Tag: ರಷ್ಯಾ ವಾಯು ಸೇನೆ

  • ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್

    ಕೀವ್: ರಷ್ಯಾ ವಾಯುಪಡೆಯು ಮಂಗಳವಾರ ಉಕ್ರೇನಿನ (Ukraine) ಕೀವ್ ಮೇಲೆ ನಡೆಸಿದ ದಾಳಿಯನ್ನ ತಡೆಯುವಲ್ಲಿ ಉಕ್ರೇನ್ ಸೇನೆ ಯಶಸ್ವಿಯಾಗಿದ್ದು, ರಷ್ಯಾದ 18 ಕ್ಷಿಪಣಿಗಳನ್ನ (Cruise Missiles) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮವಾರ ತಡರಾತ್ರಿ ರಷ್ಯಾದ ಕ್ಷಿಪಣಿಗಳು ವಾಯು, ಸಮುದ್ರ ಹಾಗೂ ಭೂಸೇನೆ ಸೇರಿದಂತೆ ಮೂರು ವಿಭಾಗಳಿಂದ ಉಕ್ರೇನಿನ ರಾಜಧಾನಿ ಕೀವ್ ಮೇಲೆ ದಾಳಿ (Russian Air Attack) ನಡೆಸಿತ್ತು. ಆದ್ರೆ ಪಾಶ್ಚಿಮಾತ್ರ ರಾಷ್ಟ್ರಗಳು ಸರಬರಾಜು ಮಾಡಿದ್ದ ಶಸ್ತ್ರಾಸ್ತ್ರಗಳ ಸಹಾಯದಿಂದ ಉಕ್ರೇನ್ ರಷ್ಯಾ ದಾಳಿಯನ್ನ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಯಾವುದೇ ಸಾವು ನೋವುಗಳಾಗಿಲ್ಲ ಎಂದು ತಿಳಿದುಬಂದಿದೆ.

    ರಷ್ಯಾ ಕಳೆದ ರಾತ್ರಿ ಉಕ್ರೇನ್ ರಾಜಧಾನಿಯನ್ನ ಗುರಿಯಾಗಿಸಿ MiG-31K ಯುದ್ಧವಿಮಾನದಿಂದ 6 Kinzhal ಏರೋ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಕಪ್ಪು ಸಮುದ್ರದ ಹಡಗುಗಳಿಂದ 9 ಕ್ರೂಸ್ ಕ್ಷಿಪಣಿ ಹಾಗೂ ಮೂರು ಭೂ ಆಧಾರಿತ S-400 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಅಲ್ಲದೇ ಇರಾನ್ ಡ್ರೋನ್‌ಗಳಿಂದಲೂ ದಾಳಿ ನಡೆಸಿತ್ತು ಎಂದು ಉಕ್ರೇನ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೆ ಪ್ರತಿದಾಳಿ ನಡೆಸಿದ ಉಕ್ರೇನ್ ಅಮೆರಿಕ ನಿರ್ಮಿತ ಪೇಟ್ರಿಯಾಟಿಕ್ ಕ್ಷಿಪಣಿಗಳನ್ನು ಒಳಗೊಂಡಂತೆ ಉಕ್ರೇನಿನ ಮಿತ್ರರಾಷ್ಟ್ರಗಳು ಒದಗಿಸಿದ್ದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಂದ ರಷ್ಯಾ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್‌ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್‌

    ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಸತತವಾಗಿ ಮುಂದುವರಿಸಿದೆ. ಈ ತಿಂಗಳಲ್ಲಿ ರಷ್ಯಾ 8ನೇ ಬಾರಿಗೆ ರಾಜಧಾನಿಯನ್ನು ಗುರಿಯಾಗಿಸಿ ವಾಯುಸೇನೆಯ ಮೇಲೆ ದಾಳಿ ನಡೆಸಿದೆ. ನಡುವೆ ಒಂದು ವಾರ ಬಿಡುವು ನೀಡಲಾಗಿತ್ತು. ಬಳಿಕ ಮತ್ತೆ ರಷ್ಯಾ ತನ್ನ ಆಕ್ರಮಣ ಮುಂದುವರಿಸಿದೆ. ಇದಕ್ಕೆ ವಿವಿಧ ದೇಶಗಳಿಂದ ಸಹಾಯ ಪಡೆಯುತ್ತಿರುವ ಉಕ್ರೇನ್ ಪ್ರತಿದಾಳಿಯನ್ನ ಸಮರ್ಥವಾಗಿ ಎದುರಿಸುತ್ತಿದೆ. ಇದನ್ನೂ ಓದಿ: Layoff: 11 ಸಾವಿರ ಜಾಬ್ ಕಟ್‌ಗೆ ವೊಡಾಫೋನ್ ಪ್ಲ್ಯಾನ್