Tag: ರಮಾಕಾಂತ್ ಅಚ್ರೇಕರ್

  • ಗುರುವಿನ ಅಂತಿಮ ಯಾತ್ರೆ ವೇಳೆ ಹೆಗಲು ನೀಡಿ ಕಂಬನಿ ಮಿಡಿದ ಸಚಿನ್

    ಗುರುವಿನ ಅಂತಿಮ ಯಾತ್ರೆ ವೇಳೆ ಹೆಗಲು ನೀಡಿ ಕಂಬನಿ ಮಿಡಿದ ಸಚಿನ್

    ಮುಂಬೈ: ಇಹಲೋಕ ತ್ಯಜಿಸಿರುವ ಕ್ರಿಕೆಟ್ ಗುರು ರಮಾಕಾಂತ್ ಅಚ್ರೇಕರ್ ನೆನದು ಸಚಿನ್ ತೆಂಡೂಲ್ಕರ್ ಕಂಬನಿ ಮಿಡಿದಿದ್ದಾರೆ.

    ಮುಂಬೈನಲ್ಲಿ ನಡೆದ ಗುರುಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಸಚಿನ್, ಗುರುವಿನ ಅಂತಿಮ ಯಾತ್ರೆ ವೇಳೆ ಸ್ವತಃ ಹೆಗಲು ನೀಡಿದರು. ಈ ಮೂಲಕ ತಮ್ಮ ಗುರುಗಳಿಗೆ ಕೊನೆಯ ನಮನ ಸಲ್ಲಿಸಿದರು.

    ದ್ರೋಣಾಚಾರ್ಯ, ಪದ್ಮ ಶ್ರೀ ಪ್ರಶಸ್ತಿ ವಿಜೇತರಾಗಿದ್ದ ರಮಾಕಾಂತ್ ಅಚ್ರೆಕಾರ್ ತಮ್ಮ 87 ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದರು. ಇಂದು ಅವರ ಅಂತಿಮ ನಮನ ಕಾರ್ಯಗಳನ್ನ ಏರ್ಪಡಿಸಲಾಗಿತ್ತು. ಕ್ರಿಕೆಟ್ ಕೋಚ್ ಆಗಿ ಹಲವು ಗಣ್ಯರಿಗೆ ತರಬೇತಿ ನೀಡಿದ್ದ ರಮಾಕಾಂತ್ ಅವರು ಸಚಿನ್‍ರ ಬಾಲ್ಯದ ಕೋಚ್ ಆಗಿದ್ದರು. ಅಲ್ಲದೇ ವಿನೋದ್ ಕಾಂಬ್ಳಿ, ಪ್ರವೀಣ್ ಅಮ್ರೆ, ಸಮೀರ್ ದಿಘೆ ಮತ್ತು ಬಲ್ವಿಂದರ್ ಸಿಂಗ್ ಸಂಧು ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ಇತ್ತ ಆಸೀಸ್ ಟೂರ್ನಿಯಲ್ಲಿ ಭಾಗವಹಿಸಿರುವ ಟೀಂ ಇಂಡಿಯಾ ಆಟಗಾರರು ಇಂದು ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಕಪ್ಪು ಪಟ್ಟಿ ಧರಿಸಿ ಆಡಿದರು. ಅಚ್ರೇಕರ್ ವಿಧಿವಶರಾದ ಹಿನ್ನಲೆಯಲ್ಲಿ ಅವರ ಗೌರವಾರ್ಥವಾಗಿ ಆಟಗಾರರುಕಪ್ಪು ಪಟ್ಟಿ ಧರಿಸಿ ಕಣಕ್ಕೆ ಇಳಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv