Tag: ರಮ್ಯಾಕೃಷ್ಣ

  • ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಪ್ರಕಾಶ್ ರೈ- ರಮ್ಯಾಕೃಷ್ಣ

    ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಪ್ರಕಾಶ್ ರೈ- ರಮ್ಯಾಕೃಷ್ಣ

    ಶ್ರೀನಗರ ಕಿಟ್ಟಿ (Srinagar Kitty) ಮುಖ್ಯಭೂಮಿಕೆಯಲ್ಲಿ ಮೂಡಿ ಬರಲಿರುವ ಸಂಜು ವೆಡ್ಸ್ ಗೀತಾ 2 (Sanju Weds Geetha 2) ಸಿನಿಮಾದಲ್ಲಿ ಅಚ್ಚರಿಯ ತಾರಾಬಳಗ ಇರಲಿದೆಯಂತೆ ನಿರ್ದೇಶಕ ನಾಗಶೇಖರ್ (Nagashekhar) ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಕಿಟ್ಟಿ ನಾಯಕನಾದರೆ, ನಾಯಕಿಯ ಆಯ್ಕೆ ನಡೆಯಬೇಕಿದೆ. ಈಗಾಗಲೇ ರಚಿತಾ ರಾಮ್ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿರುವುದರಿಂದ, ಬಹುತೇಕ ಅವರೇ ಖಚಿತ ಎಂದು ಹೇಳಲಾಗುತ್ತಿದೆ.

    ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈ ಸಿನಿಮಾದಲ್ಲಿ ದಕ್ಷಿಣದ ಖ್ಯಾತ ತಾರೆಗಳಾದ ಪ್ರಕಾಶ್ ರೈ (Prakash Rai) ಮತ್ತು ರಮ್ಯಾಕೃಷ್ಣ (Ramya Krishna) ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಯಾರು, ಯಾವ ಪಾತ್ರಗಳನ್ನು ಮಾಡಲಿದ್ದಾರೆ ಎಂದು ನಾಗಶೇಖರ್ ಹೇಳದೇ ಇದ್ದರೂ, ಇಬ್ಬರೂ ನಟಿಸುವುದು ಪಕ್ಕಾ ಎಂದಿದ್ದಾರೆ. ಈಗಾಗಲೇ ಹಾಡುಗಳಿಗೆ ಸಂಗೀತ ಸಂಯೋಜನೆಯ ಕೆಲಸ ಪ್ರಾರಂಭವಾಗಿದೆ. ಇದನ್ನೂ ಓದಿ:‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

    ಈ ಸಿನಿಮಾದ ಕುರಿತು ಹತ್ತಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಿರ್ದೇಶಕ ನಾಗಶೇಖರ್. ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಾಯಕನಾದರೆ, ರಮ್ಯಾ ನಾಯಕಿ. ಆದರೆ, ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮುಂದುವರೆದರೆ, ರಮ್ಯಾ ನಾಯಕಿಯಾಗಿ ನಟಿಸುತ್ತಿಲ್ಲ. ಅದರ ಬದಲು ರಚಿತಾ ರಾಮ್ ಅವರಿಗೆ ಮಣೆ ಹಾಕಿದ್ದಾರಂತೆ ನಾಗಶೇಖರ್. ಆದರೆ, ರಚಿತಾ ಈವರೆಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

    ಮೊದಲ ಭಾಗದ ಕಥೆಯನ್ನು ರಾಜ್ಯದ ಒಬ್ಬ ಪೊಲೀಸ್ ಅಧಿಕಾರಿ ಹೇಳಿದ್ದರು. ಅವರು ತನಿಖೆ ಮಾಡಿದ್ದ ಕೇಸ್ ಅನ್ನು ಆಧರಿಸಿದ ಸಿನಿಮಾ ಅದಾಗಿತ್ತು. ಪಾರ್ಟ್ 2 ಸಿನಿಮಾಗೆ ಕಥೆ ಹೇಳಿದ್ದು ಕನ್ನಡದ ಒಬ್ಬ ಸೂಪರ್ ಸ್ಟಾರ್ ಅಂತೆ. ಈ ಕುರಿತು ನಾಗಶೇಖರ್ ಮಾತನಾಡಿದ್ದಾರೆ. ಆದರೆ, ಆ ಸ್ಟಾರ್ ಯಾರು ಎನ್ನುವ ಕುತೂಹಲವನ್ನು ಅವರು ಬಿಟ್ಟುಕೊಟ್ಟಿಲ್ಲ. ಸ್ಟಾರ್ ನಟರೊಬ್ಬರು ಹೇಳಿದ ಕಥೆಯನ್ನೇ ಡೆವಲಪ್‌ ಮಾಡಿದ್ದೇನೆ ಎಂದಿದ್ದಾರೆ ನಾಗಶೇಖರ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರೂಪಕರೂ ಚೇಂಜ್- ಬಿಗ್‍ಬಾಸ್‍ಗೆ ರಮ್ಯಾಕೃಷ್ಣ ಬಾಸ್

    ನಿರೂಪಕರೂ ಚೇಂಜ್- ಬಿಗ್‍ಬಾಸ್‍ಗೆ ರಮ್ಯಾಕೃಷ್ಣ ಬಾಸ್

    ಚೆನ್ನೈ: ಬಿಗ್‍ಬಾಸ್ ಕಾರ್ಯಕ್ರಮ ಅಪಾರ ಪ್ರಮಾಣದ ಜನಮನ್ನಣೆಯನ್ನು ಪಡೆದುಕೊಂಡಿದೆ. ಯಾವ ಸ್ಪರ್ಧಿಗಳು ಬರುತ್ತಾರೆ ಎನ್ನುವ ಕುತೂಹಲದಂತೆ ಯಾರು ಬಿಗ್‍ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಇದೀಗ ತಮಿಳಿನಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ಕಾರ್ಯಕ್ರಮದ ಕುರಿತಾಗಿರುವ ಸುದ್ದಿಯೊಂದು ಹರಿದಾಡುತ್ತಿದೆ.

    ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂನಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ಕಾರ್ಯಕ್ರಮ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ತೆಲುಗು ಮತ್ತು ತಮಿಳಿನಲ್ಲಿ ಬದಲಾವಣೆಗಳು ಆಗುತ್ತಿವೆ. ತಮಿಳು ಬಿಗ್‍ಬಾಸ್ ನಿರೂಪಣೆ ಮಾಡುತ್ತಿದ್ದ ಕಮಲ್ ಹಾಸನ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಈಗ ನಟಿ ರಮ್ಯಾ ಕೃಷ್ಣ ಆಗಮಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದನ್ನೂ ಓದಿ: ಕೋವಿಡ್ ಹೊಸ ರೂಪಾಂತರಿ ವೈರಾಣು ನಿಯಂತ್ರಣಕ್ಕೆ ಕ್ರಮ: ಸುಧಾಕರ್

    ಕಮಲ್ ಹಾಸನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಕೆಲವೇ ದಿನಗಳ ಹಿಂದೆ ಖಚಿತಗೊಂಡಿತ್ತು. ಸದ್ಯ ಅವರು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಿಂದ ಬ್ರೇಕ್ ಪಡೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಿರೂಪಣೆಯ ಜಬಾವ್ದಾರಿಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬ ಕುತೂಹಲವೂ ಇತ್ತು. ಇನ್ನೊಂದೆಡೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರಿಗೆ ಈ ಕೆಲಸ ವಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಹರಡಿತ್ತು. ಆದರೆ ಇವ್ಯಾವುವೂ ನಿಜವಾಗಿಲ್ಲ. ಇದನ್ನೂ ಓದಿ: ಓಮಿಕ್ರಾನ್‌ ಆತಂಕ- ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಗೊಳಿಸುವ ಯೋಜನೆ ಪರಾಮರ್ಶಿಸಲು ಪ್ರಧಾನಿ ಸೂಚನೆ

    2019ರಲ್ಲಿ ಬಿಗ್‍ಬಾಸ್ ತೆಲುಗು ಸೀಸನ್ 3 ನಿರೂಪಣೆಯನ್ನು ನಾಗಾರ್ಜುನ ಮಾಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಕೆಲವು ವಾರಗಳ ಕಾಲ ನಿರೂಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಆಗ ರಮ್ಯಾಕೃಷ್ಣ ಅವರ ಸ್ಥಾನವನ್ನು ತುಂಬಿದ್ದರು. ಆ ಅನುಭವವನ್ನೇ ಇಟ್ಟುಕೊಂಡು ಅವರೀಗ ತಮಿಳು ಬಿಗ್‍ಬಾಸ್ ಸೀಸನ್ 5 ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಲ್ಲಿ ನಟಿಸಿರುವ ರಮ್ಯಾ ಕೃಷ್ಣ ಅವರು ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಕೆಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ, ಜಡ್ಜ್ ಆಗಿ ಕೆಲಸ ಮಾಡಿದ ಅನುಭವವವೂ ಅವರಿಗೆ ಇದೆ. ಹೀಗಾಗಿ ಅವರು ಬಿಗ್‍ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  • ರಮ್ಯಾಕೃಷ್ಣ ಕಾರಿನಲ್ಲಿ ಸಾಗಿಸ್ತಿದ್ದ 100 ಮದ್ಯದ ಬಾಟೆಲ್ ವಶಕ್ಕೆ

    ರಮ್ಯಾಕೃಷ್ಣ ಕಾರಿನಲ್ಲಿ ಸಾಗಿಸ್ತಿದ್ದ 100 ಮದ್ಯದ ಬಾಟೆಲ್ ವಶಕ್ಕೆ

    ಚೆನ್ನೈ: ನಟಿ ರಮ್ಯಾಕೃಷ್ಣರ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 100 ಮದ್ಯದ ಬಾಟೆಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ರಮ್ಯಾಕೃಷ್ಣ ಸದ್ಯ ತಮಿಳುನಾಡಿನ ಚೆನ್ನೈನಲ್ಲಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ. ರಮ್ಯಾಕೃಷ್ಣ ಪ್ರಯಾಣಿಸುತ್ತಿದ್ದ ಟೊಯೊಟಾ ಇನ್ನೋವಾ ಕಾರ್ ನ್ನು ಪೊಲೀಸರು ಚೆಕ್ ಪೋಸ್ಟ್ ಬಳಿ ತಡೆದು ಪರಿಶೀಲನೆ ನಡೆಸುವಾಗ ಮದ್ಯ ಸಿಕ್ಕಿದೆ. ಇನ್ನು ಪರಿಶೀಲನೆ ವೇಳೆ ರಮ್ಯಾಕೃಷ್ಣ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ವರದಿಯಾಗಿದೆ.

    ಪೊಲೀಸರು ರಮ್ಯಾಕೃಷ್ಣ ಅವರ ಕಾರಿನ ಚಾಲಕ ಸೆಲ್ವಕುಮಾರ್ ನನ್ನು ಬಂಧಿಸಿ, 100 ಮದ್ಯದ ಬಾಟೆಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತದನಂತರ ಸೆಲ್ವಕುಮಾರ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಪ್ರಕರಣ ಸಂಬಂಧ ರಮ್ಯಾಕೃಷ್ಣರ ಯಾವುದೇ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿಲ್ಲ.

  • ಪೋರ್ನ್ ಸ್ಟಾರ್ ಆದ ಬಾಹುಬಲಿಯ ಶಿವಗಾಮಿ ನಟಿ ರಮ್ಯಾಕೃಷ್ಣ

    ಪೋರ್ನ್ ಸ್ಟಾರ್ ಆದ ಬಾಹುಬಲಿಯ ಶಿವಗಾಮಿ ನಟಿ ರಮ್ಯಾಕೃಷ್ಣ

    ಚೆನ್ನೈ: ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ ರಮ್ಯಾಕೃಷ್ಣ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರಮ್ಯಾಕೃಷ್ಣ ಮೊದಲ ಬಾರಿಗೆ ಪೋರ್ನ್  ಸ್ಟಾರ್ ಆಗಿ ನಟಿಸುತ್ತಿದ್ದಾರೆ.

    ತಮಿಳಿನಲ್ಲಿ ತ್ಯಾಗರಾಜನ್ ಕುಮಾರರಾಜ್ ನಿರ್ದೇಶನ ಮಾಡುತ್ತಿರುವ ‘ಸೂಪರ್ ಡಿಲೆಕ್ಸ್’ ಚಿತ್ರದಲ್ಲಿ ರಮ್ಯಾಕೃಷ್ಣ ಮೊದಲ ಬಾರಿಗೆ ನೀಲಿತಾರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಲೀಲಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಇತ್ತೀಚೆಗೆ ರಮ್ಯಾಕೃಷ್ಣ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿ, “ನನಗೆ ಈ ಪಾತ್ರ ಮಾಡುವಾಗ ಮೊದಲು ತುಂಬಾ ಮುಜುಗರ ಆಯಿತು. ಈ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದೆ. ಏಕೆಂದರೆ ಈ ಚಿತ್ರದ ಕಥೆಯಲ್ಲಿ ತುಂಬಾ ತಾಕತ್ ಇದೆ. ನಾನು ಈ ಪಾತ್ರವನ್ನು ಹಣಕ್ಕಾಗಿ ಮಾಡಿಲ್ಲ” ಎಂದು ಹೇಳಿದ್ದಾರೆ.

    ಈ ಚಿತ್ರದ ಸೀನ್‍ವೊಂದು ಓಕೆ ಮಾಡಲು ನಿರ್ದೇಶಕರಿಗಾಗಿ ನಾನು ಎರಡು ದಿನ ಬರೋಬ್ಬರಿ 37 ರೀ-ಟೇಕ್ ತೆಗೆದುಕೊಂಡಿದ್ದೇನೆ. ನಾನು ರೀ-ಟೇಕ್ ತೆಗೆದುಕೊಂಡು ಅಭಿನಯಿಸುವಾಗ ಅಲ್ಲಿದ್ದ ಸಹಾಯಕರು ಅದನ್ನು ನೋಡಿ ಆಶ್ಚರ್ಯಪಟ್ಟರು ಎಂದರು.

    ಈ ಚಿತ್ರದ ಪಾತ್ರಕ್ಕಾಗಿ ರಮ್ಯಾಕೃಷ್ಣ ಅವರ ಬದಲು ಹಿರಿಯ ನಟಿ ನಾದಿಯಾ ಅವರನ್ನು ಸಂಪರ್ಕಿಸಲಾಗಿತ್ತು. ಬಳಿಕ ಈ ಪಾತ್ರಕ್ಕೆ ರಮ್ಯಾಕೃಷ್ಣ ಅವರೇ ಸೂಕ್ತ ಎಂದು ಸ್ವತಃ ಚಿತ್ರದ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ್ ಹೇಳಿದ್ದಾರೆ.

    ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಇದೇ ತಿಂಗಳು 29ರಂದು ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv