Tag: ರಮೇಶ್‌ ಬೇಗಾರ್‌

  • ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಜಲಪಾತ’ ಸಾಂಗ್

    ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಜಲಪಾತ’ ಸಾಂಗ್

    ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಾಣದ, ರಮೇಶ್ ಬೇಗಾರ್ (Ramesh Begar) ನಿರ್ದೇಶನದ ‘ಜಲಪಾತ’  (Jalapata) ಚಿತ್ರಕ್ಕಾಗಿ  ರಮೇಶ್ ಬೇಗಾರ್ ಬರೆದಿರುವ ‘ಎದೆಯ ದನಿಯ ಹಾಡು ಕೇಳು’ ಎಂಬ ಪರಿಸರದ ಕುರಿತಾದ ಹಾಡು (Song) ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ (Vijaya Prakash) ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾದ್ವಿನಿ ಕೊಪ್ಪ (Sadwini Koppa) ಸಂಗೀತ ನೀಡಿದ್ದಾರೆ. ಗಾಯಕಿಯಾಗಿ ಜನಪ್ರಿಯರಾಗಿರುವ ಸಾದ್ವಿನಿ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು.

    ಜಲಪಾತ ನನ್ನ ಎರಡನೇ ನಿರ್ದೇಶನದ ಚಿತ್ರ. ಪರಿಸರದ ಕುರಿತು ಜಗೃತಿ ಮೂಡಿಸುವ ಹಾಡುಗಳು ಸಾಕಷ್ಟು ಬಂದಿದೆ. ಆದರೆ ಈ ಹಾಡು ಸ್ವಲ್ಪ ವಿಭಿನ್ನ. ಮೊದಲ ನುಡಿಯಲ್ಲಿ ಪರಿಸರ ನಮಗೆ ಏನೆಲ್ಲಾ ನೀಡಿದೆ ಎಂದು ಇದೆ. ಎರಡನೇ ನುಡಿಯಲ್ಲಿ ನಮ್ಮಿಂದ ಪರಿಸರ ಏನಾಗುತ್ತಿದೆ ಎಂದಿದೆ. ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಈ ಹಾಡನ್ನು ಕೇಳುವುದೆ ಸೊಗಸು. ಅಷ್ಟೇ ಚೆನ್ನಾಗಿ ಸಾದ್ವಿನಿ ಸಂಗೀತ ನೀಡಿದ್ದಾರೆ‌.  ರಜನೀಶ್, ನಾಗಶ್ರೀ ಬೇಗಾರ್ ಈ ಚಿತ್ರದ ನಾಯಕ, ನಾಯಕಿ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಮಲೆನಾಡ ರಂಗಭೂಮಿ ಪ್ರತಿಭೆಗಳು ಹೆಚ್ಚಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದರು.

    ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ನನ್ನ ಗುರುಗಳು ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ರವೀಂದ್ರ ತುಂಬರಮನೆ, ಪರಿಸರದ ಬಗ್ಗೆ ಅರಿವು ಮೂಡಿಸುವ ಚಿತ್ರ ನಿರ್ಮಿಸಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಮಲೆನಾಡ ಸೊಗಡಿನ ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು.

    ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಕೆಲವು ಬಿಟ್ಸ್ ಗಳಿದೆ. ಈ ಹಾಡಿನ ಸಾಹಿತ್ಯ ನೋಡಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಸೂಕ್ತವೆನಿಸಿತು. ತಮ್ಮ ಕಾರ್ಯದೊತ್ತಡದ ನಡುವೆಯೂ ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ ಎಂದರು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ.  ಚಿತ್ರದ ನಾಯಕ ರಜನೀಶ್ ಹಾಗೂ ನಾಯಕಿ ನಾಗಶ್ರೀ ಬೇಗಾರ್ ಜಲಪಾತ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜಲಪಾತ’ದಲ್ಲಿ ಪ್ರಮೋದ್ ಶೆಟ್ಟಿ ಲುಕ್: ಪತ್ನಿಯಿಂದ ಪತಿ ಪೋಸ್ಟರ್ ರಿಲೀಸ್

    ‘ಜಲಪಾತ’ದಲ್ಲಿ ಪ್ರಮೋದ್ ಶೆಟ್ಟಿ ಲುಕ್: ಪತ್ನಿಯಿಂದ ಪತಿ ಪೋಸ್ಟರ್ ರಿಲೀಸ್

    ಟಿ. ಸಿ. ರವೀಂದ್ರ ತುಂಬರಮನೆ ನಿರ್ಮಿಸಿ,  ರಮೇಶ್ ಬೇಗಾರ್ (Ramesh Begar) ರಚಿಸಿ ನಿರ್ದೇಶಿಸಿರುವ ‘ಜಲಪಾತ’ (Jalapatha) ಚಿತ್ರದಲ್ಲಿ ಪ್ರಸಿದ್ಧ , ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ  (Pramod Shetty) ಒಂದು ಪರಿಪೂರ್ಣ ವಿಭಿನ್ನ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದು  ಅವರ ಪಾತ್ರದ ಲುಕ್ ನ ಪೋಸ್ಟರ್ (Poster) ಅನ್ನು ಅವರ ಧರ್ಮಪತ್ನಿ ನಟಿ, ನಿರ್ಮಾಪಕಿ ಸುಪ್ರೀತಾ ಶೆಟ್ಟಿ (Supreeta Shetty) ಬಿಡುಗಡೆಗೊಳಿಸಿದರು.

    ಗಂಡನ ಹೊಸ ಅವತಾರವನ್ನು  ಹೆಂಡತಿ  ಜನರಿಗೆ ತೋರಿಸಿದ ಅಪರೂಪದ ಆಪ್ತ ವಿದ್ಯಮಾನ ಇದಾಗಿದೆ. ಈ ಸಂದರ್ಭದಲ್ಲಿ ಸುಪ್ರೀತಾ ಶೆಟ್ಟಿ  ಮಾತನಾಡಿ ಪ್ರಮೋದ್ ಮೊದಲಿನಿಂದಲೂ ವಿಭಿನ್ನ ಪಾತ್ರಗಳು ಮತ್ತು  ಹೊಸಬರಿಗೆ ಪ್ರೋತ್ಸಾಹಿಸುವುದನ್ನು ಬಯಸುವವರು.  ಅದರಂತೆ ರಮೇಶ್ ಬೇಗಾರ್ ಜೊತೆಗೆ ಪ್ರೀತಿಯಿಂದ 2ನೇ ಪ್ರಾಜೆಕ್ಟ್ ಮಾಡಿದ್ದಾರೆ.  ರವೀಂದ್ರ ನಿರ್ಮಾಣದ ಜಲಪಾತದ ಈ ಪೋಸ್ಟರ್ ಏನೋ ವಿಭಿನ್ನತೆ ಇದೆ ಎಂಬುದನ್ನು ಬಲು ಸೊಗಸಾಗಿ ತೋರಿಸಿದೆ. ಪ್ರಮೋದ್ ಲುಕ್ ಭರ್ಜರಿಯಾಗಿದ್ದು ಆ ಪಾತ್ರ ಮತ್ತು ಸಿನಿಮಾ ನೋಡಲು ಕಾತುರಳಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    ಈ ಸಂದರ್ಭದಲ್ಲಿ  ಮಾತನಾಡಿದ ರಮೇಶ್ ಬೇಗಾರ್  ಪರಿಸರ ಕಾಳಜಿ ಪ್ರಮೋದ್ ಶೆಟ್ಟಿ ಅವರ ವೈಯಕ್ತಿಕ ಆಸಕ್ತಿಯ ವಿಷಯ ಎಂದು ಅವರ ಚಟುವಟಿಕೆಯಿಂದ ಗಮನಿಸಿ ಈ ಪಾತ್ರಕ್ಕೆ ವಿನಂತಿಸಿದೆ.     ಸಿನಿಮಾದ ಉದ್ದೇಶ  ಅವರನ್ನು ಇಂಪ್ರೆಸ್ಸ್ ಮಾಡಿತು.  ಹಾಗಾಗಿ   ಈ ಪಾತ್ರ ಒಪ್ಪಿ ಅತ್ಯುತ್ತಮ ನಿರ್ವಹಣೆ ಮಾಡಿದ್ದಾರೆ ಎಂದರು.

     

    ನಿರ್ಮಾಪಕ ರವೀಂದ್ರ  ತುಂಬರಮನೆ ಮಾತಾಡಿ,  ಪರಿಸರ ರಕ್ಷಣೆ ಮತ್ತು ಅರಿವನ್ನು ಒಂದು  ಫೀಲ್ ಗುಡ್ ಜಾನರ್ ನಲ್ಲಿ ಹೇಳಲು ಹೊರಟ ನಮ್ಮ ತಂಡಕ್ಕೆ ಪ್ರಮೋದ್ ಶೆಟ್ಟಿ ಒತ್ತಾಸೆಯಾಗಿ ನಿಂತಿದ್ದಾರೆ ಮಾತ್ರವಲ್ಲ  ಚಿತ್ರದ ಮೌಲ್ಯ ಮತ್ತು ಅದ್ಧೂರಿತನವನ್ನು ಎತ್ತಿದ್ದಾರೆ.   ಸಿನಿಮಾ ಜನರನ್ನು ಆಕರ್ಷಿಸುವಲ್ಲಿ ಪ್ರಮೋದ್ ಶೆಟ್ಟಿ ಅವರ ಈ ಪೋಸ್ಟರ್ ನಿರ್ಣಾಯಕವಾಗಿದೆ ಎಂದು ತಿಳಿಸಿದರು. ಚಿತ್ರದ ನಾಯಕ ನಟ  ರಜನೀಶ್ ಎಂ  ಈ ಸಂದರ್ಭ ಉಪಸ್ಥಿತರಿದ್ದರು. ಸಾದ್ವಿನಿಕೊಪ್ಪ ಸಂಗೀತ ನಿರ್ದೇಶನದ , ಶಶೀರ ಕ್ಯಾಮರಾ ಕೆಲಸದ , ಅವಿನಾಶ್ ಸಂಕಲಿಸಿರುವ ಜಲಪಾತ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜಲಪಾತ’ ಚಿತ್ರ ಕೈಗೆತ್ತಿಕೊಂಡ ‘ವೈಶಂಪಾಯನ ತೀರ’ ನಿರ್ದೇಶಕ ರಮೇಶ್ ಬೇಗಾರ್

    ‘ಜಲಪಾತ’ ಚಿತ್ರ ಕೈಗೆತ್ತಿಕೊಂಡ ‘ವೈಶಂಪಾಯನ ತೀರ’ ನಿರ್ದೇಶಕ ರಮೇಶ್ ಬೇಗಾರ್

    ಟ ಪ್ರಮೋದ್ ಶೆಟ್ಟಿಗೆ (Pramod Shetty) ‘ವೈಶಂಪಾಯನ ತೀರ’ (Vaishampayana Theera) ಸಿನಿಮಾ ಡೈರೆಕ್ಟ್ ಮಾಡಿದ್ದ ರಮೇಶ್ ಬೇಗಾರ್ ಸದ್ಯ ‘ಜಲಪಾತ’ (Jalapatha) ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಇವತ್ತಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಿದ್ದು ಈ ಒತ್ತಡಕ್ಕೆ ಪರಿಹಾರ ನಿಸರ್ಗದಲ್ಲಿ ಮಾತ್ರ ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಕಥೆಯೇ ಈ ಜಲಪಾತ ಸಿನಿಮಾ.

    40 ವರ್ಷಗಳ ಹಿಂದೆ ಭಾರತದ ಆಹಾರ ಪದ್ದತಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಆರೋಗ್ಯಕರವಾಗಿತ್ತು, ಆದ್ರೆ ಈಗ ಮಣ್ಣಿನಲ್ಲಿ ಸತ್ವ ಇಲ್ಲ, ಆಹಾರದಲ್ಲಿ ಕಲಬೆರಿಕೆ ಹಾಗೂ ರಾಸಾಯನಿಕ ವಸ್ತುಗಳ ವಿಪರೀತ ಬಳಕೆಯಿಂದ ಜನರಲ್ಲಿ ಸಮಸ್ಯೆಗಳು ಹೆಚ್ಚಿವೆ. ಹೀಗಾಗಿ ಪೂರ್ವಿಕರ ಜೀವನ ಶೈಲಿ ಹಾಗೂ ಆಹಾರ ಪದ್ದತಿ ಮತ್ತೆ ಮರುಕಳಿಸಬೇಕು ಅನ್ನೋ ಕಾರಣಕ್ಕೆ ‘ಜಲಪಾತ’ ಸಿನಿಮಾವನ್ನು ನಿರ್ಮಾಣ ಮಾಡ್ತಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ `ಜೋಶ್’ ನಾಯಕಿ ಪೂರ್ಣಾ

    ನೈಸರ್ಗಿಕ ಹಾಗೂ ಸಾವಯವ ಕೃಷಿ ಕಮ್ಯೂನಿಟಿ ಕಲ್ಪನೆಯ ರುವಾರಿಯೂ ಆಗಿರೋ ರವೀಂದ್ರ ತುಂಬರಮನೆ ಅವ್ರು ಮೊನ್ನೆಯಷ್ಟೆ ಬೆಂಗಳೂರಿನಿಂದ 90 ಕಿ.ಲೋ ಮೀಟರ್ ದೂರದಲ್ಲಿರೋ ಮದ್ದೂರಿನ ಮಧುವನದಲ್ಲಿ ವಸಂತೋತ್ಸವ ಕಾರ್ಯಕ್ರಮವನ್ನು ಮಾಡಲಾಗಿದೆ. ಯುಗಾದಿ ಹಾಗೂ ಸುಗ್ಗಿ ಹಬ್ಬದಂತೆ ವಾತಾರಣವನ್ನು ಕ್ರಿಯೇಟ್ ಮಾಡಿದ್ರು. ಈ ಜಾಗದಲ್ಲಿಯೇ ‘ಜಲಪಾತ’ ಸಿನಿಮಾದ ಸಿಕ್ವೆನ್ಸ್ ಶೂಟಿಂಗ್ ಮಾಡಲಾಯ್ತು.

    ಬೆಂಗಳೂರಿನ ಟೆನ್ಶನ್ ಹಾಗೂ ಬ್ಯುಸಿ ಬದುಕಿನ ಜಂಜಾಟದಲ್ಲಿದ್ದ ನೂರಾರು ಜನ ಮಧುವನಕ್ಕೆ ಭೇಟಿಕೊಟ್ಟು ಸಂಗೀತ ಹಾಗೂ ಆಟಗಳನ್ನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗ್ಲೆ ಶೃಂಗೇರಿ ಸುತ್ತಮುತ್ತ 15 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ಮಧುವನದ ವಸಂತೋತ್ಸವದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸದ್ಯದಲ್ಲೇ ಈ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.