Tag: ರಶ್ಮಿ ಗೌತಮ್

  • ಶೀಘ್ರದಲ್ಲೇ ಅಮೆರಿಕದ ಹುಡುಗನ ಜೊತೆ ರಶ್ಮಿ ಗೌತಮ್ ಮದುವೆ

    ಶೀಘ್ರದಲ್ಲೇ ಅಮೆರಿಕದ ಹುಡುಗನ ಜೊತೆ ರಶ್ಮಿ ಗೌತಮ್ ಮದುವೆ

    ಆ್ಯಂಕರ್ ರಶ್ಮಿ ಗೌತಮ್ (Rashmi Gautham) ತೆಲುಗಿನ ಜನಪ್ರಿಯ ಜಬರ್‌ದಸ್ತ್ ಕಾಮಿಡಿ ಶೋ ಮೂಲಕ ಗಮನ ಸೆಳೆದವರು. ಸಿನಿಮಾಗಳಲ್ಲಿ ನಾಯಕಿಯಾಗಿ ಮೋಡಿ ಮಾಡಿದವರು. ಇದೀಗ ಮದುವೆಯ ವಿಚಾರವಾಗಿ ನಟಿ ರಶ್ಮಿ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ಹಸೆಮಣೆ (Wedding) ಏರೋದಕ್ಕೆ ನಟಿ ರೆಡಿಯಾಗಿದ್ದಾರೆ.

    ಶೀಘ್ರದಲ್ಲಿ ರಶ್ಮಿ ಗೌತಮ್ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಮೆರಿಕದ ಹುಡುಗನ ಜೊತೆ ಮದುವೆ ಆಗುವುದಕ್ಕೆ ಮಾತುಕತೆ ಕೂಡ ನಡೆದಿದೆಯಂತೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಮದುವೆ ಕುರಿತು ನಟಿ ಅಧಿಕೃತವಾಗಿ ಅನೌನ್ಸ್ ಮಾಡುತ್ತಾರಾ? ಎಂದು ಕಾದುನೋಡಬೇಕಿದೆ. ಇದನ್ನೂ ಓದಿ:ಹೊಸ ಹುಡುಗಿ ಜೊತೆ ವರ್ಮಾ ನೈಟ್ ಪಾರ್ಟಿ

    ಇನ್ನೂ ನಟಿ ರಶ್ಮಿ ಗೌತಮ್ ಅವರ ಹೆಸರು ಆಗಾಗ ಹಾಸ್ಯನಟ ಸುಡಿಗಾಲಿ ಸುಧೀರ್ ಜೊತೆ ಕೇಳಿ ಬಂದಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ನಾವಿಬ್ಬರೂ ಉತ್ತಮ ಸ್ನೇಹಿತರು. ಡೇಟಿಂಗ್ ಸುದ್ದಿ ಎಲ್ಲಾ ಸುಳ್ಳು ಎಂದು ರಶ್ಮಿ ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ನಟಿಯ ಮದುವೆ ಸುದ್ದಿ ಸಖತ್ ಚರ್ಚೆ ಆಗುತ್ತಿದೆ.

    ಕೆಲವು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಶ್ಮಿ, ಕಳೆದ ವರ್ಷ ‘ಹಾಸ್ಟೆಲ್ ಹುಡುಗರು’ ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಕನ್ನಡದ ‘ಹಾಸ್ಟೆಲ್ ಹುಡುಗರು’ ಚಿತ್ರದಲ್ಲಿ ರಮ್ಯಾ (Ramya) ನಟಿಸಿದ ಅತಿಥಿ ಪಾತ್ರವನ್ನು ತೆಲುಗಿನಲ್ಲಿ ರಶ್ಮಿ ಗೌತಮ್ ನಟಿಸಿ ಸೈ ಎನಿಸಿಕೊಂಡಿದ್ದರು.

  • ತೆಲುಗಿನಲ್ಲಿ ಬರಲಿದೆ ಹಾಸ್ಟೆಲ್ ಹುಡುಗರ ಕಥೆ- ರಮ್ಯಾ ನಟಿಸಿದ್ದ ಪಾತ್ರಕ್ಕೆ ರಶ್ಮಿ ಗೌತಮ್ ನಟನೆ

    ತೆಲುಗಿನಲ್ಲಿ ಬರಲಿದೆ ಹಾಸ್ಟೆಲ್ ಹುಡುಗರ ಕಥೆ- ರಮ್ಯಾ ನಟಿಸಿದ್ದ ಪಾತ್ರಕ್ಕೆ ರಶ್ಮಿ ಗೌತಮ್ ನಟನೆ

    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagidaare) ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ತೆಲುಗು ವರ್ಷನ್‌ನಲ್ಲಿ ಸಿನಿಮಾ ತರಲು ಚಿತ್ರತಂಡದ ಕಡೆಯಿಂದ ಭರ್ಜರಿ ತಯಾರಿ ನಡೆಯುತ್ತಿದೆ. ಹೀಗಿರುವಾಗ ಮೋಹಕ ತಾರೆ ರಮ್ಯಾ(Ramya) ನಟಿಸಿದ್ದ ಪಾತ್ರದಲ್ಲಿ ಮಿಂಚಲು ತೆಲುಗಿನ ಜನಪ್ರಿಯ ನಟಿ-ನಿರೂಪಕಿ ರಶ್ಮಿ ಗೌತಮ್ (Rashmi Gautham) ಸಜ್ಜಾಗಿದ್ದಾರೆ.

    ನಿತಿನ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರೋ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಈಗ ತೆಲುಗು ಅವತರಣಿಕೆಯಲ್ಲಿ ಬರಲು ಸಜ್ಜಾಗ್ತಿದೆ. ಇದೇ ಆಗಸ್ಟ್ 26ಕ್ಕೆ ಹೊರ ರಾಜ್ಯ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ‘ಬಾಯ್ಸ್ ಹಾಸ್ಟೆಲ್’ (Boys Hostel) ಎಂಬ ಹೆಸರಿನಲ್ಲಿ ಡಬ್ ಆಗ್ತಿದೆ. ಈಗ ತೆಲುಗಿನ ಬ್ಯೂಟಿ ರಶ್ಮಿ ಗೌತಮ್ ಚಿತ್ರತಂಡವನ್ನ ಸೇರಿಕೊಂಡಿದ್ದಾರೆ.  ಇದನ್ನೂ ಓದಿ:ಸಮಂತಾ ಬ್ಯಾಕ್ ಟು ಶೂಟ್- ಹೊಸ ಲುಕ್‌ನಲ್ಲಿ ಕಂಗೊಳಿಸಿದ ನಟಿ

    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ವಿಚಾರವಾಗಿ ಸದ್ದು ಮಾಡಿತ್ತು. ಸಿನಿಮಾದಲ್ಲಿ ಕಂಟೆಂಟ್ ಅದೆಷ್ಟರ ಮಟ್ಟಿಗೆ ಪ್ಲಸ್ ಆಗಿತ್ತು. ಸ್ಟಾರ್‌ ನಟಿ ರಮ್ಯಾ ನಟಿಸಿರೋದು ಕೂಡ ಚಿತ್ರತಂಡಕ್ಕೆ ಪ್ಲಸ್‌ ಆಗಿತ್ತು. ಈ ಚಿತ್ರದಲ್ಲಿ ಕಾಲೇಜ್ ಹುಡುಗರಿಗೆ ಪಾಠ ಮಾಡುವ ಚೆಂದದ ಟೀಚರ್ ಆಗಿ ರಮ್ಯಾ ನಟಿಸಿದ್ದರು. ರಮ್ಯಾ ಅವರ ಮಸ್ತ್ ಎಂಟ್ರಿ ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಇದೀಗ ಅದೇ ಪಾತ್ರದಲ್ಲಿ ತೆಲುಗು ವರ್ಷನ್ ಡಬ್‌ನಲ್ಲಿ ರಶ್ಮಿ ಗೌತಮ್ ನಟಿಸುತ್ತಿದ್ದಾರೆ.

    ಬೆಂಗಳೂರಿನ ನೆಲಮಂಗಲದಲ್ಲಿ ‘ಬಾಯ್ಸ್ ಹಾಸ್ಟೆಲ್’ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದಲ್ಲಿ ರಶ್ಮಿ ಗೌತಮ್ (Rashmi Gautham) ಭಾಗಿಯಾಗಿದ್ದಾರೆ. ಅವರ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅವರ ಆ್ಯಕ್ಟಿಂಗ್ ಮತ್ತು ಲುಕ್ ಹೇಗಿರಲಿದೆ ಎಂದು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಹಾಗಾದ್ರೆ ಆಗಸ್ಟ್ 26ರಂದು ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ರಶ್ಮಿಗೆ ನಾನಾ ರೀತಿಯಲ್ಲಿ ಕೊಲೆ ಬೆದರಿಕೆ : ದೂರು ನೀಡಲು ಚಿಂತನೆ

    ನಟಿ ರಶ್ಮಿಗೆ ನಾನಾ ರೀತಿಯಲ್ಲಿ ಕೊಲೆ ಬೆದರಿಕೆ : ದೂರು ನೀಡಲು ಚಿಂತನೆ

    ತೆಲುಗು ಸಿನಿಮಾ ರಂಗದ ಹೆಸರಾಂತ ನಿರೂಪಕಿ ಹಾಗೂ ನಟಿ ರಶ್ಮಿ ಗೌತಮ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದಿಲ್ಲೊಂದು ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದವರು, ಇದ್ದಕ್ಕಿದ್ದಂತೆ ಆಘಾತ ಮೂಡಿಸುವಂತಹ ಪೋಸ್ಟ್ ವೊಂದನ್ನು ಹಾಕಿದ್ದಾರೆ. ಇಂತಹ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿರುವ ಕುರಿತು ಅವರು ಕಳವಳ ವ್ಯಕ್ತ ಪಡಿಸಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ರಶ್ಮಿಗೆ ಸಾಕಷ್ಟು ಬೇಡಿಕೆಯಿದೆ. ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಎನ್ನುವ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಈ ನಟಿಯನ್ನು ಫಾಲೋ ಮಾಡುತ್ತಾರೆ. ಅದೇ ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಆಸಿಡ್ ಹಾಕುವ ಹಾಗೂ ಕಾರಿನಿಂದ ಗುದ್ದಿಸಿ ಸಾಯಿಸುವ ಕುರಿತು ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಅನ್ನು ಅವರು ಶೇರ್ ಮಾಡಿದ್ದಾರೆ. ಇದನ್ನೂ ಓದಿ: KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

    ಈ ಹಿಂದೆ ಕೆಲವರು ನನ್ನ ಮದುವೆ ಬಗ್ಗೆ ಕಾಳಜಿ ತೋರುತ್ತಿದ್ದರು. ಬೇಗ ಮದುವೆ ಆಗು ಎನ್ನುತ್ತಿದ್ದರು. ಇದೀಗ ಆಸಿಡ್ ಹಾಕುವುದಾಗಿ, ಆಕ್ಸಿಡೆಂಟ್ ಮಾಡಿಸಿ ಸಾಯಿಸುವುದಾಗಿ ಹೇಳುತ್ತಿದ್ದಾರೆ. ಇಂಥವರಿಗೆ ಏನು ಮಾಡೋದು? ದೂರು ಕೊಡಲೆ? ಎಂದು ಅದೇ ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಈ ರೀತಿಯ ಬೆದರಿಕೆಗಳನ್ನು ಗಂಭೀರವಾಗಿ ತಗೆದುಕೊಳ್ಳಬೇಕೋ? ಅಥವಾ ಸುಮ್ಮನೆ ಇದ್ದುಬಿಡಬೇಕು ಎನ್ನುವ ಗೊಂದಲವನ್ನೂ ಅವರು ವ್ಯಕ್ತ ಪಡಿಸಿದ್ದಾರೆ.

    ಈ ರೀತಿಯಲ್ಲಿ ವ್ಯಕ್ತಿಗಳು ಕಾಮೆಂಟ್ ಮಾಡುವುದಕ್ಕೆ ಕಾರಣ ಏನು ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಕಾಮೆಂಟ್ ಮಾಡಿದವರು ಸ್ಕ್ರೀನ್ ಶಾಟ್ ತಗೆದು ಅದನ್ನು ಅವರು ಪೋಸ್ಟ್ ಮಾಡಿದ್ದಾರೆ. ಒಂದು ಪೋಸ್ಟ್ ನಲ್ಲಿ ನಿನಗೆ ವಯಸ್ಸಾಗುತ್ತಿದೆ, ಬೇಗ ಮದುವೆಯಾಗು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿನ್ನ ಪಾಡಿಗೆ ನೀನು ಇರು. ಇಷ್ಟಬಂದಂತೆ ವರ್ತಿಸಬೇಡ ಎಂದಿದೆ.