Tag: ರವಿ.ಡಿ.ಚನ್ನಣ್ಣವರ್

  • ಯುವಜನತೆ ನಿರುದ್ಯೋಗ ಮುಕ್ತವಾಗಲು ಕೌಶಲ್ಯಾಭಿವೃದ್ಧಿ ಅಗತ್ಯ: ರವಿ.ಡಿ ಚನ್ನಣ್ಣವರ್

    ಯುವಜನತೆ ನಿರುದ್ಯೋಗ ಮುಕ್ತವಾಗಲು ಕೌಶಲ್ಯಾಭಿವೃದ್ಧಿ ಅಗತ್ಯ: ರವಿ.ಡಿ ಚನ್ನಣ್ಣವರ್

    ಚಿತ್ರದುರ್ಗ: ವಿದ್ಯೆ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿರಬೇಕು, ಯುವಕರು ನಿರುದ್ಯೋಗದಿಂದ ಮುಕ್ತರಾಗಲು ಕೌಶಲ್ಯಾಭಿವೃದ್ದಿ ಅಗತ್ಯವೆಂದು ಸಿ.ಐ.ಡಿ ಎಸ್.ಪಿ. ರವಿ.ಡಿ ಚನ್ನಣ್ಣನವರ್ ಅಭಿಪ್ರಾಯಪಟ್ಟಿದ್ದಾರೆ.

    ಕೋಟೆನಾಡು ಚಿತ್ರದುರ್ಗದ ಭೋವಿಗುರುಪೀಠದ ಪೀಠಾಧ್ಯಾಕ್ಷರಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದರ್ಶನ ಪಡೆದು ಬಳಿಕ ಮಾತನಾಡಿದ ರವಿ.ಡಿ ಚನ್ನಣ್ಣನವರ್, ವಿದ್ಯೆ ಕೌಶಲ್ಯಾಭಿವೃದ್ಧಿಗೆ ತಕ್ಕಂತೆ ಇರಬೇಕು. ಕೌಶಲ್ಯತೆಯನ್ನು ಯುವಕರು ಹೇಗೆ ಬಳಸಬೇಕು ಎಂಬುದನ್ನು ಅರಿತಾಗ ಮಾತ್ರ ಬದುಕಲ್ಲಿ ಯಶಸ್ವಿಯಾಗಲು ಸಾಧ್ಯ. ಅಲ್ಲದೇ ಬದುಕಿನಲ್ಲಿ ಕ್ರಿಯಾಶೀಲತೆಯಿಂದ ಸೃಜನಶೀಲತೆ ಹುಟ್ಟಿದಾಗ ಮಾತ್ರ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಯುವಕರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಡಿಕೆಶಿ ಹೊಡೆದಿದ್ದು ಕಾಂಗ್ರೆಸ್ ಅಲ್ಲ, ಜೆಡಿಎಸ್ ಕಾರ್ಯಕರ್ತನಿಗೆ


    ಯುವಕರಿಗೆ ಬದುಕಿನ ಭರವಸೆ ಮುಖ್ಯ, ಅವರು ಪರಾವಲಂಬಿಯಾಗಿರಬಾರದು, ಉದ್ಯೋಗದಲ್ಲಾಗಲೀ, ಬದುಕಿನಲ್ಲಾಗಲೀ, ಸ್ವಾವಲಂಬಿಯಾಗಿ ಬದುಕಬೇಕು. ರಾಷ್ಟ್ರದ ಅಭಿವೃದ್ಧಿಯೊಟ್ಟಿಗೆ ಸಮಾಜದ ಅಭಿವೃದ್ಧಿಯು ಸಹ ಮುಖ್ಯವಾಗಿರುತ್ತದೆ. ಹಾಗಾಗಿ ಯುವಕರು ತಮ್ಮ ಮೇಲಿರುವ ಬಹುದೊಡ್ಡ ಜವಾಬ್ದಾರಿಯನ್ನು ಅರಿತು ಬದುಕಿನ ಹೆಜ್ಜೆಗಳನ್ನು ಇಡಬೇಕು ಎಂದು ಸಲಹೆ ನೀಡಿದರು.

    ಈ ವೇಳೆ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಿಒಓ ಗೋವಿಂದಪ್ಪ, ಮುಖಂಡರಾದ ಲಕ್ಷ್ಮಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ರೂಲ್ ಬಗ್ಗೆ ಚನ್ನಣ್ಣವರ್ ಪಾಠ – ರಾತ್ರಿ ಬೈಕ್ ಏರಿ ರೌಂಡ್ಸ್

    ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ರೂಲ್ ಬಗ್ಗೆ ಚನ್ನಣ್ಣವರ್ ಪಾಠ – ರಾತ್ರಿ ಬೈಕ್ ಏರಿ ರೌಂಡ್ಸ್

    ಬೆಂಗಳೂರು: ಎಸ್‍ಪಿ ರವಿ.ಡಿ.ಚನ್ನಣ್ಣವರ್ ಅವರು ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣಕ್ಕೆ ದಿಢೀರ್ ಭೇಟಿ ಕೊಟ್ಟು ರಾತ್ರೋರಾತ್ರಿ ಸಿಟಿ ರೌಂಡ್ಸ್ ಹಾಕಿದ್ದಾರೆ.

    ರವಿ.ಡಿ.ಚನ್ನಣ್ಣವರ್ ಅವರು ನೆಲಮಂಗಲಕ್ಕೆ ರಾತ್ರಿ ಭೇಟಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಪಾಠ ಮಾಡಿದ್ದಾರೆ. ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಒಂದೆಡೆ ನಿಲ್ಲಿಸಿ ಅವರಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಹಾಕಿಸಿ ನೆಲಮಂಗಲ ಪಟ್ಟಣದಲ್ಲಿ ರೌಂಡ್ಸ್ ಹಾಕಿಸಿದ್ದಾರೆ.

    ಚನ್ನಣ್ಣವರ್ ಮೊದಲು ಜೀಪಿನಲ್ಲಿ ಪ್ರಯಾಣ ಮಾಡಿದ್ದರು. ನಂತರ ಜೀಪ್ ಬಿಟ್ಟು ಹೆಲ್ಮೆಟ್ ಹಾಕಿಕೊಂಡು ಸಿಬ್ಬಂದಿ ಜೊತೆ ಬೈಕಿನಲ್ಲಿ ನಗರವನ್ನು ಸುತ್ತಾಡಿದ್ದಾರೆ. ಸುಮಾರು ಒಂದು ಕಿಲೋಮೀಟರ್ ಬೈಕಿನಲ್ಲಿ ಪ್ರಯಾಣ ಮಾಡಿ ನಂತರ ಪೊಲೀಸ್ ಜೀಪ್ ಏರಿದ್ದಾರೆ.

    ರವಿ.ಡಿ.ಚನ್ನಣ್ಣವರ್ ಹೊಸ ಟ್ರಾಫಿಕ್ ನಿಮಯದ ಬಂದ ನಂತರ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಿದ್ದರು ಎಂದು ಪರಿಶೀಲಿಸಲು ಸಿಟಿ ರೌಂಡ್ಸ್ ಹಾಕಿದ್ದಾರೆ. ನೆಲಮಂಗಲ ಪಟ್ಟಣದ ಎಲ್ಲಾ ಬಡಾವಣೆಯಲ್ಲೂ ಎಸ್‍ಪಿ ಚನ್ನಣ್ಣವರ್ ರೌಂಡ್ಸ್ ಹಾಕಿದ್ದಾರೆ.