Tag: ರವಿ ಶಾಸ್ತ್ರಿ

  • ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

    ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

    ಓವೆಲ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಬೆನ್ನಲ್ಲೇ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ಓವೆಲ್‍ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ನ ನಾಲ್ಕನೇ ದಿನದಾಟದ ಮುಂಚೆ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಇವರ ಸಂಪರ್ಕದಲ್ಲಿದ್ದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೋ ಥೆರಪಿಸ್ಟ್ ನಿತೀನ್ ಪಟೇಲ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

    ನಾಲ್ಕನೇ ಟೆಸ್ಟ್​ನ ಮೂರನೇ ದಿನ ಭಾರತ ತಂಡ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 280ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು 181 ರನ್‍ಗಳ ಮುನ್ನಡೆ ಪಡೆದುಕೊಂಡಿತ್ತು.  ಇದೀಗ ನಾಲ್ಕನೇ ದಿನದಾಟ ಮುಂದುವರಿಯುತ್ತಿದೆ.

  • ರವಿಶಾಸ್ತ್ರಿ ಕಾಮೆಂಟ್ರಿಯೊಂದಿಗೆ ಬಾಟಲ್ ಕ್ಯಾಪ್ ತೆಗೆದ ಕೊಹ್ಲಿ: ವಿಡಿಯೋ

    ರವಿಶಾಸ್ತ್ರಿ ಕಾಮೆಂಟ್ರಿಯೊಂದಿಗೆ ಬಾಟಲ್ ಕ್ಯಾಪ್ ತೆಗೆದ ಕೊಹ್ಲಿ: ವಿಡಿಯೋ

    ನವದೆಹಲಿ: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತುಂಬ ಸದ್ದು ಮಾಡಿದ ಬಾಟಲ್ ಕ್ಯಾಪ್ ಚಾಲೆಂಜ್‍ನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಾಡಿದ್ದಾರೆ.

    ತಡವಾದರೂ ವಿಶೇಷವಾಗಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿರುವ ಕೊಹ್ಲಿ ಅವರು, ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಕಾಮೆಂಟ್ರಿಯನ್ನು ಹಿನ್ನೆಲೆಯಾಗಿ ಬಳಸಿಕೊಂಡು ತಮ್ಮ ಬ್ಯಾಟ್ ಮೂಲಕ ಕ್ಯಾಪ್ ಓಪನ್ ಮಾಡಿದ್ದಾರೆ.

    ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೊಹ್ಲಿ ಅವರು ನಿಧಾನವೂ ಒಳ್ಳೆಯದು ಎಂದು ಬರೆದು ಬಾಟಲ್ ಕ್ಯಾಪ್ ಚಾಲೆಂಜ್ ಎಂಬ ಹ್ಯಾಶ್‍ಟ್ಯಾಗ್ ಬಳಿಸಿದ್ದಾರೆ. ಈ 15 ಸೆಕೆಂಡ್‍ಗಳ ಈ ವಿಡಿಯೋದಲ್ಲಿ ತಮ್ಮ ಬ್ಯಾಟ್ ಮೂಲಕ ಕ್ಯಾಪ್‍ನ್ನು ತೆರೆದಿರುವ ಕೊಹ್ಲಿ ನಂತರ ಅದರಲ್ಲಿ ನೀರನ್ನು ಕುಡಿಯುತ್ತಾರೆ.

    ಈ ವಿಡಿಯೋದಲ್ಲಿ ಹಿನ್ನೆಲೆಯಲ್ಲಿ ಬರುವ ರವಿ ಶಾಸ್ತ್ರಿ ಅವರ ಕಾಮೆಂಟ್ರಿಯೂ ಕೂಡ ಕೊಹ್ಲಿ ಅವರ ಚಾಲೆಂಜ್‍ಗೆ ಸಾಥ್ ನೀಡಿದೆ. ಕೊಹ್ಲಿ ಅವರು ತಮ್ಮ ಬ್ಯಾಟ್‍ನಿಂದ ಕ್ಯಾಪ್ ಬೀಳಿಸಿದ ತಕ್ಷಣ ರವಿ ಶಾಸ್ತ್ರಿ ಅವರು ವಾವ್ ತುಂಬಾ ಒಳ್ಳೆಯ ಹೊಡೆತ ಎಂದು ಜೋರಾಗಿ ಹೇಳುತ್ತಾರೆ. ಈ ಬಾಟಲ್ ಕ್ಯಾಪ್ ಚಾಲೆಂಜ್‍ನ್ನು ಭಾರತದಲ್ಲಿ ಹಲವಾರು ಸೆಲೆಬ್ರಿಟಿಗಳು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಹುಟ್ಟಿಹಾಕಿತ್ತು.

    ಕೊಹ್ಲಿ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೆರಿಬಿಯನ್ ತಂಡದ ವಿರುದ್ಧ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಭಾರತ ಟಿ-20 ಸರಣಿಯನ್ನು 3:0 ಅಂತರದಲ್ಲಿ ಗೆದ್ದಿದೆ ಮತ್ತು ಪ್ರಸ್ತುತ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದೆ, ಅದರಲ್ಲಿ ಮೊದಲನೆಯ ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶ ಬಂದಿಲ್ಲ.

  • ಧೋನಿಯನ್ನ 7ನೇ ಕ್ರಮಾಂಕದಲ್ಲಿ ಕಳಿಸಿದ ಕಾರಣ ಬಿಚ್ಚಿಟ್ಟ ರವಿ ಶಾಸ್ತ್ರಿ

    ಧೋನಿಯನ್ನ 7ನೇ ಕ್ರಮಾಂಕದಲ್ಲಿ ಕಳಿಸಿದ ಕಾರಣ ಬಿಚ್ಚಿಟ್ಟ ರವಿ ಶಾಸ್ತ್ರಿ

    ನವದೆಹಲಿ: ವಿಶ್ವಕಪ್ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್, ಬ್ಯಾಟ್ಸ್ ಮ್ಯಾನ್ ಎಂಎಸ್ ಧೋನಿ ಅವರು ಬ್ಯಾಟ್ ಮಾಡಿದ ಕ್ರಮಾಂಕ ಈಗ ಚರ್ಚೆಗೆ ಕಾರಣವಾಗಿದೆ.

    ಹೌದು. ಭಾರತ ತಂಡದ ಅನುಭವಿ ಅಟಗಾರ ಸೆಮಿಫೈನಲ್‍ನಂತಹ ಮಹತ್ವದ ಪಂದ್ಯದಲ್ಲಿ ಅವರನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಳಿಸಿದ್ದೇಕೆ. ನ್ಯೂಜಿಲೆಂಡ್ ನೀಡಿದ ಸಾಧಾರಣ 240 ರನ್ ಬೆನ್ನಟ್ಟುವ ಪಂದ್ಯದಲ್ಲಿ ಧೋನಿ ಅವರ ಮುನ್ನಾ ರಿಷಭ್ ಪಂತ್, ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯರನ್ನು ಮೊದಲು ಕಳಿಸಿದ್ದು ಏಕೆ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದ್ದವು.

    ಈಗ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿರುವ ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ, ವಿಶ್ವಕಪ್‍ನಲ್ಲಿ ಆರಂಭಿಕ ವೈಫಲ್ಯ ಕಂಡು ಅಲ್ಪ ಮೊತ್ತಕ್ಕೆ ಕುಸಿದ ಭಾರತ ತಂಡಕ್ಕೆ ಕೊನೆಯ ಓವರ್‍ ಗಳಲ್ಲಿ ಧೋನಿ ಅವರ ಅನುಭವದ ಅವಶ್ಯಕತೆ ಇತ್ತು. ಅದ್ದರಿಂದ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಶಾಸ್ತ್ರಿ, ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸುವುದು ತಂಡದ ನಿರ್ಧಾರವಾಗಿತ್ತು. ಈ ನಿರ್ಧಾರದ ಹಿಂದೆ ಎಲ್ಲರೂ ಇದ್ದಾರೆ ಮತ್ತು ಇದು ತುಂಬಾ ಸರಳವಾದ ನಿರ್ಧಾರ. ಏಕೆಂದರೆ ಧೋನಿ ಅವರು ಬೇಗನೆ ಬ್ಯಾಟಿಂಗ್ ಮಾಡಲು ಬಂದು ಆಗಿನ ಪರಿಸ್ಥಿತಿಯಲ್ಲಿ ಬೇಗನೇ ಔಟ್ ಆಗಿದ್ದರೆ ಭಾರತ ತಂಡ ಆ ಮೊತ್ತವನ್ನು ಚೇಸ್ ಮಾಡುವುದು ಕಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.

    ಪಂದ್ಯದ ಕೊನೆಯ ಓವರ್ ನಲ್ಲಿ ಧೋನಿ ಅವರ ಅನುಭವ ತಂಡಕ್ಕೆ ಬೇಕಿತ್ತು. ಅವರು ಭಾರತ ತಂಡ ಕಂಡ ಶ್ರೇಷ್ಠ ಫಿನಿಶರ್, ಅವರನ್ನು ನಾವು ಕೊನೆಯ ಹಂತದಲ್ಲಿ ಬಳಸಿದ್ದರಲ್ಲಿ ಅಪರಾಧ ಏನಿದೆ? ಧೋನಿ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸಲು ಇಡೀ ತಂಡವೇ ಸ್ಪಷ್ಟವಾಗಿತ್ತು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

    7ನೇ ಕ್ರಮಾಂಕದಲ್ಲಿ ಆಡಿದರು ಸೆಮಿಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ಎಂ. ಎಸ್ ಧೋನಿ ಅವರು ತಂಡವನ್ನು ಗೆಲುವಿನ ದಡದತ್ತ ತಂದಿದ್ದರು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು. ಆದರೆ ಧೋನಿ ಮತ್ತು ಜಡೇಜಾ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು.

    ಶತಕದ ಜೊತೆಯಾಟವಾಡಿದ ಈ ಜೋಡಿ 122 ಎಸೆತಗಳಲ್ಲಿ 116 ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್ (72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ಅಡುತ್ತಿದ್ದ ಧೋನಿ 48ನೇ ಓವರ್ ನ 3 ನೇ ಎಸೆತದಲ್ಲಿ ಮಾರ್ಟಿನ್ ಗುಪ್ಟಿಲ್ ಹೊಡೆದ ಥ್ರೋಗೆ ರನೌಟ್ ಆದರು.

  • ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

    ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

    ನವದೆಹಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ವರ್ಲ್ಡ್ ಕಪ್ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರ ಹೇಗಿರಲಿದೆ ಎಂಬುದನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾದ ಇಂದು ಸುದ್ದಿಗೋಷ್ಠಿ ನಡೆಸಿತ್ತು.

    ಎಲ್ಲ ಪಂದ್ಯಗಳಲ್ಲಿ ಧೋನಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಾಜಿ ನಾಯಕನಾಗಿರುವ ಧೋನಿ ಒಂದು ಬಲಿಷ್ಠ ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓರ್ವ ಆಟಗಾರನಾಗಿಯೂ ತಂಡಕ್ಕೆ ಧೋನಿ ನೆರವಾಗ್ತಾರೆ. ಧೋನಿ ಅವರ ರನ್ ಔಟ್, ಸ್ಟಂಪಿಂಗ್ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಧೋನಿಯವರ ಆಟದ ಶೈಲಿ, ತಂತ್ರ ಕೊನೆ ಗಳಿಗೆಯಲ್ಲಿಯೂ ಪಂದ್ಯವನ್ನು ಬದಲಾಯಿಸುತ್ತದೆ. ಐಪಿಎಲ್ ನಲ್ಲಿ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಿದ ಉದಾಹರಣೆ ನಮ್ಮ ಮುಂದಿದೆ ಎಂದು ಕೋಚ್ ರವಿ ಶಾಸ್ತ್ರಿ ಹೇಳಿದರು.

    ಕೇದಾರ್ ಜಾಧವ್ ಫಿಟ್ ಆಗಿದ್ದು, ತಂಡದಲ್ಲಿ ಇರಲಿದ್ದಾರೆ. ತಂಡದ ಎಲ್ಲ ಆಟಗಾರರು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನಾವು ನಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಆಡಿದಲ್ಲಿ ವಿಶ್ವಕಪ್‍ನ್ನು ದೇಶಕ್ಕೆ ತರಲು ಸಾಧ್ಯ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳು ತುಂಬಾ ಕಠಿಣದಾಯಕವಾಗಿರಲಿದೆ. ಯಾವುದೇ ತಂಡ ಸಹ ಮುನ್ನಡೆ ಪಡೆದುಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಪಂದ್ಯವನ್ನು ಅತ್ಯಂತ ಎಚ್ಚರಿಕೆಯಿಂದ ಆಡಬೇಕಿದೆ. ತಂಡ ಫ್ರೆಶ್ ಬೌಲರ್ ಗಳನ್ನು ಹೊಂದಿದ್ದು, ಎಲ್ಲರು 50 ಓವರ್ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಐಪಿಎಲ್ ನಿಂದ ಒಳ್ಳೆಯ ತರಬೇತಿ ಮತ್ತು ಅನುಭವವನ್ನು ನಮ್ಮ ಆಟಗಾರರು ಪಡೆದಿದ್ದು ಲಾಭದಾಯಕವಾಗಿದೆ ಎಂದು ಹೇಳಿದರು.