Tag: ರವಿಶಾಸ್ತ್ರಿ

  • ಸುದ್ದಿಗೋಷ್ಠಿಯಲ್ಲಿ ರವಿಶಾಸ್ತ್ರಿ ಹೇಳಿಕೆಯನ್ನು ಉದಾಹರಿಸಿ ಕೇಳಿದ ಪ್ರಶ್ನೆಗೆ ಸಿಟ್ಟಾದ ಕೊಹ್ಲಿ!

    ಸುದ್ದಿಗೋಷ್ಠಿಯಲ್ಲಿ ರವಿಶಾಸ್ತ್ರಿ ಹೇಳಿಕೆಯನ್ನು ಉದಾಹರಿಸಿ ಕೇಳಿದ ಪ್ರಶ್ನೆಗೆ ಸಿಟ್ಟಾದ ಕೊಹ್ಲಿ!

    ಲಂಡನ್: ಇಂಗ್ಲೆಂಡ್ ವಿರುದ್ಧದ ಬಹು ನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲಿ ಟೀಂ ಇಂಡಿಯಾ 4-1 ಅಂತರದಲ್ಲಿ ಮುಗ್ಗರಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಪತ್ರಿಕ್ರಿಯೆ ನೀಡಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ್ದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಇಂದಿನ ತಂಡ 15-20 ವರ್ಷಗಳ ಹಿಂದಿದ್ದ ಎಲ್ಲ ತಂಡಗಳಿಗಿಂತ ಉತ್ತಮ ತಂಡ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಉದಾಹರಿಸಿ ಕೊಹ್ಲಿಗೆ ಪ್ರಶ್ನೆ ಮಾಡಿದ ಪತ್ರಕರ್ತರೊಬ್ಬರು, “ರವಿಶಾಸ್ತ್ರಿ ಹೇಳಿಕೆಯನ್ನು ಹೇಗೆ ಸಮರ್ಥಿಸುತ್ತಿರಿ” ಎಂದು ಪ್ರಶ್ನಿಸಿದರು.

    ಈ ವೇಳೆ ಕೊಹ್ಲಿ,”ನಮ್ಮದು ಉತ್ತಮ ತಂಡ ಎಂದು ನಂಬುತ್ತೇವೆ. ಏಕೆ ಆಗಬಾರದು” ಎಂದು ಪ್ರಶ್ನಿಸುವ ತಾಳ್ಮೆಯಿಂದಲೇ ಉತ್ತರಿಸಿದರು. ಈ ವೇಳೆ ಪತ್ರಕರ್ತ,”ಕಳೆದ 15 ವರ್ಷಗಳಲ್ಲಿ ಭಾರತ ಕಂಡ ಅತ್ಯುತ್ತಮ ತಂಡವಾಗಿದೆಯೇ” ಎಂದು ಮರು ಪ್ರಶ್ನೆ ಕೇಳಿದರು.

    ಈ ಪ್ರಶ್ನೆಗೆ ಗರಂ ಆದ ಕೊಹ್ಲಿ,”ನಿಮಗೆ ಏನು ಅನಿಸುತ್ತದೆ” ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪತ್ರಕರ್ತ,”ನನಗೆ ಅನಿಸುವುದಿಲ್ಲ” ಎಂದು ಉತ್ತರಿಸಿದರು. ಈ ಉತ್ತರಕ್ಕೆ ಮತ್ತಷ್ಟು ಖಾರವಾಗಿ ಪತ್ರಿಕ್ರಿಯೆ ನೀಡಿದ ಕೊಹ್ಲಿ,”ಅದು ನಿಮ್ಮ ನಂಬಿಕೆ. ನಾನೇನು ಮಾಡಲಾಗದು” ಎಂದು ಉತ್ತರಿಸಿ ಕಿಡಿಕಾರಿದರು.

    ಅಂತಿಮ ಓವೆಲ್ ಪಂದ್ಯ ನಡೆಯುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೋಚ್ ರವಿಶಾಸ್ತ್ರಿ, ಇಂಗ್ಲೆಂಡ್ ಟೂರ್ನಿಯ ವೇಳೆ ತಂಡದ ಉತ್ತಮ ಪ್ರದರ್ಶನ ನೀಡಿದೆ. ಅಲ್ಲದೇ ಈ ಹಿಂದಿನ 3 ವರ್ಷಗಳ ತಂಡದ ಪ್ರದರ್ಶನವನ್ನು ಗಮನಿಸಿದರೆ ನಾವು ವಿದೇಶಿ ನೆಲದಲ್ಲಿ 9 ಪಂದ್ಯಗಳನ್ನು ಗೆದ್ದಿದ್ದು, 3 ಸರಣಿ ಜಯಪಡೆದಿದ್ದೇವೆ. ಈ ಹಿಂದಿನ ಭಾರತದ ತಂಡಗಳು ಕಳೆದ 15-20 ವರ್ಷದಲ್ಲಿ ಕಡಿಮೆ ಅವಧಿಯಲ್ಲಿ ಇಂತಹ ಪ್ರದರ್ಶನ ನೀಡಿರುವುದನ್ನು ನಾನು ಕಂಡಿಲ್ಲ. ಅಂದು ಹಲವು ಸ್ಟಾರ್ ಆಟಗಾರರು ತಂಡದಲ್ಲಿ ಇದ್ದರು. ಸದ್ಯ ಯಂಗ್ ಟೀಮ್ ಸರಣಿಯಲ್ಲಿ ಭಾಗವಹಿಸಿದೆ ಎಂದು ಶಾಸ್ತ್ರಿ ತಂಡದ ಸಾಧನೆಯನ್ನು ಹೊಗಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಚ್ ರವಿಶಾಸ್ತ್ರಿ, ಟೀಂ ಇಂಡಿಯಾ ಆಟಗಾರರ ಸಂಭಾವನೆ ರಿವೀಲ್ ಆಯ್ತು: ಯಾರಿಗೆ ಎಷ್ಟು ಕೋಟಿ?

    ಕೋಚ್ ರವಿಶಾಸ್ತ್ರಿ, ಟೀಂ ಇಂಡಿಯಾ ಆಟಗಾರರ ಸಂಭಾವನೆ ರಿವೀಲ್ ಆಯ್ತು: ಯಾರಿಗೆ ಎಷ್ಟು ಕೋಟಿ?

    ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ನಾಯಕರ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಇತರೆ ಆಟಗಾರರ ಸಂಭಾವನೆಯನ್ನು ಶನಿವಾರ ಪ್ರಕಟಿಸಿದೆ.

    ಬಿಸಿಸಿಐ ನೀಡಿರುವ ಮಾಹಿತಿಯಂತೆ ಕೋಚ್ ರವಿಶಾಸ್ತ್ರಿ 2018ರ ಜುಲೈನಿಂದ ಸೆಪ್ಟೆಂಬರ್ 17ರವರೆಗೆ ಒಟ್ಟು 2.05 ಕೋಟಿ ರೂ. ವೇತನ ಪಡೆಯಲಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಆಟಗಾರರು ಬಿಸಿಸಿಐ ಸಂಸ್ಥೆಯೊಂದಿನ ಒಪ್ಪಂದದ ಮೊತ್ತದೊಂದಿಗೆ, ಪಂದ್ಯದ ಸಂಭಾವನೆ ಹಾಗೂ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಸ್ಥಾನ ಪಡೆದಿರುವ ಮೊತ್ತವನ್ನು ಪಡೆಯಲಿದ್ದಾರೆ.

    ಯಾರಿಗೆ? ಎಷ್ಟು?
    ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ, ಟೆಸ್ಟ್ ಟೂರ್ನಿ ಹಾಗೂ ಐಸಿಸಿ ಶ್ರೇಯಾಂಕ ಪಟ್ಟಿಯ ಬಹುಮಾನದ ಮೊತ್ತ ಮೂರು ಸೇರಿ 1,25,04,964 ರೂ. ಸಂಭಾವನೆ ಪಡೆಯಲಿದ್ದಾರೆ. ಇನ್ನು ತಂಡದ ಪ್ರಮುಖ ಆಟಗಾರರಾದ ಭುವನೇಶ್ವರ್ ಕುಮಾರ್ 3,73,06,631 ರೂ., ಶಿಖರ್ ಧವನ್ 2,80,98,493 ರೂ., ಆರ್ ಅಶ್ವಿನ್ 2,75,60,754 ರೂ., ರೋಹಿತ್ ಶರ್ಮಾ 1,42,08,385 ರೂ,. ಬುಮ್ರಾ 1,74,23,573 ರೂ., ಚೇತೇಶ್ವರ ಪೂಜಾರ 2,83,70,757 ರೂ,. ಇಶಾಂತ್ ಶರ್ಮಾ 1,33,14,741 ರೂ,. ಕುಲ್ ದೀಪ್ ಯಾದವ್ 25,05,452 ರೂ,. ಯಜುವೇಂದ್ರ ಚಹಲ್ 84,55,624 ರೂ,. ಸಹಾ 44,34,805 ರೂ,. ಪಾರ್ಥಿವ್ ಪಟೇಲ್ 43,92,641 ರೂ. ಸಂಭಾವನೆ ಪಡೆಯಲಿದ್ದಾರೆ.

    ಭುವನೇಶ್ವರ್ ಕುಮಾರ್:
    ದಕ್ಷಿಣ ಆಫ್ರಿಕಾ ಟೆಸ್ಟ್ ಟೂರ್ನಿ – 56,83,848 ರೂ.
    ದಕ್ಷಿಣ ಆಫ್ರಿಕಾ ಏಕದಿನ ಟೂರ್ನಿ -27,14,056ರೂ.
    ಜನವರಿ ಯಿಂದ ಮಾರ್ಚ್ 2018 ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 1,18,06,027 ರೂ.
    ಐಸಿಸಿ ಶ್ರೇಯಾಂಕ ಪಟ್ಟಿ ಬಹುಮಾನ – 29,27,700 ರೂ.
    ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 1,14,75,00 ರೂ.

    ಶಿಖರ್ ಧವನ್:
    ಜನವರಿ ಯಿಂದ ಮಾರ್ಚ್ 2018 ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ -1,12,23,493 ರೂ.
    ಶ್ರೀಲಂಕಾ ಟೂರ್ನಿ – 27,00,000 ರೂ.
    ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 1,41,75,000 ರೂ.

    ಆರ್ ಅಶ್ವಿನ್:
    ದಕ್ಷಿಣ ಆಫ್ರಿಕಾ ಟೆಸ್ಟ್ ಟೂರ್ನಿ – 52,70,725 ರೂ.
    ಜನವರಿ ಯಿಂದ ಮಾರ್ಚ್ 2018 ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 92,37,329 ರೂ.
    ಐಸಿಸಿ ಶ್ರೇಯಾಂಕ ಪಟ್ಟಿ ಬಹುಮಾನ – 29,27,700 ರೂ.
    ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 1,01,25,000 ರೂ.

    ರೋಹಿತ್ ಶರ್ಮಾ:
    ದಕ್ಷಿಣ ಆಫ್ರಿಕಾ ಟೆಸ್ಟ್ ಟೂರ್ನಿ -56,96,808 ರೂ.
    ದಕ್ಷಿಣ ಆಫ್ರಿಕಾ ಏಕದಿನ ಟೂರ್ನಿ – 30,70,455 ರೂ.
    ಶ್ರೀಲಂಕಾ ನಿಧಾಸ್ ಟೂರ್ನಿ – 25,13,442 ರೂ.
    ಐಸಿಸಿ ಶ್ರೇಯಾಂಕ ಪಟ್ಟಿ ಬಹುಮಾನ – 29,27,700 ರೂ.

    ಚೇತೇಶ್ವರ ಪೂಜಾರ:
    ಐಸಿಸಿ ಶ್ರೇಯಾಂಕ ಪಟ್ಟಿ ಬಹುಮಾನ – 29,27,700 ರೂ.
    ದಕ್ಷಿಣ ಆಫ್ರಿಕಾ ಟೆಸ್ಟ್ ಟೂರ್ನಿ – 60,80,725 ರೂ.
    ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 92,37,329 ರೂ.
    ಜನವರಿ ಯಿಂದ ಮಾರ್ಚ್ 2018 ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 1,01,25,000 ರೂ.

    ಇಶಾಂತ್ ಶರ್ಮಾ:
    ಜನವರಿ ಯಿಂದ ಮಾರ್ಚ್ 2018 ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 55,42, 397 ರೂ.
    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಬಹುಮಾನ – 29,27,700 ರೂ.
    ದಕ್ಷಿಣ ಆಫ್ರಿಕಾ ಟೆಸ್ಟ್ ಟೂರ್ನಿ – 48,44,644 ರೂ.

    ಬುಮ್ರಾ:
    ಜನವರಿ ಯಿಂದ ಮಾರ್ಚ್ 2018 ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 1,13,48,573 ರೂ.
    ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತಂಡದ ಆಟಗಾರನಾಗಿದ್ದಕ್ಕೆ ಸಂಭಾವನೆ – 60,75,000 ರೂ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಫ್ರಿದಿಗೆ `ಬೂಮ್ ಬೂಮ್’ ಎಂದು ಹೆಸರಿಟ್ಟಿದ್ದು ಟೀಂ ಇಂಡಿಯಾ ಆಟಗಾರ!

    ಅಫ್ರಿದಿಗೆ `ಬೂಮ್ ಬೂಮ್’ ಎಂದು ಹೆಸರಿಟ್ಟಿದ್ದು ಟೀಂ ಇಂಡಿಯಾ ಆಟಗಾರ!

    ನವದೆಹಲಿ: ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಅಫ್ರಿದಿ ತಮ್ಮ ಸಿಕ್ಸರ್ ಸಿಡಿಸುವ ಶೈಲಿಯಿಂದ ಹೆಚ್ಚು ಖ್ಯಾತಿ ಪಡೆದಿದ್ದು, ಸದ್ಯ ಅವರಿಗೆ `ಬೂಮ್ ಬೂಮ್’ ಅಫ್ರಿದಿ ಎಂಬ ಹೆಸರು ನೀಡಿದ್ದು ಟೀಂ ಇಂಡಿಯಾ ಆಟಗಾರ ಎಂದು ರಿವೀಲ್ ಮಾಡಿದ್ದಾರೆ.

    ಅಂತರಾಷ್ಟ್ರೀಯ ಕ್ರಿಕೆಟ್ ಗೆ ಈಗಾಗಲೇ ವಿದಾಯ ಘೋಷಿಸುವ ಅಫ್ರಿದಿ ತಮ್ಮ ವೃತ್ತಿ ಜೀವನದಲ್ಲಿ 476 ಸಿಕ್ಸರ್ ಸಿಡಿಸಿ, ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಜೊತೆಗೆ ಸ್ಥಾನ ಪಡೆದಿದ್ದಾರೆ. ಸದ್ಯ ಅಫ್ರಿದಿ ಅಭಿಮಾನಿಯೊಬ್ಬರು ಈ ಕುರಿತು ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅಫ್ರಿದಿ ಟೀಂ ಇಂಡಿಯಾದ ಮಾಜಿ ಆಟಗಾರ ರವಿಶಾಸ್ತ್ರಿ ತಮ್ಮ ಹೆಸರಿನ ಮುಂದೆ ಬೂಮ್ ಬೂಮ್ ಎಂದು ಸೇರಿಸಿದ್ದರು ಎಂದು ತಿಳಿಸಿದ್ದಾರೆ.

    ರವಿಶಾಸ್ತ್ರಿ ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮುನ್ನ ವೀಕ್ಷಕ ವಿವರಣೆಕಾರರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ತಮಗೆ ಬೂಮ್ ಬೂಮ್ ಅಫ್ರಿದಿ ಎಂದು ಹೆಸರು ನೀಡಿದ್ದಾಗಿ ವಿವರಿಸಿದ್ದಾರೆ.

    1996 ರಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಅಫ್ರಿದಿ ತಮ್ಮ ವೃತ್ತಿ ಜೀವನದಲ್ಲಿ 117.01 ಸ್ಟ್ರೈಕ್ ರೇಟ್ ನಿಂದ ಮೂರು ಮಾದರಿಯ ಕ್ರಿಕೆಟ್‍ನಲ್ಲಿ 11,186 ರನ್ ರನ್ ಗಳಿಸಿದ್ದಾರೆ. ಅಲ್ಲದೇ 541 ವಿಕೆಟ್ ಗಳಿಸಿ ಮಿಂಚಿದ್ದಾರೆ. ಅಲ್ಲದೇ 1996 ರಲ್ಲಿ ಶ್ರೀಲಂಕಾ ವಿರುದ್ಧದ ನಡೆದ ಪಂದ್ಯವೊಂದರಲ್ಲಿ 37 ಎಸೆತಗಳಲ್ಲಿ ಶತಕ ಸಿಡಿದ ಸಾಧನೆಯನ್ನು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧೋನಿ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ಅವರಿಗೆ ಬಿಡಿ – ಸಚಿನ್

    ಧೋನಿ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ಅವರಿಗೆ ಬಿಡಿ – ಸಚಿನ್

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ನಿವೃತ್ತಿಯ ಕುರಿತು ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಸದ್ಯ ಧೋನಿ ಬೆಂಬಲಕ್ಕೆ ನಿಂತಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಧೋನಿ ವಿರುದ್ಧ ಹಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಟೀಕೆ ಮಾಡಿದ್ದರು. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿನ್, ಯಾವುದೇ ಒಬ್ಬ ಆಟಗಾರ ತನ್ನ ವೃತ್ತಿ ಜೀವನದ ನಿವೃತ್ತಿಯ ಬಗ್ಗೆ ಆತನೇ ನಿರ್ಣಯಕೈಗೊಳ್ಳಬೇಕು. ನಿರಂತರವಾಗಿ ತಂಡದ ಶಕ್ತಿಯಾಗಿದ್ದ ಆಟಗಾರನಿಗೆ ಆ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ವಿರುತ್ತದೆ. ಅದ್ದರಿಂದ ಈ ನಿರ್ಧಾರವನ್ನು ಅವರಿಗೆ ಬಿಟ್ಟರೆ ಒಳ್ಳೆಯದು ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

    ಆಟಗಾರರ ಕೆಲವೇ ಪ್ರದರ್ಶನಗಳಿಂದ ಅವರ ಸಾಮರ್ಥ್ಯ ಕುರಿತು ಟೀಕೆ ಮಾಡುವುದು ಉತ್ತಮವಲ್ಲ. ಧೋನಿ ಹಲವು ಭಿನ್ನ ಸಮಯದಲ್ಲಿ ಟೀಂ ಇಂಡಿಯಾ ತಂಡದ ಭಾಗವಾಗಿದ್ದರು. ಅವರು ತಮ್ಮ ಆಟವನ್ನು ವಿಮರ್ಶಿಸಿಕೊಳ್ಳುವ ಸಾಮಥ್ರ್ಯ ಹೊಂದಿದ್ದಾರೆ. ಅದರಂತೆ ಅವರು ನಿವೃತ್ತಿ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಎಲ್ಲರು ಅವರು ನಿರ್ಣಯ ತೆಗೆದುಕೊಳ್ಳಲು ಬಿಡಬೇಕು ಎಂದರು.

    ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದ ಬಳಿಕ ಧೋನಿ ನಿವೃತ್ತಿ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಅಲ್ಲದೇ ಭಾರತದ ಮಾಜಿ ಆಟಗಾರರಾದ ಸುನಿಲ್ ಗವಸ್ಕರ್ ಹಾಗೂ ಸೌರವ್ ಗಂಗೂಲಿ ಸಹ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಧೋನಿ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಕುರಿತು ಸ್ಪಷ್ಟನೆ ನೀಡಿ, ಧೋನಿ ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿಸಿದ್ದರು.

  • ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎಲ್ಲಿಯೂ ಹೋಗುವುದಿಲ್ಲ, ಅವರು ತಂಡದಲ್ಲಿಯೇ ಇರುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರೀಯವರು ಸ್ಪಷ್ಟನೆ ನೀಡಿದ್ದಾರೆ.

    ಧೋನಿ ನಿವೃತ್ತಿ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಧೋನಿಯವರು ಕೇವಲ ಬಾಲನ್ನು ಪರೀಕ್ಷೆಗೆ ಒಳಪಡಿಸುವುದಕ್ಕೋಸ್ಕರ ತೆಗೆದುಕೊಂಡಿದ್ದಾರೆ. ಧೋನಿಯವರು ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ನಿವೃತ್ತಿ ಹೊಂದುತ್ತಾರೆ ಎನ್ನುವ ವಂದತಿ ಹಬ್ಬಿರುವುದು ದುರದೃಷ್ಟಕರ ಸಂಗತಿ. ಧೋನಿಯವರು ಎಲ್ಲಿಯೂ ಹೋಗಲ್ಲ, ಅವರು ಭಾರತ ಕ್ರಿಕೆಟ್ ತಂಡದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್ ಮಾಡುವಾಗ 45 ಓವರ್ ಗಳ ಬಳಿಕವು ಬಾಲ್ ವೇಗಿಗಳಿಗೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧೋನಿ ಬಾಲನ್ನು ಪಡೆದು ತಂಡದ ಭಾರತ್ ಅರುಣ್ ಎಂಬ ಬಾಲ್ ತಜ್ಞರಿಗೆ ತೋರಿಸಿ, ಬಾಲ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅಂಪೈರ್ ನಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಏನಿದು ವದಂತಿ?
    ಇಂಗ್ಲೆಂಡಿನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಧೋನಿಯವರು ಅಂಪೈರ್ ನಿಂದ ಬಾಲನ್ನು ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜಾಲತಾಣಿಗರು ವಿಡಿಯೋವನ್ನು ನೋಡಿ ಧೋನಿಯವರು ನಿವೃತ್ತಿಗಾಗಿ ಬಾಲನ್ನು ಪಡೆದುಕೊಂಡಿದ್ದಾರೆ ಎಂದು ವದಂತಿ ಹರಿಬಿಟ್ಟಿದ್ದರು. ಧೋನಿಯವರು ಬಾಲ್ ಪಡೆದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿಬಂದಿದ್ದವು.

  • ಬಿಯರ್ ಕೇವಲ ಜ್ಯೂಸ್ ಅಷ್ಟೇ – ರವಿಶಾಸ್ತ್ರಿ

    ಬಿಯರ್ ಕೇವಲ ಜ್ಯೂಸ್ ಅಷ್ಟೇ – ರವಿಶಾಸ್ತ್ರಿ

    ಮುಂಬೈ: ಬಿಯರ್ ಕೇವಲ ಜ್ಯೂಸ್ ಅಷ್ಟೇ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎಂದು ಹೇಳಿದ್ದಾರೆ.

    `ಬ್ರೇಕ್ ಫಸ್ಟ್ ವಿಥ್ ಚಾಂಪಿಯನ್’ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಯಾವುದೇ ಕ್ರಿಕೆಟರನ್ನು ಆತ ಕುಡಿಯುವ ಬಿಯರ್ ನಿಂದ ಆತನ ಸಾಮರ್ಥ್ಯನ್ನು ತೀರ್ಮಾನಿಸಬಾರದು, ಆತ ಮೈದಾನದಲ್ಲಿ ನೀಡುವ ಪ್ರದರ್ಶನದ ಮೇಲೆ ಆತನನ್ನು ಅಳೆಯಬೇಕು ಎಂದು ಹೇಳಿದ್ದಾರೆ.

    ಇದೇ ವೇಳೆ ತಮ್ಮ ಹಳೆಯ ದಿನಗಳ ಕುರಿತು ನೆನಪು ಮಾಡಿಕೊಂಡ ಅವರು, ತಮ್ಮ ತಂದೆಯೊಂದಿಗೆ ಕುಳಿತು ಬಿಯರ್ ಸೇವಿಸುತ್ತಿದ್ದೆ. ನಾನು ವಿಶ್ವದಲ್ಲಿ ಹೆಚ್ಚು ಗೌರವ ನೀಡುವ ವ್ಯಕ್ತಿ ಎಂದರೆ ಅದು ನಮ್ಮ ತಂದೆ ಎಂದು ತಿಳಿಸಿದ್ದಾರೆ.

    ವಿಡಿಯೋದಲ್ಲಿ ನಡೆದ ಸಂಭಾಷಣೆಯು 14 ನಿಮಿಷದಿಂದ ಈ ಕುರಿತು ಮಾತುಕತೆ ನಡೆಯುತ್ತದೆ. ಮೊದಲ ಬಾರಿ ತಾನು ಬಿಯರ್ ಸೇವಿಸಿ 17 ವಯಸ್ಸಿನಲ್ಲಿ ಸಿಕ್ಕಿಬಿದ್ದಿದ್ದೆ. ಆದರೆ ಈ ವೇಳೆಯೂ ತಾನು ಆ ಕುರಿತು ನಿಜ ಹೇಳಿದ್ದು, ಉತ್ತಮ ಪ್ರದರ್ಶನ ನೀಡದಿದ್ದರೆ ತಂಡದಿಂದ ಹೊರ ಹಾಕುವಂತೆ ಹೇಳಿದ್ದಾಗಿ ತಿಳಿಸಿದ್ದಾರೆ.

    ತಮ್ಮ ಜೀವನದ ಹಲವು ಪ್ರಮುಖ ಕ್ಷಣ ಬಗ್ಗೆ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟ ಅವರು, ಕ್ರಿಕೆಟ್ ನಲ್ಲಿ ತಾನು ಆರಂಭಿಕನಾಗಿ ಆಡಲು ಇಷ್ಟ ಪಟ್ಟಿದ್ದೆ. ಆದರೆ ನಾನು ಮೊದಲ ಬಾರಿ ಆರಂಭಿಕನಾಗಿ ಬ್ಯಾಟಿಂಗ್ ನಡೆಸಿದ ವೇಳೆ ಶೂನ್ಯಕ್ಕೆ ಔಟ್ ಆಗಿದ್ದೆ, ಬಳಿಕ ನಡೆದ ಪಂದ್ಯದಲ್ಲಿ 70 ಪ್ಲಸ್ ಗಳಿಸಿದ್ದೆ ಎಂದು ಹಳೆ ನೆನಪನ್ನು ಹಂಚಿಕೊಂಡಿದ್ದಾರೆ.

  • ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಂಬಳ ಪಡೆಯೋ ಕೋಚ್ ರವಿಶಾಸ್ತ್ರಿ!

    ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಂಬಳ ಪಡೆಯೋ ಕೋಚ್ ರವಿಶಾಸ್ತ್ರಿ!

    ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕೋಚ್ ಗಳಿಗೆ ನೀಡುವ ಸಂಭಾವನೆ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಮಾಸಿಕ 36 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಈ ಮೂಲಕ ಮೂಲಕ ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಕೋಚ್ ರವಿಶಾಸ್ತ್ರಿ ಆಗಿದ್ದಾರೆ.

    ಬಿಸಿಸಿಐ ಬಿಡುಗಡೆಗೊಳಿಸಿದ ಪಟ್ಟಿಯ ಅನ್ವಯ ರವಿಶಾಸ್ತ್ರಿ ಅವರು 2018 ಏಪ್ರಿಲ್ ನಿಂದ ಜುಲೈ 2018 ಅವಧಿಯಲ್ಲಿ ತಿಂಗಳಿಗೆ 36 ಲಕ್ಷ ರೂ. ನಂತೆ 1,89,37,500 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇನ್ನು ಅಂಡರ್ 19 ತಂಡದ ಕೋಚ್ ಆಗಿರುವ ದ್ರಾವಿಡ್ 40,50,000 ರೂ. ಗಳನ್ನು 2018 ಮಾರ್ಚ್ ತಿಂಗಳಿನಲ್ಲಿ ಪಡೆದಿದ್ದಾರೆ. ಈ ಹಿಂದೆ ದ್ರಾವಿಡ್ ವಾರ್ಷಿಕವಾಗಿ ದ್ರಾವಿಡ್ 4.86 ಕೋಟಿ ರೂ. ಗಳನ್ನು ಪಡೆದಿದ್ದರು.

    ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಅವರನ್ನು 2017 ಜುಲೈ ನಲ್ಲಿ ನೇಮಕಗೊಂಡಿದ್ದರು. ಬಿಸಿಸಿಐ ಅಹ್ವಾನಿಸಿದ್ದ ಕೋಚ್ ಹುದ್ದೆಯ ಅರ್ಜಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಸಹ ಅರ್ಜಿ ಸಲ್ಲಿಸಿದ್ದರು. ಸದ್ಯ ಬಿಸಿಸಿಐ ಅಂಡರ್ 19 ತಂಡದ ಕೋಚ್ ಹುದ್ದೆಗೆ ದ್ರಾವಿಡ್ ರೊಂದಿನ ಒಪ್ಪಂದವನ್ನು ನವೀಕರಿಸಿದ್ದು, 2019 ರ ವರೆಗೂ ದ್ರಾವಿಡ್ ಕೋಚ್ ಆಗಿ ಮುಂದುವರೆಯಲಿದ್ದಾರೆ.

    ದ್ರಾವಿಡ್ ಅವರ ತರಬೇತಿಯಲ್ಲಿ ಅಂಡರ್ 19 ತಂಡ ವಿಶ್ವಕಪ್ ಎತ್ತಿಹಿಡಿದಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ ದ್ರಾವಿಡ್ ಬಾಯ್ಸ್ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.

  • ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ

    ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯಿಂದ ಉಡುಪಿಯಲ್ಲಿ ನಾಗಾರಾಧನೆ

    ಉಡುಪಿ: ಕಾರ್ಕಳ ಸಮೀಪದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಸೇವೆ ನೀಡಿದರು. ನಾಗಬನದಲ್ಲಿ ತನು ತಂಬಿಲ ಸೇವೆ ನೀಡಿದರು. ಟೀಂ ಇಂಡಿಯಾ ಬಗ್ಗೆ ಕೂಡಾ ಮಾತನಾಡಿದ್ರು.

    ಕ್ರಿಕೆಟಿಗೂ ನಾಗಬ್ರಹ್ಮನಿಗೂ ಏನಾದ್ರೂ ಸಂಬಂಧ ಇದ್ಯಾ? ಇಲ್ಲ ಅಂತ ಹೇಳ್ಬೇಡಿ. ವಿಶ್ವದ ನಂಬರ್ ಒನ್ ಟೀಂನ ಕೋಚ್ ರವಿಶಾಸ್ತ್ರಿಗೂ ಭಾರೀ ಸಂಬಂಧವಿದೆ. ಅವರ ವೃತ್ತಿ ಜೀವನಕ್ಕೆ ಕ್ರಿಕೆಟ್ ಕೈ ಹಿಡಿದ್ರೆ  ಸಾಂಸಾರಿಕಾ ಜೀವನದ ಕೈ ಹಿಡಿದದ್ದು ದೇವರ ಮೇಲಿನ ನಂಬಿಕೆ.

    ಮದುವೆಯಾಗಿ 17 ವರ್ಷ ಸಂತಾನ ಭಾಗ್ಯ ಇಲ್ಲದೇ ಇದ್ದಾಗ ರವಿಶಾಸ್ತ್ರಿ ಎರ್ಲಪ್ಪಾಡಿ ಕ್ಷೇತ್ರಕ್ಕೆ ಭೇಟಿಕೊಟ್ಟು ಹರಕೆ ಹೊತ್ತಿದ್ದರು. ನಂತರ ರವಿಶಾಸ್ತ್ರಿಗೆ ಸಂತಾನಭಾಗ್ಯ ದಕ್ಕಿತು. ನಾಗದೇವರ ಆಶೀರ್ವಾದವನ್ನು ನೆನೆಯುವ ರವಿಶಾಸ್ತ್ರಿ ಪ್ರತೀ ವರ್ಷ ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ಎರ್ಲಪ್ಪಾಡಿಗೆ ಬರುತ್ತಾರೆ. ನಾಗಾರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಬಾರಿ ಕೂಡಾ ನಾಗಬನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ರವಿಶಾಸ್ತ್ರಿ ಸಂಬಂಧಿ, ಆಪ್ತ ಮನೋಹರ ಪ್ರಸಾದ್ ಹೇಳಿದರು.

    ರವಿಶಾಸ್ತ್ರಿ ಪೂರ್ವಿಕರು ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನೆಲೆಸಿದ್ದರು. ಇಲ್ಲಿಂದ ವಲಸೆ ಹೋದ ನಂತರವೂ ಇಲ್ಲಿನ ಕಾರ್ಣಿಕ ತಿಳಿದ ರವಿ ಶಾಸ್ತ್ರಿ ವರ್ಷಕ್ಕೊಮ್ಮೆಯಾದ್ರೂ ಇಲ್ಲಿಗೆ ಭೇಟಿ ಕೊಡುವ ಪರಿಪಾಠ ಬೆಳೆಸಿದ್ದಾರೆ.

    ವಿಷ್ಣುಮೂರ್ತಿ ದೇವಸ್ಥಾನ ಮತ್ತು ನಾಗಬನದ ಸೇವೆಯಲ್ಲಿ ನಾನು ಮನಶಾಂತಿ ಪಡೆಯುತ್ತೇನೆ. ಭಾರತ ಮುಂದೆ ದೊಡ್ಡ ಪಂದ್ಯಾಟವನ್ನು ಎದುರು ನೋಡುತ್ತಿದೆ. ಇದೇ ಸಂದರ್ಭ ದೇವರ ದರ್ಶನವಾಗಿರುವುದು ಖುಷಿಯಾಗಿದೆ ಎಂದರು. ಟೀಂನ ಹುಡುಗರಿಗೂ ನನಗೂ ಹೊಂದಾಣಿಕೆ ಚೆನ್ನಾಗಿದೆ. ಹೀಗಾಗಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

    ರವಿಶಾಸ್ತ್ರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸುವುದೆಂದರೆ ಗ್ರಾಮಸ್ಥರಿಗೆ ಹಬ್ಬವಿದ್ದಂತೆ. ರವಿಶಾಸ್ತ್ರಿ ಬಂದ್ರೆ ದೇವಸ್ಥಾನದಲ್ಲಿ ಹಬ್ಬದೂಟ ಆಯೋಜನೆಯಾಗುತ್ತದೆ.  ಶಾಸ್ತ್ರಿ ಸಾಮಾನ್ಯ ಜನರಂತೆ ಸಹಭೋಜನದಲ್ಲಿ ಪಾಲ್ಗೊಂಡರು. ರವಿ ಶಾಸ್ತ್ರಿಯನ್ನು ದೇವಸ್ಥಾನದ ಆಡಳಿತ ಮಂಡಳಿ, ಊರಿನ ಜನರು ಸನ್ಮಾನಿಸಿದರು.

    ರವಿಶಾಸ್ತ್ರಿಗೂ ಈ ಊರಿನ ಜೊತೆ ಅವಿನಾಭಾವ ಸಂಬಂಧ. ಇಲ್ಲಿನ ಸರ್ಕಾರಿ ಶಾಲೆಗೆ ಒಂದು ಲಕ್ಷ ರೂಪಾಯಿ ನೀಡಿದ್ದರು. ದೇವಸ್ಥಾನಕ್ಕೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದಾರೆ. ಮುಂದಿನ ಕ್ರಿಕೆಟ್ ಮಹಾಸಮರಕ್ಕೆ ಸಿದ್ಧಗೊಳ್ಳುತ್ತಿರುವ ರವಿಶಾಸ್ತ್ರಿಯ ತಂಡಕ್ಕೆ  ಎರ್ಲಪ್ಪಾಡಿ ಗ್ರಾಮದ ಜನ ಶುಭಕೋರಿದ್ದಾರೆ.

  • ಧೋನಿ ಸುತ್ತಲೂ ಹೊಟ್ಟೆ ಕಿಚ್ಚು ಪಡೋ ಜನರಿದ್ದಾರೆ: ರವಿ ಶಾಸ್ತ್ರಿ

    ಧೋನಿ ಸುತ್ತಲೂ ಹೊಟ್ಟೆ ಕಿಚ್ಚು ಪಡೋ ಜನರಿದ್ದಾರೆ: ರವಿ ಶಾಸ್ತ್ರಿ

    ನವದೆಹಲಿ: ಕೆಲ ದಿನಗಳ ಹಿಂದೆ ಧೋನಿ ಬ್ಯಾಟಿಂಗ್ ಬಗ್ಗೆ ಟೀಕಿಸಿದ್ದ ವ್ಯಕ್ತಿಗಳಿಗೆ ಟೀಂ ಇಂಡಿಯಾ ನಾಯಕ ಕೊಹ್ಲಿ ತಿರುಗೇಟು ನೀಡಿದ್ದರು. ಈಗ ಕೋಚ್ ರವಿಶಾಸ್ತ್ರಿ ಧೋನಿ ಬಗ್ಗೆ ಮೆಚ್ಚುಗೆಯ ಮಾತನ್ನು ಹೇಳಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದ ವೇಳೆ ಮಾತನಾಡಿರುವ ರವಿಶಾಸ್ತ್ರಿ, ಧೋನಿ ಒಬ್ಬ ಅಸಾಮಾನ್ಯ ಆಟಗಾರ ಹಾಗೂ ಉತ್ತಮ ನಾಯಕರಾಗಿದ್ದು ಅವರ ಸುತ್ತಲು ಹೊಟ್ಟೆ ಕಿಚ್ಚು ಪಡುವವರೇ ಇದ್ದಾರೆ. ಅಲ್ಲದೇ ಧೋನಿಯವರ ವೃತ್ತಿ ಜೀವನ ಅಂತ್ಯಗೊಳಿಸಲು ಕಾದುಕುಳಿತಿದ್ದಾರೆ. ಆದರೆ ಕ್ರಿಕೆಟ್ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಧೋನಿ ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಧೋನಿ ಅವರ ವಿರುದ್ಧ ಮಾಡುವ ಯಾವುದೇ ಟೀಕೆಗಳು ಅವರ ಮೇಲೆ ಪ್ರಭಾವನ್ನು ಬೀರುವುದಿಲ್ಲ. ನಮ್ಮ ದೃಷ್ಟಿಯಲ್ಲಿ ಧೋನಿ ಅವರಿಗೆ ಯಾವ ಸ್ಥಾನವನ್ನು ನೀಡಿದ್ದೇವೆ ಅದು ಹಾಗೆಯೇ ಮುಂದುವರೆಯುತ್ತದೆ ಎಂದು ಟೀಕಾಕಾರ ವಿರುದ್ಧ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ : ಧೋನಿ ನೃತ್ಯಕ್ಕೆ ಬಿದ್ದು ಬಿದ್ದು ನಕ್ಕ ಸಾಕ್ಷಿ: ವೈರಲ್ ವಿಡಿಯೋ ನೋಡಿ

    ನ್ಯೂಜಿಲೆಂಡ್ ಸರಣಿಯ ಅಂತಿಮ ಟಿ20 ಪಂದ್ಯದ ನಂತರ ಮಾತನಾಡಿದ್ದ ಕೊಹ್ಲಿ ಸಹ ಎಲ್ಲರೂ ಧೋನಿ ಅವರನ್ನು ಮಾತ್ರ ಯಾಕೆ ಗುರಿಯಾಗಿಸಿಕೊಂಡಿದ್ದಾರೆ. ತಂಡದ ಸದಸ್ಯರಾಗಿ ಎಲ್ಲಾ ಆಟಗಾರರು ಪಂದ್ಯದ ವೇಳೆ ಬ್ಯಾಟ್ ಮಾಡುವ ಸನ್ನಿವೇಶದ ಕುರಿತು ತಿಳಿದಿರುತ್ತೇವೆ. ವಿವಿಧ ದೃಷ್ಟಿಗಳಿಂದ ವಿಮರ್ಶೆ ನಡೆಸುವ ಟೀಕಾಕಾರರ ಹೇಳಿಕೆಗಳಿಂದ ನಾವು ಭಾವನತ್ಮಕತೆಗೆ ಒಳಾಗುವುದಿಲ್ಲ. ಕ್ರೀಡಾಂಗಣದಲ್ಲಿದ್ದಾಗ ವಿಕೆಟ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತೇವೆ ಎಂದು ಹೇಳುವ ಮೂಲಕ ಟೀಕಾಕಾರರ ವಿರುದ್ಧ ಕಿಡಿಕಾರಿದ್ದರು.

    ಇದನ್ನೂ ಓದಿ : ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್

    ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಧೋನಿ ಕಳಪೆ ಬ್ಯಾಂಟಿಂಗ್ ಪ್ರದರ್ಶನ ನೀಡಿದ ಕಾರಣದಿಂದ ಧೋನಿ ಟಿ20 ಮಾದರಿಗೆ ನಿವೃತ್ತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರರ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಇನ್ನು ಹಲವು ಟೀಕಾಕಾರರು ಧೋನಿ ವೈಫಲ್ಯದ ಬಗ್ಗೆ ತಮ್ಮದೇ ಟೀಕೆಗಳನ್ನು ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ : ಧೋನಿ ನಿವೃತ್ತಿ ಬಗ್ಗೆ ಮಾತನಾಡಿದವರಿಗೆ ತಿರುಗೇಟು ಕೊಟ್ಟ ಕೊಹ್ಲಿ

  • ಮೂರು ತಿಂಗಳಿಗೆ ಕೋಚ್ ರವಿಶಾಸ್ತ್ರಿ ಪಡೆದ ಸಂಬಳ ಎಷ್ಟು ಗೊತ್ತೆ?

    ಮೂರು ತಿಂಗಳಿಗೆ ಕೋಚ್ ರವಿಶಾಸ್ತ್ರಿ ಪಡೆದ ಸಂಬಳ ಎಷ್ಟು ಗೊತ್ತೆ?

    ಮುಂಬೈ: ಕೋಚ್ ಸ್ಥಾನಕ್ಕೆ ಆಯ್ಕೆಯಾದ 3 ತಿಂಗಳ ಅವಧಿಯಲ್ಲಿ ರವಿಶಾಸ್ತ್ರಿ ಅವರಿಗೆ 1.20 ಕೋಟಿ ರೂ. ವೇತನವನ್ನು ನೀಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿಕೊಂಡಿದೆ.

    ವರ್ಷಕ್ಕೆ 8 ಕೋಟಿ ರೂ. ಸಂಭಾವನೆ ಪಡೆಯಲಿರುವ ರವಿಶಾಸ್ತ್ರಿ ಕೋಚ್ ಸ್ಥಾನಕ್ಕೆ ಆಯ್ಕೆಯಾಗಿ ಮೂರು ತಿಂಗಳು ಕಳೆದಿದೆ. ಹೀಗಾಗಿ ಜುಲೈ 18ರಿಂದ ಮತ್ತು ಅಕ್ಟೋಬರ್ 18 ರ ಅವಧಿಗೆ 1.20 ಕೋಟಿ ರೂ. ಹಣವನ್ನು ನೀಡಲಾಗಿದೆ ಎಂದು ಬಿಸಿಸಿಐ ತನ್ನ ವೆಬ್‍ಸೈಟ್‍ನಲ್ಲಿ ತಿಳಿಸಿದೆ.

    ಇಲ್ಲಿಯವರೆಗೂ ಬಿಸಿಸಿಐ ಯಾವುದೇ ಕೋಚ್‍ಗೂ ಇಷ್ಟೊಂದು ಸಂಭಾವನೆ ನೀಡಿರಲಿಲ್ಲ. ಆದರೆ ಈಗ ಇಷ್ಟೊಂದು ಸಂಭಾವನೆ ಪಡೆಯುವ ಮೂಲಕ ರವಿಶಾಸ್ತ್ರಿ ಅತಿ ಹೆಚ್ಚು ಸಂಭಾವನೆ ಪಡೆದ ಕೋಚ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಹಾಗೆಯೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೂ ಸಹ ಸಂಭಾವನೆ ನೀಡಲಾಗಿದ್ದು, ವಿದೇಶ ನೆಲದಲ್ಲಿ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದಕ್ಕೆ 57.88 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಬಿಸಿಸಿಐ ವೆಬ್‍ಸೈಟ್ ನಲ್ಲಿ ಹೇಳಿಕೊಂಡಿದೆ.