Tag: ರವಾ ಫ್ರೈ

  • ಬಾಳೆಹಣ್ಣಿನ ರವಾ ಫ್ರೈ ಒಮ್ಮೆ ನೀವೂ ಟ್ರೈ ಮಾಡಿ

    ಬಾಳೆಹಣ್ಣಿನ ರವಾ ಫ್ರೈ ಒಮ್ಮೆ ನೀವೂ ಟ್ರೈ ಮಾಡಿ

    ನೀವು ಮೀನಿನ ರವಾ ಫ್ರೈ ಸವಿದಿರುತ್ತೀರಿ. ಅದೇ ಸ್ವಾದವನ್ನು ನೀವು ಸಸ್ಯಾಹಾರದಲ್ಲೂ ಪಡೆಯಬಹುದು ಎಂಬುದು ನಿಮಗೆ ಗೊತ್ತಾ? ಬಾಳೆಹಣ್ಣಿನಿಂದ ಮಾಡುವ ರವಾ ಫ್ರೈ ಥೇಟ್ ಫಿಶ್ ಫ್ರೈ ಟೇಸ್ಟ್ ಅನ್ನೇ ನೀಡುತ್ತದೆ. ನೀವೂ ಕೂಡಾ ಒಂದು ಬಾರಿ ಮಾಡಿ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    * ಬಾಳೆಕಾಯಿ – 2
    * ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಕೊತ್ತಂಬರಿ ಪುಡಿ – 1 ಟೀಸ್ಪೂನ್
    * ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    * ಗರಂ ಮಸಾಲಾ – ಅರ್ಧ ಟೀಸ್ಪೂನ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ನಿಂಬೆ ರಸ – 2 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್

    ರವಾ ಲೇಪನಕ್ಕೆ:
    * ಒರಟಾದ ರವೆ – 1 ಕಪ್
    * ಅಕ್ಕಿ ಹಿಟ್ಟು – 2 ಟೀಸ್ಪೂನ್
    * ಮೆಣಸಿನ ಪುಡಿ – ಕಾಲು ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಎಣ್ಣೆ – ಹುರಿಯಲು

    ಮಾಡುವ ವಿಧಾನ:
    * ಮೊದಲಿಗೆ ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು ಅಡ್ಡಕ್ಕೆ ತೆಳುವಾದ ತುಂಡುಗಳಾಗಿ ಕತ್ತರಿಸಿ.
    * ಒಂದು ದೊಡ್ಡ ತಟ್ಟೆಯಲ್ಲಿ ಮೆಣಸಿನ ಪುಡಿ, ಅರಿಶಿನ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ನಿಂಬೆ ರಸ ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ.
    * ಎಲ್ಲವೂ ಚೆನ್ನಾಗಿ ಮಿಶ್ರಣವಾದ ಬಳಿಕ ಕತ್ತರಿಸಿದ ಬಾಳೇಕಾಯಿಗೆ ಅದನ್ನು ಹರಡಿ 30 ನಿಮಿಷ ಹಾಗೇ ಬಿಡಿ.
    * ಈಗ ಇನ್ನೊಂದು ಲೇಪನಕ್ಕೆ ಬೇರೊಂದು ಬಟ್ಟಲಿನಲ್ಲಿ ರವೆ, ಅಕ್ಕಿ ಹಿಟ್ಟು, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಮ್ಯಾರಿನೇಟ್ ಮಾಡಿದ ಬಾಳೆಕಾಯಿಯನ್ನು ತೆಗೆದುಕೊಂಡು, ರವೆಯ ಮಿಶ್ರಣದಲ್ಲಿ ಅದ್ದಿ.
    * ಈಗ ಡೀಪ್ ಫ್ರೈಗೆ ಕಾದ ಎಣ್ಣೆಯಲ್ಲಿ ಕೋಟ್ ಮಾಡಲಾದ ಬಾಳೆಕಾಯಿಯ ತುಂಡುಗಳನ್ನು ಬಿಡಿ.
    * ಅವುಗಳನ್ನು ಗರಿಗರಿಯಾಗಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಕಂದು ಬಣ್ಣವಾಗುವವರೆಗೆ ಬೇಯಿಸಿ ಬಳಿಕ ಟಿಶ್ಯೂ ಪೇಪರ್ ಮೇಲೆ ಹರಡಿ.
    * ಈಗ ಬಾಳೆಕಾಯಿಯ ರವಾ ಫ್ರೈ ತಯಾರಾಗಿದ್ದು, ಅದನ್ನು ಹಸಿರು ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]