Tag: ರಮೇಸ್ ಅರವಿಂದ್

  • ಕೈ ಕೊಡಲು ಬಂದ ಅಭಿಮಾನಿಗೆ ಬಹುಭಾಷಾ ನಟ ಕಮಲ್ ಹಾಸನ್ ಕಪಾಳಮೋಕ್ಷ

    ಕೈ ಕೊಡಲು ಬಂದ ಅಭಿಮಾನಿಗೆ ಬಹುಭಾಷಾ ನಟ ಕಮಲ್ ಹಾಸನ್ ಕಪಾಳಮೋಕ್ಷ

    ಬೆಂಗಳೂರು: ರಾಜಕೀಯಕ್ಕೆ ಬರುವ ತಯಾರಿ ಮಾಡಿಕೊಳ್ಳುತ್ತಿರುವ ಹೊತ್ತಲ್ಲೇ ಬಹುಭಾಷಾ ನಟ ಕಮಲ್ ಹಾಸನ್ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅಭಿಮಾನಿವೊಬ್ಬರು ನಟ ಎಂದು ಕೈ ಕೊಡಲು ಬಂದರೆ ಅವರ ಕಪಾಳಕ್ಕೆ ಹೊಡೆದಿರುವ ಘಟನೆ ನಗರದಲ್ಲಿ ನಡೆದಿದೆ.

    ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದ ಕಮಲ್ ಹಾಸನ್, ಖಾಸಗಿ ಸಮಾರಂಭವೊಂದರಲ್ಲಿ ನಟ ರಮೇಶ್ ಜೊತೆ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಮಾರಂಭ ಮುಗಿಸಿ ರಮೇಶ್ ಮೊದಲು ಹೊರಬಂದಿದ್ದಾರೆ. ಅವರ ಹಿಂಂದೆಯೇ ಕಮಲ್ ಹಾಸನ್ ಹೊರಬರುತ್ತಿದ್ದಂತೆ ಅಭಿಮಾನಿಗಳು ಇವರನ್ನು ನೋಡಲು, ಶೇಕ್‍ಹ್ಯಾಂಡ್ ಮಾಡಲು ಮುಂದಾಗಿದ್ದಾರೆ. ಇದರಿಂದ ನೂಕುನುಗ್ಗಲು ಉಂಟಾಗಿದ್ದು, ಸಿಟ್ಟಿಗೆದ್ದ ಕಮಲ್ ಹಾಸನ್ ಕೈ ಕುಲುಕಲು ಮುಂದೆ ಬಂದ ಅಭಿಮಾನಿಯೊಬ್ಬರ ಕೆನ್ನೆಗೆ ಬಾರಿಸಿದ್ದಾರೆ.

    ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸ್ಯಾಂಡಲ್‍ವುಡ್‍ನ ನಟ ರಮೇಶ್ ಅರವಿಂದ್ ಕೂಡ ಇದ್ದಾರೆ.