Tag: ರವೆ ದೋಸೆ

  • ದಿಢೀರ್ ಎಂದು ಮಾಡಿ ‘ರವೆ ದೋಸೆ’

    ದಿಢೀರ್ ಎಂದು ಮಾಡಿ ‘ರವೆ ದೋಸೆ’

    ಬೆಳಗ್ಗೆ ಎದ್ದ ತಕ್ಷಣ ತಾಯಂದಿರು ಏನು ತಿಂಡಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ. ಅದಕ್ಕೆ ಇಂದು ನಾವು ನಿಮಗೆ ಸುಲಭವಾಗಿ ಮತ್ತು ಸಿಂಪಲ್ ರೆಸಿಪಿಯಲ್ಲಿ ಹೇಗೆ ‘ರವೆ ದೋಸೆ’ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ನೀವು ಇದನ್ನು ಮಾಡಿ ರುಚಿ ನೋಡಿ.

    ಬೇಕಾಗುವ ಸಾಮಾಗ್ರಿಗಳು
    * ರವೆ – 1 ಕಪ್
    * ಅಕ್ಕಿ ಹಿಟ್ಟು – 1/2 ಕಪ್
    * ಮೈದಾ ಹಿಟ್ಟು – 1/4 ಕಪ್
    * ಸಣ್ಣಗೆ ಕಟ್ ಮಾಡಿದ ಹಸಿರು ಮೆಣಸಿನಕಾಯಿ – 1


    * ಜೀರಿಗೆ – 1/2 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಮೊಸರು – 1/4 ಕಪ್
    * ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ – 2 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ಎಣ್ಣೆ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ
    * ಒಂದು ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಮೊಸರು ತೆಗೆದುಕೊಳ್ಳಿ. ಚೆನ್ನಾಗಿ ಕಲಸಿ. * 2 ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ, ಹಿಟ್ಟನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
    * ನಂತರ ಮತ್ತೆ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ದೋಸೆ ಹಿಟ್ಟು ಮಜ್ಜಿಗೆಯಷ್ಟೇ ತೆಳುವಾಗಿರಬೇಕು.
    * ಬಿಸಿ ಕಾವಲಿ ಮೇಲೆ ನೀರು ಸಿಂಪಡಿಸಿ ಒಂದು ಬಟ್ಟೆಯಿಂದ ಒರೆಸಿ. ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಕಾವಲಿ ಮೇಲೆ ಹರಡಿ.
    * ಒಂದು ಸಣ್ಣ ಲೋಟದ ಸಹಾಯದಿಂದ ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಹರಡಿ. ಮೇಲ್ಗಡೆ ಒಂದು ಚಮಚ ಎಣ್ಣೆಯನ್ನು ಹಾಕಿ.
    * ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ದೋಸೆ ಗರಿಯಾಗುವ ತನಕ ಬೇಯಿಸಿ ತೆಗೆಯಿರಿ.

    – ನಿಮಗಿಷ್ಟವಾದ ಚಟ್ನಿಯ ಜೊತೆ ಸವಿಯಲು ಗರಿಯಾದ ರವೆ ದೋಸೆ ರೆಡಿ

    Live Tv

  • ಬ್ಯಾಚುಲರ್ಸ್ ಕೂಡ ಮಾಡಬಹುದಾದ ಸಿಂಪಲ್ ರವೆ ದೋಸೆ

    ಬ್ಯಾಚುಲರ್ಸ್ ಕೂಡ ಮಾಡಬಹುದಾದ ಸಿಂಪಲ್ ರವೆ ದೋಸೆ

    ಬ್ಯಾಚುಲರ್ಸ್ ಇದ್ದರೆ ಅವರಿಗೆ ತಿಂಡಿ, ಅಡುಗೆ ಮಾಡುವುದು ತುಂಬಾ ಕಷ್ಟ. ಹೀಗಾಗಿ ಅವರು ಸಿಂಪಲ್ ಆಗಿ ಬರುವ ಅಡುಗೆ ಮಾಡಿಕೊಂಡು ತಿನ್ನುತ್ತಾರೆ. ಆದರೆ ಪ್ರತಿದಿನ ಅದೇ ತಿಂಡಿ ತಿನ್ನಲು ಬೇಸರವಾಗುತ್ತದೆ. ಬೇರೆ ಏನಾದರೂ ಸುಲಭವಾಗಿ ಅಡುಗೆ ಮಾಡೋಣ ಎಂದರೆ ಏನು ಮಾಡುವುದು ಎಂದು ತಿಳಿದಿರುವುದಿಲ್ಲ. ಹೀಗಾಗಿ ಕೆಲವೇ ಸಾಮಾಗ್ರಿಗಳಲ್ಲಿ ದಿಡೀರ್ ಆಗಿ ರವೆ ದೋಸೆ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಾಗ್ರಿಗಳು
    1. ರವೆ – 1 ಕಪ್
    2. ಗಟ್ಟಿ ಮೊಸರು – 1/2 ಕಪ್
    3. ಜೀರಿಗೆ – 2 ಚಮಚ
    4. ಉಪ್ಪು – ರುಚಿಗೆ ತಕ್ಕಷ್ಟು
    5. ಎಣ್ಣೆ

    ಮಾಡುವ ವಿಧಾನ
    * ಒಂದು ಮಿಕ್ಸಿಂಗ್ ಬೌಲ್‍ಗೆ ರವೆ, ಜೀರಿಗೆ, ಗಟ್ಟಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರು ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ.
    * ಅರ್ಧ ಗಂಟೆಗಳ ಕಾಲ ನೆನೆಯಲು ಬಿಡಿ.
    * ಈಗ ದೋಸೆ ತವಾಗೆ ಮೇಲೆ ನೀರು ದೋಸೆ ಮಾಡುವ ರೀತಿ ದೋಸೆ ಉಯ್ದು ಎಣ್ಣೆ ಚುಮುಕಿಸಿ. ಲಿಡ್ ಮುಚ್ಚಿ.
    * 2 ನಿಮಿಷ ಚೆನ್ನಾಗಿ ಎರಡು ಬದಿ ಬೇಯಿಸಿದರೆ ಸಿಂಪಲ್ ರವೆ ದೋಸೆ ಸವಿಯಲು ಸಿದ್ಧ.