Tag: ರಶ್ಮಿಕಾ

  • ದೆವ್ವವಾಗಿ ಕಾಡುವ ರಶ್ಮಿಕಾರನ್ನು ನೋಡಿದ್ರಾ?

    ದೆವ್ವವಾಗಿ ಕಾಡುವ ರಶ್ಮಿಕಾರನ್ನು ನೋಡಿದ್ರಾ?

    ರಶ್ಮಿಕಾ (Rashmika Mandanna) ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೀಗ `ಥಮಾ’ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿರುವ ರಶ್ಮಿಕಾ ಹಿಂದಿನ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸ್ಕೊಂಡಿದ್ದಾರೆ.

    `ಥಮಾ’ (Thama) ಚಿತ್ರದ ಟ್ರೈಲರ್‌ ರಿಲೀಸ್ (Trailer Release) ಆಗಿದ್ದು, ರಶ್ಮಿಕಾ ದೆವ್ವದ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ಆಯುಷ್ಮಾನ್ ಖುರಾನ್‌ (Ayushmann Khurrana) ಜೊತೆ ತೆರೆ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಕಂಟೆಸ್ಟೆಂಟ್‌ ಯಾರ್ ಗೊತ್ತಾ? – ಇಲ್ಲಿದೆ ನೋಡಿ ಫೈನಲ್ ಲಿಸ್ಟ್

    ಥಮಾ ಒಂದು ಹಾರರ್‌ ಸಿನಿಮಾ ಆಗಿದ್ದು,ಫ್ಯಾಂಟಸಿ ಜೊತೆ ಕಾಮಿಡಿ ಕಥೆಯನ್ನು ಹೊಂದಿದೆ. ಹಿಂದ್ಯಾವತ್ತೂ ರಶ್ಮಿಕಾ ಮಂದಣ್ಣ ಈ ರೀತಿಯ ಪಾತ್ರದಲ್ಲಿ ಕಾಣಿಸ್ಕೊಂಡಿರಲಿಲ್ಲ. ಇದೀಗ ತಡ್ಕಾ ಪಾತ್ರದಲ್ಲಿ ಮನುಷ್ಯನನ್ನು ಪ್ರೀತಿಸುವ ದೆವ್ವವಾಗಿ ವಿಭಿನ್ನ ರೂಪದಲ್ಲಿ ತೆರೆ ಮೇಲೆ ಬರಲಿದ್ದಾರೆ. ಭಯ ಹುಟ್ಟಿಸಿ, ಎಮೋಷನಲ್ ಆಗಿ ಕನೆಕ್ಟ್ ಆಗುತ್ತಾರೆ. ಇದೀಗ ರಶ್ಮಿಕಾ ಅವರ ಹೊಸ ಪಾತ್ರದ ಆಯ್ಕೆ ಮತ್ತೆ ಬಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದೆ.

  • ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ: ಹೊಗಳಿದ ಅಲ್ಲು ಅರ್ಜುನ್

    ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ: ಹೊಗಳಿದ ಅಲ್ಲು ಅರ್ಜುನ್

    ನ್ನಡತಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ‘ಕಿಸ್ಸಿಕ್’ ಹಾಡಿಗೆ ಸೊಂಟ ಬಳುಕಿಸಿ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇದೀಗ ಸಿನಿಮಾ ಪ್ರಚಾರದ ವೇಳೆ, ಶ್ರೀಲೀಲಾರನ್ನು (Sreeleela) ಅಲ್ಲು ಅರ್ಜುನ್ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:BBK 11: ಶಿಶಿರ್‌ ಹೆಣ್ಮಕ್ಕಳ ಹಿಂದೆ ಸುತ್ತೋ ಜೊಲ್ಲ ಎಂದ್ರಾ ಚೈತ್ರಾ?- ರಣರಂಗವಾಯ್ತು ದೊಡ್ಮನೆ

    ಅಲ್ಲು ಅರ್ಜುನ್ (Allu Arjun) ಮಾತನಾಡಿ, ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ. ಶ್ರೀಲೀಲಾ ಕ್ಯೂಟ್, ಪ್ರತಿಭಾನ್ವಿತ ನಟಿ. ತೆಲುಗು ಹೆಣ್ಣು ಮಕ್ಕಳಿಗೆ ಆಕೆ ಸ್ಫೂರ್ತಿ ಎಂದು ಕೊಂಡಾಡಿದ್ದಾರೆ.

    ಅಂದಹಾಗೆ, ಡಿ.5ರಂದು ‘ಪುಷ್ಪ 2’ ಸಿನಿಮಾಗೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ‘(Rashmika Mandanna), ಶ್ರೀಲೀಲಾ, ಡಾಲಿ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಕರ್ನಾಟಕದಲ್ಲಿ ‘ಪುಷ್ಪ 2’ಗೆ ಶಾಕ್- ಪ್ರದರ್ಶನ ರದ್ದಿಗೆ ಆದೇಶ

    ಕರ್ನಾಟಕದಲ್ಲಿ ‘ಪುಷ್ಪ 2’ಗೆ ಶಾಕ್- ಪ್ರದರ್ಶನ ರದ್ದಿಗೆ ಆದೇಶ

    ಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ಗೆ (Pushpa 2) ಚಿತ್ರಕ್ಕೆ ಕರ್ನಾಟಕದಲ್ಲೂ ಫ್ಯಾನ್ಸ್ ಇದ್ದಾರೆ. ಹೀಗಿರುವಾಗ ಚಿತ್ರತಂಡಕ್ಕೆ ಬೆಂಗಳೂರು ಜಿಲ್ಲಾಧಿಕಾರಿ ಶಾಕ್‌ ನೀಡಿದ್ದಾರೆ. ಸಮಯ ಪಾಲನೆ ಮಾಡದೇ ‘ಪುಷ್ಪ 2’ ಚಿತ್ರ ಪ್ರದರ್ಶನಕ್ಕೆ ಮುಂದಾದ ಥಿಯೇಟರ್‌ಗೆ ಬೆಂಗಳೂರು ಜಿಲ್ಲಾಧಿಕಾರಿ ಶಾಕ್ ನೀಡಿದ್ದಾರೆ. ಇದನ್ನೂ ಓದಿ:ಮಾದಕ ವ್ಯಸನಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಉಪೇಂದ್ರ

    ಬೆಂಗಳೂರು ಕೆಲವು ಚಿತ್ರಮಂದಿರಗಳು ನಿಗದಿಪಡಿಸಿದ ಅವಧಿಗೂ ಮುನ್ನ ‘ಪುಷ್ಪ 2’ ಸಿನಿಮಾವನ್ನು ಪ್ರದರ್ಶನ ಮಾಡುತ್ತಿದೆ. ಕರ್ನಾಟಕದಲ್ಲಿ ಯಾವುದೇ ಸಿನಿಮಾವನ್ನು ಬೆಳಗ್ಗೆ 6 ಗಂಟೆಗೂ ಮುನ್ನ ಪ್ರದರ್ಶನ ಮಾಡಬಾರದೆಂಬ ರಾಜ್ಯ ಸರ್ಕಾರದ ನಿಯಮವಿದೆ. ಹೀಗಿದ್ದರೂ ‘ಪುಷ್ಪ 2’ ಚಿತ್ರ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರದ ಮಾಲೀಕರು ಬೆಳ್ಳಂಬೆಳಗೆ 3.45ರಿಂದ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದೆ. ಇದನ್ನು ಇದಕ್ಕೆ ಬೆಂಗಳೂರು ಜಿಲ್ಲಾಧಿಕಾರಿ ಕಡಿವಾಣ ಹಾಕಿದ್ದಾರೆ.

    ಚಲನಚಿತ್ರ ಪ್ರದರ್ಶನ ನಿಯಮದ ಪ್ರಕಾರ, ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಯ ಒಳಗೆ ಯಾವುದೇ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶನ ಮಾಡುವಂತೆ ಇಲ್ಲ ಎಂಬ ರಾಜ್ಯ ಸರ್ಕಾರದ ಆದೇಶವಿದ್ದರೂ ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ ಅವಧಿಗೂ ಮುನ್ನ ಚಿತ್ರ ಪ್ರದರ್ಶನಗೊಳ್ಳುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. 43 ಥಿಯೇಟರ್‌ಗಳ ವಿರುದ್ಧ ಸಿನಿಮಾ ಪ್ರದರ್ಶನ ಮಾಡದಂತೆ ಬೆಂಗಳೂರು ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದಾರೆ.

    ಕರ್ನಾಟಕ ಸಿನಿಮಾ ರೆಗ್ಯೂಲೆಷನ್ ಆಕ್ಟ್ ಅನ್ವಯ. ಬೆಳಗ್ಗೆ 6.30ರ ಒಳಗೆ ಸಿನಿಮಾ ಪ್ರದರ್ಶನ ಮಾಡುವಂತೆ ಇಲ್ಲ. ಬುಕ್ ಮೈ ಶೋನಲ್ಲಿ ಟಿಕೆಟ್ ಮಾರಾಟವನ್ನು ಆಧರಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಹೀಗಾಗಿ ನಾಳೆ ಬೆಳ್ಳಂಬೆಳಗ್ಗೆ 4 ಗಂಟೆಯಿಂದ ಸಿನಿಮಾ ಆರಂಭ ಆಗುವುದು ಅನುಮಾನ.

    ಅಂದಹಾಗೆ, ಪುಷ್ಪ 2 ಸಿನಿಮಾ ಡಿ.5ರಂದು ಬಹುಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ, ಫಹಾದ್‌ ಫಾಸಿಲ್‌, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ.

     

  • ಸಿನಿಮಾ ಪ್ರಚಾರಕ್ಕಾಗಿ ರಶ್ಮಿಕಾ, ವಿಜಯ್ ಫೋಟೋ ಬಳಸಿದ್ದಕ್ಕೆ ಕ್ಷಮೆ ಕೇಳಿದ ನಾನಿ

    ಸಿನಿಮಾ ಪ್ರಚಾರಕ್ಕಾಗಿ ರಶ್ಮಿಕಾ, ವಿಜಯ್ ಫೋಟೋ ಬಳಸಿದ್ದಕ್ಕೆ ಕ್ಷಮೆ ಕೇಳಿದ ನಾನಿ

    ನಾನಿ, ಮೃಣಾಲ್ ಠಾಕೂರ್ ನಟನೆಯ ‘ಹಾಯ್ ನಾನ್ನ’ ಸಿನಿಮಾದ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಕೆಲದಿನಗಳ ಹಿಂದೆ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ, ವಿಜಯ್ ದೇವರಕೊಂಡ ಅವರ ಖಾಸಗಿ ಫೋಟೋ ಬಳಸಿದ್ದಕ್ಕೆ ಅಭಿಮಾನಿಗಳು ಗರಂ ಆಗಿದ್ದರು. ಈ ವಿಚಾರವಾಗಿ ನಟ ನಾನಿ (Nani) ಪ್ರತಿಕ್ರಿಯಿಸಿ, ಫ್ಯಾನ್ಸ್‌ಗೆ ಕ್ಷಮೆ ಕೇಳಿದ್ದಾರೆ.

    ಆ ರೀತಿ ಆಗಿದ್ದು ದುರದೃಷ್ಟಕರ. ಏನಾಯಿತು ಎಂಬುದು ಗೊತ್ತಾಗುವುದರೊಳಗೆ ಫೋಟೋ ಕಣ್ಮರೆ ಆಯಿತು. ನಾವೆಲ್ಲರೂ ಆಪ್ತ ಸ್ನೇಹಿತರು. ಹೀಗೆಲ್ಲ ಆಗುವುದು ಸಹಜ ಎಂಬುದನ್ನು ರಶ್ಮಿಕಾ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಅರ್ಥ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಯಾರಿಗಾದರೂ ನಿಜವಾಗಿಯೂ ನೋವಾಗಿದ್ದರೆ ನಾನು ಮತ್ತು ನನ್ನ ತಂಡದವರು ಕ್ಷಮೆ ಕೇಳುತ್ತೇವೆ ಎಂದು ಸಂದರ್ಶನವೊಂದರಲ್ಲಿ ನಾನಿ ಹೇಳಿದ್ದಾರೆ. ಇದನ್ನೂ ಓದಿ:ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ಗ್ಲ್ಯಾಮರಸ್ ಬೆಡಗಿ ಶರಣ್ಯ ಶೆಟ್ಟಿ

    ಸಿನಿಮಾ ಇವೆಂಟ್‌ನ ಹಿಂದೆ ಸಾಕಷ್ಟು ಜನರು ಕೆಲಸ ಮಾಡುತ್ತಾರೆ. ಈ ರೀತಿ ಆಗಬಾರದಿತ್ತು. ಹೀಗೆ ಮಾಡಿದ್ದು ಯಾರು ಅಂತ ತಿಳಿಯಲು ಪ್ರಯತ್ನಿಸಿದೆವು. ಆದರೆ ಆ ಕೆಲಸ ಮಾಡಿದವರು ಈಗಾಗಲೇ ಭಯಬಿದ್ದಿದ್ದರು. ನಾವು ಸುಮ್ಮನಾದೆವು. ಇಬ್ಬರ ಫೋಟೋ ಹಾಕಿ ಸಾಹಸ ಮಾಡಲು ಇದು ಗಾಸಿಪ್ ವೆಬ್‌ಸೈಟ್ ಅಲ್ಲ ಎಂದಿದ್ದಾರೆ ನಾನಿ ಮಾತನಾಡಿದ್ದಾರೆ.

    ನಾನಿ (Nani) ಚಿತ್ರದ ಪ್ರಮೋಷನ್‌ಗಾಗಿ ಪ್ರಿ ರಿಲೀಸ್ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ- ವಿಜಯ್ ದೇವರಕೊಂಡ ಮಾಲ್ಡೀವ್ಸ್ ಫೋಟೋವನ್ನ ತಮ್ಮ ಚಿತ್ರ ಪ್ರಚಾರಕ್ಕೆ ಬಳಸಿಕೊಂಡಿದ್ದರು. ವಿಜಯ್-ರಶ್ಮಿಕಾ ಮಾಲ್ಡೀವ್ಸ್‌ಗೆ ಜೊತೆಯಾಗಿ ಹೋಗಿರಲಿಲ್ಲ, ಆದರೆ ಫೋಟೋವನ್ನು ಬೇರೇ ಬೇರೇ ಸಮಯದಲ್ಲಿ ಇಬ್ಬರೂ ಹಂಚಿಕೊಂಡಿದ್ದರು. ಆದರೆ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎಂದೇ ಅಭಿಮಾನಿಗಳು ಊಹಿಸಿದ್ದರು.

    ಈಗ ಅದೇ ಫೋಟೋವನ್ನು ಬಳಸಿಕೊಂಡು ನಾನಿ ಟೀಮ್ ಗಿಮಿಕ್ ಮಾಡಿತ್ತು. ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಇಬ್ಬರ ಫೋಟೋ ಅಕ್ಕ-ಪಕ್ಕ ಇಟ್ಟು ಬಿತ್ತರ ಮಾಡಲಾಗಿತ್ತು. ಸಿನಿಮಾಗಾಗಿ ಬೇರೇ ಅವರ ವೈಯಕ್ತಿಕ ವಿಚಾರವನ್ನ ಬಳಕೆ ಮಾಡೋದು ಅದೆಷ್ಟರ ಮಟ್ಟಿಗೆ ಸರಿ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದರು. ನಾನಿ ಟೀಮ್, ರಶ್ಮಿಕಾ ಮತ್ತು ವಿಜಯ್‌ಗೆ ಕ್ಷಮೆ ಕೇಳಲೇಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದರು. ಹಾಗಾಗಿ ಇದೀಗ ನಟ ನಾನಿ ಈ ಕುರಿತು ಕ್ಷಮೆ ಕೇಳಿದ್ದಾರೆ.

  • ಆಲಿಯಾ ಜಾಗಕ್ಕೆ ರಶ್ಮಿಕಾ ಮಂದಣ್ಣ: ಜ್ಯೂ.ಎನ್‌ಟಿಆರ್‌ ಚಿತ್ರಕ್ಕೆ ನ್ಯಾಷನಲ್ ಕ್ರಶ್ ಫೈನಲ್

    ಆಲಿಯಾ ಜಾಗಕ್ಕೆ ರಶ್ಮಿಕಾ ಮಂದಣ್ಣ: ಜ್ಯೂ.ಎನ್‌ಟಿಆರ್‌ ಚಿತ್ರಕ್ಕೆ ನ್ಯಾಷನಲ್ ಕ್ರಶ್ ಫೈನಲ್

    `ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ ಕಾಣಸಿಕೊಳ್ಳಲು ಸಜ್ಜಾಗಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಆಲಿಯಾ ಭಟ್ ಬದಲು ರಶ್ಮಿಕಾ ಫೈನಲ್ ಆಗಿದ್ದಾರೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರ ಸೌಂಡ್ ಮಾಡಿದ ಮೇಲೆ ಜ್ಯೂ.ಎನ್‌ಟಿಆರ್ ಇದೀಗ ಹೊಸ ಚಿತ್ರದಲ್ಲಿ ನಟಿಸಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. `ಆರ್‌ಆರ್‌ಆರ್’ ಚಿತ್ರದ ಮೂಲಕ ಟಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದ ಬಿಟೌನ್ ಬ್ಯೂಟಿ ಆಲಿಯಾ ಭಟ್ ಕಾರಣಾಂತರಗಳಿಂದ ಜ್ಯೂ.ಎನ್‌ಟಿಆರ್ ಚಿತ್ರದಿಂದ ಹೊರನಡೆದಿದ್ದಾರೆ. ಇದನ್ನೂ ಓದಿ: ನಟ ಧನಂಜಯ್ ರಾಜಕೀಯ ಪ್ರವೇಶ: ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡೋಣ ಅಂದ ಡಾಲಿ

    ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ನಟನೆಯ ಹೊಸ ಚಿತ್ರಕ್ಕೆ `ಪುಷ್ಪ’ ಬ್ಯೂಟಿ ರಶ್ಮಿಕಾರನ್ನ ಫೈನಲ್ ಮಾಡಿದ್ದಾರೆ. ಈಗಾಗಲೇ `ಪುಷ್ಪ’ ಸಕ್ಸಸ್ ಅಲೆಯಲ್ಲಿ ತೆಲುತ್ತಿರೋ ಕೊಡಗಿನ ಕುವರಿಗೆ ಸೌತ್‌ನಿಂದ ನಾರ್ತ್‌ ಚಿತ್ರರಂಗದವರೆಗೂ ಡಿಮ್ಯಾಂಡ್ ಜಾಸ್ತಿಯಾಗಿದೆ. ಬಿಗ್‌ ಸ್ಟಾರ್‌ಗಳ ಜತೆಗೇನೆ  ತೆರೆಹಂಚಿಕೊಳ್ತಿದ್ದಾರೆ. ಯಂಗ್ ಟೈಗರ್ ಮತ್ತು ನ್ಯಾಷನಲ್ ಕ್ರಶ್ ಒಟ್ಟಿಗೆ ಸಿನಿಮಾ ಮಾಡ್ತಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ರಣ್‌ಬೀರ್ ಕಪೂರ್ ಜತೆಯಿರೋ ರಶ್ಮಿಕಾ ವಿಡಿಯೋ ವೈರಲ್

    ರಣ್‌ಬೀರ್ ಕಪೂರ್ ಜತೆಯಿರೋ ರಶ್ಮಿಕಾ ವಿಡಿಯೋ ವೈರಲ್

    ಶ್ಮಿಕಾ ಮಂದಣ್ಣ ಸದ್ಯ ಸಿನಿಚಿತ್ರರಂಗದ ಮೋಸ್ಟ್ ಬ್ಯುಸಿಯೇಸ್ಟ್ ನಟಿ, `ಪುಷ್ಪ’ ಸೂಪರ್ ಡೂಪರ್ ಸಕ್ಸಸ್ ನಂತರ ಸಾಲು ಸಾಲು ಅವಕಾಶಗಳ ಸುರಿಮಳೆಯೇ ಹರಿದು ಬರುತ್ತಿದೆ. ಸದ್ಯ ಬಾಲಿವುಡ್ ಹ್ಯಾಡ್‌ಸಮ್ ಹಂಕ್ ರಣ್‌ಬೀರ್ ಕಪೂರ್ ಜತೆ ರಶ್ಮಿಕಾ ಸಿನಿಮಾ ಮಾಡಲು ಮನಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ರಣ್‌ಬೀರ್ ಜತೆಯಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

    ಮದುವೆ ಆಗಿ ಹತ್ತೇ ದಿನಕ್ಕೆ ರಣ್‌ಬೀರ್ ಕಪೂರ್ ಒಪ್ಪಿಕೊಂಡಿರುವ ಸಿನಿಮಾಗಳತ್ತ ಮುಖ ಮಾಡಿದ್ದಾರೆ. `ಅನಿಮಲ್’ ಚಿತ್ರಕ್ಕಾಗಿ ರಣ್‌ಬೀರ್ ಮತ್ತು ರಶ್ಮಿಕಾ ಮನಾಲಿಗೆ ಬಂದಿಳಿದಿದ್ದಾರೆ. ಮನಾಲಿ ಸುಂದರ ತಾಣದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದ್ದು, ರಣ್‌ಬೀರ್ ಮತ್ತು ರಶ್ಮಿಕಾ ಸಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ರಣ್‌ಬೀರ್ ಬಿಳಿ ಬಣ್ಣದ ಕುರ್ತಾದಲ್ಲಿ ಕಾಣಸಿಕೊಂಡರೆ, ರಶ್ಮಿಕಾ ರೆಡ್ ಬಾರ್ಡರ್‌ನ ಬಾದಮಿ ಬಣ್ಣದ ಸೀರೆನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ `ಅನಿಮಲ್’ ಚಿತ್ರದಲ್ಲಿ ರಣ್‌ಬೀರ್ ಕಪೂರ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಡಿಫರೆಂಟ್ ಕಂಟೆಂಟ್‌ನಿಂದ ಮೋಡಿ ಮಾಡಲು ಈ ಜೋಡಿ ಸಜ್ಜಾಗಿದ್ದಾರೆ. ಏಪ್ರಿಲ್ 22ರಿಂದ `ಅನಿಮಲ್’ ಚಿತ್ರದ ಶೂಟಿಂಗ್ ಮನಾಲಿಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಸೋನು ಸೂದ್‌ಗೆ ವಿಲನ್ ಪಾತ್ರಗಳೇ ಬರುತ್ತಿಲ್ಲವಂತೆ

     

    View this post on Instagram

     

    A post shared by Instant Bollywood (@instantbollywood)

    ʻಸಂಜುʼ ಚಿತ್ರದ ಸೂಪರ್ ಸಕ್ಸಸ್ ನಂತರ ರಣ್‌ಬೀರ್ ನಟನೆಯ ಯಾವೊಂದು ಚಿತ್ರಗಳು ರಿಲೀಸ್ ಆಗಿಲ್ಲ. ಜತೆಗೆ `ಪುಷ್ಪ’ ಚಿತ್ರದ ನಂತರ ರಶ್ಮಿಕಾ ಸಿನಿಮಾಗಳ ಮೇಲೂ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ. ಇವರಿಬ್ಬರು ಈಗ ಒಟ್ಟಿಗೆ ಚಿತ್ರ ಮಾಡುತ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

  • ಸಿನಿಮಾ ಮುಹೂರ್ತದಲ್ಲೇ ನೆಚ್ಚಿನ ನಟನಿಗೆ ದೃಷ್ಟಿ ತಗೆದ ರಶ್ಮಿಕಾ ಮಂದಣ್ಣ

    ಸಿನಿಮಾ ಮುಹೂರ್ತದಲ್ಲೇ ನೆಚ್ಚಿನ ನಟನಿಗೆ ದೃಷ್ಟಿ ತಗೆದ ರಶ್ಮಿಕಾ ಮಂದಣ್ಣ

    ಲ್ಲಿ ನೋಡಿದರೂ ರಶ್ಮಿಕಾ ಮಂದಣ್ಣ ಮೇನಿಯಾ. ಸೌತ್ ಟು ನಾರ್ತ್ವರೆಗೂ ರಶ್ಮಿಕಾದೇ ಹವಾ. ಸೂಪರ್ ಸ್ಟಾರ್ ದಳಪತಿ ವಿಜಯ್‌ಗೆ ಜೋಡಿಯಾಗುವ ಮೂಲಕ ರಶ್ಮಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ದಳಪತಿ ವಿಜಯ್ ನಟನೆಯ 66ನೇ ಚಿತ್ರಕ್ಕೆ ಕನ್ನಡತಿ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಫಸ್ಟ್ ಟೈಮ್ ದಳಪತಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ರಶ್ಮಿಕಾ ಕೂಡ ದಳಪತಿ ವಿಜಯ್ ಅವರ ಅಭಿಮಾನಿಯಾಗಿದ್ದು, ಇದೇ ಖುಷಿಯಲ್ಲಿ ಹೊಸ ಚಿತ್ರದ ಮುಹೂರ್ತದ ವೇಳೆ ರಶ್ಮಿಕಾ ಖುಷಿ ಖುಷಿಯಾಗಿ ಲಟಿಕೆ ಮುರಿದು ವಿಜಯ್‌ಗೆ ದೃಷ್ಠಿ ತೆಗೆದಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    `ಪುಷ್ಪ’ ಸಕ್ಸಸ್ ನಂತರ ಡೈರೆಕ್ಟರ್ ವಂಶಿ ಪಡಿಪಲ್ಲಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದಳಪತಿ ವಿಜಯ್ ನಟನೆಯ ೬೬ನೇ ಚಿತ್ರ ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ. ವಿಜಯ್ ಮತ್ತು ರಶ್ಮಿಕಾ ಕಾಂಬಿನೇಷನ್‌ನ ಚಿತ್ರ ಗ್ರ್ಯಾಂಡ್ ಮುಹೂರ್ತ ನೆರೆವೇರಿದೆ. ವಿಜಯ್ ನಟನೆಯ `ಬಿಗಿಲ್’, `ಸರ್ಕಾರ್’ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಹಿಟ್ ಆಗಿದೆ. ಈಗ ನಿರ್ದೇಶಕ ವಂಶಿ ಪಡಿಪಲ್ಲಿ ವಿಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನು ಓದಿ:ಜಗ್ಗೇಶ್ ಜೊತೆ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ‘ರಾಘವೇಂದ್ರ ಸ್ಟೋರ್’

    ವಿಭಿನ್ನ ಕಟೆಂಟ್ ಮೂಲಕ ಬರುತ್ತಿರೋ ದಳಪತಿ ವಿಜಯ್ ಮತ್ತು `ಪುಷ್ಪ’ ಕ್ವೀನ್ ನಯಾ ಜೋಡಿಯನ್ನು ತೆರೆಯ ಮೇಲೆ ನೋಡಲು ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಒಟ್ಟಿನಲ್ಲಿ ವೈರಲ್ ಆಗ್ತಿರೋ ಫೋಟೋಸ್ ಜೊತೆ ನೆಚ್ಚಿನ ನಟಿಯ ಖುಷಿ, ಯಶಸ್ಸು ನೋಡಿ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

  • ಪುಷ್ಪ-2ನಲ್ಲೂ ಸಮಂತಾ- ಆದ್ರೆ ಐಟಂ ಸಾಂಗ್‌ನಲ್ಲಿ ಅಲ್ಲ?

    ಪುಷ್ಪ-2ನಲ್ಲೂ ಸಮಂತಾ- ಆದ್ರೆ ಐಟಂ ಸಾಂಗ್‌ನಲ್ಲಿ ಅಲ್ಲ?

    ಸೌತ್‌ನ ಆಪಲ್ ಬ್ಯೂಟಿ ಸಮಂತಾ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. `ಪುಷ್ಪ’ ಸಿನಿಮಾದ `ಹೂಂ ಅಂತೀಯಾ ಮಾವ’ ಅಂತಾ ಐಕಾನ್ ಸ್ಟಾರ್ ಜೊತೆ ಸ್ಟೆಪ್ ಹಾಕಿದ್ದೇ ಹಾಕಿದ್ದು. ಈ ಸಾಂಗ್ ಅವರನ್ನು ಮತ್ತೊಂದು ಲೆವೆಲ್‌ಗೆ ತಂದು ನಿಲ್ಲಿಸಿದೆ.

    `ಪುಷ್ಪ’ ಬಿಗ್ ಬ್ರೇಕ್‌ನ ನಂತರ ಸಾಲು ಸಾಲು ಸಿನಿಮಾಗಳು ಸ್ಯಾಮ್‌ರನ್ನ ಅರಸಿ ಬರುತ್ತಿದೆ. ಇದರ ಮಧ್ಯೆ ಪುಷ್ಪ ಚಿತ್ರದಲ್ಲಿ ಕಾಣಿಸಿಕೊಂಡಿರೋ ಹಾಗೇ `ಪುಷ್ಪ’ ಪಾರ್ಟ್-2ನಲ್ಲೂ ಸಮಂತಾ ಕಾಣಿಸಿಕೊಳ್ತಾರಾ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇದನ್ನು ಓದಿ: 20ಕ್ಕೂ ಹೆಚ್ಚು ಕೆಜಿ ತೂಕದ ಕಾಸ್ಟ್ಯೂಮ್‌ ಹಾಕಿಕೊಂಡು ಶೂಟ್ ಮಾಡಿದ್ದು ಕಷ್ಟವಾಗಿತ್ತು ಎಂದ ಮುನ್ನಾಭಾಯಿ

    ಸುಕುಮಾರ್, ಅಲ್ಲು ಅರ್ಜುನ್ ಕಾಂಬಿನೇಷನ್‌ನ `ಪುಷ್ಪ’ ಪಾರ್ಟ್-2ನಲ್ಲಿ ಸಮಂತಾ ಕಾಣಿಸಿಕೊಳ್ತಿದ್ದಾರೆ. ಆದರೆ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕೋದರ ಬದಲು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ತಿದ್ದಾರೆ. ಅಲ್ಲು ಅರ್ಜುನ್ ಪಾತ್ರಕ್ಕೆ ಟರ್ನಿಂಗ್ ಪಾಯಿಂಟ್ ತರುವಂತಹ ಪ್ರಮುಖ ಪಾತ್ರಕ್ಕೆ ಸಮಂತಾ ಜೀವತುಂಬ್ತಿದ್ದಾರೆ. `ಪುಷ್ಪ’ ಚಿತ್ರದಲ್ಲಿ ಸಮಂತಾ ಜಬರ್‌ದಸ್ತ್ ಪರ್ಫಾಮೆನ್ಸ್ ನೋಡಿರೋ ನಿರ್ದೇಶಕ ಸುಕುಮಾರ್ ಪಾರ್ಟ್-2ನಲ್ಲಿ ಸಮಂತಾಗೆಂದೇ ಸ್ಪೆಷಲ್ ಪಾತ್ರವನ್ನು ಸೃಷ್ಟಿಸಿದ್ದಾರೆ.

    `ಹೂಂ ಅಂತೀಯಾ ಮಾವ’ ಅಂತಾ ಸಿನಿರಸಿಕರ ಮನಗೆದ್ದ ಸಮಂತಾ, `ಪುಷ್ಪ’ ಪಾರ್ಟ್-2ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾಗೆ ಸಾಥ್ ಕೊಡ್ತಿದ್ದಾರೆ. ಪುಷ್ಪ ಚಿತ್ರ ನೋಡಿ ಫಿದಾ ಆಗಿರೋ ಅಭಿಮಾನಿಗಳು ಪಾರ್ಟ್-2ನಲ್ಲೂ ಆಪಲ್ ಬ್ಯೂಟಿ ಸಮಂತಾರ ನಟನೆ ನೋಡಿ ಕಣ್ತುಂಬಿಕೊಳ್ಳಬಹುದು.

  • ರಶ್ಮಿಕಾ ಜೊತೆಗಿನ ಮದುವೆ ಗಾಸಿಪ್‍ಗೆ ಬ್ರೇಕ್ ಹಾಕಿದ ವಿಜಯ್‍ ದೇವರಕೊಂಡ

    ರಶ್ಮಿಕಾ ಜೊತೆಗಿನ ಮದುವೆ ಗಾಸಿಪ್‍ಗೆ ಬ್ರೇಕ್ ಹಾಕಿದ ವಿಜಯ್‍ ದೇವರಕೊಂಡ

    ಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಹೆಸರು ಮಾಡುತ್ತಿದ್ದಾರೆ. ಇಬ್ಬರು ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ಪ್ರೇಕ್ಷಕರು ಇವರಿಬ್ಬರ ಆನ್‍ಸ್ಕ್ರೀನ್ ಕೆಮಿಸ್ಟ್ರಿಯನ್ನು ಬಹಳ ಇಷ್ಟಪಡುತ್ತಾರೆ. ಅಲ್ಲದೇ ಆಫ್ ಸ್ಕ್ರೀನ್‍ನಲ್ಲಿಯೂ ಇವರಿಬ್ಬರ ಮಧ್ಯೆ ಕೆಮಿಸ್ಟ್ರಿ ಚೆನ್ನಾಗಿದೆ. ಕೆಲ ದಿನಗಳ ಹಿಂದಷ್ಟೇ ಇವರ ಮದುವೆ ಬಗ್ಗೆ ವದಂತಿ ಹಬ್ಬಿತ್ತು. ಈ ವರ್ಷದ ಕೊನೆಯಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಊಹಾಫೋಹಗಳು ಹರಿದಾಡುತ್ತಿತ್ತು. ಆದರೆ ಈ ಎಲ್ಲಾ ಗಾಸಿಪ್‍ಗಳನ್ನು ವಿಜಯ್ ದೇವರಕೊಂಡ ಅಂತಹ ವಂದತಿಗಳು ಅ

    ಹೌದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿಗೆ, ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್‌ನಲ್ಲಿ ಅಂತಹ ವಂದತಿಗಳು ಅರ್ಥವಿಲ್ಲದ್ದು ಅಥವಾ ಅಸಂಬದ್ಧ ಎಂದು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ

    ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಗೀತಾಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಎಂಬ ಎರಡು ಹಿಟ್ ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಈ ಎರಡು ಸಿನಿಮಾಗಳು ರಶ್ಮಿಕಾ ಹಾಗೂ ವಿಜಯ್‍ಗೆ ಬಿಗ್ ಸಕ್ಸಸ್ ತಂದು ಕೊಟ್ಟಿತು. ಜೊತೆಗೆ ಈ ಜೋಡಿ ಆನ್‍ಸ್ಕ್ರೀನ್ ಕೆಮಿಸ್ಟ್ರಿಗೆ ಪ್ರೇಕ್ಷಕರು ಕೂಡ ಫಿದಾ ಆಗಿದ್ದರು. ಅಲ್ಲದೇ ವಿಜಯ್ ಮತ್ತು ರಶ್ಮಿಕಾ ಆಗಾಗ ಒಟ್ಟಿಗೆ ಜೊತೆ, ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಈ ಬಾರಿ ಹೊಸ ವರ್ಷವನ್ನು ಒಟ್ಟಿಗೆ ಗೋವಾದಲ್ಲಿ ಆಚರಿಸಿದ್ದರು. ಅಲ್ಲದೇ, ಮುಂಬೈನ ಹೋಟೆಲ್‍ನಲ್ಲಿ ತಡರಾತ್ರಿ ಒಟ್ಟಾಗಿ ಊಟ ಮಾಡಿದ ಫೋಟೋಗಳು ಮತ್ತು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದವು.

    ಸದ್ಯ ವಿಜಯ್ ದೇವರಕೊಂಡ ಆ್ಯಕ್ಷನ್-ಥ್ರಿಲ್ಲರ್ ಲೈಗರ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದಲ್ಲಿ ಎಂಎಂಎ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ವಿಜಯ್‍ಗೆ ಜೋಡಿಯಾಗಿ ಅನನ್ಯ ಪಾಂಡೆ ಕಾಣಿಸಿಕೊಂಡಿದ್ದು, ಮಾಜಿ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಮತ್ತೊಂದೆಡೆ ರಶ್ಮಿಕಾ ಮಂದಣ್ಣ ನಟ ಅಲ್ಲು ಅರ್ಜುನ್ ಜೊತೆಗೆ ಅಭಿನಯಸಿದ್ದ ಪುಷ್ಪ ಸಿನಿಮಾದಲ್ಲಿ ಸಕ್ಸಸ್ ಅಲೆಯಲ್ಲಿದ್ದಾರೆ. ಇದನ್ನೂ ಓದಿ : ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive


    Rashmika, Vijaydevarakonda, Tollywood, Hyderabad

  • ಜಿಮ್‍ನಲ್ಲಿ ಮತ್ತೆ ವಿಜಯ್ ಜೊತೆ ಕಾಣಿಸಿಕೊಂಡ ರಶ್ಮಿಕಾ

    ಜಿಮ್‍ನಲ್ಲಿ ಮತ್ತೆ ವಿಜಯ್ ಜೊತೆ ಕಾಣಿಸಿಕೊಂಡ ರಶ್ಮಿಕಾ

    ಹೈದರಾಬಾದ್: ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಜಿಮ್‍ವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ನಂತರ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಅವರು ನಟಿಸಿದ ಸಿನಿಮಾಗಳೆಲ್ಲವೂ ಸಕ್ಸಸ್ ಕಂಡಿತು. ಸದ್ಯ ಟಾಲಿವುಡ್ ಹಾಗೂ ಬಾಲಿವುಡ್‍ನ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದೀಗ ಸಿನಿಮಾಗಳಿಗಾಗಿ ಹೈದರಾಬಾದ್‍ನಲ್ಲಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಬರ್ತ್‍ಡೇಗೆ ರಶ್ಮಿಕಾ ವಿಶ್ – ಫೋಟೋ ವೈರಲ್

    ಮತ್ತೊಂದೆಡೆ ವಿಜಯ್ ದೇವರಕೊಂಡ ಕೂಡ ಲೈಗರ್ ಸಿನಿಮಾದಲ್ಲಿ ನಿರತರಾಗಿದ್ದು, ಈ ಚಿತ್ರದ ಚಿತ್ರೀಕರಣಕ್ಕಾಗಿ ಕೆಲವು ದಿನಗಳ ಹಿಂದೆ ಮುಂಬೈಗೆ ಹಾರಿದ್ದರು. ಅಲ್ಲದೇ ರಶ್ಮಿಕಾ ಕೂಡ ಮುಂಬೈನಲ್ಲಿ ಬಾಲಿವುಡ್‍ನ ಗುಡ್ ಬೈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಹೀಗೆ ಇಬ್ಬರು ಮುಂಬೈನಲ್ಲಿದ್ದಾಗ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ರಶ್ಮಿಕಾ ಹಾಗೂ ವಿಜಯ್ ಹೈದರಾಬಾದ್‍ನ ಜಿಮ್‍ವೊಂದರಲ್ಲಿ ಕಾಣಿಸಿಕೊಂಡಿದ್ದು, ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ. ಸದ್ಯ ಜಿಮ್‍ನಲ್ಲಿ ಇವರಿಬ್ಬರು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಕುಲದೀಪ್ಸೆತಿ ಎಂಬವರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಫೋಟೋ ಫುಲ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ದೇವರಕೊಂಡ ಜೊತೆಗಿರುವ ಫೇವರಿಟ್ ಫೋಟೋ ಶೇರ್ ಮಾಡಿದ ರಶ್ಮಿಕಾ

     

    View this post on Instagram

     

    A post shared by Kuldep Sethi (@kuldepsethi)

    ಈ ಹಿಂದೆ ಗೀತಾ ಗೋವಿಂದಂ ಸಿನಿಮಾದ ಮೂಲಕ ಫೇಮಸ್ ಆಗಿದ್ದ ಈ ಜೋಡಿ ಮಧ್ಯೆ ಲವ್ವಿ-ಡವ್ವಿ ಶುರುವಾಗಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆದರೆ ನಾವಿಬ್ಬರು ಗುಡ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಇಬ್ಬರು ಗಾಸಿಪ್‍ಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ಇವರಿಬ್ಬರು ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಇವರಿಬ್ಬರ ಮಧ್ಯೆ ಏನಾದರೂ ನಡೆಯುತ್ತಿದ್ಯಾ ಎಂದು ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ.