Tag: ರವಿಪ್ರಕಾಶ್

  • ನಟಿ ವಿಜಯಲಕ್ಷ್ಮಿ ವಿರುದ್ಧ ಎಫ್‍ಐಆರ್ ದಾಖಲು

    ನಟಿ ವಿಜಯಲಕ್ಷ್ಮಿ ವಿರುದ್ಧ ಎಫ್‍ಐಆರ್ ದಾಖಲು

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮಿ ಮತ್ತು ಸಹೋದರಿ ಉಷಾದೇವಿ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ನಟಿ ವಿಜಯಲಕ್ಷ್ಮಿಗೆ ಆಸ್ಪತ್ರೆ ಖರ್ಚಿಗೆ ಒಂದು ಲಕ್ಷ ಹಣ ಸಹಾಯ ಮಾಡಿದ ನಟ ರವಿಪ್ರಕಾಶ್ ಈ ಕುರಿತು ವಿಡಿಯೋ ಮೂಲಕ ಮಾಹಿತಿ ಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಅವರಿಂದ ತಮಗಾಗಿರುವ ನೋವು ಮತ್ತು ಅವಮಾನಗಳ ಬಗ್ಗೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಟಿ ವಿಜಯಲಕ್ಷ್ಮಿ ನನ್ನಿಂದ ಸಹಾಯ ಪಡೆದು ಸಮಾಜದಲ್ಲಿ ನನಗೆ ಅವಮಾನವಾಗುವ ರೀತಿ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

    ಈ ಕುರಿತು ರವಿಪ್ರಕಾಶ್ ಈಗಾಗಲೇ ಫಿಲಂ ಚೇಂಬರ್‍ನಲ್ಲಿ ದೂರು ದಾಖಲಿಸಿದ್ದರು. ಸದ್ಯ ಈಗ ರವಿಪ್ರಕಾಶ್ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಘನತೆಗೆ ಧಕ್ಕೆತಂದಿರುವ ಆರೋಪ ಮೇಲೆ ದೂರು ದಾಖಲಾಗಿದೆ.

    ಏನಿದು ಪ್ರಕರಣ?
    ನಟಿ ವಿಜಯಲಕ್ಷ್ಮಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ವಿಜಯಲಕ್ಷ್ಮಿ ತಮಗೆ ನಟನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನಟ ರವಿಪ್ರಕಾಶ್ ವಿರುದ್ಧ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರವಿಪ್ರಕಾಶ್ ವಿರುದ್ಧ ದೂರು ನೀಡಿದ್ದರು.

    ನಾನು ಕಳೆದ ಕೆಲ ದಿನಗಳಿಂದ ಆನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಯುತ್ತಿದ್ದೇನೆ. ಹಣಕಾಸಿನ ನೆರವು ನೀಡಿ ಎಂದು ಸ್ಯಾಂಡಲ್‍ವುಡ್ ನ ಸ್ಟಾರ್ ನಟರಿಗೆ ಮನವಿ ಮಾಡಿಕೊಂಡಿದ್ದೆ. ಇದನ್ನು ನೋಡಿದ ನಟ ರವಿಪ್ರಕಾಶ್ ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಒಂದು ಲಕ್ಷ ನಗದು ಸೇರಿದಂತೆ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು. ಇದಾದ ನಂತರ ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರೋದು, ಪದೇ ಪದೇ ಫೋನ್, ಮಸೇಜ್ ಮಾಡೋದು ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದರು.

  • ಕಣ್ಣೀರು ಹಾಕಿ, ನಮ್ಮ ತಂದೆಯನ್ನು ನೋಡಿದಂತೆ ಆಯ್ತು ಎಂದಿದ್ರು – ಲೈಂಗಿಕ ಕಿರುಕುಳ ಆರೋಪಕ್ಕೆ ನಟ ಸ್ಪಷ್ಟನೆ

    ಕಣ್ಣೀರು ಹಾಕಿ, ನಮ್ಮ ತಂದೆಯನ್ನು ನೋಡಿದಂತೆ ಆಯ್ತು ಎಂದಿದ್ರು – ಲೈಂಗಿಕ ಕಿರುಕುಳ ಆರೋಪಕ್ಕೆ ನಟ ಸ್ಪಷ್ಟನೆ

    ಬೆಂಗಳೂರು: ನಟಿ ವಿಜಯಲಕ್ಷ್ಮಿ ಮಾಡಿದ್ದ ಲೈಂಗಿಕ ಕಿರುಕುಳ ಆರೋಪವನ್ನು ನಟ ರವಿ ಪ್ರಕಾಶ್ ಅವರು ತಳ್ಳಿ ಹಾಕಿದ್ದು, ಅವರು ನನ್ನನ್ನು ನೋಡಿ ನಮ್ಮ ತಂದೆ ನೋಡಿದಂತೆ ಆಯಿತು ಅಂತ ಹೇಳಿದ್ದರು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಪ್ರಕಾಶ್, ನಾನು ಮಾಧ್ಯಮಗಳಲ್ಲಿ, ಯೂಟ್ಯೂಬ್ ಚಾನೆಲ್ ಗಳಲ್ಲಿ ನೋಡಿದಾಗ ಅವರು ಹಣದ ಸಹಾಯ ಕೇಳಿದ್ದರು. ಹೀಗಾಗಿ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಫ್ರೆಬವರಿ 24 ರಂದು ನಾನು ಫೋನ್ ಮಾಡಿ ಮೇಡಂ ನಿಮಗೆ ಹಣ ಬೇಕಿದ್ದರೆ ನನಗೆ ಹೇಳಿ. ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ಅವರ ಸಹೋದರಿ ಫೆಬ್ರವರಿ 27 ರಂದು ಫೋನ್ ಮಾಡಿ ಇಂದು ಡಿಸ್ಚಾರ್ಜ್ ಮಾಡುತ್ತಾರೆ. ಸುಮಾರು 40-50 ಸಾವಿರ ಬೇಕಾಗುತ್ತದೆ. ನೀವು ಒಳ್ಳೆಯವರು ಎಂದು ಅನ್ನಿಸಿತು. ಅದಕ್ಕೆ ನಾವು ನಿಮ್ಮ ಸಹಾಯ ಕೇಳುತ್ತಿದ್ದೇವೆ ಎಂದು ಕೇಳಿದ್ದರು. ಅದಕ್ಕೆ ನಾನು ಕೊಡುತ್ತೇನೆ ಎಂದು ಹೇಳಿದ್ದೆ.

    ತಕ್ಷಣ ನಾನು ಆಸ್ಪತ್ರೆಗೆ ಹೋಗಿ ವಿಜಯಲಕ್ಷ್ಮಿ ಅವರ ಸಹೋದರಿಯನ್ನು ಭೇಟಿ ಮಾಡಿ 1 ಲಕ್ಷ ಹಣವನ್ನು ಕೊಟ್ಟೆ. ಯಾಕೆಂದರೆ ಅವರು, ಎಲ್ಲರೂ ಸಿನಿಮಾ ಅವಕಾಶ ಕೇಳುತ್ತಿದ್ದೆ ಎಂದು ಎಲ್ಲರೂ ಅವಕಾಶ ಕೊಟ್ಟಿದ್ದಾರೆ. ಆದರೆ ಸಿನಿಮಾ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ನನಗೆ ಇನ್ನು ಒಂದು ತಿಂಗಳು ಬೆಡ್ ರೆಸ್ಟ್ ಬೇಕು. ನಮ್ಮನ್ನು ಯಾರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಈ ಕಾರಣದಿಂದ ನಾನು ಅವರಿಗೆ 1 ಲಕ್ಷ ಹಣ ಕೊಟ್ಟೆ. ಈ ವೇಳೆ ನನಗೆ ವಿಜಯಲಕ್ಷ್ಮಿ ಸಹೋದರಿ ಅವರು ಕಾಲಿಗೆ ಬಿದ್ದು, ನೀವು ದೇವರು ಎಂದು ನಮಸ್ಕಾರ ಮಾಡಿದ್ದರು. ನಾನು ವಿಜಯಲಕ್ಷ್ಮಿ ಅವರನ್ನು ಕೂಡ ನೋಡಿಲ್ಲ, ಹಣ ಕೊಟ್ಟು ಮನೆಗೆ ಬಂದೆ. ಬಳಿಕ ಅವರು ಫೋನಿನಲ್ಲಿ ಧನ್ಯವಾದ ತಿಳಿಸಿದ್ದರು ಎಂದು ರವಿಪ್ರಕಾಶ್ ತಿಳಿಸಿದ್ದಾರೆ.

    ಆದಾದ ಮೂರು ದಿನಗಳ ನಂತರ ಡಿಸ್ಚಾರ್ಜ್ ಆಯಿತು ಎಂದು ಹೇಳಿದ್ದರು. ಬಳಿಕ ಮತ್ತೆ ಫೋನ್ ಮಾಡಿ ಜಯದೇವ ಆಸ್ಪತ್ರೆಗೆ ಬನ್ನಿ ಎಂದಿದ್ದರು. ನಾನು ಹೋದೆ ಆಗ ನಾನು ಮೊದಲ ಬಾರಿಗೆ ಐಸಿಯುನಲ್ಲಿ ವಿಜಯಲಕ್ಷ್ಮಿ ಅವರನ್ನು ನೋಡಿ ಮಾತನಾಡಿಸಿದೆ. ಆಗ ಅವರು ಕಣ್ಣೀರು ಹಾಕಿ, ನಿಮ್ಮನ್ನು ನೋಡಿದರೆ ಗೊತ್ತಾಗುತ್ತದೆ ನೀವು ತುಂಬಾ ಒಳ್ಳೆಯವರು ಎಂದು, ನಮ್ಮ ಕುಟುಂಬದವರ ಜೊತೆ ಇರಿ. ನಿಮ್ಮನ್ನು ನೋಡಿ ನಮ್ಮ ತಂದೆಯನ್ನು ನೋಡಿದಂತೆ ಆಯಿತು ಎಂಬ ಮಾತನ್ನು ಹೇಳಿದ್ದರು ಎಂದರು.

    ಅವರು ಕೇಳಿದ ಪ್ರತಿಯೊಂದು ಮನವಿಯ ಮೆಸೇಜ್ ಹಾಗೂ ಕಾಲ್ ರೆಕಾರ್ಡಿಂಗ್ ನನ್ನ ಬಳಿ ಇದೆ. ನಮ್ಮನ್ನು ಅಷ್ಟು ಹುಡುಗಾಟವಾಗಿ ತೆಗೆದುಕೊಳ್ಳಬೇಡಿ. ಗಂಡಸರು ಅಷ್ಟೂ ಚೀಪ್ ಅಲ್ಲ. ನಾನು ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತೇವೆ. ನಾನು ಮನಸ್ಸಿನಿಂದ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿದ್ದೇನೆ. ಮನಸ್ಸನ್ನು ಕ್ಲೀನ್ ಮಾಡಿಕೊಳ್ಳಿ, ಚೆನ್ನಾಗಿರುತ್ತೀರಿ ಎಂದು ರವಿ ಪ್ರಕಾಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಟಿ ವಿಜಯಲಕ್ಷ್ಮೀಗೆ ನಟನಿಂದ ಲೈಂಗಿಕ ಕಿರುಕುಳ – ದೂರು ದಾಖಲು

    ನಟಿ ವಿಜಯಲಕ್ಷ್ಮೀಗೆ ನಟನಿಂದ ಲೈಂಗಿಕ ಕಿರುಕುಳ – ದೂರು ದಾಖಲು

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮೀಗೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈಗ ವಿಜಯಲಕ್ಷ್ಮಿ ತಮಗೆ ನಟನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ನಟ ರವಿಪ್ರಕಾಶ್ ವಿರುದ್ಧ ವಿಜಯಲಕ್ಷ್ಮೀ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರವಿಪ್ರಕಾಶ್ ವಿರುದ್ಧ ದೂರು ನೀಡಿದ್ದಾರೆ.

    ನಾನು ಕಳೆದ ಕೆಲ ದಿನಗಳಿಂದ ಆನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಯುತ್ತಿದ್ದೇನೆ. ಹಣಕಾಸಿನ ನೆರವು ನೀಡಿ ಅಂತ ಸ್ಯಾಂಡಲ್‍ವುಡ್ ನ ಸ್ಟಾರ್ ನಟರಿಗೆ ಮನವಿ ಮಾಡಿಕೊಂಡಿದ್ದೆ. ಇದನ್ನು ನೋಡಿದ ನಟ ರವಿಪ್ರಕಾಶ್ ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಒಂದು ಲಕ್ಷ ನಗದು ಸೇರಿದಂತೆ ಅವಶ್ಯವಿರುವ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು. ಇದಾದ ನಂತರ ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರೋದು, ಪದೇ ಪದೇ ಫೋನ್, ಮಸೇಜ್ ಮಾಡೋದು ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ವಿಜಯಲಕ್ಷ್ಮೀ ಆರೋಪಿಸಿದ್ದಾರೆ.

    ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರೋ ವಿಚಾರ ತಿಳಿದ ನಟ ರವಿಪ್ರಕಾಶ್, ನಟಿ ವಿಜಯಲಕ್ಷ್ಮೀಯ ಆರೋಪದಿಂದ ಶಾಕ್ ಆಗಿದ್ದಾರೆ. ಮಾಧ್ಯಮಗಳಲ್ಲಿ ಸಹಾಯ ಮಾಡಿ ಅಂತಾ ಕೇಳುತ್ತಿದ್ದ ವಿಡಿಯೋ ನೋಡಿ, ಒಂದು ಲಕ್ಷ ಹಣ ಸಹಾಯ ಮಾಡಿದೆ. ಅವರಿಗೆ ಹಾಕೋಕೆ ಬಟ್ಟೆ ಸಹ ಇರಲಿಲ್ಲ. ಮಾನವೀಯತೆ ಆಧಾರದಲ್ಲಿ ಊಟ, ಬಟ್ಟೆ, ಹಣ್ಣು, ಮಾತ್ರೆ ಎಂದು ಸಹಾಯ ಮಾಡಿದೆ. ಅವರ ಬಳಿ ಮಾತಾಡಿರೋ ಕಾಲ್ ರಿಕಾರ್ಡ್, ಮಸೇಜ್‍ಗಳು, ಎಲ್ಲಾ ಇದೆ. ನನಗೆ ಯಾವುದೇ ಕೆಟ್ಟಭಾವನೆ ಇಲ್ಲ. ಕಷ್ಟದಲ್ಲಿದ್ದಾರೆ ಎಂದು ಸಹಾಯ ಮಾಡಿದ್ದೆ ತಪ್ಪಾ ಎಂದು ನಟ ರವಿ ಪ್ರಕಾಶ್ ಹೇಳಿದ್ದಾರೆ.

    ಸದ್ಯಕ್ಕೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv