Tag: ರವಿ ಚನ್ನಣ್ಣನವರ್

  • ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಜಗದೀಶ್‌ ಅರ್ಜಿ

    ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಜಗದೀಶ್‌ ಅರ್ಜಿ

    ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆ ಕೋರಿ ವಕೀಲ ಕೆ.ಎನ್.ಜಗದೀಶ್ ಕುಮಾರ್ ರಿಟ್ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾರೆ.

    ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಎದುರಿಸುತ್ತಿರುವ ರವಿ ಡಿ ಚೆನ್ನಣ್ಣ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿರುವ ವಕೀಲ ಜಗದೀಶ್ ಈ ಅರ್ಜಿ ಸಲ್ಲಿಕೆ ಮಾಡಿದ್ದು, ಸಂಬಂಧಿಕರ ಹೆಸರಿನಲ್ಲಿ ಅಕ್ರಮ‌ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಅಷ್ಟೇ ಅಲ್ಲದೇ ಬೇನಾಮಿ ಹೆಸರಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ. ಜೊತೆಗೆ ಪೋಷಕರ ಹೆಸರಿನಲ್ಲೂ ಅಪಾರ ಆಸ್ತಿ ಖರೀದಿಸಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.

    ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಅರ್ಜಿಯನ್ನು ಬರೆದಿದ್ದು, ರವಿ ಚನ್ನಣ್ಣವರ್‌ ವಿರುದ್ಧ ಸರ್ಕಾರ ತನಿಖೆ ನಡೆಸಲು ಹಿಂದೇಟು ಹಾಕಿದೆ. ಹೀಗಾಗಿ ಸಿಬಿಐ, ಇಡಿ ಯಿಂದ ನಡೆಸುವಂತೆ ಮನವಿ ಮಾಡಿದ್ದಾರೆ. ವಕೀಲರ ಮೂಲಕ ಕೆ.ಎನ್.ಜಗದೀಶ್ ರಿಟ್ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ : ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

  • ರವಿ ಡಿ.ಚನ್ನಣ್ಣನವರ್‌ ಒಬ್ಬ ಪ್ರಾಮಾಣಿಕ ಅಧಿಕಾರಿ: ಶ್ರೀರಾಮುಲು

    ರವಿ ಡಿ.ಚನ್ನಣ್ಣನವರ್‌ ಒಬ್ಬ ಪ್ರಾಮಾಣಿಕ ಅಧಿಕಾರಿ: ಶ್ರೀರಾಮುಲು

    ಬಳ್ಳಾರಿ: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್‌ ಒಬ್ಬ ಪ್ರಾಮಾಣಿಕ ಅಧಿಕಾರಿ, ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರು ಬೆಳೆದುಬಂದ ಹಾದಿ, ಶಿಕ್ಷಣ ಪಡೆದ ರೀತಿ, ಅವರ ತಂದೆ, ತಾಯಿ ಎಲ್ಲವನ್ನೂ ನಾನು ನೋಡಿದ್ದೇನೆ. ಹೀಗಾಗಿ ಅವರ ಮೇಲೆ ಬಂದಿರುವ ಆರೋಪ ಶುದ್ಧ ಸುಳ್ಳು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

    ರವಿ ಚೆನ್ನಣ್ಣನವರ್ ಬಗ್ಗೆ ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಆರೋಪಗಳು ಯಾರಿಗೂ ಬಿಟ್ಟಿಲ್ಲ, ಹಾಗೆ ಅವರ ಮೇಲೆ ಈಗ ಆರೋಪ ಬಂದಿದೆ, ಆರೋಪ ಮಾಡಿದ್ದಾರೆ ಎಂದಾಕ್ಷಣ, ಅವರ ಭ್ರಷ್ಟ ಅಧಿಕಾರಿ ಎನ್ನುವುದು ತಪ್ಪು. ಇಡೀ ರಾಜ್ಯದಲ್ಲಿ ಯುವಕರಿಗೆ ಮಾದರಿಯಾದ ವ್ಯಕ್ತಿ ರವಿ, ಲಕ್ಷಾಂತರ ಜನರು ಅವರನ್ನು ಮೆಚ್ಚಿದ್ದಾರೆ. ಭ್ರಷ್ಟಾಚಾರದ ಆರೋಪಗಳು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರನ್ನು ಬಿಟಿಲ್ಲ, ಅವರು ಕಾನೂನು ಹೋರಾಟದ ಮೂಲಕ ಗೆದ್ದ ಬರಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ ಎಂದರು. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    ಸಚಿವ ಆನಂದ್ ಸಿಂಗ್ ಹಾಗೂ ಡಿ.ಕೆ ಶಿವಕುಮಾರ್ ಭೇಟಿ ಕುರಿತಾಗಿ ಮಾತನಾಡಿ, ಅವರಿಬ್ಬರ ಬೇಟಿ ಬಗ್ಗೆ ಯಾವುದೇ ರಾಜಕೀಯ ಬಣ್ಣ ಬರೆಯುವುದು ಬೇಡ, ಆನಂದ್ ಸಿಂಗ್ ನೇರಾ, ನೇರಾ ವ್ಯಕ್ತಿ ಹಾಗೂ ನನ್ನ ಆತ್ಮೀಯ ಸ್ನೇಹಿತ. ಆನಂದ್ ಸಿಂಗ್ ದೂರ ದೃಷ್ಟಿ ಇರುವ ನಾಯಕರು. ಬೇರೆ ಯಾವುದೋ ಕಾರಣಕ್ಕೆ ಡಿ.ಕೆ ಶಿವಕುಮಾರನ್ನು ಮೀಟ್ ಆಗಿರಬಹುದಷ್ಟೇ, ಆನಂದ್ ಸಿಂಗ್ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ಅವರು ದೂರ ಹೋಗುವುದಾದರೆ ನೇರವಾಗಿ ಹೇಳುತ್ತಿದ್ದರು. ಅವರು ಮೋಸ ಮಾಡುವಂತಹ ವ್ಯಕ್ತಿ ಅಲ್ಲ. ಅವರು ಎಲ್ಲೂ ಹೋಗಲ್ಲ. 2023 ಚುನಾವಣೆಯಲ್ಲಿ ಅವರ ನೇತೃತ್ವದಲ್ಲೇ ಚುನಾವಣೆ ಮಾಡ್ತೀವಿ. ಅವರು ನಾವು ಒಟ್ಟಾಗಿ ಅಖಂಡ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

  • ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

    ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

    ಬೆಂಗಳೂರು: ನನ್ನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಲಾಗಿದೆ. ಸುಳ್ಳು ಆರೋಪ ಮಾಡಿದವರ ವಿರುದ್ಧ 3 ಕೋಟಿ ರೂ. ಮಾನನಷ್ಟ (Defamation)ಪ್ರಕರಣ ದಾಖಲಿಸಲಾಗುವುದು ಎಂದು ಐಪಿಎಸ್‌ ಅಧಿಕಾರಿ ರವಿ ಡಿ ಚನ್ನಣ್ಣನವರ್‌(Ravi D Channannavar) ಹೇಳಿದ್ದಾರೆ.

    ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಚನ್ನಣ್ಣನವರ್‌ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?
    ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ಕೆಲ ವ್ಯಕ್ತಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬದ ಮೇಲೆ ಆಧಾರರಹಿತ ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಇವೆಲ್ಲವೂ ಸುಳ್ಳಾಗಿದ್ದು, ದುರುದ್ದೇಶದಿಂದ ಕೂಡಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ, ನನ್ನ ತಂದೆ-ತಾಯಿಯವರ ಹೆಸರಲ್ಲಿರುವ ಕೆಲ ಪಹಣಿ ಹಾಕಿ, ಆರೋಪಿಸಿದ್ದು, ಅವುಗಳೆಲ್ಲ ಕಾನೂನು ಬದ್ಧವಾಗಿಯೇ ಖರೀದಿಸಿದ್ದೇನೆ. ಇವುಗಳು ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಾಗಿವೆ. ಅವುಗಳನ್ನೆಲ್ಲ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.

    ಇವುಗಳನ್ನು ನಾನು ಭ್ರಷ್ಟ ರೀತಿಯಿಂದ ಸಂಪಾದಿಸಿದ್ದೇನೆ ಎಂದು ಸುಳ್ಳು ಸುದ್ದಿಗಳನ್ನು ಹರಡಿ ನನ್ನನ್ನು ತೇಜೋವಧೆ ಮಾಡಬೇಕೆಂದೇ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುತ್ತಿದ್ದು, ನಾನೊಬ್ಬ ಅಖಿಲ ಭಾರತೀಯ ಸೇವಕನಾಗಿದ್ದು, ಸೇವಾ ನಿಯಮಗಳ ಅಡಿ ವರ್ತಿಸಬೇಕಾದ್ದು ನನ್ನ ಕರ್ತವ್ಯ. ಆದ್ದರಿಂದ ಈ ಕುರಿತಂತೆ ನಾನು ಇದಾವುದಕ್ಕೂ ನಾನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸದೇ ಕಾನೂನುಬದ್ಧವಾಗಿ ಕ್ರಮ ಕೈಗೊಂಡಿರುತ್ತೇನೆ.

    ನಾನು ಈಗಾಗಲೇ ಕಾನೂನಾತ್ಮಕವಾಗಿ ನಮ್ಮ ನ್ಯಾಯವಾದಿಗಳ ಮೂಲಕ ಲೀಗಲ್ ನೋಟಿಸ್ ನೀಡಿರುತ್ತೇನೆ. ಇದಕ್ಕೆ ಉತ್ತರ ಬಂದಿರುವುದಿಲ್ಲ ಈ ಕುರಿತು ಸಂಬಂಧಪಟ್ಟ ಮಾನ್ಯ ನ್ಯಾಯಾಲಯದಲ್ಲಿ 3 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು(Criminal Defamation) ದಾಖಲಿಸಲಿದ್ದೇನೆ. ಹಾಗೆಯೇ ಸುಳ್ಳು ಆಪಾದನೆ ಮಾಡಿದ್ದಕ್ಕೆ, ಎರಡು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಕೇಸ್ ಹೂಡಲಿದ್ದೇನೆ.

    ನನಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಾಲಯ ತೀರ್ಪು ಕೊಡುವವರಿಗೆ, ಎಲ್ಲಾ ಸುಳ್ಳು ಸುದ್ದಿಗಳನ್ನು ನಂಬದಂತೆ, ಎಲ್ಲ ಆತ್ಮೀಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

    ಮಾಧ್ಯಮಗಳು ಪ್ರಚಾರ ಮಾಡದಂತೆ ತಡೆಯಜ್ಞೆ ತಂದದ್ದು ಅವುಗಳ ಅಭಿವ್ಯಕ್ತಿ ಸತ್ವವನ್ನು ಕುಗ್ಗಿಸಲು ಅಲ್ಲ. ಅನೇಕ ಸಂಕಷ್ಟಗಳ ನಡುವೆ ಬೆಳೆದ ನಾನು ನನ್ನ ಸ್ವಾಭಿಮಾನ ಮತ್ತು ವ್ಯಕ್ತಿತ್ವದ ಬಗ್ಗೆ ಸದಾ ಎಚ್ಚರದಲ್ಲಿ ಇದ್ದೇನೆ. ಕೆಲವು ಸುಳ್ಳು ಸುದ್ದಿಗಳು ನನ್ನ ಬಗ್ಗೆ ಹರಿದಾಡಿದ ಕಾರಣ ನಾನು ತಡೆಯಜ್ಞೆ ತಂದದ್ದನ್ನು ಅನ್ಯತಾ ಭಾವಿಸಬಾರದೆಂದು ಈ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಚಿಸಿದ್ದೇನೆ.

    ನನಗೆ ನ್ಯಾಯವಾದಿಗಳ ಬಗ್ಗೆ ಸ್ವಚ್ಛ ವ್ಯವಸ್ಥೆ ಬಯಸುವವರ ಬಗ್ಗೆ, ಅಪಾರ ಗೌರವವಿದೆ, ಈ ಮೂಲಕ ನನ್ನ ಆತ್ಮೀಯರೆಲ್ಲರಿಗೂ ಮನವಿ ಮಾಡುವುದೇನೆಂದರೆ, ತಾವು ದಯಮಾಡಿ ಯಾವುದೇ ಪ್ರತಿಕ್ರಿಯೆ ನೀಡಬಾರದು, ಅಶ್ಲೀಲ ಪದ ಬಳಕೆ, ಹೀಯಾಳಿಸುವುದನ್ನು ಮಾಡಬಾರದು. ಎಂದು ಎಲ್ಲಾ ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತೇನೆ.

  • ಆರೋಪಿಗಳ ರಕ್ಷಣೆಗೆ ಲಂಚ – ರವಿ ಡಿ.ಚನ್ನಣ್ಣನವರ್ ಅಮಾನತಿಗೆ AAP ಆಗ್ರಹ

    ಆರೋಪಿಗಳ ರಕ್ಷಣೆಗೆ ಲಂಚ – ರವಿ ಡಿ.ಚನ್ನಣ್ಣನವರ್ ಅಮಾನತಿಗೆ AAP ಆಗ್ರಹ

    ಬೆಂಗಳೂರು: ಅಕ್ರಮ ಮರಳು ದಂಧೆ ಪ್ರಕರಣವನ್ನು ಮುಚ್ಚಿ ಹಾಕಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ರನ್ನು ಅಮಾನತು ಮಾಡಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಆಗ್ರಹಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಜಗದೀಶ್ ವಿ ಸದಂ, ಕ್ರಷರ್ ಉದ್ಯಮಿ ಸೇರಿ ಹಲವರಿಂದ 3.96 ಕೋಟಿ ಮೊತ್ತ ವಂಚನೆಯಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನು ಆಧರಿಸಿ ಆರೋಪಿಗಳ ವಿರುದ್ಧ ರವಿ ಡಿ.ಚನ್ನಣ್ಣನವರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕಾಗಿತ್ತು. ಆದರೆ ಬೇಲಿಯೇ ಎದ್ದು ಹೊಲ ಮೇಯ್ತು ಎಂಬ ಗಾದೆಯಂತೆ, ಪೊಲೀಸ್ ಅಧಿಕಾರಿಗಳೇ ಆರೋಪಿಗಳಿಂದ 50 ಲಕ್ಷ ರೂ. ಲಂಚ ಪಡೆದಿರುವ ಆರೋಪ ಕೇಳಿಬಂದಿದೆ. ಇಂತಹ ಗಂಭೀರ ಆರೋಪ ಹೊತ್ತಿರುವ ರವಿ ಡಿ.ಚನ್ನಣ್ಣನವರ್ ಸಿಐಡಿ ಎಸ್‍ಪಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ. ತಕ್ಷಣವೇ ಅಮಾನತು ಮಾಡಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೋದಿಯ ಮೆಚ್ಚುಗೆಗೆ ಪಾತ್ರವಾಗಿದ್ದ ಕಾಮೇಗೌಡರ ಸಾಮಾಜಿಕ ಸೇವೆಗೆ ಅಧಿಕಾರಿಗಳು ಅಡ್ಡಿ

    ಪ್ರಕರಣ ಸಂಬಂಧ ಮಂಜುನಾಥ್ ಎಂಬುವವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ರವಿ ಚನ್ನಣ್ಣನವರ್ 25 ಲಕ್ಷ, ಡಿವೈಎಸ್‍ಪಿ 15 ಲಕ್ಷ ಹಾಗೂ ಮತ್ತೊಬ್ಬ ಅಧಿಕಾರಿ 10 ಲಕ್ಷ ರೂಪಾಯಿ ಸ್ವೀಕರಿಸಿರುವ ಕುರಿತು ದೂರಿನಲ್ಲಿ ಸ್ಪಷ್ವವಾಗಿ ಉಲ್ಲೇಖಿಸಿದ್ದಾರೆ. ಪ್ರಭಾವಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲು ಕೂಡ ಪೊಲೀಸ್ ಅಧಿಕಾರಿಗಳು ಲಕ್ಷಗಟ್ಟಲೆ ಲಂಚ ಕೇಳಿರುವ ಮಾಹಿತಿ ದೂರಿನಲ್ಲಿದೆ. ಆರೋಪಗಳಿಗೆ ಸಂಬಂಧಿಸಿ ಧ್ವನಿ ಮುದ್ರಣ, ವಾಟ್ಸಪ್ ಸಂದೇಶ ಮುಂತಾದ ಸಾಕ್ಷಿಗಳಿವೆ ಎಂದು ಮಂಜುನಾಥ್ ಹೇಳಿದ್ದಾರೆ. ಅವೆಲ್ಲದರ ಆಧಾರದಲ್ಲಿ ತನಿಖೆ ನಡೆಸಿ, ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದವರಿಗೆ ಹಾಗೂ ಅವರನ್ನು ರಕ್ಷಣೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾಚಿಕೆಗೇಡಿನ ಶಿಕ್ಷಣ ಸಚಿವ: ಬಿ.ಸಿ.ನಾಗೇಶ್ ವಿರುದ್ಧ ಹೆಚ್.ಡಿ.ರೇವಣ್ಣ ಕಿಡಿ

  • ನಾನು ರಾಜಕೀಯ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ: ಚನ್ನಣ್ಣವರ್ ಸ್ಪಷ್ಟನೆ

    ನಾನು ರಾಜಕೀಯ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ: ಚನ್ನಣ್ಣವರ್ ಸ್ಪಷ್ಟನೆ

    ನವದೆಹಲಿ: ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗೆ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ನಾನು ಭರವಸೆ ಎಂಬ ಪುಸ್ತಕವನ್ನು ಬರೆಯುತ್ತಿದ್ದು, ಇದರ ಪ್ರಯುಕ್ತ ಇತ್ತೀಚೆಗೆ ನನ್ನ ಇತ್ತೀಚಿನ ರಜೆ ದಿನಗಳಲ್ಲಿ ನನ್ನ ಹಳೆಯ ಸ್ನೇಹಿತರ ಮನೆಗಳನ್ನು ದೇವಸ್ಥಾನಗಳನ್ನು, ಶ್ರೀ ಮಠಗಳನ್ನು ಭೇಟಿಯಾಗಿ ಮಾಹಿತಿ ಕಲೆಹಾಕುತ್ತಿದ್ದೇನೆ. ಆ ಸಂದರ್ಭದ ವಿವಿಧ ಫೋಟೋಗಳನ್ನು ಉಪಯೋಗಿಸಿಕೊಂಡು ಕೆಲವು ಮಾಧ್ಯಮಗಳು ವಿಶೇಷವಾದ ಅರ್ಥವನ್ನು ಕಲ್ಪಸಿ ಬಿತ್ತರಿಸುತ್ತಿವೆ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಅದಕ್ಕೆ ಯಾವುದೇ ವಿಶೇಷತೆ ಮತ್ತು ಅಪಾರ್ಥವನ್ನು ಕಲ್ಪಿಸಬೇಡಿ. ನಾನು ರಾಜಕೀಯ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ ಎಂಬುದನ್ನು ಈ ಮೂಲಕವಾಗಿ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ:  ಬಿಜೆಪಿ ಸೇರುತ್ತಾರಾ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್?

    ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಫೇಮಸ್ ಆಗಿರುವ ರವಿ ಡಿ ಚನ್ನಣ್ಣನವರ್ ಅವರನ್ನು  ಬಿಜೆಪಿ ಸೆಳೆಯಲು ಮುಂದಾಗಿದೆಯಂತೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

    ಕಳೆದ ಮಂಗಳವಾರ ದೆಹಲಿಯಲ್ಲಿ ರವಿ ಚನ್ನಣ್ಣನವರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದರು. ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆಗೂ ಮುನ್ನ ಸಂತೋಷ್ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ರವಿ ಚನ್ನಣ್ಣನವರ್ ಕೂಡಾ ಇದ್ದರು ಎಂದು ಮೂಲಗಳು ಹೇಳಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಸಭೆ ಕೂಡಾ ನಡೆದಿದೆ ಎಂದು ಹೇಳಲಾಗುತ್ತಿತ್ತು

  • ಬಿಜೆಪಿ ಸೇರುತ್ತಾರಾ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್?

    ಬಿಜೆಪಿ ಸೇರುತ್ತಾರಾ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್?

    ಶಬ್ಬೀರ್ ನಿಡಗುಂದಿ
    ನವದೆಹಲಿ: ಅಣ್ಣಾಮಲೈ ಬಳಿಕ ರಾಜ್ಯದ ಮತ್ತೊಬ್ಬ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಶೀಘ್ರದಲ್ಲಿ ಬಿಜೆಪಿ ಸೇರುವ ತಯಾರಿಯಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಉನ್ನತ ಹುದ್ದೆಯ ಕನಸು ಕಂಡು ಹಗಲಿರುಳು ಓದಿ ದಕ್ಕಿಸಿಕೊಂಡ ಐಎಎಸ್, ಐಪಿಎಸ್ ನಂತಹ ಉನ್ನತ ಸ್ಥಾನಗಳನ್ನು ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹದೊಂದು ಟ್ರೆಂಡ್ ಶುರುವಾಗಿದ್ದು ಯುವ ಅಧಿಕಾರಿಗಳು ರಾಜಕೀಯದತ್ತ ಮುಖ ಮಾಡಿದ್ದು ಈಗ ಚನ್ನಣ್ಣನವರ್ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ವಿಚಾರವನ್ನು  ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಫೇಮಸ್ ಆಗಿರುವ ರವಿ ಡಿ ಚನ್ನಣ್ಣನವರ್‍ರನ್ನ ಬಿಜೆಪಿ ಸೆಳೆಯಲು ಮುಂದಾಗಿದೆಯಂತೆ. ಈ ಬಗ್ಗೆ ಪ್ರಾಥಮಿಕ ಮಾತುಕತೆಗಳು ನಡೆಯುತ್ತಿದ್ದು ರವಿ ಡಿ ಚನ್ನಣ್ಣನವರ್ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

    ಕಳೆದ ಮಂಗಳವಾರ ದೆಹಲಿಯಲ್ಲಿ ರವಿ ಚನ್ನಣ್ಣನವರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ. ಕೊಳ್ಳೇಗಾಲದ ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸೇರ್ಪಡೆಗೂ ಮುನ್ನ ಮಹೇಶ್ ಸಂತೋಷ್ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ರವಿ ಚನ್ನಣ್ಣನವರ್ ಕೂಡಾ ಇದ್ದರು ಎಂದು ಮೂಲಗಳು ಹೇಳಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಸಭೆ ಕೂಡಾ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜೋಗ ವೀಕ್ಷಣೆಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

     

    ಅಣ್ಣಾಮಲೈ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ರವಿ ಚನ್ನಣ್ಣನವರ್ ಕೂಡಾ ರಾಜಕೀಯಕ್ಕೆ ಸೇರಲು ಉತ್ಸುಕರಾಗಿದ್ದು ಮುಂದಿನ ದಿನಗಳಲ್ಲಿ ಅಣ್ಣಾಮಲೈ ದಾರಿ ಹಿಡಿಯಬಹುದು ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲೂ ಜನಪ್ರಿಯ ಅಧಿಕಾರಿಗಳಿಗೆ ಆದ್ಯತೆ ನೀಡಲು ಬಿಜೆಪಿ ಪ್ಲ್ಯಾನ್ ಮಾಡಿದ್ದು ವರ್ಚಸ್ಸು ಹೆಚ್ಚಿಸುವ ಲೆಕ್ಕ ಲೆಕ್ಕಚಾರದಲ್ಲಿ ಇದೆಯಂತೆ.

    ರಾಜ್ಯದ ಮಟ್ಟಿಗೆ ರವಿ ಡಿ ಚನ್ನಣ್ಣನವರ್ ಪ್ರಖ್ಯಾತಿ ಪಡೆದಿದ್ದು ಸಿಂಗಂ ಎಂದು ಕರೆಸಿಕೊಳ್ಳುತ್ತಿದ್ದಾರೆ. ಗದಗ ಮೂಲದ ಈ ಐಪಿಎಸ್ ಅಧಿಕಾರಿಯನ್ನು ರಾಜ್ಯದ ದೊಡ್ಡ ಪ್ರಮಾಣದ ಯುವ ಸಮುದಾಯದ ಸ್ಫೂರ್ತಿಯಾಗಿಸಿಕೊಂಡಿದ್ದು ಮುಂದಿನ ಚುನಾವಣೆಗೆ ಇವರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ಲೆಕ್ಕಚಾರದಲ್ಲಿ ಬಿಜೆಪಿ ಇದೆ ಎನ್ನಲಾಗುತ್ತಿದೆ.

  • ಬದುಕು ವ್ಯರ್ಥ ಮಾಡದೆ ಸಮಯ ಅರ್ಥ ಮಾಡಿಕೊಂಡು ಬದುಕಬೇಕು: ಚನ್ನಣ್ಣನವರ್

    ಬದುಕು ವ್ಯರ್ಥ ಮಾಡದೆ ಸಮಯ ಅರ್ಥ ಮಾಡಿಕೊಂಡು ಬದುಕಬೇಕು: ಚನ್ನಣ್ಣನವರ್

    – ಒಳ್ಳೆಯ ಸಂಸ್ಕಾರ ನಮ್ಮ ಬದುಕನ್ನೇ ಬದಲಿಸುತ್ತೆ
    – ಕಾಯಕಯೋಗಿಗಳಾಗಿ ಕೆಲಸ ಮಾಡಬೇಕು

    ಕೊಪ್ಪಳ: ಇತಿಹಾಸ ಪುಟಗಳಲ್ಲಿ ಕೊಪ್ಪಳವು ಅಂದು ಜೈನರ ಕಾಶಿಯಾಗಿತ್ತು. ಇಂದು ಗವಿಸಿದ್ದೇಶ್ವರನ ಮಹಿಮೆ ಸಂಸ್ಕಾರದಿಂದ ದಕ್ಷಿಣದ ಕಾಶಿ ಎಂದೆನಿಸುತ್ತಿದೆ. ನಿಜಕ್ಕೂ ಅಭಿನವ ಶ್ರೀಗಳು ವೃಕ್ಷೋತ್ಸವ ನೆಡುವ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂದಿನ ಯುವ ಸಮೂಹ ಇದೆಲ್ಲವನ್ನೂ ಅರ್ಥ ಮಾಡಿಕೊಂಡು ಜೀವನದಲ್ಲಿ ಸರಿ ದಾರಿಯಲ್ಲಿ ನಡೆಯಬೇಕು ಎಂದು ಐಪಿಎಸ್ ಅಧಿಕಾರಿ, ಬೆಂಗಳೂರು ಜಿಲ್ಲೆಯ ಎಸ್‍ಪಿ ರವಿ ಚನ್ನಣ್ಣನವರ್ ಅವರು ಹೇಳಿದರು.

    ಗವಿಮಠದ ಕೈಲಾಸ ಮಂಟಪದಲ್ಲಿ ನಡೆದ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದ ರವಿ ಚನ್ನಣ್ಣನವರ್, ಮಠ-ಮಾನ್ಯಗಳು, ಶರಣ-ಸಂತರು ಸಮಾಜದ ಅಂಕು-ಡೊಂಕು ತಿದ್ದು ಕೆಲಸ ಮಾಡುತ್ತಿದ್ದಾರೆ. ಸರಿ ತಪ್ಪು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದು, ಕೊಪ್ಪಳ ಅಂದು ಜೈನ ಕಾಶಿ ಎಂದು ಪ್ರಸಿದ್ಧಿ ಪಡೆದಿತ್ತು. ಇಂದು ಜಾತ್ರೆಯಿಂದ ದಕ್ಷಿಣ ಕಾಶಿ ಎಂದೆನಿಸಿದೆ. ಈ ಹಿಂದೆ ಯಾಗಗಳು ನಡೆಯುತ್ತಿದ್ದವಂತೆ, ಅದರ ಮೂಲ ಉದ್ದೇಶ ಜನರ ಹಿತವಾಗಿತ್ತಂತೆ. ಈಗ ಲಕ್ಷ ದೀಪೋತ್ಸವದ ಮೂಲಕ ದೈವದ ಸಾಕ್ಷಾತ್ಕಾರ, ಲಕ್ಷ ವೃಕ್ಷ ನೆಡುವ ಮೂಲಕ ಪ್ರಕೃತಿ ಸಾಕ್ಷಾತ್ಕಾರವಾಗುತ್ತಿದೆ. ಇದರ ಉದ್ದೇಶ ಜನರನ್ನು ಬದುಕಿನಡೆ ನಡೆಯುವಂತೆ ಮಾಡಿದೆ ಎಂದರು.

    ಒಬ್ಬರು ಇನ್ನೊಬ್ಬರ ಮೂಲಕ ಕಲಿತು ಬದುಕನ್ನು ಸುಂದರ ಮಾಡಿಕೊಳ್ಳಬೇಕು. ನಾವು ಕಾಯಕಯೋಗಿಗಳಾಗಿ ಕೆಲಸ ಮಾಡಬೇಕು. ಬದುಕು ವ್ಯರ್ಥ ಮಾಡದೆ ಸಮಯ ಅರ್ಥ ಮಾಡಿಕೊಂಡು ಬದುಕನ್ನು ಮುನ್ನಡೆಸಬೇಕು ಎಂದರು. ಇಂದು ಸಮಾಜ ಸರಿಯಿಲ್ಲ. ಆದರೆ ಅದನ್ನು ಸರಿ ಮಾಡದೇ ಬಿಡಬಾರದು. ಎಲ್ಲರೂ ತಿಳಿದು ಮುನ್ನಡೆಯಬೇಕು. ಇಲ್ಲಿನ ಪರಂಪರೆ ನೋಡಿದರೆ ಎಲ್ಲವೂ ಜೀವಂತವಾಗಿದೆ ಎಂದೆನಿಸುತ್ತದೆ. ಶ್ರೀಗಳ ಸಂಕಲ್ಪದೊಂದಿಗೆ ಜಾತ್ರೆ ನಡೆದಿದೆ ಎಂದು ಜಾತ್ರೆಯ ಬಗ್ಗೆ ಮಾತನಾಡಿದರು.

    ಇಲ್ಲಿನ ಭಕ್ತ ಸಮೂಹ ಯುವಕರು ಸಮಾಜದಲ್ಲಿ ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಆದರೆ ಇಲ್ಲಿನ ಯುವಕರಲ್ಲಿ ಕೀಳರಿಮೆಯ ಭಾವನೆ ತುಂಬಾ ಇದೆ. ತಾನು ಏನು ಮಾಡಿದೆ ಎನ್ನುವುದಕ್ಕಿಂತ ಇನ್ನೊಬ್ಬರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ನಮ್ಮಲ್ಲಿ ಸಂಕಲ್ಪದ ಕೊರತೆ ಕಾಡುತ್ತಿದೆ. ಏನಾದರೂ ಮಾಡು, ಖಾಲಿ ಕೂಡಬೇಡ. ಮಾಡುವ ಕೆಲಸ ಶ್ರದ್ಧೆಯಿಂದ ಮಾಡು. ಕೀಳರಿಮೆ ದೂರವಿಡಬೇಕು ಎಂದರು.

    ಪಾಲಕರು ಮಕ್ಕಳಿಗೆ ಸ್ನೇಹಿತರಂತೆ ಕಾಣಬಾರದು. ಅದು ನಿಜಕ್ಕೂ ಕೆಟ್ಟ ಸಂಸ್ಕೃತಿ. ಇದರಿಂದ ಮಕ್ಕಳ ಜೀವನ ಹಾಳಾಗುತ್ತದೆ. ಅವರು ತಪ್ಪು ಮಾಡಿದ ತಕ್ಷಣ ಅದನ್ನು ಅವರಿಗೆ ಮನವರಿಕೆ ಮಾಡಿ ಕೊಡಬೇಕು. ಒಳ್ಳೆಯ ಸಂಸ್ಕಾರ ನಮ್ಮ ಬದುಕನ್ನೇ ಬದಲಿಸಲಿದೆ. ನಾವು ವಯಕ್ತಿಕ ಸಬಲರಾದರೆ ದೇಶವೇ ಅಭಿವೃದ್ಧಿಯಾಗಲಿದೆ ಎಂದು ರವಿ ಚನ್ನಣ್ಣನವರ್ ತಿಳಿಸಿದರು.

  • ರವಿ ಚನ್ನಣ್ಣನವರ್ ಅಭಿಮಾನಿಗಳಿಂದ ಬೇಸತ್ತ ಐಪಿಎಸ್ ಅಧಿಕಾರಿ

    ರವಿ ಚನ್ನಣ್ಣನವರ್ ಅಭಿಮಾನಿಗಳಿಂದ ಬೇಸತ್ತ ಐಪಿಎಸ್ ಅಧಿಕಾರಿ

    ಬೆಂಗಳೂರು: ಆಶ್ಚರ್ಯ ಅನಿಸಿದರೂ ಇದು ಸತ್ಯ. ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಅಭಿಮಾನಿಗಳಿಂದ ಮತ್ತೊಬ್ಬ ಐಪಿಎಸ್ ಅಧಿಕಾರಿ ರಮೇಶ್ ಬಾನೋತ್ ಬೇಸತ್ತಿದ್ದಾರೆ.

    ಈ ಹಿಂದೆ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ರವಿ ಚನ್ನಣ್ಣನವರ್ ಡಿಸಿಪಿಯಾಗಿ ಕೆಲಸ ಮಾಡಿದ್ದರು. ಅವರು ವರ್ಗಾವಣೆಯಾದ ಬಳಿಕ ಆ ಜಾಗಕ್ಕೆ ರಮೇಶ್ ಬಾನೋತ್ ಡಿಸಿಪಿಯಾಗಿ ಬಂದಿದ್ದಾರೆ. 94808 01701 ಪಶ್ಚಿಮ ವಿಭಾಗದ ಡಿಸಿಪಿ ನಂಬರ್ ಆಗಿತ್ತು.

    ಈ ನಂಬರನ್ನು ಹಿಂದೆ ಸೇವ್ ಮಾಡಿಕೊಂಡಿದ್ದ ರವಿ ಚೆನ್ನಣ್ಣನವರ್ ಅಭಿಮಾನಿಗಳು ಇದು ಚನ್ನಣ್ಣನವರ್ ಅವರ ವೈಯಕ್ತಿಕ ಮೊಬೈಲ್ ಸಂಖ್ಯೆ ಎಂದು ತಿಳಿದು ಕರೆ ಮಾಡುತ್ತಿದ್ದರು. ಮಧ್ಯರಾತ್ರಿ ಕರೆ ಮಾಡಿ,”ಹಲೋ ರವಿ ಸಾರ್” ಅಂತಿದ್ರಂತೆ. ದಿನಕ್ಕೆ ನೂರಾರು ಕರೆಗಳು ಬರುತ್ತಿದ್ದ ಕಾರಣ 94808 01701 ಅಧಿಕೃತ ನಂಬರ್ ಅನ್ನು ಡಿಸಿಪಿ ರಮೇಶ್ ಬದಲಾಯಿಸಿದ್ದರು. ಇದನ್ನೂ ಓದಿ: ರವಿ ಚನ್ನಣ್ಣನವರ್ ಸ್ಫೂರ್ತಿಯಿಂದ ಡಿವೈಎಸ್ಪಿಯಾಗಿ ಆಯ್ಕೆಯಾಗಿದ್ದೇನೆ – ಎಂ.ಸುರೇಶ

    ನಂಬರ್ ಬದಲಾದ ಬಳಿಕವೂ ಕಚೇರಿಗೆ ಬರುವುದು, ಲ್ಯಾಂಡ್ ಲೈನ್ ನಂಬರಿಗೆ ಅಭಿಮಾನಿಗಳು ಕರೆ ಮಾಡುತ್ತಿದ್ದರು. ಹೀಗಾಗಿ ಡಿಸಿಪಿ ವೆಸ್ಟ್ ಬೆಂಗಳೂರು ಎಫ್‍ಬಿ ಪೇಜ್ ನಲ್ಲಿ ಅಧಿಕೃತವಾಗಿ ಚೆನ್ನಣ್ಣನವರ್ ಹುದ್ದೆಯ ಬಗ್ಗೆ ಮಾಹಿತಿ ನೀಡಲಾಗಿದೆ. ರವಿ ಚೆನ್ನಣ್ಣನವರ್ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯ ನಂಬರ್ ವಿಳಾಸವನ್ನು ಹಾಕಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಮಾಹಿತಿ ನೀಡಲಾಗಿದೆ.

  • ರವಿ ಚನ್ನಣ್ಣನವರ್ ಸ್ಫೂರ್ತಿಯಿಂದ ಡಿವೈಎಸ್ಪಿಯಾಗಿ ಆಯ್ಕೆಯಾಗಿದ್ದೇನೆ – ಎಂ.ಸುರೇಶ

    ರವಿ ಚನ್ನಣ್ಣನವರ್ ಸ್ಫೂರ್ತಿಯಿಂದ ಡಿವೈಎಸ್ಪಿಯಾಗಿ ಆಯ್ಕೆಯಾಗಿದ್ದೇನೆ – ಎಂ.ಸುರೇಶ

    – ಕೆಪಿಎಸ್‍ಸಿಯಲ್ಲಿ 2ನೇ ಸ್ಥಾನ

    ಕೊಪ್ಪಳ: ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್‍ಪಿ ರವಿ ಡಿ.ಚೆನ್ನಣ್ಣನವರ್ ಹಲವು ಯುವಕರ ಹೀರೋ ಎಂದು ಕೇಳಿದ್ದೇವೆ. ಅವರ ಸ್ಫೂರ್ತಿಯಿಂದಲೇ ಇದೀಗ ಕೆಪಿಎಸ್ಸಿಯಲ್ಲಿ 2ನೇ ಸ್ಥಾನ ಗಳಿಸುವ ಮೂಲಕ ಎಂ.ಸುರೇಶ ಡಿವೈಎಸ್ಪಿಯಾಗಿ ಆಯ್ಕೆಯಾಗಿದ್ದಾರೆ.

    ವಿವಿಧ ಹುದ್ದೆಗಳ ನೇಮಕಕ್ಕಾಗಿ ನಡೆದ ಕೆಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳದ ಗಂಗಾವತಿ ತಾಲೂಕಿನ ಕಲ್ಲಯ್ಯ ಕ್ಯಾಂಪ್‍ನ ಎಂ.ಸುರೇಶ ಅವರು ಎರಡನೇ ರ್ಯಾಂಕ್ ಪಡೆದಿದ್ದು, ಈ ಮೂಲಕ ಡಿವೈಎಸ್ಪಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

    ಕನ್ನಡ ಮಾಧ್ಯಮದಲ್ಲಿ ಓದಿದ್ದರೂ 2017ರಲ್ಲಿ ನಡೆದ ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮೂಲತಃ ಕೃಷಿಕರಾದ ದುರುಗಪ್ಪ ಮತ್ತು ಹನುಮಮ್ಮ ಮಳ್ಳಿಕೇರಿ ದಂಪತಿಯ 6ನೇ ಪುತ್ರರಾದ ಎಂ.ಸುರೇಶ, ಗಂಗಾವತಿ ನಗರದ ವಿವೇಕ ಭಾರತಿ ವಿದ್ಯಾ ಕೇಂದ್ರದಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ್ದಾರೆ. ವಿದ್ಯಾಗಿರಿಯ ಎಂಎನ್‍ಎಂ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯನ್ನು ಶೇ.71ರಷ್ಟು ಅಂಕದೊಂದಿಗೆ ಪೂರ್ಣಗೊಳಿಸಿದ್ದಾರೆ. ಹುಬ್ಬಳ್ಳಿಯ ಪಿಸಿ ಜಾಬೀನ್ ಪಿಯು ಕಾಲೇಜಿನಲ್ಲಿ ಪಿಯು ಓದಿದ್ದು, ಶೇ.86ರಷ್ಟು ಅಂಕಪಡೆದಿದ್ದಾರೆ. ಮೈಸೂರಿನ ವಿದ್ಯಾ ವಿಕಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್‍ನಲ್ಲಿ ಪದವಿ ಪಡೆದಿದ್ದು, ಶೇ.68ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

    ಎರಡನೇ ಯತ್ನದಲ್ಲಿ ಕೆಪಿಎಸ್ಸಿಗೆ ಅರ್ಹತೆ ಪಡೆದಿದ್ದು, ಸಮಾಜ ಕಲ್ಯಾಣ ಇಲಾಖೆ ನೆರವಿನೊಂದಿಗೆ ದೆಹಲಿಯಲ್ಲಿ ತರಬೇತಿ ಪಡೆದಿದ್ದಾರೆ. 9 ತಿಂಗಳ ತರಬೇತಿ ನಂತರ 2017ರಲ್ಲಿ ಕೆಪಿಎಸ್‍ಸಿ ಆಯೋಜಿಸಿದ್ದ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಸುರೇಶ, ನನಗೆ ಎಸ್‍ಪಿ ರವಿ ಚನ್ನಣ್ಣನವರ್ ಸ್ಫೂರ್ತಿ, ನಿತ್ಯ 8 ಗಂಟೆ ಓದುತ್ತಿದ್ದೆ. ವರ್ತಮಾನದ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ಚಿತ್ರಕಲೆಯಲ್ಲಿ ಆಸಕ್ತಿಯಿದ್ದು, ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರ ವಿಷಯ ಪಡೆದಿದ್ದರಿಂದ ಉತ್ತಮ ಸಾಧನೆ ಮಾಡಲು ಅನುಕೂಲವಾಯಿತು. ಎಸಿ ಆಗಬೇಕೆಂಬ ಆಸೆಯಿತ್ತು, ಡಿವೈಎಸ್ಪಿಗೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಜನ ಸೇವೆಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸುವ ಮೂಲಕ ಮೂಲಕ ಜಿಲ್ಲಾಧಿಕಾರಿಯಾಗುವ ಕನಸು ಹೊಂದಿದ್ದೇನೆ ಎಂದರು.

  • ಎಂಟಿಬಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಆರೋಪಿ ವಶಕ್ಕೆ – ಕಾಂಗ್ರೆಸ್ ಪ್ರತಿಭಟನೆ

    ಎಂಟಿಬಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಆರೋಪಿ ವಶಕ್ಕೆ – ಕಾಂಗ್ರೆಸ್ ಪ್ರತಿಭಟನೆ

    ಬೆಂಗಳೂರು: ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಫೇಸ್ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಕಾರ್ಯಕರ್ತನನ್ನು ಬೆಂಗಳೂರು ಗ್ರಾಮಾಂತರ ಹೊಸಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಂಟಿಬಿ ನಾಗರಾಜ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾದ ಪೋಸ್ಟ್ ಫಾರ್ವರ್ಡ್ ಮಾಡಿದ ಆರೋಪದಡಿ ರವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ವಿಚಾರ ತಿಳಿದ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಆಗಮಿಸಿದ್ದರು.

    ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ.ಚನ್ನಣ್ಣನವರ್ ಮಧ್ಯಸ್ಥಿತಿಕೆಯಲ್ಲಿ ಶಾಸಕ ಭೈರತಿ ಸುರೇಶ್ ಜೊತೆ ಮಾತನಾಡಿ ಪ್ರಕರಣ ಬಗೆಹರಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತನನ್ನು ವಿಚಾರಣೆ ನಡೆಸಿ ಅರ್ಜಿ ಬರೆಸಿಕೊಂಡು ಬಿಟ್ಟು ಕಳುಹಿಸಲಾಗಿದೆ. ಈ ಮೂಲಕ ರಾಜಕೀಯ ಹೈ ಡ್ರಾಮಾಕ್ಕೆ ಎಸ್‍ಪಿ ರವಿ.ಡಿ.ಚನ್ನಣ್ಣವರ್ ಫುಲ್ ಸ್ಟಾಪ್ ಹಾಕಿದ್ದಾರೆ.

    ಕಾಂಗ್ರೆಸ್ ಕಾರ್ಯರ್ತನನ್ನು ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಭೈರತಿ ಸುರೇಶ್, ಅನರ್ಹ ಶಾಸಕ ಎಂಟಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಟಬಿಯವರೇ ನಿಮ್ಮ ಹಣಬಲ ತೊಳ್ಬಲ ಇನ್ನು ಮುಂದೆ ನಡೆಯುವುದಿಲ್ಲ. ಹೊಸಕೋಟೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

    ರಾಜಕೀಯ ಹೈಡ್ರಾಮದ ಬಗ್ಗೆ ಮಾತನಾಡಿದ ಎಸ್‍ಪಿ ರವಿ.ಡಿ.ಚನ್ನಣ್ಣನವರ್, ಇನ್ನು ಮುಂದೆ ಯಾವುದೇ ಕಾರಣಕ್ಕೂ ಯಾರಾದರೂ ಅವಹೇಳನಕಾರಿ ಪೋಸ್ಟ್‍ಗಳನ್ನು ವಾಟ್ಸಪ್ ಹಾಗೂ ಫೇಸ್ಬುಕ್‍ಗಳಲ್ಲಿ ಹಾಕಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಕೊಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.