Tag: ರವಿಶಂಕರ್ ಪ್ರಸಾದ್

  • ಮೋದಿ ಸಂಪುಟದಲ್ಲಿ ಯಾರಿದ್ದಾರೆ? ಹೊಸ ಮಂತ್ರಿಗಳು ಯಾರು – ಪಟ್ಟಿ ಓದಿ

    ಮೋದಿ ಸಂಪುಟದಲ್ಲಿ ಯಾರಿದ್ದಾರೆ? ಹೊಸ ಮಂತ್ರಿಗಳು ಯಾರು – ಪಟ್ಟಿ ಓದಿ

    ನವದೆಹಲಿ: ಇಂದು ಸಂಜೆ ಪ್ರಧಾನಿ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಈ ಬಾರಿ ಮಂತ್ರಿ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಬಾರಿ ಹಳಬರ ಜೊತೆಗೆ ಹೊಸ ಮುಖಗಳಿಗೆ ಮೋದಿ ಮಣೆ ಹಾಕಿದ್ದಾರೆ.

    ಯಾರೆಗೆಲ್ಲ ಸ್ಥಾನ?
    ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ರಾವ್ ಇಂದರ್ಜಿತ್ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಕೃಷನ್ ಪಾಲ್ ಗುರ್ಜರ್, ಹರ್ಸಿಮ್ರತ್ ಕೌರ್, ಡಿ.ವಿ. ಸದಾನಂದ ಗೌಡ, ಬಾಬುಲ್ ಸುಪ್ರಿಯೊ, ಪ್ರಕಾಶ್ ಜಾವಡೇಕರ್, ರಾಮದಾಸ್ ಅಠವಾಲೆ, ಜಿತೇಂದರ್ ಸಿಂಗ್, ತವಾರ್ ಚಂದ್ ಗೆಹ್ಲೋಟ್

    ಮೊದಲ ಬಾರಿ ಮಂತ್ರಿ ಸ್ಥಾನ
    ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ರತನ್ ಲಾಲ್ ಕಟಾರಿಯಾ, ರಮೇಶ್ ಪೆಖ್ರಿಯಾಲ್ ನಿಶಾಂಕ್, ಆರ್‍ಸಿಪಿ ಸಿಂಗ್, ಕಿಶನ್ ರೆಡ್ಡಿ, ರವೀಂದ್ರನಾಥ್, ಕೈಲಾಶ್ ಚೌಧರಿ, ಸೋಮ್ ಪ್ರಕಾಶ್, ರಾಮೇಶ್ವರ್ ತೇಲಿ, ಸುಬ್ರತ್ ಪಾಠಕ್, ದೇಬೋಶ್ರೀ ಚೌಧರಿ

  • ಶತ್ರುಘ್ನ ಸಿನ್ಹಾ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್

    ಶತ್ರುಘ್ನ ಸಿನ್ಹಾ ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್

    ನವದೆಹಲಿ: ಪಕ್ಷದಲ್ಲಿದ್ದುಕೊಂಡೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದ ಶತ್ರುಘ್ನ ಸಿನ್ಹಾ ಅವರನ್ನು ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ.

    ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಫರ್ಧಿಸುವ ಶತ್ರುಘ್ನ ಸಿನ್ಹಾ ಅವರ ವಿರುದ್ಧ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರನ್ನು ನಿಲ್ಲಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಬಿಜೆಪಿಯ ಚುನಾವಣಾ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಲೋಕಸಭಾ ಚುನಾವಣಾ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ. ಇತ್ತ ಶತ್ರುಘ್ನಾ ಸಿನ್ಹಾ ಅವರು ಪಕ್ಷೇತರ ಅಭ್ಯರ್ಥಿಯಾಗಿ, ಇಲ್ಲವೇ ಕಾಂಗ್ರೆಸ್-ಆರ್‍ಜೆಡಿ ಬೆಂಬಲ ಪಡೆದು ಸ್ಪರ್ಧಿಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

  • ಟಿಎಂಸಿ ಮಾಜಿ ನಾಯಕ ಮುಕುಲ್ ರಾಯ್ ಬಿಜೆಪಿಗೆ ಸೇರ್ಪಡೆ

    ಟಿಎಂಸಿ ಮಾಜಿ ನಾಯಕ ಮುಕುಲ್ ರಾಯ್ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಿರಿಯ ನಾಯಕ ಮುಕುಲ್ ರಾಯ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

    ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸಮ್ಮುಖದಲ್ಲಿ ಸೇರ್ಪಡೆಯಾಗಿ ಮಾತನಾಡಿದ ಅವರು, ಇಂದು ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನನಗೆ ತಿಳಿದ ಮಟ್ಟಿಗೆ ಬಿಜೆಪಿ ಕೋಮುವಾದಿ ಪಕ್ಷವಲ್ಲ. ಇದೊಂದು ಜಾತ್ಯತೀತ ಪಕ್ಷವಾಗಿದ್ದು, ಮುಂದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

    ಈ ವೇಳೆ ರವಿಶಂಕರ್ ಪ್ರಸಾದ್ ಮಾತನಾಡಿ ಮುಕುಲ್ ರಾಯ್ ಯಾವುದೇ ಷರತ್ತು ವಿಧಿಸದೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.

    ಮುಕುಲ್ ರಾಯ್ ಸೆಪ್ಟೆಂಬರ್ 25 ರಂದು ರಾಜೀನಾಮೆ ನೀಡಿದ್ದರು. ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ ಕೆಲವೇ ಘಂಟೆಗಳಲ್ಲಿ ಟಿಎಂಸಿ ನಾಯಕ ಪಾರ್ಥ ಚಟರ್ಜಿ, ರಾಯ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿರುವುದಾಗಿ ಆದೇಶ ಹೊರಡಿಸಿದ್ದರು.

    ರಾಯ್ ಅವರ ರಾಜೀನಾಮೆಗೆ ಟಿಎಂಸಿ ಪಕ್ಷ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಭಿನ್ನಾಭಿಪ್ರಾಯಗಳೇ ಕಾರಣ ಎಂದು ತಿಳಿದು ಬಂದಿದೆ. ರಾಯ್ ಅವರು ಹಲವು ದಿನಗಳ ಮುಂಚೆಯೇ ಪಕ್ಷ ತೊರೆಯುವ ಕುರಿತು ಸೂಚನೆಯನ್ನು ನೀಡಿದ್ದರು. ಟಿಎಂಸಿ ರಾಜ್ಯಸಭಾ ನಾಯಕ ಸ್ಥಾನದಿಂದ ಇವರನ್ನು ಕೆಳಗಿಳಿಸಿತ್ತು. ಅಲ್ಲದೆ ಸಾರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಸತ್ತಿನ ಸ್ಥಾಯಿ ಸಮಿತಿಯ ಮುಖ್ಯಸ್ಥ ಸ್ಥಾನದಿಂದಲೂ ತೆಗೆದು ಹಾಕಲಾಗಿತ್ತು.

    ಕಳೆದ ಕೆಲವು ದಿನಗಳ ಹಿಂದೆ ಟಿಎಂಸಿಯ ಹಿರಿಯ ನಾಯಕರೊಬ್ಬರು ಮಮತಾ ಅವರು ಪಕ್ಷದ ಹೃದಯವಾದರೆ, ರಾಯ್ ಪಕ್ಷದ ತಲೆ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದರು. ಮಮತಾ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಯ್ ಪಕ್ಷದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ಚುನಾವಣೆ ವೇಳೆ ಟಿಎಂಸಿ ಅಡ್ಡಮತದಾನ ಮಾಡಿ ರಾಮನಾಥ್ ಕೋವಿಂದ್ ಬೆಂಬಲ ನೀಡಿದ್ದಕ್ಕೆ ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದರು. ಈ ಚುನಾವಣೆಯ ನಂತರ ಪಕ್ಷದಲ್ಲಿ ಅಂತರಿಕ ಒಡಕು ಉಂಟಾಗಿತ್ತು.

    ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಾಪನೆಯಿಂದ ಅಧಿಕಾರವನ್ನು ಪಡೆಯುವ ತನಕ ಮುಕುಂದ್ ಅವರ ಕಾರ್ಯ ಮಹತ್ವ ಪೂರ್ಣವಾದ್ದು. ಮುಕುಂದ್ ಅವರ ರಾಜೀನಾಮೆಯು ಟಿಎಂಸಿಯಲ್ಲಿ ಭಾರೀ ಬದಲವಾಣೆಗೆ ಕಾರಣವಾಗಲಿದೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

     

  • ಖಾಸಗಿತನ ಏನಾದ್ರೂ ಉಳಿದಿದೆಯೇ: ಧೋನಿ ವೈಯಕ್ತಿಕ ದಾಖಲೆ ಲೀಕ್ ಕುರಿತು ಸಚಿವರಿಗೆ ಸಾಕ್ಷಿ ಪ್ರಶ್ನೆ

    ಖಾಸಗಿತನ ಏನಾದ್ರೂ ಉಳಿದಿದೆಯೇ: ಧೋನಿ ವೈಯಕ್ತಿಕ ದಾಖಲೆ ಲೀಕ್ ಕುರಿತು ಸಚಿವರಿಗೆ ಸಾಕ್ಷಿ ಪ್ರಶ್ನೆ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ವೈಯಕ್ತಿಕ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವ ಕುರಿತು ಪತ್ನಿ ಸಾಕ್ಷಿ ಸಿಂಗ್ ಕಿಡಿಕಾರಿದ್ದಾರೆ.

    ಮಂಗಳವಾರ ಆಧಾರ್ ಕಾರ್ಡಿನ ನೋಂದಣಿ ಸೇವೆ ಒದಗಿಸುವ ಸಂಸ್ಥೆ ಸಿಎಸ್ ಸಿ ಇ-ಆಡಳಿತ ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಧೋನಿಯವರ ಆಧಾರ್ ಕಾರ್ಡಿನ ಅರ್ಜಿಯ ಚಿತ್ರವನ್ನು ಪೋಸ್ಟ್ ಮಾಡಿತ್ತು. ಇದನ್ನು ಗಮನಿಸಿದ ಸಾಕ್ಷಿ ಧೋನಿ ತಕ್ಷಣವೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟ್ವೀಟ್ ಮಾಡಿದರು.

    ಈ ಟ್ವೀಟನ್ನು ಕೂಡಲೇ ಸಚಿವರು ಸಿಎಸ್‍ಸಿ ಇ ಗವರ್ನೆಸ್ಸ್ ಸರ್ವಿಸ್ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ. ಮಾತ್ರವಲ್ಲದೇ `ಇದು ಸಾರ್ವಜನಿಕ ಸ್ವತ್ತು ಅಲ್ಲ, ಇದ್ರಲ್ಲಿ ಏನಾದ್ರೂ ಖಾಸಗಿ ಮಾಹಿತಿಗಳಿವೆಯೇ’ ಎಂದು ಸಚಿವರು ಸಾಕ್ಷಿಯನ್ನು ಪ್ರಶ್ನಿಸಿದ್ರು.

    ಸಚಿವರ ಪ್ರಶ್ನೆಗೆ ಸಿಎಸ್ ಸಿ ಇ- ಆಡಳಿತ ಪೋಸ್ಟ್ ಮಾಡಿದ್ದ ಟ್ವೀಟ್ ನ ಸ್ಕ್ರೀನ್ ಶಾಟ್ ತೆಗೆದು ಫೋಟೋ ಕಳುಹಿಸುವ ಮೂಲಕ ಸಾಕ್ಷಿ `ಖಾಸಗಿ ಮಾಹಿತಿಗಳು ಬಹಿರಂಗವಾಗಲು ಇನ್ನೇನು ಉಳಿದಿದೆ ಅಂತಾ ಮರು ಪ್ರಶ್ನೆ ಹಾಕಿದ್ದಾರೆ. ಬಳಿಕ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ತಮ್ಮ ಗಮನಕ್ಕೆ ವಿಷಯವನ್ನು ತಂದಿದ್ದೀಕೆ ಸಾಕ್ಷಿ ಸಿಂಗ್ ಗೆ ಧನ್ಯವಾದ ಹೇಳಿದರು.

    ಖಾಸಗಿ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಕಾನೂನಿಗೆ ವಿರುದ್ಧವಾದುದು. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತಾ ಸಚಿವರು ಧೋನಿ ಪತ್ನಿಗೆ ತಿಳಿಸಿದ್ದಾರೆ.