Tag: ರವಿಕಿರಣ್

  • ನನ್ನನ್ನು ಕಳ್ಳನಂತೆ ಬಿಂಬಿಸಲಾಗುತ್ತಿದೆ: ವಿರೋಧಿ ಬಣಕ್ಕೆ ರವಿಕಿರಣ್ ಪ್ರತ್ಯುತ್ತರ

    ನನ್ನನ್ನು ಕಳ್ಳನಂತೆ ಬಿಂಬಿಸಲಾಗುತ್ತಿದೆ: ವಿರೋಧಿ ಬಣಕ್ಕೆ ರವಿಕಿರಣ್ ಪ್ರತ್ಯುತ್ತರ

    ರ್ನಾಟಕ ಟೆಲಿವಿಷನ್ ಕ್ಲಬ್ ನಲ್ಲಿ ರವಿಕಿರಣ್ ಅವ್ಯವಹಾರ ಮಾಡಿದ್ದಾರೆ ಎಂದು ಈ ಹಿಂದೆ ಕೆಲವು ಸದಸ್ಯರು ಆರೋಪಿಸಿದ್ದರು. ಈ ಕುರಿತಂತೆ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ಈ ಪ್ರಕರಣದ ಕುರಿತಂತೆ ಸ್ವತಃ ರವಿಕಿರಣ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಯಾವುದೇ ಕಾರಣಕ್ಕೂ ಅವ್ಯವಹಾರ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ರವಿಕಿರಣ್, ‘ಕಳೆದ ಡಿಸೆಂಬರ್ ಗೆ ನನ್ನ ಅವಧಿ ಮುಕ್ತಾಯವಾಗಿದೆ. ಮತ್ತೆ ಎಲೆಕ್ಷನ್ ನಡೆದಿಲ್ಲ, ಹೊಸ ಸದಸ್ಯರು ಸೇರ್ಕೊಂಡು ಕಮಿಟಿ ಮಾಡ್ಕೊಂಡಿದ್ದಾರೆ. ಆ ಮೂಲಕ ನನ್ನ ಕ್ಲಬ್ ನ ನಿಂದ ವಜಾ ಮಾಡಿದ್ದಾರೆ, ಇದು ಕಾನೂನು ಬಾಹಿರ. ನಂತರ ಕ್ಲಬ್ ನ  ಹಣವನ್ನು ದುರ್ಬಳಕೆ ಮಾಡ್ಕೊಂಡಿದ್ದಾರೆ. 2003 ರಲ್ಲಿ ಕ್ಲಬ್ ಶುರುಮಾಡಿದ್ದು ನಾನು. ಕ್ಲಬ್ ನ ಸಿಬ್ಬಂದಿ ಗಳು, ಇತರೆ ಖರ್ಚು ಸೇರಿ 60 ಲಕ್ಷ ಸಾಲ ಮಾಡಿದ್ದೀನಿ. ಆ ಹಣ ವಾಪಸ್ ಕೊಡಲಿ, ಈ ಕ್ಷಣ ಕ್ಲಬ್ ಗೆ ರಾಜಿನಾಮೆ ನೀಡಿ ಹೊರ ಹೋಗ್ತಿನಿ. ಕರೋನ ಇದ್ದ ಕಾರಣ ಕಳೆದ ನಾಲ್ಕು ವರ್ಷ ದಿಂದ ಟ್ಯಾಕ್ಸ್ ಕಟ್ಟಿಲ್ಲ. ಇದು ಕ್ಲಬ್‌ ನ ಖಜಾಂಚಿ ಜವಾಬ್ದಾರಿ , ಅವರು ಕಟ್ಟಬೇಕು. ಕಳೆದ ಒಂದುವರೇ ವರ್ಷ ದಿಂದ ಕ್ಲಬ್ ಸಂಪೂರ್ಣ ನಿಂತು ಹೋಗಿದೆ ಎಂದಿದ್ದಾರೆ.

    ಹಣ ಕಳುವಿನ ಆರೋಪದ ಬಗ್ಗೆಯೂ ಮಾತನಾಡಿದ ಅವರು, ‘6.70 ಸಾವಿರ ರೂಪಾಯಿ ನನ್ನ ಹಣ, ನಾನು ತಗೊಂಡಿದ್ದೀನಿ, ನಾನು ಕಳ್ಳ ಅಲ್ಲ. ಕ್ಲಬ್‌ ನ ಎಲ್ಲ ಕಡೆಗೆ ಹೊಸದಾಗಿ ಬೀಗ ಹಾಕ್ಕೊಂಡಿದ್ದಾರೆ. ನನ್ನ ಕ್ಲಬ್‌ ನಲ್ಲಿ ನಾನು ಕಳ್ಳತನ ಮಾಡ್ತಿನಾ? ನನ್ನ ಸಹೋದರ ಕಮಿಟಿ ಮೆಂಬರ್ ಆಗಿದ್ದವನು. ನಮ್ ಹತ್ರ ದುಡ್ಡಿರಲಿಲ್ಲ, ಹಾಗಾಗಿ ಅವನ ನಿಂತ್ಕೊಂಡು ಕಡಿಮೆ ಬೆಲೆ ಕೆಲಸ ಮಾಡಿಕೊಟ್ಟ. ನಾವು ಯಾರಿಗೂ ಕಂಟ್ರಾಕ್ಟ್ ಕೊಟ್ಟಿರಲಿಲ್ಲ. ಸದ್ಯ ಕ್ಲಬ್ ನ ಸಾಲ 4,5 ಕೋಟಿ ಸಾಲ ಇದೆ ಎಂದೂ ಅವರು ಎಲ್ಲದಕ್ಕೂ ಉತ್ತರ ನೀಡಿದ್ದಾರೆ.

    ನಿರ್ಮಾಪಕ ಹಾಗೂ ನಟ ರವಿಕಿರಣ್ (Ravikiran) ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಕರ್ನಾಟಕ ಟೆಲಿವಿಷ್ ಕ್ಲಬ್ (Television Club) ನಲ್ಲಿ ಹಣ ದುರುಪಯೋಗ ಮತ್ತು ಅಕ್ರಮ ಸೇರಿದಂತೆ ನಾನಾ ಆರೋಪಗಳನ್ನು ಸಂಘದ ಸದಸ್ಯರು ಮತ್ತು ಕಲಾವಿದರು ಮಾಡಿದ್ದರು. ಜೊತೆಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರು. ಕಳೆದ 20 ವರ್ಷದಿಂದ ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರಿಗಾಗಿ ಕ್ಲಬ್ ಇದೆ. ಆನಂತರ ಅದು ಉತ್ತರ ಹಳ್ಳಿ ಬಳಿ ಕರ್ನಾಟಕ ಟೆಲಿವಿಷನ್ ಕ್ಲಬ್ ಸರ್ಕಾರದ ಅನುದಾನದಲ್ಲಿ ಕೊಟ್ಟ ಜಾಗದಲ್ಲಿ ನಿರ್ಮಾಣಗೊಂಡಿದೆ. ಜೊತೆಗೆ ಸರ್ಕಾರವೇ 3 ಕೋಟಿಗೂ ಅಧಿಕ ಹಣ ಸಹ ಕ್ಲಬ್ ಗಾಗಿ ನೀಡಿದೆ. ಈ ಕ್ಲಬ್ ನಲ್ಲಿ ಸಾವಿರಾರು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ಕ್ಲಬ್ ಆರಂಭದಿಂದ ಈವರೆಗೂ ರವಿಕಿರಣ್ ಕಾರ್ಯದರ್ಶಿಯಾಗಿದ್ದಾರೆ. ಕ್ಲಬ್ ನಿರ್ಮಾಣವನ್ನು ಕಾಂಟ್ರಾಕ್ಟ್ ನೀಡದೆ ಸಹೋದರನಿಗೆ ನೀಡಿ ಅವ್ಯವಹಾರ ಮಾಡಿದ್ದಾರೆಂದು ಆರೋಪ ಮಾಡಲಾಗುತ್ತಿದೆ. ಜೊತೆಗೆ ಕ್ಲಬ್ ಗೆ ಸಂಬಂಧಿಸಿದ ಜಿಎಸ್ ಟಿ, ಬಿಬಿಎಂಪಿ ಟ್ಯಾಕ್ಸ್ ಸೇರಿದಂತೆ ಹಲವು ತೆರಿಗೆಗಳ ಪಾವತಿ ಮಾಡಿಲ್ಲ ಎನ್ನುವ ಗಂಭೀರ ಆರೋಪವೂ ಅವರ ಮೇಲಿದೆ. ಹಣವನ್ನು ಪಾವತಿ ಮಾಡದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.

     

    ಈ ವಿಚಾರದ ಚರ್ಚೆ ಹೆಚ್ಚಾದಾಗ ರವಿಕಿರಣ್ ಅವರ ಸದಸ್ಯತ್ವವನ್ನು  ಸಸ್ಪೆಂಡ್ ಮಾಡಲಾಗಿತ್ತು. ಕ್ಲಬ್ ಗೆ ಬರದಂತೆ ಆದೇಶ ಇದ್ದರೂ ಸಹ ಬಂದು ಕ್ಲಬ್ ನಲ್ಲಿದ್ದ 6 ಲಕ್ಷ ಹಣ ರವಿಕಿರಣ್  ತೆಗೆದುಕೊಂಡು ಹೋಗಿದ್ದಾರೆಂದು ಗಂಭೀರ ಆರೋಪ ಮಾಡಲಾಗಿತ್ತು. ಜೊತೆಗೆ ಕ್ಲಬ್ ನಲ್ಲಿ ಅನುಮತಿ ಇಲ್ಲದಿದ್ದರೂ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಗಲಾಟೆಯಾಗಿ ಠಾಣೆಗೆ ಬಂದು ದೂರು ನೀಡಿದ್ದರು ಕೆಲ ಕಲಾವಿದರು.

  • ಕಿರುತೆರೆ ನಟ ರವಿಕಿರಣ್ ಮೇಲೆ ಕ್ಲಬ್ ಅಕ್ರಮ ಆರೋಪ: ಠಾಣೆ ಮೆಟ್ಟಿಲು ಏರಿದ ಪ್ರಕರಣ

    ಕಿರುತೆರೆ ನಟ ರವಿಕಿರಣ್ ಮೇಲೆ ಕ್ಲಬ್ ಅಕ್ರಮ ಆರೋಪ: ಠಾಣೆ ಮೆಟ್ಟಿಲು ಏರಿದ ಪ್ರಕರಣ

    ನ್ನಡದ ಹೆಸರಾಂತ ನಿರ್ಮಾಪಕ ಹಾಗೂ ನಟ ರವಿಕಿರಣ್ (Ravikiran) ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಕರ್ನಾಟಕ ಟೆಲಿವಿಷ್ ಕ್ಲಬ್ (Television Club) ನಲ್ಲಿ ಹಣ ದುರುಪಯೋಗ ಮತ್ತು ಅಕ್ರಮ ಸೇರಿದಂತೆ ನಾನಾ ಆರೋಪಗಳನ್ನು ಸಂಘದ ಸದಸ್ಯರು ಮತ್ತು ಕಲಾವಿದರು ಮಾಡಿದ್ದಾರೆ. ಜೊತೆಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ.

    ಕಳೆದ 20 ವರ್ಷದಿಂದ ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರಿಗಾಗಿ ಕ್ಲಬ್ ಇದೆ. ಆನಂತರ ಅದು ಉತ್ತರ ಹಳ್ಳಿ ಬಳಿ ಕರ್ನಾಟಕ ಟೆಲಿವಿಷನ್ ಕ್ಲಬ್ ಸರ್ಕಾರದ ಅನುದಾನದಲ್ಲಿ ಕೊಟ್ಟ ಜಾಗದಲ್ಲಿ ನಿರ್ಮಾಣಗೊಂಡಿದೆ. ಜೊತೆಗೆ ಸರ್ಕಾರವೇ 3 ಕೋಟಿಗೂ ಅಧಿಕ ಹಣ ಸಹ ಕ್ಲಬ್ ಗಾಗಿ ನೀಡಿದೆ. ಈ ಕ್ಲಬ್ ನಲ್ಲಿ ಸಾವಿರಾರು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ.

    ಕ್ಲಬ್ ಆರಂಭದಿಂದ ಈವರೆಗೂ ರವಿಕಿರಣ್ ಕಾರ್ಯದರ್ಶಿಯಾಗಿದ್ದಾರೆ. ಕ್ಲಬ್ ನಿರ್ಮಾಣವನ್ನು ಕಾಂಟ್ರಾಕ್ಟ್ ನೀಡದೆ ಸಹೋದರನಿಗೆ ನೀಡಿ ಅವ್ಯವಹಾರ ಮಾಡಿದ್ದಾರೆಂದು ಆರೋಪ ಮಾಡಲಾಗುತ್ತಿದೆ. ಜೊತೆಗೆ ಕ್ಲಬ್ ಗೆ ಸಂಬಂಧಿಸಿದ ಜಿಎಸ್ ಟಿ, ಬಿಬಿಎಂಪಿ ಟ್ಯಾಕ್ಸ್ ಸೇರಿದಂತೆ ಹಲವು ತೆರಿಗೆಗಳ ಪಾವತಿ ಮಾಡಿಲ್ಲ ಎನ್ನುವ ಗಂಭೀರ ಆರೋಪವೂ ಅವರ ಮೇಲಿದೆ. ಹಣವನ್ನು ಪಾವತಿ ಮಾಡದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.

    ಈ ವಿಚಾರದ ಚರ್ಚೆ ಹೆಚ್ಚಾದಾಗ ರವಿಕಿರಣ್ ಅವರ ಸದಸ್ಯತ್ವವನ್ನು  ಸಸ್ಪೆಂಡ್ ಮಾಡಲಾಗಿತ್ತು. ಕ್ಲಬ್ ಗೆ ಬರದಂತೆ ಆದೇಶ ಇದ್ದರೂ ಸಹ ಬಂದು ಕ್ಲಬ್ ನಲ್ಲಿದ್ದ 6 ಲಕ್ಷ ಹಣ ರವಿಕಿರಣ್  ತೆಗೆದುಕೊಂಡು ಹೋಗಿದ್ದಾರಂತೆ. ಜೊತೆಗೆ ಕ್ಲಬ್ ನಲ್ಲಿ ಅನುಮತಿ ಇಲ್ಲದಿದ್ದರೂ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದಾಗ ಗಲಾಟೆಯಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ ಕೆಲ ಕಲಾವಿದರು.

     

    ರವಿಕಿರಣ್ ವಿರುದ್ಧ ಮುಂದೆ ತೀವ್ರವಾದ ಹೋರಾಟ ಮಾಡುವುದಾಗಿ ಕಲಾವಿದರು ಹೇಳಿದ್ದಾರೆ. ತಮ್ಮ ತಮ್ಮಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಠಾಣಾಧಿಕಾರಿಗಳು (Police) ತಿಳಿಸಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ.

  • ಕಿರುತೆರೆ ನಟ ರವಿಕಿರಣ್‍ಗೆ ಲಕ್ಷ ಲಕ್ಷ ದೋಖಾ

    ಕಿರುತೆರೆ ನಟ ರವಿಕಿರಣ್‍ಗೆ ಲಕ್ಷ ಲಕ್ಷ ದೋಖಾ

    ಖ್ಯಾತ ಕಿರುತೆರೆ ನಟ, ನಿರ್ದೇಶಕ, ನಿರ್ಮಾಪಕ ರವಿಕಿರಣ್‍ಗೆ (Ravikiran) ಸ್ವಾಮೀಜಿಯೊಬ್ಬರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ವರದಿಯಾಗಿದೆ. ಕುಮಾರಸ್ವಾಮಿ ಲೇಔಟ್‍ನಲ್ಲಿ ವಾಸವಾಗಿರುವ ರವಿಕಿರಣ್‍ಗೆ ಕಳೆದ ಎರಡು ವರ್ಷಗಳ ಹಿಂದೆ ನವೀನ್  (Naveen), ಭಾಗ್ಯಶ್ರೀ (Bhagyashree) ಅನ್ನೋರು ಪರಿಚಯವಾಗಿದ್ರು. ನಾನು ಅನಾಥಾಶ್ರಮವೊಂದನ್ನು ನಡೆಸುತ್ತಿದ್ದೇನೆ, ನಿಮ್ಮ ಕಡೆಯಿಂದ ಏನಾದ್ರು ಸಹಾಯ ಮಾಡಿ ಅಂತಾ ಹೇಳಿದ್ದ. ಅನಾಥಶ್ರಮ ಅಂತಾ ಕೇಳಿದ ರವಿಕಿರಣ್ ಮೊದಲಿಗೆ ಎರಡುವರೇ ಸಾವಿರ ಗೂಗಲ್ ಪೇ ಮೂಲಕ ಹಣ ನೀಡಿದ್ರು.

    ಅಂದಿನಿಂದ ನಟ ರವಿಕಿರಣ್‍ಗೆ ಹತ್ತಿರವಾದ ನವೀನ್ ಭಾಗ್ಯಶ್ರೀ ಗುರುಜೀ, ದುಬೈನಲ್ಲಿ ಒಂದು ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಆಗಿ ನೀವು ಹೋಗಿ ನಾನು ಅಲ್ಲಿ ಮಾತಾಡಿದ್ದೀನಿ ಅಂದಿದ್ದ. ಸ್ವಾಮೀಜಿ ಮಾತನ್ನು ನಂಬಿದ ನಟ ರವಿಕಿರಣ್ ಟಿಕೆಟ್ ಮಾಡಿಸೋಕೆ ಅಂತಾ ಮೊದಲಿಗೆ 25 ಸಾವಿರ ದುಡ್ಡು ಹಾಕಿದ್ರು. ಹಾಗೇ ಮುಂದುವರೆದು, ಪ್ರವಾಸದ ಖರ್ಚು ಅದು ಇದು ಅಂತಾ ಪದೇ ಪದೇ ದುಡ್ಡು ಹಾಕಿಸಿಕೊಂಡಿದ್ದ.

    ಇಷ್ಟಕ್ಕೂ ಸುಮ್ಮನಾಗದ ಸ್ವಾಮೀಜಿ ನವೀನ್ ಭಾಗ್ಯಶ್ರೀ, ದುಬೈ ನಲ್ಲಿ ನಂಗೆ ಪರಿಚಯವಿರುವ ಸ್ನೇಹಿತರೊಬ್ಬರು ಇದ್ದಾರೆ. ಅವರ ಹತ್ರ ಕಡಿಮೆ ಬೆಲೆಗೆ ಚಿನ್ನ ಕೊಡಿಸೋದಾಗಿ ಹೇಳಿ ಮತ್ತೆ 42 ಸಾವಿರ, 87 ಸಾವಿರ ಅಂತಾ ಹಂತ ಹಂತವಾಗಿ ಮತ್ತೆ ರವಿಕಿರಣ್ ಬಳಿ ಹಣ ಹಾಕಿಸಿಕೊಂಡಿದ್ರು. ಇದೇ ವೇಳೆ ಕಾರ್ಯಕ್ರಮ ತಡವಾಗ್ತಿದೆ, ನೀವು ಹಾಕಿರುವ ಹಣಕ್ಕೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ಒಂದು ಸೈಟ್ ಕೊಡಿಸುವುದಾಗಿ ನಂಬಿಸಿದ್ದ. ಈಗ ಕೊಟ್ಟಿರೋ ಹಣಕ್ಕೆ ಮತ್ತಷ್ಟು ಹಣ ಕೊಡಿ ರಿಜಿಸ್ಟೇಷನ್ ಅಂತಾ ಹೇಳಿ ಮತ್ತೆ ಹಣ ತೆಗೆದುಕೊಂಡಿದ್ದ.

    ಈ ಕಥೆ ಮುಂದುವರೆದು, ಹೊಸಕೋಟೆಯಲ್ಲಿ ಬೇಡ, ಆಶ್ರಮದ ಕಡೆಯಿಂದ ಏಪೋರ್ಟ್ ರೋಡ್ ನಲ್ಲೇ ಸೈಟ್ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ 4 ಲಕ್ಷ 35 ಸಾವಿರ ಹಣ ತೆಗೆದುಕೊಂಡಿದ್ದ. ಯಾವಾಗ ಏರ್ಪೋಟ್ ರಸ್ತೆಯಲ್ಲೂ ಸೈಟ್ ಸಿಗಲಿಲ್ವೋ, ಆಗ ನಟ ರವಿಕಿರಣ್ ಸ್ವಾಮೀಜಿಯ ಮೋಸ ಬಗ್ಗೆ ತಿಳಿದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ನವೀನ್ ಭಾಗ್ಯಶ್ರೀ, ಪತ್ನಿ ಚೈತ್ರಾ, ಮಧ್ಯವರ್ತಿ ಸೇರಿ ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

     

    ಸದ್ಯ ಸ್ವಾಮೀಜಿ ನವೀನ್ ಭಾಗ್ಯಶ್ರೀ, ಅತನ ಪತ್ನಿ ಎಸ್ಕೇಪ್ ಆಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅನುಭವಿ ಕಿರುತೆರೆ ನಟನಾಗಿರುವ ರವಿಕಿರಣ್‍ಗೆ ಹಣ, ಚಿನ್ನ, ಸೈಟು ಅಂತಾ ಆಸೆ ತೋರಿಸಿ ವಂಚಿಸಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

  • ಕಿರುತೆರೆಯ ಖ್ಯಾತ ನಿರ್ಮಾಪಕ, ನಟ ರವಿಕಿರಣ್ ಸಹೋದರ ಭಾಸ್ಕರ್ ನಿಧನ

    ಕಿರುತೆರೆಯ ಖ್ಯಾತ ನಿರ್ಮಾಪಕ, ನಟ ರವಿಕಿರಣ್ ಸಹೋದರ ಭಾಸ್ಕರ್ ನಿಧನ

    ನ್ನಡ ಕಿರುತೆರೆಯ ಖ್ಯಾತ ನಟ, ನಿರ್ದೇಶಕ ರವಿಕಿರಣ್ (Ravikiran) ಅವರ ಸಹೋದರ ಭಾಸ್ಕರ್ ( Bhaskar) ರವಿವಾರ ತಡರಾತ್ರಿ ನಿಧನ (Passed away) ಹೊಂದಿದ್ದಾರೆ. ಬದುಕು, ಸುಕನ್ಯಾ ಸೇರಿದಂತೆ ಹಲವು ಧಾರಾವಾಹಿಗಳನ್ನು ಭಾಸ್ಕರ್ ನಿರ್ಮಿಸಿದ್ದರು. ರವಿಕಿರಣ್ ಬ್ಯಾನರ್ ನಲ್ಲಿ ಬರುತ್ತಿದ್ದ ಬಹುತೇಕ ಧಾರಾವಾಹಿಗಳಿಗೆ ಭಾಸ್ಕರ್ ನಿರ್ಮಾಪಕರಾಗಿರುತ್ತಿದ್ದರು. ಅಲ್ಲದೇ, ರವಿಕಿರಣ್ ಅವರಿಗೆ ಬೆನ್ನೆಲುಬಾಗಿ ನಿಂತವರು.

    ಭಾಸ್ಕರ್ ಕೇವಲ ನಿರ್ಮಾಪಕರು ಮಾತ್ರವಲ್ಲ, ಉದ್ಯಮಿಯೂ ಕೂಡ. ಹಲವಾರು ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜೊತೆಗೆ ಕರ್ನಾಟಕ ಟೆಲಿವಿಷನ್ ಕ್ಲಬ್ ನ ನಿರ್ದೇಶಕರಾಗಿಯೂ ಅವರು ಟಿವಿ ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಇವರ ನಿರ್ಮಾಣದಲ್ಲಿ ಮೂಡಿ ಬಂದ ಬದುಕು ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾಗಿದೆ. ಸುಕನ್ಯಾ ಕೂಡ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು.  ಇದನ್ನೂ ಓದಿ: ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಭಾಸ್ಕರ್ ಪುತ್ರ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ತೆಲುಗು ಮತ್ತು ಕನ್ನಡದ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಭಾಸ್ಕರ್ ನಿಧನಕ್ಕೆ ಕಿರುತೆರೆಯ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಟೆಲಿವಿಷನ್ ಉದ್ಯಮದ ನಾನಾ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ

    ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ

    ಕಿರುತೆರೆಯಲ್ಲಿ ರವಿಚಂದ್ರನ್ ಎಂದೇ ಖ್ಯಾತರಾಗಿರುವ ರವಿಕಿರಣ್ ಅವರ ಪುತ್ರ ಪ್ರೇಮ್ ಕಿರಣ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಹೆಸರಾಂತ ನಿರ್ದೇಶಕರಾ ಆರ್.ಜಿವಿ ಮತ್ತು ಪೂರಿ ಜಗನ್ನಾಥ್ ಗರಡಿಯಲ್ಲಿ ಪಳಗಿರುವ ರವಿವರ್ಮಾ ನಿರ್ದೇಶನದ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಂದು ಈ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದ್ದು, ಈ ಚಿತ್ರಕ್ಕೆ ಸ್ವತಃ ರವಿಕಿರಣ್ ಅವರೇ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ

    ಚಿತ್ರಕ್ಕೆ ಟಾರ್ಗೆಟ್ ಎಂದು ಹೆಸರಿಡಲಾಗಿದ್ದು, ಇವತ್ತಿನ ಯುವ ಸಮುದಾಯದ ಸುತ್ತ ಹೆಣೆದಿರುವ ಕಥೆ ಚಿತ್ರದಲ್ಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣವಾಗಲಿದೆ. ಇದನ್ನೂ ಓದಿ : ಚಕ್ಡಾ ಎಕ್ಸ್ ಪ್ರೆಸ್ ಸಿನಿಮಾಗಾಗಿ ಅನುಷ್ಕಾ ಬೌಲಿಂಗ್ ಪ್ರಾಕ್ಟಿಸ್

    ಪ್ರೇಮ್ ಕಿರಣ್ ಜತೆ ವಿಜಯ್ ಕಾರ್ತಿಕ್ ಹಾಗೂ ಸಚಿನ್ ಪುರೋಹಿತ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಮೇಘಶ್ರೀ ಹಾಗೂ ಸಹರ್ ಕೃಷ್ಣನ್ ನಾಯಕಿಯರು. ನಿರ್ದೇಶಕರ ಚೊಚ್ಚಲು ಸಿನಿಮಾ ಇದಾಗಿದ್ದರೂ, ಈಗಾಗಲೇ ಅವರು ಹಲವು ವೆಬ್ ಸೀರಿಸ್ ಗಳಿಗೂ ನಿರ್ದೇಶನ ಮಾಡಿದ ಅನುಭವವಿದೆ. ಈ ಕುರಿತು ಮಾತನಾಡಿದ ನಿರ್ದೇಶಕರು, “ಈಗ ಕೈಗೆತ್ತಿಕೊಂಡಿರುವ ಕಾನ್ಸೆಪ್ಟ್ ಇದುವರೆಗೆ ಬಂದಿಲ್ಲವೆಂದೇ ಹೇಳಬಹುದು, ಈಗಿನ ಜನರೇಷನ್ ಯಾವ ರೀತಿ ಸಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಹೇಗೆ ನಿತ್ಯವೂ ದೌರ್ಜನ್ಯ ನಡೆಯುತ್ತಿದೆ, ಹೆಣ್ಣಿನ ಮೇಲೆ ಚಿಕ್ಕ ವಯಸಿನಲ್ಲಿ ನಡೆದ ಶೋಷಣೆ ಮುಂದೆ ಯಾವರೀತಿ ಪ್ರಭಾವ ಬೀರುತ್ತದೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ. ಲವ್‌ಸ್ಟೋರಿ, ಮರ್ಡರ್ ಮಿಸ್ಟರಿ ಕೂಡ ಟಾರ್ಗೆಟ್ ಚಿತ್ರದಲ್ಲಿದೆ” ಎಂದರು.

  • ಗಿರ್ ಗಿಟ್ಲೆ: ಮರೆಯಾದ ಉದಯ್ ಅಬ್ಬರಿಸಿದ ಕೊನೆಯ ಚಿತ್ರ!

    ಗಿರ್ ಗಿಟ್ಲೆ: ಮರೆಯಾದ ಉದಯ್ ಅಬ್ಬರಿಸಿದ ಕೊನೆಯ ಚಿತ್ರ!

    ಬೆಂಗಳೂರು: ಇದೀಗ ರವಿ ಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಚಿತ್ರದತ್ತ ಪ್ರೇಕ್ಷಕರೆಲ್ಲ ಆಕರ್ಷಿತರಾಗಿದ್ದಾರೆ. ಟ್ರೈಲರ್, ಹಾಡುಗಳ, ಪೋಸ್ಟರ್ ಸೇರಿದಂತೆ ಪ್ರತಿಯೊಂದಕ್ಕೂ ಸಕಾರಾತ್ಮಕ ಸ್ಪಂದನೆಯೇ ಸಿಗುತ್ತಿದೆ. ಈ ಖುಷಿಯ ನಡುವಲ್ಲಿಯೂ ದುಃಖದ ಮಡುವಿಗೆ ಕೆಡಹುವಂಥಾ ಬೇಸರವೊಂದು ಗಿರ್ ಗಿಟ್ಲೆ ಚಿತ್ರತಂಡವನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ.

    ಅದಕ್ಕೆ ಕಾರಣವಾಗಿರೋದು ಮಾಸ್ತಿ ಗುಡಿ ದುರಂತದಲ್ಲಿ ಮರೆಯಾದ ಯುವ ನಟ ಉದಯ್. ಯಾಕೆಂದರೆ, ಗಿರ್ ಗಿಟ್ಲೆ ಸಿನಿಮಾದಲ್ಲಿಯೂ ಕೂಡಾ ಉದಯ್ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದು ಉದಯ್ ಪಾಲಿನ ಕಡೆಯ ಚಿತ್ರವೂ ಹೌದು. ಇದನ್ನೂ ಓದಿ: ಅಗ್ನಿಸಾಕ್ಷಿ ಸುಂದರಿಯ ಗಿರ್ ಗಿಟ್ಲೆ!

    ಉದಯ್ ಅಪಾರವಾದ ಸಿನಿಮಾ ಪ್ರೀತಿ ಹೊಂದಿದ್ದ ನಟ. ಯಾವುದೇ ಒಂದು ಚಿತ್ರದಲ್ಲಿ ಅವಕಾಶ ಸಿಕ್ಕರೂ ತನ್ನ ಪಾತ್ರಕ್ಕೆ ಜೀವ ತುಂಬಿ ಹೊರಟು ಬಿಡೋದು ಅವರ ಜಾಯಮಾನವಾಗಿರಲಿಲ್ಲ. ಇಡೀ ಚಿತ್ರ ತಂಡದೊಂದಿಗೆ ಬೆರೆತು ಹೋಗುತ್ತಿದ್ದರು. ಗಿರ್ ಗಿಟ್ಲೆ ಚಿತ್ರ ಕೂಡಾ ಅದಕ್ಕೆ ಹೊರತಾಗಿರಲಿಲ್ಲ. ಇದನ್ನೂ ಓದಿ: ಗಿರ್ ಗಿಟ್ಲೆ: ರಂಗಾಯಣ ರಘು ಪಾತ್ರದ ರಂಪ ರಾಮಾಯಣ!

    ಈ ಚಿತ್ರದ ಕಥೆಯನ್ನು ಕೇಳಿ ಥ್ರಿಲ್ ಆಗಿಯೇ ಉದಯ್ ನಟಿಸಲು ಒಪ್ಪಿಕೊಂಡಿದ್ದರಂತೆ. ಅವರ ಪಾತ್ರವಂತೂ ಅವರಿಗೇ ಹಿಡಿಸಿ ಹೋಗಿತ್ತು. ಬಹುಶಃ ಉದಯ್ ಬದುಕಿದ್ದಿದ್ದರೆ ಅವರ ವೃತ್ತಿ ಬದುಕಿಗೆ ಬೇರೆಯದ್ದೇ ದಿಕ್ಕು ತೋರಿಸುವಂತೆ ಗಿರ್ ಗಿಟ್ಲೆಯಲ್ಲಿ ಉದಯ್ ಪಾತ್ರವಿದೆಯಂತೆ. ಅದರಲ್ಲಿ ಉದಯ್ ಅದ್ಭುತವಾಗಿಯೇ ನಟಿಸಿದ್ದರು. ಇದೀಗ ಹಲವಾರು ಅಡೆತಡೆಗಳಾಚೆಗೂ ಗಿರ್ ಗಿಟ್ಲೆ ಬಿಡುಗಡೆಗೆ ರೆಡಿಯಾಗಿದೆ. ಈ ಕ್ಷಣದಲ್ಲಿ ಉದಯ್ ಬದುಕಿರ ಬೇಕಿತ್ತೆಂಬ ಆಸೆ ಕೊರಗು ಭಾವನೆ ಚಿತ್ರತಂಡವನ್ನು ಕಾಡುತ್ತಿದೆ. ಇದನ್ನೂ ಓದಿ: ಗಿರ್ ಗಿಟ್ಲೆ: ಮರೆಯಾದ ಉದಯ್ ಅಬ್ಬರಿಸಿದ ಕೊನೆಯ ಚಿತ್ರ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗಿರ್ ಗಿಟ್ಲೆ ನಿರ್ದೇಶಕರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ!

    ಗಿರ್ ಗಿಟ್ಲೆ ನಿರ್ದೇಶಕರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ!

    ಬೆಂಗಳೂರು: ‘ನಾನು ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ನನ್ನ ಹೆಸರಿನ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಹೆಸರಿನ ಪ್ರಭೆ ಮಾತ್ರ ಇರಬೇಕು…’ ಹೀಗೊಂದು ಪ್ರತಿಜ್ಞೆ ಮಾಡಿಯೇ ಚಿತ್ರರಂಗದ ತೆಕ್ಕೆಗೆ ಬಿದ್ದವರು ರವಿಕಿರಣ್. ತನ್ನ ಇಂಗಿತದಂತೆಯೇ ಉಪೇಂದ್ರ ಅವರ ಆತ್ಮೀಯ ಸಾಂಗತ್ಯ ಪಡೆದು, ಅವರದ್ದೊಂದು ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ ರವಿಕಿರಣ್ ಈಗ ತಮ್ಮ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರು ನಿರ್ದೇಶನ ಮಾಡಿರೋ ಹೊಸತನದ ಚಿತ್ರ ಗಿರ್ ಗಿಟ್ಲೆ ಇದೇ ಮಾರ್ಚ್ 15ರಂದು ಬಿಡುಗಡೆಯಾಗಲು ರೆಡಿಯಾಗಿದೆ..!

    ಉಪ್ಪಿ ಅಭಿಮಾನದಿಂದಲೇ, ಅವರ ಸ್ಫೂರ್ತಿಯಿಂದಲೇ ಚಿತ್ರರಂಗಕ್ಕೆ ಬಂದವರು ಸಾಕಷ್ಟು ಮಂದಿಯಿದ್ದಾರೆ. ಅವರಲ್ಲಿ ರವಿಕಿರಣ್ ಕೂಡಾ ಒಬ್ಬರು. ಆದರೆ ಅಂದುಕೊಂಡಿದ್ದನ್ನು ಪಟ್ಟು ಹಿಡಿದು ಮಾಡುವ, ಮಾಡಿದ್ದೆಲ್ಲವೂ ಡಿಫರೆಂಟಾಗಿರಬೇಕೆಂದೇ ಬಯಸುವ ರವಿಕಿರಣ್ ಈ ವಿಚಾರದಲ್ಲಿಯೂ ಅಪ್ಪಟ ಉಪ್ಪಿ ಶಿಷ್ಯ. ಬಹುಶಃ ಅಂಥಾದ್ದೊಂದು ಛಲ ಇಲ್ಲದೇ ಹೋಗಿದ್ದರೆ ಎದುರಾದ ಅಡೆತಡೆಗಳಿಂದ ತಲೆತಪ್ಪಿಸಿಕೊಂಡು ಎಲ್ಲಿಯೋ ಕಳೆದು ಹೋಗಬೇಕಾಗುತ್ತಿತ್ತು. ಅಖಂಡ ಆರು ವರ್ಷಗಳ ಕಾಲ ಬಿದ್ದ ಏಟು, ಆದ ಆಘಾತಗಳನ್ನೆಲ್ಲ ಸಹಿಸಿಕೊಂಡು ಗಿರ್ ಗಿಟ್ಲೆ ಅಂತೊಂದು ಸಿನಿಮಾವನ್ನು ರೂಪಿಸೋದು ಖಂಡಿತಾ ಸಾಧ್ಯವಿರುತ್ತಿರಲಿಲ್ಲ.

    ಇಂಥಾ ಸವಾಲಿನ ಹಾದಿಯಲ್ಲಿ ಸಾಗಿ ಬಂದರೂ ಕೂಡಾ ಗಿರ್ ಗಿಟ್ಲೆ ಚಿತ್ರವನ್ನು ಹೊಸಾ ಥರದಲ್ಲಿ ಪೊರೆದ ಖುಷಿಯೊಂದು ರವಿಕಿರಣ್ ಅವರಿಗಿದೆ. ಅದಕ್ಕೆ ಈಗ ಈ ಸಿನಿಮಾ ಬಗ್ಗೆ ಹುಟ್ಟಿಕೊಂಡಿರೋ ಕ್ರೇಜ್‍ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹೀಗೆ ಕಷ್ಟದ ಹಾದಿಯಲ್ಲಿ ಸಾಗಿ ಬಂದು ತಮ್ಮ ಕನಸನ್ನು ನನಸು ಮಾಡಿಕೊಂಡಿರೋ ರವಿಕಿರಣ್ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರು. ಚೆಂದಗೆ ಓದಿ ಖಾಸಗಿ ಕಂಪೆನಿಯೊಂದರಲ್ಲಿ ಎಚ್ ಆರ್ ರಿಕ್ರೂಟರ್ ಆಗಿ ಕೈತುಂಬಾ ಸಂಬಳವನ್ನೂ ಅವರು ಪಡೆಯುತ್ತಿದ್ದರು. ಆದರೆ ಇದೆಲ್ಲದರ ನಡುವೆಯೂ ಅವರಿಗೆ ಉಪೇಂದ್ರ ಅವರ ಸಿನಿಮಾಗಳ ಮೇಲೆ, ಉಪ್ಪಿಯ ಭಿನ್ನ ಆಲೋಚನೆಗಳ ಮೇಲೆ ಎಂಥಾದ್ದೋ ಮೋಹವಿತ್ತು.

    ಹೀಗಿರುವಾಗಲೇ ಅದೊಂದು ಸಲ ಗೆಳೆಯರೆಲ್ಲ ಕಿರು ಚಿತ್ರವೊಂದನ್ನು ಮಾಡಲು ಮುಂದಾಗಿದ್ದರು. ಅದರಲ್ಲಿ ಒಂದು ಸಣ್ಣ ಪಾತ್ರ ನಿರ್ವಹಿಸೋ ಸದವಕಾಶ ರವಿಕಿರಣ್ ಪಾಲಿಗೆ ಕೂಡಿ ಬಂದಿತ್ತು. ಹಾಗೆ ಚಿತ್ರೀಕರಣಕ್ಕೆ ಹೋದಾಗ ಎಲ್ಲ ವಿಭಾಗಗಳೂ ಅವರನ್ನು ಸೆಳೆದುಕೊಂಡಿದ್ದವು. ಕ್ಯಾಮೆರಾ ವರ್ಕ್ ಅಂತೂ ಅವರನ್ನು ಅಪಾರವಾಗಿ ಸೆಳೆದುಕೊಂಡಿತ್ತು. ಅದಾಗಲೇ ಉಪ್ಪಿ ಪ್ರಭಾವ ಬೇರೆ ಇತ್ತಲ್ಲಾ? ಅದೆಲ್ಲವೂ ಸೇರಿಕೊಂಡು ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟು ಸಿನಿಮಾ ಮಾಡಬೇಕೆಂಬ ಆಸೆಯಿಂದ ಹೊರ ಬಂದು ನಿಂತವರು ರವಿಕಿರಣ್. ಹೇಗೋ ಮಾಡಿ ಉಪೇಂದ್ರ ಅವರ ಪರಿಚಯ ಮಾಡಿಕೊಂಡ ಅವರ ಮುಂದೆ ಗುರಿ ಮತ್ತಷ್ಟು ಸ್ಪಷ್ಟವಾಗಲಾರಂಭಿಸಿತ್ತು.

    ಈ ನಡುವೆ ಒಂದೆರಡು ತಮಿಳು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಬಂದ ರವಿಕಿರಣ್ ತದ ನಂತರ ಗಿರ್ ಗಿಟ್ಲೆ ಕಥೆ ರೆಡಿ ಮಾಡಿಕೊಂಡಿದ್ದರು. 2012ರ ಸುಮಾರಿಗೆ ಪ್ರಚಾರದ ಶೋಕಿಯ ಆಸಾಮಿಯೊಬ್ಬರು ನಿರ್ಮಾಣ ಮಾಡೋದಾಗಿ ಮುಂದೆ ಬಂದು ಮುಹೂರ್ತ ನಡೆಸಿ, ಭರ್ಜರಿ ಪ್ರಚಾರ ಪಡೆದು ನಾಪತ್ತೆಯಾಗಿ ಬಿಟ್ಟಿದ್ದರು. ಇದರ ಆಫ್ಟರ್ ಎಫೆಕ್ಟ್ ರವಿಕಿರಣ್ ಅವರನ್ನು ಮೂರೂವರೆ ವರ್ಷಗಳ ಕಾಲ ಬಿಡದೆ ಬಾಧಿಸಿತ್ತು. ಆದರೂ ಪಟ್ಟು ಬಿಡದೆ ಪ್ರಯತ್ನಿಸಿದ ಫಲವಾಗಿಯೇ ಗಿರ್ ಗಿಟ್ಲೆ ಈವತ್ತು ದೊಡ್ಡ ಮಟ್ಟದ ಕ್ರೇಜ್ ನೊಂದಿಗೆ ಬಿಡುಗಡೆಗೆ ರೆಡಿಯಾಗಿದೆ. ಈ ಮೂಲಕ ಒಂದು ಹಿಟ್ ಚಿತ್ರ ಮತ್ತು ಭಿನ್ನ ಒಳನೋಟದ ನಿರ್ದೇಶಕ ಕನ್ನಡಕ್ಕೆ ಸಿಗೋದು ಪಕ್ಕಾ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv