Tag: ರಶೀದ್ ಲತೀಫ್

  • ಡ್ರೆಸ್ಸಿಂಗ್‌ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ್ಕೆ ಕ್ಯಾಪ್ಟನ್ಸಿಯಿಂದ ರಿಜ್ವಾನ್‌ ಔಟ್‌!

    ಡ್ರೆಸ್ಸಿಂಗ್‌ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ್ಕೆ ಕ್ಯಾಪ್ಟನ್ಸಿಯಿಂದ ರಿಜ್ವಾನ್‌ ಔಟ್‌!

    – ಪಿಸಿಬಿ ವಿರುದ್ಧ ಮಾಜಿ ಕ್ರಿಕೆಟಿಗ ರಶೀದ್‌ ಲತೀಫ್‌ ಕಿಡಿ

    ಇಸ್ಲಾಮಾಬಾದ್‌: ಡ್ರೆಸ್ಸಿಂಗ್‌ ರೂಮಿನಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಿದ್ದಕ್ಕೆ ಮೊಹಮ್ಮದ್‌ ರಿಜ್ವಾನ್ (Mohammad Rizwan) ಅವರನ್ನು ನಾಯಕ ಪಟ್ಟದಿಂದ ಇಳಿಸಲಾಗಿದೆ ಎಂದು ಪಾಕಿಸ್ತಾನ (Pakistan) ತಂಡದ ಮಾಜಿ ಆಟಗಾರ ರಶೀದ್‌ ಲತೀಫ್‌ (Rashid Latif) ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ರಿಜ್ವಾನ್ ಅವರ ಜಾಗಕ್ಕೆ ಶಾಹೀನ್ ಶಾ ಅಫ್ರಿದಿಯನ್ನು ನೇಮಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಮೊಹಮ್ಮದ್ ರಿಜ್ವಾನ್ ಪ್ಯಾಲೆಸ್ಟೈನ್ ಪರವಾಗಿ ಬಹಿರಂಗವಾಗಿ ಮಾತನಾಡಿದ್ದರು. ಈ ಕಾರಣಕ್ಕೆ ಅವರನ್ನು ನಾಯಕ ಸ್ಥಾನದಿಂದ ತೆಗೆಯಲಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ:  ರಿಜ್ವಾನ್‌ಗೆ ಸ್ಲೆಡ್ಜಿಂಗ್ – ನಮಾಜ್‌, ಜೈ ಶ್ರೀರಾಮ್‌ ಫುಲ್‌ ಟ್ರೆಂಡ್!‌

    ಕೋಚ್‌ ಮೈಕ್ ಹೆಸ್ಸನ್ ಅವರು ರಿಜ್ವಾನ್ ಅವರ ಡ್ರೆಸ್ಸಿಂಗ್‌ ರೂಮ್‌ ಸಂಸ್ಕೃತಿಯನ್ನು ಇಷ್ಟಪಡುತ್ತಿಲ್ಲ. ಇಸ್ಲಾಮಿಕ್ ದೇಶದಲ್ಲಿ ಇಸ್ಲಾಮಿಕ್ ಅಲ್ಲದ ನಾಯಕ ಬರಬೇಕು ಎಂಬ ಮನಸ್ಥಿತಿಯನ್ನು ಪಿಸಿಬಿ ಹೊಂದಿದೆ. ಪ್ಯಾಲೆಸ್ಟೈನ್ ಧ್ವಜವನ್ನು ಬಹಿರಂಗವಾಗಿ ಪ್ರದರ್ಶನ ಮಾಡಿದ್ದಕ್ಕೆ ಅವರನ್ನು ತೆಗೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕ್‌ ಕಳಪೆ ಪ್ರದರ್ಶನ ನೀಡಿದ್ದಕ್ಕೆ ರಿಜ್ವಾನ್ ಅವರನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ಇಳಿಸಿ ಶಾಹೀನ್ ಶಾ ಅಫ್ರಿದಿ ಅವರನ್ನು ಆಯ್ಕೆ ಮಾಡಲಾಗಿದೆ.  ಇದನ್ನೂ ಓದಿ:  ಮೈದಾನದಲ್ಲಿ ನಮಾಜ್‌ – ರಿಜ್ವಾನ್‌ ವಿರುದ್ಧ ದೂರು ದಾಖಲು

    ಮೊಹಮ್ಮದ್‌ ರಿಜ್ವಾನ್ ಇಸ್ಲಾಂ ಮೌಲ್ಯಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟಿಗ ಇಮಾಮ್ ಉಲ್ ಹಕ್ ಈ ಹಿಂದೆ ಹೇಳಿದ್ದರು. ಯಾವುದೇ ಹೋಟೆಲ್‌ಗೆ ಹೋದಾಗ ರಿಜ್ವಾನ್ ಮೊದಲು ನಮಾಜ್‌ ಕೊಠಡಿಯನ್ನು ಹುಡುಕುತ್ತಾರೆ. ನಮಾಜ್‌ ಮಾಡಲು ಕೋಣೆಯಲ್ಲಿ ಬಿಳಿ ಬಟ್ಟೆಯನ್ನು ಹಾಸುತ್ತಾರೆ. ಮುಸ್ಲಿಮೇತರರು ಕೋಣೆ ಪ್ರವೇಶಕ್ಕೆ ನಿರ್ಬಂಧ ಹೇರುತ್ತಾರೆ. ನಮಾಜ್ ಸಮಯಕ್ಕಾಗಿ ವಾಟ್ಸಪ್ ಗ್ರೂಪ್‌ ರಚನೆ ಮಾಡುತ್ತಾರೆ ಎಂದು ತಿಳಿಸಿದ್ದರು.

  • ಭಾರತಕ್ಕೂ ಮೊದಲೇ ಚಾಂಪಿಯನ್ಸ್‌ ಟ್ರೋಫಿ ಬಾಯ್ಕಾಟ್‌ ಮಾಡ್ಬೇಕು – ಪಾಕ್ ಹೊಸ ಕ್ಯಾತೆ

    ಭಾರತಕ್ಕೂ ಮೊದಲೇ ಚಾಂಪಿಯನ್ಸ್‌ ಟ್ರೋಫಿ ಬಾಯ್ಕಾಟ್‌ ಮಾಡ್ಬೇಕು – ಪಾಕ್ ಹೊಸ ಕ್ಯಾತೆ

    ಇಸ್ಲಾಮಾಬಾದ್‌: ತೀವ್ರ ಕುತೂಹಲ ಮೂಡಿಸಿರುವ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರಿಕೆಟ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಒಮ್ಮತದ ನಿರ್ಣಯ ಕೈಗೊಂಡಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಟ್ರೋಫಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುವುದಕ್ಕೆ ಐಸಿಸಿ ಅನುಮತಿ ನೀಡಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಮಾಜಿ ಕೋಚ್‌ ರಶೀದ್ ಲತೀಫ್ (Rashid Latif) ಹೊಸ ಕ್ಯಾತೆ ತೆಗೆದಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲತೀಫ್‌, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಮುಂದಿನ ಹೆಜ್ಜೆ ಇಡುವ ಮೊದಲು ಪಾಕಿಸ್ತಾನ ಚಾಂಪಿಯನ್ಸ್‌ ಟ್ರೋಫಿಯನ್ನ ಬಾಯ್ಕಾಟ್‌ ಮಾಡಬೇಕು. ಇನ್ಮುಂದೆ ಚಾಂಪಿಯನ್‌ ಟ್ರೋಫಿ ನಡೆಯಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಸಿ ಅಂಗಳ ತಲುಪಿದ ಸಿರಾಜ್‌ vs ಹೆಡ್‌ ವಾಗ್ವಾದ – ಇಬ್ಬರಿಗೂ ಬ್ಯಾನ್‌ ಭೀತಿ?

    ಚಾಂಪಿಯನ್ಸ್‌ ಟ್ರೋಫಿ ಪೂರ್ಣ ಪಂದ್ಯಗಳು ಪಾಕಿಸ್ತಾನದಲ್ಲಿ (Pakistan) ನಡೆಯಬೇಕಿತ್ತು. ಆದ್ರೆ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ, ಭಾರತ ತನ್ನ ಪಂದ್ಯಗಳನ್ನಾಡಲು ನಿರಾಕರಿಸಿದೆ. ಐಸಿಸಿ ಹೈಬ್ರಿಡ್‌ ಮಾದರಿಗೆ ಒಪ್ಪಿಗೆ ಸೂಚಿಸಿದ್ದರೂ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮ್ಮನ್ನು ಯಾವಾಗಲೂ ಬಲಿಪಶುಗಳಾಗಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂದು ಹ್ಯಾಟ್ರಿಕ್‌ ಶಾಕ್‌ – ಸತತ 2ನೇ ಬಾರಿಗೆ ಬಾಂಗ್ಲಾಗೆ U19 ಏಷ್ಯಾಕಪ್‌ ಕಿರೀಟ

    ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (PCB), ಅಫ್ಘಾನಿಸ್ತಾನ ಕ್ರಿಕೆಟ್‌ ಬೋರ್ಡ್‌ (ACB) ಆಗಿರಲಿ ಅಥವಾ ಐಸಿಸಿ ಆಗಿರಲಿ, ಬಿಸಿಸಿಐ ಎದುರು ಫೈಟ್‌ ಮಾಡೋಕೆ ಸಾಧ್ಯವಿಲ್ಲ. ಭಾರತ ಬಹಿಷ್ಕರಿಸಿದ್ರೆ, ನಾವು ಎಲ್ಲಿಗೆ ಹೋಗಿ ನಿಲ್ಲಬೇಕಾಗುತ್ತೆ ಅನ್ನೋ ಭಯ ಇದೆ. ಅದಕ್ಕಾಗಿ ಪಾಕಿಸ್ತಾನವನ್ನು ಬಲಿಪಶುಗಳಾಗಿ ಮಾಡ್ತಾರೆ. ಆದ್ದರಿಂದ ಬಿಸಿಸಿಐ ಮುಂದಿನ ನಡೆದ ತೆಗೆದುಕೊಳ್ಳುವ ಮೊದಲು ಪಾಕಿಸ್ತಾನ ಟೂರ್ನಿಯನ್ನ ಬಹಿಷ್ಕರಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಹೀನಾಯ ಸೋಲು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ, ಫೈನಲ್‌ ಹಾದಿ ಕಠಿಣ

    2025ರ ಫೆಬ್ರವರಿ- ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟವಾಗಲಿದೆ. ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ತಾನು ಹೈಬ್ರಿಡ್ ಮಾದರಿಗೆ ಸುತಾರಾಂ ಒಪ್ಪುವುದಿಲ್ಲ ಎಂದು ಕಳೆದ ವಾರ ಹಠ ಹಿಡಿದಿದ್ದ ಪಾಕಿಸ್ತಾನ, ಬಹಿಷ್ಕಾರದ ಬೆದರಿಕೆ ಹಿಂಪಡೆದು, ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡಿರುವುದಲ್ಲದೆ, ಈ ವ್ಯವಸ್ಥೆ 2031ರವರೆಗೂ ಮುಂದುವರಿಯಬೇಕು ಎಂದು ಆಗ್ರಹಿಸಿತ್ತು. ಅಲ್ಲದೇ ಫೈನಲ್‌ ಪಂದ್ಯ ಲಾಹೋರ್‌ನಲ್ಲೇ ನಡೆಯಬೇಕು ಎಂದು ಷರತ್ತು ವಿಧಿಸಿದೆ. ಸದ್ಯಕ್ಕೆ ಐಸಿಸಿ ತನ್ನ ಟೂರ್ನಿಗಳನ್ನು ಹೈಬ್ರಿಡ್ ಮಾದರಿಯಲ್ಲಿ 2027ರ ವರೆಗೆ ನಡೆಸಲು ಒಪ್ಪಿಕೊಂಡಿದೆ. ಆದ್ರೆ ಫೈನಲ್‌ ಪಂದ್ಯವನ್ನು ಲಾಹೋರ್‌ನಲ್ಲೇ ನಡೆಸುವ ಬಗ್ಗೆ ಒಪ್ಪಿಗೆ ಸೂಚಿಸಿಲ್ಲ.

  • ಧೋನಿ ಹಿಡಿದ ಕ್ಯಾಚ್‍ಗಳಿಗಿಂತ ಬಿಟ್ಟ ಕ್ಯಾಚ್‍ಗಳು ಮಹತ್ವದ್ದಾಗಿತ್ತು: ಪಾಕ್ ಆಟಗಾರ ರಶೀದ್ ಲತೀಫ್ ಟೀಕೆ

    ಧೋನಿ ಹಿಡಿದ ಕ್ಯಾಚ್‍ಗಳಿಗಿಂತ ಬಿಟ್ಟ ಕ್ಯಾಚ್‍ಗಳು ಮಹತ್ವದ್ದಾಗಿತ್ತು: ಪಾಕ್ ಆಟಗಾರ ರಶೀದ್ ಲತೀಫ್ ಟೀಕೆ

    ಇಸ್ಲಾಮಾಬಾದ್: ಭಾರತ ಕಂಡ ಲೆಜೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಮಹೇಂದ್ರ ಸಿಂಗ್ ಧೋನಿ ಕೀಪಿಂಗ್‍ನಲ್ಲಿ ಬಿಟ್ಟ ಕ್ಯಾಚ್‍ಗಳು ಹಿಡಿದ ಕ್ಯಾಚ್‍ಗಳಿಗಿಂತ ಹೆಚ್ಚು ಮಹತ್ವದಾಗಿತ್ತು ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಶೀದ್ ಲತೀಫ್ ಟೀಕೆ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯ ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡಿದ ರಶೀದ್ ಲತೀಫ್, ಧೋನಿ ಕೀಪಿಂಗ್‍ನಲ್ಲಿ ಹಿಡಿದ ಕ್ಯಾಚ್‍ಗಿಂತ ಬಿಟ್ಟಂತಹ ಶೇ.21ರಷ್ಟು ಕ್ಯಾಚ್‍ಗಳು ಹೆಚ್ಚು ಮಹತ್ವದಾಗಿತ್ತು. ಧೋನಿ ಹಿಡಿದ ಕ್ಯಾಚ್, ಸ್ಟಂಪ್‍ಔಟ್ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಯಾರು ಕೂಡ ಅವರು ಬಿಟ್ಟ ಕ್ಯಾಚ್‍ಗಳ ಬಗ್ಗೆ ಮಾತನಾಡಲಿಲ್ಲ. ನನ್ನ ಪ್ರಕಾರ ಕ್ವಿಂಟನ್ ಡಿಕಾಕ್ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಎಂದಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

    ಧೋನಿ 2020ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುವ ಮುನ್ನ ಟೆಸ್ಟ್ ಕ್ರಿಕೆಟ್‍ನಲ್ಲಿ 256 ಕ್ಯಾಚ್, 38 ಸ್ಟಂಪ್, ಏಕದಿನ ಕ್ರಿಕೆಟ್‍ನಲ್ಲಿ 321 ಕ್ಯಾಚ್, 123 ಸ್ಟಂಪ್‍ಔಟ್ ಮಾಡಿದ್ದಾರೆ. ಜೊತೆಗೆ ಟಿ20 ಕ್ರಿಕೆಟ್‍ನಲ್ಲಿ 57 ಕ್ಯಾಚ್, 34 ಸ್ಟಂಪ್‍ಔಟ್ ಮಾಡಿದ್ದಾರೆ. ಸದ್ಯ ಧೋನಿ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಇದನ್ನೂ ಓದಿ: ನಿಮ್ಮದು ಅದ್ಭುತ ಸಾಧನೆ – ಪಿ.ವಿ ಸಿಂಧುರನ್ನ ಹೊಗಳಿದ ಆಸ್ಟ್ರೇಲಿಯಾ ಸ್ಟಾರ್ ಡೇವಿಡ್ ವಾರ್ನರ್

    MS DHONI (2)

    ಇದೀಗ ಲತೀಫ್ ಮಾತಿನಿಂದಾಗಿ ಧೋನಿ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಧೋನಿ ಕುರಿತಾಗಿ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದು ತಿರುಗಿ ಬಿದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ – ಪಿಸಿಬಿಗೆ ಮಾಜಿ ಕ್ರಿಕೆಟಿಗ ಸಲಹೆ

    ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ – ಪಿಸಿಬಿಗೆ ಮಾಜಿ ಕ್ರಿಕೆಟಿಗ ಸಲಹೆ

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಆಟಗಾರರು ತಮ್ಮ ನಿಜವಾದ ವಯಸ್ಸನ್ನು ಬಹಿರಂಗ ಪಡಿಸಬೇಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಪಾಕ್ ಕ್ರಿಕೆಟ್ ಬೋರ್ಡಿಗೆ ಸಲಹೆ ನೀಡಿದ್ದಾರೆ.

    ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಟಗಾರ ನಸೀಮ್ ಶಾ ಅಂತರ್ ರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ನಸೀಮ್ ಶಾಗೆ ಕೇವಲ 16 ವರ್ಷ ವಯಸ್ಸು ಎಂದು ಪಿಸಿಬಿ ಅಧಿಕೃತವಾಗಿ ಹೇಳಿತ್ತು. ಸದ್ಯ ಈತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾನೆ. ಈ ಕುರಿತು ವ್ಯಂಗ್ಯವಾಡಿರುವ ಪಾಕ್ ಮಾಜಿ ನಾಯಕ ರಶೀದ್ ಲತೀಫ್ ಪಿಸಿಬಿಗೆ ಸಲಹೆ ನೀಡಿ, ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ ಎಂದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಲತೀಫ್, ಪಾಕ್ ಆಟಗಾರರು ಅಂಡರ್-19 ತಂಡದಲ್ಲಿ ಆಡುತ್ತಾರೆ. ಅಂಡರ್-19 ಆಡುವವರು ಅಂಡರ್-16 ತಂಡದ ಪರ ಆಡುತ್ತಾರೆ. ಅಂಡರ್-16 ಹುಡುಗರು ಅಂಡರ್-13ರಲ್ಲಿ ಇರುತ್ತಾರೆ. ಅಂಡರ್-13 ಆಡುವ ಮಕ್ಕಳು ತಾಯಿಯ ಮಡಿಲಲ್ಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ಇದು ಇದೆಲ್ಲವೂ ಒಂದು ಪ್ರಹಸನವಾಗಿ ಬದಲಾಗಿದ್ದು, ನಿಮ್ಮನ್ನು ನೀವು ನಗೆಪಾಟಲೀಗಿಡು ಮಾಡಿಕೊಳ್ಳಬೇಡಿ. ಪಿಸಿಬಿ ಇದರ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಈ ಹಿಂದೆಯೂ ಪಾಕ್ ಕ್ರಿಕೆಟ್ ಆಟಗಾರರು ತಮ್ಮ ವಯಸ್ಸಿನ ತಪ್ಪು ಮಾಹಿತಿ ನೀಡಿಯೇ ಹಲವು ಬಾರಿ ಚರ್ಚೆಗೆ ಕಾರಣರಾಗಿದ್ದು, ಪಾಕ್ ಮಾಜಿ ಆಟಗಾರ ಅಫ್ರಿದಿ ವಯಸ್ಸಿನ ಬಗ್ಗೆಯೂ ಸುಳ್ಳು ಹೇಳಿದ್ದರು. 1996ರಲ್ಲಿ 36 ಎಸೆತಗಳಲ್ಲಿ ಶತಕ ಸಿಡಿಸಿದ್ದ ಆಫ್ರಿದಿಗೆ ಕೇವಲ 16 ವರ್ಷ ಎನ್ನಲಾಗಿತ್ತು. ವೃತ್ತಿ ಜೀವನದೂದ್ದಕ್ಕೂ ಈ ಕುರಿತು ಚರ್ಚೆಯಾದರೂ ಅಫ್ರಿದಿ ಮಾತ್ರ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ ನಿವೃತ್ತಿಯ ಬಳಿಕ ಈ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದ ಅಫ್ರಿದಿ, ಆ ವೇಳಗೆ ತಮಗೆ 21 ವರ್ಷ ವಯಸ್ಸಾಗಿತ್ತು ಎಂದಿದ್ದರು. ಸದ್ಯ ನಸೀಮ್ ಶಾನನ್ನು ಅಂಡರ್-19 ತಂಡಕ್ಕೆ ಆಯ್ಕೆ ಮಾಡಿರುವ ಬಗ್ಗೆ ಪಾಕ್‍ನ ಹಲವು ಮಾಜಿ ಕ್ರಿಕೆಟ್ ಆಟಗಾರರು ಕಿಡಿಕಾರಿದ್ದಾರೆ.