Tag: ರಶ್ಮಿ ಪ್ರಭಾಕರ್

  • ಮಾಲ್ಡೀವ್ಸ್‌ನಲ್ಲಿ ತನ್ನ ಹುಡುಗನ ಜೊತೆ ಕಾಣಿಸಿಕೊಂಡ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಿನ್ನು

    ಮಾಲ್ಡೀವ್ಸ್‌ನಲ್ಲಿ ತನ್ನ ಹುಡುಗನ ಜೊತೆ ಕಾಣಿಸಿಕೊಂಡ `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಿನ್ನು

    ಕಿರುತೆರೆಯಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ಚಿನ್ನು ಎಂದೇ ಖ್ಯಾತಿ ಗಳಿಸಿರುವ ರಶ್ಮಿ ಪ್ರಭಾಕರ್ ಇತ್ತೀಚೆಗಷ್ಟೇ ನಿಖಿಲ್ ಭಾರ್ಗವ್ ಜೊತೆ ಹಸೆಮಣೆ ಏರಿದ್ದರು. ಇದೀಗ ಈ ಜೋಡಿ ಮಾಲ್ಡೀವ್ಸ್‌ನಲ್ಲಿ ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಸಖತ್ ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಕನ್ನಡದ ಲಕ್ಷ್ಮಿ ಬಾರಮ್ಮ, ಮನಸೆಲ್ಲಾ ನೀನೇ, ಮಹಾಭಾರತ, ದರ್ಪಣ, ಜೀವನ ಚೈತ್ರ, ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ ಹೀಗೆ ಸಾಕಷ್ಟು ಸೀರಿಯಲ್ ಮೂಲಕ ಮನೆಮಾತಾಗಿರೋ ನಟಿ ರಶ್ಮಿ ಪ್ರಭಾಕರ್ ಇದೀಗ ತಮ್ಮ ಪತಿ ನಿಖಿಲ್ ಭಾರ್ಗವ್ ಜೊತೆ ದಾಂಪತ್ಯ ಜೀವನವನ್ನು ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಮಾಲ್ಡೀವ್ಸ್ನ ಸುಂದರ ತಾಣಗಳಿಗೆ ಈ ಜೋಡಿ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ನಟಿ ರಶ್ಮಿ ಮತ್ತು ನಿಖಿಲ್ ಒಬ್ಬರನೊಬ್ಬರು ಪ್ರೀತಿಸಿ, ಗುರು ಹಿರಿಯರ ಸಮ್ಮುಖದಲ್ಲಿ ಏಪ್ರಿಲ್ 25ರಂದು ಹಸೆಮಣೆ ಏರಿದ್ದರು. ನಿಖಿಲ್ ಭಾರ್ಗವ್ ಜಾಹಿರಾತು ಕಂಪನಿಯೊಮದರಲ್ಲಿ ಕೆಲಸ ಮಾಡುತ್ತಿದ್ದಾರೆ. ರಶ್ಮಿ ಮದುವೆಗೆ ಅನೇಕ ಕಿರುತೆರೆ ಕಲಾವಿದರು ಬಂದು ಶುಭ ಹಾರೈಸಿದ್ದರು. ಸದ್ಯ ಈ ನವಜೋಡಿ ಹನಿಮೂನ್‌ಗಾಗಿ ಮಾಲ್ಡೀವ್ಸ್ಗೆ ಹಾರಿದ್ದಾರೆ. ತಮ್ಮ ದಾಂಪತ್ಯ ಜೀವನವನ್ನು ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಏಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

  • ನಿಖಿಲ್ ಜತೆ ಲಕ್ಷ್ಮೀ ಬಾರಮ್ಮ ನಟಿ ರಶ್ಮಿ ಪ್ರಭಾಕರ್ ಮದುವೆ

    ನಿಖಿಲ್ ಜತೆ ಲಕ್ಷ್ಮೀ ಬಾರಮ್ಮ ನಟಿ ರಶ್ಮಿ ಪ್ರಭಾಕರ್ ಮದುವೆ

    ಶುಭ ವಿವಾಹ, ಜೀವನ ಚೈತ್ರ, ಲಕ್ಷ್ಮೀ ಬಾರಮ್ಮ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿ ಪ್ರಭಾಕರ್ ಇಂದು ಬೆಂಗಳೂರಿನಲ್ಲಿ ನಿಖಿಲ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವಿವಾಹ ಮಹೋತ್ಸವ ಬೆಂಗಳೂರಿನ ಬಸವನಗುಡಿಯಲ್ಲಿ ನೆರವೇರಿತು.  ಹೊಸ ಜೋಡಿಗೆ ಶುಭ ಹಾರೈಸಲು ಕಿರುತೆರೆಯ ಅನೇಕ ಕಲಾವಿದರು ಆಗಮಿಸಿದ್ದರು.  ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ರಶ್ಮಿ ಪ್ರಭಾಕರ್ ಮಹಾಭಾರತ, ದರ್ಪಣ, ಮನಸೆಲ್ಲ ನೀನೇ ಶುಭಾ ವಿವಾಹ ಹಾಗೂ ತೆಲುಗಿನಲ್ಲಿ ಪೌರ್ಣಿಮಿ, ಕಾವ್ಯಾಂಜಲಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದರೆ ನಿಖಿಲ್ ಕೂಡ ಈ ಹಿಂದೆ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದದ್ರು. ಇದೀಗ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದಾರೆ. ಮೂರು ವರ್ಷಗಳಿಂದ ಸ್ನೇಹಿತರಾಗಿದ್ದವರು ಇಂದು ಸತಿಪತಿಗಳಾಗಿದ್ದಾರೆ ನಿಖಿಲ್ ಮತ್ತು ರಶ್ಮಿ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ನವೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ವಿವಾಹ ಅಂದುಕೊಂಡಂತೆ ಆಗಿದ್ದರೆ  ಈ ಹಿಂದೆಯೇ ನಡೆಯಬೇಕಿತ್ತು. ಕೊರೊನಾ ಹಾವಳಿ ಕಾರಣದಿಂದಾಗಿ ಮುಂದೂಡಲಾಗಿತ್ತು. ಈಗ ಎರಡೂ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ್ದಾರೆ ಈ ಜೋಡಿ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಈ ಜೋಡಿಯ ಮದುವೆಗೆ  ಬಂದಿದ್ದ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರು ನವದಂಪತಿಗಳಿಗೆ ಶುಭ ಹಾರೈಸಿದ್ದಲ್ಲದೇ, ಮದುವೆಯ ನಂತರವೂ ಧಾರಾವಾಹಿ ಕ್ಷೇತ್ರದಲ್ಲಿಯೇ ರಶ್ಮಿ ಉಳಿದುಕೊಳ್ಳಲಿ ಎಂದು ಆಶಿಸಿದ್ದಾರೆ.

  • ಎಂಗೇಜ್ ಆದ ಸೀರಿಯಲ್ ನಟಿ ರಶ್ಮಿ ಪ್ರಭಾಕರ್

    ಎಂಗೇಜ್ ಆದ ಸೀರಿಯಲ್ ನಟಿ ರಶ್ಮಿ ಪ್ರಭಾಕರ್

    ಬೆಂಗಳೂರು: ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ರಶ್ಮಿ ಪ್ರಭಾಕರ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ  ಫೋಟೋಗಳನ್ನು ಅಪ್‍ಲೋಡ್ ಮಾಡುತ್ತ ಕುತೂಹಲ ಮೂಡಿಸಿದ್ದರು. ಅವರನ್ನು ವರಿಸುತ್ತಿರುವ ಹುಡುಗ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

    ನಿಖಿಲ್ ಜೊತೆ ರಶ್ಮಿ ಪ್ರಭಾಕರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲವು ಫೋಟೋಗಳನ್ನು  ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಲವು ಭರವಸೆಗಳು ಎಂದಿಗೂ ಮುರಿಯುವುದಿಲ್ಲ. ನನ್ನ ಜೀವನದ ರಾಜಕುಮಾರ ಎಂದು ಬರೆದುಕೊಂಡು ನಿಶ್ಚಿತಾರ್ಥದ ಫೋಟೋವನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಶುಭ ಕೋರಿ ಕಾಮೆಂಟ್ ಮಾಡುತ್ತಿದ್ದಾರೆ.

    ರಶ್ಮಿ ಹಲವು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ರಶ್ಮಿ ಒಂದಲ್ಲ ಒಂದು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರವನ್ನು ಅನೇಕರು ಇನ್ನೂ ಮರೆತಿಲ್ಲ. ನಟನೇ ಮೂಲಕವಾಗಿ ಸುದ್ದಿಯಾಗುತ್ತಿದ್ದ ರಶ್ಮಿ ಅವರು ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ನಿಖಿಲ್ ಯಾರು ಏನು ಮಾಡುತ್ತಿದ್ದಾರೆ? ರಶ್ಮಿ ಹಾಗೂ ನಿಖಿಲ್ ಅವರದ್ದು ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

  • ‘ಲಕ್ಷ್ಮೀಬಾರಮ್ಮ’ ಖ್ಯಾತಿಯ ಚಿನ್ನು ಜೀವನದ ದುರಂತ ಕಥೆ!

    ‘ಲಕ್ಷ್ಮೀಬಾರಮ್ಮ’ ಖ್ಯಾತಿಯ ಚಿನ್ನು ಜೀವನದ ದುರಂತ ಕಥೆ!

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಲಕ್ಷ್ಮೀಬಾರಮ್ಮ’ ಧಾರಾವಾಹಿಯನ್ನು ಹಲವಾರು ವರ್ಷಗಳಿಂದ ನೋಡುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ಚಿನ್ನು ಕ್ಯಾರೆಕ್ಟರ್ ನಿಭಾಯಿಸ್ತಿರುವ ರಶ್ಮಿ ಪ್ರಭಾಕರ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದರೆ ಅವರ ಜೀವನದಲ್ಲಿ ಒಂದು ದುರಂತ ಕಥೆ ನಡೆದಿದೆ.

    ಲಕ್ಷ್ಮೀಬಾರಮ್ಮ ಸೀರಿಯಲ್ ನೋಡುವಾಗ ಚಿನ್ನುವನ್ನು ಸೂಕ್ಷ್ಮವಾಗಿ ಗಮನಿಸಿ. ಆಗ ಆಕೆಯ ಎಡಗಣ್ಣು ತುಂಬಾ ಚಿಕ್ಕದಾಗಿ ಕಾಣುತ್ತದೆ. ಮೇಲ್ನೋಟಕ್ಕೆ ಮಾತ್ರ ಚಿನ್ನುಗೆ ಕಣ್ಣು ಕಾಣುತ್ತದೆ. ಆದರೆ ಎಡಗಣ್ಣಿನ ದೃಷ್ಟಿಯನ್ನ ಸುಮಾರು ವರ್ಷಗಳ ಹಿಂದೆಯೇ ಆಕೆ ಕಳೆದುಕೊಂಡಿದ್ದಾರೆ.

    ನನಗೆ ಸುಮಾರು 6-7 ವರ್ಷವಿದ್ದಾಗಲೇ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದೇನೆ. ಶಿವರಾತ್ರಿ ಹಬ್ಬ ಆಚರಣೆ ಮಾಡುತ್ತಿದ್ದಾಗ ಕೈಯಲ್ಲಿ ಸುಣ್ಣದ ಡಬ್ಬಿ ಹಿಡಿದು ಆಟವಾಡುತ್ತಿದ್ದೆ. ಆಗ ಸುಣ್ಣ ಎರಡೂ ಕಣ್ಣಿಗೆ ಎಗರಿಬಿಟ್ಟಿತು. ತಕ್ಷಣವೇ ನೀರಿನಿಂದ ಕಣ್ಣಿನಲ್ಲಿರುವ ಸುಣ್ಣವನ್ನ ತೆಗೆದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಆಗಲೇ ನಾನು 70% ಕಣ್ಣಿಗೆ ದೃಷ್ಟಿಯನ್ನು ಕಳೆದುಕೊಂಡಿದ್ದೆ ಎಂದು ರಶ್ಮಿ ಪ್ರಭಾಕರ್ ಅವರು ಹೇಳಿದ್ದಾರೆ.

    ನನಗೆ ಬಾಲ್ಯದಿಂದಲೂ ನ್ಯೂಸ್ ರೀಡರ್ ಆಗಬೇಕು ಎಂದು ಕನಸು ಕಂಡಿದ್ದೆ. ಒಂದಿಷ್ಟು ದಿನ ಕಾಲ ಖಾಸಗಿ ಚಾನೆಲ್‍ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದೆ. ಬಳಿಕ ಧಾರಾವಾಹಿಯಲ್ಲಿ ಅಭಿನಯಿಸುವ ಆಫರ್ ಬಂತು. ಚಿಕ್ಕವಯಸ್ಸಿನಲ್ಲಿ ತನ್ನ ಸಂಬಂಧಿಯಾಗಿದ್ದ ನಟಿ ಸೌಂದರ್ಯರನ್ನ ನೋಡಿಕೊಂಡು ಬೆಳೆದಿದ್ದರಿಂದ ತಾನೂ ನಟಿಯಾಗಬೇಕು ಅಂತ ಆಸೆಪಟ್ಟಿದ್ದೆ. ಆದರೆ ಎಡಗಣ್ಣು ಚಿಕ್ಕದಾಗಿ ಇದ್ದಿದ್ದರಿಂದ ಸಾಕಷ್ಟು ಪಾತ್ರಗಳು ಮಿಸ್ ಆದವು. ಆದರೂ ನಾನು ತಲೆಕೆಡಿಸಿಕೊಳ್ಳದೇ ಮುಂದೊಂದು ದಿನ ಮುಖ್ಯಪಾತ್ರಧಾರಿಯಾಗಿ ಮಿಂಚುತ್ತೀನಿ ಅಂತ ವರ್ಷಗಳ ಕಾಲ ಕಾಯುತ್ತಿದ್ದೆ ಎಂದು ರಶ್ಮಿ ಹೇಳಿದ್ದಾರೆ.

    `ಲಕ್ಷ್ಮೀಬಾರಮ್ಮ’ ಧಾರಾವಾಹಿಯ ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟರು. ಇತ್ತೀಚೆಗೆ ಎಡಗಣ್ಣಿಗೆ ಒಂದು ಸರ್ಜರಿಯಾಗಿ ಒಂದು ತಿಂಗಳು ವಿಶ್ರಾಂತಿ ಪಡೆದು ಧಾರಾವಾಹಿಗೆ ಬಂದೆ. ಆಗ ನಿರ್ದೇಶಕರು ನಿನ್ನ ಕೈಯಲ್ಲಿ ಆಗುತ್ತದೆ ಮಾಡು ಎಂದು ನಂಬಿಕೆಯಿಂದ ಚಿನ್ನು ಪಾತ್ರವನ್ನು ಮಾಡಿಸಿದರು. ಅವರಿಗೆ ಮತ್ತು ತನ್ನ ತಂಡದವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾರೆ.

    ಧಾರಾವಾಹಿ ಮಾಡುವಾಗ ಚಿನ್ನುಗೆ ಕಷ್ಟಗಳ ಮೇಲೆ ಕಷ್ಟ ಬರುತ್ತದೆ. ನಗುವುದಕ್ಕಿಂತ ಕಣ್ಣೀರು ಸುರಿಸುವುದೇ ಹೆಚ್ಚು. ಈಗಾಗಲೇ ಕಣ್ಣು ದೃಷ್ಟಿ ಕಳೆದುಕೊಂಡಿರುವುದರಿಂದ ಕಣ್ಣಿಗೆ ಗ್ಲಿಸರಿನ್ ಹಾಕುವಂತಿಲ್ಲ. ಎಮೋಷನಲ್ ಸೀನ್ ಮಾಡುವಾಗ ಪರಕಾಯ ಪ್ರವೇಶ ಮಾಡಿ ಅಳುವ ಸೀನ್‍ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅಳುವಾಗ ಎಡಗಣ್ಣು ನೋವಾಗುತ್ತದೆಯಂತೆ. ಆದರೂ ಅಭಿಮಾನಿಗಳನ್ನ ರಂಜಿಸುವುದಕ್ಕೆ ಚಿನ್ನು ಕಣ್ಣೀರು ಹಾಕಲೆಬೇಕು.

    ಲಕ್ಷ್ಮೀಬಾರಮ್ಮ ಸೀರಿಯಲ್ ಮೂಲಕ ನಿಮ್ಮೆಲ್ಲರ ಮುಂದೆ ಚಿನ್ನು ಆಗಿ ನಿಲ್ಲಲಿಕ್ಕೆ ರಶ್ಮಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಹನಟಿಯಾಗಿ ಕಿರುತೆರೆ ಜಗತ್ತಿಗೆ ಬಂದು ಹಲವಾರು ಜನರಿಂದ ಟೀಕೆಗೊಳಗಾದ ರಶ್ಮಿ, ಇವತ್ತು ಲೀಡಿಂಗ್ ನಟಿಯಾಗಿ ಮಿಂಚುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv