Tag: ರವಿ ಬಸ್ರೂರ್

  • ರವಿ ಬಸ್ರೂರ್ ಪುತ್ರನ ಚಿತ್ರಕ್ಕೆ ಇಂಜಿನಿಯರ್ ಶಶಿಕಿರಣ್ ಡೈರೆಕ್ಟರ್

    ರವಿ ಬಸ್ರೂರ್ ಪುತ್ರನ ಚಿತ್ರಕ್ಕೆ ಇಂಜಿನಿಯರ್ ಶಶಿಕಿರಣ್ ಡೈರೆಕ್ಟರ್

    ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ (Ravi Basrur)  ಪುತ್ರ ಮಾಸ್ಟರ್ ಪವನ್ ಬಸ್ರೂರು ಕ್ಲಿಕ್ ಸಿನಿಮಾ ಮೂಲಕ ಪರಿಪೂರ್ಣವಾಗಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಗಿರ್ಮಿಟ್ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದ ಪವನ್, ಕ್ಲಿಕ್ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.  ಐಟಿ ಉದ್ಯೋಗಿಯಾಗಿರುವ ಶಶಿಕಿರಣ್ (Shashikiran) ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ತಮ್ಮದೇ ಶರಣ್ಯ ಫಿಲ್ಮಂಸ್ ನಡಿ ಕ್ಲಿಕ್ (Click) ಸಿನಿಮಾ ನಿರ್ಮಾಣ ಮಾಡಿದ್ದಾರೆ.   ಪವನ್ ಜೊತೆ ಮತ್ತೊಬ್ಬ ಯುವ ನಟ ಕಾರ್ತಿಕ್ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನಾ ಶಶಿ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    ನಮ್ಮಲ್ಲಿ ಹೆಚ್ಚಿನ ಪಾಲು ಪೋಷಕರು ಮಕ್ಕಳು ಡಾಕ್ಟರ್-ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ಎರಡು ವಲಯದ ಹೊರತಾಗಿ ನಮ್ಮ ಮುಂದೆ ತುಂಬಾ ಆಯ್ಕೆಗಳಿವೆ. ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆ ಸುತ್ತ ಕ್ಲಿಕ್ ಸಿನಿಮಾ ಸಾಗುತ್ತದೆ. ಈ ಚಿತ್ರಕ್ಕೆ ಯುವ ನಿರ್ದೇಶಕ ಶಶಿಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

    ಮೂಲತಃ ಬೆಂಗಳೂರಿನವರಾದ ಶಶಿಕಿರಣ್, ಐಟಿ ಉದ್ಯೋಗಿ. ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಆಸಕ್ತಿ ಇದ್ದರೂ, ಮನೆಯವರ ಸಲಹೆಯ ಮೇರೆಗೆ ಇಂಜಿನಿಯರಿಂಗ್ ಮುಗಿಸಿ, ಕೆಲಸಕ್ಕೆ ಸೇರಿಕೊಂಡರು. ಆದರೂ ಶಶಿಗೆ ಸಿನಿಮಾ ಕಡೆಯೇ ಮನಸ್ಸು ಸೆಳೆಯುತ್ತಿತ್ತು. ಹೀಗಾಗಿ ಕೆಲಸದ ಜತೆ ಜತೆಗೆ ಸಿನಿಮಾದತ್ತ ಮುಖ ಮಾಡಿದರು ಶಶಿಕಿರಣ್.

    “ಮೊದಲಿಗೆ ಫಿಲಂ ಮೇಕಿಂಗ್ ಬಗ್ಗೆ ತಿಳಿದುಕೊಳ್ಳಬೇಕು ಅಂತ ಶುರು ಮಾಡಿದ ಸಿನಿಮಾವಿದು. ಆದರೆ ತುಂಬಾ ದೊಡ್ಡ ಮಟ್ಟದಲ್ಲಿ ನನ್ನ ಕನಸು ಈಡೇರಿದ ಖುಷಿಯಲ್ಲಿದ್ದೇನೆ. ತುಂಬಾ ಸಿನಿಮಾ ನೋಡಿ ಪಾಠ ಕಲಿತಿದ್ದೀನಿ. ಒಳ್ಳೆ ಅನುಭವ ಕೊಟ್ಟಿದೆ. ಈ ಚಿತ್ರದಲ್ಲಿ ಸಾಕಷ್ಟು ಹೊಸತನವಿದೆ. ರವಿ ಬಸ್ರೂರು ಅವರಿಗೆ ಕಥೆ ಹೇಳಲು ಹೋಗಿದ್ದೆ. ಒನ್ ಲೈನ್ ಕೇಳಿದ್ರು. ಪವನ್ ಜತೆಯೂ ಮಾತನಾಡಿದ್ವಿ. “ನನ್ ಮಗ ಅಂತ ತಗೋಬೇಡಿ… ಆಡಿಷನ್ ಮಾಡಿಯೇ ಸೆಲೆಕ್ಟ್ ಮಾಡಿ” ಅಂತ ಹೇಳಿದ್ದರು ರವಿ ಬಸ್ರೂರು. ಆಡಿಷನ್ ಮೂಲಕ ಸೆಲೆಕ್ಟ್ ಆದ ನಂತರ ವರ್ಕ್ ಶಾಪ್ ಕೂಡಾ ಮಾಡಿದೆವು. ಪವನ್ ಅವರಿಗೆ ನಟನೆಯಲ್ಲಿ ಸೆಳೆಯುವ ಪವರ್ ಇದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಹಂಬಲ ಪವನ್ ಅವರಿಗಿದೆ. ನಾನು ನಿರ್ಮಾಣ ಮಾಡಿದ್ದರೂ ಕಥೆ ಓಕೆ ಮಾಡುವುದರಿಂದ ಹಿಡಿದು ಆರ್ಟಿಸ್ಟ್ ಸೆಲೆಕ್ಷನ್, ಕಾಸ್ಟ್ಯೂಮ್, ಲೊಕೇಷನ್, ಎಡಿಟ್, ದಿ.ಐ, ಮ್ಯೂಸಿಕ್… ಎಲ್ಲದರಲ್ಲೂ ತೊಡಗಿಸಿಕೊಂಡು ಬಂದಿದ್ದೇನೆ. ಸಮಯ ತೆಗೆದುಕೊಂಡು, ಸಿನಿಮಾಕ್ಕೆ ಬೇಕಾದ ಎಲ್ಲವನ್ನೂ ಒದಗಿಸಿ ಕ್ವಾಲಿಟಿ ಕಾಪಾಡಿಕೊಂಡು ಕ್ಲಿಕ್ ಸಿನಿಮಾ ಮಾಡಿದ್ದೇನೆ” ಎನ್ನುತ್ತಾರೆ ನಿರ್ಮಾಪಕ ಶಶಿಕಿರಣ್.

    ಬೆಂಗಳೂರು, ಬಿಡದಿ ರಾಮನಗರ ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕ್ಲಿಕ್ ಸಿನಿಮಾಗೆ ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನವಿದೆ.

  • ‘ಸಲಾರ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ : ಬಸ್ರೂರಿನಲ್ಲಿ ಬೀಡುಬಿಟ್ಟ ಪ್ರಶಾಂತ್ ನೀಲ್

    ‘ಸಲಾರ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ : ಬಸ್ರೂರಿನಲ್ಲಿ ಬೀಡುಬಿಟ್ಟ ಪ್ರಶಾಂತ್ ನೀಲ್

    ಪ್ರಭಾಸ್ ಮತ್ತು ಪ್ರಶಾಂತ್ ನೀಲ್ (Prashant Neel)ಕಾಂಬಿನೇಷನ್ ನ ‘ಸಲಾರ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಕೆಲಸ ನಡೆಯುತ್ತಿದೆ. ಕೆಜಿಎಫ್ ಚಿತ್ರಕ್ಕೆ ಹಿನ್ನೆಲೆ ಸಂಗೀತ (Background Music) ನೀಡಿದ ರವಿ ಬಸ್ರೂರ್ (Ravi Basrur) ಅವರೇ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಕಳೆದ ಎರಡು ವಾರದಿಂದಲೂ ಸಲಾರ್ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಕೆಲಸ ನಡೆಯುತ್ತಿದ್ದ ತಮ್ಮ ತಂಡದೊಂದಿಗೆ ನಿರ್ದೇಶಕ ಪ್ರಶಾಂತ್ ನೀಲ್ ಬಸ್ರೂರಿನ ಸ್ಟುಡಿಯೋದಲ್ಲೇ ಬೀಡುಬಿಟ್ಟಿದ್ದಾರೆ.

    ಒಂದು ಕಡೆ ಸಿನಿಮಾ ತಯಾರಿ ಕೆಲಸ ನಡೆಯುತ್ತಿದ್ದರೆ ಮತ್ತೊಂದು ಕಡೆ ಬಿಡುಗಡೆಯ ಸಿದ್ದತೆಯನ್ನೂ ಚಿತ್ರತಂಡ ಶುರು ಮಾಡಿದೆ. ನಿರ್ಮಾಪಕರು ಇನ್ನೂ ಚಿತ್ರದ ಪ್ರಚಾರವನ್ನೇ ಶುರು ಮಾಡಿಲ್ಲ. ಆಗಲೇ ನಿರೀಕ್ಷೆಯನ್ನು ಮಿತಿಮೀರಿ ಹೆಚ್ಚಿಸಿಕೊಂಡಿದೆ. ಅದರಲ್ಲೂ ಈ ಬಾರಿ ಅಮೆರಿಕಾದಲ್ಲಿ (America) ಈ ಸಿನಿಮಾ ದಾಖಲೆಯ ರೀತಿಯಲ್ಲಿ ಬಿಡುಗಡೆಯಾಗಲಿದೆ. ಅಮೆರಿಕಾದ ಖ್ಯಾತ ವಿತರಣಾ ಸಂಸ್ಥೆಯೇ ಹಂಚಿಕೊಂಡಂತೆ, ಸಲಾರ್ ಸಿನಿಮಾ ಉತ್ತರ ಅಮೆರಿಕಾದಲ್ಲಿ 1979ಕ್ಕೂ ಹೆಚ್ಚು ಸ್ಥಳಗಳಲ್ಲಿ ರಿಲೀಸ್  (Release) ಆಗಲಿದೆಯಂತೆ.

    ಸೆಪ್ಟೆಂಬರ್ 27ಕ್ಕೆ ಈ ಸಿನಿಮಾ ರಿಲೀಸ್ ಆಗಲಿದ್ದು, ಇದೇ ಮೊದಲ ಬಾರಿಗೆ ಭಾರತದ ಸಿನಿಮಾವೊಂದು ಉತ್ತರ ಅಮೆರಿಕಾದಲ್ಲಿ ಈ ಪ್ರಮಾಣದಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದು ದಾಖಲೆ ಎಂದು ಹೇಳಲಾಗುತ್ತಿದೆ. ಈವರೆಗೂ ಭಾರತೀಯ ಯಾವುದೇ ಭಾಷೆಯ ಸಿನಿಮಾ ಇಷ್ಟು ಪ್ರಮಾಣದ ಸ್ಥಳಗಳಲ್ಲಿ ಬಿಡುಗಡೆಯಾಗಿಲ್ಲ ಎನ್ನುತ್ತದೆ ಪ್ರತ್ಯಂಗಿರಾ ವಿತರಣಾ ಸಂಸ್ಥೆ.

    ಮೊನ್ನೆಯಷ್ಟೇ ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಈ ಟೀಸರ್ ನಲ್ಲಿ ಹೆಚ್ಚು ಅಬ್ಬರಿಸಿದ್ದು ಪ್ರಭಾಸ್ ಅಲ್ಲ. ಪುಷ್ಪಕ ವಿಮಾನ (Pushpaka Vimana) ಸಿನಿಮಾದ ಮೂಲಕ ಸಾಕಷ್ಟು ಫೇಮಸ್ ಆಗಿರುವ ಟಿನ್ನು ಆನಂದ್ (Tinnu Anand). ಪುಷ್ಪಕ ವಿಮಾನ ಸಿನಿಮಾದಲ್ಲಿ ಟಿನ್ನುಗೆ ಮಾತೇ ಇರಲಿಲ್ಲ. ಯಾಕೆಂದರೆ ಅದು ಮೂಕಿ ಚಿತ್ರವಾಗಿತ್ತು. ಸಲಾರ್ ಸಿನಿಮಾದ ಟೀಸರ್ ನಲ್ಲಿ ಟಿನ್ನುಗೆ ಮಾತು ಬಿಟ್ಟರೆ ಬೇರೇನೂ ಇಲ್ಲ.

    ತಮ್ಮ ಅದ್ಭುತ ಕಂಠ ಮತ್ತು ಧ್ವನಿ ಏರಿಳಿತದಿಂದಾಗಿ ಟಿನ್ನು ಸಲಾರ್ (Salaar) ನಲ್ಲಿ ಹೊಡೆದ ಅಷ್ಟೂ ಡೈಲಾಗ್ ಗಳು ಪ್ರಭಾಸ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿವೆ. ಸಲಾರ್ ಸಿನಿಮಾದ ಹೀರೋ ಅನ್ನು ಅವರು ಪರಿಚಯಿಸಿದ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಲಾರ್ ಸಿನಿಮಾದ ಕಥೆಯನ್ನು ಅವರ ನಾಲಿಗೆಯಿಂದಲೇ ಕೇಳುವುದು ಚಂದ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಪ್ರಭಾಸ್ ಅಭಿಮಾನಿಗಳ ಮನ ಗೆದ್ದಿದ್ದಾರೆ ಟಿನ್ನು.

    ಒಂದು ಕಡೆ ಟಿನ್ನು ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ ಮತ್ತೊಂದು ಕಡೆ ಸಲಾರ್ ಸಿನಿಮಾದ ಟೀಸರ್ ಬಗ್ಗೆ ಹಲವರು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಟೀಸರ್ ನಲ್ಲಿ ಬಳಕೆಯಾದ ದೃಶ್ಯಗಳಲ್ಲಿ ಕೆಜಿಎಫ್ ಸಿನಿಮಾವನ್ನೂ ಹಲವರು ಹುಡುಕಿದ್ದಾರೆ. ಹಾಗಾಗಿ ಫ್ಯಾನ್ಸ್ ತಲೆಕೆಡಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಕಥೆ ಕಟ್ಟುತ್ತಿದ್ದಾರೆ. ಆ ಕಥೆಗಳು ಕೂಡ ತುಂಬಾ ಸ್ವಾರಸ್ಯಕರವಾಗಿವೆ.

     

    ಬಿಡುಗಡೆಯಾದ ಸಲಾರ್ ಟೀಸರ್ ನಲ್ಲಿ ಕೆಜಿಎಫ್ ಸಿನಿಮಾದ ಕೋಲಾರ್ ಗೋಲ್ಡ್ ಫಿಲ್ಡನ್ ಮೂನಿಂಗ್ ಒಳಗಿನ ಸಾಮ್ರಾಜ್ಯವನ್ನು ತರುವ ಪ್ರಯತ್ನ ನಡೆದಿದೆಯಾ ಎನ್ನುವ ಅನುಮಾನ ಮೂಡಿಸಿದೆ. ಕೆಜಿಎಫ್ ಕಥೆಯಲ್ಲಿ ಬರುವ ಬಂಗಾರದ ಕಣಜಗಳ ಗೇಟ್ ಗಳು ಸಲಾರ್ ನಲ್ಲಿ ಎಂಟ್ರಿ ಪಡೆದಿವೆ. ಕೆಲ ನಂಬರ್ ಗಳು ಕೂಡ ಯಥಾವತ್ತಾಗಿ ದಾಖಲಾಗಿವೆ. ಹಾಗಾಗಿ ಕೆಜಿಎಫ್ ಅಧ್ಯಾಯದ ಒಂದಷ್ಟು ಭಾಗವನ್ನು ಸಲಾರ್ ಸಿನಿಮಾದಲ್ಲಿ ಹೇಳಿದ್ದಾರಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನವೀನ್ ಶಂಕರ್ ಅಭಿನಯದ ‘ಕ್ಷೇತ್ರಪತಿ’ ರಿಲೀಸ್ ಡೇಟ್ ಫಿಕ್ಸ್

    ನವೀನ್ ಶಂಕರ್ ಅಭಿನಯದ ‘ಕ್ಷೇತ್ರಪತಿ’ ರಿಲೀಸ್ ಡೇಟ್ ಫಿಕ್ಸ್

    ಗುಲ್ಟು, ಹೊಂದಿಸಿ ಬರೆಯಿರಿ, ಹೊಯ್ಸಳ ಚಿತ್ರಗಳ ಮೂಲಕ  ಜನಮನ್ನಣೆ ಪಡೆದಿರುವ ನವೀನ್ ಶಂಕರ್ (Naveen) ಅಭಿನಯದ ‘ಕ್ಷೇತ್ರಪತಿ’ (Kshetrapati) ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ‌. ಬಸವ ಪಾತ್ರದಲ್ಲಿ ನವೀನ್ ಶಂಕರ್ ಕಾಣಿಸಿಕೊಳ್ಳುತ್ತಿದ್ದು, ಭೂಮಿಕಾ ಎಂಬ ಹೆಸರಿನಿಂದ ಹೊಸ ತಲೆಮಾರಿನ ಪತ್ರಕರ್ತೆ ಪಾತ್ರದಲ್ಲಿ ಅರ್ಚನಾ ಜೋಯಿಸ್ ಅಭಿನಯಿಸಿದ್ದಾರೆ.

    ರೈತರ ಹೋರಾಟಕ್ಕೆ ಮಹಿಳಾ ಆಯಾಮ (women perspective) ಅರ್ಚನಾ ಜೋಯಿಸ್ ಪಾತ್ರ ನೀಡುತ್ತದೆ. ಈ ಹಿಂದೆ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಮೋಡಿ ಮಾಡಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ (Archana Jois) ಜೋಡಿ ಕ್ಷೇತ್ರಪತಿ ಚಿತ್ರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲಿದೆ. ಈಗಾಗಲೇ ಕ್ಷೇತ್ರಪತಿ ಚಿತ್ರದ ಟೀಸರ್ ನೋಡುಗರ ಮನ ಗೆದ್ದಿದೆ.  ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

    ರವಿ ಬಸ್ರೂರ್ ಮ್ಯೂಸಿಕ್ ಮತ್ತು ಮೂವೀಸ್ ಅರ್ಪಿಸುತ್ತಿರುವ, ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಕ್ಷೇತ್ರಪತಿ ಚಿತ್ರ ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿದೆ. ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣವಿರುವ ಈ ಚಿತ್ರ ಆಗಸ್ಟ್ 18 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ. ಶ್ರೀಕಾಂತ್ ಕಟಗಿ (Srikanta Katagi) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ (Ravi Basrur) ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ. ವಿ. ಬಿ. ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.  ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಲ್ಮಾನ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ ಸಂಯೋಜನೆ

    ಸಲ್ಮಾನ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ ಸಂಯೋಜನೆ

    ಬೆಂಗಳೂರು: ಕನ್ನಡಿಗ ರವಿ ಬಸ್ರೂರ್ ಈಗ ಬಾಲಿವುಡ್ ನಲ್ಲಿ ಮಿಂಚಲಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

    ಕೆಜಿಎಫ್ ಸಿನಿಮಾಗೆ ಸಂಗೀತದ ನೀಡಿ ದೇಶಾದ್ಯಂತ ಮೋಡಿ ಮಾಡಿದ್ದ ರವಿ ಬಸ್ರೂರ್ ಈಗ ಬಾಲಿವುಡ್‍ಗೆ ಹಾರಿದ್ದು, ಸಲ್ಮಾನ್ ನ ‘ಅಂತಿಮ್’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    ಈ ವಿಚಾರವನ್ನು ಖುದ್ದು ಅವರೇ ಟ್ವಿಟ್ವರ್ ನಲ್ಲಿ, ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅವರ ಜೊತೆ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ. ಅವರ ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದೇನೆ. ನನ್ನ ಪಯಣಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವಾಗಲೇ ಜಿ.ಪಂ.ಅಧ್ಯಕ್ಷೆಯಾದ ಯುವತಿ

    ಪ್ರಸ್ತುತ ಸಲ್ಮಾನ್ ‘ಅಂತಿಮ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿಯೂ ಸಹ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಮಂಜ್ರೆಕರ್ ಆಕ್ಷನ್ ಕಟ್ ಹೇಳುತ್ತಿದ್ದು, ಆಯುಷ್ ಶರ್ಮಾ ಈ ಚಿತ್ರದ ನಾಯಕರಾಗಿದ್ದಾರೆ.

    ರವಿ ಬಸ್ರೂರು ಅವರು ಕೆಜಿಎಫ್ ಸಿನಿಮಾ ನಂತರ ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದರು. ಈ ಹಿಂದೆ ಮೂರು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿದ್ದ ಬಸ್ರೂರು ಬಾಲಿವುಡ್ ನಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಬ್ಯಾನರ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಯಶ್, ರಾಧಿಕಾ ದುಬೈ ಟ್ರಿಪ್

  • ಮೊಬೈಲ್ ಅವಾಂತರದ ಚಿತ್ರಣ ನೀಡಿದ ಕೆಜಿಎಫ್ ಸಂಗೀತ ನಿರ್ದೇಶಕ

    ಮೊಬೈಲ್ ಅವಾಂತರದ ಚಿತ್ರಣ ನೀಡಿದ ಕೆಜಿಎಫ್ ಸಂಗೀತ ನಿರ್ದೇಶಕ

    ಬೆಂಗಳೂರು: ಲಾಕ್‍ಡೌನ್ ದಿನಗಳನ್ನು ಎಲ್ಲ ನಟ, ನಟಿಯರು ವಿಭಿನ್ನವಾಗಿ ಬಳಸಿಕೊಳ್ಳುತ್ತಿದ್ದು, ಕೆಲವರು ತಮ್ಮ ಹವ್ಯಾಸಗಳತ್ತ ತಿರುಗಿದರೆ, ಇನ್ನೂ ಕೆಲವರು ಮನರಂಜನೆ, ಸಾಮಾಜಿಕ ಕಾರ್ಯ, ಸಹಾಯದ ರೀತಿಯ ಕೆಲಸಗಳಲ್ಲಿ ತೊಡಗಿದ್ದಾರೆ. ಬಿಡುವಿದ್ದಾಗಲೆಲ್ಲ ಕಮ್ಮಾರಿಕೆ ಮಾಡುವ ಮೂಲಕ ತಂದೆಗೆ ನೆರವಾಗುತ್ತಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಇಂದು ಮೊಬೈಲ್ ದುರ್ಬಳಕೆಯ ಅವಾಂತರಗಳ ಕುರಿತು ಗಮನ ಸೆಳೆದಿದ್ದಾರೆ.

    ಹೌದು ಯುವಕರಿಗೆ ಅಪ್ಯಾಯಮಾನವಾಗುವ ರೀತಿಯಲ್ಲಿ ಮೊಬೈಲ್ ಕುರಿತು ಜಾಗೃತಿ ಮೂಡಿಸಿರುವ ರವಿ ಬಸ್ರೂರ್, ಸಂಗೀತದ ಮೂಲಕ ಮೋಡಿ ಮಾಡಿದ್ದಾರೆ. ವಿಭಿನ್ನ ಹಾಡು ರಚಿಸುವ ಮೂಲಕ ಮೊಬೈಲ್ ಬಂದ ಮೇಲೆ ಆಗಿರುವ ಅವಾಂತರಗಳ ಕುರಿತು ಗಮನಸೆಳೆದಿದ್ದಾರೆ. ಹಾಡು ಯುವಕರನ್ನು ಸೆಳೆಯುತ್ತಿದೆ. ಈ ಹಾಡನ್ನು ಅವರ ಯೂಟ್ಯೂಬ್ ಚಾನೆಲ್ ರವಿ ಬಸ್ರೂರ್ ಮ್ಯೂಸಿಕ್ ನಲ್ಲಿ ಹಾಕಿಕೊಂಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಹಾಡು ಕುಂದಾಪುರ ಭಾಷೆಯಲ್ಲಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊಬೈಲ್ ಕೈಗೆ ಸಿಕ್ಕಿ ಮಕ್ಳ ಕೆಟ್ಟೊ, ಹೇಳಿದ್ದ್ ಕೇಂತಿಲ್ಲ, ಉಂಬುದೇ ಬಿಟ್ಟೊ, ರಸ್ತೆಂಗೆ ತಲಿ ಎತ್ತಿ ತಿರ್ಗುದೆ ಬಿಟ್ಟೊ ಎಂಬ ಸಾಲುಗಳ ಮೂಲಕ ಹಾಡು ಪ್ರಾರಂಭವಾಗುತ್ತೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಲಾಕ್‍ಡೌನ್ ಅವಧಿಯಲ್ಲಿ ರವಿ ಬಸ್ರೂರ್ ತಮ್ಮ ಹುಟ್ಟೂರು ಕುಂದಾಪುರಕ್ಕೆ ತೆರಳಿ ಕುಲ ಕಸುಬು ಕಮ್ಮಾರಿಕೆಯ ಕೆಲಸ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದರು. ತಂದೆಗೆ ಸಹಾಯ ಮಾಡಲು ಕಮ್ಮಾರಿಕೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಲಾಕ್‍ಡೌನ್ ಅವಧಿಯಲ್ಲಿ ಹಾಡೊಂದನ್ನು ರಚಿಸಿ, ಸಂಯೋಜಿಸಿ ಬಿಡುಗಡೆ ಮಾಡಿದ್ದಾರೆ.

    ಕೆಜಿಎಫ್ ಸಿನಿಮಾ ನಂತರ ರವಿ ಬಸ್ರೂರ್ ಅವರಿಗೆ ಹೆಚ್ಚು ಆಫರ್ ಗಳು ಬರುತ್ತಿದ್ದು, ಸ್ಯಾಂಡಲ್‍ವುಡ್ ಮಾತ್ರವಲ್ಲದೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ, ಮಡ್ಡಿ ಸಿನಿಮಾಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಲಾಕ್‍ಡೌನ್ ಹಿನ್ನೆಲೆ ತಮ್ಮ ಹುಟ್ಟೂರು ಕುಂದಾಪುರದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರ ಮಧ್ಯೆಯೇ ಈ ಹಾಡನ್ನು ರಚಿಸಿದ್ದಾರೆ. ಹೀಗೆ ಲಾಕ್‍ಡೌನ್ ಸಮಯವನ್ನು ರವಿ ಬಸ್ರೂರ್ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

  • ರಾಘವೇಂದ್ರ ರಾಜ್‌ಕುಮಾರ್ ಅತ್ಯುತ್ತಮ ನಟ, ಮೇಘನಾ ರಾಜ್ ಅತ್ಯುತ್ತಮ ನಟಿ

    ರಾಘವೇಂದ್ರ ರಾಜ್‌ಕುಮಾರ್ ಅತ್ಯುತ್ತಮ ನಟ, ಮೇಘನಾ ರಾಜ್ ಅತ್ಯುತ್ತಮ ನಟಿ

    – 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
    – ರವಿ ಬಸ್ರೂರ್‌ಗೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ

    ಬೆಂಗಳೂರು: 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ನಿರ್ದೇಶಕ ಜೋಸೈಮನ್ ನೇತೃತ್ವದ ಆಯ್ಕೆ ಸಮಿತಿ 162 ಚಿತ್ರಗಳನ್ನ ವೀಕ್ಷಿಸಿ ಪ್ರಶಸ್ತಿ ಆಯ್ಕೆ ಮಾಡಿದ್ದಾರೆ. ಜೊತೆಗೆ ನಿರ್ಮಾಪಕ, ನಟ ಬಸಂತಕುಮಾರ್ ಪಾಟೀಲ್ ನೇತೃತ್ವದ ಸಮಿತಿ ಜೀವಮಾನ ಸಾಧನೆಗಳ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾರ್ತಾ ಸಚಿವರು ಆದ ಸಿಎಂ ಯಡಿಯೂರಪ್ಪ ಪ್ರಶಸ್ತಿ ಪ್ರಕಟಿಸಿದರು. ಅತ್ಯುತ್ತಮ ನಟ ಪ್ರಶಸ್ತಿಗೆ ರಾಘವೇಂದ್ರ ರಾಜ್‌ಕುಮಾರ್, ಅತ್ಯುತ್ತಮ ನಟಿ ಪ್ರಶಸ್ತಿಗೆ ಮೇಘನಾ ರಾಜ್ ಆಯ್ಕೆಯಾಗಿದ್ದಾರೆ. ಆ ಕರಾಳ ರಾತ್ರಿ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ವಿವರ ಕೆಳಕಂಡತೆ ಇವೆ.

    ಯಾರಿಗೆ ಯಾವ ಪ್ರಶಸ್ತಿ?
    ಜೀವಮಾನ ಸಾಧನೆ, ಡಾ.ರಾಜ್‌ಕುಮಾರ್ ಪ್ರಶಸ್ತಿ – ಶ್ರೀನಿವಾಸ್ ಮೂರ್ತಿ
    ಪುಟ್ಟಣ್ಣ ಕಣಗಾಲ್ ಪ್ರಶಸ್ತಿ – ಪಿ. ಶೇಷಾದ್ರಿ, ನಿರ್ದೇಶಕ
    ವಿಷ್ಣುವರ್ಧನ್ ಪ್ರಶಸ್ತಿ – ಬಿ.ಎಸ್. ಬಸವರಾಜು

    ಅತ್ಯುತ್ತಮ ನಟ – ರಾಘವೇಂದ್ರ ರಾಜ್‌ಕುಮಾರ್(ಅಮ್ಮನ ಮನೆ)
    ಅತ್ಯುತ್ತಮ ನಟಿ – ಮೇಘನಾ ರಾಜ್(ಇರುವುದೆಲ್ಲವ ಬಿಟ್ಟು)
    ಅತ್ಯುತ್ತಮ ಸಂಗೀತ ನಿರ್ದೇಶನ – ರವಿ ಬಸ್ರೂರ್ (ಕೆಜಿಎಫ್)

    ಅತ್ಯುತ್ತಮ ಮೊದಲ ಚಿತ್ರ – ಆ ಕರಾಳ ರಾತ್ರಿ
    ಅತ್ಯುತ್ತಮ ಎರಡನೇ ಚಿತ್ರ – ರಾಮನ ಸವಾರಿ
    ಅತ್ಯುತ್ತಮ ಮೂರನೇ ಚಿತ್ರ – ಒಂದಲ್ಲ ಎರಡಲ್ಲ

    ವಿಶೇಷ ಸಾಮಾಜಿಕ ಕಳಕಳಿ ಚಿತ್ರ – ಸಂತಕವಿ ಕನಕದಾಸರ ರಾಮಧಾನ್ಯ
    ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

    ಅತ್ಯುತ್ತಮ ಮಕ್ಕಳ ಚಿತ್ರ – ಹೂವು ಬಳ್ಳಿ
    ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ – ಬೆಳಕಿನ ಕನ್ನಡಿ
    ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ದೇಯಿ ಬೈದೇತಿ(ತುಳು)

    ಅತ್ಯುತ್ತಮ ಪೋಷಕ ನಟ – ಬಾಲಾಜಿ ಮನೋಹರ್(ಚೂರಿಕಟ್ಟೆ)
    ಅತ್ಯುತ್ತಮ ಪೋಷಕ ನಟಿ – ವೀಣಾ ಸುಂದರ್(ಆ ಕರಾಳ ರಾತ್ರಿ)

    ಅತ್ಯುತ್ತಮ ಕತೆ – ನಾಯಿಗೆರೆ(ಹರೀಶ್.ಎಸ್)
    ಅತ್ಯುತ್ತಮ ಚಿತ್ರಕತೆ – ಮೂಕಜ್ಜಿಯ ಕನಸುಗಳು(ಪಿ.ಶೇಷಾದ್ರಿ)
    ಅತ್ಯುತ್ತಮ ಸಂಭಾಷಣೆ – ಶಿರಿಷಾ ಜೋಶಿ(ಸಾವಿತ್ರಿಬಾಯಿ ಫುಲೆ)

    ಅತ್ಯುತ್ತಮ ಛಾಯಾಗ್ರಹಣ – ನವೀನ್ ಕುಮಾರ್(ಅಮ್ಮಚ್ಚಿಯೆಂಬ ನೆನಪು)
    ಅತ್ಯುತ್ತಮ ಸಂಕಲನ – ಸುರೇಶ್ ಆರುಗ್ಮಂ(ತ್ರಾಟಕ)
    ಅತ್ಯುತ್ತಮ ಬಾಲನಟ – ಮಾಸ್ಟರ್ ಆರ್ಯನ್(ರಾಮನ ಸವಾರಿ)

    ಅತ್ಯುತ್ತಮ ಬಾಲನಟಿ – ಬೇಬಿ ಸಿಂಚನ(ಅಂದವಾದ)
    ಅತ್ಯುತ್ತಮ ಕಲಾ ನಿರ್ದೆಶನ – ಶಿವಕುಮಾರ್ ಜೆ(ಕೆಜಿಎಫ್)
    ಅತ್ಯುತ್ತಮ ಗೀತ ರಚನೆ – ಬರಗೂರು ರಾಮಚಂದ್ರಪ್ಪ(ಸಾವೇ.. ಸಾವೇ.. ಗೀತೆ)
    ಅತ್ಯುತ್ತಮ ಹಿನ್ನಲೆ ಗಾಯಕಿ – ಕಲಾವತಿ ದಯಾನಂದ(ದೇಯಿ ಬೈದೇತಿ)
    ಹಿನ್ನಲೆ ಗಾಯಕ – ಸಿದ್ಧಾರ್ಥ