Tag: ರಮೇಶ್ ಇಂದಿರಾ

  • ತಮಿಳಿನತ್ತ ಕನ್ನಡದ ನಟ- ಚಿಯಾನ್ ವಿಕ್ರಮ್ ಸಿನಿಮಾದಲ್ಲಿ ರಮೇಶ್ ಇಂದಿರಾ

    ತಮಿಳಿನತ್ತ ಕನ್ನಡದ ನಟ- ಚಿಯಾನ್ ವಿಕ್ರಮ್ ಸಿನಿಮಾದಲ್ಲಿ ರಮೇಶ್ ಇಂದಿರಾ

    ‘ಸಪ್ತಸಾಗರದಾಚೆ ಎಲ್ಲೋ’ (Sapta Sagaradaache Ello) ಸಿನಿಮಾದಲ್ಲಿ ‘ಲವ್ ಯೂ ಮನು’ ಎನ್ನುತ್ತಾ ಭಯ ಹುಟ್ಟಿಸಿದ್ದ ರಮೇಶ್ ಇಂದಿರಾ (Ramesh Indira) ಇದೀಗ ತಮಿಳಿನತ್ತ ಮುಖ ಮಾಡಿದ್ದಾರೆ. ಸ್ಟಾರ್ ನಟ ಚಿಯಾನ್ ವಿಕ್ರಮ್ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಇದನ್ನೂ ಓದಿ:ಕೆಜಿಎಫ್ ಕ್ವೀನ್ ಬ್ಯಾಕ್ ಟು ರಾಕ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದ ರಮೇಶ್ ಇಂದಿರಾ ಹಿರಿತೆರೆಯಲ್ಲಿ ಖಳನಟನಾಗಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಡಾಲಿ ನಟನೆಯ ‘ಕೋಟಿ’ ಸಿನಿಮಾದಲ್ಲೂ ಅವರು ನಟಿಸಿದ್ದರು. ಈಗ ಕಾಲಿವುಡ್‌ನಲ್ಲಿ ಅವರಿಗೆ ಬಂಪರ್ ಅವಕಾಶ ಸಿಕ್ಕಿದೆ. ಸಿಕ್ಕಿರೋ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡಿದ್ದಾರೆ. ಚಿಯಾನ್ ವಿಕ್ರಮ್ ನಟನೆಯ ‘ವೀರ ಧೀರ ಶೂರನ್’ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಸದ್ಯ ಈಗಾಗಲೇ ರಿಲೀಸ್ ಆಗಿರೋ ಚಿತ್ರದ ಟ್ರೈಲರ್‌ನಲ್ಲಿ ರಮೇಶ್ ಇಂದಿರಾ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಪಾತ್ರ ಹೇಗಿದೆ ಎಂಬುದಕ್ಕೆ ಮಾ.27ರಂದು ಉತ್ತರ ಸಿಗಲಿದೆ. ಚಿಯಾನ್ ವಿಕ್ರಮ್ ಜೊತೆ ರಮೇಶ್ ತೆರೆಹಂಚಿಕೊಂಡಿದ್ದಾರೆ ಎಂದರೆ ಇಲ್ಲಿನೋ ಹೊಸತನವಿದೆ ಎಂಬುದು ಅಭಿಮಾನಿಗಳ ಲೆಕ್ಕಚಾರ. ಹಾಗಾಗಿ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

    ವಿಕ್ರಮ್ ನಟನೆಯ ‘ವೀರ ಧೀರ ಶೂರನ್’ ಚಿತ್ರವು ಮಾ.27ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ವಿಕ್ರಮ್‌ಗೆ ನಾಯಕಿಯಾಗಿ ದುಶ್ರಾ ವಿಜಯನ್ ನಟಿಸಿದ್ದಾರೆ.

  • ಬಂದೂಕು ಹಿಡಿದು ಖಡಕ್ ಪೋಸ್ ಕೊಟ್ಟ ರಮೇಶ್ ಇಂದಿರಾ- ‘ಕರಾವಳಿ’ ಚಿತ್ರದ ಪೋಸ್ಟರ್ ಔಟ್

    ಬಂದೂಕು ಹಿಡಿದು ಖಡಕ್ ಪೋಸ್ ಕೊಟ್ಟ ರಮೇಶ್ ಇಂದಿರಾ- ‘ಕರಾವಳಿ’ ಚಿತ್ರದ ಪೋಸ್ಟರ್ ಔಟ್

    ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಬಹುನಿರೀಕ್ಷಿತ ‘ಕರಾವಳಿ’ (Karavali) ಸಿನಿಮಾದಲ್ಲಿ ರಮೇಶ್ ಇಂದಿರಾ (Ramesh Indira) ಖಳನಟನಾಗಿ ಅಬ್ಬರಿಸಿದ್ದಾರೆ. ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟನ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಇದನ್ನೂ ಓದಿ:ಬೆನ್ನುನೋವಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ – ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ

    ಸಪ್ತಸಾಗರದಾಚೆ ಎಲ್ಲೋ ಎ ಮತ್ತು ಬಿ ಪಾರ್ಟ್‌ನಲ್ಲಿ ಹೀರೋ ರಕ್ಷಿತ್ ಶೆಟ್ಟಿ (Rakshit Shetty) ಮುಂದೆ ರಮೇಶ್ ಇಂದಿರಾ ವಿಲನ್ ಆಗಿ ಗೆದ್ದು ಬೀಗಿದ್ದರು. ಇದೀಗ ಮತ್ತೆ ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಮುಂದೆ ಅಬ್ಬರಿಸಲಿದ್ದಾರೆ. ಕಾರಿನ ಮೇಲೆ ಕುಳಿತಿರುವ ರಮೇಶ್ ಇಂದಿರಾ ಬಂದೂಕು ಹಿಡಿದು ಖಡಕ್ ಆಗಿ ಪೋಸ್ ನೀಡಿರುವ ಪೋಸ್ಟರ್‌ ಅನ್ನು ಚಿತ್ರತಂಡ ರಿಲೀಸ್‌ ಮಾಡಿದೆ. ಈ ಸಿನಿಮಾದ ಪೋಸ್ಟರ್ ಲುಕ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.


    ‘ಕರಾವಳಿ’ ಚಿತ್ರದಲ್ಲಿ ಕರಾವಳಿ ಭಾಗದ ಕಥೆಯನ್ನು ಒಳಗೊಂಡಿದೆ. ಪ್ರಜ್ವಲ್ ದೇವರಾಜ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದಾರೆ.

  • ‘ಕೋಟಿ’ ಡಾಲಿಗೆ ರಮೇಶ್ ಇಂದಿರಾ ವಿಲನ್

    ‘ಕೋಟಿ’ ಡಾಲಿಗೆ ರಮೇಶ್ ಇಂದಿರಾ ವಿಲನ್

    ಡಾಲಿ ಧನಂಜಯ (Daali Dhananjay) ನಟನೆಯ ‘ಕೋಟಿ’ (Kotee) ಟೀಸರ್ ನೋಡಿ ಚಿತ್ರದ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಡಾಲಿ (Daali) ಮುಂದೆ ಅಬ್ಬರಿಸುವ ವಿಲನ್ ಬಗ್ಗೆ ಚಿತ್ರತಂಡ ಅಪ್‌ಡೇಟ್ ಹಂಚಿಕೊಂಡಿದೆ. ಇದನ್ನೂ ಓದಿ:‘ಬಂಧನ 2’ ಸಿನಿಮಾ ನಿಲ್ಲೋಕೆ ನಾನೇ ಕಾರಣ ಎಂದ ನಟ ಆದಿತ್ಯ

    ಈ ಹಿಂದೆ ಎಂದೂ ನಟಿಸಿರದ ಪಾತ್ರದಲ್ಲಿ ಡಾಲಿ ‘ಕೋಟಿ’ ಚಿತ್ರದಲ್ಲಿ ನಟಿಸಿದ್ದಾರೆ. ಡಾಲಿ ಮುಂದೆ ಖಳನಾಯಕನಾಗಿ ‘ಸಪ್ತಸಾಗರದಾಚೆ ಎಲ್ಲೋ 2’ ಖ್ಯಾತಿಯ ರಮೇಶ್ ಇಂದಿರಾ (Ramesh Indira) ನಟಿಸಿದ್ದಾರೆ. ಈ ಚಿತ್ರದಲ್ಲಿ ದಿನೂ ಸಾವ್ಕಾರ್ ಎಂಬ ಪಾತ್ರಕ್ಕೆ ನಟ ರಮೇಶ್ ಇಂದಿರಾ ಬಣ್ಣ ಹಚ್ಚಿದ್ದಾರೆ. ತಾನು ಹೇಳಿದ್ದನ್ನು ಎಲ್ಲರೂ ಕೇಳಲೇಬೇಕು ಎನ್ನುವ ಹಠವಾದಿ ಮತ್ತು ವಿಲನ್ ಪಾತ್ರವಾಗಿದೆ.

    ಅಂದಹಾಗೆ, ನಟಿಸುವ ಬದಲು ಪಾತ್ರವೇ ಆಗಿಬಿಡುವ ಧನಂಜಯ ಕನ್ನಡದ ಸೂಕ್ಷ್ಮ ನಟ. ತಮ್ಮ ಹೊಸ ಸಿನಿಮಾ ಕೋಟಿಯ ಪಾತ್ರದ ಬಗ್ಗೆ ಎಕ್ಸೈಟ್ ಆಗಿರುವ ಅವರು ಈ ಸಿನಿಮಾದಲ್ಲಿ ಅಭಿನಯದ ಹೊಸ ಮಗ್ಗುಲುಗಳನ್ನು ಅನ್ವೇಷಿಸಿದ್ದಾರೆ. ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ತಿರ್ತಾರೆ. ನಮ್ ಕೋಟಿನೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡ್ಕೋಬಹುದು ಅಂದ್ಕೋತಾ ಇರ್ತಾರೆ ಎಂದು ಪಾತ್ರದ ಬಗ್ಗೆ ‘ಕೋಟಿ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಧನಂಜಯ ಮಾತನಾಡಿದ್ದರು.

    ಮಜಾ ಅಂದ್ರೆ ಎಲ್ರೊಳಗೂ ಕೋಟಿಯಂಥ ಒಬ್ಬ ವ್ಯಕ್ತಿ ಇರ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಸಿನಿಮಾ ನೋಡಬೇಕು’ ಎಂದು ಸೇರಿಸಲು ಅವರು ಮರೆಯುವುದಿಲ್ಲ. ಈ ಸಿನಿಮಾ ನಿರ್ದೇಶಿಸುತ್ತಿರುವುದು ಪರಮ್. ಇದು ಅವರ ಚೊಚ್ಚಲ ಸಿನಿಮಾ. ಸಿನಿಮಾ ನಿರ್ದೇಶಕನಾಗಿ ಮೊದಲ ಅನುಭವವಾದರೂ ಕತೆ ಹೇಳುವುದು ಅವರಿಗೆ ಹೊಸದಲ್ಲ. ಟೆಲಿವಿಷನ್ ಚಾನೆಲ್ಲಿನಲ್ಲಿ ಹಲವು ಯಶಸ್ವೀ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ರೂಪಿಸಿದ ಅನುಭವವಿರುವ ಅವರು ಇಲ್ಲಿ ವಿಶಾಲ ಕ್ಯಾನ್ವಾಸಿನಲ್ಲಿ ಕತೆ ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ.

    ನನ್ನ ಕನಸು ಈ ಸಿನಿಮಾ ಮೂಲಕ ನಿಜವೇ ಆಗಿಬಿಟ್ಟಿರುವುದನ್ನು ವಿವರಿಸಲು ಶಬ್ದಗಳಿಲ್ಲ. ಇದು ಸಾಧ್ಯ ಆಗಿದ್ದು ಜಿಯೋ ಸ್ಟುಡಿಯೋಸ್ ಮತ್ತು ಜ್ಯೋತಿ ದೇಶಪಾಂಡೆ ನನ್ನ ಮೇಲೆ ಇಟ್ಟ ನಂಬಿಕೆಯಿಂದ. ಒಳ್ಳೆ ಕತೆಗಳನ್ನು ಹೇಳಬೇಕು, ಬೇರೆ ಕತೆಗಳನ್ನು ಹೇಳಬೇಕು, ಬೇರೆ ಧ್ವನಿಗಳು ಕೇಳಿಸಬೇಕು ಅನ್ನೋದು ಜಿಯೋ ಸ್ಟುಡಿಯೋಸ್ ನ ಮೂಲ ಉದ್ದೇಶ. ಕನ್ನಡದಲ್ಲೂ ಈ ಇದು ಮುಂದುವರೆಯಬೇಕು ಅನ್ನೋದರ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತೆ ಎನ್ನುತ್ತಾರೆ ನಿರ್ದೇಶಕ ಪರಮ್.

    ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕೊಡಗಿನ ಮೂಲದ ಕನ್ನಡದ ನಟಿ ಮೋಕ್ಷಾಗೆ ಇದು ಮಹತ್ವದ ಸಿನಿಮಾ ಆಗಿದೆ.

  • ‘ಸಲಾರ್’ ಹುಡುಗನ ಜೊತೆ ಮತ್ತೆ ಸಿನಿಮಾ ಘೋಷಿಸಿದ ಶ್ರುತಿ ನಾಯ್ಡು

    ‘ಸಲಾರ್’ ಹುಡುಗನ ಜೊತೆ ಮತ್ತೆ ಸಿನಿಮಾ ಘೋಷಿಸಿದ ಶ್ರುತಿ ನಾಯ್ಡು

    ನ್ನಡ ಕಿರುತೆರೆ ಲೋಕದ ಹೆಸರಾಂತ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು, ಈ ಹಿಂದೆ ಪ್ರೀಮಿಯರ್ ಪದ್ಮಿನಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಜಗ್ಗೇಶ್ ಮತ್ತು ಪ್ರಮೋದ್ ಕಾಂಬಿನೇಷನ್ ನ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲೂ ಹಿಟ್ ಆಗಿತ್ತು. ಆ ನಂತರ ಈ ಚಿತ್ರದ ಸಿಕ್ವೇಲ್ ಮಾಡುವ ಕುರಿತು ಚರ್ಚೆ ನಡೆದಿತ್ತು. ಅದಕ್ಕೂ ಮೊದಲು ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.

    ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಪ್ರಮೋದ್ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ ಶ್ರುತಿ ನಾಯ್ಡು. ಪ್ರಮೋದ್ ಹುಟ್ಟು ಹಬ್ಬದಂದು ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ಪ್ರೀಮಿಯರ್ ಪದ್ಮಿನಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಮೇಶ್ ಇಂದಿರಾ ಅವರೇ ಈ ಚಿತ್ರಕ್ಕೂ ನಿರ್ದೇಶಕರು.

    ಸಲಾರ್ ಸಿನಿಮಾದಲ್ಲಿ ಪ್ರಮೋದ್ ಗಟ್ಟಿಯಾಗಿರೋ ಪಾತ್ರವನ್ನೇ ಮಾಡಿದ್ದಾರೆ. ಆ ಪಾತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇದೀಗ ಮತ್ತೆ ಶ್ರುತಿ ನಾಯ್ಡು ಅವರ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.  ಈಗಾಗಲೇ ಚಿತ್ರಕ್ಕೆ ಪೂಜೆ ಕೂಡ ಆಗಿದ್ದು, ಫೆಬ್ರವರಿಯಲ್ಲಿ ಚಿತ್ರೀಕರಣಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ.

  • ಐದು ಜನರ ಹಿಂದೆ ಜಗ್ಗಾಡಬೇಡಿ ಅಂದ್ರು ಜಗ್ಗಣ್ಣ!

    ಐದು ಜನರ ಹಿಂದೆ ಜಗ್ಗಾಡಬೇಡಿ ಅಂದ್ರು ಜಗ್ಗಣ್ಣ!

    ಬೆಂಗಳೂರು: ‘ಕನ್ನಡ ಚಿತ್ರರಂಗದಲ್ಲಿ ಇರುವುದು ಬರೀ ಐದು ಜನ ಹೀರೋಗಳಷ್ಟೇನಾ? ಯಾರೇ ಉತ್ತಮ ಸಿನಿಮಾ ಮಾಡಿದರೂ ಪ್ರೇಕ್ಷಕರು ಅವರ ಕೈಹಿಡಿಯಬೇಕು. ಚೆಂದಗೆ ಸಿನಿಮಾ ಮಾಡಿದವರಿಗೆ ಬೆನ್ನು ತಟ್ಟಬೇಕು. ನನಗಿದ್ದ ಕ್ವಾಲಿಟಿಗೆ ನನ್ನನ್ನು ಯಾರು ತಾನೆ ಹೀರೋ ಮಾಡಲು ಬರುವಂತಿತ್ತು? ನಾನು ಧೈರ್ಯ ಮಾಡಿ ನನ್ನ ಭಾವನ ಜೊತೆ ಸೇರಿ ಭಂಡ ನನ್ನ ಗಂಡ ಸಿನಿಮಾ ಮಾಡಿದೆ. ಸಿನಿಮಾವನ್ನು ಜನ ಕೈ ಹಿಡಿದರು. ಇವತ್ತು ನಾನು ಮುಂದಿನ ಪೀಳಿಗೆಗೆ ಒಂದಿಷ್ಟು ಸಲಹೆ ನೀಡಲಿಕ್ಕಾದರೂ ಕೂರುವಂತಾಗಿದೆ. ನಮ್ಮ ನೆಲದಲ್ಲಿ ಅದ್ಭುತ ಪ್ರತಿಭೆಗಳಿವೆ. ಹೊಸಬರ ಕೈ ಹಿಡಿದರೆ ಅವರೂ ಮುಂದೊಂದು ದಿನ ತಮ್ಮ ಮುಂದಿನ ಪೀಳಿಗೆಗೆ ಒಂದಿಷ್ಟು ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಆಂಧ್ರದಲ್ಲಿ ನೋಡಿದರೆ ನಾಲ್ಕು ಜನ, ತಮಿಳುನಾಡಿನಲ್ಲೂ ನಾಲ್ಕೇ ಜನ, ಕೇರಳಕ್ಕೆ ಹೋದರೆ ಅಲ್ಲಿ ಮೂರು ಮತ್ತೊಂದು ಜನರೇ ಚಿತ್ರರಂಗದಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಕೂಡಾ ಐದು ಜನ ಹೀರೋಗಳನ್ನೇ ಹಿಡಿದುಕೊಂಡು ಜಗ್ಗಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದೆ ಬೇರೆಯವರನ್ನೂ ಪ್ರೋತ್ಸಾಹಿಸಿ…’ ಇದು ನವರಸ ನಾಯಕ ಜಗ್ಗೇಶ್ ನುಡಿಗಳು.

    ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಜಗ್ಗೇಶ್ ಅವರನ್ನು ಹೊರತುಪಡಿಸಿದರೆ ಮಿಕ್ಕವರೆಲ್ಲರೂ ಬಹುತೇಕ ನವ ಪ್ರತಿಭೆಗಳು. ಈ ಚಿತ್ರದಲ್ಲಿ ಹೊಸ ಕಲಾವಿದರ ಜೊತೆಗೆ ಅಭಿನಯಿಸಿದ್ದು ಜಗ್ಗೇಶ್ ಅವರಿಗೆ ಮತ್ತಷ್ಟು ಹುರುಪು ತುಂಬಿದೆಯಂತೆ. ಶೃತಿ ನಾಯ್ಡು ನಿರ್ಮಾಣದ, ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಇದೇ ತಿಂಗಳು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರಾದ ಮಧುಬಾಲಾ ಮತ್ತು ಸುಧಾರಾಣಿ ಕೂಡಾ ನಟಿಸಿದ್ದಾರೆ.

    https://twitter.com/premierpadmini/status/1100342311660093440