Tag: ರಮೇಶ್ ಜಾರಕಿಹೊಳೀ

  • ಮುನಿರತ್ನ ಬೈದಿದ್ದು ಇನ್ನೂ ಸಾಬೀತಾಗಿಲ್ಲ, ಇದು ಸಿಡಿ ಶಿವು ಕೆಲಸ: ರಮೇಶ್ ಜಾರಕಿಹೊಳಿ

    ಮುನಿರತ್ನ ಬೈದಿದ್ದು ಇನ್ನೂ ಸಾಬೀತಾಗಿಲ್ಲ, ಇದು ಸಿಡಿ ಶಿವು ಕೆಲಸ: ರಮೇಶ್ ಜಾರಕಿಹೊಳಿ

    – ಇನ್ಮುಂದೆ ದೊಡ್ಡ ಪ್ರಮಾಣದಲ್ಲಿ ಸಿಡಿ ಹೊರಬರುತ್ತದೆ

    ಚಿಕ್ಕೋಡಿ: ಮುನಿರತ್ನ (Muniratna) ಬೈದಿದ್ದು ಇನ್ನೂ ಸಾಬೀತಾಗಿಲ್ಲ. ಇದು ಸಿಡಿ ಶಿವು ಕೆಲಸ. ಅವನ ವಿರೋಧಿಗಳನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ರಮೇಶ್ ಜಾರಕಿಹೊಳಿ (Ramesh Jarkiholi) ಆರೋಪಿಸಿದ್ದಾರೆ.

    ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ವಿಚಾರಕ್ಕೆ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಕಂಪನಿ ರಾಜ್ಯದಲ್ಲಿ ನನ್ನನ್ನು ಮೊದಲು ಬಲಿ ಪಡೆದರು. ನಂತರ ದೇವೇಗೌಡ ಕುಟುಂಬವನ್ನು ಬಲಿ ಪಡೆದರು. ಇದೀಗ ಮುನಿರತ್ನ ಅವರನ್ನು ಬಲಿ ಪಡೆದುಕೊಂಡಿದ್ದಾರೆ. ಮುಂದೆ ಯಾರ ಬಲಿ ಪಡೆಯುತ್ತಾರೆ ನೋಡಿ. ಇದನ್ನೆಲ್ಲಾ ನೋಡಿದರೆ ಒಂದು ಫಿಲ್ಮ್ ನೋಡಿದ ರೀತಿ ಆಗುತ್ತದೆ. ಸಿಡಿ ಶಿವುನಿಂದ ಕಾಂಗ್ರೆಸ್ ನಾಯಕರು ತೊಂದರೆ ಅನುಭವಿಸುತ್ತಾರೆ ಎಂದರು. ಇದನ್ನೂ ಓದಿ: ವಂದೇ ಮೆಟ್ರೋ ಈಗ ‘ನಮೋ ಭಾರತ್ ರೈಲು’ – ಚಾಲನೆ ನೀಡಿದ ಮೋದಿ

    ಇನ್ನುಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತದೆ. ಸಿಡಿ ಬಗ್ಗೆ ಸಿಬಿಐ ತನಿಖೆಗೆ ನೀಡಬೇಕು. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರಧಾನಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಮೋದಿ

    ಮುನಿರತ್ನ ಬೈದಿರುವುದು ಸಾಬೀತಾಗಿಲ್ಲ. ಅವಾಗಲೇ ನಮ್ಮ ಬಿಜೆಪಿ ನಾಯಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬರುವವರೆಗೆ ನಮ್ಮವರು ಮಾತನಾಡಬಾರದು. ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಆರ್ ಅಶೋಕ್ ಕೂಡ ಮುನಿರತ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಬೈದಿರುವುದು ದೃಢವಾಗಿಲ್ಲ. ಮುನಿರತ್ನ ಬೈದಿರುವ ಆಡಿಯೋ ಕಟ್ ಆಂಡ್ ಪೇಸ್ಟ್ ಇರಬಹುದು. ನಮ್ಮ ಬಿಜೆಪಿ ನಾಯಕರೇ ಬಯ್ಯೋದು ಎಷ್ಟರ ಮಟ್ಟಿಗೆ ಸರಿ. ಮುನಿರತ್ನ ವಿಚಾರದಲ್ಲಿ ಬಿಜೆಪಿ ನಾಯಕರು ದುಡುಕಿ ನಿರ್ಧಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ವರಿಷ್ಠರು ನೋಟಿಸ್ ಜಾರಿ ಮಾಡಬೇಕು. ಡಿಕೆ ಶಿವಕುಮಾರ್‌ಗೆ ಈ ಕೆಲಸ ಬಿಟ್ಟರೆ ಬೇರೆ ಕೆಲಸವಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿ

    ಡಿಕೆ ಶಿವಕುಮಾರ್ ಯಾವುದೇ ಹೋರಾಟದಿಂದ ಬೆಳೆದಿಲ್ಲ. ಗ್ರಾಮ ಪಂಚಾಯತ್ ಮೆಂಬರ್ ಆಗೋಕೂ ಕೂಡ ಅವನು ಲಾಯಕ್ಕಿಲ್ಲ. ಅಡ್ಜಸ್ಟ್ಮೆಂಟ್ ರಾಜಕಾರಣಿ ಆಗಿದ್ದರಿಂದ ಏಳೆಂಟು ಸಲ ಎಂಎಲ್‌ಎ ಆಗಿದ್ದಾನೆ. ಮುಂದಿನ ಸಲವೂ ಕೂಡ ಡಿಕೆ ಶಿವಕುಮಾರ್ ಸೋಲುತ್ತಾನೆ. ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಎರಡೂವರೆ ಲಕ್ಷ ಮತಗಳಿಂದ ಸೋತ. ಡಿಕೆ ಶಿವಕುಮಾರ್ ಅರ್ಜೆಂಟ್ ಮಾಡಿಕೊಂಡು ಕಾಲಿಗೆ ಬಿದ್ದು ಎಂಎಲ್‌ಎ ಆಗಿದ್ದಾನೆ ಎಂದು ಕಿಡಿಕಾರಿದರು. ಇದನ್ನೂ ಓದಿ: Fifth And Final Call | ಮಾತುಕತೆಗಾಗಿ ಪ್ರತಿಭಟನಾನಿರತ ವೈದ್ಯರಿಗೆ ಅಂತಿಮ ಆಹ್ವಾನ ಕೊಟ್ಟ ದೀದಿ

    ನನ್ನ, ದೇವೇಗೌಡ ಕುಟುಂಬ ಮತ್ತು ಮುನಿರತ್ನ ಕುಟುಂಬಕ್ಕೆ ಕೆಟ್ಟ ಪರಿಸ್ಥಿತಿ ಬಂದಿದೆ. ಮುಂದೆ ಹಲವು ಕಾಂಗ್ರೆಸ್ ನಾಯಕರಿಗೆ ಈ ಪರಿಸ್ಥಿತಿ ಬರಲಿದೆ. ಮುನಿರತ್ನ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಕೈವಾಡ ಇದೆ. ಮುನಿರತ್ನ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಆಗ ಸತ್ಯಾಸತ್ಯತೆ ಹೊರಗೆ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬ ಗಂಭೀರ

  • ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಚನ್ನಪಟ್ಟಣದವರಲ್ವ, ಅವರನ್ನೇ ಕೇಳಿ: ಡಿಕೆ ಸುರೇಶ್

    ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಚನ್ನಪಟ್ಟಣದವರಲ್ವ, ಅವರನ್ನೇ ಕೇಳಿ: ಡಿಕೆ ಸುರೇಶ್

    ರಾಮನಗರ: ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಜೊತೆಯಲ್ಲಿದ್ದವರು. ಜೊತೆಯಲ್ಲಿದ್ದವರೇ ಅದನ್ನ ನೋಡಲು ಸಾಧ್ಯ, ಬೇರೆಯವರಿಂದ ಹೇಗೆ ಸಾಧ್ಯ. ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವ, ಅವರನ್ನೇ ಕೇಳಿ ಎಂದು ಸಂಸದ ಡಿ.ಕೆ ಸುರೇಶ್ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಚಿವರ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣದವರದ್ದು ಪಾತ್ರ ಇದೆ. ಚನ್ನಪಟ್ಟಣದವರಿಗೆ ಅಧಿಕಾರದ ಮೇಲೆ ಆಸೆಯಿತ್ತಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಅವರದ್ದು ಭಾಗಿ ಇದೆ ಎಂದು ಆರೋಪಿಸಿದರು.

    ಕನಕಪುರದವರದ್ದು ಆಸೆಯಿದ್ದ ಮೇಲೆ, ಚನ್ನಪಟ್ಟಣದವರದ್ದು ಇಲ್ವಾ. ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಲು ಜೊತೆಯಲ್ಲಿದ್ದವರಿಂದ ಮಾತ್ರ ಸಾಧ್ಯ, ಬೇರೆಯವರಿಂದ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅಲ್ಲದೆ ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವ, ಅವರನ್ನೇ ಕೇಳಿ ಎಂದರು.

    ಈ ಹಿಂದೆ ಮಾತನಾಡಿದ್ದ ಸಿ.ಪಿ ಯೋಗೇಶ್ವರ್ ಅವರು, ಸಿಡಿ ಪ್ರಕರಣದಲ್ಲಿ ಕನಕಪುರ, ಬೆಳಗಾವಿಯವರ ಪಾತ್ರ ಇದೇ ಎಂದಿದ್ದರು. ಇದೀಗ ಸಂಸದರು ಇದೇ ಹೇಳಿಕೆಯನ್ನಿಟ್ಟುಕೊಂಡು ಟಾಂಗ್ ನೀಡಿದ್ದಾರೆ.

    ಒಟ್ಟಿನಲ್ಲಿ ಮಾಜಿ ಸಚಿವರ ಸಿಡಿ ಪ್ರಕರಣವನ್ನು ಕೈಗೆತ್ತಿಕೊಂಡ ಮೊದಲ ದಿನವಾದ ಇಂದು ಎಸ್‍ಐಟಿ ಭರ್ಜರಿ ಬೇಟೆಯಾಡಿದ್ದು, ಓರ್ವ ಯುವತಿ ಹಾಗೂ ನಾಲ್ವರು ಯುವಕರನ್ನು ವಶಕ್ಕೆ ಪಡೆದಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್‍ಐಟಿ, ಇಂದು ಒಟ್ಟು 5 ಜನರನ್ನು ಬೇಟೆಯಾಡಿದೆ. ಇದರಲ್ಲಿ ಓರ್ವ ಯುವತಿ, ನಾಲ್ವರು ಯವಕರು ಸೇರಿದ್ದಾರೆ. ಆರಂಭದಲ್ಲಿ ಯಶವಂತಪುರದಲ್ಲಿ ಓರ್ವನನ್ನು ವಶಕ್ಕೆ ಪಡದು ವಿಚಾರಣೆ ನಡೆಸಲಾಗಿತ್ತು. ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದ್ದು ಬಳಿಕ ನಾಲ್ವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.