Tag: ರವಿ ತೇಜ

  • Mass Jathara: ಶ್ರೀಲೀಲಾ ಜೊತೆ ಮಾಸ್ ಮಹಾರಾಜನ ಜಬರ್‌ದಸ್ತ್ ಡ್ಯಾನ್ಸ್

    Mass Jathara: ಶ್ರೀಲೀಲಾ ಜೊತೆ ಮಾಸ್ ಮಹಾರಾಜನ ಜಬರ್‌ದಸ್ತ್ ಡ್ಯಾನ್ಸ್

    ಮಾಸ್ ಮಹಾರಾಜ ರವಿ ತೇಜ ಹಾಗೂ ಶ್ರೀಲೀಲಾ (Sreeleela) ನಟನೆಯ ‘ಮಾಸ್ ಜಾತ್ರಾ’ (Mass Jathara) ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ‘ತೂ ಮೇರಾ ಲವರ್’ ಎಂಬ ಹಾಡಿಗೆ ಕಿಸ್ಸಿಕ್‌ ಬೆಡಗಿ ಜೊತೆ ರವಿ ತೇಜ (Ravi Teja) ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ನಿಧಿ ಅಗರ್ವಾಲ್ ತಿರುಗೇಟು

     

    View this post on Instagram

     

    A post shared by RAVI TEJA (@raviteja_2628)


    ‘ಧಮಾಕ’ ಸಿನಿಮಾ ಬಳಿಕ ಮತ್ತೆ ‘ಮಾಸ್ ಜಾತ್ರಾ’ ಚಿತ್ರಕ್ಕಾಗಿ ರವಿ ತೇಜ ಮತ್ತು ಶ್ರೀಲೀಲಾ ಜೊತೆಯಾಗಿದ್ದಾರೆ. ‘ತೂ ಮೇರಾ ಲವರ್’ ಎಂಬ ಹಾಡಿಗೆ ಸಖತ್ ಆಗಿ ಶ್ರೀಲೀಲಾ ಮತ್ತು ರವಿ ತೇಜ ಡ್ಯಾನ್ಸ್ ಮಾಡಿ ಧೂಳ್ ಎಬ್ಬಿಸಿದ್ದಾರೆ. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

    ಡ್ಯಾನ್ಸ್ನಿಂದಲೇ ಹೆಚ್ಚು ಹೈಲೆಟ್ ಆಗಿರೋ ಶ್ರೀಲೀಲಾ ಅವರು ‘ಮಾಸ್ ಜಾತ್ರಾ’ ಸಾಂಗ್‌ನಿಂದ ಮತ್ತಷ್ಟು ಸದ್ದು ಮಾಡ್ತಿದ್ದಾರೆ. ಮತ್ತೆ ರವಿ ತೇಜ ಮತ್ತು ಶ್ರೀಲೀಲಾ ಡ್ಯಾನ್ಸ್ ಮಗದೊಮ್ಮೆ ಮೋಡಿ ಮಾಡ್ತಿದೆ.

     

    View this post on Instagram

     

    A post shared by RAVI TEJA (@raviteja_2628)

    ‘ಮಾಸ್ ಜಾತ್ರಾ’ ಇದೇ ಮೇ 9ರಂದು ರಿಲೀಸ್ ಸಜ್ಜಾಗಿದೆ. ‘ಧಮಾಕ’ ಸಕ್ಸಸ್ ಬಳಿಕ ಮತ್ತೆ ಅದೇ ಜೋಡಿ ಒಂದಾಗಿರೋದ್ರಿಂದ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ರವಿತೇಜ ಪುತ್ರಿ

    ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ರವಿತೇಜ ಪುತ್ರಿ

    ಟಾಲಿವುಡ್ ನಟ ರವಿತೇಜ (Ravi Teja) ಸದಾ ಹೊಸ ಬಗೆಯ ಪಾತ್ರಗಳ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಅವರ ಮುದ್ದಿನ ಮಗಳು ಮೋಕ್ಷಧಾ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಭಾರತದಲ್ಲೇ ಮೊದಲ ಬಾರಿಗೆ ಅನಿರುದ್ಧ್ ಹುಕುಂ ಟೂರ್

    ರವಿತೇಜ ಮಗ ಮಹಾಧನ್ ನಿರ್ದೇಶಕನಾಗುವ ಕನಸು ಕಾಣುತ್ತಿದ್ದಾರೆ. ಇತ್ತ ಪುತ್ರಿ ಮೋಕ್ಷಧಾ (Mokshadha) ನಿರ್ಮಾಪಕಿಯಾಗುವ ನಿರ್ಣಯಕ್ಕೆ ಬಂದಿದ್ದಾರೆ. ಸಿನಿಮಾವೊಂದರಲ್ಲಿ ಕಾರ್ಯಕಾರಿ ನಿರ್ಮಾಪಕಿ ಆಗಿ ಅವರು ಕೈಜೋಡಿಸಲಿದ್ದಾರೆ. ಇದನ್ನೂ ಓದಿ:ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್‌ ಗೌಡ – ರಜತ್‌ ನಡುವೆ ಬಿರುಕು?

    ವಿನೋದ್ ನಿರ್ದೇಶನದ ಹಾಗೂ ಆನಂದ್ ದೇವರಕೊಂಡ ನಟನೆಯ ಸಿನಿಮಾದಲ್ಲಿ ಮೋಕ್ಷಧಾ ಕಾರ್ಯಕಾರಿ ನಿರ್ಮಾಪಕಿ ಆಗಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸಿತಾರಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರವಿತೇಜ ಅವರ ನಿರ್ಮಾಣ ಸಂಸ್ಥೆ ನೋಡಿಕೊಳ್ಳಲು ಈಗ ತರಬೇತಿ ಪಡೆಯುತ್ತಿದ್ದಾರೆ. ಈ ವಿಚಾರದ ಕುರಿತು ಇನ್ನೂ ಅಧಿಕೃತ ಘೋಷಣೆ ಆಗಬೇಕಿದೆ.

    ಅಂದಹಾಗೆ, ಶ್ರೀಲೀಲಾ ಜೊತೆ ರವಿತೇಜ ‘ಮಾಸ್ ಜಾತ್ರಾ’ ಎಂಬ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ರಿಲೀಸ್‌ಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ತೆಲುಗಿಗೆ ರಿಮೇಕ್ ಆಗಲಿದೆ ‘ಆವೇಶಂ’ ಸಿನಿಮಾ- ಹೀರೋ ಯಾರು?

    ತೆಲುಗಿಗೆ ರಿಮೇಕ್ ಆಗಲಿದೆ ‘ಆವೇಶಂ’ ಸಿನಿಮಾ- ಹೀರೋ ಯಾರು?

    ಹಾದ್ ಫಾಸಿಲ್ (Fahadh Faasil)  ನಟನೆಯ ‘ಆವೇಶಂ’ (Aavesham) ಮಾಲಿವುಡ್‌ನಲ್ಲಿ ಸೂಪರ್ ಸಕ್ಸಸ್ ಕಂಡಿತ್ತು. ಇದೀಗ ಈ ಚಿತ್ರ ತೆಲುಗಿಗೆ ರಿಮೇಕ್ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ತೆಲುಗು ‘ಆವೇಶಂ’ ಚಿತ್ರದಲ್ಲಿ ರವಿ ತೇಜ ಲೀಡ್ ರೋಲ್‌ನಲ್ಲಿ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ರಿಲೀಸ್

    ‘ಆವೇಶಂ’ ಸಿನಿಮಾದ ತೆಲುಗು ರೀಮೇಕ್‌ನಲ್ಲಿ ರವಿತೇಜ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಫಹಾದ್ ಫಾಸಿಲ್ ನಟಿಸಿರುವ ರಂಗ ಪಾತ್ರದಲ್ಲಿ ರವಿ ತೇಜ (Ravi Teja) ನಟಿಸಲಿದ್ದು, ಕತೆಯಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಿಕೊಡಿಕೊಂಡಿದೆಯಂತೆ ಚಿತ್ರತಂಡ. ಇದು ವಿಚಾರದ ಕುರಿತು ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

    ಬೆಂಗಳೂರಿನ ಒಬ್ಬ ರೌಡಿಯ ಕತೆಯನ್ನು ಒಳಗೊಂಡಿದ್ದ ಈ ಸಿನಿಮಾ ಕತೆ ಸರಳವಾಗಿದ್ದರು ನಟನೆ, ಕಾಮಿಡಿ ಮೂಲಕ ಜನರ ಮನಸ್ಸು ಗೆದ್ದಿತ್ತು. ಇದೀಗ ಈ ಸಿನಿಮಾ ತೆಲುಗಿಗೆ ರೀಮೇಕ್ ಆಗುತ್ತಿದೆ. ಮಲಯಾಳಂನಲ್ಲಿ ಗೆದ್ದಂತೆ ಟಾಲಿವುಡ್‌ನಲ್ಲೂ ಈ ಚಿತ್ರ ಗೆದ್ದು ಬೀಗುತ್ತಾ? ಕಾದುನೋಡಬೇಕಿದೆ.

  • ಮಾಸ್ ಮಹಾರಾಜ ರವಿತೇಜ ಜೊತೆ ಹೆಜ್ಜೆ ಹಾಕಿದ ನೂಪುರ್ ಸನೋನ್

    ಮಾಸ್ ಮಹಾರಾಜ ರವಿತೇಜ ಜೊತೆ ಹೆಜ್ಜೆ ಹಾಕಿದ ನೂಪುರ್ ಸನೋನ್

    ತೆಲುಗಿನ ಮಾಸ್ ಮಹಾರಾಜ ರವಿತೇಜ (Ravi Teja) ನಟನೆಯ ಬಹುನಿರೀಕ್ಷಿತ ಟೈಗರ್ ನಾಗೇಶ್ವರ್ ರಾವ್ (Tiger Nageshwara Rao) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. 5 ಭಾಷೆಯಲ್ಲಿ ಈ ಸಿನಿಮಾದ ಹಾಡು ಅನಾವರಣಗೊಂಡಿದೆ. ಕನ್ನಡದಲ್ಲಿ ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಹಾಡಿಗೆ ಧ್ವನಿಯಾಗಿದ್ದಾರೆ. ರವಿತೇಜ- ನೂಪುರ್ ಸನೋನ್ (Nupur Sanon)ಏಕ್ ದಮ್ ಏಕ್ ದಮ್ ಪೆಪ್ಪಿಯೆಸ್ಟ್ ಸಾಂಗ್‌ಗೆ ಹೆಜ್ಜೆ ಹಾಕಿದ್ದು, ಜಿವಿ ಪ್ರಕಾಶ್ ಟ್ಯೂನ್ ಹಾಕಿದ್ದಾರೆ.

    70ರ ಕಾಲಘಟ್ಟದ ಹೈದ್ರಾಬಾದ್‌ನ ಬಳಿ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದೆ. ಈ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ.

    ನೂಪುರ್ ಸನೋನ್- ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಇದನ್ನೂ ಓದಿ:ಸೆನ್ಸಾರ್ ಪಾಸಾದ ‘ಲೈನ್ ಮ್ಯಾನ್’ಗೆ ಸಿಕ್ತು ಯು ಸರ್ಟಿಫಿಕೇಟ್

    ‘ಟೈಗರ್ ನಾಗೇಶ್ವರ್ ರಾವ್’ ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ. ದಸರಾ ಹಬ್ಬದ ಸಂದರ್ಭ, ದಸರಾ ರಜೆ ಹಿನ್ನೆಲೆ ಪ್ಲಾನ್ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲಾಗ್ತಿದೆ. ಕಾರ್ತಿಕೇಯ-2, ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ಮಿಸಿರುವ ಅಭಿಷೇಕ್ ಅಗರ್ವಾಲ್ ತಮ್ಮದೇ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ನಡಿ ಟೈಗರ್ ನಾಗೇಶ್ವರ್ ರಾವ್ ಚಿತ್ರ ನಿರ್ಮಿಸಿದ್ದಾರೆ. ವಂಶಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಸ್‌ ಮಹಾರಾಜನ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಮಾಸ್‌ ಮಹಾರಾಜನ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ತೆಲುಗಿನ ಮಾಸ್ ಮಹಾ ರಾಜ ರವಿ ತೇಜ (Ravi Teja) ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ಕ್ರ್ಯಾಕ್ʼ ಸಿನಿಮಾದ ಸಕ್ಸಸ್ ನಂತರ ಮತ್ತೆ ಗೋಪಿಚಂದ್ ಮಲಿನೇನಿ ಜೊತೆ ಕೈಜೋಡಿಸಿದ್ದಾರೆ. ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಜೊತೆ ರವಿತೇಜ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಡೈರೆಕ್ಟರ್ ಕ್ಯಾಪ್ ತೊಟ್ಟ ‘ಚುಟು ಚುಟು’ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್

    ಇತ್ತೀಚಿಗೆ ನಟಿಸಿದ ರವಿತೇಜ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗುತ್ತಿದೆ. ಧಮಾಕ, ‘ಕ್ರ್ಯಾಕ್ʼ ಸಿನಿಮಾದ ಸಕ್ಸಸ್ ನಂತರ ಹೊಸ ಬಗೆಯ ಕಥೆಯನ್ನ ರವಿತೇಜ ಆಯ್ಕೆ ಮಾಡಿಕೊಂಡಿದ್ದಾರೆ. ಮಾಸ್ ಜೊತೆ ಕ್ಲಾಸ್ ಆಗಿ ರವಿ ತೇಜ ಮಿಂಚಲಿದ್ದಾರೆ.

    ಗಲ್ಲಾಪೆಟ್ಟಿಗೆಯಲ್ಲಿ ಸಾಲು ಸಾಲು ಸಿನಿಮಾಗಳ ಸೋಲನ್ನೇ ಕಂಡಿರುವ ಪೂಜಾ ಹೆಗ್ಡೆ ಅವರು ರವಿ ತೇಜ ಅವರಿಗೆ ನಾಯಕಿಯಾಗಿ ಜೊತೆಯಾಗುತ್ತಿದ್ದಾರೆ. ಇತ್ತೀಚಿಗೆ ಮಹೇಶ್ ಬಾಬು, ಪವನ್ ಕಲ್ಯಾಣ್ ನಟನೆಯ ಸಿನಿಮಾದಿಂದ ಕಿಕ್ ಔಟ್ ಆದ ಮೇಲೆ ಈ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ನಿರ್ದೇಶಕ ಗೋಪಿ ಚಂದ್‌ ಮಲಿನೇನಿ ಅವರೇ ಪೂಜಾಗೆ ಆಫರ್‌ ನೀಡಿದ್ದಾರೆ.

    ಮಹೇಶ್ ಬಾಬು, ಪವನ್ ಕಲ್ಯಾಣ್ ಜೊತೆಗಿನ 2 ಪ್ರಾಜೆಕ್ಟ್‌ಗಳು ಶ್ರೀಲೀಲಾ (Sreeleela) ಪಾಲಾಗಿದೆ. ಸದ್ಯ ಹೊಸ ಕಥೆ, ಆಫರ್‌ಗಾಗಿ ಕಾಯುತ್ತಿದ್ದ ಪೂಜಾ ಹೆಗ್ಡೆಗೆ ಬಂಪರ್ ಆಫರ್ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲನ್ನೇ ಕಂಡಿರುವ ಪೂಜಾಗೆ ಈ ಸಿನಿಮಾ ಸಕ್ಸಸ್ ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ. ಮತ್ತೆ ರವಿ ತೇಜ- ಪೂಜಾ ಹೆಗ್ಡೆ ಕೆಮಿಸ್ಟ್ರಿ ತೆರೆಯ ಮೇಲೆ ಯಾವ ರೀತಿ ಮೂಡಿ ಬರಲಿದೆ ಎಂಬುದರ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]