Tag: ರಮ್ಯಾ ಕೃಷ್ಣನ್

  • ಸಿನಿಮಾ ಬಿಟ್ಟು ರಾಜಕೀಯದತ್ತ ರಮ್ಯಾ ಕೃಷ್ಣನ್? ಸ್ಪಷ್ಟನೆ ನೀಡಿದ ನಟಿ

    ಸಿನಿಮಾ ಬಿಟ್ಟು ರಾಜಕೀಯದತ್ತ ರಮ್ಯಾ ಕೃಷ್ಣನ್? ಸ್ಪಷ್ಟನೆ ನೀಡಿದ ನಟಿ

    ನ್ನಡದ ರಾಜ ನರಸಿಂಹ, ನೀಲಾಂಬರಿ, ಗಡಿಬಿಡಿ ಗಂಡ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ರಮ್ಯಾ ಕೃಷ್ಣನ್ (Ramya Krishnan) ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಸಿನಿಮಾರಂಗದಲ್ಲಿ ‘ಬಾಹುಬಲಿ’ (Bahubali) ನಟಿಗೆ ಭರ್ಜರಿ ಡಿಮ್ಯಾಂಡ್ ಇದೆ. ಹೀಗಿರುವಾಗ ರಾಜಕೀಯ ಎಂಟ್ರಿಯ ಬಗ್ಗೆ ನಟಿ ಮಾತನಾಡಿದ್ದಾರೆ.

    ಸದಾ ಹೊಸ ಹೊಸ ಪಾತ್ರಗಳ ಮೂಲಕ ರಂಜಿಸುವ ನಟಿ ರಮ್ಯಾ ಕೃಷ್ಣನ್ ಇದೀಗ ಸಿನಿಮಾ ಬಿಟ್ಟು ರಾಜಕೀಯ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಇತ್ತೀಚಿಗೆ ಸಚಿವೆ ರೋಜಾ (Roja) ಜೊತೆ ರಮ್ಯಾ ಕೃಷ್ಣನ್ ಕುಟುಂಬ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

    ಕೆಲವು ನಟ-ನಟಿಯರು ಒಂದು ಹಂತ ತಲುಪಿದ ಮೇಲೆ ರಾಜಕೀಯ ಪ್ರವೇಶ ಮಾಡುವುದು ಮಾಮೂಲು. ಕೆಲವರಿಗೆ ಅದೃಷ್ಟ ಒಲಿದರೆ, ರಾಜಕೀಯಲ್ಲಿ ಹಲವು ತಾರೆಯರಿಗೆ ಅದೃಷ್ಟ ಖುಲಾಯಿಸುವುದು ಕಷ್ಟವೇ. ಅದೇನೇ ಇದ್ದರೂ ಈಗ ರಮ್ಯಾ ಕೃಷ್ಣನ್ ಅವರ ವಿಷಯ ಬಹಳ ಸುಳಿದಾಡುತ್ತಿದೆ. ಇತ್ತೀಚಿಗೆ ನಟಿ-ಸಚಿವೆ ರೋಜಾ ಅವರನ್ನು ರಮ್ಯಾಕೃಷ್ಣ ಭೇಟಿ ಮಾಡಿದ್ದರು. ರೋಜಾ ಅವರ ಮನೆಗೂ ಹೋಗಿದ್ದರು. ಇದರಿಂದ ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಅಭಿದಾಸ್‌, ಶರಣ್ಯ ಶೆಟ್ಟಿ ನಟನೆಯ ‌’ನಗುವಿನ ಹೂಗಳ ಮೇಲೆ’ ಸಿನಿಮಾದ ಸಾಂಗ್ ಔಟ್

    ಇದಕ್ಕೆ ಸ್ಪಷ್ಟೀಕರಣ ನೀಡಿರುವ ರಮ್ಯಾ ಕೃಷ್ಣನ್, ಸದ್ಯ ಅಂಥದ್ದೇನೂ ವಿಷಯವಿಲ್ಲ ಎಂದಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆಯಲು ರೋಜಾ ಅವರ ಸಹಾಯವನ್ನು ತೆಗೆದುಕೊಂಡಿದ್ದೆ ಮತ್ತು ರೋಜಾ ಅವರನ್ನು ನೋಡಿ ಬಹಳ ದಿನಗಳಾಗಿದ್ದರಿಂದ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ ಅಷ್ಟೇ ಎಂದಿದ್ದಾರೆ. ಒಂದು ವೇಳೆ ರಾಜಕೀಯ ಸೇರುವ ಯೋಚನೆ ಇದ್ದರೆ ನಿಮಗೇ ಮೊದಲು ತಿಳಿಸುತ್ತೇನೆ. ಯಾವ ಪಕ್ಷ ಎಂದೂ ಆಗಲೇ ಹೇಳುತ್ತೇನೆ ಎನ್ನುವ ಮೂಲಕ ಸದ್ಯ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ. ಒಟ್ನಲ್ಲಿ ತಾವು ರಾಜಕೀಯಕ್ಕೆ ಬರೋದಿಲ್ಲ ಎಂದು ಕ್ಲ್ಯಾರಿಟಿ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಬಾರಿ ಸೀರೆಯಲ್ಲಿ ಮಿಂಚಿದ `ಬಾಹುಬಲಿ’ ನಟಿ ರಮ್ಯಾ ಕೃಷ್ಣನ್

    ದುಬಾರಿ ಸೀರೆಯಲ್ಲಿ ಮಿಂಚಿದ `ಬಾಹುಬಲಿ’ ನಟಿ ರಮ್ಯಾ ಕೃಷ್ಣನ್

    ಹುಭಾಷಾ ನಟಿ ರಮ್ಯಾ ಕೃಷ್ಣನ್ ( Ramya Krishnan) ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿ ಇರುತ್ತಿದ್ದ ಈ ನಟಿ ಇದೀಗ ತಮ್ಮ ದುಬಾರಿ ಸೀರೆ ವಿಷ್ಯವಾಗಿ ಟಾಲಿವುಡ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

     

    View this post on Instagram

     

    A post shared by Ramya Krishnan (@meramyakrishnan)

    `ಬಾಹುಬಲಿ’ (Bahubali) ಶಿವಗಾಮಿ ಎಂದೇ ರಮ್ಯಾ ಕೃಷ್ಣನ್ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ರಮ್ಯಾ ಕೃಷ್ಣನ್ ನಟನೆಯ `ಲೈಗರ್’ (Liger) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ವಿಜಯ್ ದೇವರಕೊಂಡ ತಾಯಿಯಾಗಿ ಪವರ್‌ಫುಲ್ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಈ ನಟಿ ಇತ್ತೀಚೆಗೆ ಖಾಸಗಿ ಶೋವೊಂದರಲ್ಲಿ ದುಬಾರಿ ಸೀರೆಯುಟ್ಟು ಬಂದಿದ್ದಾರೆ. ಅವರು ಧರಿಸಿದ್ದ ಗ್ರ್ಯಾಂಡ್ ಸೀರೆ ಸದ್ಯ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.‌ ಇದನ್ನೂ ಓದಿ:ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್

    ಕಿರುತೆರೆ ರಿಯಾಲಿಟಿ ಶೋವೊಂದರಲ್ಲಿ ರಮ್ಯಾ ಕೃಷ್ಣನ್ ದುಬಾರಿ ಸೀರೆ ಧರಿಸಿದ್ದರು. ಪಿಂಕ್ ಕಲರ್ ವೆಲ್ವೆಟ್ ಸೀರೆಗೆ ಗೋಲ್ಡನ್ ಥ್ರೆಡ್ ಡಿಸೈನ್ ಮಾಡಿರುವ ಸೀರೆಯಲ್ಲಿ ನಟಿ ಮಿಂಚಿದ್ದರು. ಇನ್ನು 2,00,000 ರೂಪಾಯಿ ಬೆಲೆ ಬಾಳುವ ದುಬಾರಿ ಸೀರೆಯಲ್ಲಿ ನಟಿ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ. 51ರ ವಯಸ್ಸಿನಲ್ಲೂ ಗ್ಲಾಮರಸ್‌ ಲುಕ್‌ನಲ್ಲಿ ಮಿಂಚಿರುವ ರಮ್ಯಾ ಕೃಷ್ಣನ್ ಅವರನ್ನ ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಲೈಗರ್’ ಚಿತ್ರದ ಪ್ರಚಾರದಲ್ಲಿ ರಮ್ಯಾ ಕೃಷ್ಣನ್ ಮಿಂಚಿಂಗ್

    `ಲೈಗರ್’ ಚಿತ್ರದ ಪ್ರಚಾರದಲ್ಲಿ ರಮ್ಯಾ ಕೃಷ್ಣನ್ ಮಿಂಚಿಂಗ್

    ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ನಟನೆಯ `ಲೈಗರ್’ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಚಿತ್ರದ ಪ್ರಚಾರದ ವೇಳೆಯಲ್ಲಿ ವಿಜಯ್ ಮತ್ತು ಅನನ್ಯಾ ಜೊತೆ ರಮ್ಯಾ ಕೃಷ್ಣನ್ ಕೂಡ ಭಾಗಿಯಾಗಿದ್ದರು. ಇದೀಗ ರಮ್ಯಾ ಅವರ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಚಿತ್ರದ ಪೋಸ್ಟರ್, ಟೀಸರ್ ಮೂಲಕ ಸದ್ದು ಮಾಡುತ್ತಿರುವ `ಲೈಗರ್’ ಸಿನಿಮಾ ಇದೇ ಆಗಸ್ಟ್ 25ಕ್ಕೆ ತೆರೆಗೆ ಬರುತ್ತಿದೆ. ಚಿತ್ರದ ಪ್ರಚಾರ ಕೂಡ ಭರ್ಜರಿ ಆಗಿ ನಡೆಯುತ್ತಿದೆ. ಸದ್ಯ ಚಿತ್ರತಂಡ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಈ ವೇಳೆ `ಲೈಗರ್’ ಜೋಡಿಯ ಜತೆ ರಮ್ಯಾ ಕೃಷ್ಣನ್ ಕೂಡ ಕಾಣಿಸಿಕೊಂಡಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:`ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಅಮೀರ್ ಖಾನ್

     

    View this post on Instagram

     

    A post shared by Viral Bhayani (@viralbhayani)

    ಕೆಂಪು ಮತ್ತು ನೀಲಿ ಬಣ್ಣದ ಸೀರೆಯಲ್ಲಿ ಎವರ್‌ಗ್ರೀನ್ ಬ್ಯೂಟಿ ರಮ್ಯಾ ಕೃಷ್ಣನ್ ಮಿರ ಮಿರ ಅಂತಾ ಮಿಂಚಿದ್ದಾರೆ. 51ರ ವಯಸ್ಸಿನಲ್ಲಿಯೂ ರಮ್ಯಾ ಫಿಟ್ ಆಗಿ ಕಾಣಿಸಿಕೊಂಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. ʻಲೈಗರ್ʼ ಚಿತ್ರದಲ್ಲಿ ವಿಜಯ್ ದೇವರಕೊಂಡ ತಾಯಿಯಾಗಿ ರಮ್ಯಾ ಕೃಷ್ಣನ್ ಖಡಕ್ ಆಗಿ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ಚೆನ್ನೈ: ತಮಿಳಿನ ಫೇಮಸ್ ನಟಿ ಪ್ರಿಯಾಂಕ ರವರು ಬುಧವಾರ ಅವರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬುಧವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಕೆಲಸದವಳು ಬಾಗಿಲು ಬಡಿದರೂ ತೆಗೆಯುವುದಿಲ್ಲ. ಹಾಗಾಗಿ ಕಿಟಕಿಯಲ್ಲಿ ನೋಡಿದಾಗ ನಟಿ ಪ್ರಿಯಾಂಕರವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದೆ. ಕೂಡಲೇ ಕೆಲಸದವಳು ನೆರೆಹೊರೆಯವರಿಗೆ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪ್ರಿಯಾಂಕರವರು ತಮಿಳು ಟಿವಿ ಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಸದ್ಯಕ್ಕೆ ‘ವಂಶಂ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಅದರಲ್ಲಿ ಬಾಹುಬಲಿ ಖ್ಯಾತಿಯ ನಟಿ ರಮ್ಯಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲು ಸಾಂಸರಿಕ ಕಲಹ ಕಾರಣವೆಂದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾದ ವೇಳೆ ಪತಿ ಬಾಲಾ ಸ್ಥಳದಲ್ಲಿ ಇರಲಿಲ್ಲ. ಅವರಿಬ್ಬರಿಗೂ ಮೂರು ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಇಬ್ಬರ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.