Tag: ರವಿವರ್ಮ

  • ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಗೆ ಗಾಯ

    ಶೂಟಿಂಗ್ ವೇಳೆ ಸಾಹಸ ನಿರ್ದೇಶಕ ರವಿವರ್ಮಗೆ ಗಾಯ

    ನ್ನಡದ ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ (Ravi Varma) ಪೆಟ್ಟು ಮಾಡಿಕೊಂಡಿದ್ದಾರೆ. ವಿಕ್ರಮ್ ರವಿಚಂದ್ರನ್ ನಟನೆಯ ಮುಧೋಳ್ (Mudhol) ಸಿನಿಮಾದ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದು, ಸಾಹಸ ದೃಶ್ಯಕ್ಕಾಗಿ ಕಟ್ಟಿದ ರೋಪ್ ಹರಿದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ವಿಕ್ರಮ್ ರವಿಚಂದ್ರನ್ (Vikram Ravichandran) ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಸಾಕಷ್ಟು ಸಾಹಸ ಸನ್ನಿವೇಶಗಳನ್ನು ಚಿತ್ರಕ್ಕಾಗಿ ಕಂಪೋಸ್ ಮಾಡಲಾಗಿದೆಯಂತೆ. ಸಾಮಾನ್ಯವಾಗಿ ಕಷ್ಟದ ಸ್ಟಂಟ್ ಗಳನ್ನೇ ಕಂಪೋಸ್ ಮಾಡುವ ರವಿವರ್ಮ, ಈ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವನ್ನು ಕಂಪೋಸ್ ಮಾಡಿದ್ದರಂತೆ. ಈ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ ಗಾಯವಾಗಿದೆ.

    ಆತಂಕ ಪಡುವಂತಹ ಘಟನೆ ಅದಲ್ಲವಾದರೂ, ರವಿವರ್ಮ ಪದೇ ಪದೇ ಇಂತಹ ಘಟನೆಗಳಿಗೆ ಸಾಕ್ಷಿ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಸ್ತಿಗುಡಿ ಸಿನಿಮಾದಲ್ಲೂ ದುರ್ಘಟನೆ ನಡೆದಿತ್ತು. ಮೊನ್ನೆಯಷ್ಟೇ ಜೋಗಿ ಪ್ರೇಮ್ ನಿರ್ದೇಶನ ಕೇಡಿ ಸಿನಿಮಾದಲ್ಲೂ ನಟರೊಬ್ಬರು ಗಾಯ (Injury) ಮಾಡಿಕೊಂಡಿದ್ದರು. ಈ ಎರಡು ಚಿತ್ರಗಳಿಗೂ ಇವರೇ ಸಾಹಸ ನಿರ್ದೇಶಕರು. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ

    ಮುಧೋಳ್ ಸಿನಿಮಾ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಪ್ರಧಾನ ಸಾಹಸಮಯ ಸನ್ನಿವೇಶಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾವಾಗಿದ್ದು, ಕಳೆದ ಒಂದು ವಾರದಿಂದ ಚಿತ್ರೀಕರಣ ನಡೆಯುತ್ತಿದೆ.

  • ನಟ ಉದಯ್, ಅನಿಲ್ ಸಾವಿಗೆ ಅವರೇ ಕಾರಣ : ಕೋರ್ಟ್ ಮುಂದೆ ವಕೀಲರ ವಾದ

    ನಟ ಉದಯ್, ಅನಿಲ್ ಸಾವಿಗೆ ಅವರೇ ಕಾರಣ : ಕೋರ್ಟ್ ಮುಂದೆ ವಕೀಲರ ವಾದ

    ದುನಿಯಾ ವಿಜಯ್ (Duniya Vijay) ನಟನೆಯ ಮಾಸ್ತಿಗುಡಿ (Mastigudi) ಸಿನಿಮಾದ ಸಾಹಸ ಸನ್ನಿವೇಶದಲ್ಲಿ ಉದಯೋನ್ಮುಖ ಖಳ ನಟರಾದ ಉದಯ್ (Uday) ಮತ್ತು ಅನಿಲ್ (Anil) ನೀರಿಗೆ ಬಿದ್ದು ಸಾವನ್ನಪ್ಪಿದ್ದರು. ಈ ಸಾವಿಗೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ರವಿವರ್ಮ (Ravi Varma) ಸೇರಿದಂತೆ ಹಲವರು ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಬೆಂಗಳೂರು ನಗರದ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಬಂದಿದ್ದು, ನ್ಯಾಯಧೀಶರಿಗೆ ರವಿವರ್ಮ ಪರ ವಕೀಲರು ಕೆಲವು ವಿಷಯವನ್ನು ಹೇಳಿದ್ದಾರೆ.

     

    ವಿಚಾರಣೆ ವೇಳೆ ರವಿವರ್ಮ ಪರ ವಕೀಲರಾದ ಸಿ.ಎಚ್. ಹನುಮಂತರಾಯ ವಾದ ಮಂಡಿಸಿ, ಆ ನಟರ ಸಾವಿಗೆ ಅವರೇ ಕಾರಣ. ಅದೊಂದು ಆಕಸ್ಮಿಕ ಸಾವು. ತಮ್ಮ ದೇಹದ ಸಿಕ್ಸ್ ಪ್ಯಾಕ್ ತೋರಿಸಲು ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಅಭಿಮಾನಿಗಳು ನೋಡಲಿ ಎನ್ನುವುದಕ್ಕಾಗಿ ಅವರು ಸೇಫ್ಟಿ ಜಾಕೆಟ್ ಧರಿಸಲು ಒಪ್ಪಲಿಲ್ಲ. ಹಾಗೆಯೇ ತಮಗೆ ಈಜು ಬರುತ್ತದೆ ಎಂದೂ ಹೇಳಿದ್ದರು’ ಎಂದಿದ್ದಾರೆ ವಕೀಲರು. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಪೊಲೀಸರೇ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮೇಲೆ ತಿಳಿಸಿದ ಎಲ್ಲವನ್ನೂ ಉಲ್ಲೇಖಿಸಲಾಗಿದೆ ಎಂದ ವಕೀಲರು, ಆ ಇಬ್ಬರು ನಟರ ಒಪ್ಪಿಗೆ ಪಡೆದುಕೊಂಡೇ ಹೆಲಿಕಾಫ್ಟರ್ ನಿಂದ ಜಲಾಶಯದ ಹಿನ್ನೀರಿಗೆ ಧುಮುಕುವ ಸಾಹಸ ಮಾಡಿಸಲಾಯಿತು. ಹಾಗಾಗಿ ಇದನ್ನು ಆಕಸ್ಮಿಕ ಘಟನೆ ಎಂದು ಭಾವಿಸಬೇಕು ಎಂದು ವಕೀಲರು ಮನವಿ ಮಾಡಿಕೊಂಡರು.

    ಸಿ.ಎಚ್.ಹನುಮಂತರಾಯ ಅವರ ವಾದ ಆಲಿಸಿದ ನ್ಯಾಯಾಮೂರ್ತಿಗಳಾದ ಎಸ್. ಶ್ರೀಧರ್ ಅವರು ಹೆಚ್ಚಿನ ವಾದ ಮಂಡನೆಗೆ ಮೇ 30ಕ್ಕೆ ವಿಚಾರಣೆ ನಿಗದಿಪಡಿಸಿದ್ದಾರೆ. 2016ರ ನವೆಂಬರ್ 7 ರಂದು ನಡೆದ ಘಟನೆಯಲ್ಲಿ ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ  ಧುಮುಕಿದ್ದ ಅನಿಲ್, ಉದಯ್ ಶವವಾಗಿ ಪತ್ತೆಯಾಗಿದ್ದರು. ಈ ಇಬ್ಬರೊಂದಿಗೆ ಜಿಗಿದಿದ್ದ ದುನಿಯಾ ವಿಜಯ್ ಅವರನ್ನು ರಕ್ಷಣೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ತಾವರೆಕೆರೆ ಪೊಲೀಸರು ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದರು.