Tag: ರವಿವರ್ಮಾ

  • ‘ರಕ್ಕಸಪುರದೋಳ್’ ರಾಜ್ ಬಿ ಶೆಟ್ಟಿ  ಆರ್ಭಟ

    ‘ರಕ್ಕಸಪುರದೋಳ್’ ರಾಜ್ ಬಿ ಶೆಟ್ಟಿ ಆರ್ಭಟ

    ಸಾಹಸ ನಿರ್ದೇಶಕರಾಗಿ ಭಾರತದಾದ್ಯಂತ ಜನಪ್ರಿಯರಾಗಿರುವ ಕನ್ನಡದ ಹೆಮ್ಮೆಯ ಸಾಹಸ ನಿರ್ದೇಶಕ ಕೆ.ರವಿವರ್ಮ ಅವರ ಪ್ರಥಮ ನಿರ್ಮಾಣದ, ರವಿ ಸಾರಂಗ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಖ್ಯಾತರಾಗಿರುವ ರಾಜ್ ಬಿ ಶೆಟ್ಟಿ (Raj B Shetty) ನಾಯಕರಾಗಿ ನಟಿಸುತ್ತಿರುವ ‘ರಕ್ಕಸಪುರದೋಳ್’ (Rakkasapuradol) ಚಿತ್ರದ ಮುಹೂರ್ತ ಸಮಾರಂಭ ನೆಟಕಲ್ಲಪ್ಪ ಸರ್ಕಲ್ ನಲ್ಲಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದಂದು ಅದ್ದೂರಿಯಾಗಿ ನೆರವೇರಿತು. ನಟಿ ರಕ್ಷಿತ ಹಾಗೂ ನಿರ್ದೇಶಕ ಪ್ರೇಮ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿ, ಶೀರ್ಷಿಕೆ ಅನಾವರಣ ಮಾಡಿದರು. ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಸಾಹಸ ನಿರ್ದೇಶಕರಾಗಿ ಜನಪ್ರಿರಾಗಿರುವ ರವಿವರ್ಮ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಿ ವಿಲನ್, ಏಕ್ ಲವ್ ಯಾ ,‌ ಕೆಡಿ ಮುಂತಾದ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ರವಿ ಸಾರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಜನಪ್ರಿಯ ನಟ ರಾಜ್ ಬಿ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ರಕ್ಕಸಪುರದೋಳ್ ಚಿತ್ರ ಚಂದನವನದಲ್ಲಿ ಭರ್ಜರಿ ಯಶಸ್ಸು ಕಾಣಲಿ ಎಂದು ರಕ್ಷಿತ – ಪ್ರೇಮ್ ದಂಪತಿ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ರಕ್ಕಸಪುರದೋಳ್ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ನಿರ್ದೇಶಕ ರವಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಎಂದರು ರಾಜ್ ಬಿ ಶೆಟ್ಟಿ.

    ಕಳೆದ ಹತ್ತು ವರ್ಷಗಳಿಂದ ಪ್ರೇಮ್ ಸರ್ ಬಳಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಸಹಕಾರ ನನಗೆ ಎಂದಿಗೂ ಇರುತ್ತದೆ. ಪ್ರೇಮ್ ಮತ್ತು ರಕ್ಷಿತ ಅವರಿಗೆ ಧನ್ಯವಾದ. “ರಕ್ಕಸ” ಎಂದರೆ ರಾಕ್ಷಸ. “ಪುರ” ಎಂದರೆ ಊರು. ರಾಕ್ಷಸರೆ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಎರಡು ಗುಣಗಳಿರುತ್ತದೆ. ಒಂದು ಒಳ್ಳೆಯದು. ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು “ರಕ್ಕಸ” ಎನ್ನಬಹುದು. ನಿರ್ಮಾಪಕ ರವಿವರ್ಮ ಹಾಗೂ ನಾಯಕ ರಾಜ್ ಬಿ ಶೆಟ್ಟಿ ಅವರು ಕಥೆ ಮೆಚ್ಚಿಕೊಂಡದ್ದು ಸಂತೋಷವಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದ‌ರು‌ ನಿರ್ದೇಶಕ ರವಿ ಸಾರಂಗ.

    ರವಿ ಸಾರಂಗ ಅವರು ನನಗೆ ಎರಡು ವರ್ಷಗಳ ಪರಿಚಯ ಎಂದು‌ ಮಾತು ಆರಂಭಿಸಿದ ನಿರ್ಮಾಪಕ ಕೆ.ರವಿವರ್ಮ, ಸಾಹಸ ನಿರ್ದೇಶಕನಾಗಿ ನನಗೆ ಎಲ್ಲರೂ ಪ್ರೋತ್ಸಾಹ ನೀಡಿದ್ದೀರಿ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ರವಿ ಸಾರಂಗ ಒಳ್ಳೆಯ ಕಥೆ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಆ ಕಥೆಯನ್ನು ಒಪ್ಪಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ‌ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ,  ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಹಾಗೂ ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ “ರಕ್ಕಸಪುರದೋಳ್” ಚಿತ್ರಕ್ಕೆ ಕ್ರಾಂತಿ ಕುಮಾರ್ ಸಂಭಾಷಣೆ ಬರೆಯತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭ ದಿನದಂದು ರಕ್ಷಿತ – ಪ್ರೇಮ್ ಅವರು ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿಯಿದೆ ಎಂದರು.

    ರವಿವರ್ಮ ಅವರು ಸಾಹಸ ನಿರ್ದೇಶಕರಾಗಿ ನನ್ನ ನಿರ್ದೇಶನದ ಚಿತ್ರದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.  ರಾಜ್ ಬಿ ಶೆಟ್ಟಿ ಅವರ ನಟನೆಯನ್ನು ಹತ್ತಿರದಿಂದ ನೋಡಿದ್ದೇನೆ. ಅವರೊಬ್ಬ ಉತ್ತಮ ಕಲಾವಿದ. ಇನ್ನು ರವಿ ಸಾರಂಗ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದು ಕನ್ನಡದ “ಆರ್ ಆರ್ ಆರ್” ಚಿತ್ರ. ತ್ರಿಬಲ್ ಆರ್ ತರಹ‌ ಈ ಚಿತ್ರ ಕೂಡ ಯಶಸ್ವಿಯಾಗಲಿ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾರೈಸಿದರು. ನಾಯಕಿ ಸ್ವಾತಿಷ್ಟ ಕೃಷ್ಣ,  ನಟ ಬಿ.ಸುರೇಶ್, ನಟಿ ಅರ್ಚನಾ ಕೊಟ್ಟಿಗೆ, ಚಿತ್ರದಲ್ಲಿ ಅಭಿನಯಿಸುತ್ತಿರುವ ಗೌರವ್ ಶೆಟ್ಟಿ, ಸಿದ್ದಣ್ಣ, ಸುಮ, ಅನಿರುದ್ದ್ ಭಟ್, ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಭಾಷಣೆಕಾರ ಕ್ರಾಂತಿ ಕುಮಾರ್ ಹಾಗೂ ನರಸಿಂಹ ಜಾಲಹಳ್ಳಿ ಮುಂತಾದವರು “ರಕ್ಕಸಪುರದೋಳ್” ಚಿತ್ರದ ಕುರಿತು ಮಾತನಾಡಿದರು.

  • ರವಿವರ್ಮನ ಕಲ್ಪನೆಯ ಸುಂದರಿಯರಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿದ ಜನಾರ್ದನ ರೆಡ್ಡಿ

    ರವಿವರ್ಮನ ಕಲ್ಪನೆಯ ಸುಂದರಿಯರಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿದ ಜನಾರ್ದನ ರೆಡ್ಡಿ

    ‘ರವಿ ವರ್ಮನ ಕುಂಚದ ಕಲೆ ಬಲೆ ಸಾಕಾರವೋ.. ಕವಿಕಲ್ಪನೆ ಕಾಣುವೆ ಚೆಲುವಿನಾ ಜಾಲವೋ..’ ಎಂದು ಸೊಸೆ ತಂದ ಸೌಭಾಗ್ಯ ಚಿತ್ರಕ್ಕಾಗಿ ಆರ್.ಎನ್.ಜಯಗೋಪಾಲ್ ಅವರು ರವಿ ವರ್ಮನ ಕುಂಚದಲ್ಲಿ ಮೂಡಿ ಬಂದ ಕಲೆಯನ್ನು ಬಣ್ಣಿಸಿದ್ದರು. ಮುಂದುವರೆದು ‘ಉಯ್ಯಾಲೆಯಾ ಆಡಿ ನಲಿವಾ ರೂಪಸೀ, ಸುರಲೋಕದಿಂದ ಇಳಿದು ಬಂದ ನಿಜ ಊರ್ವಶೀ’ ಎಂದೆಲ್ಲ ರೂಪಸಿಯನ್ನು ಹಾಡಿ ಅಟ್ಟಕ್ಕೇರಿಸಿದ್ದರು. ಆ ರೂಪಸಿಯೂ ಹಾಗೇ ಇದ್ದಳು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ರವಿ ವರ್ಮನ ಕುಂಚದಲ್ಲಿ ಮೂಡಿ ಬಂದ ಅಷ್ಟೂ ರೂಪಸಿಯರು ರಸಿಕರ ಕಂಗಳಲ್ಲಿ ಇವತ್ತಿಗೂ ಶಾಶ್ವತ ಸ್ಥಾನ ಪಡೆದಿದ್ದಾರೆ. ಕವಿತೆಯಾಗಿ, ಚಿತ್ರವಾಗಿ, ಕಲ್ಪನೆಯ ರಂಗಾಗಿ ಕಾಡಿದ್ದಾರೆ. ಇಂಥದ್ದೊಂದು ಕಾಡುವಿಕೆಯನ್ನು ತಮ್ಮದೇ ಆದ ರೀತಿಯಲ್ಲಿ ಪ್ರಚುರ ಪಡಿಸಿದ್ದಾರೆ ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    29 ಏಪ್ರಿಲ್ 1848 ವಿಶ್ವಕಂಡ ಶ್ರೇಷ್ಠ ಚಿತ್ರಕಾರ ರಾಜಾ ರವಿವರ್ಮಾ ಅವರ ಹುಟ್ಟುಹಬ್ಬ. ಅದರ ನೆನಪಿಗಾಗಿ ಜನಾರ್ದನ್ ರೆಡ್ಡಿ ಅವರು ರವಿವರ್ಮಾ ಅವರ ಗ್ರೇಟ್ ಚಿತ್ರಗಳನ್ನು ಹೋಲುವಂತೆ ತಮ್ಮ ಪತ್ನಿಯ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ರಾಜ ಮನೆತನದ ಅದ್ಭುತ ಕಲಾವಿದನನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ರವಿ ವರ್ಮಾ ರಾಜಮನೆತನದಲ್ಲಿ ಹುಟ್ಟಿದ್ದರೂ, ಅವರು ಕಲೆಗೆ ಕೊಟ್ಟ ಪ್ರೋತ್ಸಾಹ ಅಪಾರ. ಅಲ್ಲದೇ, ಅನೇಕ ಮಹರಾಜರುಗಳು ಇವರನ್ನು ತಮ್ಮ ಆಸ್ಥಾನಗಳಿಗೆ ಕರೆಯಿಸಿಕೊಂಡು ತಮ್ಮ ಪತ್ನಿಯರ ಸೌಂದರ್ಯವನ್ನು ಇವರ ಕುಂಚದ ಮೂಲ ಇಂಚಿಂಚೂ ಕಂಡವರು. ಅದರಲ್ಲೂ ಸಾಂಪ್ರದಾಯಿಕ ಉಡುಪಿನೊಂದಿಗೆ ರವಿವರ್ಮಾ ಚಿತ್ರಿಸಿದ ಸುಂದರಿಯರು ಜಗತ್ತಿನ ಸುಂದರಿಯರಾಗಿ ಮೆರೆದವರು. ಇಂತಹ ಕೆಲವು ಚಿತ್ರಗಳಲ್ಲಿ ಆಯ್ದ  ಕೆಲವು ಚಿತ್ರಗಳಿಗೆ ತಮ್ಮ ಪತ್ನಿಯ ಫೋಟೋಶೂಟ್ ಮಾಡಿಸಿದ್ದಾರೆ ಜನಾರ್ದನ ರೆಡ್ಡಿ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ನಳ-ದಮಯಂತಿ, ಮತ್ಸ್ಯಗಂಧಿ, ರಾಧಾ, ದೇವಕಿ, ಸುಭದ್ರೆ, ಮೇನಕೆ, ತಾರಾಮತಿ, ಸೀತಾ, ಗಂಗೆ ಸೇರಿದಂತೆ 14ಕ್ಕೂ ಹೆಚ್ಚು ತೈಲ ಚಿತ್ರಗಳನ್ನು ರಾಜಾ ರವಿವರ್ಮಾ ಬಿಡಿಸಿದ್ದಾರೆ. ಇವುಗಳಲ್ಲಿ ಆಯ್ದ ಚಿತ್ರಗಳ ಮಾದರಿಯಲ್ಲೇ ಜನಾರ್ದನ ರೆಡ್ಡಿ ಅವರ ಪತ್ನಿ ಫೋಟೋಗೋ ಫೋಸ್ ಕೊಟ್ಟಿರುವುದು ವಿಶೇಷ.  ಇದನ್ನೂ ಓದಿ: ಮಗಳ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಶಿವಣ್ಣ ಆಕ್ಟಿಂಗ್

    ಈ ಹಿಂದೆಯೂ ಹೆಣ್ಣಿನ ಅಂದದ ಜೊತೆ ಆಕೆಯ ಖುಷಿ, ನೋವು, ತಲ್ಲಣಗಳನ್ನು ಅಭಿವ್ಯಕ್ತಿಸುವ ರಾಜಾ ರವಿವರ್ಮರ  ತೈಲ ಚಿತ್ರಗಳನ್ನು ಹೋಲುವಂತೆ ದಕ್ಷಿಣ ಭಾರತದ ನಟಿಯರಾದ ಶ್ರುತಿ ಹಾಸನ್, ಐಶ್ವರ್ಯಾ ರಾಜೇಶ್, ರಮ್ಯಾ ಕೃಷ್ಣ ಮತ್ತು ಸಮಂತಾ ಫೋಟೋ ಶೂಟ್ ಮಾಡಿಸಿದ್ದರು. ಆ ಫೋಟೋಗಳು ಸಖತ್ ವೈರಲ್ ಕೂಡ ಆಗಿದ್ದವು. ಇದೀಗ ಅದೇ ಮಾದರಿಯಲ್ಲೇ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಾಣಿಸಿಕೊಂಡಿರುವುದು ವಿಶೇಷ.

  • ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?

    ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?

    ವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ ‘ಜೇಮ್ಸ್’ ನಾಳೆ ಭಾರತದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಸಾಹಸ ದೃಶ್ಯಗಳನ್ನು ರವಿವರ್ಮಾ ಕಂಪೋಸ್ ಮಾಡಿದ್ದು, ಅವರ ಕ್ರಿಯೇಟಿವಿಟಿಗೆ ಸ್ವತಃ ಅಪ್ಪು ಫಿದಾ ಆಗಿದ್ದಾರೆ. ಸ್ಟಂಟ್ ಗಳನ್ನು ನೋಡಿ ರವಿವರ್ಮಾ ಅವರಿಗೆ ಫೋನ್ ಕಾಲ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ಪುನೀತ್ ಮತ್ತು ರವಿವರ್ಮಾ ಮಾತಾಡಿರುವ ಆ ಆಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    ‘ಜೇಮ್ಸ್’ ಚಿತ್ರದ ಸಾಹಸ ದೃಶ್ಯಗಳನ್ನು ನೋಡಿದ ಅಪ್ಪು ಅವರು ರವಿವರ್ಮಾ ಅವರಿಗೆ ಕರೆ ಮಾಡುವ ಮೂಲಕ ಹೊಗಳಿದ್ದಾರೆ. ಫೋನ್ನಲ್ಲಿ ಅಪ್ಪು, ಸೂಪರ್ ಮಾಸ್ಟರ್ ನಾನು ಇವತ್ತು ನೀವು ನಿರ್ದೇಶನ ಮಾಡಿದ ದೃಶ್ಯಗಳನ್ನು ನೋಡಿದೆ ತುಂಬಾ ಖುಷಿಯಾಗುತ್ತಿದೆ. ಈ ದೃಶ್ಯಗಳಿಗೆ ಸೌಂಡ್ ಮತ್ತು ಸೌಂಡ್ ಎಫೆಕ್ಟ್ಸ್ ಹಾಕಿದರೆ ಇನ್ನು ಅದ್ಭುತವಾಗಿ ಮೂಡಿಬರುತ್ತೆ. ಸೂಪರ್ ವರ್ಕ್. ಚೇಸಿಂಗ್ ಸ್ಟೈಲ್, ಸ್ಪಿನಿಂಗ್ ಮತ್ತು ಗ್ರಾಫಿಕ್ ಆದ ಮೇಲೆ ಇನ್ನು ಅದ್ಭುತವಾಗಿ ಕಾಣುತ್ತೆ. ಥ್ಯಾಂಕ್ಯು ಸರ್ ಎಂದು ರವಿವರ್ಮಾ ಅವರನ್ನು ಪ್ರಶಂಸಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್ 

     

    View this post on Instagram

     

    A post shared by Kannadapichhar (@kannada_pichhar)

    ಜೇಮ್ಸ್ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದ್ದು, ಅಪ್ಪುನನ್ನು ಸ್ವಾಗತಿಸಲು ಎಲ್ಲ ಚಿತ್ರಮಂದಿರಗಳು ಮದುವೆ ದಿಬ್ಬಣದಂತೆ ಸಿಂಗಾರಗೊಂಡಿವೆ. ಈ ನಡುವೆ ‘ಜೇಮ್ಸ್’ ಶೂಟಿಂಗ್ ಸಮಯದಲ್ಲಿ ಕಲಾವಿದರು ಅಪ್ಪು ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

  • ಅಪಾಯಕಾರಿ ಸ್ಟಂಟ್ ಮಾಡಿದ ಸ್ಟಂಟ್ ಡೈರೆಕ್ಟರ್ ರವಿವರ್ಮ

    ಅಪಾಯಕಾರಿ ಸ್ಟಂಟ್ ಮಾಡಿದ ಸ್ಟಂಟ್ ಡೈರೆಕ್ಟರ್ ರವಿವರ್ಮ

    ಭಾರತೀಯ ಚಿತ್ರೋದ್ಯಮದಲ್ಲಿ ಅಪಾಯಕಾರಿ ಸ್ಟಂಟ್ ಮಾಡಿಸುವ ಮೂಲಕ ಹೆಸರಾಗಿರುವ ಕನ್ನಡದ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ, ಇದೀಗ ಅಂಥದ್ದೇ ರಿಸ್ಕ್ ಶಾಟ್ ವೊಂದನ್ನು ಕಂಪೋಸ್ ಮಾಡಿದ್ದಾರೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ತಗೆದುಕೊಂಡು ಅಪಾಯಕಾರಿ ಆಕ್ಷನ್ ಎಪಿಸೋಡನ್ನು ಪೂರ್ಣಗೊಳಿಸಿದ್ದಾರೆ.

    ಪ್ರಭು ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಬಾಡಿ ಗಾಡ್’ ಸಿನಿಮಾದಲ್ಲಿ ಇಂಥದ್ದೊಂದು ರಿಸ್ಕಿ ಸಾಹಸಗಳನ್ನು ಮಾಡಿದ್ದೇನೆ ಎನ್ನುತ್ತಾರೆ ರವಿವರ್ಮ. “ನನ್ನ ಪ್ರತಿಯೊಂದು ಪ್ರಾಜೆಕ್ಟ್‌ಗಳು ನನಗೆ ವಿಭಿನ್ನ ಮತ್ತು ವಿಶೇಷವಾದದ್ದು. ಆದರೆ ಬಾಡಿಗಾಡ್ ಚಿತ್ರದ ಫೈಟ್ ಕಾನ್ಸೆಪ್ಟ್ ವಿಭಿನ್ನದಲ್ಲೇ ವಿಶೇಷವಾದದ್ದು. ನಾನು ಅದನ್ನು ಸವಾಲಾಗಿ ತೆಗೆದುಕೊಂಡು ಮೂರು ದಿನದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ” ಎನ್ನುತ್ತಾರೆ.

    ಈ ಚಿತ್ರದಲ್ಲಿ ಮನೋಜ್ ಮತ್ತು ನಿರ್ದೇಶಕ-ನಟ ಗುರುಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.