Tag: ರವಿ ಟಂಡನ್

  • ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ, ಚಿಯರ್ಸ್ ಪಪ್ಪಾ: ರವೀನಾ ಟಂಡನ್

    ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ, ಚಿಯರ್ಸ್ ಪಪ್ಪಾ: ರವೀನಾ ಟಂಡನ್

    ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ತಂದೆ ರವಿ ಟಂಡನ್ ಅವರ ಜನ್ಮದಿನದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಥ್ರೋಬ್ಯಾಕ್ ಪೋಸ್ಟ್‌ವೊಂದನ್ನು ಮಾಡಿದ್ದು, ಅದಕ್ಕೆ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ. ನನ್ನ ಜೀವನದಲ್ಲಿ ಮತ್ತೆಂದೂ ಇದೇ ರೀತಿ ನಿಮ್ಮ ಜನ್ಮದಿನದ ಆಚರಣೆಯನ್ನು ಆಚರಿಸಲು ಆಗುವುದಿಲ್ಲ. ನೀವು ಯಾವಾಗಲೂ ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ. ಚಿಯರ್ಸ್ ಎಂದು ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಭಾವುಕ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ ಈ ಚಿತ್ರವು ರವಿ ಟಂಡನ್ ಅವರ ಕಳೆದ ವರ್ಷದ ಹುಟ್ಟುಹಬ್ಬದ ಚಿತ್ರವಾಗಿದೆ. ಚಿತ್ರದಲ್ಲಿ ರವಿ ಟಂಡನ್ ಅವರು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅವರ ಹುಟ್ಟುಹಬ್ಬದ ಕೇಕ್ ಅನ್ನು ನಾವು ಕಾಣಬಹುದು. ಅವರು ಹಲವು ದಿನಗಳಿಂದ ಶ್ವಾಸಕೋಶದ ಫೈಬ್ರೋಸಿಸ್‍ನಿಂದ ಬಳಲುತ್ತಿದ್ದು, ಉಸಿರಾಟದ ವೈಫಲ್ಯದಿಂದ 86 ವರ್ಷದ ರವಿ ಅವರು ಇದೇ ಫೆಬ್ರವರಿ 11 ರಂದು ನಿಧನರಾದರು. ಇದನ್ನೂ ಓದಿ: ರವೀನಾ ಟಂಡನ್ ತಂದೆ ಖ್ಯಾತ ನಿರ್ದೇಶಕ ‘ರವಿ ಟಂಡನ್’ ನಿಧನ

     

    ರವಿ ಟಂಡನ್ ಅವರು ಖೇಲ್ ಖೇಲ್ ಮೇ, ಅನ್ಹೋನಿ, ನಜ್ರಾನಾ, ಮಜ್ಬೂರ್, ಖುದ್-ದಾರ್ ಮತ್ತು ಜಿಂದಗಿ ಸಿನಿಮಾಗಳನ್ನು ನಿರ್ದೇಶಿಸಿದ್ದು, ಈ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು. ರವೀನಾ ಟಂಡನ್ ಸಹ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ರವೀನಾ ಅವರು ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಾಡಿದ್ದಾರೆ.

  • ರವೀನಾ ಟಂಡನ್ ತಂದೆ ಖ್ಯಾತ ನಿರ್ದೇಶಕ ‘ರವಿ ಟಂಡನ್’ ನಿಧನ

    ರವೀನಾ ಟಂಡನ್ ತಂದೆ ಖ್ಯಾತ ನಿರ್ದೇಶಕ ‘ರವಿ ಟಂಡನ್’ ನಿಧನ

    ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ರವಿ ಟಂಡನ್ ಇಂದು ನಿಧನರಾಗಿದ್ದಾರೆ.

    ಬಾಲಿವುಡ್ ಸಿನಿಮಾ ನಿರ್ಮಾಪಕ, ನಿರ್ದೇಶಕ ಮತ್ತು ರವೀನಾ ಟಂಡನ್ ಅವರ ತಂದೆ ರವಿ ಟಂಡನ್(86) ಇಂದು ನಿಧನರಾದರು. ಈ ಕುರಿತು ರವೀನಾ ಟಂಡನ್ ಸೋಶಿಯೊಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ತಂದೆ ಅಗಲಿರುವ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಅವರು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಈ ಹಿಂದೂ ಕುಟುಂಬ ಫೇಮಸ್..!

    ರವೀನಾ ಅವರು ತಮ್ಮ ತಂದೆಯೊಂದಿಗೆ ಥ್ರೋಬ್ಯಾಕ್ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನೀವು ಯಾವಾಗಲೂ ನನ್ನೊಂದಿಗೆ ನಡೆಯುತ್ತೀರಿ. ನಾನು ಯಾವಾಗಲೂ ನೀನಾಗಿರುತ್ತೇನೆ. ನಾನು ಎಂದಿಗೂ ನಿಮ್ಮನ್ನು ಬಿಡುವುದಿಲ್ಲ. ಲವ್ ಯು ಅಪ್ಪಾ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಬಾಲಿವುಡ್ ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

    ಈ ಪೋಸ್ಟ್ ಗೆ ನೀಲಂ ಕೊಠಾರಿ, ಹೃದಯಪೂರ್ವಕ ಸಂತಾಪಗಳು ಎಂದು ಕಾಮೆಂಟ್ ಮಾಡಿದರೆ, ಜೂಹಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂತಾಪಗಳು ರವೀನಾ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

    ರವಿ ಟಂಡನ್ ಅವರು ಖೇಲ್ ಖೇಲ್ ಮೇ, ಅನ್ಹೋನಿ, ನಜ್ರಾನಾ, ಮಜ್ಬೂರ್, ಖುದ್-ದಾರ್ ಮತ್ತು ಜಿಂದಗಿ ಸಿನಿಮಾಗಳನ್ನು ನಿರ್ದೇಶಿಸಿದ್ದು, ಈ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು. ರವೀನಾ ಟಂಡನ್ ಸಹ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ರವೀನಾ ಅವರು ಚಂದನವನದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್ – 2’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಾಡಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ