Tag: ರವಿಶಂಕರ್ ಗೌಡ

  • TPL-2: ಮಾರ್ಚ್ 12 ರಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2

    TPL-2: ಮಾರ್ಚ್ 12 ರಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2

    ನ್ 1 ಕ್ರಿಕೆಟ್ (Cricket) ಅಕಾಡೆಮಿ ವತಿಯಿಂದ ಕಳೆದ ಬಾರಿ ಅದ್ದೂರಿಯಾಗಿ ಆರಂಭಗೊಂಡಿದ್ದ ಟಿಪಿಎಲ್ (TPL) ಇದೀಗ ಸೀಸನ್ -2 ಕ್ಕೆ ರೆಡಿಯಾಗಿದೆ. ಮಾರ್ಚ್ ನಲ್ಲಿ ಟೆಲಿವಿಷನ್ (Television) ಪ್ರೀಮಿಯರ್ ಲೀಗ್ ಸೀಸನ್-2 ಆರಂಭವಾಗುತ್ತಿದೆ. ಸೀಸನ್ 2ಕ್ಕೆ ವೇದಿಕೆ ಸಜ್ಜಾಗುತ್ತಿದ್ದು ಮಾರ್ಚ್ 12,13,14,15ರಂದು ಒಟ್ಟು ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

    ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕರಾದ ಬಿ.ಆರ್. ಸುನಿಲ್ ಕುಮಾರ್ ಮಾತನಾಡಿ, ಕಳೆದ ವರ್ಷದಿಂದ ಟಿಪಿಎಲ್ ಆರಂಭಿಸಿದ್ದೇವೆ. ಮೊದಲ ಸೀಸನ್ ಯಶಸ್ವಿಯಾಗಿತ್ತು. ಇದೀಗ ಎರಡನೇ ಸೀಸನ್ ನಡೆಸಲು ಎಲ್ಲಾ ತಯಾರಿ ನಡೆಯುತ್ತಿದೆ. ಮಾರ್ಚ್ ಎರಡನೇ ವಾರ ಟಿಪಿಎಲ್ ಸೀಸನ್ 2 ನಡೆಯಲಿದೆ. ಈ ಬಾರಿ ಡೇ ಅಂಡ್ ನೈಟ್ ಪಂದ್ಯಾವಳಿ ನಡೆಯಲಿದೆ. ತಂಡ, ನಾಯಕರ ಆಯ್ಕೆ ಎಲ್ಲವೂ ನಡೆದಿದೆ. ಮಾರ್ಚ್ 7ರಂದು ಜೆರ್ಸಿ ಲಾಂಚ್ ಮಾಡಲಿದ್ದೇವೆ. ಟಿಪಿಎಲ್ ಟ್ರೋಫಿ ಗೆದ್ದ ತಂಡದ ಸದಸ್ಯರಿಗೆ ಪರ್ಪಲ್ ರಾಕ್ ಎಂಟರ್ಟೈನರ್ಸ್ ದ್ವಿಚಕ್ರ ವಾಹನವನ್ನು ನೀಡುತ್ತಿದೆ. ಕಳೆದ ಬಾರಿ ಟೂರ್ನಮೆಂಟ್ ಮುಗಿದ ಮೇಲೆ ಪ್ರೊಡಕ್ಷನ್ ಮ್ಯಾನೇಜರ್ ಪಾರ್ಥ ಅವರಿಗೆ ಧನ ಸಹಾಯ ಮಾಡಿದ್ದೇವು. ಈ ಬಾರಿಯೂ ಕೂಡ ಹಿರಿಯ ಕಲಾವಿದರಿಗೆ ಸಹಾಯ ಧನ ನೀಡಲು ಚಿಂತನೆ ಮಾಡಿದ್ದೇವೆ ಎಂದು ಬಿ. ಆರ್. ಸುನೀಲ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: `ಆಚಾರ್ಯ’ ಚಿತ್ರಕ್ಕಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ

    ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್ ನಲ್ಲಿ ಟಿಪಿಎಲ್ ಸೀಸನ್ -2 ನಡೆಯಲಿದೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಆ್ಯನಿಲೀಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ಒಂದೊಂದು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

    ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿರಲಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಆನಿಹೆಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್  ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ಅಂಬಾಸಿಡರ್ ಪಟ್ಟಿಯಲ್ಲಿದ್ದಾರೆ.

  • ಗುಳಿಕೆನ್ನೆ ಹುಡುಗ ದಿಗಂತ್ ಚಿತ್ರಕ್ಕೆ ಇಬ್ಬರು ಮಹಿಳೆಯರ ಉಸ್ತುವಾರಿ

    ಗುಳಿಕೆನ್ನೆ ಹುಡುಗ ದಿಗಂತ್ ಚಿತ್ರಕ್ಕೆ ಇಬ್ಬರು ಮಹಿಳೆಯರ ಉಸ್ತುವಾರಿ

    ನ್ನಡ ಸಿನಿಮಾ ರಂಗಕ್ಕೆ ಮತ್ತೋರ್ವ ನಿರ್ದೇಶಕಿಯ ಪ್ರವೇಶವಾಗಿದೆ. ಕೆನಡಾ ನಿವಾಸಿ ಬೃಂದಾ ಮುರಳೀಧರ್ ‘ಅಂತು ಇಂತು’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಕಿರುತೆರೆ, ಹಿರಿತೆರೆ ನಟಿ ಹಾಗೂ ನಿರ್ಮಾಪಕಿ‌ ಜಯಶ್ರೀ ರಾಜ್, ಬೃಂದಾ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ. ದಿಗಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿರುವುದು ವಿಶೇಷ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಈ ಕುರಿತು ಮಾತನಾಡಿರುವ ಬೃಂದಾ, ‘ನಾನು ಮೂಲತಃ ಮೈಸೂರಿವಳು. ರಂಗ ಕಲಾವಿದೆ. ಇಪ್ಪತ್ತೈದು ವರ್ಷಗಳಿಂದ ಕೆನಡಾದಲ್ಲಿದ್ದೀನಿ. ಅಲ್ಲೇ ನಾನು ಹಾಗೂ ನನ್ನ ಪತಿ ಮುರಳಿಧರ್ ನಾಟಕ ಸೇರಿದಂತೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಾನು ಈ ಹಿಂದೆ ನಾಟ್ ನಾಟ್ ಎಂಬ ಇಂಗ್ಲಿಷ್ ಚಿತ್ರ ನಿರ್ದೇಶಿಸಿದ್ದೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇದು ಸ್ವದೇಶದಿಂದ ವಿದೇಶಕ್ಕೆ ಹೋಗಿ ನೆಲೆಸಿರುವವರ ಕಥೆ‌. ನಾವು ಎಲ್ಲೇ ಇದ್ದರೂ ನಮ್ಮ ಹುಟ್ಟಿದ ಊರಿನ ಮಮತೆ ಸದಾ ಸೆಳೆಯುತ್ತಿರುತ್ತದೆ. ಈ ರೀತಿ ಭಾವನಾತ್ಮಕ ಕಥೆಯುಳ್ಳ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ’ ಎಂದರು. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ‘ನಾನು 25 ವರ್ಷಗಳಿಂದ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ  ಅಭಿನಯಿಸಿದ್ದೇನೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಾಣ ಕೂಡ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನಿರ್ದೇಶಕಿ  ಬೃಂದಾ ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು’ ಎನ್ನುವುದು ಜಯಶ್ರೀ ರಾಜ್ ಮಾತು. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಅಂದಹಾಗೆ ಈ ಸಿನಿಮಾದಲ್ಲಿ ದಿಗಂತ್ ಭಾರತದಿಂದ ಕೆನಡಾಕ್ಕೆ ಬಂದ ಹುಡುಗನ ಪಾತ್ರ ಮಾಡುತ್ತಿದ್ದಾರೆ. ಗಿರಿಜಾ ಲೋಕೇಶ್, ರವಿಶಂಕರ್ ಗೌಡ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ‌. ಕೆನಡಾದ ಸ್ಥಳಿಯ ತಂತ್ರಜ್ಞರು ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ‌.

  • ಪುನೀತ್ ಅಗಲಿಕೆಯ ಶೋಕ ನಿರಂತರವಾಗಿರುತ್ತದೆ: ರಂಗಾಯಣ ರಘು

    ಪುನೀತ್ ಅಗಲಿಕೆಯ ಶೋಕ ನಿರಂತರವಾಗಿರುತ್ತದೆ: ರಂಗಾಯಣ ರಘು

    ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರಿಗೆ 11 ದಿನದ ಕಾರ್ಯವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಈ ವೇಳೆ ಕಡ್ಡಿಪುಡಿ ಚಂದ್ರು, ರಂಗಾಯಣ ರಘು, ರವಿಶಂಕರ್ ಗೌಡ ಅವರ ಅಪ್ಪು ಸಮಾಧಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಸಮಾಧಿಗೆ ಭೇಟಿ ಕೊಟ್ಟು ಪೂಜಿಸಿ, ಸ್ವಲ್ಪ ಸಮಯ ಇಲ್ಲೇ ಕುಳಿತ ನಟರು ಅಪ್ಪು ನೆನಪುಗಳನ್ನು ಮಾಧ್ಯಮದವರ ಜೊತೆಗೆ ಮೆಲಕು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನಟರಾದ ರಂಗಾಯಣ ರಘು , ರವಿಶಂಕರ್ ಗೌಡ , ಕಡ್ಡಿಪುಡಿ ಚಂದ್ರು ಅಪ್ಪು ಜೊತೆಗೆ ಇರುವ ಬಾಂಧವ್ಯ ಮತ್ತು ಅವರೊಂದಿಗೆ ಇರುವ ಒಡನಾಟವನ್ನು ನೆನೆದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

    ಪುನೀತ್ ಅಗಲಿಕೆಯ ಶೋಕ ನಿರಂತರವಾಗಿರುತ್ತದೆ. ಕುಟುಂಬವನ್ನ ದೇವರೇ ಕಾಪಾಡಬೇಕು. ಅಶ್ವಿನಿಯವರ ದುಃಖ ನೋಡಿದರೆ ತುಂಬಾ ಕಷ್ಟ ಆಗುತ್ತದೆ ರಂಗಾಯಣ ರಘು ಎಂದು ಹೇಳುತ್ತಾ ದುಃಖಿತರಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    Puneeth Rajkumar

    ಕಡ್ಡಿಪುಡಿ ಚಂದ್ರು ಮಾತನಾಡಿ, ನನಗೆ ಅಪ್ಪು ಜೊತೆ ಸಿನಿಮಾ ಹೊರತಾಗಿಯೂ ಕುಟುಂಬದ ಜೊತೆಗೆ ಬಹಳ ನಂಟಿದೆ. ಎಂಥಾ ಅದ್ಭುತ ಕಲಾವಿದನನ್ನ ನಾವು ಕಳೆದುಕೊಂಡುಬಿಟ್ವಿ. ಅವರೊಂದಿಗೆ ಕಳೆದಿರುವ ಸಾಕಷ್ಟು ನೆನಪುಗಳಿವೆ ಎಂದು ಹೇಳುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿದ್ದಾರೆ.

    ನಾನು ಅವರೊಂದಿಗೆ ಕಳೆದ ನೆನಪುಗಳಿಗೆ ಲೆಕ್ಕವಿಲ್ಲ. ನಾನು ಅವರನ್ನು ಚಿಕ್ಕಯಜಮಾನ್ರೆ ಎಂದು ಕರೆಯುತ್ತಿದೆ. ಅವರು ಗುಣಗಾನ ಮಾತಲ್ಲಿ ಹೇಳಲಾಗುವುದಿಲ್ಲ ಎಂದು ರವಿಶಂಕರ್ ಗೌಡ ಹೇಳಿ ಅಪ್ಪು ಅವರನ್ನುಕಳೆದು ಕೊಂಡಿರುವ ಬೇಸರವನ್ನು ತೋಡಿಕೊಂಡಿದ್ದಾರೆ.

  • ವಿಕ್ರಾಂತ್ ರೋಣ ಸಿನಿಮಾ ನೋಡ್ತಾಯಿದ್ರೆ ಜೀವ ನಡುಗುತ್ತೆ: ನಟ ರವಿಶಂಕರ್ ಗೌಡ

    ವಿಕ್ರಾಂತ್ ರೋಣ ಸಿನಿಮಾ ನೋಡ್ತಾಯಿದ್ರೆ ಜೀವ ನಡುಗುತ್ತೆ: ನಟ ರವಿಶಂಕರ್ ಗೌಡ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ಸಿನಿಮಾ ಡಬ್ಬಿಂಗ್‍ನಲ್ಲಿ ಭಾಗವಹಿಸಿದ ನಟ ರವಿಶಂಕರ್ ಗೌಡ ಸಿನಿಮಾ ಕುರಿತಾಗಿ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ.

    ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ ಕುತೂಹಲದ ಮಹಾಪೂರವಾಗಿದೆ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲ. ಹೊಸ ಕಲಾವಿದರು ಅಚ್ಚುಕಟ್ಟಾದ ಅಭಿನಯಿಸಿದ್ದಾರೆ. ಎಂದು ರವಿಶಂಕರ್ ಗೌಡ ಡಬ್ಬಿಂಗ್ ಮಾಡಿದ ಅನುಭವವನ್ನು ಟ್ವೀಟ್ ಮಾಡಿದ್ದಾರೆ.

    ಪೂರ್ತಿ ಸಿನಿಮಾ ನೋಡುತ್ತಿದ್ದರೆ ಜೀವ ನಡುಗತ್ತದೆ. ನಿರ್ದೇಶಕ ಅನೂಪ್ ಭಂಡಾರಿಗೆ ಹಾಗೂ ನಿರ್ಮಾಪಕ ಜಾಕ್ ಮಂಜು ಸರ್‌ಗೆ ಅಭಿನಂದನೆಗಳು ಎಂದು ರವಿಶಂಕರ್ ಗೌಡ ವಿಕ್ರಾಂತ್ ರೋಣ ಸಿನಿಮಾದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್ ಭಂಡಾರಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ಅಶೋಕ್ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಂಬಾ ವಿಶೇಷವಾದ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಗೌಡ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಜಾಕ್ ಮಂಜು ನಿರ್ಮಾಣ ಮಾಡಿದ್ದು, ಬಿಡುಗಡೆ ಬಗ್ಗೆ ಸದ್ಯಕ್ಕೆ ಯಾವುದೇ ಅಪ್‍ಡೇಟ್ ಇಲ್ಲ.

    ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ವಿಷಯಕ್ಕೆ ಕುತೂಹಲ ಹೆಚ್ಚಿಸುತ್ತಿರುವ ಈ ಚಿತ್ರ ಈಗ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಫಸ್ಟ್ ಲುಕ್ ಪೋಸ್ಟರ್ ಹಾಗೂ ದುಬೈನ ಬುರ್ಜ್ ಖಲೀಫಾ ಕಟ್ಟಡ ಮೇಲೆ ಬಿಡುಗಡೆಯಾದ ಟೀಸರ್ ನೋಡಿದ್ಮೇಲೆ ಪ್ರೇಕ್ಷಕರು ಬಹಳ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • ಮಾರಾಟಕ್ಕಿರೋ ಮನೆ ಮೂಲಕ ಸಾಕಾರಗೊಂಡ ಮಹಾ ಕನಸು!

    ಮಾರಾಟಕ್ಕಿರೋ ಮನೆ ಮೂಲಕ ಸಾಕಾರಗೊಂಡ ಮಹಾ ಕನಸು!

    ಬೆಂಗಳೂರು: ಮಂಜು ಸ್ವರಾಜ್ ನಿರ್ದೇಶನ ‘ಮನೆ ಮಾರಾಟಕ್ಕಿದೆ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಎಸ್ ವಿ ಬಾಬು ನಿರ್ಮಾಣ ಮಾಡಿರೋ ಈ ಅದ್ದೂರಿ ಚಿತ್ರ ಭರಪೂರ ಕಾಮಿಡಿಯೊಂದಿಗೆ ರೂಪುಗೊಂಡಿದೆ ಎಂಬ ವಿಚಾರ ಈಗಾಗಲೇ ಟ್ರೇಲರ್ ನೊಂದಿಗೆ ಜಾಹೀರಾಗಿದೆ. ಈ ಮೂಲಕವೇ ಮಹಾ ಸಾಹಸವೊಂದನ್ನು ಮಂಜು ಸ್ವರಾಜ್ ಸಾಧ್ಯವಾಗಿಸಿಕೊಂಡಿದ್ದಾರೆ. ಅದು ಇಲ್ಲಿರೋ ಕಾಮಿಡಿ ನಟರನ್ನು ಒಂದುಗೂಡಿಸಿರೋ ಸಾಹಸ. ಇನ್ನುಳಿದಂತೆ ಈ ಸಿನಿಮಾ ಮೂಲಕವೇ ಕನ್ನಡ ಸಿನಿಮಾ ಪ್ರೇಕ್ಷಕರ ಅದೆಷ್ಟೋ ವರ್ಷಗಳ ಕನಸೊಂದು ನನಸಾಗಿದೆ!

    ಯಾವುದೇ ಸಿನಿಮಾ ಎಂಥಾದ್ದೇ ಕಥೆಜಯನ್ನೊಳಗೊಂಡಿದ್ದರೂ ಅದರ ಪರಿಪೂರ್ಣ ಸ್ಥಿತಿ ಕಾಮಿಡಿ ಝಲಕ್ಕಿನೊಂದಿಗೇ ಸಂಪನ್ನಗೊಳ್ಳುತ್ತದೆ. ಓರ್ವ ಕಾಮಿಡಿ ನಟನ ಹಾಸ್ಯದ ಹೊನಲಿನಲ್ಲಿ ಪ್ರೇಕ್ಷಕರೆಲ್ಲರೂ ಮಿಂದೆದ್ದು ತೃಪ್ತರಾಗುತ್ತಾರೆ. ಅಷ್ಟಕ್ಕೂ ಕನ್ನಡದಲ್ಲಿರೋ ಕಾಮಿಡಿ ನಟರ ಸಂಖ್ಯೆಯೇ ತೀರಾ ಕಡಿಮೆ. ಹಾಗೆ ಲೀಡ್‍ನಲ್ಲಿರೋ ಹಾಸ್ಯ ಕಲಾವಿದರನ್ನೆಲ್ಲ ಒಂದೇ ಚಿತ್ರದಲ್ಲಿ ನೋಡಬೇಕು, ಆ ಮೂಲಕ ಭರಪೂರ ಕಾಮಿಡಿ ಝಲಕ್ಕುಗಳಲ್ಲಿ ಮೈ ಮರೆಯ ಬೇಕೆಂಬುದು ಹಲವು ಪ್ರೇಕ್ಷಕರ ವರ್ಷಾಂತರಗಳ ಕನಸಾಗಿತ್ತು. ಆದರೆ ಮೇಲು ನೋಡಕ್ಕೆ ಸಾಮಾನ್ಯವಾಗಿ ಕಂಡರೂ ಒಪಂದಷ್ಟು ಹಾಸ್ಯ ಕಲಾವಿದರನ್ನು ಒಟ್ಟಿಗೆ ಸೇರಿಸೋದೇ ಒಂದು ಸಾಹಸ. ಅದನ್ನು ನಿರ್ದೇಶಕ ಮಂಜು ಸಾಧ್ಯವಾಗಿಸಿದ್ದಾರೆ.

    ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡರನ್ನು ಈ ಮೂಲಕ ಮಂಜು ಸ್ವರಾಜ್ ಒಟ್ಟಿಗೆ ನಟಿಸುವಂತೆ ಮಾಡಿದ್ದಾರೆ. ಈ ನಾಲಕ್ಕು ಮಂದಿಯೂ ಕಾಮಿಡಿಯಲ್ಲಿ ದೊಡ್ಡ ಹೆಸರು ಮಾಡಿರುವವರು. ಇವರೆಲ್ಲರೂ ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರತೀ ದಿನವೂ ಒಂದಲ್ಲ ಒಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರೋ ಇವರೆಲ್ಲರನ್ನು ಒಂದುಗೂಡಿಸೋದೇ ಒಂದು ಸಾಹಸ. ಆದರೆ ಅದನ್ನು ಮಂಜು ಸ್ವರಾಜ್ ಲೀಲಾಜಾಲವಾಗಿಯೇ ಮಾಡಿ ಮುಗಿಸಿದ್ದಾರೆ. ಈ ಎಲ್ಲ ಕಲಾªವಿದರೂ ಕೂಡಾ ಈ ಸಿನಿಮಾಗಾಗಿ ಅದೆಷ್ಟೇ ಸವಾಲುಗಳೆದುರಾದರೂ ಲೆಕ್ಕಿಸದೇ ದುಡಿದಿದ್ದಾರೆ. ತಂತಮ್ಮ ಪಾತ್ರಗಳಲ್ಲಿ ಅದ್ಭುತವಾಗಿಯೇ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ. ಅಂದಹಾಗೆ ಅತ್ಯಂತ ವಿಶೇಷವಾದ, ಮಜವಾದ ಕಥೆ ಮತ್ತು ಪಾತ್ರಗಳೊಂದಿಗೆ ಈ ಚಿತ್ರ ಇದೇ ವಾರ ತೆರೆ ಕಾಣಲಿದೆ.

  • ಮಾರಾಟಕ್ಕಿರೋ ಮನೆಯಲ್ಲಿ ಕಾಮಿಡಿ ಕಲರವ!

    ಮಾರಾಟಕ್ಕಿರೋ ಮನೆಯಲ್ಲಿ ಕಾಮಿಡಿ ಕಲರವ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿರೋ ಅಷ್ಟೂ ಕಾಮಿಡಿ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡಬೇಕೆಂಬುದು ಬಹುತೇಕ ಪ್ರೇಕ್ಷಕರ ಹಲವಾರು ವರ್ಷಗಳ ಕನಸು. ಆದರೆ ಇದುವರೆಗೂ ಅದು ತೃಪ್ತಿದಾಯಕವಾಗಿ ಸಾಕಾರಗೊಂಡಿದ್ದಿಲ್ಲ. ಪ್ರೇಕ್ಷಕರಲ್ಲಿರೋ ಈ ಆಕಾಂಕ್ಷೆಯನ್ನು ಅರ್ಥೈಸಿಕೊಂಡಿರೋ ನಿರ್ದೇಶಕ ಮಂಜು ಸ್ವರಾಜ್ ‘ಮನೆ ಮಾರಾಟಕ್ಕಿದೆ’ ಚಿತ್ರದ ಮೂಲಕ ಲೀಡ್ ಕಾಮಿಡಿ ಕಲಾವಿದರನ್ನು ಕೂಡಿಟ್ಟುಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಆರಂಭ ಕಾಲದಿಂದಲೂ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇತ್ತು. ಈ ಟ್ರೇಲರರ್ ನೋಡಿದ ಮೇಲಂತೂ ಅದು ಇಮ್ಮಡಿಸಿದೆ. ಯಾಕೆಂದರೆ ಈ ಟ್ರೇಲರ್ ಅಷ್ಟೊಂದು ಮಜವಾಗಿ ಮೂಡಿ ಬಂದಿದೆ.

    ಮನೆ ಮಾರಾಟಕ್ಕಿದೆ ಎಸ್.ವಿ ಬಾಬು ನಿರ್ಮಾಣದ ಹದಿನಾರನೇ ಚಿತ್ರ. ಈವರೆಗೂ ಪಟಾಕಿ, ಶ್ರಾವಣಿ ಸುಬ್ರಮಣ್ಯದಂಥಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಡಮಾಡಿರುವ ಮಂಜು ಸ್ವರಾಜ್ ನಿರ್ದೇಶನದ ಐದನೇ ಚಿತ್ರ. ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಇದರ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಬಹು ವೈಶಿಷ್ಟ್ಯದ ಪಾತ್ರಕ್ಕೆ ಶ್ರುತಿ ಹರಿಹರನ್ ಜೀವ ತುಂಬಿದ್ದಾರೆ. ಇದೀಗ ಬಿಡುಗಡೆಯಾಗಿರೋ ಟ್ರೇಲರ್‍ನಲ್ಲಿ ಈ ಎಲ್ಲರ ಪಾತ್ರಗಳೂ ಕೂಡಾ ಪ್ರೇಕ್ಷಕರಿಗೆ ಪರಿಚಯವಾಗಿವೆ. ಅವೆಲ್ಲವೂ ತುಂಬಾನೇ ಮಜವಾದ ರೀತಿಯಲ್ಲಿ ಮೂಡಿ ಬಂದಿವೆ.

    ಈ ಟ್ರೇಲರ್ ಮೂಲಕವೇ ಮನೆ ಮಾರಾಟಕ್ಕಿದೆ ಎಂಬುದು ಕಾಮಿಡಿ ಹಾರರ್ ಜಾನರಿನ ಚಿತ್ರವೆಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಹೀಗೆ ಎಲ್ಲ ಕಾಮಿಡಿ ನಟರನ್ನೂ ಕೂಡಾ ಒಂದೆಡೆ ಸೇರಿಸೋ ಸಾಹಸದಲ್ಲಿ ನಿರ್ದೇಶಕ ಮಂಜು ಸ್ವಾರಾಜ್ ಗೆದ್ದಿದ್ದಾರೆಂಬುದಕ್ಕೆ, ಈ ಸಿನಿಮಾ ಜನರೆಲ್ಲರಿಗೆ ಇಷ್ಟವಾಗಿ ದೊಡ್ಡ ಮಟ್ಟದಲ್ಲಿಯೇ ಗೆಲ್ಲುತ್ತದೆ ಎಂಬುದಕ್ಕೆ ಈ ಟ್ರೇಲರ್‍ನ ತುಂಬಾ ಸಾಕ್ಷಿಗಳು ಸಿಗುತ್ತವೆ. ಇದು ಕಾಮಿಡಿ ಥ್ರಿಲ್ಲರ್ ಜಾನರಿನ ಚಿತ್ರವೆಂದಾಕ್ಷಣ ಸಿದ್ಧ ಸೂತ್ರಗಳಿಗೆ ತಕ್ಕುದಾದ ಕಲ್ಪನೆ ಇಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ಪ್ರೇಕ್ಷಕರೆಲ್ಲರಿಗೂ ಸರ್‍ಪ್ರೈಸ್ ಎಂಬಂಥಾ ಹಲವಾರು ಅಂಶಗಳು ಇಲ್ಲಿವೆಯಂತೆ. ಅದೇನೆಂಬುದು ಶೀಘ್ರದಲ್ಲಿಯೇ ಜಾಹೀರಾಗಲಿದೆ.

  • ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

    ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

    ಬೆಂಗಳೂರು: ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ತೆರೆ ಕಂಡಿದೆ. ಮನಮಿಡಿಯುವ ಸತ್ಯ ಕಥೆಯಾಧಾರಿತ ಚಿತ್ರವೆಂಬ ಕಾರಣದಿಂದ ಮಿಸ್ಸಿಂಗ್ ಬಾಯ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಆ ನಂತರದಲ್ಲಿ ನಿರ್ದೇಶಕರು ಪ್ರತಿಯೊಂದು ಹಂತದಲ್ಲಿಯೂ ಈ ಸಿನಿಮಾವನ್ನು ಕುತೂಹಲದ ಉತ್ತುಂಗದಲ್ಲಿಯೇ ಕಾಪಾಡಿಕೊಂಡು ಬಂದಿದ್ದರು. ಬಿಡುಗಡೆಯಾಗೋದು ತಡವಾದರೂ ಪ್ರೇಕ್ಷಕರ ಗಮನ ಅತ್ತಿತ್ತ ಸರಿಯದಂತೆ ನೋಡಿಕೊಂಡಿದ್ದ ಮಿಸ್ಸಿಂಗ್ ಬಾಯ್ ನ ಭಾವುಕ ಕಥೆಯನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.

    ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಮಿಸ್ಸಿಂಗ್ ಬಾಯ್ ಚಿತ್ರ ತೊಂಬತ್ತರ ದಶಕದಲ್ಲಿ ಇದೇ ಕರ್ನಾಟಕದಲ್ಲಿ ನಡೆದಿದ್ದ ಕಥೆಯಾಧಾರಿತ ಚಿತ್ರ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದಿದ್ದ ಈ ಕಥೆಯನ್ನು ರಘುರಾಮ್ ಕೈಗೆತ್ತಿಕೊಂಡಾಗ ಎಲ್ಲರೂ ಬೆರಗಾಗಿದ್ದದ್ದು ನಿಜ. ಆದರೆ ಇಂಥಾ ಬೆರಗನ್ನು ಸತ್ಯ ಘಟನೆಯೊಂದರ ಸುತ್ತಾ ದೃಶ್ಯ ಕಟ್ಟಿದ ನಂತರವೂ ಜೀವಂತವಾಗಿಡೋದು ಕಷ್ಟ. ನಿರ್ದೇಶಕ ಕಥೆಯ ಪಾತ್ರಗಳನ್ನೇ ಉಸಿರಾಡದಿದ್ದರೆ ಅದು ಖಂಡಿತಾ ಸಾಧ್ಯವಾಗೋದಿಲ್ಲ. ಆದರೆ ರಘುರಾಮ್ ನೈಜ ಘಟನೆಯ ಎಲ್ಲ ಭಾವಗಳನ್ನೂ ಬೊಗಸೆಯಲ್ಲಿ ಹಿಡಿದು ತಾಜಾತನದಿಂದಲೇ ಪ್ರೇಕ್ಷಕರ ಮನಸಿಗೆ ಸೋಕಿಸುವಲ್ಲಿ ಗೆದ್ದಿದ್ದಾರೆ. ಮಿಸ್ಸಿಂಗ್ ಬಾಯ್ ಚಿತ್ರ ಆಪ್ತ ಅನ್ನಿಸೋದು ಈ ಕಾರಣದಿಂದಲೇ.

    ಸತ್ಯ ಘಟನೆಗೆ ಬದ್ಧವಾಗಿಯೇ ಹುಬ್ಬಳ್ಳಿಯ ನೆಲದಿಂದಲೇ ಈ ಚಿತ್ರದ ದೃಶ್ಯಾವಳಿಗಳು ಬಿಚ್ಚಿಕೊಳ್ಳುತ್ತವೆ. ಅಲ್ಲಿನ ರೈಲ್ವೇ ನಿಲ್ದಾಣದಲ್ಲಿ ಹೆತ್ತವರ ಕೈ ತಪ್ಪಿಸಿಕೊಂಡು ರೈಲಿನಲ್ಲಿ ಕಾಣೆಯಾಗೋ ಹುಡುಗನ ಆರ್ತಸ್ಥಿತಿಯನ್ನು ಎಲ್ಲರ ಮನಸಿಗೂ ಅಂಟಿಕೊಳ್ಳುವಂಥಾ ಭಾವ ತೀವ್ರತೆಯೊಂದಿಗೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಅದೇ ಬಿಗಿಯಲ್ಲಿಯೇ ಕಥೆ ವಿದೇಶಕ್ಕೂ ಸಂಚರಿಸುತ್ತೆ. ಮಗುವನ್ನು ಕಳೆದುಕೊಂಡ ಹೆತ್ತವರ ಸಂಕಟ ಮತ್ತು ಕರುಳ ಬಂಧದ ಸ್ವಪ್ನ ಬಿದ್ದಂತೆ ದೂರದ ದೇಶದಲ್ಲಿ ತಲ್ಲಣಿಸೋ ನಾಯಕನ ಮಿಡಿತಗಳನ್ನು ಪ್ರೇಕ್ಷಕರು ಅತ್ತಿತ್ತ ಹಂದಾಡಲೂ ಆಸ್ಪದ ಕೊಡದ ರೀತಿಯಲ್ಲಿ ನಿರೂಪಿಸಲಾಗಿದೆ.

    ನಾಯಕ ಗುರುನಂದನ್ ಇದೇ ಮೊದಲ ಸಾರಿ ಅವರ ಇಮೇಜಿನಾಚೆಗಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಭಾವಪ್ರಧಾನ ಸನ್ನಿವೇಶಗಳಲ್ಲಿಯಂತೂ ನೋಡುಗರು ತಲ್ಲಣಿಸುವಂತೆ ಪರಿಣಾಮಕಾರಿಯಾದ ನಟನೆ ನೀಡಿದ್ದಾರೆ. ಈ ಚಿತ್ರದ ಮೂಲಕವೇ ಗುರುನಂದನ್ ಚಿತ್ರ ಜೀವನದಲ್ಲಿ ಹೊಸ ಅಧ್ಯಾಯವೊಂದು ಶುರುವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿಯೇ ಗೋಚರಿಸಿದೆ. ಇನ್ನುಳಿದಂತೆ ರಂಗಾಯಣ ರಘು ನಟನೆ ಎಂದಿನಂತೆ ಸೊಗಸಾಗಿದೆ. ನಾಯಕನ ತಾಯಿ ಸೇರಿದಂತೆ ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ. ರವಿಶಂಕರ್ ಗೌಡ ಕೂಡಾ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಭಾಗೀರಥಿ ಬಾಯಿ ಕದಂ ನಟನೆ ನಿಜಕ್ಕೂ ಅದ್ಭುತ.

    ಒಟ್ಟಾರೆಯಾಗಿ ಮಿಸ್ಸಿಂಗ್ ಬಾಯ್ ಭಿನ್ನ ಪಥದ ಚಿತ್ರ. ತುಂಬಾ ಕಾಲದ ನಂತರ ಮನಮಿಡಿಯುವ ಕಥಾ ಹಂದರದ ವಿಶಿಷ್ಟ ಸಿನಿಮಾ ನೋಡಿದ ಅನುಭವಕ್ಕಾಗಿ ಒಮ್ಮೆ ಮಿಸ್ಸಿಂಗ್ ಬಾಯ್ ಚಿತ್ರವನ್ನು ನೋಡಲೇಬೇಕಿದೆ.

    ರೇಟಿಂಗ್: 4/5

  • ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

    ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರ ಬಿಡುಗಡೆಯಾಗಲು ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಅದಾಗಲೇ ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರ ನಾನಾ ಥರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ತರದಲ್ಲಿ ಆಕರ್ಷಣೆಗಳನ್ನೂ ಹೊಂದಿರೋ ಆರೆಂಜ್‍ನಲ್ಲಿ ರವಿಶಂಕರ್ ಗೌಡ ಡಿಫರೆಂಟಾದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ!

    ರವಿಶಂಕರ್ ಗೌಡ ಮತ್ತು ಗಣೇಶ್ ನಿಜ ಜೀವನದಲ್ಲಿಯೂ ಸ್ನೇಹಿತರು. ಈ ಹಿಂದೆಯೂ ಒಂದಷ್ಟು ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ. ಆರೆಂಜ್ ಚಿತ್ರದಲ್ಲಿಯೂ ಅದು ಮುಂದುವರೆದಿದೆ.

    ಈ ಚಿತ್ರದಲ್ಲಿಯೂ ಗಣೇಶ್ ಸ್ನೇಹಿತನಾಗಿ ನಟಿಸಿರೋ ರವಿಶಂಕರ್ ನಿಜವಾದ ಗೋಲ್ಡನ್ ಸ್ಟಾರ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿರುದಿನ ಗಣೇಶ್ ಪಕ್ಕದಲ್ಲಿಯೇ ಇರುವಾಗ ರವಿಶಂಕರ್ ಹೇಗೆ ಗೋಲ್ಡನ್ ಸ್ಟಾರ್ ಆಗಲು ಸಾಧ್ಯ ಎಂಬ ಪ್ರಶ್ನೆ ಇದ್ದರೆ ಅದಕ್ಕೆ ಆರೆಂಜ್‍ನಲ್ಲಿ ಮಜವಾದ ಉತ್ತರ ಸಿಗಲಿದೆಯಂತೆ.

    ಒಂದರ್ಥದಲ್ಲಿ ಆರೆಂಜ್ ಚಿತ್ರದಲ್ಲಿ ರವಿಶಂಕರ್ ಅವರದ್ದು ಗೋಲ್ಡನ್ ಮ್ಯಾನ್ ಗೆಟಪ್ಪು. ಅದರ ಅಸಲಿ ಅಂದವನ್ನು ಆಸ್ವಾದಿಸಲು ಇನ್ನೊಂದು ವಾರ ಕಾಯಬೇಕಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv