Tag: ರಶ್ಮಿತಾ ಗೌಡ

  • ಅರಸಯ್ಯನ ಪ್ರೇಮಪ್ರಸಂಗದಲ್ಲಿ ‘ಅಯ್ಯಯ್ಯೋ ರಾಮ’ ಸಾಂಗ್

    ಅರಸಯ್ಯನ ಪ್ರೇಮಪ್ರಸಂಗದಲ್ಲಿ ‘ಅಯ್ಯಯ್ಯೋ ರಾಮ’ ಸಾಂಗ್

    ಫ್ರೆಂಚ್ ಬಿರಿಯಾನಿ, ಗುರು ಶಿಷ್ಯರು ಚಿತ್ರದ ಮೂಲಕ ಜನಪ್ರಿಯರಾಗಿರುವ ಮಹಾಂತೇಶ್ ಹಿರೇಮಠ್ (Mahantesh Hiremath) ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಅರಸಯ್ಯನ ಪ್ರೇಮಪ್ರಸಂಗ’ ಚಿತ್ರಕ್ಕಾಗಿ ಕೃಷ್ಣ ರಿತ್ತಿ ಬರೆದಿರುವ ‘ಅಯ್ಯಯ್ಯೋ ರಾಮ’ ಚಿತ್ರದ ಹಾಡು ಬಿಡುಗಡೆಯಾಗಿದೆ. ಪ್ರವೀಣ್ – ಪ್ರದೀಪ್ ಸಂಗೀತ ನೀಡಿದ್ದಾರೆ‌. ಶಂಕರ್ ಭಾರತಿಪುರ ಹಾಡಿದ್ದಾರೆ. ಇತ್ತೀಚೆಗೆ ಈ ಹಾಡನ್ನು ನಟ ನವೀನ್ ಶಂಕರ್ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    ನಾನು ಅಭಿನಯ ತರಂಗದಲ್ಲಿ ನಟನೆ ಹಾಗೂ ನಿರ್ದೇಶನದ ತರಬೇತಿ ಪಡೆದಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಜೆ.ವಿ.ಆರ್ ದೀಪು, ನಿರ್ಮಾಪಕ ರಾಜೇಶ್ ಸಹ ಅಭಿನಯ ತರಂಗದ ವಿದ್ಯಾರ್ಥಿಯಾಗಿದ್ದರು. ಈ ಚಿತ್ರದ ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು.  ಈ ಚಿತ್ರ ಕಾಮಿಡಿ ಡ್ರಾಮ ಎನ್ನಬಹುದು. ಹಾಡಿನ ಬಗ್ಗೆ ಹೇಳಬೇಕಾದರೆ, ಹಳ್ಳಿಗಳಲ್ಲಿ ಯಾರಾದರೂ ಸತ್ತಾಗ ರಾತ್ರಿ ಸಮಯದಲ್ಲಿ ಭಜನೆ ಮಾಡುತ್ತಾರೆ. ಆ ರೀತಿ ನಮ್ಮ ಚಿತ್ರದಲ್ಲೂ ಬರುವ ಒಂದು ಪ್ರಸಂಗದಲ್ಲಿ ಈ ಹಾಡು ಬರುತ್ತದೆ. ಪ್ರವೀಣ್ – ಪ್ರದೀಪ್ ಸಂಗೀತದಲ್ಲಿ, ಶಂಕರ್ ಭಾರತಿಪುರ ಅವರ ಕಂಠಸಿರಿಯಲ್ಲಿ ಈ ಹಾಡು ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

    ನಾನು ಕೂಡ ಅಭಿನಯ ತರಂಗದ ವಿದ್ಯಾರ್ಥಿ. ನಿರ್ದೇಶಕ ದೀಪು ಈ ಕಥೆ ಹೇಳಿದಾಗ, ಗ್ರಾಮೀಣ ಸೊಗಡಿನ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ನನ್ನ ಪತ್ನಿ ಮೇಘಶ್ರೀ ರಾಜೇಶ್ ಈ ಚಿತ್ರದ ನಿರ್ಮಾಪಕಿ. ಇಂದು ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು ರಾಜೇಶ್. ನಾನು ನಾಯಕ ಎಂದು ಯಾವತ್ತೂ ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ಪೋಷಕ ನಟನಾಗಿರುವುದಕ್ಕೆ ಇಷ್ಟ ಪಡುತ್ತೇನೆ. ನಿರ್ಮಾಪಕರು, ನಿರ್ದೇಶಕರು ನೀನೇ ಈ ಚಿತ್ರದ ನಾಯಕ ಎಂದಾಗ ಆಶ್ಚರ್ಯವಾಯಿತು. ದೀಪು ಹಳ್ಳಿಸೊಗಡಿನ ಅದ್ಭುತ ಕಥೆ ಆಯ್ಕೆ ಮಾಡಿಕೊಂಡು, ಅಷ್ಟೇ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಜನಪ್ರಿಯವಾಗಲಿದೆ‌‌‌. ಚಿತ್ರ ಕೂಡ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ನಟ ಮಹಾಂತೇಶ್ ಹಿರೇಮಠ್ ತಿಳಿಸಿದರು.

    ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರವೀಣ್ – ಪ್ರದೀಪ್ ಮಾಹಿತಿ ನೀಡಿದರು. ಗಾಯಕ ಶಂಕರ್ ಭಾರತಿಪುರ ಗಾಯನದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ನಾಯಕಿ ರಶ್ಮಿತಾ ಗೌಡ (Rashmita Gowda), ವಿಜಯ್ ಚೆಂಡೂರ್ (Vijay Chendur), ರಘು ರಾಮನಕೊಪ್ಪ, ಪಿ.ಡಿ.ಸತೀಶ್  ಸೇರಿದಂತೆ ಅನೇಕ ಕಲಾವಿದರು, ಛಾಯಾಗ್ರಾಹಕ ಗುರುಪ್ರಸಾದ್ ನರ್ನಾಡ್ , ಸಂಕಲನಕಾರ ಸುನೀಲ್ ಕಶ್ಯಪ್ ಮುಂತಾದ ತಂತ್ರಜ್ಞರು “ಅರಸಯ್ಯನ ಪ್ರೇಮಪ್ರಸಂಗ” ದ ಬಗ್ಗೆ ಮಾತನಾಡಿದರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಿಕ್ ಟಾಕ್ ಸ್ಟಾರ್ ಅಲ್ಲು ರಘು ನಿರ್ದೇಶನದಲ್ಲಿ ‘ಸಾವಿರುಪಾಯಿಗೆ ಸ್ವರ್ಗ’ ಕಿರುಚಿತ್ರ

    ಟಿಕ್ ಟಾಕ್ ಸ್ಟಾರ್ ಅಲ್ಲು ರಘು ನಿರ್ದೇಶನದಲ್ಲಿ ‘ಸಾವಿರುಪಾಯಿಗೆ ಸ್ವರ್ಗ’ ಕಿರುಚಿತ್ರ

    ಟಿಕ್ ಟಾಕ್ ಮೂಲಕ ಖ್ಯಾತಿ ಗಳಿಸಿರುವ ಅಲ್ಲು ರಘು ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ. ಟಿಕ್ ಟಾಕ್ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಅಲ್ಲು ರಘು ನಿರ್ದೇಶನದತ್ತ ಮುಖ ಮಾಡಿದ್ದಾರೆ. ಅದರ ಚೊಚ್ಚಲ ಪ್ರಯತ್ನ ಎಂಬಂತೆ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದು, ‘ಸಾವಿರುಪಾಯಿಗೆ ಸ್ವರ್ಗ’ ಶೀರ್ಷಿಕೆಯ ಕಿರುಚಿತ್ರ ಬಿಡುಗಡೆಯಾಗಿದೆ. ಕಿರುಚಿತ್ರ ಬಿಡುಗಡೆಯ ಜೊತೆಗೆ ಒಂದಿಷ್ಟು ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.  ‘ಸಾವಿರುಪಾಯಿಗೆ ಸ್ವರ್ಗ’ ಚಿತ್ರಕ್ಕೆ ಅಲ್ಲು ರಘು ಕಥೆ ಬರೆದು ನಿರ್ದೇಶನ ಮಾಡಿದ್ದು, ಶಿವಪುತ್ರ ಯಶಾರಾದ, ವರುಣ್ ಆರಾಧ್ಯ, ರಶ್ಮಿತ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಡಿಂಡಿಮ ಸಂಭಾಷಣೆ, ರಾಘವ್ ಹಾಗೂ ಅಭಿನಂದನ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಚಲ್ಲ ಛಾಯಾಗ್ರಾಹಣ, ಕೃಷ್ಣ ಸುಜನ್ ಸಂಕಲನ ಚಿತ್ರಕ್ಕಿದೆ.

    ‘ಅಲ್ಲು ರಘು ಮಾತನಾಡಿ ಇದು ನನ್ನ ನಿರ್ದೇಶನದ ಮೊದಲ ಕಿರುಚಿತ್ರ. ಈ ಚಿತ್ರಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಜನ ಸಹಾಯ ಮಾಡಿದ್ದಾರೆ. ಅವರೆಲ್ಲರ ಪ್ರೋತ್ಸಾಹದಿಂದಲೇ ಈ ಕಿರುಚಿತ್ರ ಮಾಡಲು ಸಾಧ್ಯವಾಯ್ತು ಎಲ್ಲರಿಗೂ ನನ್ನ ಧನ್ಯವಾದಗಳು. ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳು ತುಂಬಾ ಇಷ್ಟ. ಉಪೇಂದ್ರ, ಕಾಶಿನಾಥ್ ನನಗೆ ಸ್ಪೂರ್ತಿ. ಒಂದು ಪ್ರಯತ್ನ ಮಾಡಿದ್ದೇನೆ. ಏನೇ ತಪ್ಪಿದ್ದರು ತಿಳಿಸಿ. ಎಲ್ಲರೂ ಈ ಕಿರುಚಿತ್ರ ನೋಡಿ ಅಭಿಪ್ರಾಯ ತಿಳಿಸಿ ಎಂದು ಕೇಳಿಕೊಂಡ್ರು. ಇದನ್ನೂ ಓದಿ: ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    ಚಿತ್ರದ ಸಂಕಲನಕಾರ ಕೃಷ್ಣ ಸುಜನ್ ಮಾತನಾಡಿ ನಾವೆಲ್ಲ ತುಂಬಾ ಹಳೆಯ ಸ್ನೇಹಿತರು. ಅಲ್ಲುಗೆ ಸಿನಿಮಾ ಮಾಡಬೇಕು ಎಂದು ಬಹಳ ಆಸೆ ಇತ್ತು. ಆದ್ರೆ ನಾನು ಫ್ಯೂಚರ್ ಫಿಲ್ಮಂ ಮಾಡೋದು ಅಷ್ಟು ಸುಲಭವಲ್ಲ. ಮೊದಲು ಕಿರುಚಿತ್ರ ಮಾಡು ಮತ್ತೊಂದಿಷ್ಟು ನಿರ್ದೇಶನದ ಬಗ್ಗೆ, ಕ್ಯಾಮೆರಾ ವರ್ಕ್ ಎಲ್ಲದರ ಬಗ್ಗೆ ತಿಳಿದುಕೋ ಆಮೇಲೆ ಸಿನಿಮಾ ಮಾಡುವಂತೆ ಎಂದು ಹೇಳಿದ್ದೆ. ಆ ಚರ್ಚೆ ನಂತರ ಆರಂಭವಾದ ಕಿರುಚಿತ್ರ ‘ಸಾವಿರುಪಾಯಿಗೆ ಸ್ವರ್ಗ’. ಫೈನಲ್ ಔಟ್ ಪುಟ್ ನೋಡಿ ಖುಷಿ ಆಯ್ತು. ಇಷ್ಟರಮಟ್ಟಿಗೆ ಬಂದಿದೆ ಅಂದ್ರೆ ನಮಗೆ ತುಂಬಾ ಖುಷಿ ಎನಿಸುತ್ತೆ  ಎಂದು ಸಂತಸ ಹಂಚಿಕೊಂಡ್ರು.

    ಒಳ್ಳೆ ಅವಕಾಶ ಕೊಟ್ಟಿದ್ದಕ್ಕೆ ಅಲ್ಲು ರಘುಗೆ ತುಂಬಾ ಧನ್ಯವಾದಗಳು, ನನಗೆ ಹೀರೋ ಆಗಬೇಕು ಎಂದು ಬಹಳ ಆಸೆ ಇತ್ತು ಈ ಚಿತ್ರದ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇನ್ನು ಹೆಚ್ಚು ಸಿನಿಮಾಗಳನ್ನು ಮಾಡುತ್ತೇವೆ. ಎಲ್ಲರ ಸಪೋರ್ಟ್ ನಮ್ಮ ತಂಡದ ಮೇಲೆ ಹೀಗೆ ಇರಲಿ. ಅಲ್ಲು ರಘು ಅವರ ಬಳಿ ಹಲವಾರು ಕಥೆಗಳಿವೆ ಅವರಿಗೂ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಕಿರುಚಿತ್ರದಲ್ಲಿ ನಟಿಸಿರುವ ವರುಣ್ ಆರಾಧ್ಯ ಸಂತಸ ಹಂಚಿಕೊಂಡ್ರು.

    ನಟಿ ರಶ್ಮಿತ ಗೌಡ ಮಾತನಾಡಿ ಇದು ನನ್ನ ನಟನೆಯ ಮೊದಲ ಕಿರುಚಿತ್ರ. ನಾನು ಭರತನಾಟ್ಯ ಡಾನ್ಸರ್, ಆಯ್ಕೆ ಮಾಡಿಕೊಂಡಿದ್ದು ಮಾಡೆಲಿಂಗ್. ಇದರ ಜೊತೆಗೆ ನಟನೆ ಅಂದ್ರೆ ನನಗೆ ತುಂಬಾ ಇಷ್ಟ. ಈ ಚಿತ್ರದಲ್ಲಿ ನಟಿಸಿದ್ದು ತುಂಬಾ ಖುಷಿ ಇದೆ. ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ತುಂಬಾ ಧನ್ಯವಾದಗಳು. ಎಲ್ಲರೂ ಕಿರುಚಿತ್ರ ನೋಡಿ ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡ್ರು.

    Live Tv
    [brid partner=56869869 player=32851 video=960834 autoplay=true]