Tag: ರವಿ ಕೋಕಿತಕರ್

  • ಹಣಕಾಸಿನ ವ್ಯವಹಾರ, ಹಳೆಯ ವೈಷಮ್ಯಕ್ಕೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್: ಕಮಿಷನರ್ ಸ್ಪಷ್ಟನೆ

    ಹಣಕಾಸಿನ ವ್ಯವಹಾರ, ಹಳೆಯ ವೈಷಮ್ಯಕ್ಕೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್: ಕಮಿಷನರ್ ಸ್ಪಷ್ಟನೆ

    ಬೆಳಗಾವಿ: ಹಣಕಾಸಿನ ವ್ಯವಹಾರ ಮತ್ತು ಹಳೆಯ ವೈಷಮ್ಯಕ್ಕೆ ಶ್ರೀರಾಮಸೇನೆ (Sri Ram Sene) ಜಿಲ್ಲಾಧ್ಯಕ್ಷ ರವಿ ಕೋಕಿತಕರ್ (Ravi Kokitkar)  ಮೇಲೆ ಫೈರಿಂಗ್ (Firing) ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣಕಾಸಿನ ವ್ಯವಹಾರ, ವೈಯಕ್ತಿಕ ದ್ವೇಷ ಹಿನ್ನೆಲೆ ಘಟನೆ ನಡೆದಿದೆ. ನಿನ್ನೆ ಸಂಜೆ 7:30 ಸುಮಾರಿಗೆ ಹಿಂಡಲಗಾ ಬಳಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸಂಗಡಿಗರು ವಾಹನದಲ್ಲಿ ಹೋಗಬೇಕಾದ್ರೆ ಫೈರಿಂಗ್ ಮಾಡಲಾಗಿತ್ತು. ದ್ವಿಚಕ್ರವಾಹನದಲ್ಲಿ ಬಂದಿದ್ದ ಮೂವರು ಫೈರಿಂಗ್ ಮಾಡಿದ್ದರು. ಸದ್ಯ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಪೊಲೀಸ್ (Police) ಸಿಬ್ಬಂದಿ ಅಲರ್ಟ್ ಆಗಿ 18 ಗಂಟೆಯೊಳಗೆ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ ಹಿಂದೂಪರ ಸಂಘಟನೆ ಮುಖಂಡನ ಮೇಲೆ ಫೈರಿಂಗ್ – ವದಂತಿಗಳಿಗೆ ಕಿವಿಕೊಡಬೇಡಿ: ಅಭಯ್ ಪಾಟೀಲ್ ಮನವಿ

    ಪ್ರಕರಣದ ಆರೋಪಿ ಬೆಳಗಾವಿ ನಿವಾಸಿ ಅಭಿಜಿತ್ ಭಾತ್ಕಾಂಡೆ, ಬಸ್ತವಾಡ ಗ್ರಾಮದ ನಿವಾಸಿ ರಾಹುಲ್ ಕೊಡಚವಾಡ, ಜ್ಯೋತಿಬಾ ಗಂಗಾರಾ ಬಂಧಿತರು. ಬಂಧಿತ ಅಭಿಜಿತ್ ಹಾಗೂ ರವಿ ಕೋಕಿತಕರ್ ಮಧ್ಯೆ ರಿಯಲ್ ಎಸ್ಟೇಟ್ ವ್ಯವಹಾರ ಇತ್ತು. 2020ರ ಜನವರಿ 1 ರಂದು ಆರೋಪಿ ಅಭಿಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ ಗಾಯಾಳು ರವಿ ಕೋಕಿತಕರ್ ಪ್ರಮುಖ ಆರೋಪಿಯಾಗಿದ್ದನು. ಹಣಕಾಸಿನ ವ್ಯವಹಾರ ಹಳೆಯ ವೈಷಮ್ಯ ಹಿನ್ನೆಲೆ ಈ ಘಟನೆ ನಡೆದಿದೆ. ಯಾವುದೇ ದ್ವೇಷ ಇದ್ದರೂ ಫೈರ್ ಆರ್ಮ್ಸ್ ಬಳಸಿದ್ದು ಗಂಭೀರ ಅಪರಾಧವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಭಿಜಿತ್ ಭಾತ್ಕಾಂಡೆ ಫೈರ್ ಮಾಡಿದ್ದಾನೆ. ಕಂಟ್ರಿ ಪಿಸ್ತೂಲ್ ಬಳಸಿ ಫೈರ್ ಮಾಡಿದ್ದಾರೆ. ಯಾವುದೇ ಲೈಸನ್ಸ್ ಇಲ್ಲ. ಜನರು ಯಾವುದೇ ವದಂತಿ, ಊಹಾಪೋಹಗಳಿಗೆ ಕಿವಿಕೊಡಬಾರದು ಎಂದು ಕಮಿಷನರ್ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು. ಇದನ್ನೂ ಓದಿ: ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ

    ಸೇಡು ತೀರಿಸಿಕೊಳ್ಳಲು ಅಟ್ಯಾಕ್:
    ಅಭಿಜಿತ್ ಬೈಕ್‍ನಲ್ಲಿ ಬೆನ್ನಟ್ಟಿ ಹಿಂಡಲಗಾ ಬಳಿ ರವಿ ಮೇಲೆ ಅಟ್ಯಾಕ್ ಮಾಡಿದ್ದು, ಮೂರು ಜನ ಆರೋಪಿಗಳು ಒಂದೇ ಬೈಕ್‍ನಲ್ಲಿ ಹೋಗಿ ದಾಳಿ ಮಾಡಿದ್ದಾರೆ. ಪ್ರಮುಖ ಆರೋಪಿ ಅಭಿಜಿತ್‍ ಕಂಟ್ರಿ ಪಿಸ್ತೂಲ್‍ದಿಂದ ಫೈರಿಂಗ್ ಮಾಡಿದ್ದಾನೆ. ಕೌಂಟರ್ ಅಟ್ಯಾಕ್, ಸೇಡು ತೀರಿಸಿಕೊಳ್ಳಲು ಅಟ್ಯಾಕ್ ಮಾಡಿದ್ದಾರೆ. ಒಂದು ಸುತ್ತು ಗುಂಡು ಹಾರಿಸಿ ತಲೆಮರೆಸಿಕೊಂಡಿದ್ದರು. ಬೆಳಗಾವಿ ನಗರದ ಹೊರವಲಯದಲ್ಲಿ ತಲೆಮರೆಸಿಕೊಂಡಿದ್ದ ಮೂವರನ್ನು ಬಂಧಿಸಿದ್ದೇವೆ ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳಗಾವಿ ಹಿಂದೂಪರ ಸಂಘಟನೆ ಮುಖಂಡನ ಮೇಲೆ ಫೈರಿಂಗ್ – ವದಂತಿಗಳಿಗೆ ಕಿವಿಕೊಡಬೇಡಿ: ಅಭಯ್ ಪಾಟೀಲ್ ಮನವಿ

    ಬೆಳಗಾವಿ ಹಿಂದೂಪರ ಸಂಘಟನೆ ಮುಖಂಡನ ಮೇಲೆ ಫೈರಿಂಗ್ – ವದಂತಿಗಳಿಗೆ ಕಿವಿಕೊಡಬೇಡಿ: ಅಭಯ್ ಪಾಟೀಲ್ ಮನವಿ

    ಬೆಳಗಾವಿ: ಬುಲೆಟ್ ತಗುಲಿದ ಹಿಂದೂಪರ ಸಂಘಟನೆ ಮುಖಂಡ (Hindu Organisation Leader) ರವಿ ಕೋಕಿತಕರ್ (Ravi Kokitkar) ಆರೋಗ್ಯವಾಗಿದ್ದಾರೆ. ಯಾರೂ ಗಾಬರಿ ಪಡಬಾರದು. ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ ಶಾಂತಿಯಿಂದ ಇರಬೇಕು ಎಂದು ಆಸ್ಪತ್ರೆ ಬಳಿ ಜಮಾವಣೆಗೊಂಡ ಹಿಂದೂಪರ ಕಾರ್ಯಕರ್ತರಿಗೆ ಶಾಸಕ ಅಭಯ್ ಪಾಟೀಲ್ ಸಲಹೆ ನೀಡಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ (Belagavi) ಇಂತಹ ಘಟನೆ ಮೊದಲ ಬಾರಿ ನಡೆದಿದೆ. ಹಿಂದೂತ್ವವಾದಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಗಂಭೀರವಾದ ವಿಷಯವಾಗಿದೆ. ಇಂದು ಅವರದ್ದೇ ಸಂಘಟನೆಯಿಂದ ದೊಡ್ಡ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಎರಡು ಮೂರು ವಿಷಯಗಳು ಕಾರ್ಯಕರ್ತರಲ್ಲಿ ಚರ್ಚೆ ಆಗುತ್ತಿವೆ. ಒಂದು ಆ ಕಾರ್ಯಕ್ರಮ ಆಗಬಾರದು ಅಂತಾ ಇರಬಹುದು. ರವಿ ಕೋಕಿತಕರ್ ಸಂಘಟನೆಯಲ್ಲಿ ಮುಂದುವರಿಯಬಾರದು ಎಂಬ ಉದ್ದೇಶವಿರಬಹುದು ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆ ಮುಖಂಡನ ಮೇಲೆ ಫೈರಿಂಗ್

    ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಈಗಾಗಲೇ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ತಪ್ಪಿತಸ್ಥರು ಶೀಘ್ರ ಬಂಧನ ಆಗಬೇಕು ಅಂತಾ ಹೇಳಿದ್ದೇನೆ. ರವಿ ಕೋಕಿತಕರ್, ಅವರ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂತಿಯುತವಾಗಿ ಕಾರ್ಯಕ್ರಮ ನಡೆಯಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಯಾರೂ ಸಹ ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k