Tag: ರಮ್ಯ

  • `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

    `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

    ಬೆಂಗಳೂರು: ಕೊಲೆ ಆರೋಪಿ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿರುವ ನಟಿ ರಮ್ಯಾ (Actress Ramya) ದೂರು ಕೊಡೋದಕ್ಕೂ ಮುಂದಾಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ (Renukaswamy) ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಈ ವಿವಾದ ಈಗ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ನಡುವೆ ದರ್ಶನ್‌ ಅಭಿಮಾನಿಗಳಿಗಾಗಿಯೇ ತೆರೆಯಲಾಗಿರುವ ಅಫಿಶಿಯಲ್‌ ಫ್ಯಾನ್ಸ್‌ ಪೇಜ್‌ ʻಡಿ ಕಂಪನಿʼ (DCompany) ಯಾರೊಬ್ಬರೂ ಯಾವುದಕ್ಕೂ ರಿಯಾಕ್ಟ್‌ ಮಾಡದಂತೆ ಮನವಿ ಮಾಡಲಾಗಿದೆ.

    ಡಿ ಕಂಪನಿ ಪೋಸ್ಟ್‌ನಲ್ಲಿ ಏನಿದೆ?
    ಡಿ-ಸೆಲಬ್ರೆಟಿಸ್‌ಗಳಿಗಾಗಿಯೇ ತೆರೆಯಲಾದ ಅಫಿಶಿಯಲ್ ಫ್ಯಾನ್ಸ್‌ ಪೇಜ್‌ನಲ್ಲಿ, ಡಿ ಬಾಸ್‌ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ. ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ. ಯಾರಿಗೂ ಮೆಸೇಜ್‌ ಮಾಡಬೇಡಿ. ಮಪ್ರಚಾರಕ್ಕೆ ಆಗಲಿ, ಹುನ್ನಾರ ಮಾಡಲಿ, ಯಾರು ಏನೇ ಅಂದರೂ ತಲೆ ಕೆಡಸಿಕೊಳ್ಳಬೇಡಿ. ದರ್ಶನ್ ಫ್ಯಾನ್ಸ್ ಏನೆಂದು, ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿ. ಅವಮಾನಗಳು ಇನ್ನಷ್ಟು ಕೆಲಸ ಮಾಡಲು ಮೆಟ್ಟಿಲು ಆಗಲಿ ಎಂದು ಡಿ ಕಂಪನಿ ಅಭಿಮಾನಿಗಳಿಗೆ ಮನವಿ ಮಾಡಿದೆ. ಅಲ್ಲದೇ ʻಕಾಲಯ ತಸ್ಮೈ ನಮಃʼ ಅಂತ ಬರೆದು ಡೆವಿಲ್‌ ಸಿನಿಮಾದ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ಇದನ್ನೂ ಓದಿ: `I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಒಳ್ಳೆ ಹುಡ್ಗ ಪ್ರಥಮ್

    ಏನಿದು ವಿವಾದ?
    ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮಸೇಜ್ ಕಳುಹಿಸುತ್ತಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕಳುಹಿಸುತ್ತಿರುವ ಅಶ್ಲೀಲ ಮಸೇಜ್‌ಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ರಮ್ಯಾ. ಇದನ್ನೂ ಓದಿ: ʻಡಿʼ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌ – ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ: ಪರಮೇಶ್ವರ್‌

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ ನಟಿ ರಮ್ಯಾ. ಈ ಆಕ್ರೋಶ ಅತಿರೇಕಕ್ಕೆ ಹೋದ ಕಾರಣದಿಂದಾಗಿ ನಟಿ ರಮ್ಯಾ ಕೂಡ ದರ್ಶನ್ ಫ್ಯಾನ್ಸ್ನ ಮುಖವಾಡ ಕಳಚುತ್ತಿದ್ದಾರೆ. ತಮಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ದರ್ಶನ್ ಫ್ಯಾನ್ಸ್ ಹೆಸರಿನ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಸ್ಕಿçÃನ್ ಶಾಟ್ ತೆಗೆದು, ಅಪ್‌ಲೋಡ್ ಮಾಡುತ್ತಿದ್ದಾರೆ. ಇದನ್ನೂ ಓದಿ: `ದಯೆಯಿಂದಿರಿ’ ಡಿ-ಬಾಸ್ ಫ್ಯಾನ್ಸ್‌ಗೆ ರಕ್ಷಿತಾ ಕಿವಿಮಾತು – ಸ್ಯಾಂಡಲ್‌ವುಡ್ ಕ್ವೀನ್‌ಗೆ ಟಾಂಗ್ ಕೊಟ್ರಾ ಕ್ರೇಜಿ ಕ್ವೀನ್?

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಆ ಎಲ್ಲಾ ಸ್ಕ್ರೀನ್‌ ಶಾಟ್‌ ಅನ್ನು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡಾಮಂಡಲರಾಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರೋ ಮೋಹಕತಾರೆ, ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್‌ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕಚಿಕ್ಕ ಮಕ್ಕಳ ಬಗ್ಗೆ ಕೆಟ್ಟಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅಶ್ಲೀಲ ಕಮೆಂಟ್ ಅಕೌಂಟ್‌ಗಳನ್ನು ಬಹಿರಂಗ ಪಡಿಸಿದ ರಮ್ಯಾ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. `ರೇಣುಕಾಸ್ವಾಮಿ ಹಾಗೂ ಡಿಬಾಸ್ ಫ್ಯಾನ್ಸ್ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀದ್ವೇಷಿ ಮನೋಭಾವದವರು. ಇಂಥವರಿಂದಲೇ ಹೆಣ್ಣು ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’ ಅಂತ ಡಿ ಬಾಸ್ ಫ್ಯಾನ್ಸ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ ರಮ್ಯಾ. `ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಾಮೆಂಟ್‌ಗಳು ಸಾಕ್ಷಿ. ನಿಮ್ಮ ಮಸೇಜ್‌ಗಳಿಂದ ನಿಮ್ಮ ಯೋಗ್ಯತೆ ಇಷ್ಟರಲ್ಲೇ ಗೊತ್ತಾಗುತ್ತೆ’ ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.

  • ರಮ್ಯಾ ವಿರುದ್ಧ `ಡಿ’ ಫ್ಯಾನ್ಸ್‌ನಿಂದ ಕೆಟ್ಟ ಕಾಮೆಂಟ್ಸ್; ಕಾನೂನು ಹೋರಾಟಕ್ಕೆ ಮುಂದಾದ ಮೋಹಕ ತಾರೆ

    ರಮ್ಯಾ ವಿರುದ್ಧ `ಡಿ’ ಫ್ಯಾನ್ಸ್‌ನಿಂದ ಕೆಟ್ಟ ಕಾಮೆಂಟ್ಸ್; ಕಾನೂನು ಹೋರಾಟಕ್ಕೆ ಮುಂದಾದ ಮೋಹಕ ತಾರೆ

    ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಫ್ಯಾನ್ಸ್ (Darshan Fans) ವಿರುದ್ಧ ಸ್ಯಾಂಡಲ್‌ವುಡ್ ಕ್ವೀನ್, ನಟಿ ರಮ್ಯಾ (Ramya) ಗರಂ ಆಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕಳುಹಿಸುತ್ತಿರುವ ಅಶ್ಲೀಲ ಮೆಸೇಜ್‌ಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ರಮ್ಯಾ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ ನಟಿ ರಮ್ಯಾ. ಈ ಆಕ್ರೋಶ ಅತಿರೇಕಕ್ಕೆ ಹೋದ ಕಾರಣದಿಂದಾಗಿ ನಟಿ ರಮ್ಯಾ ಕೂಡ ದರ್ಶನ್ ಫ್ಯಾನ್ಸ್‌ನ ಮುಖವಾಡ ಕಳಚುತ್ತಿದ್ದಾರೆ. ತಮಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ದರ್ಶನ್ ಫ್ಯಾನ್ಸ್ ಹೆಸರಿನ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಸ್ಕ್ರೀನ್‌ಶಾಟ್ ತೆಗೆದು, ಅಪ್ಲೋಡ್ ಮಾಡುತ್ತಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಆ ಎಲ್ಲಾ ಸ್ಕ್ರೀನ್‌ಶಾಟ್ ಅನ್ನು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡಾಮಂಡಲರಾಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರೋ ಮೋಹಕತಾರೆ, ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್‌ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕಚಿಕ್ಕ ಮಕ್ಕಳ ಬಗ್ಗೆ ಕೆಟ್ಟಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅಶ್ಲೀಲ ಕಮೆಂಟ್ ಅಕೌಂಟ್‌ಗಳನ್ನು ಬಹಿರಂಗ ಪಡಿಸಿದ ರಮ್ಯಾ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. `ರೇಣುಕಾಸ್ವಾಮಿ ಹಾಗೂ ಡಿಬಾಸ್ ಫ್ಯಾನ್ಸ್ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀದ್ವೇಷ ಮನೋಭಾವದವರು. ಇಂಥವರಿಂದಲೇ ಹೆಣ್ಣು ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’ ಅಂತ ಡಿ ಬಾಸ್ ಫ್ಯಾನ್ಸ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ ರಮ್ಯಾ. `ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಾಮೆಂಟ್‌ಗಳು ಸಾಕ್ಷಿ. ನಿಮ್ಮ ಮಸೇಜ್‌ಗಳಿಂದ ನಿಮ್ಮ ಯೋಗ್ಯತೆ ಇಷ್ಟರಲ್ಲೇ ಗೊತ್ತಾಗುತ್ತೆ’ ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.

  • ‘ಹಾಸ್ಟೆಲ್ ಹುಡುಗರ’ ಜೊತೆಯಲ್ಲಿ ಮೋಹಕ ತಾರೆ ರಮ್ಯಾ:  ಟೀಸರ್ ರಿಲೀಸ್

    ‘ಹಾಸ್ಟೆಲ್ ಹುಡುಗರ’ ಜೊತೆಯಲ್ಲಿ ಮೋಹಕ ತಾರೆ ರಮ್ಯಾ: ಟೀಸರ್ ರಿಲೀಸ್

    ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಈ ಸಿನಿಮಾ ಹೆಸರು ನೀವು ಕೇಳಿರ್ತೀರಾ. ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸಖತ್ ಕ್ರಿಯೇಟಿವ್ ಆಗಿರೋ ಸಿನಿಮಾ ಪ್ರಮೋಷನಲ್ ವೀಡಿಯೋಗಳು ನಿಮ್ಮನ್ನು ಸೆಳೆದಿರುತ್ತೆ. ಅದಕ್ಕೂ ಮಿಗಿಲಾಗಿ ಎಲ್ಲರ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದ ವೀಡಿಯೋನಂತೂ ಕಣ್ತುಂಬಿಕೊಂಡಿರ್ತಿರಾ.ಹೀಗೆ ಸ್ಟಾರ್ ನಟರ ಮೂಲಕ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರೋ ಈ ಚಿತ್ರತಂಡ ಇದೀಗ  ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ  (Ramya) ಅವರನ್ನು ಚಿತ್ರದ ಪ್ರಚಾರ ಕಾರ್ಯಕ್ಕೆ ಕರೆತಂದಿದೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ ಅವರಿಂದ ಸಿನಿಮಾ ಪ್ರಮೋಷನಲ್ ಕಟೆಂಟ್ ಮಾಡಿಸಿ ಗಮನ ಸೆಳೆದಿತ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಟೀಂ. ಸ್ಟಾರ್ ನಟರ ಮೂಲಕ ಸಿನಿಮಾ ಪ್ರಚಾರ ಒಂದು ಕಡೆಯಾದ್ರೆ ಇಂಟ್ರಸ್ಟಿಂಗ್ ಪ್ರಮೋಷನಲ್ ಕಂಟೆಂಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಸಖತ್ ಇಂಪ್ರೆಸ್ ಮಾಡಿತ್ತು. ಹೀಗೆ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಚಿತ್ರತಂಡ. ಈ ಬಾರಿ ಮೋಹಕ ತಾರೆ ರಮ್ಯಾ ಅವರನ್ನು ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಕರೆತಂದಿದೆ. ರಮ್ಯಾ ಕೂಡ ಚಿತ್ರತಂಡಕ್ಕೆ ಸಾಥ್ ನೀಡಲು ಒಪ್ಪಿದ್ದು, ಬಹಳ ಖುಷಿಯಿಂದಲೇ ಚಿತ್ರದ ಪ್ರಮೋಷನಲ್ ಕಂಟೆಂಟ್ ವೀಡಿಯೋ ನಲ್ಲಿ ಭಾಗಿಯಾಗಿದ್ದಾರೆ. ಇಂದು ಸಂಜೆ ಆರು ಗಂಟೆಗೆ ಮೋಹಕ ತಾರೆ ಭಾಗಿಯಾಗಿರುವ ಚಿತ್ರದ ಪ್ರಮೋಷನಲ್ ಟೀಸರ್ ಬಿಡುಗಡೆ ಮಾಡುತ್ತಿದೆ ಚಿತ್ರತಂಡ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ: ನೇಹಾ ಗೌಡ

    ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ ಪಿ ಅವರ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಇದಾಗಿದೆ. ಈ ಚಿತ್ರದ ಕಥೆ ಮೊದಲು ಕೇಳಿದವರು ಮತ್ತದೇ ನಮ್ಮೆಲ್ಲರ ಪ್ರೀತಿಯ ರಾಜರತ್ನ ಪುನೀತ್ ರಾಜ್ ಕುಮಾರ್. ಚಿತ್ರತಂಡ ಈ ಸಿನಿಮಾ ಚಿತ್ರೀಕರಣಕ್ಕೂ ಮೊದಲು ಅಪ್ಪು ಅವರ ಬಳಿ ಹೋಗಿ ಸಿನಿಮಾ ಬಗ್ಗೆ ಮಾತುಕತೆ ನಡೆಸಿದೆ. ಕಥೆ ಕೇಳಿ ಸಖತ್ ಇಂಪ್ರೆಸ್ ಆದ ಅಪ್ಪು ಸಿನಿಮಾ ಮಾಡಿ ಎಂದು ಇಡೀ ತಂಡಕ್ಕೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ರಂತೆ. ಅವರ ಆರ್ಶೀವಾದದೊಂದಿಗೆ ಸಿನಿಮಾ ಚಿತ್ರೀಕರಣ ಆರಂಭಿಸಿದ್ವಿ ಎಂದು ನಿರ್ಮಾಪಕ ವರುಣ್ ಕುಮಾರ್ ಹಾಗೂ ಪ್ರಜ್ವಲ್ ಬಿಪಿ ತಿಳಿಸಿದ್ದಾರೆ.

    ಯೂತ್ ಸಬ್ಜೆಕ್ಟ್ ಒಳಗೊಂಡ  ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ (Nitin Krishnamurthy) ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರದಲ್ಲಿರಲಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ತರುವ ಪ್ಲ್ಯಾನ್ ನಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ರಮ್ಯಾ ಮೇಲಿನ ಕೋಪಕ್ಕೆ ಕನ್ನಡಿಗರಿಗೆ ಕಹಿ ಕೊಟ್ಟ ರಾಹುಲ್

    ರಮ್ಯಾ ಮೇಲಿನ ಕೋಪಕ್ಕೆ ಕನ್ನಡಿಗರಿಗೆ ಕಹಿ ಕೊಟ್ಟ ರಾಹುಲ್

    -`ಕೈ’ ಐಟಿ ಸೆಲ್‍ನಲ್ಲಿದ್ದ ಕನ್ನಡಿಗರಿಗೆ ಅನ್ಯಾಯ

    ಬೆಂಗಳೂರು: ಕಾಂಗ್ರೆಸ್ ಐಟಿ ಸೆಲ್‍ನಲ್ಲಿ ಸದಾ ಕುಟ್ಟುತ್ತಿದ್ದ ರಮ್ಯಾ ಎಲೆಕ್ಷನ್ ರಿಸಲ್ಟ್ ಬಂದ ಮೇಲೆ ಕಣ್ಣಿಗೆ ಕಾಣದಂತೆ ಮಾಯವಾಗಿದ್ದಾರೆ. ಜೊತೆಗೆ ಎಂಟು ಕೋಟಿ ಪಂಗನಾಮ ಹಾಕಿದ ಆರೋಪನೂ ಬಂದಿದ್ದು, ಈಗ ರಮ್ಯಾ ಮೇಲಿನ ಕೋಪಕ್ಕೆ ಕನ್ನಡಿಗರಿಗೆ ರಾಹುಲ್ ಗಾಂಧಿ ಕಹಿ ಕೊಟ್ಟಿದ್ದಾರೆ.

    ಎಲ್ಲಾ ವಿಷಯಕ್ಕೂ ಥಟ್ ಎಂದು ಟ್ವೀಟ್ ಮಾಡುತ್ತಾ ಸುದ್ದಿಯಾಗಿದ್ದ ಕಾಂಗ್ರೆಸ್ ಐಟಿ ಸೆಲ್‍ನ ಮಾಜಿ ಮೇಡಂ ರಮ್ಯಾ ಈಗ ರಾಹುಲ್ ಗಾಂಧಿಗೆ ಪಂಗನಾಮ ಹಾಕಿದ್ದಾರಂತೆ. ಸಮೀಕ್ಷೆ ವಿಚಾರದಲ್ಲಿ ಮಂಕುಬೂದಿ ಎರಚಿ ಎಂಟು ಕೋಟಿ ನುಂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ರಮ್ಯಾ ಮೇಲೆ ರಾಹುಲ್ ಮುನಿಸಿಕೊಂಡಿದ್ದಾರೆ. ಇದೇ ಸಿಟ್ಟಿಗೆ ರಮ್ಯಾ ಜೊತೆ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ 15 ರಿಂದ 20 ಮಂದಿ ಕನ್ನಡಿಗರಿಗೆ ಗೇಟ್ ಪಾಸ್ ನೀಡಲಾಗಿದ್ದು, ರಮ್ಯಾ ಕಾಣೆಯಾದ ಬೆನ್ನಲ್ಲೇ ಐಟಿ ಸೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಅವರ ಆಪ್ತರು ರಾಜ್ಯಕ್ಕೆ ಹಿಂದಿರುಗಿದ್ದಾರೆ ಎನ್ನಲಾಗಿದೆ.

    ಈ ಸುದ್ದಿಯನ್ನು ತಿಳಿಸಲು ಮಾಧ್ಯಮಗಳ ಮುಂದೆ ಬರಲು ಇಚ್ಛಿಸದ ದೆಹಲಿ ಐಟಿ ಸೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗರೊಬ್ಬರು ಕೆಲಸ ಬಿಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.

    ಸಿಬ್ಬಂದಿ ಹೇಳಿದ್ದೇನು?
    “ನಾನು ಮೂರು ವರ್ಷದಿಂದ ದೆಹಲಿ ಐಟಿ ಸೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದೆ. ರಮ್ಯಾ ಅವರು ದೆಹಲಿ ಮಟ್ಟದಲ್ಲಿ ಐಟಿ ಸೆಲ್ ಮುಖ್ಯಸ್ಥೆಯಾಗಿದ್ದರಿಂದ ಕನ್ನಡಿಗರ ಬಗ್ಗೆ ಕೊಂಚ ಆಕೆಗೆ ಪ್ರೀತಿ ಹೆಚ್ಚಿತ್ತು. ಹಾಗಾಗಿ ಸುಮಾರು 30ರಷ್ಟು ಜನ ಕನ್ನಡಿಗರೇ ಅಲ್ಲಿ ಐಟಿ ಟೀಮ್‍ನಲ್ಲಿದ್ದೆವು. ಚುನಾವಣೆಯ ಸಮೀಕ್ಷೆ ಸೇರಿದಂತೆ ಪ್ರತಿ ಹಂತದಲ್ಲೂ ರಮ್ಯಾ ಜೊತೆ ಕೆಲಸ ಮಾಡಿದ್ದೇವೆ. ಚುನಾವಣೆ ಫಲಿತಾಂಶ ಬಳಿಕ ನಮ್ಮ ಕೆಲಸಕ್ಕೆ ತೊಂದರೆಯಾಗಿದೆ. ರಮ್ಯಾ ಕೂಡ ಈಗ ಐಟಿ ಟೀಮ್‍ನಲ್ಲಿ ಸಕ್ರಿಯವಾಗಿಲ್ಲ. ಪರಿಣಾಮ ನಾವು ಕನ್ನಡಿಗರು ಸುಮಾರು 15 ರಿಂದ 20 ಮಂದಿ ಈಗ ವೈಯಕ್ತಿಕ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದೇವೆ. ಅದಕ್ಕೆ ಕಾರಣವನ್ನು ನಾನು ಹೇಳಲಾರೆ. ಆದರೆ ಇದಕ್ಕೆ ರಮ್ಯಾ ಅವರನ್ನು ಹೊಣೆಯಾಗಿಸಲಾರೆ” ಎಂದು ತಿಳಿಸಿದ್ದಾರೆ.

    ತಾವು ಕೆಲಸ ಕಳೆದುಕೊಂಡಿರುವುದಕ್ಕೆ ರಮ್ಯಾರನ್ನು ಹೊಣೆ ಮಾಡಲು ದೆಹಲಿ ಐಟಿ ಸೇಲ್‍ನಲ್ಲಿದ್ದ ಸಿಬ್ಬಂದಿಗೆ ಇಷ್ಟವಿಲ್ಲ. ಹೀಗಾಗಿ ಯಾರು ಕೂಡ ಮಾಧ್ಯಮಗಳ ಮುಂದೆ ಈ ಬಗ್ಗೆ ತಿಳಿಸಲು ಬಂದಿಲ್ಲ. ಆದರೆ ಮೂರು ವರ್ಷದಿಂದ ರಮ್ಯಾ ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಿಂದ ಟೀಮ್ ಕೆಲಸ ಮಾಡುತ್ತಿತ್ತು. ಕನ್ನಡಿಗರ ಜೊತೆ ತುಸು ಹೆಚ್ಚೇ ಬಾಂಧವ್ಯ ಇಟ್ಟುಕೊಂಡಿದ್ದ ರಮ್ಯಾ, ಕಾಂಗ್ರೆಸ್ ಐಟಿ ಟೀಮ್‍ನಲ್ಲೂ ಅವರನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದರು. ಈಗ ರಮ್ಯಾ-ರಾಹುಲ್ ಮುನಿಸಿನಿಂದ ಅವರೆಲ್ಲಾ ಕೆಲಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಭಿನಂದನ್ ವಾಪಾಸ್ ಬರಲು ಸಿಧು ಕಾರಣ ಅಂದ್ರು ಕೇರಳ ಮಾಜಿ ಸಿಎಂ!

    ಅಭಿನಂದನ್ ವಾಪಾಸ್ ಬರಲು ಸಿಧು ಕಾರಣ ಅಂದ್ರು ಕೇರಳ ಮಾಜಿ ಸಿಎಂ!

    ತಿರುವನಂತಪುರಂ: ಪಾಕಿಸ್ತಾನ ಸೇನೆ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಶುಕ್ರವಾರ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಇದಕ್ಕೆ ಕಾಂಗ್ರೆಸ್‍ನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಾರಣ ಎಂದು ಕೇರಳ ಮಾಜಿ ಸಿಎಂ ಒಮ್ಮನ್ ಚಾಂಡಿ ಟ್ವೀಟ್ ಮಾಡಿದ್ದಾರೆ.

    ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಶ್ರಮಪಟ್ಟು ಪಾಕಿಸ್ತಾನದಿಂದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ಭಾರತಕ್ಕೆ ವಾಪಾಸ್ ಕರೆಸಿಕೊಂಡಿದೆ. ಆದರೆ ಕೇರಳ ಸಿಎಂ ಮಾತ್ರ ಅಭಿನಂದನ್ ಬಿಡುಗಡೆಯಾಗಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಕಾಂಗ್ರೆಸ್‍ನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಾರಣ ಎಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ ರಾಜಕೀಯ ಪಾಳಯದಲ್ಲಿ ಬಿರುಗಾಳಿ ಎಬ್ಬಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

    https://twitter.com/Oommen_Chandy/status/1101461843170680832

    ಟ್ವೀಟ್‍ನಲ್ಲಿ ಏನಿದೆ?
    #WelcomeHomeAbhinandan, ನವಜೋತ್ ಸಿಂಗ್ ಸಿಧು ಅವರ ಶ್ರಮ ಹಾಗೂ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ಧನ್ಯವಾದ. ಈ ನಡೆ ಒಳ್ಳೆಯದು ಇದರಿಂದ ಎರಡು ರಾಷ್ಟ್ರಗಳ ಗಡಿಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಭಾವಿಸಿದ್ದೇನೆ ಎಂದು ಸಿಧು ಹಾಗೂ ಪಾಕ್ ಸಿಎಂ ಅವರನ್ನ ಟ್ಯಾಗ್ ಮಾಡಿ ಒಮ್ಮನ್ ಚಾಂಡಿ ಟ್ವೀಟ್ ಮಾಡಿದ್ದಾರೆ.

    ಒಮ್ಮನ್ ಚಾಂಡಿ ಅವರು ಮಾಡಿರುವ ಟ್ವೀಟ್ ಅನ್ನು ರೀಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರು ಕೂಡ ಈ ಮಾತನ್ನು ಒಪ್ಪಿದ್ದಾರೆ.

    ಅಲ್ಲದೆ ಒಮ್ಮನ್ ಚಾಂಡಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನವಜೋತ್ ಸಿಂಗ್ ಸಿಧು ಅವರು, ನಿಮ್ಮ ಮಾತುಗಳು ನನಗೆ ಸತ್ಯದ ದಾರಿಯಲ್ಲಿ ನಡೆಯಲು ಶಕ್ತಿ ಮತ್ತು ಧೈರ್ಯವನ್ನು ನೀಡಿವೆ, ನಾನು ನನ್ನ ಆದರ್ಶದೊಂದಿಗೆ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ನೈತಿಕ ಮೌಲ್ಯಗಳನ್ನು ಮರೆಯುವುದಿಲ್ಲ ಎಂದು ರೀ-ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಂಸದೆ ರಮ್ಯಾ ಸೋಲಿನ ಗುಟ್ಟು ಬಿಚ್ಚಿಟ್ಟ ಮಾಜಿ ಶಾಸಕ ಶಿವರಾಮೇಗೌಡ

    ಮಾಜಿ ಸಂಸದೆ ರಮ್ಯಾ ಸೋಲಿನ ಗುಟ್ಟು ಬಿಚ್ಚಿಟ್ಟ ಮಾಜಿ ಶಾಸಕ ಶಿವರಾಮೇಗೌಡ

    ಮಂಡ್ಯ: ಕಾಂಗ್ರೆಸ್ ಪಕ್ಷದ ಒಳ ಜಗಳದಿಂದಾಗಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಬೇಕಾಯ್ತು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ನ ಎಲ್.ಆರ್.ಶಿವರಾಮೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

    ಜಿಲ್ಲೆಯಲ್ಲಿ ನಡೆದ ನೂತನ ಉಸ್ತುವಾರಿ ಸಚಿವರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಬೇಕಾಯಿತು ಎಂದು ಹೇಳುವ ಮೂಲಕ ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ರಮ್ಯಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಶಿವರಾಮೇಗೌಡರು, ರಮ್ಯಾ ಹೆಸರನ್ನು ಹೇಳದೇ ಫ್ಲೈಯಿಂಗ್ ಸ್ಟಾರ್ ಹೆಸರಿನಿಂದ ಕರೆದು ಅವರ ಸೋಲಿಗೆ ಕಾರಣವನ್ನು ತಿಳಿಸಿದ್ದಾರೆ.

    ಈ ಹಿಂದೆ ಸಚಿವ ಪುಟ್ಟರಾಜು ಎಂಪಿಗೆ ನಿಂತಿದ್ದಾಗ ನಮ್ಮ ಪಕ್ಷದಿಂದ ಫ್ಲೈಯಿಂಗ್ ಸ್ಟಾರ್ ಚುನಾವಣೆಗೆ ನಿಂತಿದ್ದರು. ಈ ಫ್ಲೈಯಿಂಗ್ ಸ್ಟಾರ್ ಕೈಗೆ ಮಂಡ್ಯ ಜಿಲ್ಲೆ ಕೊಡಬಾರದು ಅಂತಾ ಡಿಸೈಡ್ ಮಾಡಿ ಪಕ್ಷದ ವಿರುದ್ಧವಾಗಿ ಕೆಆರ್‍ಎಸ್‍ನಲ್ಲಿ ಸಭೆ ಕರೆದಿದ್ದೆ. ಇದರಿಂದಾಗಿ ಪಕ್ಷದಿಂದ ದೂರಾದೆ. ಒಂದು ಲೆಟರ್ ತೆಗೆದುಕೊಳ್ಳಲು ಫ್ಲೈಯಿಂಗ್ ಸ್ಟಾರ್ ಹಿಂದೆ ಬೆಂಗಳೂರಲ್ಲಿ ಸುತ್ತುವುದು ತಪ್ಪಬೇಕು ಎನ್ನುವ ಕಾರಣಕ್ಕಾಗಿ ನಾನು ಸಭೆ ನಡೆಸಿದ್ದೆ ಅಷ್ಟೇ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸ್ತಾರಾ ರಮ್ಯಾ?

    ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸ್ತಾರಾ ರಮ್ಯಾ?

    ಮಂಡ್ಯ: ನಟಿ ರಮ್ಯಾ ರಾಜ್ಯ ರಾಜಕಾರಣಕ್ಕೆ ಆಗಮಿಸಿ ಮುಂಬರುವ ಚುನಾವಣೆಯಲ್ಲಿ ಮಂಡ್ಯದ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ.

    ರಮ್ಯಾ ಮತ್ತು ಅಂಬರೀಷ್ ಇಬ್ಬರೂ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರಿಂದ ಅಂಬರೀಷ್ ಮತ್ತು ರಮ್ಯಾ ನಡುವೆ ಶೀತಲ ಸಮರ ಶುರುವಾಗಿದೆ. ಶೀತಲ ಸಮರದಿಂದ ಮಂಡ್ಯದಲ್ಲಿ ಕಾಂಗ್ರೆಸ್ ನೆಲಕಚ್ಚೋದು ಖಚಿತ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬಂದಿತ್ತು.

    ಇದಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತಿರುವ ಕಾಂಗ್ರೆಸ್, ಅಂಬರೀಷ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಿ ರಮ್ಯಾಗೆ ಮೇಲುಕೋಟೆ ಕ್ಷೇತ್ರದ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಏಕೆಂದರೆ ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ರೈತ ಸಂಘ ಪ್ರಬಲ ಪಕ್ಷಗಳಾಗಿವೆ. ಒಂದು ವೇಳೆ ಮೇಲುಕೋಟೆ ಕ್ಷೇತ್ರದಿಂದ ರಮ್ಯಾ ಅವರಿಗೆ ಟಿಕೆಟ್ ನೀಡಿದರೆ ಅಲ್ಲಿ ಕಾಂಗ್ರೆಸ್ ಗೆ ಬಲ ತುಂಬಿದಂತಾಗುತ್ತೆ.

    ಅಷ್ಟೇ ಅಲ್ಲದೇ ಮಂಡ್ಯ ಸಂಸದರಾಗಿರುವ ಪುಟ್ಟರಾಜು ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರನ್ನು ಸೋಲಿಸಿದ್ದರು. ಇದೀಗ ಮತ್ತೆ ಸಂಸದ ಪುಟ್ಟರಾಜು ಅವರು ಮೇಲುಕೋಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ನಿಂದ ರಮ್ಯಾ ಅವರಿಗೆ ಟಿಕೆಟ್ ನೀಡಿದರೆ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಮ್ಯಾ ಅವರಿಗೆ ಉತ್ತಮ ಅವಕಾಶ ಎನ್ನಲಾಗುತ್ತಿದೆ. ಇದಕ್ಕೆ ರಮ್ಯಾ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಜೊತೆಗೆ ಜಿಲ್ಲೆಯಲ್ಲಿ ಅಂಬರೀಷ್ ಮತ್ತು ರಮ್ಯಾ ಇಬ್ಬರೂ ಸ್ಪರ್ಧಿಸೋದ್ರಿಂದ ಕಾಂಗ್ರೆಸ್ ಒಳ ಜಗಳಕ್ಕೆ ಫುಲ್ ಸ್ಟಾಪ್ ಬಿದ್ದು, ಜೆಡಿಎಸ್ ನಾಗಾಲೋಟವನ್ನು ತಪ್ಪಿಸಬಹುದು ಎಂಬುದು ಕಾಂಗ್ರೆಸ್ ನ ಲೆಕ್ಕಾಚಾರವಾಗಿದೆ.

    https://www.youtube.com/watch?v=8VR-KdTHelg

    https://www.youtube.com/watch?v=lbFsTiNrw1s