ ವಿದೇಶಕ್ಕೆ ತೆರಳಲು ಸಿದ್ಧರಾದ ಮೂವರು ಎಂಪಿಗಳು

    ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಿಎಂ, ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಕರ್ನಾಟಕ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿದೆ. ನಿಮಗೆ ಎಲ್ಲ ರೀತಿಯ ಸಹಕಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ನಿಮ್ಮನ್ನು ಅಲ್ಲಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?

    ರಾಜ್ಯದ 200 ವಿದ್ಯಾರ್ಥಿಗಳು ಖಾರ್ಕಿವ್‍ನಲ್ಲಿ ಇದ್ದಾರೆ. ಈಗಾಗಲೇ ರಾಜ್ಯದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಾಪಸ್ ಕರೆದುಕೊಂಡು ಬರಲಾಗಿದೆ. ಉಳಿದ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿಗಳು ನೋಡಲ್ ಅಧಿಕಾರಿಗೆ ಸೂಚನೆ ನೀಡಿದರು. ಅಲ್ಲದೆ ವಿದೇಶಾಂಗ ಸಚಿವರ ಜೊತೆ ನಿರಂತರವಾಗಿ ಮುಖ್ಯಮಂತ್ರಿಗಳು ಸಂಪರ್ಕದಲ್ಲಿ ಇದ್ದು ಆದಷ್ಟು ಬೇಗ ಕನ್ನಡಿಗರ ರಕ್ಷಣೆ ಮಾಡೋದಾಗಿ ವಿದ್ಯಾರ್ಥಿಗಳಿಗೆ ಭರವಸೆಯ ಮಾತುಗಳನ್ನಾಡಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ, ಮೋದಿ ಯುಪಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ: ಮಮತಾ ಬ್ಯಾನರ್ಜಿ ಕಿಡಿ

  • ತಮಿಳುನಾಡಿನ ವಿದ್ಯಾರ್ಥಿಗಳ ರಕ್ಷಣೆಗಾಗಿ ವಿದೇಶಕ್ಕೆ ತೆರಳಲು ಸಿದ್ಧರಾದ ಮೂವರು ಎಂಪಿಗಳು

    ತಮಿಳುನಾಡಿನ ವಿದ್ಯಾರ್ಥಿಗಳ ರಕ್ಷಣೆಗಾಗಿ ವಿದೇಶಕ್ಕೆ ತೆರಳಲು ಸಿದ್ಧರಾದ ಮೂವರು ಎಂಪಿಗಳು

    ಚೆನ್ನೈ: ರಷ್ಯಾ, ಉಕ್ರೇನ್ ಯುದ್ಧದ ನಡುವೆ ಅಪಾಯದಲ್ಲಿರುವ ತಮಿಳುನಾಡು ಮೂಲದ ವಿದ್ಯಾರ್ಥಿಗಳ ರಕ್ಷಣೆಗೆ ತಮಿಳುನಾಡಿನಿಂದ ವಿದೇಶಕ್ಕೆ ತೆರಳಲು ಮೂವರು ಡಿಎಂಕೆ ಸಂಸದರು ಮತ್ತು ಓರ್ವ ಶಾಸಕ ಮುಂದಾಗಿದ್ದಾರೆ.

    ಉಕ್ರೇನ್‍ನಲ್ಲಿರುವ ತಮಿಳುನಾಡಿನ ವಿದ್ಯಾರ್ಥಿಗಳ ರಕ್ಷಣೆಗಾಗಿ ಹಂಗೇರಿ, ರೊಮೇನಿಯಾ ಪೋಲೆಂಡ್ ಮತ್ತು ಸ್ಲೋವಾಕಿಯಾಗೆ ತಮಿಳುನಾಡಿನ ಸಂಸದರಾದ ತಿರುಚಿ ಶಿವ, ಕಲಾನಿಧಿ ವೀರಸಾಮಿ, ಎಂ.ಎಂ ಅಬ್ದುಲ್ಲ, ಶಾಸಕ ಟಿ.ಆರ್.ಬಿ ರಾಜಾ ಮತ್ತು ಐಎಎಸ್ ಅಧಿಕಾರಿಗಳ ತಂಡ ತೆರಳಲು ಸಿದ್ಧವಾಗಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ – ದಕ್ಷಿಣ ಏಷ್ಯಾ ರಾಷ್ಟ್ರಗಳು ಯಾರ ಪರ?

    ಉಕ್ರೇನ್‍ನಲ್ಲಿ ತಮಿಳುನಾಡಿನ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ರಷ್ಯಾ ಘೋಷಿರುವ ಯುದ್ಧದಿಂದಾಗಿ ಉಕ್ರೇನ್‍ನಲ್ಲಿ ಅಪಾಯದಲ್ಲಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಭಾರತೀಯರ ರಕ್ಷಣೆಗೆ ಮುಂದಾಗಿದೆ. ಆದರೆ ತಮಿಳುನಾಡಿನ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಅಪಾಯದಲ್ಲಿರುವುದನ್ನು ಅರಿತು ಸ್ಟಾಲಿನ್ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಮೂವರು ಎಂಪಿಗಳು, ಓರ್ವ ಶಾಸಕ ಮತ್ತು ಐಎಎಸ್ ಅಧಿಕಾರಿಗಳ ತಂಡ ಭಾರತದ ರಕ್ಷಣಾ ಕಾರ್ಯಚರಣೆಗೆ ಸಹಕರಿಸಲು ಮತ್ತು ತಮಿಳುನಾಡಿನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬರಲು ಸಹಕರಿಸಲಿದೆ ಎಂದು ತಮಿಳುನಾಡಿನ ಸರ್ಕಾರಿ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

    ಈಗಾಗಲೇ ಸ್ಟಾಲಿನ್ ನೇತೃತ್ವದಲ್ಲಿ ಸಭೆ ಕೂಡ ನಡೆದಿದ್ದು, ತಮಿಳುನಾಡಿನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ಲಾನ್ ರೂಪಿಸಿಕೊಂಡಿದೆ. ತಮಿಳುನಾಡು ಸರ್ಕಾರ ಹೆಲ್ಪ್‍ಲೈನ್ ತೆರೆದಿದ್ದು, ಈಗಾಗಲೇ 3 ಸಾವಿರಕ್ಕೂ ಹೆಚ್ಚು ಫೋನ್ ಕಾಲ್, 4 ಸಾವಿರಕ್ಕೂ ಹೆಚ್ಚು ಇ-ಮೇಲ್‍ಗಳನ್ನು ತಮಿಳುನಾಡು ಸರ್ಕಾರ ರಿಸೀವ್ ಮಾಡಿದೆ. ಇಂದು 193 ತಮಿಳುನಾಡು ಮೂಲದ ವಿದ್ಯಾರ್ಥಿಗಳೂ ದೆಹಲಿಗೆ ಬಂದಿಳಿದಿದ್ದಾರೆ ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ.

  • ಯುದ್ಧ ಪರಿಸ್ಥಿತಿ ತಿಳಿಯಾದ್ರೆ ಮತ್ತೆ ಉಕ್ರೇನ್ ಹೋಗುತ್ತೇನೆ: ವೈದ್ಯಕೀಯ ವಿದ್ಯಾರ್ಥಿ

    ಯುದ್ಧ ಪರಿಸ್ಥಿತಿ ತಿಳಿಯಾದ್ರೆ ಮತ್ತೆ ಉಕ್ರೇನ್ ಹೋಗುತ್ತೇನೆ: ವೈದ್ಯಕೀಯ ವಿದ್ಯಾರ್ಥಿ

    ಚಾಮರಾಜನಗರ: ಯುದ್ದಗ್ರಸ್ತ ಉಕ್ರೇನ್‍ನಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಒಡೆಯರ ಪಾಳ್ಯದ ಸಿದ್ದೇಶ್ ಸುರಕ್ಷಿತವಾಗಿ ತವರಿಗೆ ಮರಳಿ ಬಂದಿದ್ದಾರೆ. ಉಕ್ರೇನ್‍ನ ಕೀವ್ ನಗರದಲ್ಲಿ ದ್ವಿತೀಯ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಸಿದ್ದೇಶ್ ಹಂಗೇರಿ ಮೂಲಕ ದೆಹಲಿಗೆ ಬಂದು ಅಲ್ಲಿಂದ ಹುಟ್ಟೂರಿಗೆ ಆಗಮಿಸಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಿದ್ದೇಶ್ ಯುದ್ಧದ ಪರಿಸ್ಥಿತಿ ತಿಳಿಯಾದರೆ ಮತ್ತೆ ವಿದ್ಯಾಭ್ಯಾಸಕ್ಕೆ ಉಕ್ರೇನ್‍ಗೆ ಹೋಗುತ್ತೇನೆ ಎಂದಿದ್ದಾರೆ.

    ನಾನು 3-4 ದಿನ ಹಾಸ್ಟೆಲ್‍ನ ಬಂಕರ್‍ನಲ್ಲಿದ್ದೆ. ನಾವು ಇದ್ದ ಸ್ಥಳದಿಂದ 30 ಕಿ.ಮೀ ದೂರದಲ್ಲೇ ಬಾಂಬ್ ಬೀಳುತ್ತಿದ್ದವು. ಯುದ್ದದಿಂದ ಎಲ್ಲಾ ವಿದ್ಯಾರ್ಥಿಗಳು ಹೆದರಿದ್ದೆವು. ಕೀವ್‍ನಿಂದ ರೈಲು ಹಾಗೂ ಬಾಡಿಗೆ ಕಾರಿನ ಮೂಲಕ ಹಂಗೇರಿಯ ಬುಡಾಪೆಸ್ಟ್ ನಗರ ತಲುಪಿ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ನೆರವಿನಿಂದ ವಿಮಾನದಲ್ಲಿ ದೆಹಲಿಗೆ ಬಂದೆವು ಎಂದು ವಿವರಿಸಿದರು. ಇದನ್ನೂ ಓದಿ: ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!

    ಯುದ್ದ ನಡೆಯುವ ಬಗ್ಗೆ ಒಂದು ವಾರ ಮುಂಚೆಯೇ ಮಾಹಿತಿ ಬಂದಿತ್ತು. ಅದರೆ ಆಫ್‍ಲೈನ್ ಕ್ಲಾಸ್ ಮುಂದುವರಿಸಿದ್ದರಿಂದ ಅಲ್ಲಿಯೇ ಇರಬೇಕಾಯ್ತು ಎಂದು ಅಲ್ಲಿದ್ದ ಪರಿಸ್ಥಿತಿ ಬಗ್ಗೆ ವಿವರಿಸಿದರು.

    ಸಿದ್ದೇಶ್ ಆಗಮನದಿಂದ ಸಂತಸಗೊಂಡಿರುವ ಪೋಷಕರು ದೇವರ ದಯೆಯಿಂದ ಮಗ ಮನೆಗೆ ಬಂದಿದ್ದಾನೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಕೊಡಿಸೋಕೆ ಒಂದರಿಂದ ಒಂದೂವರೆ ಕೋಟಿ ರೂ. ಬೇಕು. ಅಲ್ಲಿ 30 ಲಕ್ಷ ರೂ. ಯಲ್ಲಿ ವೈದ್ಯಕೀಯ ಶಿಕ್ಷಣ ಮುಗಿಯುತ್ತೆ. ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?

    ಯುದ್ಧ ನಿಂತ ಬಳಿಕ ಮತ್ತೆ ಓದಲು ಉಕ್ರೇನ್‍ಗೆ ಹೋಗುತ್ತೇನೆ ಎಂದು ಮಗ ಹೇಳುತ್ತಿದ್ದಾನೆ. ಈ ವಿಚಾರ ಅವನ ಧೈರ್ಯಕ್ಕೆ ಬಿಟ್ಟಿದ್ದು. ನಮ್ಮ ಆಶೀರ್ವಾದ ಸದಾ ಇರುತ್ತದೆ. ಸರ್ಕಾರ ಹಾಗೂ ಹನೂರಿನ ಬಿಜೆಪಿ ಮುಖಂಡ ವೆಂಕಟೇಶ್ ನಮ್ಮ ಜೊತೆಯಲ್ಲಿದ್ದುಕೊಂಡು ಮಗನನ್ನು ಕರೆತರುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಅವರಿಗೆಲ್ಲ ಧನ್ಯವಾದ ತಿಳಿಸುತ್ತೇವೆ ಎಂದು ಸಿದ್ದೇಶ್ ಪೋಷಕರು ಹೇಳಿದ್ದಾರೆ.

  • ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!

    ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!

    ವಾಷಿಂಗ್ಟನ್: ರಷ್ಯಾ 1 ತಿಂಗಳ ಹಿಂದೆಯೇ ಉಕ್ರೇನ್ ಮೇಲೆ ಯುದ್ಧ ಸಾರಲು ಯೋಜಿಸಿತ್ತು. ಆದರೆ ಚಳಿಗಾಲದ ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೂಡುವಂತೆ ಚೀನಾ ರಷ್ಯಾಗೆ ಮನವಿ ಮಾಡಿತ್ತು ಎಂಬ ವಿಚಾರವನ್ನು ಅಮೆರಿಕದ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.

    ಫೆಬ್ರವರಿ ಫ್ರಾರಂಭದಲ್ಲಿಯೇ ಚೀನಾ ರಷ್ಯಾದ ಅಧಿಕಾರಿಗಳಿಗೆ ಚಳಿಗಾಲದ ಒಲಿಂಪಿಕ್ಸ್ ಮುಕ್ತಾಯವಾಗುವವರೆಗೆ ಯುದ್ಧ ಪ್ರಾರಂಭಿಸಬಾರದೆಂದು ಮನವಿ ಮಾಡಿದ್ದಾಗಿ ವರದಿ ಹೇಳಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ, ಮೋದಿ ಯುಪಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ: ಮಮತಾ ಬ್ಯಾನರ್ಜಿ ಕಿಡಿ

    ಕಳೆದ ವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸುವುದಕ್ಕೂ ಮೊದಲು ಚೀನಾದ ಅಧಿಕಾರಿಗಳಿಗೆ ರಷ್ಯಾದ ಯೋಜನೆ ಹಾಗೂ ಉದ್ದೇಶಗಳ ಬಗ್ಗೆ ತಿಳಿದಿತ್ತು ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?

    ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುವ ಬಗ್ಗೆ ಮೊದಲೇ ಸುಳಿವು ಪಡೆದಿದ್ದ ಚೀನಾ ಯುದ್ಧವನ್ನು ಮುಂದೆ ಹಾಕುವಂತೆ ಮನವಿ ಮಾಡಿತ್ತು. ಆದರೆ ಈ ಬಗ್ಗೆ ಚೀನಾ ಎಲ್ಲಿಯೂ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ ಎಂಬುದಾಗಿ ವರದಿಗಳು ತಿಳಿಸಿವೆ.

  • ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ, ಮೋದಿ ಯುಪಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ: ಮಮತಾ ಬ್ಯಾನರ್ಜಿ ಕಿಡಿ

    ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ, ಮೋದಿ ಯುಪಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ: ಮಮತಾ ಬ್ಯಾನರ್ಜಿ ಕಿಡಿ

    ಲಕ್ನೋ: ಉಕ್ರೇನ್‍ನಿಂದ ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಶ್ಚಿಮ ಬಂಗಾಳದ ಸಿಎಂ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗುರುವಾರ ತರಾಟೆಗೆ ತೆಗೆದುಕೊಂಡರು.

    ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ(ಎಸ್‍ಪಿ) ಪರವಾಗಿ ಪ್ರಚಾರ ಮಾಡುವಾಗ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರವು ಉಕ್ರೇನ್‍ನಲ್ಲಿರುವ ಭಾರತೀಯರನ್ನು ಯುದ್ಧದ ಮಧ್ಯೆ ತಮ್ಮಷ್ಟಕ್ಕೆ ಬಿಡುತ್ತಿದೆ. ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ ಮೋದಿ ಉತ್ತರ ಪ್ರದೇಶದಲ್ಲಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!

    ಇದೀಗ ಏನಾಗುತ್ತಿದೆ ನೋಡಿ. ಉಕ್ರೇನ್‍ನಲ್ಲಿ ಯುದ್ಧ ನಡೆಯುತ್ತಿದೆ. ಮೋದಿ ಇಲ್ಲಿ(ಯುಪಿ) ಸಭೆಗಳನ್ನು ಮಾಡುತ್ತಿದ್ದಾರೆ. ಯಾವುದು ಮುಖ್ಯ? ನಮ್ಮ ಭಾರತೀಯರನ್ನು ಮತ್ತು ವಿದ್ಯಾರ್ಥಿಗಳನ್ನು ಮರಳಿ ಕರೆತರುವುದು ಮುಖ್ಯವಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಯುದ್ಧವು ಪ್ರಾರಂಭವಾಗಲಿದೆ ಎಂದು ಮೂರು ತಿಂಗಳ ಮೊದಲೇ ತಿಳಿದಿದ್ದರೆ, ನೀವು ಭಾರತೀಯರನ್ನು ಉಕ್ರೇನ್‍ನಿಂದ ಏಕೆ ಮರಳಿ ಕರೆತರಲಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಲುನೋವು ತಾಳಲಾಗದೆ ಮರ್ಮಾಂಗವನ್ನೆ ಕತ್ತರಿಸಿಕೊಂಡ!

  • ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?

    ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?

    ನವದೆಹಲಿ: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಮೇಲೆ ಈಗಾಗಲೇ ಹಲವು ನಿರ್ಬಂಧಗಳನ್ನು ಅಮೆರಿಕ ವಿಧಿಸಿದೆ. ಅಂತೆಯೇ ರಷ್ಯಾದೊಂದಿಗೆ ಈ ಹಿಂದೆಯೇ ಭಾರತ ಮಾಡಿಕೊಂಡಿದ್ದ ರಕ್ಷಣಾ ಒಪ್ಪಂದಕ್ಕೂ ಅಮೆರಿಕ ನಿರ್ಬಂಧ ಹಾಕಲಿದೆಯೇ ಎಂಬ ವಿಚಾರ ಚರ್ಚೆಯನ್ನು ಹುಟ್ಟುಹಾಕಿದೆ.

    ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು 2018ರ ಅಕ್ಟೋಬರ್‌ನಲ್ಲಿ ರಷ್ಯಾದೊಂದಿಗೆ ಭಾರತವು ಒಪ್ಪಂದಕ್ಕೆ ಸಹಿ ಹಾಕಿತ್ತು. ಇದನ್ನು ಖರೀದಿಸಲು ಭಾರತಕ್ಕೆ ಅಮೆರಿಕ ನಿರ್ಬಂಧ ಹಾಕುತ್ತಾ ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಇರಾಕ್‍ನಿಂದ ತೈಲ ಖರೀದಿಗೆ ನಿರ್ಬಂಧ- ಭಾರತಕ್ಕೆ ಅಮೆರಿಕದಿಂದ ಗುಡ್‍ನ್ಯೂಸ್

    ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್‌ ಖರೀದಿಸಲು ಕಾಟ್ಸಾ ಕಾನೂನಿನಡಿಯಲ್ಲಿ ಅಮೆರಿಕವು ತನ್ನ ಪ್ರಮುಖ ಪಾಲುದಾರರಲ್ಲಿ ಒಂದಾದ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಬೇಕೆ ಅಥವಾ ನಿರ್ಬಂಧವನ್ನು ಮನ್ನಾ ಮಾಡಬೇಕೆ ಎಂಬುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿರ್ಧರಿಸುತ್ತಾರೆ ಎಂದು ಹಿಡಿಯ ಆಡಳಿತ ಅಧಿಕಾರಿ ಡೊನಾಲ್ಡ್ ಲೂ ತಿಳಿಸಿದ್ದಾರೆ.

    ಆಡಳಿತವು ಕಾಟ್ಸಾ ಕಾನೂನನ್ನು ಅನುಸರಿಸುತ್ತದೆ. ಆ ಕಾನೂನನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುತ್ತದೆ. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಕಾಟ್ಸಾ ಕಾನೂನಿನ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸುವ ಮತ್ತು ಮನ್ನಾ ಮಾಡುವ ಬಗ್ಗೆ ಯುಎಸ್ ಅಧ್ಯಕ್ಷರ ನಿರ್ಧಾರದ ಬಗ್ಗೆ ನಾನು ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ ಎಂದು ಡೊನಾಲ್ಡ್ ಲೂ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

    ಭಾರತವು ಈಗ ನಮ್ಮ ಪ್ರಮುಖ ಭದ್ರತಾ ಪಾಲುದಾರ. ಆ ಪಾಲುದಾರಿಕೆಯನ್ನು ಮುಂದುವರಿಸುವುದನ್ನು ನಾವು ಗೌರವಿಸುತ್ತೇವೆ ಎಂದು ಲೂ ಹೇಳಿದ್ದಾರೆ.

    ಏನಿದು ಕಾಟ್ಸಾ?:
    ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.

    ಹಿಂದೆಯೂ ನಿರ್ಬಂಧ ವಿಧಿಸಲಾಗಿತ್ತು:
    ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು 2018ರಲ್ಲಿ ಇರಾನ್‌ಗೆ ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಈ ವೇಳೆ ಭಾರತ ಸೇರಿದಂತೆ 8 ರಾಷ್ಟ್ರಗಳು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಬಾರದು ಎಂದು ನಿರ್ಬಂಧಿಸಿತ್ತು. ಆದರೆ ತೈಲ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ಆ ರಾಷ್ಟ್ರಗಳು ಒತ್ತಾಯಿಸಿದ ನಂತರ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ – ಚರ್ಚೆಯಾಗುತ್ತಿದೆ ಭಾರತದ ಐತಿಹಾಸಿಕ ಕೊಹಿನೂರು ವಜ್ರ

    ವಿಶ್ವಸಂಸ್ಥೆಯ ಕಾಯ್ದೆಯಲ್ಲ:
    ರಷ್ಯಾದಿಂದ ಟ್ರಯಂಫ್ ಖರೀದಿಗೆ ಅಮೆರಿಕದಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ 2018ರಲ್ಲಿ ಆಗಿನ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಟ್ಸಾ ಕಾಯ್ದೆ ಅಮೆರಿಕದ್ದು ಹೊರತು ವಿಶ್ವಸಂಸ್ಥೆಯದ್ದಲ್ಲ. ಇದು ಭಾರತ ಮತ್ತು ರಷ್ಯಾದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದರು.