Tag: ರವಿತೇಜಾ

  • ರಶ್ಮಿಕಾ, ಶ್ರೀಲೀಲಾಗೆ ಠಕ್ಕರ್- ತೆಲುಗಿನಲ್ಲಿ ರುಕ್ಮಿಣಿ ವಸಂತ್‌ಗೆ ಬಂಪರ್ ಆಫರ್

    ರಶ್ಮಿಕಾ, ಶ್ರೀಲೀಲಾಗೆ ಠಕ್ಕರ್- ತೆಲುಗಿನಲ್ಲಿ ರುಕ್ಮಿಣಿ ವಸಂತ್‌ಗೆ ಬಂಪರ್ ಆಫರ್

    ಬೆಂಗಳೂರಿನ ಬೆಡಗಿ ರುಕ್ಮಿಣಿ ವಸಂತ್ ಅವರು ಇದೀಗ ತೆಲುಗು ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾರನ್ನು (Sreeleela) ಬಿಟ್ಟು ರುಕ್ಮಿಣಿ ವಸಂತ್‌ಗೆ (Rukmini Vasanth) ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಅರಸಿ ಬರುತ್ತಿದೆ.

    ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ತೆಲುಗು ವರ್ಷನ್ ಟಾಲಿವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ರುಕ್ಮಿಣಿ ನಟಿಸಿದ ಪುಟ್ಟಿ ಪಾತ್ರ ತೆಲುಗು ಮಂದಿಗೆ ಮೋಡಿ ಮಾಡಿದೆ. ಹಾಗಾಗಿಯೇ ತೆಲುಗಿನಲ್ಲಿ ಕನ್ನಡದ ಬೆಡಗಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ:ಇಡೀ ಜಗತ್ತು ರಾಮಮಂದಿರದಲ್ಲಿ ‘ಪ್ರಾಣ ಪ್ರತಿಷ್ಠೆ’ ನೋಡಲು ಕಾಯುತ್ತಿದೆ- ಶಂಕರ್ ಮಹಾದೇವನ್

    ವಿಜಯ್ ದೇವರಕೊಂಡ (Vijay Devarakonda) ನಟನೆಯ ಮುಂದಿನ ಚಿತ್ರದಲ್ಲಿ ನಟಿಸುವ ಅವಕಾಶ ರುಕ್ಮಿಣಿಗೆ ಸಿಕ್ಕಿದೆ ಎನ್ನಲಾಗಿತ್ತು. ಈ ಸುದ್ದಿ ಬೆನ್ನಲ್ಲೇ ತೆಲುಗಿನ ಮತ್ತೊಬ್ಬ ಸ್ಟಾರ್ ರವಿತೇಜಾ (Ravi Teja)  ಜೊತೆ ರುಕ್ಮಿಣಿ ನಟಿಸುತ್ತಾರೆ. ಈ ಚಿತ್ರದ ಬಗ್ಗೆ ಮಾತುಕತೆ ಆಗಿದೆ ಎನ್ನಲಾಗುತ್ತಿದೆ.

    ರವಿತೇಜಾ (Ravi Reja) ನಟನೆಯ ಮುಂಬರುವ ಹೊಸ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗಿರುವ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಚಿತ್ರಕ್ಕೆ ನಟಿ ಸಹಿ ಮಾಡಿದ್ದಾರೆ ಎನ್ನುವ ಚರ್ಚೆ ಆಗುತ್ತಿದೆ. ಅನುದೀಪ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಜನವರಿ 26ಕ್ಕೆ ಅಧಿಕೃತವಾಗಿ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಸುದ್ದಿಗೆ ಸದ್ಯದಲ್ಲೇ ಅಧಿಕೃತ ಅಪ್‌ಡೇಟ್ ಸಿಗಲಿದೆ.

    ರಶ್ಮಿಕಾ ಮಂದಣ್ಣ, ಶ್ರೀಲೀಲಾ ಹವಾ ಇರೋ ಟೈಮ್‌ನಲ್ಲಿಯೇ ರುಕ್ಮಿಣಿಗೆ ಬಂಪರ್ ಅವಕಾಶಗಳು ಸಿಗುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಮೊದಲೇ ತೆಲುಗಿನಲ್ಲಿ ಕನ್ನಡತಿರಿಗೆ ಡಿಮ್ಯಾಂಡ್ ಜಾಸ್ತಿ ಹಾಗಾಗಿ ರುಕ್ಮಿಣಿ ನಂಬರ್ ಒನ್ ನಟಿಯಾಗಿ ನಿಲ್ಲೋದ್ರಲ್ಲಿ ಅನುಮಾನವೇ ಇಲ್ಲ ಅಂತಿದ್ದಾರೆ ನೆಟ್ಟಿಗರು.

  • ‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

    ‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

    ಮಾಸ ಮಹಾರಾಜ ರವಿತೇಜ ನಟನೆಯ ‘ಟೈಗರ್ ನಾಗೇಶ್ವರ್ ರಾವ್’ (Tiger Nageshwara Rao) ಟೀಸರ್ ರಿಲೀಸ್ ಆಗಿದೆ. ನಯಾ ಲುಕ್‌ನಲ್ಲಿ ಧಮಾಕ (Dhamaka) ಹೀರೋ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ರಿಲೀಸ್ ಆಗಿದೆ. ಇದನ್ನೂ ಓದಿ:ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್

    ರವಿತೇಜ ನಟನೆಯ ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮದ್ರಾಸ್ ಸೆಂಟರ್ ಜೈಲಿನಿಂದ ಎಸ್ಕೇಪ್ ಆಗಿರುವ ಸ್ಟುವರ್ಟ್ ಪುರಂ ಕಳ್ಳನಿಗಾಗಿ ಹುಡುಗಾಟ ನಡೆಸುತ್ತಿರುವ ದೃಶ್ಯಗಳ ಮೂಲಕ ಟೀಸರ್ ತೆರೆದುಕೊಳ್ಳುತ್ತದೆ. ಮುರಳಿ ಶರ್ಮಾ- ಅನುಪಮ್ ಖೇರ್ (Anupam Kher) ಗುಪ್ತಚರ ಇಲಾಖೆಯ ಅಧಿಕಾರಿಗಳಾಗಿ ನಟಿಸಿದ್ದಾರೆ. ನಾಗೇಶ್ವರ್ ರಾವ್ ಕುಖ್ಯಾತ ಕಳ್ಳ ಯಾಕೆ ಆಗ್ತಾನೆ ಅನ್ನೋದನ್ನು ಮುರಳಿ ಶರ್ಮಾ ವಿವರಿಸ್ತಾರೆ. ಸಖತ್ ಮಾಸ್ ಅವತಾರದಲ್ಲಿ ರವಿತೇಜ ದರ್ಶನ ಕೊಟ್ಟಿದ್ದಾರೆ. ಹಿಂದಿನ ಸಿನಿಮಾಗಳಿಂತ ಈ ಚಿತ್ರದಲ್ಲಿ ಮಾಸ್ ಮಹಾರಾಜ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.

    70ರ ಕಾಲಘಟ್ಟದ ಹೈದ್ರಾಬಾದ್‌ನ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ (Nupur Sanon) ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

    ದಸರಾ ಹಬ್ಬಕ್ಕೆ ‘ಟೈಗರ್ ನಾಗೇಶ್ವರ್ ರಾವ್’ ಬಾಕ್ಸಾಫೀಸ್ ಬೇಟೆಗಿಳಿಯಲಿದ್ದು, ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲಾಗ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರವಿತೇಜ ನಟನೆಯ `ಟೈಗರ್ ನಾಗೇಶ್ವರ್ ರಾವ್’ ರಿಲೀಸ್ ಡೇಟ್ ಫಿಕ್ಸ್

    ರವಿತೇಜ ನಟನೆಯ `ಟೈಗರ್ ನಾಗೇಶ್ವರ್ ರಾವ್’ ರಿಲೀಸ್ ಡೇಟ್ ಫಿಕ್ಸ್

    ʻಧಮಾಕʼ (Dhamaka) ಚಿತ್ರದ ಸಕ್ಸಸ್ ಬಳಿಕ ತೆಲುಗು (Telagu) ಚಿತ್ರರಂಗದ ಮಾಸ್ ಮಹಾರಾಜ ರವಿತೇಜ (Raviteja)  ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ `ಟೈಗರ್ ನಾಗೇಶ್ವರ್ ರಾವ್’ ಬಿಡುಗಡೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬಕ್ಕೆ Tiger Nageswara Rao ಬಾಕ್ಸಾಫೀಸ್ ಬೇಟೆಗಿಳಿದಿದ್ದಾನೆ. ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ವೇಳೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

     

    View this post on Instagram

     

    A post shared by RAVI TEJA (@raviteja_2628)

    ವಂಶಿ ನಿರ್ದೇಶನದಲ್ಲಿ ತಯಾರಾಗಿರುವ `ಟೈಗರ್ ನಾಗೇಶ್ವರ್ ರಾವ್’ ಸಿನಿಮಾವನ್ನು ಕಾಶ್ಮೀರಿ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ಅವರು `ಅರ್ಗವಾಲ್ ಆರ್ಟ್ಸ್’ ನಡಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಸಿನಿಮಾ ಮೂಡಿಬಂದಿದ್ದು, ಅದಕ್ಕಾಗಿ ಐದು ಎಕರೆ ಜಾಗದಲ್ಲಿ ಹಳ್ಳಿಯೊಂದನ್ನು ರೀ ಕ್ರಿಯೇಟ್ ಮಾಡಿ ಕೋಟ್ಯಂತರ ರೂಪಾಯಿ ಬಜೆಟ್ ನಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ.

     

    View this post on Instagram

     

    A post shared by RAVI TEJA (@raviteja_2628)

    70ರ ಕಾಲಘಟ್ಟದ ಹೈದ್ರಾಬಾದ್‌ ಸ್ಟುವರ್ಟ್‌ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ರವಿತೇಜ ಗೆಟಪ್, ಬಾಡಿ ಲಾಂಗ್ವೇಜ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್. ಮಧಿ- ಛಾಯಾಗ್ರಹಣ, ಶ್ರೀಕಾಂತ್ ವೀಸಾ- ಸಂಭಾಷಣೆ, ವಿ ಪ್ರಕಾಶ್ ಕುಮಾರ್- ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

  • `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    `ಕಿಸ್’ ಮತ್ತು `ಭರಾಟೆ’ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದ ಸುಂದರಿ ಶ್ರೀಲೀಲಾ, ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ (Rashmika Mandanna) ನಂತರ ಶ್ರೀಲೀಲಾಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇತ್ತೀಚೆಗೆ ಧಮಾಕ ಪ್ರಚಾರ ಕಾರ್ಯದಲ್ಲಿ `ಕಾಂತಾರ’ (Kantara) ನಮ್ಮ ಕನ್ನಡದ ಹೆಮ್ಮೆ ಎಂದು ನಟಿ ಶ್ರೀಲೀಲಾ (Sreeleela) ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

    ಕನ್ನಡದ ನಟಿ ಶ್ರೀಲೀಲಾ ಈಗ ಸೌತ್ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ತೆಲುಗಿನಲ್ಲಿ ಮಿಂಚ್ತಾ ಇದ್ದರು. ಕನ್ನಡ ಚಿತ್ರರಂಗದ ಮೇಲೆ ಅಗಾಧವಾದ ಪ್ರೀತಿಯನ್ನ ಹೊಂದಿದ್ದಾರೆ. ಸದ್ಯ ರವಿತೇಜಾ ಮತ್ತು ಶ್ರೀಲೀಲಾ ನಟನೆಯ `ಧಮಾಕ’ (Dhamaka)ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಶ್ರೀಲೀಲಾಗೆ ಕನ್ನಡ ಸಿನಿಮಾರಂಗದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿದೆ. `ಕಾಂತಾರ’ ಸಿನಿಮಾ ಬಗ್ಗೆಯೂ ಕೇಳಲಾಗಿದೆ. ಇದನ್ನೂ ಓದಿ: ಫಿಶ್ ತಿನ್ನುವ ಭರದಲ್ಲಿ ʻಸಾನ್ಯ ಅಂದ್ರೆ ಯಾರುʼ ಎಂದ ರೂಪೇಶ್‌ ಶೆಟ್ಟಿ

    ನಾನು `ಕಾಂತಾರ’ ಸಿನಿಮಾ ನೋಡಿದ್ದೇನೆ. ಚಿತ್ರ ಅದ್ಭುತವಾಗಿದೆ. ನಾನು ಕರ್ನಾಟಕದವಳು(Karnataka). ಕನ್ನಡ ಚಿತ್ರರಂಗದ ವ್ಯಾಪ್ತಿ ಹೆಚ್ಚುತ್ತಿರುವ ಬಗ್ಗೆ ತುಂಬಾ ಹೆಮ್ಮೆ ಇದೆ. ಕಾಂತಾರ ನಮ್ಮ ಕನ್ನಡದ ಹೆಮ್ಮೆ ಎಂದು ಈ ವೇಳೆ ಶ್ರೀಲೀಲಾ ಮಾತನಾಡಿದ್ದಾರೆ. ನಟಿ ಆಡಿರುವ ಮಾತು ಇದೀಗ ಕನ್ನಡಿಗರ ಮನಗೆದ್ದಿದೆ. ರಶ್ಮಿಕಾ ಮಾಡಿದ ತಪ್ಪನ್ನ ಮಾಡದೇ, ಕನ್ನಡ ಚಿತ್ರರಂಗದ ಬಗ್ಗೆ ಶ್ರೀಲೀಲಾ ಹೆಮ್ಮೆಯಿಂದ ಮಾತನಾಡಿದ್ದಕ್ಕೆ ಕನ್ನಡಿಗರು ದಿಲ್‌ಖುಷ್ ಆಗಿದ್ದಾರೆ.

    `ಪೆಳ್ಳಿ ಸಂದಡಿ’ ಮತ್ತು `ಧಮಾಕ’ ನಂತರ ತೆಲುಗಿನ ಸಾಕಷ್ಟು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]