Tag: ರಷ್ಯಾ ಉಕ್ರೇನ್‌

  • ರಷ್ಯಾ ಯುದ್ಧ ಇಡೀ ಯೂರೋಪ್‌ ಭದ್ರತೆಗೆ ಪೆಟ್ಟು ನೀಡಿದೆ: ಬ್ರಿಟಿಷ್‌ ಪ್ರಧಾನಿ ಕಳವಳ

    ರಷ್ಯಾ ಯುದ್ಧ ಇಡೀ ಯೂರೋಪ್‌ ಭದ್ರತೆಗೆ ಪೆಟ್ಟು ನೀಡಿದೆ: ಬ್ರಿಟಿಷ್‌ ಪ್ರಧಾನಿ ಕಳವಳ

    ಲಂಡನ್‌: ಉಕ್ರೇನ್‌ ವಿರುದ್ಧದ ರಷ್ಯಾ ಅಜಾಗರೂಕ ಕಾರ್ಯಾಚರಣೆಯು ಇಡೀ ಯೂರೋಪ್‌ ಭದ್ರತೆಗೆ ಕೊಟ್ಟ ಹೊಡೆತವಾಗಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಕಳವಳ ವ್ಯಕ್ತಪಡಿಸಿದ್ದಾರೆ.

    ರಷ್ಯಾದ ಪಡೆಗಳು ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರವನ್ನು ಆಕ್ರಮಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುರೋಪಿನಾದ್ಯಂತ ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಬೋರಿಸ್ ಜಾನ್ಸನ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್‌ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral

    ರಷ್ಯಾ ಅಧ್ಯಕ್ಷ ಪುಟಿನ್ ಅವರ ಅಜಾಗರೂಕ ಕ್ರಮಗಳು ಈಗ ನೇರವಾಗಿ ಯುರೋಪ್‌ನ ಸುರಕ್ಷತೆಗೆ ಬೆದರಿಕೆ ಹಾಕಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಅಗತ್ಯವಿದೆ ಎಂದು ಜಾನ್ಸನ್‌ ಆಶಯ ವ್ಯಕ್ತಪಡಿಸಿದ್ದಾರೆ.

    ನ್ಯಾಟೋ ಒಕ್ಕೂಟಕ್ಕೆ ಸೇರುವ ಉಕ್ರೇನ್‌ ನಿರ್ಧಾರವನ್ನು ವಿರೋಧಿಸಿ ಉಕ್ರೇನ್‌ ಮೇಲೆ ರಷ್ಯಾ ಯುದ್ಧವನ್ನು ನಡೆಸುತ್ತಿದೆ. ಆದರೆ ಯೂರೋಪ್‌ ರಾಷ್ಟ್ರಗಳು ರಷ್ಯಾ ಕ್ರಮವನ್ನು ಖಂಡಿಸಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ, ಸಾಮಾನ್ಯ ಸಭೆಯಲ್ಲಿ ಬ್ರಿಟನ್‌ ಸೇರಿದಂತೆ 141 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

  • ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿ ಸರಿಯಿದ್ದಿದ್ದರೆ ನೀವು ವಿದೇಶಗಳಿಗೆ ಹೋಗುತ್ತಿರಲಿಲ್ಲ: ಮೋದಿ

    ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿ ಸರಿಯಿದ್ದಿದ್ದರೆ ನೀವು ವಿದೇಶಗಳಿಗೆ ಹೋಗುತ್ತಿರಲಿಲ್ಲ: ಮೋದಿ

    ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿದ್ದಾರೆ.

    ಇದೇ ವೇಳೆ ವೈದ್ಯಕೀಯ ಶಿಕ್ಷಣ ನೀತಿ ವಿಚಾರವಾಗಿ ಹಿಂದಿನ ಸರ್ಕಾರಗಳ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ. ಹಿಂದಿನ ಸರ್ಕಾರಗಳ ನೀತಿಗಳ ವೈಫಲ್ಯದಿಂದಾಗಿ ವೈದ್ಯಕೀಯ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ವಿದೇಶಗಳಿಗೆ ಹೋಗುವಂತಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ನೀತಿಗಳಲ್ಲಿ ಸುಧಾರಣೆ ತರುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ರಕ್ಷಿಸುವಂತೆ ವೀಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿದ ಗ್ರಾ.ಪಂ. ಅಧ್ಯಕ್ಷೆ

    ಉಕ್ರೇನ್‌ನಿಂದ ಸ್ಥಳಾಂತರಿಸಲು ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಭಾರತೀಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಈ ವಿಚಾರವನ್ನೂ ಉಲ್ಲೇಖಿಸಿದ ಪ್ರಧಾನಿ ಮೋದಿ, ಬಿಕ್ಕಟ್ಟಿನ ಸನ್ನಿವೇಶದಲ್ಲಿ ಆಕ್ರೋಶಕ್ಕೆ ಒಳಗಾಗುವುದು ಸಹಜ ಎಂದು ತಿಳಿಸಿದ್ದಾರೆ.

    ಚಿಕ್ಕ ವಯಸ್ಸಿನಲ್ಲೇ ನೀವು ಸಂಕಷ್ಟದ ಸಂದರ್ಭಗಳನ್ನು ಅನುಭವಿಸಿದ್ದೀರಿ ಎಂದು ವಿದ್ಯಾರ್ಥಿಗಳ ಬಗ್ಗೆ ಪ್ರಧಾನಿ ಮೋದಿ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇಂತಹ ಸಂದಿಗ್ಧತೆಗಳಿಗೆ ಬಲಿಷ್ಠ ಭಾರತವೇ ಉತ್ತರವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್‌ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral

    ಹಿಂದಿನ ಸರ್ಕಾರಗಳ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ನೀತಿಗಳು ಸರಿಯಾಗಿದ್ದರೆ, ನೀವು ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುವ ಅಗತ್ಯವಿರುತ್ತಿರಲಿಲ್ಲ. ಹಿಂದಿನ ಎಲ್ಲಾ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ವಿದ್ಯಾರ್ಥಿಗಳಿಗೆ ಮೋದಿ ಭರವಸೆ ನೀಡಿದ್ದಾರೆ.

    ಈ ಹಿಂದೆ 300, 400 ಇದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ನಮ್ಮ ಅವಧಿಯಲ್ಲಿ 700ಕ್ಕೆ ಹೆಚ್ಚಿಸಲಾಗಿದೆ. ಆ ಮೂಲಕ 80,000ದಿಂದ 90,000 ಇದ್ದ ವೈದ್ಯಕೀಯ ಸೀಟ್‌ಗಳ ಸಂಖ್ಯೆಯನ್ನು 1.5 ಲಕ್ಷಕ್ಕೆ ಏರಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಈ ಸಲಹೆ ಪಾಲಿಸಿ- ಕೇಂದ್ರ ವಿದೇಶಾಂಗ ಇಲಾಖೆ

    ಪ್ರತಿ ಜಿಲ್ಲೆಯೂ ಒಂದೊಂದು ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಶ್ರಮವಹಿಸುತ್ತೇವೆ. ಕಳೆದ 70 ವರ್ಷಗಳಿಗೆ ಹೋಲಿಸಿದರೆ ನಮ್ಮ 10 ವರ್ಷದ ಆಡಳಿತಾವಧಿಯಲ್ಲಿ ಹೆಚ್ಚಿನ ವೈದ್ಯರು ಹೊರಹೊಮ್ಮುವಂತೆ ಮಾಡುತ್ತೇವೆ ಎಂದು ಮೋದಿ ಹೇಳಿದ್ದಾರೆ.

  • ರಷ್ಯಾ ಅಧ್ಯಕ್ಷ ಪುಟಿನ್‌ಗೆ ವೈಯಕ್ತಿಕ ನಿರ್ಬಂಧ ಹೇರಲು ಮುಂದಾದ ಅಮೆರಿಕ

    ರಷ್ಯಾ ಅಧ್ಯಕ್ಷ ಪುಟಿನ್‌ಗೆ ವೈಯಕ್ತಿಕ ನಿರ್ಬಂಧ ಹೇರಲು ಮುಂದಾದ ಅಮೆರಿಕ

    ವಾಷಿಂಗ್ಟನ್: ಉಕ್ರೇನ್ ಮೇಲಿನ ದಾಳಿ ಖಂಡಿಸಿ ರಷ್ಯಾ ಮೇಲೆ ಆರ್ಥಿಕ ಯುದ್ಧ ಸಾರಿರುವ ಅಮೆರಿಕಾ ಮತ್ತೊಂದು ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ರಷ್ಯಾ ಸರ್ಕಾರದ ವಿರುದ್ಧ ದಿಗ್ಬಂಧನದ ಅಸ್ತ್ರ ಝಳಪಿಸಿದ್ದ ಅಮೆರಿಕಾ ಈಗ ನೇರವಾಗಿ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಮೇಲೆ ವೈಯಕ್ತಿಕ ನಿರ್ಬಂಧಗಳ ಹೇರಿ ಶಾಕ್ ನೀಡಲು ಮುಂದಾಗಿದೆ.

    ಪುಟಿನ್, ಲಾವ್ರೋವ್ ಆಸ್ತಿಗಳನ್ನು ಫ್ರೀಜ್ ಮಾಡುವ ಐರೋಪ್ಯ ಒಕ್ಕೂಟದ ನಿರ್ಧಾರವನ್ನು ಬೆಂಬಲಿಸಿದೆ. ಈ ಹಿಂದೆ ಉತ್ತರ ಕೋರಿಯಾದ ಕಿಮ್ ಜಾಂಗ್ ಉನ್, ಬೆಲಾರಸ್‍ನ ಲುಕಷೆಂಕೋ, ಸಿರಿಯಾದ ಬಷರ್ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ ಮಾದರಿಯಲ್ಲೇ ಪುಟಿನ್, ಲಾವ್ರೋವ್ ಸೇರಿ 11 ಪ್ರಮುಖರ ಮೇಲೆ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಈ ದಿಗ್ಬಂಧನದಿಂದಾಗಿ ಅವರ ಪ್ರಯಾಣಕ್ಕೆ, ಆರ್ಥಿಕ ಚಟುವಟಿಕೆಗೆ ಬ್ರೇಕ್ ಬಿದ್ದಂತಾಗಿದೆ. ಇದನ್ನೂ ಓದಿ: ಪುಟಿನ್ ನಡೆಗೆ ರಷ್ಯಾ ಪ್ರಜೆಗಳಿಂದಲೇ ಖಂಡನೆ – ಉಕ್ರೇನ್‍ನಲ್ಲಿ ರಷ್ಯಾದ ಬಾವುಟ ಹಾರಾಟ

    ಆದರೆ ಇದರ ಪ್ರಭಾವ ಪುಟಿನ್ ಮೇಲೆ ಬೀಳುವ ಸಾಧ್ಯತೆ ಕಡಿಮೆ. ಯಾಕೆಂದರೆ ಈ ಬಗ್ಗೆ ಮೊದಲೇ ಚಿಂತಿಸಿರುವ 200 ಬಿಲಿಯನ್‍ಗಳ ಒಡೆಯ ಪುಟಿನ್ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲದರ ನಡುವೆ ಅಂತರಾಷ್ಟ್ರೀಯ ನಗದು ವ್ಯವಹಾರಗಳ ಸಂಸ್ಥೆ ಸ್ವಿಫ್ಟ್ ಪೇಮೆಂಟ್ ನೆಟ್‍ವರ್ಕ್‍ನಿಂದ ರಷ್ಯಾವನ್ನು ಹೊರಗಿಡಲು ಬ್ರಿಟನ್ ಪ್ರಯತ್ನ ಆರಂಭಿಸಿದೆ. ಜೊತೆಗೆ ನಿಮ್ಮ ಇಷ್ಟಾನುಸಾರ ನಿರ್ಬಂಧಗಳನ್ನು ಹೇರತೊಡಗಿದ್ರೆ ಸುಮ್ಮನಿರಲ್ಲ ಎಂದು ರಷ್ಯಾ ಎಚ್ಚರಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಅಮೆರಿಕಾ, ಯುರೋಪ್ ದೇಶಗಳ ಮೇಲೆ ಬೀಳಿಸೋದಾಗಿ ಧಮ್ಕಿ ಹಾಕಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

  • ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ

    ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ

    ವಾಷಿಂಗ್ಟನ್‌: ರಷ್ಯಾ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಉಕ್ರೇನ್‌ಗೆ ಭದ್ರತಾ ನೆರವು ನೀಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಿಸಿದ್ದಾರೆ.

    ಉಕ್ರೇನ್‌ಗೆ ತುರ್ತು ರಕ್ಷಣಾ ನೆರವಾಗಿ 4,503 ಕೋಟಿ ರೂ. (600 ಮಿಲಿಯನ್‌ ಡಾಲರ್‌) ನೀಡುವುದಾಗಿ ಶನಿವಾರ ಜೋ ಬೈಡೆನ್‌ ತಿಳಿಸಿದ್ದಾರೆ.

    1961ರ ವಿದೇಶಿ ನೆರವು ಕಾಯಿದೆಯಡಿ ರಕ್ಷಣಾ ಇಲಾಖೆಯ ಸೇವೆಗಳು, ಉಪಕರಣ ಖರೀದಿ, ಮಿಲಿಟರಿ ಶಿಕ್ಷಣ ಮತ್ತು ತರಬೇತಿಗಾಗಿ 2,626 ಕೋಟಿ ರೂ. ಹಾಗೂ ಒಟ್ಟು ನೆರವಿಗಾಗಿ 1,876 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌ಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ಸಂಪರ್ಕ ಸಿಗದೇ ಪಾಲಕರು ಕಂಗಾಲು

    ಉಕ್ರೇನ್‌ ಮೇಲೆ ಮಿಲಿಟರಿ ದಾಳಿ ನಡೆಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಘೋಷಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ರಷ್ಯಾ ಸೇನೆ ಮತ್ತು ಕ್ಷಿಪಣಿಗಳು ಉಕ್ರೇನ್‌ ಮೇಲೆ ದಾಳಿ ನಡೆಸಿತು. ರಷ್ಯಾ ನಡೆಗೆ ಅಮೆರಿಕ ಸೇರಿದಂತೆ ಅನೇಕ ಯೂರೋಪ್‌ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.

    ಉಕ್ರೇನ್‌ ಮೇಲೆ ಸತತ ಮೂರನೇ ದಿನವೂ ರಷ್ಯಾ ದಾಳಿ ಮುಂದುವರಿಸಿದೆ. ಉಕ್ರೇನ್‌ನಲ್ಲಿ ಈವರೆಗೆ 198 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ರಷ್ಯಾ ಸೇನಾ ಪಡೆ ಉಕ್ರೇನ್‌ ರಾಜಧಾನಿ ಕೀವ್‌ ಪ್ರವೇಶಿಸಿದ್ದು, ಬೃಹತ್‌ ಕಟ್ಟಡಗಳ ಮೇಲೆ ಕ್ಷಿಪಣಿಗಳ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್‌ ಅಭಯ