Tag: ರವಿಬೆಳಗೆರೆ

  • ರವಿ ಬೆಳಗೆರೆಯನ್ನು ಯಾಕೆ ಬಂಧಿಸಿದ್ದಾರೆ?- ವರದಿಗಾರರಿಗೆ ಸಿಎಂ ಪ್ರಶ್ನೆ

    ರವಿ ಬೆಳಗೆರೆಯನ್ನು ಯಾಕೆ ಬಂಧಿಸಿದ್ದಾರೆ?- ವರದಿಗಾರರಿಗೆ ಸಿಎಂ ಪ್ರಶ್ನೆ

    ಮೈಸೂರು: ಹಾಯ್ ಬೆಂಗಳೂರು ಸಂಪಾದಕ ರವಿ ಬೆಳೆಗೆರೆ ಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಲು ಕೇಳಿದಾಗ ಸಿಎಂ ಸಿದ್ದರಾಮಯ್ಯ, ಯಾವ ಕಾರಣಕ್ಕೆ ಬಂಧನ ಮಾಡಿದ್ದಾರೆ? ಅಂತ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡ್ತಾರೆ. ನಮಗೂ ಅದಕ್ಕೂ ಸಂಬಂಧ ಇಲ್ಲ. ಅವರ ಬಳಿ ಸಾಕ್ಷಿ ಇದೆಯೋ ಏನೋ ಗೊತ್ತಿಲ್ಲ. ಮಾತಾಡಬೇಕು. ಪೊಲೀಸರು ನನ್ನೊಂದಿಗೆ ಮಾತಾಡಿಲ್ಲ ಅಂದ್ರು. ಇದನ್ನೂ ಓದಿ: Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    ರವಿ ಬೆಳಗರೆ ಕರ್ನಾಟಕದ ಖ್ಯಾತ ಪತ್ರಕರ್ತರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವುದು ಹೇಗೆ ಎಂದು ಪೊಲೀಸರು ಚಿಂತೆಯಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸಿಎಂ ಬೆನ್ನಿಗೆ ನಿಲ್ಲದೇ ಇದ್ದಲ್ಲಿ ಬಂಧನ ಕಷ್ಟವಾಗುತಿತ್ತು ಎಂದು ಬೆಳಗೆರೆ ಬಂಧನವಾದ ಬಳಿಕ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದವು.  ಇದನ್ನೂ ಓದಿ: Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆರಂಭದಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡನನ್ನು ವಶಕ್ಕೆ ಪಡೆದಿದ್ದರು. ಯಲಹಂಕದಲ್ಲರುವ ಆತನ ಮನೆಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಒನಿಡಾ ಟಿವಿಯ ಹಿಂದುಗಡೆ ಮೂರು ಪಿಸ್ತೂಲ್ ಇರುವುದನ್ನು ನೋಡಿ ಪೊಲೀಸರು ಒಮ್ಮೆ ಬೆಚ್ಚಿ ಬಿದ್ದಿದ್ದರು. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯವರನ್ನು ಹತ್ಯೆ ಮಾಡಲು ರವಿ ಬೆಳೆಗೆರೆ 30 ಲಕ್ಷ ಸುಪಾರಿ ನಿಡಿರುವ ಬಗ್ಗೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರವಿಬೆಳೆಗೆರೆಯನ್ನು ಪೊಲಿಸರು ಬಂಧಿಸಿದ್ದರು. ಇದನ್ನೂ ಓದಿ: ರವಿ ಬೆಳಗೆರೆ ಸುಪಾರಿ ಪ್ರಕರಣ: ಮಗಳು ಭಾವನಾ, ಮಗ ಕರ್ಣ ಹೀಗಂದ್ರು

    https://www.youtube.com/watch?v=gpHJrcsZuBM

    https://www.youtube.com/watch?v=kJ5uYUEgVeM

    https://www.youtube.com/watch?v=lgEoaxQ1l44

    https://www.youtube.com/watch?v=tvAkOpM6ZZo

    https://www.youtube.com/watch?v=p0Orve2DpiM

    https://www.youtube.com/watch?v=ucQolRekyhU

     

  • ಪತ್ರಕರ್ತ ರವಿಬೆಳಗೆರೆ ಬಂಧನ- ಸಂಸದ ಪ್ರಹ್ಲಾದ್ ಜೋಷಿ ಹೀಗಂದ್ರು

    ಪತ್ರಕರ್ತ ರವಿಬೆಳಗೆರೆ ಬಂಧನ- ಸಂಸದ ಪ್ರಹ್ಲಾದ್ ಜೋಷಿ ಹೀಗಂದ್ರು

    ಹುಬ್ಬಳ್ಳಿ: ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತೆ. ಯಾರು ಎಂಥವರು ಎಂಬುದನ್ನು ಕಾಲ ನಿರ್ಧಾರ ಮಾಡುತ್ತೆ ಅಂತ ಸಂಸದ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿದ್ದಾರೆ.

    ಪತ್ರಕರ್ತ ರವಿ ಬೆಳಗೆರೆ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ತಾನೊಬ್ಬನೇ ಸತ್ಯವಂತ ಎನ್ನುವ ಹಾಗೆ ರವಿ ಬೆಳಗೆರೆ ಇದ್ದರು. ತಾನೊಬ್ಬನೇ ಸಾಚಾ.. ಉಳಿದವರೆಲ್ಲಾ ಚಾರಿತ್ರ್ಯಹೀನರು ಅನ್ನೋ ರೀತಿಯಲ್ಲಿ ಜೀವನ ಮಾಡುತ್ತಿದ್ದರು ಅಂದರು.  ಇದನ್ನೂ ಓದಿ: ಸಿಸಿಬಿ ಕಸ್ಟಡಿಯಲ್ಲಿ ಮೊದಲ ರಾತ್ರಿ ಕಳೆದ ರವಿ ಬೆಳಗೆರೆ- ನಿದ್ದೆ ಬಾರದೇ ಪೇಪರ್ ನಲ್ಲಿ ಗೀಚಿದ್ರು

    ಪ್ರಕರಣದಲ್ಲಿ ಬೆಳಗೆರೆ ಸಿಲುಕಿದ್ದಾರೆ ಎಂದು ಈ ಮಾತು ಹೇಳುತ್ತಿಲ್ಲ. ಯಾರನ್ನಾದರೂ ದೈಹಿಕವಾಗಿ ಮುಗಿಸುತ್ತೇನೆ ಎಂಬುದು ಸರಿಯಲ್ಲ ಅಂತ ಜೋಷಿ ಹೇಳಿದ್ರು.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಕಮಿಷನರ್ ಹೇಳಿಕೆಗೂ, ಎಫ್‍ಐಆರ್ ಅಂಶಗಳಿಗೂ ವ್ಯತ್ಯಾಸವಿದೆ- ರವಿ ಪರ ವಕೀಲ ದಿವಾಕರ್ ಹೇಳಿಕೆ

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು.  ಇದನ್ನೂ ಓದಿ: ರವಿ ಬೆಳಗೆರೆ ಸುಪಾರಿ ಪ್ರಕರಣ: ಮಗಳು ಭಾವನಾ, ಮಗ ಕರ್ಣ ಹೀಗಂದ್ರು

    https://www.youtube.com/watch?v=86k-IW3-boE

    https://www.youtube.com/watch?v=kJ5uYUEgVeM

    https://www.youtube.com/watch?v=tvAkOpM6ZZo

    https://www.youtube.com/watch?v=lgEoaxQ1l44

    https://www.youtube.com/watch?v=bwXnj2XMWag

  • ಕಮಿಷನರ್ ಹೇಳಿಕೆಗೂ, ಎಫ್‍ಐಆರ್ ಅಂಶಗಳಿಗೂ ವ್ಯತ್ಯಾಸವಿದೆ- ರವಿ ಪರ ವಕೀಲ ದಿವಾಕರ್ ಹೇಳಿಕೆ

    ಕಮಿಷನರ್ ಹೇಳಿಕೆಗೂ, ಎಫ್‍ಐಆರ್ ಅಂಶಗಳಿಗೂ ವ್ಯತ್ಯಾಸವಿದೆ- ರವಿ ಪರ ವಕೀಲ ದಿವಾಕರ್ ಹೇಳಿಕೆ

    ಬೆಂಗಳೂರು: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿರುವ ಆರೋಪದ ಮೇಲೆ ಪತ್ರಕರ್ತ ರವಿ ಬೆಳಗೆರೆ ಬಂಧನವಾಗಿದ್ದು, ಈ ಪ್ರಕರಣ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದು ರವಿ ಬೆಳೆಗೆರೆ ಪರ ವಕೀಲ ದಿವಾಕರ್ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಪೊಲೀಸ್ ಕಮಿಷನರ್ ಸುನಿಲ್ ಕುಮಾರ್ ಹೇಳಿಕೆಗೂ, ಎಫ್‍ಐಆರ್‍ನಲ್ಲಿ ದಾಖಲಾಗಿರುವ ಅಂಶಗಳಿಗೂ ಭಿನ್ನತೆಯಿದೆ. ವ್ಯತಿರಿಕ್ತ ಅಂಶಗಳು ಕಂಡು ಬಂದಿವೆ. ಹೀಗಾಗಿ ಇದೇ ವಿಚಾರವಾಗಿ ಕಾನೂನು ಹೋರಾಟ ನಡಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.

    ಬೆಳಗೆರೆಯನ್ನು ಕೋರ್ಟ್ ಸಿಸಿಬಿ ಕಸ್ಟಡಿಗೆ ನೀಡಿದ ಬಳಿಕ ಮಾತನಾಡಿದ ಅವರು, ಬೆಳೆಗೆರೆ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿರುವುದರಿಂದ ಜಾಮೀನು ಅರ್ಜಿ ವಿಚಾರಣೆ ಎಸಿಎಂಎಂ ನ್ಯಾಯಾಧೀಶರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಸೆಷನ್ಸ್ ನ್ಯಾಯಾಲಯದಲ್ಲಿ ಸೋಮವಾರ ಜಾಮೀನು ಅರ್ಜಿ ಸಲ್ಲಿಸುತ್ತೇವೆ ಅಂದ್ರು.

    ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಬೆಳೆಗೆರೆಗೆ ಅಗತ್ಯವಿದ್ದಲ್ಲಿ ವೈದ್ಯಕೀಯ ನೆರವು ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಅದೇ ರೀತಿ ಯಾವುದೇ ರೀತಿಯ ತೊಂದರೆ ನೀಡದಂತೆಯೂ ಆದೇಶ ನೀಡಲಾಗಿದೆ ಎಂದು ತಿಳಿಸಿದ್ರು.

    ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮುಖ್ಯಸ್ಥ ಸತೀಶ್ ಕುಮಾರ್ ತಿಳಿಸಿದ್ದಾರೆ. ಶಶಿಧರ್ ಮುಂಡೇವಾಡಿ ಸ್ನೇಹಿತರಿಗೆ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ನೀಡಿದ ಆರೋಪದಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು.

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು.

    https://www.youtube.com/watch?v=lgEoaxQ1l44

    https://www.youtube.com/watch?v=tvAkOpM6ZZo

    https://www.youtube.com/watch?v=kJ5uYUEgVeM

    https://www.youtube.com/watch?v=rgZqwcCWW3w

    https://www.youtube.com/watch?v=qGy8AT5j-zQ

  • Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    ಬೆಂಗಳೂರು: ರಾಕ್ಷಸ ರವಿಬೆಳಗೆರೆ ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ, ಈ ಕುರಿತು ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೇಳಿದ್ದಾರೆ.

    ತನ್ನ ಹತ್ಯೆಗೆ ಸುಪಾರಿ ನೀಡಿ ಬಂಧನವಾಗಿರುವ ರವಿ ಬೆಳಗೆರೆ ಅವರ ಕುರಿತು ಅವರು ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯೆ ನೀಡಿ, ರವಿ ಬೆಳಗೆರೆ ಅವರ ವಿರುದ್ಧ ನಾನು ಯಾವುದೇ ದೂರು ನೀಡಿಲ್ಲ. ಸಿಸಿಬಿ ಮತ್ತು ಎಸ್‍ಐಟಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. 

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ವೇಳೆ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ನನ್ನನ್ನು ಕೊಲೆ ಮಾಡಲು ರವಿಬೆಳಗೆರೆಯಿಂದ ಸುಪಾರಿ ಪಡೆದಿರುವ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಈ ವಿಚಾರ ನನಗೂ ತಿಳಿದಿರಲಿಲ್ಲ. ಇಂದು ಬೆಳಗ್ಗೆ ಪೊಲೀಸರು ಬಂಧನ ನಡೆಸಿದ ಸಂದರ್ಭದಲ್ಲಿ ತಿಳಿಯಿತು ಎಂದರು.

    ಸುಪಾರಿ ನೀಡಿರುವ ಬಗ್ಗೆ ಕೇಳಿ ನನಗೂ ಶಾಕ್ ಆಗಿದ್ದು, ನನ್ನ ಹಾಗೂ ರವಿಬೆಳಗೆರೆ ಅವರ ಸಂಬಂಧ ಸುಮಾರು 14 ವರ್ಷಗಳದ್ದು, ನಿರಂತರವಾಗಿ 14 ವರ್ಷ ಅವರ ಬಳಿ ಕೆಲಸ ಮಾಡಿದ್ದೇನೆ. ಅಲ್ಲದೇ ಅವರಿಗೆ ಎಂದು ಅಸಮಾಧಾನ ಬಾರದ ಹಾಗೇ ಕೆಲಸ ಮಾಡಿದ್ದೇನೆ. ಈಗಿದ್ದು ನನ್ನ ವಿರುದ್ಧ ಸುಪಾರಿ ನೀಡುವ ಸುದ್ದಿ ಕೇಳಿ ಅಶ್ಚರ್ಯ ಹಾಗೂ ಅತಂಕವಾಗುತ್ತಿದೆ ಎಂದು ಹೇಳಿದರು.

    ಹಾಯ್ ಬೆಂಗಳೂರು ಬಿಟ್ಟಿದ್ದು ಯಾಕೆ?
    ನನ್ನ ಅವರ ಮಧ್ಯೆ ಯಾವುದೇ ವೈಯಕ್ತಿಕ ಜಗಳವಿಲ್ಲ. 2014 ಡಿಸೆಂಬರ್ ನಲ್ಲಿ ನಾನು ಅವರ ಬಳಿ ಕೆಲಸ ಬಿಟ್ಟೆ. 14 ವರ್ಷದ ಅವಧಿಯಲ್ಲಿ ನನ್ನ ಹಾಗೂ ನನ್ನ ವರದಿಗಳ ಬಗ್ಗೆ ಯಾವುದೇ ಅನುಮಾನ ವ್ಯಕ್ತವಾಗಿರಲಿಲ್ಲ. ಯಾವುದೇ ವ್ಯಕ್ತಿಯನ್ನು ಬ್ಲಾಕ್ ಮೇಲ್ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ 2014ರಲ್ಲಿ ಅವರು ನನ್ನ ಬಗ್ಗೆ ಸಂಶಯ ವ್ಯಕ್ತಪಡಿಸಲು ಆರಂಭಮಾಡಿದರು. ಹೀಗಾಗಿ ನಂಬಿಕೆ ಇಲ್ಲದ ಜಾಗದಲ್ಲಿ ಕಾರ್ಯನಿರ್ವಹಿಸಬಾರದು ಎಂಬ ಕಾರಣಕ್ಕೆ ಕೆಲಸ ಬಿಟ್ಟೆ ಎಂದು ತಿಳಿಸಿದರು. ಇದನ್ನೂ ಓದಿ: ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

    ಈ ಹಿಂದೆ ಪ್ಲಾನ್ ಮಾಡಲಾಗಿತ್ತಾ?
    ಈ ಹಿಂದೆ ತಮ್ಮ ಮೇಲೆ ನಡೆದ ದಾಳಿ ಕುರಿತು ಪ್ಲಾನ್ ಮಾಡಲಾಗಿತ್ತು ಎಂದು ಸಿಸಿಬಿ ಪೊಲೀಸರ ಮಾಹಿತಿ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ನನಗೆ ಎಂದು ಸಂಶಯ ಉಂಟಾಗಿರಲಿಲ್ಲ, ಆದರೆ ಪೊಲೀಸ್ ಮಾಹಿತಿ ಪಡೆದ ನಂತರ ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸಿ ಕೊಂಡರೆ ಹೌದು ಎನ್ನುವ ಭಾವನೆ ಬರುತ್ತಿದೆ. 2014 ಡಿಸೆಂಬರ್ 20, ಶನಿವಾರ ರವಿಬೆಳಗೆರೆ ಅವರು ನನಗೆ ಪದೆ ಪದೆ ಕರೆಮಾಡಿ ಚಾನಲ್‍ಗೆ ಬಂಡವಾಳ ಹೂಡಲು ಕೆಲವರು ಬರುತ್ತಿದ್ದಾರೆ. ನಿನ್ನ ಬಳಿ ಮಾತನಾಡಬೇಕು ಬಾ ಎಂದು ಕರೆದರು. ಆದರೆ ನಾನು ಅಂದು ತಡವಾಗಿ ಕಚೇರಿ ಬಳಿ ತೆರಳಿದೆ, ಆ ವೇಳೆಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ಹಲವರು ಅಲ್ಲಿಗೆ ಬಂದಿದ್ದರು. ಆದರೆ ಕಚೇರಿಯಲ್ಲಿ ನೋಡಿದರೆ ಯಾರು ಇರಲಿಲ್ಲ. ಆಗ ನಾನು ಅವರ ಬಳಿ ಬಂಡವಾಳ ಹೂಡುವ ವ್ಯಕ್ತಿಗಳ ಬಗ್ಗೆ ಕೇಳಿದೆ, ಆದರೆ ಈ ಬಗ್ಗೆ ಮಾತನಾಡದೆ ಬೇರೆ ವಿಷಯ ಕುರಿತು ಮಾತನಾಡಿದರು. ಅಂದು ಅನುಮಾನಗೊಂಡು ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಮಾಹಿತಿ ಪಡೆದೆ. ಅವರು ಸಹ ಅನುಮಾನ ವ್ಯಕ್ತಪಡಿಸಿ ನನ್ನನ್ನು ಅಲ್ಲಿಂದ ಹೊರಡುವಂತೆ ಸೂಚಿಸಿದರು. ತಕ್ಷಣ ನಾನು ಅಲ್ಲಿಂದ ನಾನು ಬೇರೆ ಕಡೆ ತೆರಳಿ ಕೆಲಸ ಬಿಡುವ ನಿರ್ಧಾರ ಮಾಡಿದೆ ಎಂದು ವಿವರಿಸಿದರು.

    ವಿಳಾಸ ತಿಳಿಯಲು ಕೊರಿಯರ್ ನೆಪ:
    ಕಳೆದ ಆಗಸ್ಟ್ 28 ರಂದು ನನ್ನ ಮನೆ ಬಳಿ ಆರೋಪಿ ಶಶಿ ಓಡಾಡುವುದನ್ನು ಗಮನಿಸಿದ್ದೇನೆ, ಆತನು ಅಲ್ಲಿಯೇ ಒಂದು ವರ್ಷ ಕೆಲಸ ಮಾಡಿದ್ದ. ಈ ವೇಳೆ ಆತನ ಹಿನ್ನೆಲೆ ತಿಳಿದಿತ್ತು. ನಾನು ಉತ್ತರ ಹಳ್ಳಿ ಬಳಿ ವಾಸಿಸುತ್ತಿದ್ದೆ, ನಂತರ ಕಳೆದ ವರ್ಷ ನನ್ನ ಮಗನ ಶಾಲೆಯ ವಿಚಾರವಾಗಿ ಮಲ್ಲೇಶ್ವರಂ ಬಳಿ ಮನೆ ಬದಲಾಯಿಸಿದೆ. ನಂತರ ವಸಂತಪುರಕ್ಕೆ ಬಂದೆ ಈ ವೇಳೆ ನನಗೆ ಕೊರಿಯರ್ ಅಫೀಸ್ ನಿಂದ ಕರೆ ಬಂತು. ಆಗ ಕೆಲವು ಪುಸ್ತಕ ನೀಡಬೇಕಿದೆ ಎಂದು ನನ್ನ ವಿಳಾಸ ಪಡೆದರು. ಅಂದು ಬಂದ ಪುಸ್ತಕದಲ್ಲಿ ಬಿ.ಎಚ್ ರಾಘವೇಂದ್ರ ಬರೆದ ಪುಸ್ತಕವು ಇತ್ತು, ರಾಘವೇಂದ್ರ ಅವರು ರವಿಬೆಳಗೆರೆ ಅವರ ಆಪ್ತ ಗೆಳೆಯರು. ಇದರಿಂದ ಅನುಮಾನಗೊಂಡು ರವಿಬೆಳಗೆರೆ ಅವರಿಗೆ ಕರೆ ಮಾಡಿ ಈ ಕುರಿತು ವಿಚಾರಿಸಿದೆ. ಆದರೆ ಅವರು ಪುಸ್ತಕ ಕಳುಹಿಸಿಲ್ಲ ಎಂದು ಹೇಳಿದರು. ನಂತರ ಕೊರಿಯರ್ ನಿಂದ ಬಂದ ಕರೆ ಆಧಾರಿಸಿ ನಾನು ಪರಿಶೀಲಿಸಲು ಮುಂದಾದಾಗ ಅದು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 10 ವರ್ಷಗಳ ಕಾಲ ಕೊರಿಯರ್ ಸೇವೆ ಮಾಡುತ್ತಿದ್ದ ಮಂಜುವಿನ ನಂಬರ್ ಎಂದು ತಿಳಿಯಿತು. ಆಗ ನಾನು ಆತನನ್ನು ವಿಚಾರಿಸಿದಾಗ ಮಹಿಳೆಯೊಬ್ಬರು ಬಂದು ಕೊಟ್ಟರು ಎಂದು ತಿಳಿಸಿದ. ಆಗ ನನಗೆ ಆತ ಸುಳ್ಳು ಹೇಳುತ್ತಿರುವ ಕುರಿತು ಮನವರಿಕೆ ಆಯ್ತು, ನನ್ನ ಮನೆ ವಿಳಾಸ ತಿಳಿಯಲು ಮಾಡಿದ ತಂತ್ರ ಎಂದು ಅರಿವಾಯಿತು ಎಂದರು.

    ಆದರೂ ನಾನು ಏನು ತಪ್ಪು ಮಾಡಿಲ್ಲ ಎಂಬ ಧೈರ್ಯದ ಮೇಲೆ ಸುಮ್ಮನಾದೆ, ಸುಪಾರಿ ಕೊಟ್ಟಿರುವ ಕುರಿತು ಎಲ್ಲೂ ಸುಳಿವು ನನಗೆ ಸಿಗಲಿಲ್ಲ. ಇಲ್ಲವಾದರೆ ಅಂದೇ ರವಿಬೆಳಗೆರೆ ಅವರು ಜೈಲು ಸೇರುತ್ತಿದ್ದರು, ಎಸ್‍ಐಟಿ ಅಧಿಕಾರಿಗಳ ಕಾರ್ಯ ಮೆಚ್ಚುವಂತದ್ದು, ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಾದೇ ಕಾರ್ಯನಿರ್ವಹಿಸಿದ್ದಾರೆ. ಆದರೆ ಒಬ್ಬ ರಾಕ್ಷಸ ರವಿಬೆಳಗೆರೆ ಬಳಿ 14 ವರ್ಷದ ಕೆಲಸ ಮಾಡಿದ ನಂತರವು ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ, ಈ ಕುರಿತು ತನಿಖೆ ನಡೆಸಿ ಶಿಕ್ಷೆ ನೀಡಬೇಕಿದೆ ಎಂದರು.

    ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ

    https://www.youtube.com/watch?v=tvAkOpM6ZZo

     

     

  • ರವಿಬೆಳಗೆರೆ ಬಂಧನಕ್ಕೂ, ಗೌರಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ

    ರವಿಬೆಳಗೆರೆ ಬಂಧನಕ್ಕೂ, ಗೌರಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ: ರಾಮಲಿಂಗಾರೆಡ್ಡಿ

    ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ, ಆದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ರವಿಬೆಳಗೆರೆ ಅವರ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

    ಪತ್ರಕರ್ತ ರವಿಬೆಳೆಗೆರೆ ಬಂಧನ ಹಿನ್ನೆಲೆ ವಿಕಾಸಸೌಧದಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದರು, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಸುವ ವೇಳೆ ತಾಹೀರ್ ನನ್ನು ಪೊಲೀಸರು ಬಂಧಿಸಿದಾಗ ಸುಪಾರಿ ಕಿಲ್ಲರ್ ಶಶಿಧರ್ ಮುಂಡೇವಾಡಗೆ ಗನ್ ಮಾರಾಟ ಮಾಡಿದ್ದ ಎಂಬ ಮಾಹಿತಿ ಸಿಕ್ಕಿದೆ. ತಾಹೀರ್ ವೆಪನ್ ಸೆಲ್ಲರ್ ಮಾತ್ರ. ಆದರೆ ಬೆಳಗೆರೆ ಬಂಧನಕ್ಕೂ ಗೌರಿ ಹತ್ಯೆ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದರು.

    ಬೆಳಗೆರೆ ಅವರ ಬಂಧನ ವಿಚಾರ ಎಲ್ಲವೂ ಪೊಲೀಸ್ ಪ್ರಕ್ರಿಯೆ, ಮಾಹಿತಿ ಇದ್ದ ಕಾರಣದಿಂದಲೇ ಈ ಪ್ರಕ್ರಿಯೆ ನಡೆದಿದೆ. ಮಾಹಿತಿ ಇಲ್ಲದೇ ಏನೂ ಮಾಡಲು ಆಗುವುದಿಲ್ಲ. ಅಲ್ಲದೇ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಲ್ಯಾಬ್ ರಿಪೋರ್ಟ್ ಬರುವವರೆಗೆ ಕಾಯಬೇಕು. ಕಳೆದ ಭಾನುವಾರ ತಾಹೀರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು, ಯಾರು ಯಾರಿಗೆ ಗನ್ ಮಾರಾಟ ಮಾಡಲಾಗಿದೆ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಮಾಡಿದಾಗ ಶಶಿಧರ್ ಮುಂಡೆವಾಡಿಗೆ ಗನ್ ಮಾರಾಟ ಮಾಡಿರುವ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧಾರಿಸಿ ಶಶಿಧರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಿಸಿಬಿಗೆ ಕೆಲವು ಮಾಹಿತಿ ಸಿಕ್ಕಿದೆ. ಅದರಂತೆ ಇಂದಿನ ಬಂಧನ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು.  ( ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ )

    ಅಲ್ಲದೇ ಶಶಿಧರ್ ಮುಂಡೇವಾಡಿ ಬಳಸಿದ್ದ ಗನ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ಬಳಿಕ ಆ ಗನ್ ಎಲ್ಲೆಲ್ಲಿ ಬಳಕೆಯಾಗಿದೆ ಎನ್ನುವ ಮಾಹಿತಿ ಲಭಿಸಲಿದೆ. ಬೆಳಗೆರೆ ಬಂಧನದ ಹಾಗೂ ತನಿಖೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರು ಅಥವಾ ಸಿಸಿಬಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

    ( ಇದನ್ನೂ ಓದಿ: ರವಿ ಬೆಳಗೆರೆ ಅಫಿಡವಿಟ್ಟಿನಲ್ಲಿ ಏನಿದೆ? )

    ( ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಬಳಿಕ ಅಂದು ರವಿ ಬೆಳಗೆರೆ ಹೇಳಿದ್ದು ಹೀಗೆ )