Tag: ರವಿತೇಜ

  • ಮಾಸ್ ಮಹಾರಾಜ ರವಿತೇಜ್‌ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಸಾಥ್

    ಮಾಸ್ ಮಹಾರಾಜ ರವಿತೇಜ್‌ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಸಾಥ್

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿರ್ಮಾಪಕ ಅಭಿಷೇಕ್ ಅರ್ಗವಾಲ್ ಟೈಗರ್ ನಾಗೇಶ್ವರ್ ರಾವ್ ಎಂಬ ಪ್ಯಾನ್ ಇಂಡಿಯಾ ಸಿನಿಮಾಗೆ ಮುನ್ನುಡಿ ಬರೆದಿದ್ದಾರೆ. ಮಾಸ್ ಮಹಾರಾಜ ರವಿತೇಜ್‌ ನಾಯಕನಾಗಿ ಬಣ್ಣ ಹಚ್ಚಿದ್ದು, ಯುಗಾದಿ ಹಬ್ಬಕ್ಕೆ ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. ಮೆಗಾಸ್ಟಾರ್ ಚಿರಂಜೀವಿ, ಈ ಸಿನಿಮಾಗೆ ಕ್ಲಾಪ್ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಬಳಿಕ ಟೈಗರ್ ನಾಗೇಶ್ವರ್ ರಾವ್ ಪ್ರಿ ಲುಕ್ ರಿಲೀಸ್ ಮಾಡಿ ಮಾತಿಗೆ ಇಳಿದ ಚಿರಂಜೀವಿ, ಕೋವಿಡ್ ಸಂದರ್ಭದಲ್ಲಿ ಟೈಗರ್ ನಾಗೇಶ್ವರ್ ರಾವ್  ಕಥೆಯನ್ನು ಹೇಳಿದ್ದರು. ಆದರೆ ಕೆಲ ಸಮಸ್ಯೆಯಿಂದ ನಾನು ಈ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಈಗ ನನ್ನ ತಮ್ಮ ರವಿತೇಜ್‌ ಈ ಸಿನಿಮಾ ಮಾಡ್ತಿದ್ದಾರೆ. ನಾನು ಚಿಕ್ಕವನಿದ್ದಾಗ ಸ್ಟುವರ್ಟ್‍ಪುರಂ ನಾಗೇಶ್ವರ ರಾವ್ ಬಗ್ಗೆ ಕೇಳಿದ್ದೆ. ನನ್ನ ತಂದೆ ಚಿರಾಳ ಪೇರಾಲದಲ್ಲಿ ಕೆಲಸ ಮಾಡುತ್ತಿದ್ದರು. ಸ್ಟುವರ್ಟ್‍ಪುರಂ ಪಕ್ಕದಲ್ಲೇ ಇತ್ತು. ಅಲ್ಲಿನ ಜನರೆಲ್ಲ ನಾಗೇಶ್ವರನನ್ನು ಹೀರೋ ಎಂದು ಹೊಗಳುತ್ತಿದ್ದರು. ವರ್ಷಗಳ ನಂತರ ವಂಶಿ ಒಂದು ಕಮರ್ಷಿಯಲ್ ಕಥೆಯೊಂದಿಗೆ ಬಂದರು. ರವಿತೇಜ ಈ ಸಿನಿಮಾ ಮಾಡುತ್ತಿರುವುದು ಚೆನ್ನಾಗಿದೆ. ಅಭಿಷೇಕ್ ಅಗರ್ವಾಲ್ ಇದನ್ನು ಮಾಡುತ್ತಿರುವುದು ನನಗೆ ಖುಷಿ ತಂದಿದೆ. ರವಿತೇಜ್‌, ಅಭಿಷೇಕ್ ಮತ್ತು ವಂಶಿ ಅವರು ಕಾಶ್ಮೀರ ಫೈಲ್‍ಗಳಿಗಿಂತ ದೊಡ್ಡ ಹಿಟ್ ಆಗಲಿ ಎಂದು ಹಾರೈಸಿದರು. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

    ನಾಯಕ ಕಿಶನ್ ರೆಡ್ಡಿ, ಅಭಿಷೇಕ್ ಅಗರ್ವಾಲ್ ಮತ್ತು ಅವರ ತಂದೆ ಹಲವು ವರ್ಷಗಳಿಂದ ಕುಟುಂಬ ಸ್ನೇಹಿತರು. ಅವರು ಇತ್ತೀಚೆಗೆ ದಿ ಕಾಶ್ಮೀರ್ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಕಾಶ್ಮೀರಿ ಪಂಡಿತರ ಸಂಕಟವನ್ನು ಭಾರತೀಯರೆಲ್ಲರಿಗೂ ತಿಳಿಯುವಂತೆ ಮಾಡಿದರು. ನಿರ್ದೇಶಕ ವಿವೇಕ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಥೆಯನ್ನು ತೋರಿಸಿದರು. ಪಂಡಿತರ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಇದೆ. ಹೆಚ್ಚು ಜನ ಸಿನಿಮಾ ಮಾಡುತ್ತಾರೆ. ಈಗ ಅವರು ಟೈಗರ್ ನಾಗೇಶ್ವರ ರಾವ್ ಅವರ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಈ ಚಿತ್ರವೂ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಹೇಳಿದರು.

    ನಿರ್ದೇಶಕ ವಂಶಿ, ನಾನು ರವಿತೇಜ ಅವರೊಂದಿಗೆ ನಾಲ್ಕು ವರ್ಷ ಪ್ರಯಾಣ ಮಾಡಿದ್ದೇನೆ. ಅವರು ಕಥೆಯನ್ನು ಇಷ್ಟಪಟ್ಟಿದ್ದಾರೆ ಮತ್ತು ಅದನ್ನು ಮಾಡಲು ಒಪ್ಪಿಕೊಂಡಿದ್ದಾರೆ. ರವಿತೇಜ್‌ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲಾ ತೆಲುಗು ನಾಯಕರ ಅಭಿಮಾನಿಗಳು ಚಿತ್ರವನ್ನು ಮೆಚ್ಚುತ್ತಾರೆ ಎನ್ನುವ ಆತ್ಮವಿಶ್ವಾಸದಿಂದ ಹೇಳಿದರು.

    ನಿರ್ಮಾಪಕ ಅಭಿಷೇಕ್ ಅಗರ್ವಾಲ್, ಚಿರಂಜೀವಿ, ಕಿಶನ್ ರೆಡ್ಡಿ ಅವರಿಗೆ ಧನ್ಯವಾದಗಳು. ಕಾಶ್ಮೀರ್ ಫೈಲ್ಸ್ ಅನ್ನು ದೊಡ್ಡ ಹಿಟ್ ಮಾಡಿದ ಪ್ರೇಕ್ಷಕರಿಗೆ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರು ಟೈಗರ್ ನಾಗೇಶ್ವರ ರಾವ್ ಸಿನಿಮಾ ಆಶೀರ್ವಾದ ಮಾಡಿ ಎಂದರು.

    ರವಿತೇಜ ಸಿನಿಕರಿಯರ್ ಬಿಗ್ ಬಜೆಟ್ ಚಿತ್ರ: ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಮೂಲಕ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕನಸಿನ ಸಿನಿಮಾವಾಗಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾ, 1970ರಲ್ಲಿ ಸ್ಟುವರ್ಟ್‍ಪುರಂ ಎಂಬಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಸಂಪೂರ್ಣವಾಗಿ ತಮ್ಮ ಮೇಕ್ ಓವರ್‌ನ್ನು ಬದಲಿಸಿಕೊಂಡಿದ್ದಾರೆ. ಒಂದು ವಿಭಿನ್ನ ಪಾತ್ರದಲ್ಲಿ ರವಿತೇಜ್‌ ಮಿಂಚಲಿದ್ದಾರೆ. ಬಾಲಿವುಡ್ ಬ್ಯೂಟಿ ಕೃತಿ ಸನೂನ್ ಸಹೋದರಿ ನೂಪೂರ್ ಸನೂನ್ ರವಿತೇಜ್‍ಗೆ ಜೋಡಿಯಾಗಿ ಮಿಂಚಲಿದ್ದಾರೆ. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ

    ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದ್ದು, 70ರ ದಶಕದ ಟಚ್ ಜೊತೆಗೆ ಮೈ ಜುಮ್ ಎನಿಸುವ ಆಕ್ಷನ್ ಸೀನ್ಸ್ ಸಿನಿಮಾದಲ್ಲಿರಲಿದೆ. ಆರ್.ಮ್ಯಾಥಿ ಐಎಸ್ ಸಿ ಕ್ಯಾಮೆರಾ ವರ್ಕ್, ಜೆವಿ ಪ್ರಕಾಶ್ ಕುಮಾರದ್ ಸಂಗೀತ, ಶ್ರೀಕಾಂತ್ ವಿಸ್ಸಾ ಸಂಭಾಷಣೆ ಬರೆದಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶರತ್ ಮಂಡವ, ತ್ರಿನಾಧ್ ರಾವ್ ನಿಕ್ಕಿನಾ, ಸುಧೀರ್ ವರ್ಮಾ, ತೇಜ ಮತ್ತು ಇತರರು ಉಪಸ್ಥಿತಿರಿದ್ದರು.

  • ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕರಿಂದ ಮತ್ತೊಂದು ಚಿತ್ರ ಘೋಷಣೆ : ರವಿತೇಜ ಹೀರೋ

    ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕರಿಂದ ಮತ್ತೊಂದು ಚಿತ್ರ ಘೋಷಣೆ : ರವಿತೇಜ ಹೀರೋ

    ಮಾಸ್ ಮಹಾರಾಜ ಎಂದೇ ಖ್ಯಾತರಾಗಿರುವ ರವಿತೇಜ ಅವರು ಹೊಸ ಸಿನಿಮಾ ‘ಟೈಗರ್ ನಾಗೇಶ್ವರ್ ರಾವ್’ಗೆ ಯುಗಾದಿಯಂದು ಮುಹೂರ್ತ ಕಾಣಲಿದೆ. ವಂಶಿ ಡೈರೆಕ್ಷನ್ ನಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ದಿ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ಮಾಪಕ ಅಭಿಷೇಕ್ ಅರ್ಗವಾಲ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ತೆಲುಗಿನ ಮಾಸ್ ಮಹಾರಾಜ ರವಿತೇಜ ಟೈಗರ್ ನಾಗೇಶ್ವರ್ ರಾವ್ ಆಗಿ ಬಣ್ಣ ಹಚ್ಚಲಿದ್ದು, ಇದು ರವಿತೇಜ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಇದನ್ನೂ ಓದಿ:  ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಮೂಲಕ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕನಸಿನ ಸಿನಿಮಾವಾಗಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾದ ಮುಹೂರ್ತ ಯುಗಾದಿ ಹಬ್ಬದಂದು ಅದ್ಧೂರಿಯಾಗಿ ನಡೆಯಲಿದೆ. ಯುಗಾದಿ ಶುಭದಿನದಂದು ಮಧ್ಯಾಹ್ನ 12.6ಕ್ಕೆ ಸಿನಿಮಾದ ಫ್ರೀ ಲುಕ್ ರಿಲೀಸ್ ಆಗಲಿದೆ, ಅಂದಹಾಗೇ ಇದು ರವಿತೇಜ ಸಿನಿಕರಿಯರ್ ನ ಬಿಗ್ ಬಜೆಟ್ ಸಿನಿಮಾವಾಗಿರಲಿದೆ. ಇದನ್ನೂ ಓದಿ: ಬಾಲ್ಯ ವಿವಾಹ ಮಾಡಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ರು

    ಟೈಗರ್ ನಾಗೇಶ್ವರ್ ರಾವ್, 1970ರಲ್ಲಿ ಸ್ಟುವರ್ಟ್‌ಪುರಂ ಎಂಬಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಸಂಪೂರ್ಣವಾಗಿ ತಮ್ಮ ಮೇಕ್ ಓವರ್ ನ್ನು ಬದಲಿಸಿಕೊಂಡಿದ್ದಾರೆ. ಒಂದು ವಿಭಿನ್ನ ಪಾತ್ರದಲ್ಲಿ ರವಿತೇಜ ಮಿಂಚಲಿದ್ದಾರೆ. ಬಾಲಿವುಡ್ ಬ್ಯೂಟಿ ಕೃತಿ ಸನೂನ್ ಸಹೋದರಿ ನೂಪೂರ್ ಸನೂನ್ ರವಿತೇಜ್ ಗೆ ಜೋಡಿಯಾಗಿ ಮಿಂಚಲಿದ್ದಾರೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದ್ದು, 70ರ ದಶಕದ ಟಚ್ ಜೊತೆಗೆ ಮೈ ಜುಮ್ ಎನಿಸುವ ಆಕ್ಷನ್ ಸೀನ್ಸ್ ಸಿನಿಮಾದಲ್ಲಿರಲಿದೆ. ಆರ್.ಮ್ಯಾಥಿ ಐಎಸ್ ಸಿ ಕ್ಯಾಮೆರಾ ವರ್ಕ್, ಜೆವಿ ಪ್ರಕಾಶ್ ಕುಮಾರದ್ ಸಂಗೀತ, ಶ್ರೀಕಾಂತ್ ವಿಸ್ಸಾ ಸಂಭಾಷಣೆ ಬರೆದಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

  • ರಾಣಾ, ರಕುಲ್, ರವಿತೇಜ, ಚಾರ್ಮಿಗೆ ಜಾರಿ ನಿರ್ದೇಶನಾಲಯದ ನೋಟಿಸ್

    ರಾಣಾ, ರಕುಲ್, ರವಿತೇಜ, ಚಾರ್ಮಿಗೆ ಜಾರಿ ನಿರ್ದೇಶನಾಲಯದ ನೋಟಿಸ್

    – 2017ರ ಡ್ರಗ್ಸ್ ಕೇಸ್, ಸೆ.2 ರಿಂದ 22ರೊಳಗೆ ವಿಚಾರಣೆ

    ನವದೆಹಲಿ: ನಾಲ್ಕು ವರ್ಷದ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾವಿದರಾದ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿ ತೇಜ ಮತ್ತು ಚಾರ್ಮಿ ಕೌರ್ ಸೇರಿದಂತೆ 10 ಜನರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.

    ಸೆಪ್ಟೆಂಬರ್ 6ಕ್ಕೆ ರಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 8ಕ್ಕೆ ರಾಣಾ ದಗ್ಗುಬಾಟಿ ಮತ್ತು ಸೆಪ್ಟೆಂಬರ್ 9ರಂದು ರವಿತೇಜ ಹೈದರಬಾದ್ ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಲಾವಿದ ಜೊತೆ ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಆಗಸ್ಟ್ 31ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ರವಿತೇಜ ಡ್ರೈವರ್ ಮತ್ತು ‘ಎಫ್’ ಕ್ಲಬ್ ನ ‘ಜಿಎಂ’ ಹೆಸರಿನ ವ್ಯಕ್ತಿಗೂ ನೋಟಿಸ್ ನೀಡಲಾಗಿದೆ. ಇವರೆಲ್ಲರ ವಿಚಾರಣೆ ಸೆಪ್ಟೆಂಬರ್ 2ರಿಂದ 22ರೊಳಗೆ ನಡೆಯಲಿದೆ.

    12 ಲಕ್ಷ ಮೌಲ್ಯದ ಡ್ರಗ್ಸ್, 12 ಕೇಸ್:
    2017ರಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ತೆಲಂಗಾಣದ ಅಬಕಾರಿ ಇಲಾಖೆ, 12 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡು ಒಟ್ಟು 12 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಇದೇ ಪ್ರಕರಣದಲ್ಲಿ ಟಾಲಿವುಡ್ ಕಲಾವಿದರ ಹೆಸರು ಕೇಳಿ ಬಂದರೂ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಎಸ್‍ಐಟಿ ಯಾರನ್ನೂ ಆರೋಪಿಗಳೆಂದು ಪರಿಗಣಿಸಿರಲಿಲ್ಲ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಸುಶಾಂತ್ ಕೇಸ್ – ಎನ್‍ಸಿಬಿಯಿಂದ 30 ಸಾವಿರ ಪುಟಗಳ ಚಾರ್ಚ್‍ಶೀಟ್ ಸಲ್ಲಿಕೆ

    62 ಜನರ ಕೂದಲು, ಉಗುರು ಮಾದರಿ ಸಂಗ್ರಹ:
    2017 ಜುಲೈನಲ್ಲಿ ಎಸ್‍ಐಟಿ ಟಾಲಿವುಡ್ ಕಲಾವಿದರು ಸೇರಿದಂತೆ 62 ಜನರ ಕೂದಲು ಮತ್ತು ಉಗುರು ಮಾದರಿಯನ್ನು ಸಂಗ್ರಹಿಸಿತ್ತು. ಆದ್ರೆ ಈ ವರದಿಯಲ್ಲಿ ಎಸ್‍ಐಟಿಗೆ ಯಾವ ಸುಳಿವು ಸಿಕ್ಕಿರಲಿಲ್ಲ. ಇದೇ ಪ್ರಕರಣದಲ್ಲಿ ಸೌಥ್ ಆಫ್ರಿಕಾ ಮೂಲದ ರಾಫೇಲ್ ಎಲೆಕ್ಸ್ ವಿಕ್ಟರ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಮುಂಬೈ ಮತ್ತು ಹೈದರಾಬಾದ್ ನಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿಕೊಂಡಿದ್ದನು. ಆರೋಪಿ ವಿರುದ್ಧ ಎಸ್‍ಐಟಿ ಚಾರ್ಜ್ ಶೀಟ್ ಸಹ ಸಲ್ಲಿಸಿದೆ. ಇದನ್ನೂ ಓದಿ: ಅರ್ಜುನ್ ರಾಂಪಾಲ್‍ಗೆ ಮತ್ತೆ ಡ್ರಗ್ಸ್ ಕಂಟಕ – ಎನ್‍ಸಿಬಿಯಿಂದ ನೋಟಿಸ್

    2019ರ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಹೆಸರು ಕೇಳಿಬಂದಿತ್ತು. ಈ ಸಂಬಂಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಟೀಂ ವಿಚಾರಣೆ ನಡೆಸಿ, ಕೆಲ ಮಾಹಿತಿ ಪಡೆದುಕೊಂಡಿತ್ತು. ಆದ್ರೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿರಲಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಸಹ ವಿಚಾರಣೆ ಎದುರಿಸಿದ್ದರು. ಇದನ್ನೂ ಓದಿ: ಭಾರತಿ ಸಿಂಗ್ ಡ್ರಗ್ಸ್ ಪ್ರಕರಣ- ಇಬ್ಬರು ಎನ್‍ಸಿಬಿ ಅಧಿಕಾರಿಗಳ ಅಮಾನತು

  • ಪ್ರೇಮಿಗಳ ದಿನದಂದು ಥ್ರಿಲ್ ನೀಡೋಕೆ ಬರ್ತಿದೆ ‘ಸಾಗುತ ದೂರ ದೂರ’ ಸಿನಿಮಾ!

    ಪ್ರೇಮಿಗಳ ದಿನದಂದು ಥ್ರಿಲ್ ನೀಡೋಕೆ ಬರ್ತಿದೆ ‘ಸಾಗುತ ದೂರ ದೂರ’ ಸಿನಿಮಾ!

    ‘ಸಾಗುತ ದೂರ ದೂರ’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಎಲ್ಲರ ಗಮನ ಸೆಳೆದಿರೋ ಚಿತ್ರ. ಟೈಟಲ್? ಹೇಳುವಂತೆ ಚಿತ್ರವೂ ಜರ್ನಿಯಲ್ಲೇ ಕಥೆಯನ್ನು ಪ್ರೇಕ್ಷಕರಿಗೆ ಹೇಳಲಿದೆ. ಆದ್ರೆ ಇದು ಯಾರ ಜರ್ನಿ ಯಾಕೆ ಸಾಗುತ್ತಾರೆ ಅನ್ನೋದನ್ನ ನೀವು ಚಿತ್ರದಲ್ಲೇ ನೋಡಬೇಕು. ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇಯಂದು `ಸಾಗುತ ದೂರ ದೂರ’ ಚಿತ್ರ ಬಿಡುಗಡೆಯಾಗುತ್ತಿದೆ.

    ಭಾವನಾತ್ಮಕ ಜರ್ನಿ ಒಳಗೊಂಡಿರೋ ಈ ಚಿತ್ರದಲ್ಲಿ ಕಥೆಯೇ ಜೀವಾಳವಾಗಿದ್ದು, ಪ್ರತಿ ಪಾತ್ರವೂ ಇಲ್ಲಿ ಎಲ್ಲರ ಗಮನ ಸೆಳೆಯಲಿದೆ. ಗುರಿಯನ್ನು ಅರಸಿ ಹೊರಟವರ ಕಥೆ ಚಿತ್ರದಲ್ಲಿದ್ದು, ತಾಯಿ ಮಗನ ಸೆಂಟಿಮೆಂಟ್ ಕಥೆಯ ಜೀವಾಳವಾಗಿದೆ. ಇಡೀ ಚಿತ್ರದ ನಿರೂಪಣೆ ಜರ್ನಿ ರೂಪದಲ್ಲೇ ಸಾಗಿರೋದು ಚಿತ್ರದ ವಿಶೇಷ ಸಂಗತಿ. ಜೊತೆಗೆ ಇನ್ನೂರು ವಿಭಿನ್ನ ಲೊಕೇಷನ್ ಗಳಲ್ಲಿ ಚಿತ್ರವನ್ನು ಸೆರೆ ಹಿಡಿದಿರೋದು ಈ ಚಿತ್ರದ ಇನ್ನೊಂದು ಇಂಟ್ರಸ್ಟಿಂಗ್ ಸಂಗತಿ. ಇಲ್ಲಿವರೆಗೂ ಚಿತ್ರದ ಎಳೆ ಬಗ್ಗೆ ಎಲ್ಲಿಯೂ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದ್ರಿಂದ ಚಿತ್ರದಲ್ಲಿ ಏನಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದ್ದು ಚಿತ್ರ ಬಿಡುಗಡೆಯಾಗೋದನ್ನೇ ಕಾಯುತ್ತಿದ್ದಾರೆ.

    ಹೊಸತನ ತುಂಬಿರೋ ಈ ಚಿತ್ರದ ಟ್ರೈಲರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ ಸ್ಪರ್ಶವಿರೊ ಹಾಡುಗಳು ಕೂಡ ಗಮನ ಸೆಳೆದಿವೆ. ಅಪೇಕ್ಷಾ ಪುರೋಹಿತ್, ಜಾನ್ವಿ ಜ್ಯೋತಿ, ಮಹೇಶ್, ಮಾಸ್ಟರ್ ಆಶಿಕ್, ಉಷಾ ಬಂಡಾರಿ, ನವೀನ್, ವಿಜಯ್ ಸೇರಿದಂತೆ ಹಲವು ಕಲಾವಿದರು ಸಾಗುತ ದೂರ ದೂರ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಖುಷಿ ಕನಸು ಕ್ರಿಯೇಷನ್ಸ್ ಬ್ಯಾನರ್?ನಡಿ ನಿರ್ಮಾಣ ಆಗಿರೋ ಈ ಚಿತ್ರಕ್ಕೆ ಅಮಿತ್ ಪೂಜಾರಿ ಬಂಡವಾಳ ಹಾಕಿದ್ದಾರೆ.

  • ಈ ವಾರ ಸಿನಿರಸಿಕರನ್ನು ರಂಜಿಸಲು ತೆರೆಗೆ ಬರ್ತಿದೆ ‘ಸಾಗುತ ದೂರ ದೂರ’ ಚಿತ್ರ!

    ಈ ವಾರ ಸಿನಿರಸಿಕರನ್ನು ರಂಜಿಸಲು ತೆರೆಗೆ ಬರ್ತಿದೆ ‘ಸಾಗುತ ದೂರ ದೂರ’ ಚಿತ್ರ!

    ಸಿನಿ ಶುಕ್ರವಾರ ಸಿನಿರಸಿಕರ ಫೇವರೇಟ್ ದಿನ. ತಮ್ಮ ನೆಚ್ಚಿನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಲು ಕಾತುರದಿಂದ ಕಾಯುತ್ತಿರುತ್ತಾರೆ. ಈ ವಾರ ಪ್ರೇಕ್ಷಕ ಪ್ರಭುಗಳನ್ನು ರಂಜಿಸಲು ಬಹು ನಿರೀಕ್ಷಿತ `ಸಾಗುತ ದೂರ ದೂರ’ ಚಿತ್ರ ಚಿತ್ರಮಂದಿರಕ್ಕೆ ಬರ್ತಿದೆ.

    ಇಂಟ್ರಸ್ಟಿಂಗ್ ಕಥಾಹಂದರ, ಕಲರ್ ಫುಲ್ ಲೋಕೇಷನ್, ಕದ್ರಿ ಮಣಿಕಾಂತ್ ಮ್ಯೂಸಿಕ್ ಸಾಗುತ ದೂರ ದೂರ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಜರ್ನಿಯಲ್ಲೇ ಸಾಗೋ ಚಿತ್ರದ ಕಥೆಯು ಪ್ರೇಕ್ಷಕರಿಗೆ ಥ್ರಿಲ್ ನೀಡಲಿದ್ದು ಹೊಸ ಅನುಭವ ನೀಡಲಿದೆ. ರವಿತೇಜ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ತುಂಬಾ ಪ್ಯಾಶನೇಟ್ ಆಗಿ ಸಿನಿಮಾವನ್ನು ನಿರ್ದೇಶನ ಮಾಡಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಅಮಿತ್ ಪೂಜಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಖುಷಿ ಕನಸು ಬ್ಯಾನರ್ ನಡಿ ‘ಸಾಗುತ ದೂರ ದೂರ’ ಚಿತ್ರ ನಿರ್ಮಾಣವಾಗಿದೆ.

    ತಾಯಿ ಮಗನ ಸೆಂಟಿಮೆಂಟ್ ಚಿತ್ರದಲ್ಲಿದ್ದು, ಕಥೆಯೇ ಚಿತ್ರದ ಜೀವಾಳವಾಗಿರೋ ಈ ಚಿತ್ರದಲ್ಲಿ ಅಪೇಕ್ಷಾ ಪುರೋಹಿತ್, ಜಾನ್ವಿ ಜ್ಯೋತಿ, ಮಹೇಶ್, ಮಾಸ್ಟರ್ ಆಶಿಕ್, ಉಷಾ ಬಂಡಾರಿ, ನವೀನ್, ವಿಜಯ್ ತಾರಾಬಳಗದಲ್ಲಿ ಮಿಂಚಿದ್ದಾರೆ. ಇನ್ನೂರು ಸುಂದರ ಲೊಕೇಷನ್ ಗಳಲ್ಲಿ ಈ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಅಭಿ ಕ್ಯಾಮೆರಾ ಕೈಚಳಕ ಚಿತ್ರದಲ್ಲಿದೆ. ಚಿತ್ರದ ಬಗ್ಗೆ ಎಲ್ಲಾ ಕಡೆಗಳಲ್ಲೂ ಒಳ್ಳೆಯ ಟಾಕ್ ಕ್ರಿಯೇಟ್ ಆಗಿದ್ದು ಈ ಶುಕ್ರವಾರ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಲಿದೆ.