Tag: ರಮೇಶ್ ಜಾರಕಿಹೋಳಿ

  • ವಕ್ಫ್ ವಿವಾದ; ಬಿಜೆಪಿ ರೆಬಲ್ಸ್ ಟೀಂನಿಂದ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ

    ವಕ್ಫ್ ವಿವಾದ; ಬಿಜೆಪಿ ರೆಬಲ್ಸ್ ಟೀಂನಿಂದ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ

    ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿವಾದ ದೊಡ್ಡದಾಗುತ್ತಿರೋ ಬೆನ್ನಲ್ಲೇ ಬಿಜೆಪಿಯ (BJP) ರೆಬಲ್ಸ್ ಟೀಂ ವಕ್ಫ್ ವಿಚಾರವಾಗಿ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ಮಾಡೋದಾಗಿ ಘೋಷಣೆ ಮಾಡಿದೆ.

    ಬಿಜೆಪಿಯ ರೆಬೆಲ್ಸ್ ನಾಯಕರುಗಳಾದ ಯತ್ನಾಳ್, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೋಳಿ (Ramesh Jarakiholi) ಇಂದು ಸುದ್ದಿಗೋಷ್ಠಿ ನಡೆಸಿ ವಕ್ಫ್ ವಿರುದ್ಧ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಪ್ರಾರಂಭ ಮಾಡೋದಾಗಿ ಘೋಷಣೆ ಮಾಡಿದ್ರು. ನ.25 ರಿಂದ ಡಿ.25ವರೆಗೆ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 50 ಸಾವಿರ ಲಂಚ ಸ್ವೀಕಾರ – ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

    ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ರಾಜ್ಯಾದ್ಯಂತ ಅಭಿಯಾನ ಶುರು ಮಾಡ್ತಿದ್ದೇವೆ. ಇದಕ್ಕಾಗಿ ಒಂದು ವಾರ್ ರೂಂ ಪ್ರಾರಂಭ ಮಾಡ್ತಿದ್ದು, ಯಾರಿಗೆ ಅನ್ಯಾಯ ಆಗಿದೆಯೋ ಅವರು ವಾರ್ ರೂಂಗೆ ದಾಖಲಾತಿ ನೀಡಬಹುದು. ನ.25 ರಿಂದ ಬಸನಗೌಡ ಯತ್ನಾಳ್ ನೇತೃತ್ವದಲ್ಲಿ ಅಭಿಯಾನ ಶುರುವಾಗಲಿದೆ. ಬೀದರ್‌ನಿಂದ (Bidar) ಅಭಿಯಾನ ಪ್ರಾರಂಭ ಆಗಲಿದ್ದು, ಬಳಿಕ ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ನಿತ್ಯವೂ ಅಭಿಯಾನ ಮಾಡೋದಾಗಿ ತಿಳಿಸಿದರು. ನಮ್ಮದು ಮೂರು ಬೇಡಿಕೆ ಇದೆ ಅವುಗಳೆಂದರೆ, 1954ರಿಂದ ಆಗಿರೋ ವಕ್ಫ್ನ ಎಲ್ಲಾ ಗೆಜೆಟ್‌ಗಳನ್ನ ರದ್ದು ಮಾಡಬೇಕು. ರೈತರು, ಮಠಗಳು, ಮಂದಿರ, ದಲಿತರು ಸೇರಿ ಜಾಗ ಅಂತ ವಕ್ಫ್ ಮಾಡ್ತಿದೆ ಅದನ್ನ ಕಾಯಂ ಆಗಿ ಜಮೀನು ವಾಪಸ್ ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Waqf Land Row | ವಿವಾದಿತ ಜಮೀನಿನಲ್ಲಿ ಉಳುಮೆ – ರೈತರ ಮೇಲೆ ಕೇಸ್ ದಾಖಲು, ಟ್ರ್ಯಾಕ್ಟರ್ ಜಪ್ತಿ

    ಬಸನಗೌಡ ಯತ್ನಾಳ್ ಮಾತನಾಡಿ, ವಕ್ಫ್ ಬೋರ್ಡ್ನಿಂದ ದೊಡ್ಡ ಅನ್ಯಾಯ ಆಗಿದೆ. ರೈತರು, ಮಠಗಳು ಸೇರಿ ಎಲ್ಲರಿಗೂ ಇದರಿಂದ ಸಮಸ್ಯೆ ಆಗಿದೆ. ವಕ್ಫ್ ನ್ಯಾಯಮಂಡಳಿ ರದ್ದಾಗಬೇಕು. ವಕ್ಫ್ ನ್ಯಾಯಮಂಡಳಿ ಒಂದು ಶಾಪ ಆಗಿದೆ. ಹೀಗಾಗಿ ನ್ಯಾಯಾಲಯದ ಮೂಲಕವೇ ಎಲ್ಲವೂ ಇತ್ಯರ್ಥ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್: ರೇಣುಕಾಚಾರ್ಯ ವಾಗ್ದಾಳಿ

    ಈಗ 2700 ಎಕರೆ ಜಾಗ ಖಬರ್‌ಸ್ತಾನಗೆ ಕೊಡೋಕೆ ಸರ್ಕಾರ, ಕಂದಾಯ ಇಲಾಖೆ ನಿರ್ಣಯ ಮಾಡಿದೆ. ವಕ್ಫ್ಗೆ ಎಷ್ಟು ಜಾಗ ತಗೋಬೋದು ಎಂದು ಅವರು ಪಟ್ಟಿ ಮಾಡಿದ್ದಾರೆ. ಅವರು ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿ ಮಾಡಲು ಮುಂದಾಗಿದ್ದಾರೆ. ನಾವು ಅಭಿಯಾನ ಮಾಡಿ ಮಾಹಿತಿ ಪಡೆದು ಜೆಪಿಸಿಗೆ ನಾವು ವರದಿ ಕೊಡ್ತೀವಿ. ಜನಜಾಗೃತಿಗಾಗಿ ಈ ಅಭಿಯಾನ ಮಾಡ್ತಿದ್ದೇವೆ. ರಾಜ್ಯ, ಕೇಂದ್ರ ಸರ್ಕಾರ ಎರಡಕ್ಕೂ ನಾವು ಈ ಒತ್ತಾಯ ಮಾಡ್ತಿದ್ದೇವೆ ಎಂದರು. ಇದನ್ನೂ ಓದಿ: ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

    ಇದು ಬಿಜೆಪಿ ಪಕ್ಷದಿಂದಲೇ ನಡೆಯುವ ಹೋರಾಟ. ನಮ್ಮ ಅಭಿಯಾನಕ್ಕೆ ವರಿಷ್ಠರ ಅನುಮತಿ ಪ್ರಶ್ನೆ ಬರೋದಿಲ್ಲ. ನಮ್ಮ ಗೃಹ ಸಚಿವರು, ಜೆಪಿಸಿ ಸಮಿತಿ ನಮ್ಮ ಹೋರಾಟಕ್ಕೆ ಕೈಜೋಡಿಸಿದೆ. ಹೀಗಾಗಿ ನಮ್ಮ ಅಭಿಯಾನಕ್ಕೆ ಅವರ ಬೆಂಬಲವೂ ಇದೆ ಅಂತ ಅರ್ಥ. ಯಾರಿಗೆ ರೈತರು, ಮಠ ಮಾನ್ಯಗಳು ಪರ ಕಳಕಳಿ ಇದೆಯೋ ಪಕ್ಷಾತೀತವಾಗಿ ನಮ್ಮ ಜೊತೆ ಬಂದು ಸೇರಬಹುದು. ಪಕ್ಷ ಅಂತ ಏನಿಲ್ಲ. ಯಾರು ಬೇಕಾದ್ರು ಬರಬಹುದು. ರಾಜ್ಯಾಧ್ಯಕ್ಷ ಆಗಲಿ ಯಾರೇ ಆಗಲಿ ಬರಬಹುದು. ಯಾರೋ ಒಬ್ಬ ವ್ಯಕ್ತಿ ಅಂತ ಇಲ್ಲ ಎಂದು ವಿಜಯೇಂದ್ರಗೂ ಪರೋಕ್ಷವಾಗಿ ತಿರುಗೇಟು ಕೊಟ್ಟರು. ಇದನ್ನೂ ಓದಿ: ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

  • ರಮೇಶ್ ಜಾರಕಿಹೊಳಿ, ಈಶ್ವರಪ್ಪ ನನ್ನ ಸಂಪರ್ಕದಲ್ಲಿದ್ದಾರೆ: ಬೊಮ್ಮಾಯಿ

    ರಮೇಶ್ ಜಾರಕಿಹೊಳಿ, ಈಶ್ವರಪ್ಪ ನನ್ನ ಸಂಪರ್ಕದಲ್ಲಿದ್ದಾರೆ: ಬೊಮ್ಮಾಯಿ

    ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಕೆ.ಎಸ್.ಈಶ್ವರಪ್ಪ (KS Eshwarappa) ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ನಗರದ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಅವರು ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಬಹಿಷ್ಕಾರವಲ್ಲ. ತಮ್ಮ ಮೇಲಿದ್ದ ಪ್ರಕರಣಗಳಲ್ಲಿ ಮುಕ್ತರಾದ ಮೇಲೆ ಮತ್ತೊಮ್ಮೆ ಸಂಪುಟಕ್ಕೆ ಸೇರಬೇಕೆನ್ನುವ ಅವರ ಚಿಂತನೆ ಸರಿಯಿದೆ. ಅವರ ವಿಚಾರವನ್ನು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚರ್ಚೆ ಮಾಡಿದ್ದೇನೆ. ಅವರು ಕೂಡ ಸಕರಾತ್ಮಕ ಸ್ಪಂದಿಸಿದ್ದಾರೆ. ಮಿಕ್ಕ ವಿಚಾರಗಳನ್ನು ವೈಯಕ್ತಿಕವಾಗಿ ಹೇಳಲಾಗುವುದು. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.

    ಸಿಬಿಐ ದಾಳಿ ಬಗ್ಗೆ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾಂವಿಧಾನಾತ್ಮಕವಾಗಿ ಸ್ವಾಯತ್ತವಾಗಿರುವ ಸಂಸ್ಥೆ ಸಿಬಿಐ ಆಗಿದೆ. ಅವರು ಪ್ರಕರಣಕ್ಕನುಗುಣವಾಗಿ ಕ್ರಮ ಕೈಗೊಳ್ಳುತ್ತಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೂ ತಿಳಿದಿರುವ ವಿಚಾರ ಎಂದು ಹೇಳಿದರು. ಇದನ್ನೂ ಓದಿ: ಈ ದೇಶಕ್ಕಾಗಿ BJP ನಾಯಕನ ಮನೆ ನಾಯಿಯೂ ಸತ್ತಿಲ್ಲ – ಕೋಲಾಹಲ ಎಬ್ಬಿಸಿದ ಖರ್ಗೆ ಹೇಳಿಕೆ

    ಇದೇ ವೇಳೆ ಹಲಾಲ್ ಕಟ್ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಹಲಾಲ್ ಕಟ್ ವಿಷಯಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನನ್ನನ್ನು ಆದಷ್ಟು ಬೇಗ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಿ: ಈಶ್ವರಪ್ಪ ಭಾವುಕ ಮಾತು

    Live Tv
    [brid partner=56869869 player=32851 video=960834 autoplay=true]

  • ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ – ಸತೀಶ್ ಜಾರಕಿಹೊಳಿ

    ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ – ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯದಲ್ಲಿ ರಮೇಶ್ ಜಾರಕಿಹೊಳಿಗೆ (Ramesh Jarkiholi) ಸರ್ಕಾರ ಉರುಳಿಸುವ ಶಕ್ತಿಯಿದೆ. ಅವರು ಇನ್ನೊಮ್ಮೆ ಸರ್ಕಾರ (Government) ಉರುಳಿಸುವ ಪ್ರಯತ್ನ ಮಾಡಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ ಎಂದು ಸಹೋದರ ಹಾಗೂ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅವರು ಕಾಲೆಳೆದಿದ್ದಾರೆ.

    ಗೋಕಾಕ್ ನಗರದಲ್ಲಿ ನಡೆದ ಉಪ್ಪಾರ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಸಹೋದರಿಗೆ ಸರ್ಕಾರ ಉರುಳಿಸುವ ಶಕ್ತಿಯಿದೆ ಎಂದು ಹೇಳ್ತಾರೆ. ರಾಜ್ಯ ರಾಜಕಾರಣದಲ್ಲಿ ನಾಲ್ವರು ಸಹೋದರರಿದ್ದೇವೆ. ನಾಲ್ವರು ಒಂದೇ ಎಂದು ಭಾವಿಸಬಾರದು. ನಾಲ್ವರು ಸಹೋದರರ ಕೆಲಸವೂ ಬೇರೆ-ಬೇರೆ ಇದೆ. ಯಾರನ್ನೂ ಗೊಂದಲ ಮಾಡಿಕೊಳ್ಳಬಾರದು ಎಂದರು. ಇದನ್ನೂ ಓದಿ:  ಕನ್ನಡದ ನಟ ಪ್ರತಾಪ್ ನಾರಾಯಣ ಇದೀಗ ಪ್ರಗ್ನೆಂಟ್: ಹೊಸ ದುನಿಯಾದ ವಿಚಿತ್ರ ಸುದ್ದಿ

    ನಮ್ಮಲ್ಲಿ ಸರ್ಕಾರ ಉರುಳಿಸುವ ಶಕ್ತಿ ರಮೇಶ್ ಜಾರಕಿಹೊಳಿ (Ramesh Jarakiholi) ಮಾತ್ರ ಇದೆ. ಉಳಿದ ನಾಲ್ವರು ಸಹೋದರರು ಸರ್ಕಾರ ಉರುಳಿಸುವುದರ ಭಾಗವಾಗುವುದಿಲ್ಲ. ರಮೇಶ್ ಜಾರಕಿಹೊಳಿಗೆ ಮಾತ್ರ ಸರ್ಕಾರ ಉರಳಿಸುವ ಶಕ್ತಿ ಇದೆ. ಅವರು ಇನ್ನೊಮ್ಮೆ ಸರ್ಕಾರ ಉರಳಿಸುವ ಪ್ರಯತ್ನ ಮಾಡಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 2023ರ ನಂತರ ನಮಗೆ ಶಾಪ ವಿಮೋಚನೆ ಆಗುತ್ತೆ: ಹೆಚ್.ವಿಶ್ವನಾಥ್

    2023ರ ನಂತರ ನಮಗೆ ಶಾಪ ವಿಮೋಚನೆ ಆಗುತ್ತೆ: ಹೆಚ್.ವಿಶ್ವನಾಥ್

    ಬೆಳಗಾವಿ: ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಆಗುತ್ತೋ ವಿಸ್ತರಣೆ ಆಗುತ್ತೋ ಗೊತ್ತಿಲ್ಲ. ಆದ್ರೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಬಿಜೆಪಿ ಎಂಎಲ್‍ಸಿ ಹೆಚ್.ವಿಶ್ವನಾಥ್ ಹೇಳಿದರು.

    ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಸಚಿವರು ಆಗುವ ಸಂದರ್ಭದಲ್ಲಿ ಅದನ್ನು ಮಣ್ಣು ಮಾಡಿದವರು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ. ಸಮ್ಮಿಶ್ರ ಸರ್ಕಾರದ ಪತನ, ಬಿಜೆಪಿ ಸರ್ಕಾರದ ಸ್ಥಾಪನೆ ಆ ಸಂದರ್ಭದಲ್ಲಿ ಎಷ್ಟೇಲ್ಲ ಆಯ್ತು. ಇದಾದ ಬಳಿಕ ನಮ್ಮನ್ನ ಎಂಎಲ್‍ಸಿ ಮಾಡುವಾಗ ನಮಗೆಲ್ಲಾ ಅನ್ಯಾಯ ಆಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಭಾರತೀಯರಿಗೆ ನಿರ್ಬಂಧ ಹಾಕಿದರೆ ಏನಾಗಬಹುದು: ಬಿಜೆಪಿಗೆ ಎಚ್.ವಿಶ್ವನಾಥ್ ಪ್ರಶ್ನೆ

    ಅಸೆಂಬ್ಲಿಯಿಂದ ಆಯ್ಕೆಯಾಗಿ ನಾನು ಕೌನ್ಸಿಲ್‍ಗೆ ಬರಬೇಕಾಗಿತ್ತು. ಅದನ್ನು ತಪ್ಪಿಸಿ ನಮ್ಮನ್ನು ನಾಮನಿರ್ದೇಶನ ಮಾಡಿದರು. ನಾಮನಿದೇಶನವಾದ ಸದಸ್ಯರಿಗೆ ಮಂತ್ರಿಯಾಗುವ ಯೋಗವಿಲ್ಲ. ಸುಪ್ರೀಂ ಕೋರ್ಟ್ ತೂಗುಗತ್ತಿ ಇದೆ. ಅದು ಗೊತ್ತಿದ್ದು ಕೂಡ ನಮಗೆ ಅನ್ಯಾಯವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಬಿಜೆಪಿ ನಮ್ಮನ್ನ ಕಡೆಗಣನೆ ಮಾಡುತ್ತಿಲ್ಲ
    ಬಿಜೆಪಿ ನಮ್ಮನ್ನು ಕಡೆಗಣನೆ ಮಾಡಿಲ್ಲ. ಬಿಜೆಪಿ ನಾಯಕರು ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ. ಯಾರು ಯಾವುದೇ ಪಕ್ಷವನ್ನು ಆಪಾದನೆ ಮಾಡಬಾರದು. ಪಕ್ಷಗಳು ಎಲ್ಲವೂ ಚೆನ್ನಾಗಿರುತ್ತಾವೆ. ಪಕ್ಷ ನಡೆಸುವವರಿಂದ ಪಾರ್ಟಿಗಳು ಹಾಳಾಗುತ್ತಿವೆ. ಪಕ್ಷದ ಸಿದ್ದಾಂತಗಳು ಚೆನ್ನಾಗಿರ್ತವೆ ಪಕ್ಷ ಹಾಳು ಮಾಡುವವರು ನಾಯಕರು ಎಂದು ಕಿಡಿಕಾರಿದರು.

    ಕರ್ನಾಟಕದಲ್ಲಿ ಯಾರಾದರೂ ಒಬ್ಬರು ಮೋದಿ ಹೆಸರು ಹೇಳುತ್ತಾರಾ. ಯಾರಿಂದ ಇವರೆಲ್ಲಾ ಬಂದಿದ್ದಾರೆ. ಯಾರ ಹೆಸರು ಹೇಳಿ ಮುಂದಿನ ಚುನಾವಣೆಯಲ್ಲಿ ವೋಟ್ ಕೇಳ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮಾತಾಡಲ್ಲ. ಮಂತ್ರಿಗಳು ಮಾತಾಡಲ್ಲ. ಮುಖ್ಯಮಂತ್ರಿ ಮಾತಾಡುವುದಿಲ್ಲ. ಮೋದಿ ಅವರ ಕಾರ್ಯಕ್ರಮಗಳ ಬಗ್ಗೆ ಯಾರೂ ಮಾತಾಡುವುದಿಲ್ಲ ಎಂದರು.

    ಈವರೆಗೂ ಹಿಂದುತ್ವದ ಬಗ್ಗೆ ಮಾತಾಡ್ತಾರೆ. ಮೋದಿ ಅವರು ಹಿಂದುತ್ವ ಬಗ್ಗೆ ಮಾತಾಡಿದ್ದರಾ..? ಮೋದಿ ಅವರೇ ಹಿಂದುತ್ವದ ಬಗ್ಗೆ ಮಾತಾಡಿಲ್ಲ. ಇವರ್ಯಾಕೆ ಮಾತಾಡ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

    2023ರ ನಂತರ ನಮಗೆ ಶಾಪ ವಿಮೋಚನೆ ಆಗುತ್ತೆ. ಈ ಕಾರಣಕ್ಕೆ ಸದ್ಯ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸರ್ಕಾರದ ಜೊತೆಗೆ ಕೆಲಸ ಮಾಡುತ್ತೇನೆ. ನಾನು ಸಚಿವ ಸ್ಥಾನ ನೀಡುವಂತೆ ಯಾರಿಗೂ ಸಪೋರ್ಟ್ ಮಾಡಲ್ಲ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರು. ಬಿಜೆಪಿ ಸರ್ಕಾರ ಸ್ಥಾಪನೆಗೆ ಅವರು ಕೂಡ ಪ್ರಮುಖ ಕಾರಣರಾದವರು. ಹೈಕಮಾಂಡ್ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತೆ ನೋಡೋಣ. ರಾಜಕಾರಣದಲ್ಲಿ ಕೃತಜ್ಞತೆ ಪದಕ್ಕೆ ಅರ್ಥ ಇಲ್ಲದಂತಾಗಿದೆ. ಕೃತಜ್ಞತೆ ಇಲ್ಲದ ಜನನಾಯಕರಾಗುತ್ತಿದ್ದೇವೆ ನಾವು. ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ದುಡಿಯುತ್ತೇವೆ ಎಂದರು.

    ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ತಪ್ಪಲು ಕಾಣುವ ಕೈಗಳೇ ಕಾರಣ. ರಮೇಶ್ ಜಾರಕಿಹೊಳಿಯನ್ನೂ ನಮ್ಮನ್ನೂ ಕಾಣುವ ಕೈಗಳೇ ಮುಗಿಸುತ್ತವೆ. ಸಿದ್ರಾಮಯ್ಯ, ನಾವು, ಜಾರಕಿಹೊಳಿ, ಹಿಂದುಳಿದ ವರ್ಗದವರು. ಯಾರು ಬದುಕುವ ಹಾಗೇ ಇಲ್ಲ ಇಲ್ಲಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಟ್ರ್ಯಾಕ್ಟರ್, ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸಾವು

    ಜಾರಕಿಹೊಳಿ ಅವರು ಬಿಜೆಪಿ ಸರ್ಕಾರ ಸ್ಥಾಪನೆಗೆ ಪ್ರಮುಖ ಕಾರಣರಾದವರು. ಅವರಿಗೆ ಈ ರೀತಿ ಆಟ ಆಡಿಸುತ್ತಾ ಕುಳಿತಿದ್ದಾರೆ. ಜಾರಕಿಹೊಳಿಯನ್ನ, ವಿಶ್ವನಾಥ್‍ನ ಯಾರು ತುಳಿಯಲು ಆಗಲ್ಲ. ಇದೆಲ್ಲಾ ತಾತ್ಕಾಲಿಕ, ನಿಮಗೆ ಅಧಿಕಾರ ನಾವೇ ಕೊಟ್ಟಿದ್ದೇವೆ. ನಾವು ಕೊಟ್ಟ ತ್ರಿಶೂಲದಲ್ಲಿ ನಮ್ಮನ್ನ ತಿವಿತಿದ್ದೀರಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

  • ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ

    ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ

    – ಸಿದ್ದರಾಮಯ್ಯ ಇದ್ದಾಗಲೂ ನಮ್ಮ ಪಕ್ಷದಲ್ಲಿ 19% ಮತ ಬರುತ್ತಿತ್ತು, ಈಗಲೂ ಬರುತ್ತಿದ್ದೆ

    ರಾಮನಗರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ಮೇಲೆ ಅಷ್ಟೊಂದು ಕನಿಕರ ಇಟ್ಟಿದಕ್ಕೆ ಧನ್ಯವಾದ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

    ಜಾರಕಿಹೊಳಿ ಜೆಡಿಎಸ್ ಬಗ್ಗೆ ಕೊಟ್ಟ ಹೇಳಿಕೆ ಕುರಿತು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಅವರು ನಾವು ಕಾಂಗ್ರೆಸ್ ನಿಂದ 16 ಜನರನ್ನು ತಯಾರು ಮಾಡಿದ್ದೇವೆ. ಆದರೆ ಜೆಡಿಎಸ್‍ಗೆ ಕೈ ಹಾಕುವುದಿಲ್ಲ ಎಂದಿದ್ದಾರೆ. ನಮ್ಮ ಪಕ್ಷದ ಬಗ್ಗೆ ಅಷ್ಟೋಂದು ಕನಿಕರ ಇಟ್ಟುಕೊಂಡಿರುವುದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ನಾನು ಅವರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದರು.

    ಜೆಡಿಎಸ್ ಪಕ್ಷವನ್ನು ನಾವು ಕದಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಷ್ಟಾದರೂ ನಮಗೆ ಅವರು ಗೌರವ ಕೊಟ್ಟಿರುವುದಕ್ಕೆ ನಮ್ಮ ಕಡೆಯಿಂದ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ

    ಇದೇ ವೇಳೆ ಜೆಡಿಎಸ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಅವರು, ಕಾಂಗ್ರೆಸ್ ನಾಯಕರು ನಾನು ಜೆಡಿಎಸ್ ಅಲ್ಲಿ ಇದ್ದಾಗ ಎಲ್ಲಿರೀ ಕುಮಾರಸ್ವಾಮಿ ಇದ್ರೂ ಎಂದು ಪ್ರಶ್ನೆ ಕೇಳಿದ್ದಾರೆ. ಆದರೆ ಅವರು ನಮ್ಮ ಪಕ್ಷದಲ್ಲಿ ಅಧ್ಯಕ್ಷರಾಗಿ ದುಡಿದಿದ್ದಕ್ಕೆ ನನ್ನ ಶ್ರಮ, ದುಡಿಮೆಯೂ ಇದೆ. ಇವತ್ತು ಅದನ್ನು ಅವರು ಮರೆತ್ತಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್‍ನಲ್ಲಿ ಯಾರು ನಿಷ್ಠಾವಂತ ಸದಸ್ಯರಿದ್ದರೂ, ಅವರನ್ನು ಮೂಲೆಗುಂಪು ಮಾಡಿ ಇವತ್ತು ಅವರೇ ಮುಂದೆ ಇದ್ದಾರೆ. ಅದೇ ರೀತಿ ಅವರು ನಮ್ಮ ಪಕ್ಷದಲ್ಲಿ ಇದ್ದಾಗಲೂ ಆಗುತ್ತಿತ್ತು ಎಂದು ವಿವರಿಸಿದರು.

    ನಮ್ಮಂತಹ ಕಾರ್ಯಕರ್ತರು ನಾವು ಸಂಪಾದಿಸಿದ ಹಣವನ್ನು ಪಕ್ಷದ ಸಂಘಟನೆಗೆ, ಪಕ್ಷದ ಕಾರ್ಯಕ್ರಮಗಳಿಗೆ ಹಾಕುತ್ತೇವೆ. ಇವರು ಅಧ್ಯಕ್ಷರಾದಾಗ ಜನರನ್ನು ನಾವೇ ಸೇರಿಸಿದ್ದೇವೆ. ಕಾರ್ಯಕ್ರಮಕ್ಕೆ ಬೇಕಾಗಿದ್ದ ಎಲ್ಲ ಸಿದ್ಧತೆಗಳನ್ನು ಮಾಡಿ ನಾವು ಹಿಂದೆ ಇರುತ್ತಿದ್ದೆವು ಎಂದರು.

    58 ಸೀಟ್ ಗೆದ್ದಿದ್ದು ಅವರಿಂದ ಎಂದು ಸಿದ್ದರಾಮಯ್ಯ ಅವರು ಹೇಳಿಕೊಂಡು ಬರುತ್ತಿದ್ದಾರೆ. ಆ 58 ಸೀಟ್ ನಲ್ಲಿಯೂ ಕುಮಾರಸ್ವಾಮಿ ಧೆಣಿಗೆ ಇದೆ. ಚುನಾವಣೆಯ ಸಂಪೂರ್ಣ ಜವಾಬ್ದಾರಿ ಮತ್ತು ವೆಚ್ಚವನ್ನು ನೋಡಿಕೊಂಡಿದ್ದು ಕುಮಾರಸ್ವಾಮಿ. ನಾನು ಈ ಬಗ್ಗೆ ಹಲವಾರು ಉದಾಹರಣೆಯನ್ನು ಕೊಡಬಲ್ಲೆ. ಯಾವ ಕ್ಷೇತ್ರಕ್ಕೆ ಎಷ್ಟು ಹಣಕೊಟ್ಟಿದ್ದೇನೆ ಎಂದು ನಾನು ಹೇಳಬಲ್ಲೆ ಎಂದು ಸವಾಲು ಹಾಕಿದರು.

    Multicolor Polyester Congress Party Flag, Rs 120 /piece Prakash Trading | ID: 14933618662

    ಸಿದ್ದರಾಮಯ್ಯ ಅವರಿಂದ ಪಕ್ಷ ಗೆದ್ದಿಲ್ಲ. ದೇವೇಗೌಡರಿಂದ ಗೆದ್ದಿರುವುದು. ಪಕ್ಷದ ಲಕ್ಷಾಂತರ ಕಾರ್ಯಕರ್ತರ ದುಡಿಮೆಯಿಂದ ನಾವು ಗೆದ್ದಿದ್ದೇವೆ. ನಾನು ಬಂದ ಮೇಲೆ ಪಕ್ಷ ಏನಾಯಿತು ಎಂದು ಅವರು ಕೇಳಿದ್ದಾರೆ. ಅವರು ಹೋದ ಮೇಲೆಯೂ ನಮ್ಮ ಪಕ್ಷ ಒಂದು ಚುನಾವಣೆಯಲ್ಲಿ 28 ಸೀಟ್, ಒಂದು ಸಂದರ್ಭದಲ್ಲಿ 40 ಸೀಟ್ ಗೆದ್ದಿದ್ದೇವೆ. ಯಾರು ಇಲ್ಲದೆ ನಮ್ಮ ಪಕ್ಷ 40 ಸ್ಥಾನ ಗೆದ್ದಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳನ್ನ ಬಸ್ಸಿನಲ್ಲಿ ತಾವೇ ಡ್ರೈವ್ ಮಾಡಿ ರೌಂಡ್ ಹಾಕಿಸಿದ ಶಿವಣ್ಣ

    ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಇದ್ದಾಗ ನಮ್ಮ ಪಕ್ಷಕ್ಕೆ 19% ಮತ ಬರುತ್ತಿತ್ತು. ಅವರು ಹೋದ ಮೇಲೆಯೂ ಸಹ ನಮ್ಮ ಪಕ್ಷದ ಮತ ಅದೇ ರೀತಿ ಇದೆ. ಇದಕ್ಕೆ ಕಾರಣ ಯಾರು ನನ್ನ ಕಾರ್ಯಕರ್ತರು ಎಂದರು.

  • ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ: ರಮೇಶ್ ಜಾರಕಿಹೊಳಿ

    ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ: ರಮೇಶ್ ಜಾರಕಿಹೊಳಿ

    ಚಿಕ್ಕೋಡಿ: ಮುಂಬರುವ ಎಂಟರಿಂದ ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ ಪ್ರಕಟಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದನ್ನೂ ಓದಿ:  ಸರ್ಕಾರ ಬೀಳಿಸಿ, ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ: ರಮೇಶ್ ಜಾರಕಿಹೊಳಿ

    ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಅವರು, ಎಂಟು-ಹತ್ತು ದಿನಗಳಲ್ಲಿ ನನ್ನ ರಾಜಕೀಯ ನಿರ್ಣಯ ತೆಗೆದುಕೊಳ್ಳುತ್ತೇನೆ, ಅಲ್ಲಿಯ ವರೆಗೆ ಯಾವುದೇ ರೀತಿ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುವುದಿಲ್ಲ. ಈ ಕುರಿತು ಹಿರಿಯರು ಖಾರವಾಗಿ ಹೇಳಿದ್ದಾರೆ. ಹೀಗಾಗಿ ನಾನು ಸದ್ಯ ಯಾವುದೇ ಹೇಳಿಕೆ ನೀಡುವದಿಲ್ಲ. ನಿನ್ನೆ ನಾನು ನೀಡಿರುವ ಹೇಳಿಕೆಗಳಿಗೆ ಬದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಸುತ್ತೂರು ಶ್ರೀಗಳ ತಾಯಿ ಸಾವನ್ನಪ್ಪಿದ ಕಾರಣ ಸಾಂತ್ವನ ಹೇಳಲು ಸುತ್ತೂರು ಮಠಕ್ಕೆ ಹೋಗಿದ್ದೆ ಅದರಲ್ಲಿ ಏನೂ ರಾಜಕೀಯವಿಲ್ಲ. ಅಥಣಿ ಭೇಟಿಯಲ್ಲಿ ಯಾವುದೇ ವಿಶೇಷವಿಲ್ಲ, ಇಂದೂ ಕೂಡ ಕೋವಿಡ್ ನಿಂದ ಮೃತಪಟ್ಟ ಆಪ್ತರ ಮನೆಗೆ ಭೇಟಿ ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಅವರ ಆಪ್ತ ಶಾಸಕ ಮಹೇಶ ಕುಮಟಳ್ಳಿ ಸೇರಿದಂತೆ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

    ನಿನ್ನೆ ಮೈಸೂರಲ್ಲಿ ಮಾತನಾಡಿದ್ದ ಅವರು, ಇನ್ನೊಬ್ಬರನ್ನ ಸಚಿವನನ್ನಾಗಿ ಮಾಡುವ ಶಕ್ತಿ ಇರುವ ನಾನು, ಸಚಿವನಾಗೋಕೆ ಲಾಬಿ ಮಾಡುತ್ತೇನಾ? ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ ಮಾಡಿದ್ದವನು ನಾನು. ಇಲ್ಲಿ ಸಚಿವ ಸ್ಥಾನದ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ. ಮನಸ್ಸು ನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದು ಸತ್ಯ. ಆದರೆ ಕೆಲವು ಹಿರಿಯರ ಸಲಹೆಯ ಮೇರೆಗೆ ಈಗ ಅದನ್ನು ಕೈಬಿಟ್ಟಿದ್ದೇನೆ. 8 ರಿಂದ 10 ದಿನ ನನ್ನನ್ನು ಬಿಟ್ಟು ಬಿಡಿ, ನಾನು ಏನೂ ಮಾತಾಡಲ್ಲ ಎಂದು ಹೇಳಿದ್ದರು.

  • ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ: ಈಶ್ವರಪ್ಪ

    ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ: ಈಶ್ವರಪ್ಪ

    ಧಾರವಾಡ: ನೋಟು ಕೌಂಟಿಂಗ್ ಮಷಿನ್ ಇಟ್ಟುಕೊಳ್ಳುವದರಲ್ಲಿ ತಪ್ಪಿಲ್ಲ, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಹುಚ್ಚರ ರೀತಿಯಲ್ಲಿ ಮಾತನಾಡುವುದು ಶೋಭೆ ತರಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ವ್ಯಾಪಾರ ಮಾಡುವವರ ಮನೆಯಲ್ಲಿ ನೋಟು ಕೌಂಟಿಂಗ್ ಮಷಿನ್ ಇರುತ್ತದೆ. ಇದನ್ನು ಹೊರತು ನೋಟು ಪ್ರಿಂಟ್ ಮಷಿನ್ ಇಲ್ಲವಲ್ಲಾ ಎಂದರು. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿ ಬಂದವರು. ಹೀಗಾಗಿ ಏನೇನೂ ಮಾತನಾಡುತ್ತಾರೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಏನೇನೂ ಮಾತಡುತ್ತಿದ್ದು, ಅವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ ಎಂದರು.

    ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲವು ಸಾಧಿಸುತ್ತೇವೆ ಎಂದ ಈಶ್ವರಪ್ಪ, ಅನುದಾನದ ಹಂಚಿಕೆ ಅಸಮಾಧಾನ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಎಲ್ಲವೂ ಸರಿಯಾಗುತ್ತದೆ. ಆ ವಿಷಯ ಮುಗಿದು ಹೋಗಿದೆ. ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಎರಡು ದಿನದಲ್ಲಿ ಪ್ರಚಾರಕ್ಕೆ ಬರುತ್ತಾರೆ. ಸಿ.ಡಿ ವಿಷಯದ ಬಗ್ಗೆ ಕೇಳಬೇಡಿ. ಸಿ.ಡಿ ವಿಷಯ ಅಸಹ್ಯ ಹುಟ್ಟಿಸುತ್ತದೆ. ಅದರ ಬಗ್ಗೆ ನಾನು ಎಲ್ಲಿಯೂ ಪ್ರತಿಕ್ರಿಯಿಸಿಲ್ಲ ಎಂದರು.