Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಸಾಹಿತಿ, ನಿರ್ಮಾಪಕ ನಿಡಸಾಲೆ ಎಂ ಪುಟ್ಟಸ್ವಾಮಿಯ್ಯ ನಿರ್ಮಾಣದಲ್ಲಿ ಮೂಡಿ ಬಂದಿರುವ ಅಗ್ನಿವರ್ಷ ಚಿತ್ರಕ್ಕೆ ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಈಗ ಮತ್ತಷ್ಟು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗಿ ಆಗುವಂತಹ ಅವಕಾಶವನ್ನು ಈ ಸಿನಿಮಾ ಪಡೆದಿದೆ. ವಿಜಯ್ ನಿಡಸಾಲೆ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದ್ದು, ಪ್ರತಿಭಾವಂತ ತಾರಾ ಬಳಗವೇ ಸಿನಿಮಾದಲ್ಲಿದೆ.

ಈಗಾಗಲೇ ಕಲ್ಕತ್ತಾ ಕಲ್ಟ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಗ್ಯಾಂಗ್ ಟಾಕ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ವೈಟ್ ಪರ್ಲ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ರಾಂಗೋ ಫಿಲ್ಮ್ ಫೆಸ್ಟಿವಲ್, 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಜೈಪುರ, 10ನೇ ನೋಯ್ಡಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಶ್ರೀಗಂಗಾನರ್, ಬೊಲಿವಿಯಾ ದೇಶದ ಬ್ಲ್ಯಾಕ್ ಕ್ಯಾಟ್ ಅವಾರ್ಡ್ ಇಂಟರ್ ನ್ಯಾಷನಲ್, ಬ್ರೆಜಿಲ್ ದೇಶದ ಪುಪಿಲಾ ಫಿಲ್ಮ್ ಫೆಸ್ಟಿವಲ್, ಫಿಲಿಫೈನ್ಸ್ ದೇಶದ 9ನೇ ಪಂಬುಜಾನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಸಿನಿಮಾ ಆಯ್ಕೆಯಾಗಿ ಪ್ರದರ್ಶನಗಳನ್ನು ಕಂಡಿದೆ.

ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಮಾತ್ರ ಆಯ್ಕೆಯಾಗಿಲ್ಲ, ಹಲವಾರು ಪ್ರಶಸ್ತಿಗಳನ್ನು ಸಿನಿಮಾ ಪಡೆದುಕೊಂಡಿದೆ. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲೇ ನಿರ್ದೇಶಕ ವಿಜಯ್ ನಿಡಸಾಲೆ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅಲ್ಲದೇ, ಕಲಾವಿದರಿಗೂ ಕೂಡ ಹಲವು ಪ್ರಶಸ್ತಿಗಳು ಸಂದಿವೆ. ಪ್ರೇಕ್ಷಕರು ಕೂಡ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿ, ಚಿತ್ರವನ್ನು ನಿರ್ಮಾಣ ಮಾಡಿರುವ ನಿಡಸಾಲೆ ಪುಟ್ಟಸ್ವಾಮಿಯ್ಯ ಅವರು ಈ ಕುರಿತು ಮಾತನಾಡಿ, ‘ಚಿಗುರು ಕ್ರಿಯೇಷನ್ಸ್ ಸಂಸ್ಥೆಯಿಂದ ಈಗಾಗಲೇ ಸಿದ್ಧಗಂಗಾ, ವಾವ್ ಮುರುಗೇಶ್, ನೀರು ತಂದವರು ಹಾಗೂ ಅನುತ್ತರ ಸಿನಿಮಾಗಳನ್ನು ಮಾಡಿದ್ದೇವೆ. ಅಗ್ನಿವರ್ಷ ನಮ್ಮ ನಿರ್ಮಾಣ ಸಂಸ್ಥೆಯನ್ನು ಮೂಡಿ ಬಂದಿರುವ ಐದನೇ ಸಿನಿಮಾ. ಮಲೆನಾಡಿನ ಜ್ವಲಂತ ಸಮಸ್ಯೆಗಳಾದ ವೃದ್ಧರ ಬದುಕು ಬವಣೆ, ಮಹಿಳಾ ಸಬಲೀಕರ, ಅರಣ್ಯ ಒತ್ತುವರೆ ಸೇರಿದಂತೆ ಹಲವು ವಿಷಯಗಳನ್ನು ಹೇಳಲಾಗಿದೆ’ ಎಂದರು. ಇದನ್ನೂ ಓದಿ: `ಕಾಂತಾರ’ ಸಕ್ಸಸ್: ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ

ಈ ಸಿನಿಮಾದಲ್ಲಿ ರಮೇಶ್ ಭಟ್, ನಿಡಸಾಲೆ ಪುಟ್ಟಸ್ವಾಮಯ್ಯ, ಪ್ರತಿಮಾ ನಾಯಕ್, ಶೀಲಾ ರಾಮನ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಮುಂಬೈನಲ್ಲಿ ಅನುಭವ ಪಡೆದಿರುವ ಶಿವಕುಮಾರ್ ಅಂಬ್ಲಿ ಅವರ ಸಿನಿಮಾಟೋಗ್ರಫಿ, ರಂಗಕಹಳೆ ಎಲ್ ಮೋಹನ್ ಅವರ ಸಂಕಲನ, ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತ ಮತ್ತು ಗಾರ್ಗಿ ಕಾರೇಹಕ್ಲು ಅವರ ಸಂಭಾಷಣೆ ಚಿತ್ರಕ್ಕಿದೆ.
Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Vishnuvardhan) ಅವರ 72ನೇ ಜನ್ಮದಿನವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಜನ್ಮದಿನಕ್ಕೆ ಚಾಲನೆ ನೀಡಿದ್ದಾರೆ. 72ನೇ ಜನ್ಮದಿನಾಚರಣೆ (Birthday) ಹಿನ್ನೆಲೆ ಡಾ. ವಿಷ್ಣುವರ್ಧನ್ ಅಭಿನಯದ ಚಿತ್ರಗಳ ಐವತ್ತು ಕಟೌಟ್ ಗಳನ್ನು ಅಭಿಮಾನ ಸ್ಟುಡಿಯೋ ಮುಂದೆ ನಿಲ್ಲಿಸಲಾಗಿದೆ. ಅಲ್ಲದೇ ಅಭಿಮಾನಿಗಳ ಸಾಗರವೇ ಅಲ್ಲಿ ಹರಿದು ಬಂದಿದೆ.

ಅಭಿಮಾನ್ ಸ್ಟುಡಿಯೋ (Abhiman Studio) ಬಳಿ ರಾರಾಜಿಸುತ್ತಿರುವ ಡಾ.ವಿಷ್ಣುವರ್ಧನ್ ಕಟೌಟ್ ಗಳು (Cutout) ಯಜಮಾನ, ಸಾಹಸ ಸಿಂಹ, ಕೃಷ್ಣ ನೀ ಬೇಗನೆ ಬಾ, ಜಯಸಿಂಹ, ವೀರಪ್ಪ ನಾಯಕ, ಜನ ನಾಯಕ, ದಾದ, ಕೃಷ್ಣ ರುಕ್ಮಿಣಿ, ಹೃದಯ ಗೀತೆ, ದೇವ, ಮತ್ತೆ ಹಾಡಿತು ಕೋಗಿಲೆ, ಲಯನ್ ಜಗಪತಿ ರಾವ್, ರಾಜಧೀರಾಜಾ, ರಾಯರು ಬಂದರು ಮಾವನ ಮನೆಗೆ, ಮಹಾಕ್ಷತ್ರಿಯ, ಮುತ್ತಿನ ಹಾರ, ದಣಿ, ಜನನಿ ಜನ್ಮಭೂಮಿ, ಸೂರ್ಯ ವಂಶ, ಸೂರಪ್ಪ, ದಿಗ್ಗಜರು, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ರಾಜ ನರಸಿಂಹ, ಆಪ್ತಮಿತ್ರ, ಸಾಹುಕಾರ, ವರ್ಷ, ಕರ್ನಾಟಕ ಸುಪುತ್ರ, ಹಲೋ ಡ್ಯಾಡಿ, ಅಪ್ಪಾಜಿ, ಸ್ಕೂಲ್ ಮಾಸ್ಟರ್, ಆಪ್ತರಕ್ಷಕ, ಚಿನ್ನದಂತ ಮಗ, ವಿಷ್ಣುಸೇನಾ, ನಾಗರಹಾವು, ಗಂಧದ ಗುಡಿ, ಶುಭ ಮಿಲನ ಚಿತ್ರಗಳ ಕಟೌಟ್ ಗಳಾಗಿವೆ. ಇದನ್ನೂ ಓದಿ: ಶಕ್ತಿ, ಸ್ಫೂರ್ತಿ ಸದಾ ನಿಮ್ಮೊಂದಿಗಿರಲಿ: ಮೋದಿ ಹುಟ್ಟುಹಬ್ಬಕ್ಕೆ ರಮ್ಯಾ ವಿಶ್

ಅಲ್ಲದೇ ಹುಟ್ಟುಹಬ್ಬಕ್ಕಾಗಿಯೇ ಅಭಿಮಾನಿಗಳು ಸ್ಟುಡಿಯೋ ಬಳಿ ರಕ್ತದಾನ, ಅನ್ನದಾನ, ನೇತ್ರದಾನ ಸೇರಿದಂತೆ ಹಲವು ಜನಪರ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ. ಬೆಳಗ್ಗೆಯಿಂದಲೇ ಅಭಿಮಾನ ಸ್ಟುಡಿಯೋಗೆ ಆಗಮಿಸಿರುವ ಅಭಿಮಾನಿಗಳು ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳು ಸಮಾಧಿ ಬಳಿ ಜಮಾಯಿಸಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಕನ್ನಡದ ಹಿರಿಯ ನಟಿ ರಮೇಶ್ ಭಟ್ (Ramesh bhat) ಕೂಡ ಸಮಾಧಿಗೆ ಬಂದು ಪೂಜೆ ಸಲ್ಲಿಸಿದರು. ವಿಷ್ಟುವರ್ಧನ್ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು. ಪ್ರತಿ ವರ್ಷವೂ ರಮೇಶ್ ಭಟ್ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಕೆಲವು ಹೊತ್ತು ಅಭಿಮಾನಿಗಳ ಜೊತೆ ಬೆರೆಯುತ್ತಾರೆ. ಆದರೆ ಈ ಸ್ಮಾರಕದ ಬಳಿ ವಿಷ್ಣು ಕುಟುಂಬ ಬರದೇ ಮನೆಯಲ್ಲೇ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ.

ವಿನೂತನ ಶ್ರೀರ್ಷಿಕೆ ಹೊಂದಿರುವ ’ಧ್ರುವ 369’ ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ರಮೇಶ್‌ಭಟ್ ಕ್ಲಾಪ್ ಮಾಡಿದರೆ, ’ಟಕ್ಕರ್’ ಖ್ಯಾತಿಯ ನಟ ಮನೋಜ್‌ಕುಮಾರ್ ಕ್ಯಾಮಾರ ಆನ್ ಮಾಡಿದರು. ಅಚಿಂತ್ಯ: ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಮಂಗಳೂರಿನ ಶ್ರೀಕೃಷ್ಣ ಕಾಂತಿಲ ಗ್ರಾಫಿಕ್ಸ್ ಡಿಸೈನರ್ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಶಂಕರ್‌ನಾಗ್.ಎಸ್.ಎಸ್. ಅವರಿಗೆ ಎರಡನೇ ಅವಕಾಶ. ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ರಾಘವೇಂದ್ರರಾಜ್‌ಕುಮಾರ್ ಶುಭ ಸಂದೇಶವನ್ನು ವಿಡಿಯೋ ಮೂಲಕ ರವಾನಿಸಿದ್ದರು.

ವಿಜ್ಞಾನ ಮತ್ತು ಪುರಾಣ ಮಿಶ್ರಣಗೊಂಡ ಅಂಶಗಳು ಇರಲಿದೆ. ಭೂಮಿಯಿಂದ ತುಂಬಾ ಚೆನ್ನಾಗಿ ಪರಿಪೂರ್ಣವಾಗಿ ಕಾಣಿಸುವುದು ಧ್ರುವ ನಕ್ಷತ್ರ. 369 ಸಂಖ್ಯೆ ಎಂಬುದು ಸಾರ್ವತ್ರಿಕವಾಗಿದೆ. ಅದಕ್ಕೆ ಆದಂತ ಆಯಾಮವಿದೆ. ಮತ್ತೋಂದು ಕಡೆ ಮ್ಯಾಜಿಕ್ ನಂಬರ್ ಅಂತಲೂ ಕರೆಯಬಹುದು. ಕಥೆಯಲ್ಲಿ ಇವರೆಡು ಸೇರಿದರೆ ಏನು ಆಗುತ್ತದೆ ಎಂಬುದನ್ನು ಹೇಳಲಾಗುತ್ತಿದೆ. ಸಾಧನೆ ಮಾಡಬೇಕು ಅಂದುಕೊಂಡರೆ ಏನು ಬೇಕಾದರೂ ಮಾಡಬಹುದು. ದೂರದ ಲೋಕಕ್ಕೆ ಹೋಗಿ ಹನುಮಂತ ಹಣ್ಣು ತೆಗೆದುಕೊಂಡು ಬಂದಿದ್ದ ಅಂತ ಹೇಳಲಾಗಿದೆ. ಅದೇ ರೀತಿ ಚಿತ್ರವು ಫ್ಯಾಂಟಸಿ ತರಹ ಸಾಗುತ್ತದೆ. ಪುರಾತನ ಕಾಲದ ಕಥೆಗಳೆ ನಿರ್ದೇಶಕರಿಗೆ ಕಥೆ ಬರೆಯಲು ಪ್ರೇರಣೆಯಾಗಿದೆ. ಸನ್ನಿವೇಶಕ್ಕೆ ಅನುಗುಣವಾಗಿ ಸಂಸ್ಕ್ರತ ಶ್ಲೋಕಗಳು ಬರಲಿದೆ. ಇದನ್ನೂ ಓದಿ: ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್

ಪ್ರಥಮಬಾರಿ ರಾಜ್ಯಪಾಲರಾಗಿ ರಾಘವೇಂದ್ರರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ತಾರಗಣದಲ್ಲಿ ರಮೇಶ್‌ಭಟ್, ಪ್ರತಿಭಾ, ಅತೀಶ್.ಎಸ್.ಶೆಟ್ಟಿ, ಪ್ರೇಮ್ ಕನ್ನಡರಾಜು, ಅರವಿಂದ್‌ಸಾಗರ್, ರೋಹನ್ ಮೂಡಬಿದ್ರೆ, ದೀಪಕ್‌ಶೆಟ್ಟಿ, ಕೆ.ಸುಬ್ಬಣ್ಣಭಟ್, ಚಂದನ, ರಮ್ಯಾ, ಚಂದ್ರಿಕಾ, ಭಾಸ್ಕರ್‌ಮಣಿಪಾಲ್ ನಟಿಸುತ್ತಿದ್ದಾರೆ. ಮೂರು ಹಾಡುಗಳಿಗೆ ಸತೀಶ್‌ಬಾಬು ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಹರ್ಷಪದ್ಯಾಣ ಚಿತ್ರಕ್ಕಿದೆ. ಶೇಕಡ ನಲವತ್ತರಷ್ಟು ಸಿಜಿ ಕೆಲಸ ಇರಲಿದೆ. ಬೆಂಗಳೂರು, ಮಂಗಳೂರು, ಉಡುಪಿ, ಮುಡೆಶ್ವರ, ಕೋಲಾರ, ಚಿಕ್ಕಬಳ್ಳಾಪುರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.

ರಾಜೀವ್‌ಚಂದ್ರಕಾಂತ್ ಈ ಹಿಂದೆ ನಾಗಾಭರಣ ಅವರಲ್ಲಿ ಕೆಲಸ ಕಲಿತುಕೊಂಡು, ನಂತರ 75ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಅನುಭವ ಇದೆ. ಇದರಿಂದಲೇ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆ ಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ’ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್‌ಕುಮಾರ್.ಡಿ ಖತರ್‌ನಾಕ್ ಖಳನಾಯಕನಾಗಿ ಹುಲಿಯಾ ಹೆಸರಿನಲ್ಲಿ ಕಾಣಿಸಿಕೊಳ್ಳುವ ಜತೆಗೆ ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ನಾಯಕಿ ಕುರಿತಂತೆ ಹೇಳುವ ’ಯಾವ ಸೀಮೆ ಅಂದದರಸಿ ಕಂಡರೆಲ್ಲೊ ಇವಳೆ, ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ’ ಸಾಲಿನ ಗೀತೆಗೆ ವಿಜಯಪ್ರಕಾಶ್ ಹಾಡುವ ಗೀತೆಯನ್ನು ನಾದಬ್ರಹ್ಮ ಹಂಸಲೇಖ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಕಾರ್ಯ ನಡೆಸಲಾಯಿತು. ಸಂಗೀತ ಕೆ.ಎಂ.ಇಂದ್ರ ಅವರದಾಗಿದೆ. ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!

ರಾಮಾಪುರ ಎಂಬ ಊರು, ಮಜ್ಜೇನಹಳ್ಳಿ ಎನ್ನುವ ಪಟ್ಟಣದಲ್ಲಿ 1990ರಂದು ನಡೆಯುವ ಕಾಲ್ಪನಿಕ ಘಟನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಎಂಟು ಗಡ್ಡಧಾರಿಗಳ ಸುತ್ತ ಸಾಗುವ ಪಯಣದಲ್ಲಿ ಏರುಪೇರು ಉಂಟಾಗುತ್ತದೆ. ಅದು ಏನೆಂಬುದನ್ನು ಕುತೂಹಲದ ಮೂಲಕ ತೋರಿಸಲಾಗುವುದು. ತಾರಗಣದಲ್ಲಿ ಪ್ರವೀಣ್, ನಮ್ರತಾ, ಗಣೇಶ್‌ರಾವ್, ಅವಿನಾಶ್, ರಮೇಶ್‌ಭಟ್, ಬೆನಕನಂಜಪ್ಪ, ಪ್ರಶಾಂತ್‌ಸಿದ್ದಿ, ನಂಜುಂಡ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ವೀರೇಶ್, ಸಾಹಸ ಪಳನಿ-ಜಾಗ್ವಾರ್ ಸಣ್ಣಪ್ಪ ಅವರದಾಗಿದೆ. ಕೆ.ಜಿ.ಎಫ್, ಕೋಲಾರ ಕಡೆಗಳಲ್ಲಿ 45 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ.

ಕಿರುತೆಯಿಂದ ಕಲಾಯಾನ ಆರಂಭಿಸಿ ಹಿರಿತೆರೆಯಲ್ಲೂ ಯಶಸ್ವಿ ನಾಯಕಿಯಾಗಿ ನೆಲೆ ಕಂಡುಕೊಂಡಿರುವವರು ಮಯೂರಿ ಕ್ಯಾತರಿ. ಪ್ರಬುದ್ಧವಾದ ನಿರ್ಧಾರಗಳ ಮೂಲಕ ಚೆಂದದ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಿರೋ ಮಯೂರಿ ಇತ್ತೀಚೆಗಷ್ಟೇ ಸಾಂಸಾರಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಆ ಖುಷಿಯಲ್ಲಿರೋ ಅವರ ಪಾಲಿಗೆ ಈ ಬಾರಿಯ ಹುಟ್ಟುಹಬ್ಬ ನಿಜಕ್ಕೂ ಸ್ಪೆಷಲ್ಲು. ಅದನ್ನು ಮತ್ತೂ ಕಳೆಗಟ್ಟಿಸುಯವಂತೆ ‘ಆದ್ಯಂತ’ ಚಿತ್ರದ ಚೆಂದದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ.

ಆದ್ಯಂತ ಮಯೂರಿ ನಾಯಕಿಯಾಗಿ ನಟಿಸಿರೋ ಚಿತ್ರ. ಅವರ ಪಾಲಿಗಿದು ಮಹತ್ವಾಕಾಕ್ಷೆಯ ಮೈಲಿಗಲ್ಲು. ಪುನೀತ್ ಶರ್ಮಾ ನಿರ್ದೇಶನದ ಈ ಸಿನಿಮಾವನ್ನು ಲೇಖನಾ ಕ್ರಿಯೇಷನ್ಸ್ ಮತ್ತು ಆರ್.ಆರ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿದೆ. ಬಹುಕಾಲದಿಂದಲೂ ಆದ್ಯಂತ ಒಂದಷ್ಟು ಚರ್ಚೆಗೆ ಕಾರಣವಾಗಿತ್ತು. ಭಿನ್ನವಾದ ಟೈಟಲ್ಲು, ಅದಕ್ಕೆ ತಕ್ಕುದಾದ ಕಥೆಯ ಸುಳಿವುಗಳ ಮೂಲಕ ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ಬಿಡುಗಡೆಯಾಗಿರೋ ಫಸ್ಟ್ ಲುಕ್ ಅಂತೂ ಆದ್ಯಂತದತ್ತ ಎಲ್ಲರೂ ಕಣ್ಣು ಕೀಲಿಸುವಂತೆ ಮಾಡಿದೆ.

ಈ ಸಿನಿಮಾದಲ್ಲಿ ಮಯೂರಿ ಕ್ಯಾತರಿ ಪಾಲಿಗೆ ಬಯಸಿದ ಪಾತ್ರವೇ ಸಿಕ್ಕಿದೆಯಂತೆ. ಅದು ನಟನೆಗೆ ವಿಪುಲ ಅವಕಾಶಗಳಿರೋ ಪಾತ್ರ. ಬೆಂಗಳೂರಿಂದ ಸಕಲೇಶಪುರ ಪ್ರದೇಶಕ್ಕೆ ಶಿಫ್ಟ್ ಆಗಿ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡುವಂಥ ಧಾಟಿಯಲ್ಲಿ ಇಡೀ ಸಿನಿಮಾ ಮೂಡಿ ಬಂದಿದೆಯಂತೆ. ಆದ್ಯಂತದ ಬಗ್ಗೆ ಹೀಗೆ ಅಪಾದಮಸ್ತಕ ಕುತೂಹಲ ಮೂಡಿಕೊಂಡಿರೋದಕ್ಕೆ ಮತ್ತೊಂದು ಪ್ರಧಾನ ಕಾರಣವಾಗಿರೋದು ನಿರ್ದೇಶಕ ಪುನೀತ್ ಶರ್ಮಾರ ಸಿನಿಮಾ ಯಾನ.

ಪುನೀತ್, ರಾಜಮೌಳಿ ಮತ್ತು ರಾಮ್ ಗೋಪಾಲ್ ವರ್ಮಾರಂಥಾ ಪ್ರಸಿದ್ಧ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರೋ ಪ್ರತಿಭೆ. ಆ ಅನುಭವಗಳನ್ನೆಲ್ಲ ಪರಿಣಾಮಕಾರಿಯಾಗಿ ಒಟ್ಟುಗೂಡಿಸಿ ಆದ್ಯಂತ ಕಥೆ ಹೆಣೆದಿದ್ದಾರಂತೆ. ಈ ಕಾರಣದಿಂದಲೇ ಇದರ ಕಥೆ ವಿಭಿನ್ನವಾಗಿರಲಿದೆ ಅನ್ನೋ ನಂಬಿಕೆ ಎಲ್ಲರಲ್ಲಿಯೂ ಪಡಿಮೂಡಿಕೊಂಡಿದೆ. ಇದೀಗ ಬಿಡುಗಡೆಗೊಂಡಿರೋ ಫಸ್ಟ್ ಲುಕ್ ಆ ನಂಬಿಕೆಯನ್ನ ಮತ್ತಷ್ಟು ಗಟ್ಟಿಗೊಳಿಸುವಂತಿದೆ.

ರಮೇಶ್ ಬಾಬು ಟಿ ನಿರ್ಮಾಣ ಮಾಡಿ, ಪ್ರಕಾಶ್ ಎಲಗೋಡು ಮತ್ತು ಮೋಹನ್ ಕುಮಾರ್ ಆರ್.ಎಸ್ ಸಹ ನಿರ್ಮಾಪಕರಾಗಿರೋ ಚಿತ್ರ ಆದ್ಯಂತ. ಇದರ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಮಯೂರಿ, ದಿಲೀಪ್, ರಮೇಶ್ ಭಟ್, ಪ್ರಶಾಂತ್ ನಟನಾ, ಶ್ರೀನಾಥ್ ವಸಿಷ್ಠ, ಟಿಕ್‍ಟಾಕ್ ಖ್ಯಾತಿಯ ನಿಖಿಲ್ ಗೌಡ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮಯೂರಿ ತುಂಬಾನೇ ಹೋಪ್ ಇಟ್ಟುಕೊಂಡಿರೋ ಆದ್ಯಂತ ಕೊರೊನಾ ಕಂಟಕ ಕಳೆದ ಬಳಿಕ ಬಿಡುಗಡೆಯಾಗಲಿದೆ.

ಬೆಂಗಳೂರು: ವರ್ಷದ ನಂತರ ನಟಿ ಅನು ಪ್ರಭಾಕರ್ ಮತ್ತೆ ಸ್ಯಾಂಡಲ್‍ವುಡ್‍ಗೆ ರೀ ಎಂಟ್ರಿ ಕೊಟ್ಟಿದ್ದು, ಕಾದಂಬರಿ ಆಧರಿತ ಚಿತ್ರದ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಅನುಪ್ರಭಾಕರ್ ಅಭಿಮಾನಿಗಳಲ್ಲಿ ಇದು ಅತೀವ ಸಂತಸವನ್ನುಂಟುಮಾಡಿದ್ದು, ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲೆ ನೋಡುವ ಕಾತರದಿಂದ ಕಾಯುತ್ತಿದ್ದಾರೆ. ಅಷ್ಟೇ ವೇಗದಲ್ಲಿ ಸಿನಿಮಾ ಸಹ ಪೂರ್ಣಗೊಂಡಿದ್ದು, ಆಗಲೇ ಡಬ್ಬಿಂಗ್ ಹಂತದಲ್ಲಿದೆ.
ಆರಂಭದಲ್ಲಿ ತಕ್ಕ ಪಾತ್ರಗಳು ಸಿಗಲಿಲ್ಲ ಎಂದು ಸಿನಿಮಾದಿಂದ ದೂರ ಉಳಿದರೆ, ನಂತರ ಸಂಸಾರ, ಮಕ್ಕಳ ಜವಾಬ್ದಾರಿಯ ಕಾರಣ ನಟನೆಗೆ ಕೆಲವು ವರ್ಷಗಳ ಬಿಡುವು ನೀಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದಲ್ಲಿ ಅನುಪ್ರಭಾಕರ್ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಲೇಖಕಿ ಸಾರಾ ಅಬೂಬಕರ್ ಅವರ ‘ವಜ್ರಗಳು’ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಸಿನಿಮಾಗೆ ‘ಸಾರಾವಜ್ರ’ ಎಂದು ಹೆಸರಿಡಲಾಗಿದೆ. ನಿರ್ದೇಶಕಿ ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಾರಾವಜ್ರ ಮೂಲಕ ಅನುಪ್ರಭಾಕರ್ ನಟನೆಗೆ ಮರಳಿದ್ದಾರೆ. ಕಳೆದ ವರ್ಷ ‘ಅನುಕ್ತಾ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ ಅವರ ಕೊನೆಯ ಸಿನಿಮಾ. ಆದರೆ ವಜ್ರಗಳು ಕಾದಂಬರಿಯ ಜೀವಾಳ `ನಫಿಜಾ’ ಪಾತ್ರ. ಅದೇ ಪಾತ್ರದಲ್ಲಿ ಅನು ಮಿನುಗಿದ್ದಾರೆ ಎನ್ನಲಾಗಿದೆ.
ಚಿತ್ರ ಡಬ್ಬಿಂಗ್ ಹಂತದಲ್ಲಿದ್ದು, ಸದ್ಯದಲ್ಲೇ ಚಿತ್ರದ ಒಂಬತ್ತು ಹಾಡುಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನು ಪ್ರಭಾಕರ್ ಎರಡು ದಶಕಗಳಲ್ಲಿ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ರಘು ಮುಖರ್ಜಿಯವರನ್ನು ಕೈಹಿಡಿದಿರುವ ಅವರಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ತಾಯ್ತನದ ಖುಷಿಯಲ್ಲಿರುವ ಅವರಿಗೆ, ಈಗ ಮುಸ್ಲಿಮ್ ಕುಟುಂಬವೊಂದರ ಕಥೆ ಹೇಳುವ ‘ನಫಿಜಾ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡಿರುವ ಅನು ಪ್ರಭಾಕರ್, ಖ್ಯಾತ ಲೇಖಕಿಯ ಕಾದಂಬರಿಯ ಕಥಾವಸ್ತುವಿಗೆ ನಟನೆಯ ಮೂಲಕ ನ್ಯಾಯ ಸಲ್ಲಿಸಲು ಸಾಧ್ಯವೇ ಎನ್ನುವ ಅಳುಕು ಆರಂಭದಲ್ಲಿತ್ತು. ಆದರೆ ಇಂತಹ ಪಾತ್ರವೊಂದು ವೃತ್ತಿ ಬದುಕಿನಲ್ಲಿ ಸಿಗುತ್ತಿರುವುದು ಸೌಭಾಗ್ಯ ಹೀಗಾಗಿ ಪಾತ್ರ ಒಪ್ಪಿಕೊಂಡೆ ಎಂದರು.
ಈ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿರುವ ಹಿರಿಯ ನಟ ರಮೇಶ್ ಭಟ್ ಮಾತನಾಡಿ, ಸಿನಿಮಾ ಮೂಲಕ ಕಾದಂಬರಿಗೆ ನ್ಯಾಯ ಕೊಡುವುದು ಕಷ್ಟದ ಕೆಲಸ. ಅದನ್ನು ನಿರ್ದೇಶಕಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ಎನಿಸಲಿದೆ ಎಂದಿದ್ದಾರೆ.

ನಟ, ನಿರೂಪಕ ರೆಹಮಾನ್ ಹಾಸನ್, ಈ ಚಿತ್ರದಲ್ಲಿ ಬದ್ರುದ್ದಿನ್ ಪಾತ್ರ ನಿಭಾಯಿಸಿದ್ದಾರೆ. ದೇವೇಂದ್ರ ರೆಡ್ಡಿ ಸಂಭ್ರಮ ಡ್ರೀಮ್ ಹೌಸ್ ಲಾಂಛನದಡಿ ಚಿತ್ರ ನಿರ್ಮಿಸಲಾಗಿದೆ. ನರೇಂದ್ರ ಬಾಬು ಚಿತ್ರಕಥೆ, ಪತ್ರಕರ್ತ ಬಿ.ಎಂ. ಹನೀಫ್ ಸಾಹಿತ್ಯ ಹಾಗೂ ಪರಂ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಒಂಬತ್ತು ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜನೆ ಇದೆ.