Tag: ರವಿಕೆ ಪ್ರಸಂಗ

  • ರವಿಕೆ ಪ್ರಸಂಗ: ನಿರ್ದೇಶಕ ಸಂತೋಷ್ ಕೊಡಂಕೇರಿ ಕಂಡಂತೆ

    ರವಿಕೆ ಪ್ರಸಂಗ: ನಿರ್ದೇಶಕ ಸಂತೋಷ್ ಕೊಡಂಕೇರಿ ಕಂಡಂತೆ

    ಸಾಕಷ್ಟು ಮಂದಿ ದೊಡ್ಡ ಬಜೆಟ್ಟಿನ ಹಿಟ್ ಸಿನಿಮಾಗಳು ಬಂದರಷ್ಟೇ ಚಿತ್ರರಂಗ ಉದ್ಧಾರವಾಗುತ್ತದೆ ಅಂದುಕೊಂಡಿರುತ್ತಾರೆ. ಆದರೆ, ಅಂಥಾದ್ದರ ನಡುವೆಯೂ ಹೊಸಾ ಪ್ರಯತ್ನಗಳು ದೃಷ್ಯರೂಪ ಧರಿಸಿ ಗೆಲ್ಲುವುದೊಂದೇ ಸಿನಿಮಾ ರಂಗದ ಜೀವಂತಿಕೆಯ ಲಕ್ಷಣ ಎಂಬುದು ಸಾರ್ವಕಾಲಿಕ ಸತ್ಯ. ಸದ್ಯದ ಮಟ್ಟಿಗೆ ಸಂತೋಷ್ ಕೊಡಂಕೇರಿ  (Santosh Kodankeri)ನಿರ್ದೇಶನದ `ರವಿಕೆ ಪ್ರಸಂಗ’ (Ravike Prasanga) ಅಂಥಾದ್ದೊಂದು ಅಪೇಕ್ಷಿತ ಬೆಳವಣಿಗೆಯ ಭಾಗವಾಗಿ ಕಾಣಿಸುತ್ತದೆ. ಇದೇ ಫೆಬ್ರವರಿ 16ರಂದು ತೆರೆಗಾಣಲಿರುವ ಈ ಚಿತ್ರ ಎಲ್ಲರ ಬದುಕಿಗೂ ತೀರಾ ಹತ್ತಿರದ ನಂಟು ಹೊಂದಿರುವ ಸೂಕ್ಷ್ಮ ಕಥಾನಕವನ್ನೊಳಗೊಂಡಿದೆ.

    ರವಿಕೆಯ ಸುತ್ತ ಘಟಿಸೋ ಕಥೆಯನ್ನು ಎಲ್ಲಿಯೂ ಬೋರು ಹೊಡೆಸದಂತೆ, ಮನೋರಂಜನೆಗೆ ಕೊರತೆಯಾಗದೆ, ಭಾವ ಸೂಕ್ಷಕ್ಕೂ ಧಕ್ಕೆಯಾಗದಂತೆ ಕಟ್ಟಿ ಕೊಡುವುದೇ ಒಂದು ಸಾಹಸ. ಅದನ್ನು ಇಷ್ಟೂ ವರ್ಷಗಳ ಅನುಭವವನ್ನು ಧಾರೆಯೆರೆದು ಸಂತೋಷ್ ಕೊಡಂಕೇರಿ ಸಮರ್ಥವಾಗಿ ಮಾಡಿ ಮುಗಿಸಿದ್ದಾರೆ. ತಮ್ಮ ಮಡದಿ ಪಾವನಾ ಸಂತೋಷ್ ಬರೆದ ಕಥೆ ನೋಡಿದಾಕ್ಷಣವೇ ಅದಕ್ಕೆ ದೃಷ್ಯ ರೂಪ ನೀಡುವ ನಿರ್ಧಾರ ಮಾಡಿದ್ದವರು ಸಂತೋಷ್. ಆ ಯಾನವೇನೂ ಸಾಧಾರಣದ್ದಾಗಿರಲಿಲ್ಲ. ಆದರೆ, ಅದನ್ನು ಸಮರ್ಥವಾದ ತಂಡ, ಪ್ರತಿಭಾನ್ವಿತ ಕಲಾವಿದರು ಮತ್ತು ತಂತ್ರಜ್ಞರ ಬೆಂಬಲದೊಂದಿಗೆ ಪೂರ್ಣಗೊಳಿಸಿದ ತುಂಬು ತೃಪ್ತಿ ಸಂತೋಷ್ ರಲ್ಲಿದೆ.

    ಹೀಗೆ ಭಿನ್ನ ರವಿಕೆ ಪ್ರಸಂಗದಂಥಾ ಭಿನ್ನ ಕಥೆಗೆ ದೃಷ್ಯ ರೂಪ ನೀಡಿರುವ ಸಂತೋಷ್ ಕೊಡಂಕೇರಿಯವರದ್ದು ಕ್ರಿಯಾಶೀಲ ಕ್ಷೇತ್ರದಲ್ಲಿ ಹದಿನಾರು ವರ್ಷಗಳ ಅನುಭವ. ನೂರಕ್ಕೂ ಹೆಚ್ಚು ಕಾರ್ಪೊರೇಟ್ ಜಾಹೀರಾತು ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ಅವರು ಒಂದಷ್ಟು ಪ್ರಯೋಗಾತ್ಮಕ ಸಾಹಸಗಳನ್ನು ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. 2016ರಲ್ಲಿ ಹೋಂ ಸ್ಟೇ ಅಂತೊಂದು ಸಿನಿಮಾ ನಿರ್ದೇಶನ ಮಾಡಿದ್ದ ಸಂತೋಷ್, ಅದನ್ನು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ರೂಪಸಿ ಗೆದ್ದಿದ್ದರು. ಆ ನಂತರ ದಿಗಿಲ್ ಎಂಬ ತಮಿಳು ಚಿತ್ರವನ್ನೂ ಕೂಡಾ ನಿರ್ದೇಶನ ಮಾಡಿದ್ದರು. ಕೊರೋನಾ ಕಾಲದಲ್ಲಿ ಮತ್ತೊಂದು ಸಾಹಸಕ್ಕೆ ಒಡ್ಡಿಕೊಂಡಿದ್ದ ಸಂತೋಷ್, ಒಂದೂರಲ್ಲಿ ಒಬ್ಬ ರಾಜ ಇದ್ದ ಎಂಬ ಏಕವೈಕ್ತಿ ಪ್ರದರ್ಶನದ ಸಿನಿಮಾ ರೂಪಿಸಿದ್ದರು. ರವೀಂದ್ರನಾಥ ಟ್ಯಾಗೋರ್ ರಚಿಸಿದ್ದ ಆ ಕೃತಿಯನ್ನು ಯಶಸ್ವಿಯಾಗಿ ದೃಷ್ಯರೂಪಕ್ಕಿಳಿಸಿದ್ದರು. ಆ ಚಿತ್ರದಲ್ಲಿ ಓರ್ವ ಕಲಾವಿದ ಇಪ್ಪತ್ನಾಲಕ್ಕು ಪಾತ್ರಗಳನ್ನು ನಿರ್ವಹಿಸುವ ಮೂಲಕ ಆ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲಾಗಿತ್ತು. ಆ ನಂತರದಲ್ಲಿ ತಮ್ಮ ಮೂಲ ವೃತ್ತಿಯತ್ತ ಹೊರಳಿಕೊಂಡಿದ್ದರೂ ಸಿನಿಮಾ ಧ್ಯಾನದಲ್ಲಿದ್ದ ಅವರ ಪಾಲಿಗೆ ಗುಂಗಿನಂತೆ ತಲೆಗೇರಿಕೊಂಡು ಕಾಡಿದ್ದ ರವಿಕೆ ಪ್ರಸಂಗ.

    ಇದು ಬರೀ ಹೆಂಗಳೆಯರಿಗೆ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ಹತ್ತಿರಾಗುವ, ಸಿನಿಮಾ ನೋಡಿ ಹೊರ ಬಂದ ಮೇಲೂ ಕಾಡುವ ಗುಣಗಳನ್ನು ಒಳಗೊಂಡಿರುವ ಚಿತ್ರವೆಂಬುದು ಸಂತೋಷ್ ರ ಸ್ಪಷ್ಟನೆ. ರವಿಕೆ ಎಂಬುದು ನಮ್ಮ ಸಂಸ್ಕಂತಿಯೂ ಸೇರಿದಂತೆ ಒಟ್ಟಾರೆ ಭಾರತೀಯರ ಭಾವಕೋಶದಲ್ಲೊಂದು ಭಿನ್ನವಾದ ಸ್ಥಾನ ಗಿಟ್ಟಿಸಿಕೊಂಡಿದೆ. ಆದರೆ, ಓರ್ವ ಹೆಣ್ಣಿಗೆ ರವಿಕೆಯೆಂಬೋ ಮಾಯೆ ಬೇರೆಯದ್ದೇ ರೀತಿಯಲ್ಲಿ ಬದುಕಿನ ಪ್ರತೀ ಘಟ್ಟದಲ್ಲಿಯೂ ಎದುರುಗೊಳ್ಳುತ್ತೆ. ಅದಕ್ಕೆ ತನ್ನ ಚಹರೆಗನುಗುಣವಾಗಿ ಬೆಸೆಯೋ ಗುಣವೂ ಇದೆ. ಆ ಕ್ಷಣಕ್ಕೆ ನಿರಾಸೆಗೆ ತಳ್ಳಿ, ಸಿಟ್ಟು ಉಕ್ಕಿಸಿ ಮತ್ತೇನೋ ನಿರ್ಧಾರ ಕೈಗೊಳ್ಳುವಂತೆ ಮಾಡೋ ಶಕ್ತಿಯೂ ಇದೆ. ಅಂಥಾದ್ದೇನಿದೆ ಅನ್ನೋ ಕುತೂಹಲ ತಣಿಯಲು ಇನ್ನೊಂದು ವಾರವಷ್ಟೇ ಬಾಕಿ ಉಳಿದುಕೊಂಡಿದೆಯಷ್ಟೇ.

     

    ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಮೂಲಕ ದೊಡ್ಡ ಮಟ್ಟದ ಗೆಲುವು ದಾಖಲಿಸಲಿದೆ ಎಂಬ ನಂಬಿಕೆ ಸಂತೋಷ್ ಮತ್ತು ಚಿತ್ರತಂಡದಲ್ಲಿದೆ. ಸದ್ಯದ ವಾತಾವರಣ ಅದಕ್ಕೆ ಪೂರಕವಾಗಿಯೂ ಇದೆ. ಇಂಥಾ ಭಿನ್ನ ಬಗೆಯ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸಿದರೆ ಚಿತ್ರರಂಗಕ್ಕೆ ಮತ್ತಷ್ಟು ಶಕ್ತಿಯಂತೂ ಸಿಕ್ಕೇ ಸಿಗುತ್ತದೆ. ಅದು ರವಿಕೆ ಪ್ರಸಂಗದ ಮೂಲಕ ಸಾಧ್ಯವಾಗಲಿದೆ ಎಂಬ ನಂಬಿಕೆ ಸಂತೋಷ್ ರದ್ದು. ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ  ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನವಿದೆ. ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ.

  • ‘ರವಿಕೆ ಪ್ರಸಂಗ’ದಲ್ಲಿದೆ ಸಂಕೀರ್ಣ ಕಥೆ: ನಟಿ ಗೀತಾ ಭಾರತಿ ಭಟ್ ಮಾತು

    ‘ರವಿಕೆ ಪ್ರಸಂಗ’ದಲ್ಲಿದೆ ಸಂಕೀರ್ಣ ಕಥೆ: ನಟಿ ಗೀತಾ ಭಾರತಿ ಭಟ್ ಮಾತು

    ಸಂತೋಷ್ ಕೊಡಂಕೇರಿ ನಿರ್ದೇಶನದ `ರವಿಕೆ ಪ್ರಸಂಗ’ (Ravike Prasanga) ಇದೇ ತಿಂಗಳ 16ರಂದು ತೆರೆಗಾಣುತ್ತಿದೆ. ಇದೀಗ ಚಿತ್ರತಂಡ ಅತ್ಯಂತ ಕ್ರಿಯಾಶೀಲವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಹಂತದಲ್ಲಿ ಹೊರಬೀಳುತ್ತಿರುವ ಒಂದಷ್ಟು ವಿಚಾರಗಳು ರವಿಕೆ ಪ್ರಸಂಗದತ್ತ ಪ್ರೇಕ್ಷಕರು ತೀವ್ರವಾಗಿ ಕುತೂಹಲಗೊಳ್ಳುವಂತೆ ಮಾಡುತ್ತಿದೆ. ಈ ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ಗೀತಾ ಭಾರತಿ ಭಟ್ ನಿರ್ವಹಿಸಿದ್ದಾರೆ. ಬ್ರಹ್ಮಗಂಟು ಎಂಬ ಧಾರಾವಾಹಿಯಿಂದ ಪ್ರಸಿದ್ಧಿ ಪಡೆದುಕೊಂಡಿದ್ದ ಗೀತಾ, ರವಿಕೆ ಪ್ರಸಂಗದ ಮೂಲಕವೇ ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾರೆ.

    ಗೀತಾ ಭಾರತೀ ಭಟ್ ಅವರ ಛಲಗಾರಿಕೆ, ಜೀವನ ಪ್ರೀತಿ ಈಗಾಗಲೇ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಬ್ರಹ್ಮಗಂಟು ಸೀರಿಯಲ್ಲಿನ ಸಂದರ್ಭದಲ್ಲಿಯೇ ಆಕೆ ಪ್ರತಿಭಾನ್ವಿತ ನಟಿಯಾಗಿ ಹೊರಹೊಮ್ಮಿದ್ದರು. ಇಂಥಾ ಗೀತಾ ಆ ನಂತರದಲ್ಲಿಯೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಖುದ್ದು ಅವರೇ ಖುಷಿಗೊಂಡು ನಾಯಕಿಯಾಗಿ ನಟಿಸಿರುವ ಚಿತ್ರ `ರವಿಕೆ ಪ್ರಸಂಗ’. ವಿಶೇಷವೆಂದರೆ, ನಿರ್ದೇಶಕ ಸಂತೋಷ್ ಕೊಡಂಕೇರಿ ಅವರ ಮಡದಿ ಪಾವನಾ ಸಂತೋಷ್ ಆ ಕಥೆ ಬರೆಯುವಾಗಲೇ ಮುಖ್ಯ ಪಾತ್ರಕ್ಕಗಿ ಅವರ ಮನಸಲ್ಲಿದ್ದದ್ದು ಇದೇ ಗೀತಾ ಭಾರತಿ ಭಟ್.

    ಯಾವ ಕಲಾವಿದರ ಪಾಲಿಗಾದರೂ ತನಗೆಂದೇ ಪಾತ್ರ ಸೃಷ್ಟಿಯಾಗೋದು ಜೀವಮಾನವೆಲ್ಲ ಸ್ಮರಣೆಯಲ್ಲಿರುವ ವಿಚಾರ. ಅಂಥಾದ್ದೊಂದು ಖುಷಿ ಗೀತಾಗೆ ಸಿಕ್ಕಿದೆ. ಆರಂಭಿಕವಾಗಿ ಪಾವನಾ ಈ ಕಥೆ ಹೇಳಿದಾಗ, ತನ್ನ ಪಾತ್ರದ ಚಹರೆಗಳ ಬಗ್ಗೆ ತಿಳಿಸಿದಾಗಲೇ ಗೀತಾ ತಮ್ಮ ಪಾತ್ರದ ಬಗ್ಗೆ ಮೋಹಗೊಂಡಿದ್ದರಂತೆ. ಯಾಕೆಂದರೆ, ಪ್ರತೀ ಹೆಣ್ಣುಮಕ್ಕಳಿಗೂ ನೇರಾನೇರ ಕಾಡುವಂತೆ ಈ ಕಥೆ ರೂಪುಗೊಂಡಿದೆ ಎಂಬುದು ಗೀತಾ ಮಾತು. ರವಿಕೆ ಪ್ರಸಂಗ ಅಂದಾಕ್ಷಣವೇ ಕೆಲ ಮಂದಿಯ ಚಿತ್ತ ಎತ್ತೆತ್ತಲೋ ಹರಿದಾಡಬಹುದು. ಯಾಕೆಂದರೆ, ರವಿಕೆಯ ಸುತ್ತಾ ಅಂಥಾ ನೆಗೆಟಿವ್ ಶೇಡಿನ ಕಣ್ಣುಗಳು ಪಹರೆ ಕಾಯುತ್ತಿರುತ್ತವೆ.

    ಆದರೆ, ಇದು ಭಾವುಕ ಜಗತ್ತಿನ ಒಳಗಣ್ಣಿಗೆ ನಿಲುಕುವ ಸೂಕ್ಷ್ಮ ಕಥೆ ಅನ್ನೋದರ ಸುಳಿವು ಟ್ರೈಲರ್ ಮೂಲಕ ಈಗಾಗಲೇ ಸಿಕ್ಕಿಬಿಟ್ಟಿದೆ. ಅದರಲ್ಲಿಯೇ ಗೀತಾ ಪಾತ್ರವೂ ಪ್ರೇಕ್ಷಕರೆದುರು ತೆರೆದುಕೊಂಡಿದೆ. ಸಾಮಾನ್ಯವಾಗಿ ಎಲ್ಲ ನಟ ನಟಿಯರಿಗೂ ಕೂಡಾ ಜೀವಮಾನದಲ್ಲಿ ಇಂಥಾದ್ದೊಂದು ಪಾತ್ರ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ, ಗೀತಾ ಪಾಲಿಗೆ ಅಂಥಾದ್ದೊಂದು ಅವಕಾಶ ತಾನೇ ತಾನಾಗಿ ಹುಡುಕಿಕೊಂಡು ಬಂದಿದೆ. ಈ ಸಿನಿಮಾದ ಮೂಲಕವೇ ತನ್ನ ವೃತ್ತಿಬದುಕಿಗೆ ಮತ್ತಷ್ಟು ಆವೇಗ ಸಿಗುತ್ತದೆಂಬ ನಿರೀಕ್ಷೆ, ಈ ಸಿನಿಮಾ ಸಮಸ್ತ ಪ್ರೇಕ್ಷಕರಿಗೂ ಇಷ್ಟವಾಗಿ ಗೆಲ್ಲುತ್ತದೆಂಬ ಗಾಢ ನಂಬಿಕೆ ಗೀತಾರದ್ದು.

     

    ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ  ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನ ವಿರುವ ರವಿಕೆ ಪ್ರಸಂಗಕ್ಕೆ ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

  • ‘ರವಿಕೆ ಪ್ರಸಂಗ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಸಕ್ಸಸ್

    ‘ರವಿಕೆ ಪ್ರಸಂಗ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ಸಕ್ಸಸ್

    ವಿಭಿನ್ನ ಕಥಾಹಂದರ ಹೊಂದಿರುವ ರವಿಕೆ ಪ್ರಸಂಗ ಚಿತ್ರ ಫೆಬ್ರವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಇವೆಂಟನ್ನು ಕನಕಪುರ ರಸ್ತೆಯ ಫೋರಮ್ ಮಾಲ್ ನಲ್ಲಿ ಆಯೋಜಿಸಿತ್ತು. ಸಾವಿರಾರು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅಲ್ಲಿಗೆ ಬಂದಿದ್ದ ಜನರೆಲ್ಲರೂ ರವಿಕೆ ಪ್ರಸಂಗ ಚಿತ್ರದ ಪೋಸ್ಟರ್ ಹಿಡಿದು ಶುಭಕೋರಿದರು. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಅವರು, ಕಥೆಗಾರ್ತಿ ಮತ್ತು ಸಂಭಾಷಣಾಗಾರ್ತಿ ಪಾವನ ಸಂತೋಷ್, ಚಿತ್ರದ ನಾಯಕಿಯಾದ ಗೀತಾಭಾರತಿ ಭಟ್, ಪದ್ಮಜಾರಾವ್, ಜೊತೆಗೆ ಪೋಷಕ ಕಲಾವಿದರು, ಚಿತ್ರದ ಸಂಕಲನಾಕಾರರಾದ ರಘು ಉಪಸ್ಥಿತರಿದ್ದರು.

    ಬಹಳ‌ಮುಖ್ಯವಾಗಿ ಗೀತಾಭಾರತಿ ಭಟ್ ಅವರು ಅಲ್ಲಿದ್ದ ನೂರಾರು ಜನರೊಂದಿಗೆ ರವಿಕೆ ಪ್ರಸಂಗ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಬಹಳ ವಿಶೇಷವಾಗಿ ಸ್ಟೇಜ್ ಮೇಲೆ ಕರ್ನಾಟಕದ ಬೆಸ್ಟ್ ಟೈಲರ್ ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡಲಾಯಿತು.‌ ಬೆಸ್ಟ್ ಟೈಲರನ್ನು ಗುರುತಿಸಿ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ವಿಜೇತರಾದವರಿಗೆ, ಹೊಲಿಗೆ ಯಂತ್ರ, ಮೊಬೈಲ್ ಫೋನ್ ಹಾಗೂ ಸಿನಿಮಾ ಟಿಕೆಟ್ ನೀಡಲಾಗುವುದು.

    ಬಹಳ ಮುಖ್ಯವಾಗಿ ರಾಜ್ಯದ್ಯಾಂತ 7ಸಾವಿರಕ್ಕೂ ಹೆಚ್ಚಿನ ಆಟೋ ಪಬ್ಲಿಸಿಟಿ ಮಾಡುತ್ತಿರುವ ರವಿಕೆಪ್ರಸಂಗ ಚಿತ್ರತಂಡ ಆಟೋ ಡ್ರೈವರ್ ಗಳೊಂದಿಗೆ ಒಂದಷ್ಟು ಸಿನಿಮಾದ ಬಗ್ಗೆ ಚರ್ಚಿಸಿ ಗೀತಾಭಾರತಿಭಟ್ ಅವರು ಅನೇಕ ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು. ಸಿನಿಮಾ ಕುರಿತು ಹಲವು ಗಣ್ಯರು ಈ ಸಂದರ್ಭದಲ್ಲಿ ಮಾತನಾಡಿದರು. ಜೊತೆಗೆ ಎಲ್ಲರನ್ನೂ ಗೌರವಿಸಲಾಯಿತು.

    ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದೆ. ಚಿತ್ರವೂ ವಿಶೇಷ ಕಥಾಹಂದರ ಹೊಂದಿದ್ದು, ಒಂದು ರವಿಕೆಗೆ ಹುಕ್ ಹೇಗೆ ಮುಖ್ಯವೋ ಹಾಗೇ  ಜೀವನದ ಕೆಲವು ಸಂಘರ್ಷಗಳು, ಸಂಬಂಧಗಳು   ಅತೀ ಮುಖ್ಯವಾಗುತ್ತವೆ. ರವಿಕೆಯ ಒಂದು ಸಣ್ಣ ವಿಚಾರ ನ್ಯಾಷನಲ್ ಇಶ್ಯೂ ಆಗುವತ್ತ ಹೋಗುವ ಮತ್ತು ಜೀವನದ ಮೌಲ್ಯಗಳ ಅರ್ಥವನ್ನು ರವಿಕೆ ಪ್ರಸಂಗ ಚಿತ್ರದ ಮೂಲಕ ನಿಮ್ಮ ಮುಂದೆ ಇಡಲಿದೆ.

     

    ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಾಳೆಯಿಂದ ಚಿತ್ರ ತಂಡ ಪ್ರೆಸ್ ಮೀಟ್ ಮಾಡಿ ಭರ್ಜರಿ ಪ್ರಚಾರ ಮಾಡಲಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಚಿತ್ರದ ಮೇಲಿರಲಿ ಎಂದು ಚಿತ್ರದ ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಅವರು ಹಾಗೂ ಇಡೀ ಚಿತ್ರತಂಡ ಕೋರಿದರು.

  • ‘ರವಿಕೆ ಪ್ರಸಂಗ’ಕ್ಕೆ ಸೆನ್ಸಾರ್: ಫೆಬ್ರವರಿ 16ಕ್ಕೆ ರಿಲೀಸ್

    ‘ರವಿಕೆ ಪ್ರಸಂಗ’ಕ್ಕೆ ಸೆನ್ಸಾರ್: ಫೆಬ್ರವರಿ 16ಕ್ಕೆ ರಿಲೀಸ್

    ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಡಿ ತಯಾರಾದ ಸಂತೋಷ್ ಕೊಡೆಂಕೇರಿ (Santhosh Kodenkeri) ನಿರ್ದೇಶನದ ರವಿಕೆ ಪ್ರಸಂಗ (Ravike Prasanga) ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ. ರವಿಕೆ ಪ್ರಸಂಗ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

    ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ  ‘ರವಿಕೆ ಪ್ರಸಂಗ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸ‌ರ್ ಮತ್ತು ಟ್ರೈಲರ್  ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ರವಿಕೆ ಪ್ರಸಂಗ ಸಿನಿಮಾದಲ್ಲಿ ಮಾಡಿದ್ದಾರೆ.

    ‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ (Geeta Bharti Bhatt)ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.

    ರವಿಕೆ ಪ್ರಸಂಗ ಸಿನಿಮಾವನ್ನು ಮಾಷ್೯ ಡಿಸ್ಟ್ರಿಬ್ಯುಟರ್ಸ್ ಸಂಸ್ಥೆ ವಿಶಾಲ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವಂತಹ ಕತೆಯನ್ನು ಈ ಸಿನಿಮಾ ಹೊಂದಿದೆ.

     

    ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣುಮಕ್ಕಳಿಗೆ ಬಹಳ ಇಷ್ಟ ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ ಸುಂದರವಾಗಿ ಬ್ಲೌಸ್ ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್‌ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ.  ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಫೆಬ್ರವರಿ 16 ರಂದು ರವಿಕೆಪ್ರಸಂಗ ರಾಜ್ಯಾದ್ಯಂತ ತೆರೆಕಾಣಲಿದೆ.

  • ‘ರವಿಕೆ ಪ್ರಸಂಗ’ಕ್ಕೆ ಸೆನ್ಸಾರ್: ಫೆಬ್ರವರಿ 16ಕ್ಕೆ ರಿಲೀಸ್

    ‘ರವಿಕೆ ಪ್ರಸಂಗ’ಕ್ಕೆ ಸೆನ್ಸಾರ್: ಫೆಬ್ರವರಿ 16ಕ್ಕೆ ರಿಲೀಸ್

    ತ್ತೊಂದು ಹೊಸ ತನದ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ದೃಷ್ಟಿ ಮೀಡಿಯಾ ಪ್ರೊಡಕ್ಷನ್ ನಡಿ ತಯಾರಾದ ಸಂತೋಷ್ ಕೊಡೆಂಕೇರಿ (Santhosh Kodenkeri) ನಿರ್ದೇಶನದ ರವಿಕೆ ಪ್ರಸಂಗ (Ravike Prasanga) ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು-ಎ ಸರ್ಟಿಫಿಕೇಟ್ ನೀಡಿದೆ.ರವಿಕೆ ಪ್ರಸಂಗ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು (Release) ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಫೆಬ್ರವರಿ 16 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

    ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್‌ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ  ‘ರವಿಕೆ ಪ್ರಸಂಗ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸ‌ರ್ ಮತ್ತು ಟ್ರೈಲರ್  ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತನವನ್ನು ನಿರ್ದೇಶಕರು ರವಿಕೆಪ್ರಸಂಗ ಸಿನಿಮಾದಲ್ಲಿ ಮಾಡಿದ್ದಾರೆ.

    ‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ (Geeta Bharati Bhatt) ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.

    ರವಿಕೆ ಪ್ರಸಂಗ ಸಿನಿಮಾವನ್ನು ಮಾಷ್೯ ಡಿಸ್ಟ್ರಿಬ್ಯುಟರ್ಸ್  ಸಂಸ್ಥೆ ವಿಶಾಲ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ ವಿದೇಶದಲ್ಲೂ ಸಿನಿಮಾ ಬಿಡುಗಡೆಗೊಳ್ಳಲಿದೆ. ಕುಟುಂಬ ಸಮೇತ ನೋಡಬೇಕಾದ ಸಿನಿಮಾ ಇದಾಗಿದೆ. ಪ್ರತಿಯೊಬ್ಬ ಮಹಿಳೆಯರ ಜೀವನದಲ್ಲಿ ನಡೆಯುವಂತಹ ಕತೆಯನ್ನು ಈ ಸಿನಿಮಾ ಹೊಂದಿದೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ

     

    ಸುಂದರವಾಗಿ ಬ್ಲೌಸ್  ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆಯ ಟೇಲರ್‌ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ. ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತಲು ಚಿತ್ರೀಕರಣ ನಡೆದಿದೆ.  ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಫೆಬ್ರವರಿ 16 ರಂದು ರವಿಕೆ ಪ್ರಸಂಗ ರಾಜ್ಯಾದ್ಯಂತ ತೆರೆಕಾಣಲಿದೆ.

  • ‘ರವಿಕೆ ಪ್ರಸಂಗ’ ಹಾಡು ರಿಲೀಸ್ ಮಾಡಿದ ಗುರುಕಿರಣ್

    ‘ರವಿಕೆ ಪ್ರಸಂಗ’ ಹಾಡು ರಿಲೀಸ್ ಮಾಡಿದ ಗುರುಕಿರಣ್

    ಮೆಲೋಡಿ ಹಾಡುಗಳು ಎಂದಿಗೂ ಜನರ‌ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳ ಗುಂಪಿಗೆ ‘ರವಿಕೆ ಪ್ರಸಂಗ’ (Ravike Parsanga) ಚಿತ್ರದ  ಮನಸಲಿ ಜೋರು ಕಲರವ ಎಂಬ ಅದ್ಭುತವಾದ  ಹಾಡು ಸೇರಿಕೊಂಡಿದೆ. ಈ ಮೆಲೋಡಿ ಹಾಡನ್ನು ನೂರಾರು ಎವರ್ ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಬಿಡುಗಡೆ‌ ಮಾಡಿದ್ದಾರೆ.

    ಈ ವರ್ಷದ ಅತ್ಯುತ್ತಮ ಮೆಲೋಡಿ ಹಾಡುಗಳ (Song) ಪಟ್ಟಿಯಲ್ಲಿ ಅಗ್ರಸ್ಥಾನ‌ ಪಡೆಯುವ ಎಲ್ಲಾ ಅಂಶಗಳನ್ನು ಹೊಂದಿರುವ ಈ ಹಾಡಿಗೆ ಕಿರಣ್ ಕಾವೇರಪ್ಪ ಅವರ ಸಾಹಿತ್ಯ, ಮಾನಸ ಹೊಳ್ಳ ಅವರ ಮಧುರವಾದ ಧ್ವನಿ ಹಾಗೂ ವಿನಯ್ ಶರ್ಮಾ ಅವರ ಇಂಪಾದ ಸಂಗೀತ ಇದೆ.

    ಸಂತೋಷ್ ಕೊಡಂಕೇರಿ ಅವರ ಚಿತ್ರಕಥೆ-ನಿರ್ದೇಶನದಲ್ಲಿ, ಪಾವನ ಸಂತೋಷ್ ಅವರ ಕಥೆ-ಸಂಭಾಷಣೆ ಇರುವ ಈ ಚಿತ್ರವನ್ನು ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿಲಾಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಬಿಡುಗಡೆಯ ಹೊಸ್ತಿಲಲ್ಲಿ ಜನರನ್ನು ರಂಜಿಸಲಿದೆ.

    ಗೀತಾ ಭಾರತಿ ಭಟ್ (Geeta Bharti Bhatt), ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಕೃಷ್ಣಮೂರ್ತಿ ಕವತಾರ್, ಪದ್ಮಜಾ ರಾವ್, ರಘು ಪಾಂಡೇಶ್ವರ್, ಪ್ರವೀಣ್ ಅಥರ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ‘ರವಿಕೆ’ ಹೆಸರಿನಲ್ಲೊಂದು ಸಾಂಗ್ : ಇದು ರವಿಕೆ ಪ್ರಸಂಗ

    ‘ರವಿಕೆ’ ಹೆಸರಿನಲ್ಲೊಂದು ಸಾಂಗ್ : ಇದು ರವಿಕೆ ಪ್ರಸಂಗ

    ಹೆಣ್ಣುಮಕ್ಕಳು ನಿತ್ಯ ಧರಿಸುವ ಸೀರೆ, ಓಲೆ, ಬಳೆ, ಗೆಜ್ಜೆ ಮುಂತಾದವುಗಳ ಬಗ್ಗೆ ಹಾಡು ಬಂದಿದೆ. ಆದರೆ ರವಿಕೆ ಬಗ್ಗೆ ಈವರೆಗೂ ಯಾವುದೇ ಹಾಡು ಬಂದಿಲ್ಲ. ರವಿಕೆಯ ಬಗೆಗಿನ ಹಾಡು ರವಿಕೆ ಕುರಿತಾಗಿಯೇ ನಿರ್ಮಾಣವಾಗಿರುವ ‘ರವಿಕೆ ಪ್ರಸಂಗ’ ಚಿತ್ರದಲ್ಲಿದೆ. ಈ ಚಿತ್ರಕ್ಕಾಗಿ ಕಿರಣ್ ಕಾವೇರಪ್ಪ ಅವರು ಬರೆದಿರುವ ‘ರವಿ, ರವಿ, ರವಿಕೆ ಪ್ರಸಂಗ’ ಎಂಬ ಟೈಟಲ್ ಬಿಡುಗಡೆಯಾಗಿದೆ. ಈ ಹಾಡಿಗೆ ವಿನಯ್ ಶರ್ಮ ಸಂಗೀತ ನೀಡಿದ್ದು, ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಅವರು ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಹಾಡಿನ ಕುರಿತು ಹೆಚ್ಚಿನ ಮಾಹಿತಿ ನೀಡಿದರು.

    ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಈ ಚಿತ್ರದ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗಿದೆ‌. ಕಿರಣ್ ಕಾವೇರಪ್ಪ ರವಿಕೆ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ‌‌. ಅಷ್ಟೇ ಚೆನ್ನಾಗಿ ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ವಿನಯ್ ಶರ್ಮ ಸಂಗೀತದಲ್ಲಿ ಎಲ್ಲಾ ಹಾಡುಗಳು ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್ ಕೊಡೆಂಕೆರಿ ತಿಳಿಸಿದರು.

    ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಪಾವನ ಸಂತೋಷ್ ಮಾತನಾಡುತ್ತಾ, ಹೆಣ್ಣುಮಕ್ಕಳಿಗೆ ಸೀರೆಗಿಂತ ಹೆಚ್ಚಿನ ಪ್ರೀತಿ ರವಿಕೆ ಮೇಲಿರುತ್ತದೆ. ಆ ರವಿಕೆ ಕುರಿತು ಕಥೆ ಬರೆದಿದ್ದೇನೆ. ಸಹಕಾರ ನೀಡಿದ ನನ್ನ ಪತಿ ಸಂತೋಷ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನಾನು ಆಭಾರಿ ಎಂದರು. ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ “ರವಿಕೆ” ಹಾಡು ಹಾಗೂ ಚಿತ್ರ ಎಲ್ಲರ ಮನ ಗೆಲ್ಲಲಿದೆ ಎಂದರು‌ ನಾಯಕಿ ಗೀತಾ ಭಾರತಿ ಭಟ್. ಈ ತಂಡದೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ. ರವಿಕೆ ಕುರಿತಾಗಿ ಬರುತ್ತಿರುವ ಈ ಚಿತ್ರ ಎಲ್ಲಾ ಹೆಣ್ಣುಮಕ್ಕಳ ಮನಸ್ಸಿಗೆ ಹತ್ತಿರವಾಗಲಿದೆ ಎಂದು ನಟಿ ಪದ್ಮಜಾರಾವ್ ತಿಳಿಸಿದರು.

    ನಿರ್ಮಾಣಕ್ಕೆ ಸಾಥ್ ನೀಡಿರುವ ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ, ಗಾಯಕಿ ಚೈತ್ರ ಸೇರಿದಂತೆ ಅನೇಕರು ಹಾಡಿನ ಬಗ್ಗೆ ಮಾತನಾಡಿದರು. ಕನ್ನಡ ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ರವಿಕೆ ಹಾಡಿಗೆ ವಿಡಿಯೋ ಮೂಲಕ ಶುಭ ಕೋರಿದರು.

    ಬ್ರಹ್ಮ ಗಂಟು ಧಾರಾವಾಹಿ ಖ್ಯಾತಿಯ ಗೀತಾಭಾರತಿ ಭಟ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್,  ಪದ್ಮಜಾರಾವ್, ರಘು ಪಾಂಡೇಶ್ವರ್ , ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ಮೀನಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿಧರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಅವರ  ಸಂಕಲನ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಸಂದಾಗಿದೆ ‘ರವಿಕೆ ಪ್ರಸಂಗ’ ಎಂದ ಗೀತಾಭಾರತಿ ಭಟ್

    ಪಸಂದಾಗಿದೆ ‘ರವಿಕೆ ಪ್ರಸಂಗ’ ಎಂದ ಗೀತಾಭಾರತಿ ಭಟ್

    ಹೆಣ್ಣುಮಕ್ಕಳು ಮನೆಯಲ್ಲಿ ಯಾವುದೇ ಸಮಾರಂಭವಾದರೂ ಸೀರೆಗೆ ತಕ್ಕಂತೆ ರವಿಕೆ ಹೊಲಿಸಿಕೊಳ್ಳುವುದು ರೂಡಿ. ಅಂತಹ ರವಿಕೆಯ ಕುರಿತಾದ  ‘ರವಿಕೆ ಪ್ರಸಂಗ’ (Ravike Prasanga) ಎಂಬ  ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಪ್ರಚಾರದ ಮೊದಲ ಹೆಜ್ಜೆಯಾಗಿ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮಕ್ಕೆ ಮಾಹಿತಿ ನೀಡಿದರು.

    ನಮ್ಮ ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ನನ್ನ ಪತ್ನಿ ಪಾವನ ಸಂತೋಷ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.  ‘ಬ್ರಹ್ಮ ಗಂಟು’ ಧಾರಾವಾಹಿ ಖ್ಯಾತಿಯ ಗೀತಾಭಾರತಿ ಭಟ್ (Geeta Bharati Bhatt), ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್,  ಪದ್ಮಜಾರಾವ್ (Padmaja Rao) ರಘು ಪಾಂಡೇಶ್ವರ್ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿಧರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನವಿರುವ “ರವಿಕೆ ಪ್ರಸಂಗ” ಚಿತ್ರದ ಮೊದಲ ಪ್ರತಿ ಸದ್ಯದಲ್ಲೇ ಬರಲಿದೆ. ವಿಭಿನ್ನ ಕಥೆಯ ಈ ಚಿತ್ರ ಎಲ್ಲರಿಗೂ ಹಿಡಿಸಲಿದೆ ಎಂದು ಚಿತ್ರದ ಕುರಿತು ನಿರ್ದೇಶಕ ಸಂತೋಷ್ ಕೊಡೆಂಕೆರಿ (Santhosh Kodenkeri) ಮಾಹಿತಿ ನೀಡಿದರು.

    ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಪ್ರೀತಿ. ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜೊತೆ ಚರ್ಚಿಸುತ್ತಾರೆ. ಈ ರೀತಿ ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡೆಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ”. ಸಂಭಾಷಣೆ ಮಂಗಳೂರು ಕನ್ನಡದಲ್ಲಿರುತ್ತದೆ. ಎಲ್ಲರ ಮನಸ್ಸಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಈ ಚಿತ್ರ ಪ್ರಿಯವಾಗಲಿದೆ ಎಂದರು ನಾಯಕಿ ಗೀತಾಭಾರತಿ ಭಟ್.

    ನಾನು ಇಪ್ಪತ್ತೈದು ವರ್ಷಗಳ ನನ್ನ ಸಿನಿಮಾ ಜರ್ನಿಯಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ನನ್ನ ಮನಸ್ಸಿಗೆ ಹತ್ತಿತವಾದ ಚಿತ್ರಗಳು ಕೆಲವು ಮಾತ್ರ. ಅದರಲ್ಲಿ ಈ ಚಿತ್ರ ಕೂಡ ಒಂದು ಎಂದರು ನಟಿ ಪದ್ಮಜಾರಾವ್. ಕಥೆ ಹಾಗೂ ಸಂಭಾಷಣೆ ಬರೆದಿರುವ ಪಾವನ ಸಂತೋಷ್, ಛಾಯಾಗ್ರಾಹಕ ಮುರಳಿಧರ್ ಎನ್, ಸಂಗೀತ ನಿರ್ದೇಶಕ ವಿನಯ್ ಶರ್ಮ ಹಾಗೂ ಚಿತ್ರದಲ್ಲಿ ನಟಿಸಿರುವ ರಾಕೇಶ್ ಮಯ್ಯ, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.